Cannes 2024: ಕಾನ್ ರೆಡ್‌ ಕಾರ್ಪೆಟ್‌ ಮೇಲೆ ಮಿಂಚಿದ ಊರ್ವಶಿ ರೌಟೇಲಾ: ದೀಪಿಕಾ ಸ್ಟೈಲ್ ಕಾಪಿ ಮಾಡಿದ್ರಾ? - Vistara News

ಬಾಲಿವುಡ್

Cannes 2024: ಕಾನ್ ರೆಡ್‌ ಕಾರ್ಪೆಟ್‌ ಮೇಲೆ ಮಿಂಚಿದ ಊರ್ವಶಿ ರೌಟೇಲಾ: ದೀಪಿಕಾ ಸ್ಟೈಲ್ ಕಾಪಿ ಮಾಡಿದ್ರಾ?

Cannes 2024: ಊರ್ವಶಿ ಅವರ ವಿಡಿಯೊಗಳು ವೈರಲ್‌ ಆಗುತ್ತಿವೆ. ಬಾಡಿಕಾನ್ ಡ್ರೆಸ್ ಧರಿಸಿರುವುದನ್ನು ಕಾಣಬಹುದು. ದೀಪಿಕಾ ಪಡುಕೋಣೆ ಕಾನ್ ಫಿಲ್ಮ್ ಫೆಸ್ಟಿವಲ್ 2018 ರಲ್ಲಿ ಇದೇ ರೀತಿಯ ಗುಲಾಬಿ ಬಣ್ಣದ ಗೌನ್ ಧರಿಸಿದ್ದರು. ಊರ್ವಶಿ ರೌಟೇಲಾ ಅವರ ಈ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಊರ್ವಶಿ ರೌಟೇಲಾ ದೀಪಿಕಾ ಪಡುಕೋಣೆ ಸ್ಟೈಲ್ ಅನ್ನು ಕಾಪಿ ಮಾಡಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

VISTARANEWS.COM


on

Cannes 2024 Urvashi Rautela pink gown remind Deepika Padukone
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಕಾನ್ ಫಿಲ್ಮ್ ಫೆಸ್ಟಿವಲ್ (Cannes 2024) ಕೂಡ ಒಂದು. 2024ರ 77ನೇ ಕಾನ್ ಫಿಲ್ಮ್ ಫೆಸ್ಟಿವಲ್ ಮೇ 14ರಿಂದ ಆರಂಭ ಆಗಿದೆ. ಊರ್ವಶಿ ರೌಟೇಲಾ (Urvashi Rautela) ಈಗಾಗಲೇ ರೆಡ್‌ ಕಾರ್ಪೆಟ್‌ ಮೇಲೆ ಪಿಂಕ್‌ ಗೌನದದದ ಧರಿಸಿ ಹೆಜ್ಜೆ ಹಾಕಿದ್ದಾರೆ. ಈ ಫೋಟೊ ವೈರಲ್‌ ಆದ ಬೆನ್ನಲ್ಲೇ 2018 ರಲ್ಲಿ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಗೌನ್ ತರಹವೇ ಇದೆ ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ. ಇದೀಗ ಊರ್ವಶಿ ರೌಟೇಲಾ ಟ್ರೋಲ್‌ಗೆ ಗುರಿಯಾಗುತ್ತಿದ್ದಾರೆ.

ಊರ್ವಶಿ ಅವರ ವಿಡಿಯೊಗಳು ವೈರಲ್‌ ಆಗುತ್ತಿವೆ. ಬಾಡಿಕಾನ್ ಡ್ರೆಸ್ ಧರಿಸಿರುವುದನ್ನು ಕಾಣಬಹುದು. ದೀಪಿಕಾ ಪಡುಕೋಣೆ ಕಾನ್ ಫಿಲ್ಮ್ ಫೆಸ್ಟಿವಲ್ 2018 ರಲ್ಲಿ ಇದೇ ರೀತಿಯ ಗುಲಾಬಿ ಬಣ್ಣದ ಗೌನ್ ಧರಿಸಿದ್ದರು. ಊರ್ವಶಿ ರೌಟೇಲಾ ಅವರ ಈ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಊರ್ವಶಿ ರೌಟೇಲಾ ದೀಪಿಕಾ ಪಡುಕೋಣೆ ಸ್ಟೈಲ್ ಅನ್ನು ಕಾಪಿ ಮಾಡಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Cannes 2024: ಐಶ್ವರ್ಯಾ ರೈ ಕೈಗೆ ಪೆಟ್ಟು: ಮಗಳ ಜತೆ ಕಾನ್ ಫಿಲ್ಮ್ ಫೆಸ್ಟಿವಲ್‌ನತ್ತ ಹೊರಟ ನಟಿ!

ಯಾರೆಲ್ಲ ಭಾಗಿ?

 ಪ್ರತಿ ವರ್ಷದಂತೆ ಈ ವರ್ಷವೂ ನಟಿ ಐಶ್ವರ್ಯಾ ರೈ ರೆಡ್ ಕಾರ್ಪೆಟ್ ಮೇಲೆ ನಡೆಯಲು ಸಿದ್ಧರಾಗಿದ್ದಾರೆ. ಬುಧವಾರ ಸಂಜೆ,(ಮೇ. 15) ಐಶ್ವರ್ಯಾ ಅವರು ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ವಿಮಾನ ನಿಲ್ದಾಣದಲ್ಲಿ ಕಂಡು ಬಂದರು. ಆದರೆ ಐಶ್ವರ್ಯಾ (Aishwarya Rai Injured) ಅವರ ಕೈಗೆ ಪೆಟ್ಟಾಗಿ ಬ್ಯಾಂಡೇಜ್‌ ಕೂಡ ಸುತ್ತಿಕೊಂಡಿದ್ದರು. ಹೀಗಾಗಿ ಐಶ್ವರ್ಯಾ ಫ್ಯಾನ್ಸ್‌ (Cannes Film Festival with daughter) ಆತಂಕಕ್ಕೆ ಒಳಗಾಗಿ ಕಮೆಂಟ್‌ ಮೂಲಕ ನಟಿಯ ಕ್ಷೇಮ ವಿಚಾರಿಸಿದ್ದಾರೆ.

2002ರ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಐಶ್ವರ್ಯಾ ರೈ ಅವರು ಕೆಂಪು ಕಾರ್ಪೆಟ್‌ನಲ್ಲಿ ಭಾರೀ ಚಿನ್ನದ ಆಭರಣಗಳೊಂದಿಗೆ ನೀತಾ ಲುಲ್ಲಾ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಆ ವರ್ಷ ನಟ ಶಾರುಖ್ ಖಾನ್ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಉಪಸ್ಥಿತರಿದ್ದರು. ಅಂದಿನಿಂದ, ನಟಿ ಬಹುತೇಕ ಪ್ರತಿ ವರ್ಷ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗುತ್ತಿದ್ದಾರೆ . ಲೋರಿಯಲ್ ಪ್ಯಾರಿಸ್‌ನ ಬ್ರ್ಯಾಂಡ್‌ ಅಂಬಾಸಿಡರ್‌ಗಳಲ್ಲಿ ಒಬ್ಬರಾಗಿ ಅವರು ಮತ್ತೊಮ್ಮೆ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗುತ್ತಿದ್ದಾರೆ.

ಐಶ್ವರ್ಯಾ ಜತೆಗೆ, ನಟರಾದ ಅದಿತಿ ರಾವ್ ಹೈದರಿ, ಶೋಬಿತಾ ಧೂಳಿಪಾಲ ಮತ್ತು ಕಿಯಾರಾ ಆಡ್ವಾಣಿ ಕೂಡ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಊರ್ವಶಿ ರೌಟೇಲಾ ಅವರು ಈಗಾಗಲೇ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ತಮ್ಮ ಗುಲಾಬಿ ಬಣ್ಣದ ಉಡುಪಿನಿಂದ ಕಂಗೊಳಿಸಿದ್ದಾರೆ. ಪೋಸ್‌ ಕೂಡ ಕೊಟ್ಟಿದ್ದಾರೆ. 2024, ಮೇ 14 ರಿಂದ ಮೇ 25ರವರೆಗೂ ಕಾನ್ ಫಿಲ್ಮ್ ಫೆಸ್ಟಿವಲ್ ಫ್ರಾನ್ಸ್‌ನ ಫ್ರೆಂಚ್ ರಿವೇರಿಯಾದಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Shatrughan Sinha: ಮುಸ್ಲಿಂ ಯುವಕನ ಜತೆ ಮಗಳ ವಿವಾಹ; ನಟ ಶತ್ರುಘ್ನ ಸಿನ್ಹಾ ಪ್ರತಿಕ್ರಿಯೆ ಏನು?

Shatrughan Sinha: ʼದಬಾಂಗ್‌ʼ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ ಸೋನಾಕ್ಷಿ ಸಿನ್ಹಾ ಸದ್ಯ ಹಸೆಮಣೆಗೇರುವ ಸಿದ್ಧತೆಯಲ್ಲಿದ್ದಾರೆ. ತಮ್ಮ ಬಾಯ್‌ಫ್ರೆಂಡ್‌, ನಟ ಜಹೀರ್ ಇಕ್ಬಾಲ್ ಜತೆ ಜೂನ್ 23ರಂದು ದಕ್ಷಿಣ ಮುಂಬೈನಲ್ಲಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಈ ಮಧ್ಯೆ ಮಗಳ ಮದುವೆ ಬಗ್ಗೆ ಮಾತನಾಡಿರುವ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ, ತಮಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಒಂದು ವೇಳೆ ಆಮಂತ್ರಿಸಿದರೆ ಖಂಡಿತವಾಗಿಯೂ ತೆರಳುವುದಾಗಿ ಹೇಳಿದ್ದಾರೆ.

VISTARANEWS.COM


on

Shatrughan Sinha
Koo

ಮುಂಬೈ: ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ತಮ್ಮ ಬಾಯ್‌ಫ್ರೆಂಡ್‌, ನಟ ಜಹೀರ್ ಇಕ್ಬಾಲ್ (Zaheer Iqbal) ಜತೆ ಜೂನ್ 23ರಂದು ದಕ್ಷಿಣ ಮುಂಬೈನಲ್ಲಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಆದರೆ ಜೋಡಿ ಎಲ್ಲಿಯೂ ತಮ್ಮ ಮದುವೆ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಈ ಮಧ್ಯೆ ಮಗಳ ಮದುವೆ ಬಗ್ಗೆ ಮಾತನಾಡಿರುವ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ (Shatrughan Sinha) ಅವರು, ʼʼಮದುವೆ ಬಗ್ಗೆ ಸೋನಾಕ್ಷಿ ತಮ್ಮ ಬಳಿ ಏನನ್ನೂ ಹೇಳಿಕೊಂಡಿಲ್ಲ. ಇಂದಿನ ಕಾಲದ ಮಕ್ಕಳು ಮದುವೆಗೆ ಒಪ್ಪಿಗೆ ಕೇಳುವುದಿಲ್ಲ. ಬದಲಿಗೆ ತಮ್ಮ ನಿರ್ಧಾರದ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡುತ್ತಾರೆ. ಒಂದು ವೇಳೆ ಅವಳು ಆಮಂತ್ರಿಸಿದರೆ ಖಂಡಿತವಾಗಿಯೂ ತೆರಳಿ ಆಶೀರ್ವದಿಸುತ್ತೇನೆʼʼ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ʼʼನಾನೀಗ ದೆಹಲಿಯಲ್ಲಿದ್ದೇನೆ. ಚುನಾವಣಾ ಫಲಿತಾಂಶದ ನಂತರ ನಾನು ಇಲ್ಲಿಗೆ ಬಂದೆ. ನನ್ನ ಮಗಳ ಬಗ್ಗೆ, ಅವಳ ಯೋಜನೆಗಳ ಬಗ್ಗೆ ನಾನು ಯಾರೊಂದಿಗೂ ಮಾತನಾಡಿಲ್ಲ. ಅವಳು ಮದುವೆ ಬಗ್ಗೆ ನನಗೆ ಏನನ್ನೂ ಹೇಳಿಲ್ಲ. ಮಾಧ್ಯಮದಲ್ಲಿ ಏನು ವರದಿ ಆಗಿದೆಯೋ ನನಗೂ ಅಷ್ಟೇ ತಿಳಿದಿದೆ. ಅವಳು ನಮಗೆ ಆಮಂತ್ರಣ ನೀಡಿದರೆ ನಾನು ಮತ್ತು ನನ್ನ ಪತ್ನಿ ಇಬ್ಬರೂ ಹೋಗಿ ಆಶೀರ್ವಾದ ಮಾಡುತ್ತೇವೆ. ಅವಳ ಸಂತೋಷವನ್ನು ಎಂದಿಗೂ ನಾವು ಬಯಸುತ್ತೇವೆʼʼ ಎಂದು ಪ್ರತಿಕ್ರಿಯಿಸಿದ್ದಾರೆ.

ಸೋನಾಕ್ಷಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ ಎಂದೂ ಶತ್ರುಘ್ನ ಸಿನ್ಹಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ʼʼನಮ್ಮ ಮಗಳ ನಿರ್ಧಾರ ಯಾವತ್ತೂ ಸರಿಯಾಗಿರುತ್ತದೆ ಎನ್ನುವ ವಿಶ್ವಾಸವಿದೆ. ಅವಳು ಎಂದಿಗೂ ಸಂವಿಧಾನೇತರ ಅಥವಾ ಕಾನೂನುಬಾಹಿರ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಅವಳು ಪ್ರಬುದ್ಧೆಯಾಗಿದ್ದು, ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿದ್ದಾಳೆ. ನನ್ನ ಮಗಳ ಮದುವೆಯಲ್ಲಿ ಡ್ಯಾನ್ಸ್ ಮಾಡಲು ಇಷ್ಟಪಡುತ್ತೇನೆʼʼ ಎಂದು ಅವರು ತಿಳಿಸಿದ್ದಾರೆ.

ಸೋನಾಕ್ಷಿ ಹಾಗೂ ಜಹೀರ್ ಹಲವು ವರ್ಷಗಳಿಂದ ಸುತ್ತಾಟ ನಡೆಸುತ್ತಿದ್ದರೂ ಪ್ರೀತಿ ವಿಚಾರವನ್ನು ಎಂದಿಗೂ ಒಪ್ಪಿಕೊಂಡಿಲ್ಲ. ಇತ್ತೀಚೆಗೆ ಇವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಇವರು ಈಗ ವಿವಾಹ ಆಗುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದೂ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಸೋನಾಕ್ಷಿ 2010ರಲ್ಲಿ ಸಲ್ಮಾನ್‌ ಖಾನ್‌ ಅಭಿನಯದ ʻದಬಾಂಗ್‌ʼ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರೆ, ಜಹೀರ್ ಅವರ ಮೊದಲ ಚಿತ್ರ 2019ರಲ್ಲಿ ತೆರೆ ಕಂಡ ʻನೋಟ್‌ಬುಕ್ʼ. ಇತ್ತೀಚೆಗೆ ತೆರೆಕಂಡ ʻಡಬಲ್ ಎಕ್ಸ್‌ಎಲ್‌ʼ ಸಿನಿಮಾದಲ್ಲಿ ಜಹೀರ್ ಹಾಗೂ ಸೋನಾಕ್ಷಿ ಸಿನ್ಹಾ ಒಟ್ಟಿಗೆ ನಟಿಸಿದ್ದರು.

ಇದನ್ನೂ ಓದಿ: Sonakshi Sinha : ಪ್ರೀತಿಯಲ್ಲಿ ಬಿದ್ದ ಸೋನಾಕ್ಷಿ, ಲವ್‌ ಯು ಎಂದು ಪೋಸ್ಟ್‌ ಹಾಕಿದ ಬಾಯ್‌ಫ್ರೆಂಡ್‌ ಯಾರು ನೋಡಿ!

ಈ ಹಿಂದೆ ಬಿಜೆಪಿಯಲ್ಲಿದ್ದ ಶತ್ರುಘ್ನ ಸಿನ್ಹಾ ಕೆಲವು ವರ್ಷಗಳ ಹಿಂದೆ ಹೊರ ಬಂದಿದ್ದರು. ಈ ಲೋಕಸಭಾ ಚುನಾವಣೆಯಲ್ಲಿ ಅವರು ಪಶ್ಚಿಮ ಬಂಗಾಳದ ಅಸೋಲ್‌ ಕ್ಷೇತ್ರದಿಂದ ಟಿಎಂಸಿಯಿಂದ ಸ್ಪರ್ಧಿಸಿ ಜಯ ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸುರೇಂದ್ರಜೀತ್ ಸಿಂಗ್ ಅಹ್ಲುವಾಲಿಯಾ ವಿರುದ್ಧ 59,564 ಮತಗಳ ಅಂತರದಿಂದ ಗೆದ್ದಿದ್ದಾರೆ.

Continue Reading

ಸಿನಿಮಾ

Noor Malabika Das: ಕಾಜೋಲ್‌ ಜತೆ ನಟಿಸಿದ್ದ, ದಿ ಟ್ರಯಲ್‌ ಖ್ಯಾತಿಯ ಬಾಲಿವುಡ್‌ ನಟಿ ದಾಸ್‌ ಆತ್ಮಹತ್ಯೆ

Noor Malabika Das: ನೂರ್‌ ಮಾಳವಿಕಾ ದಾಸ್‌ ಅವರು ಹಿಂದಿ ಸಿನಿಮಾಗಳು ಹಾಗೂ ವೆಬ್‌ಸಿರೀಸ್‌ಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು. ಸಿಸ್ಕಿಯಾನ್‌, ವಾಕ್‌ಮನ್‌, ತೀತ್ರಿ ಚಟ್ನಿ, ಜಜ್ಞ ಉಪಾಯ್‌, ಚಾರ್‌ಮಸುಖ್‌, ದೇಖ್‌ ಅನ್‌ದೇಖಿ, ಬ್ಯಾಕ್‌ರೋಡ್‌ ಹಲ್‌ಚಲ್‌ ಸೇರಿ ಹಲವು ಸಿನಿಮಾ, ಸಿರೀಸ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇನ್‌ಸ್ಟಾಗ್ರಾಂನಲ್ಲೂ ಅವರು ಸಕ್ರಿಯರಾಗಿದ್ದರು. ಆದರೆ, ಅವರ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ.

VISTARANEWS.COM


on

Noor Malabika Das
Koo

ಮುಂಬೈ: ಬಾಲಿವುಡ್‌ ನಟಿ ಕಾಜೋಲ್‌ ಅಭಿನಯದ ದಿ ಟ್ರಯಲ್‌ (The Trial) ವೆಬ್‌ ಸಿರೀಸ್‌ ಖ್ಯಾತಿ ನಟಿ ನೂರ್‌ ಮಾಳವಿಕಾ ದಾಸ್‌ (Noor Malabika Das) ಅವರು ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಲೋಖಂಡ್‌ವಾಲಾದಲ್ಲಿರುವ ತಮ್ಮ ಫ್ಲ್ಯಾಟ್‌ನಲ್ಲಿ 32 ವರ್ಷದ ಬಾಲಿವುಡ್‌ ನಟಿಯು ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೂನ್‌ 6ರಂದೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

ಜೂನ್‌ 6ರಂದೇ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದು, ಯಾರಿಗೂ ಗೊತ್ತಾಗಿಲ್ಲ. ಮನೆಯಲ್ಲಿ ಯಾರೂ ಇರಲಿಲ್ಲ ಹಾಗೂ ಅಕ್ಕಪಕ್ಕದ ಮನೆಯವರಿಗೂ ವಿಷಯ ಗೊತ್ತಾಗಿಲ್ಲ. ಕೆಲ ದಿನಗಳ ಬಳಿಕ ಅಪಾರ್ಟ್‌ಮೆಂಟ್‌ನಲ್ಲಿ ದುರ್ವಾಸನೆ ಕಂಡುಬಂದಿದ್ದು, ಕೂಡಲೇ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಫ್ಲ್ಯಾಟ್‌ ಬಾಗಿಲು ತೆಗೆದಾಗ ನಟಿಯ ಶವವು ಕೊಳೆತ ರೀತಿಯಲ್ಲಿ ಪತ್ತೆಯಾಗಿದೆ. ಅಂಧೇರಿಯ ಓಶ್ವಿವಾರ ಪ್ರದೇಶದಲ್ಲಿರುವ ಫ್ಲ್ಯಾಟ್‌ನಲ್ಲಿ ನಟಿಯು ವಾಸವಿದ್ದರು.

ನೂರ್‌ ಮಾಳವಿಕಾ ದಾಸ್‌ ಅವರು ಹಿಂದಿ ಸಿನಿಮಾಗಳು ಹಾಗೂ ವೆಬ್‌ಸಿರೀಸ್‌ಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು. ಸಿಸ್ಕಿಯಾನ್‌, ವಾಕ್‌ಮನ್‌, ತೀತ್ರಿ ಚಟ್ನಿ, ಜಜ್ಞ ಉಪಾಯ್‌, ಚಾರ್‌ಮಸುಖ್‌, ದೇಖ್‌ ಅನ್‌ದೇಖಿ, ಬ್ಯಾಕ್‌ರೋಡ್‌ ಹಲ್‌ಚಲ್‌ ಸೇರಿ ಹಲವು ಸಿನಿಮಾ, ಸಿರೀಸ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಅದರಲ್ಲೂ, ದಿ ಟ್ರಯಲ್‌ ವೆಬ್‌ಸಿರೀಸ್‌ ಅವರಿಗೆ ಹೆಚ್ಚು ಹೆಸರು ತಂದುಕೊಂಡಿತ್ತು. ಕಾಜೋಲ್‌ ಜತೆ ಅವರು ತೆರೆ ಹಂಚಿಕೊಂಡಿದ್ದರು. ಅವರು ನಟಿಸಿದ ಕೆಲ ಸಿನಿಮಾಗಳು ಬಿಡುಗಡೆಗೆ ಬಾಕಿ ಇವೆ ಎಂದು ತಿಳಿದುಬಂದಿದೆ.

ಅಸ್ಸಾಂ ಮೂಲದವರಾದ ನೂರ್‌ ಮಾಳವಿಕಾ ದಾಸ್‌ ಅವರು ನಟನೆಗೆ ಕಾಲಿಡುವ ಮೊದಲು ಕತಾರ್‌ ಏರ್‌ವೇಸ್‌ನಲ್ಲಿ ಗಗನಸಖಿಯಾಗಿದ್ದರು. ಇನ್‌ಸ್ಟಾಗ್ರಾಂನಲ್ಲಿ 1.63 ಲಕ್ಷ ಫಾಲೋವರ್‌ಗಳನ್ನು ಹೊಂದಿರುವ ನಟಿಯು ಆಗಾಗ ಫೋಟೊ ಹಾಗೂ ವಿಡಿಯೊಗಳನ್ನು ಪೋಸ್ಟ್‌ ಮಾಡುತ್ತ ಸಕ್ರಿಯರಾಗಿದ್ದರು. ಕೆಲ ದಿನಗಳ ಹಿಂದಷ್ಟೇ ನಟಿಯು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಕೂಡ ಮಾಡಿದ್ದರು. ಇಷ್ಟೆಲ್ಲ ಸಕ್ರಿಯರಾಗಿದ್ದ ನಟಿಯು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನೆಂದು ತಿಳಿದುಬಂದಿಲ್ಲ.

ಇದನ್ನೂ ಓದಿ: ನಟಿ ಪವಿತ್ರ ಜಯರಾಮ್‌ ಸಾವಿನ ಬೆನ್ನಲ್ಲೇ ಪ್ರಿಯತಮ ಚಂದ್ರಕಾಂತ್ ಆತ್ಮಹತ್ಯೆ; ಖಿನ್ನತೆಗೆ ನಟ ಬಲಿ?

Continue Reading

ಬಾಲಿವುಡ್

Sonakshi Sinha: ಜಹೀರ್ ಇಕ್ಬಾಲ್ ಜತೆ ಜೂನ್ 23ರಂದು ಸೋನಾಕ್ಷಿ ಸಿನ್ಹಾ ಅದ್ಧೂರಿ ಮದುವೆ?

Sonakshi Sinha: ಸೋನಾಕ್ಷಿ 2010ರಲ್ಲಿ ʻದಬಾಂಗ್‌ʼ ಸಿನಿಮಾದಿಂದ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರೆ, ಜಹೀರ್ ಅವರ ಮೊದಲ ಚಿತ್ರ 2019ರಲ್ಲಿ ತೆರೆ ಕಂಡ ʻನೋಟ್‌ಬುಕ್ʼ ಆಗಿತ್ತು. ʻಡಬಲ್ ಎಕ್ಸ್‌ಎಲ್‌ʼ ಸಿನಿಮಾದಲ್ಲಿ ಜಹೀರ್ ಇಕ್ಬಾಲ್ ಹಾಗೂ ಸೋನಾಕ್ಷಿ ಸಿನ್ಹಾ ಒಟ್ಟಿಗೆ ನಟಿಸಿದ್ದರುಈ ಹಿಂದೆ ಸಲ್ಮಾನ್‌ ಖಾನ್‌ ಅವರ ಸಹೋದರಿ ಅರ್ಪಿತಾ ಖಾನ್‌ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸೋನಾಕ್ಷಿಯನ್ನು “ಅತ್ತಿಗೆ” ಎಂದು ಕರೆದಿದ್ದರು. ಕೆಲವೇ ಕ್ಷಣಗಳಲ್ಲಿ ಆ ಸ್ಟೋರಿಯನ್ನು ಡಿಲೀಟ್‌ ಮಾಡಿದ್ದರು ಕೂಡ. ಆಗ ಸೋನಾಕ್ಷಿ ಹಾಗೂ ಜಹೀರ್‌ ನಡುವೆ ಸಂಬಂಧ ಇದೆ ಎಂಬ ಸುದ್ದಿ ವೈರಲ್‌ ಆಗಿತ್ತು. .

VISTARANEWS.COM


on

Sonakshi Sinha to marry boyfriend Zaheer Iqbal on June 23
Koo

ಬೆಂಗಳೂರು: ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರು ತಮ್ಮ ಬಾಯ್‌ಫ್ರೆಂಡ್‌ ನಟ ಜಹೀರ್ ಇಕ್ಬಾಲ್ ಜತೆ ಜೂನ್ 23ರಂದು ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಸೋನಾಕ್ಷಿ ಮತ್ತು ಜಹೀರ್ ದಕ್ಷಿಣ ಮುಂಬೈನಲ್ಲಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಆದರೆ ಜೋಡಿ ಎಲ್ಲಿಯೂ ತಮ್ಮ ಮದುವೆ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಸೋನಾಕ್ಷಿ ಹಾಗೂ ಜಹೀರ್ ಹಲವು ವರ್ಷಗಳಿಂದ ಸುತ್ತಾಟ ನಡೆಸುತ್ತಿದ್ದರೂ ಪ್ರೀತಿ ವಿಚಾರವನ್ನು ಒಪ್ಪಿಕೊಂಡಿಲ್ಲ. ಇತ್ತೀಚೆಗೆ ಇವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಇವರು ಈಗ ವಿವಾಹ ಆಗುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಸೋನಾಕ್ಷಿ 2010ರಲ್ಲಿ ʻದಬಾಂಗ್‌ʼ ಸಿನಿಮಾದಿಂದ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರೆ, ಜಹೀರ್ ಅವರ ಮೊದಲ ಚಿತ್ರ 2019ರಲ್ಲಿ ತೆರೆ ಕಂಡ ʻನೋಟ್‌ಬುಕ್ʼ ಆಗಿತ್ತು. ʻಡಬಲ್ ಎಕ್ಸ್‌ಎಲ್‌ʼ ಸಿನಿಮಾದಲ್ಲಿ ಜಹೀರ್ ಇಕ್ಬಾಲ್ ಹಾಗೂ ಸೋನಾಕ್ಷಿ ಸಿನ್ಹಾ ಒಟ್ಟಿಗೆ ನಟಿಸಿದ್ದರು.

ಮುಂಬೈನ ಬಾಸ್ಟಿಯನ್​ನಲ್ಲಿ ವಿವಾಹ ನಡೆಯಲಿದೆ ಎನ್ನಲಾಗಿದೆ. ಜಹೀರ್ ಅವರನ್ನು ಸೋನಾಕ್ಷಿ ಭೇಟಿ ಮಾಡಿದ್ದು ಸಲ್ಮಾನ್ ಖಾನ್ ಮೂಲಕ. ಸಲ್ಲು ಹಾಗೂ ಜಹೀರ್ ಗೆಳೆಯರು. ಭೇಟಿ ಬಳಿಕ ಸೋನಾಕ್ಷಿ ಹಾಗೂ ಜಹೀರ್ ಮಧ್ಯೆ ಫ್ರೆಂಡ್​ಶಿಪ್ ಬೆಳೆಯಿತು. ಆ ಬಳಿಕ ಅದು ಪ್ರೀತಿಗೆ ತಿರುಗಿತು ಎನ್ನಲಾಗಿದೆ.

ಕಳೆದ ವಾರ ಸೋನಾಕ್ಷಿ ಅವರ ಹುಟ್ಟುಹಬ್ಬದಂದು, ಜಹೀರ್ ಹಲವು ಫೋಟೊಗಳನ್ನು ಹಂಚಿಕೊಂಡಿದ್ದರು. ಮೊದಲ ಚಿತ್ರದಲ್ಲಿ ಸೋನಾಕ್ಷಿ ಅವರನ್ನು ಜಹೀರ್ ಬಿಗಿಯಾಗಿ ಅಪ್ಪಿಕೊಳ್ಳುವುದು ಇದೆ. “ಜನ್ಮದಿನದ ಶುಭಾಶಯಗಳು ಸೋನಾʼʼಎಂದು ಶೀರ್ಷಿಕೆ ನೀಡಿದ್ದರು.

ಈ ಹಿಂದೆ ಸಲ್ಮಾನ್‌ ಖಾನ್‌ ಅವರ ಸಹೋದರಿ ಅರ್ಪಿತಾ ಖಾನ್‌ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸೋನಾಕ್ಷಿಯನ್ನು “ಅತ್ತಿಗೆ” ಎಂದು ಕರೆದಿದ್ದರು. ಕೆಲವೇ ಕ್ಷಣಗಳಲ್ಲಿ ಆ ಸ್ಟೋರಿಯನ್ನು ಡಿಲೀಟ್‌ ಮಾಡಿದ್ದರು ಕೂಡ. ಆಗ ಸೋನಾಕ್ಷಿ ಹಾಗೂ ಜಹೀರ್‌ ನಡುವೆ ಸಂಬಂಧ ಇದೆ ಎಂಬ ಸುದ್ದಿ ವೈರಲ್‌ ಆಗಿತ್ತು.

ಇದನ್ನೂ ಓದಿ: Sonakshi Sinha : ಪ್ರೀತಿಯಲ್ಲಿ ಬಿದ್ದ ಸೋನಾಕ್ಷಿ, ಲವ್‌ ಯು ಎಂದು ಪೋಸ್ಟ್‌ ಹಾಕಿದ ಬಾಯ್‌ಫ್ರೆಂಡ್‌ ಯಾರು ನೋಡಿ!

ಸೋನಾಕ್ಷಿ ಕೊನೆಯದಾಗಿ ಸಂಜಯ್ ಲೀಲಾ ಬನ್ಸಾಲಿಯವರ ಸಿರೀಸ್‌ ಹೀರಾಮಂಡಿ: ದಿ ಡೈಮಂಡ್ ಬಜಾರ್‌ನಲ್ಲಿ ಕಾಣಿಸಿಕೊಂಡಿದ್ದರು. ಹೀರಾಮಂಡಿ: ದಿ ಡೈಮಂಡ್ ಬಜಾರ್‌ ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಹೀರಾಮಂಡಿ: ದಿ ಡೈಮಂಡ್ ಬಜಾರ್‌ನಲ್ಲಿ ಮನಿಶಾ ಕೊಯಿರಾಲಾ, ರಿಚಾ ಚಡ್ಡಾ, ಸಂಜೀದಾ ಶೇಖ್, ಅದಿತಿ ರಾವ್ ಹೈದರಿ, ಶರ್ಮಿನ್ ಸೆಗಲ್ ಮೆಹ್ತಾ, ಫರೀದಾ ಜಲಾಲ್, ಫರ್ದೀನ್ ಖಾನ್ ಮತ್ತು ಅಧ್ಯಯನ್ ಸುಮನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Continue Reading

ಬಾಲಿವುಡ್

Kangana Ranaut: ಪ್ರಮಾಣ ವಚನ ಸಮಾರಂಭದಲ್ಲಿ ಬಿಳಿ ಸೀರೆಯಲ್ಲಿ ಮಿಂಚಿದ ಕಂಗನಾ!

ಕಂಗನಾ ರಣಾವತ್ ಹಿಮಾಚಲ ಪ್ರದೇಶದ ಮಂಡಿಯಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸಿದ್ದರು. ನಟಿಯ ಮುಂದೆ ಕಾಂಗ್ರೆಸ್ ಪಕ್ಷದ ನಾಯಕ ವಿಕ್ರಮಾದಿತ್ಯ ಸಿಂಗ್ ಇದ್ದರು. ಕಂಗನಾ ಅವರನ್ನು 74,755 ಮತಗಳಿಂದ ಸೋಲಿಸಿದರು.ಕಂಗನಾ ರಣಾವತ್ ಜೂನ್ 6 ರಂದು ನವದೆಹಲಿಗೆ ಪ್ರಯಾಣಿಸುತ್ತಿದ್ದಾಗ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಸಿಐಎಸ್ಎಫ್ ಕಾನ್ಸ್‌ಟೇಬಲ್ ಕಪಾಳಮೋಕ್ಷ ಮಾಡಿದ್ದರು.

VISTARANEWS.COM


on

Kangana Ranaut Looks Gorgeous In A White Saree
Koo

ಬೆಂಗಳೂರು: ಕಂಗನಾ ರಣಾವತ್ (Kangana Ranaut) ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಮಂಡಿ ಕ್ಷೇತ್ರದಿಂದ ಗೆದ್ದಿದ್ದಾರೆ. ಪ್ರಮಾಣ ವಚನ ಸಮಾರಂಭದಲ್ಲಿ ಕಂಗನಾ ಭಾಗಿಯಾಗಿದ್ದರು. ಕಂಗನಾ ಪ್ರಮಾಣ ವಚನ ಸಮಾರಂಭದಲ್ಲಿ ಸೀರೆಯಲ್ಲಿ ಮಿಂಚಿದ್ದಾರೆ. ಬಿಳಿ ಸೀರೆಯಲ್ಲಿ ನಟಿ ಕಂಗೊಳಿಸಿದ್ದಾರೆ. ಶಾರುಖ್ ಖಾನ್, ಅಕ್ಷಯ್ ಕುಮಾರ್, ವಿಕ್ರಾಂತ್ ಮಾಸ್ಸೆ, ಮತ್ತು ಅನುಪಮ್ ಖೇರ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಭಾಗಿಯಾಗಿದ್ದರು.

ಸಮಾರಂಭದ ಕೇಂದ್ರ ಬಿಂದುವಿನಂತೆ ಬಿಟೌನ್‌ ಕ್ವೀನ್‌ ಕಂಗೊಳಿಸುತ್ತಿದ್ದರು. ಬಿಳಿ ಬಣ್ಣದ ಸೀರೆಯಲ್ಲಿ, ಮುತ್ತಿನ ನೆಕ್ಲೇಸ್‌ ಧರಿಸಿ ಕಂಗನಾ ಕಾಂತಿಯುತವಾಗಿ ಕಾಣಿಸಿಕೊಂಡಿದ್ದಾರೆ. ನಟಿಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ..ಸ್ವತಃ ವಿಡಿಯೊ ಹಂಚಿಕೊಂಡಿರುವ ಕಂಗನಾ ‘ಪ್ರಮಾಣ ದಿನದಂದು ನನ್ನ ನೋಟ’ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.

ಕಂಗನಾ ರಣಾವತ್ ಹಿಮಾಚಲ ಪ್ರದೇಶದ ಮಂಡಿಯಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸಿದ್ದರು. ನಟಿಯ ಮುಂದೆ ಕಾಂಗ್ರೆಸ್ ಪಕ್ಷದ ನಾಯಕ ವಿಕ್ರಮಾದಿತ್ಯ ಸಿಂಗ್ ಇದ್ದರು. ಕಂಗನಾ ಅವರನ್ನು 74,755 ಮತಗಳಿಂದ ಸೋಲಿಸಿದರು.

ಇದನ್ನೂ ಓದಿ: Sushant Singh: ಕೇದಾರನಾಥಕ್ಕೆ ಭೇಟಿ ಕೊಟ್ಟಾಗ ಸುಶಾಂತ್ ಸಿಂಗ್ ನೆನೆದು ಕಣ್ಣೀರಿಟ್ಟ ಸಹೋದರಿ!

ಕಂಗನಾ ರಣಾವತ್ ಜೂನ್ 6 ರಂದು ನವದೆಹಲಿಗೆ ಪ್ರಯಾಣಿಸುತ್ತಿದ್ದಾಗ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಸಿಐಎಸ್ಎಫ್ ಕಾನ್ಸ್‌ಟೇಬಲ್ ಕಪಾಳಮೋಕ್ಷ ಮಾಡಿದ್ದರು. 2020 ರಲ್ಲಿ, ಕಂಗನಾ ರಣಾವತ್‌ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದ ಪಂಜಾಬ್​ನ ಮಹಿಳೆಯೊಬ್ಬರನ್ನು ತಪ್ಪಾಗಿ ಅಂದಾಜಿಸಿದ್ದರು. ಅದಕ್ಕಿಂತ ಹಿಂದೆ ಶಾಹೀನ್ ಬಾಗ್​ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಿಲ್ಕಿಸ್ ಬಾನೊ ಅವರು ಎಂದುಕೊಂಡಿದ್ದರು. ಪ್ರತಿಭಟನೆಗೆ ಬರುವ ಮಹಿಳೆಯರೆಲ್ಲರೂ 100 ರೂಪಾಯಿಗೆ ಸಿಗುತ್ತಾರೆ ಎಂದು ಹೇಳಿದ್ದರು. ಇದು ದೊಡ್ಡ ವಿವಾದ ಸೃಷ್ಟಿಸಿತ್ತು. ಅಂದ ಹಾಗೆ ಕಂಗನಾಗೆ ಹೊಡೆದ ಕಾನ್​ಸ್ಟೇಬಲ್​ ಕುಲ್ವಿಂದರ್ ಕೌರ್​ ತಾಯಿಯೂ ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಂಗನಾ ಹೇಳಿಕೆಯಿಂದ ಕೋಪಗೊಂಡಿದ್ದ ಅವರು ಪ್ರತಿಕಾರ ತೀರಿಸಲು ಕಾದಿದ್ದರು. ಅಂತೆಯೇ ಚಂಡಿಗಢದಲ್ಲಿ ತಪಾಸಣಾ ಕೇಂದ್ರಕ್ಕೆ ಬರುತ್ತಿದ್ದಂತೆ ಕಪಾಳ ಮೋಕ್ಷ ಮಾಡಿದ್ದಾರೆ.

Continue Reading
Advertisement
Actor Darshan Murder accusations Chetan Kumar Ahimsa react
ಸಿನಿಮಾ1 min ago

Actor Darshan: ನಿಜ ಜೀವನದಲ್ಲಿ ನಟ ದರ್ಶನ್‌ನಂತಹ ಖಳನಾಯಕನನ್ನು ಸೃಷ್ಟಿಸಿದ ನಾವೇ ತಪ್ಪಿತಸ್ಥರು; ಚೇತನ್‌ ಅಹಿಂಸಾ!

Bird Flu
ಆರೋಗ್ಯ7 mins ago

Bird Flu: ದೇಶದಲ್ಲಿ ಎರಡನೇ ಹಕ್ಕಿ ಜ್ವರದ ಪ್ರಕರಣ ಪತ್ತೆ; ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ

Actor Darshan 10 Biryani For Sent To Police Custody
ಸ್ಯಾಂಡಲ್ ವುಡ್13 mins ago

Actor Darshan: ಆರೋಪಿ ದರ್ಶನ್​ಗೆ 10ಕ್ಕೂ ಹೆಚ್ಚು ದೊನ್ನೆ ಬಿರಿಯಾನಿ ತರಿಸಿದ್ದ ಪೊಲೀಸರು!

Chikkaballapur News
ಪ್ರಮುಖ ಸುದ್ದಿ14 mins ago

Chikkaballapur News : ಒಂದೇ ಗ್ರಾಮದಲ್ಲಿ ನಾಲ್ವರ ಸರಣಿ ಸಾವು ; ಸ್ಥಳೀಯರಲ್ಲಿ ಆತಂಕ

Nagarjuna Sagar
ಪ್ರವಾಸ38 mins ago

Nagarjuna Sagar: ನಾಗಾರ್ಜುನಸಾಗರದ ಈ ಸ್ಥಳಗಳು ವಾರಾಂತ್ಯ ಪ್ರವಾಸಕ್ಕೆ ಸೂಕ್ತ

Actor Darshan
ಪ್ರಮುಖ ಸುದ್ದಿ42 mins ago

ರಾಜಮಾರ್ಗ ಅಂಕಣ : ನನ್ನ ಬದುಕೇ ಬೇರೆ, ನನ್ನ ಸಿನಿಮಾನೇ ಬೇರೆ ಅಂದರೆ ಹೀಗೇ ಆಗೋದು!

Job Alert
ಉದ್ಯೋಗ57 mins ago

Job Alert: ಎಚ್‌ಎಎಲ್‌ನಲ್ಲಿದೆ ಉದ್ಯೋಗಾವಕಾಶ; ಡಿಪ್ಲೋಮಾ ಪಾಸಾದವರು ಅಪ್ಲೈ ಮಾಡಿ

Actor Darshan political leaders appeal to the CM and Home Minister not to twist case
ಸ್ಯಾಂಡಲ್ ವುಡ್59 mins ago

Actor Darshan : ದರ್ಶನ್‌ ಪರ ವಹಿಸಿ ಸಿಎಂ, ಗೃಹ ಸಚಿವರಿಗೆ ಮನವಿ ಮಾಡಿದ್ರಾ ರಾಜಕೀಯ ನಾಯಕರು?

Actor Darshan Renukaswamy Send His Photos To Pavitra Gowda
ಸ್ಯಾಂಡಲ್ ವುಡ್1 hour ago

Actor Darshan: ಪವಿತ್ರಾಗೆ ಮರ್ಮಾಂಗದ ಫೋಟೊ ಕಳುಹಿಸಿದ್ರಾ ರೇಣುಕಾಸ್ವಾಮಿ? ದರ್ಶನ್​ಗೆ ತಿಳಿದಿದ್ದು ಹೇಗೆ?

Fraud Case
ಕ್ರೈಂ1 hour ago

Fraud Case: 300 ರೂ. ಬೆಲೆಯ ನಕಲಿ ಆಭರಣವನ್ನು ವಿದೇಶಿ ಮಹಿಳೆಗೆ 6 ಕೋಟಿ ರೂ.ಗೆ ಮಾರಿದರು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ17 hours ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ18 hours ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ19 hours ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ21 hours ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ23 hours ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌