Site icon Vistara News

Vivek Agnihotri : ʻದಿ ಕಾಶ್ಮೀರ್ ಫೈಲ್ಸ್ʼ ಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಡಾಕ್ಟರೇಟ್

Director Vivek Agnihotri  of The Kashmir Files fame got doctorate

ʻದಿ ತಾಷ್ಕೆಂಟ್ ಫೈಲ್ಸ್ʼ,ʻ ದಿ ಕಾಶ್ಮೀರ್ ಫೈಲ್ಸ್ʼ ಮತ್ತು ʻದಿ ವ್ಯಾಕ್ಸಿನ್ ವಾರ್ʼ ಸಿನಿಮಾ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ (Vivek Agnihotri ) ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ತನ್ನ ಕಥೆಯಿಂದ ದೇಶವನ್ನು ಗಮನ ಸೆಳೆದ ನಿರ್ದೇಶಕರು ಹೌದು. ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದ ಖ್ಯಾತಿ ಇವರದ್ದು. ಇದೀಗ ಮಹಾರಾಷ್ಟ್ರದ ಪುಣೆಯಲ್ಲಿರುವ ಅಜಿಂಕ್ಯಾ ಡಿವೈ ಪಾಟಿಲ್ ಯೂನಿವರ್ಸಿಟಿಯವರು ವಿವೇಕ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದಾರೆ.

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೇವಲ ಸಿನಿಮಾ ಮಾತ್ರವಲ್ಲ ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಆಧರಿಸಿ ಮಾಡಿದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಸೂಪರ್​ಹಿಟ್ ಆಯಿತು. ಕೊವಿಡ್ ಲಸಿಕೆ ಕಂಡು ಹಿಡಿದ ಘಟನೆ ಆಧರಿಸಿ ಸಿದ್ಧಗೊಂಡ ‘ದಿ ವ್ಯಾಕ್ಸಿನ್ ವಾರ್’ ಚಿತ್ರ ವೀಕ್ಷಕರಿಂದ ಮೆಚ್ಚುಗೆ ಪಡೆಯಿತು. ಇದೀಗ ಗೌರವ ಡಾಕ್ಟರೇಟ್ ಬಗ್ಗೆ ವಿವೇಕ್‌ ಅಗ್ನಿಹೋತ್ರಿ ಮಾತನಾಡಿದ್ದಾರೆ.

“ನಾನು ನಿಮ್ಮೊಂದಿಗೆ ಐದು ಜೀವನ ಕಲಿಕೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ನನ್ನ ಜೀವನದಲ್ಲಿ ನಾನು ಏನು ಅಭ್ಯಾಸ ಮಾಡಿದ್ದೇನೋ ಅದನ್ನೇ ನಾನು ಮಾತನಾಡುತ್ತೇನೆ. ನನ್ನ ಜೀವನದ ತಿಳಿವಳಿಕೆಯನ್ನು ರೂಪಿಸಿದ್ದು ಐದು ಸಂಸ್ಥೆಗಳು.ನಾನು ಕಲಿತ ಶಾಲೆ, ನನ್ನ ಕಾಲೇಜು, ನಾನು ಕಲಿತ ಯೂನಿವರ್ಸಿಟಿಗಳು ನನ್ನ ಮೊದಲ ಗುರು.ನನ್ನ ಎರಡನೇ ಗುರು ನನ್ನ ಸಮಯ, ನನ್ನ ಮೂರನೇ ಗುರು ಸಿನಿಮಾ, ಶಕ್ತಿ ಆಧ್ಯಾತ್ಮಿಕತೆ ನನ್ನ ನಾಲ್ಕನೇ ಶಿಕ್ಷಕ ಮತ್ತು ನನ್ನ ಐದನೇ ಮತ್ತು ಕೊನೆಯ ಕಲಿಕೆಯೆಂದರೆ ಯಾವುದೇ ನಿಯಮಗಳಿಲ್ಲʼʼ ಎಂದು ಮಾತನಾಡಿದರು.

ಇದನ್ನೂ ಓದಿ: Vivek Agnihotri: ಸಿನಿಮಾ ಆಗ್ತಿದೆ ಎಸ್​.ಎಲ್​. ಭೈರಪ್ಪರವರ ‘ಪರ್ವ’; ವಿವೇಕ್​ ಅಗ್ನಿಹೋತ್ರಿ ಆ್ಯಕ್ಷನ್‌ ಕಟ್‌; ಟೈಟಲ್‌ ಲಾಂಚ್‌!

‘ದಿ ವ್ಯಾಕ್ಸಿನ್ ವಾರ್’ ಬಳಿಕ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಇದಕ್ಕೆ ‘ಪರ್ವ’ ಎಂದು ಶೀರ್ಷಿಕೆ ಇಡಲಾಗಿದೆ. ಎಸ್​.ಎಲ್​. ಭೈರಪ್ಪ (SL Bhyrappa) ಅವರ ‘ಪರ್ವ’ ಕಾದಂಬರಿ (Parva) ಸಿನಿಮಾ ರೂಪ‌ ಪಡೆದುಕೊಳ್ಳುತ್ತಿದೆ. ಆಧುನಿಕ ಮಹಾಭಾರತ ಎಂದೇ ಈ ಕಾದಂಬರಿ ಜನಪ್ರಿಯ. ಬಾಲಿವುಡ್​ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri) ಅವರು ಇದನ್ನು ಸಿನಿಮಾ ಮಾಡಲು ನಿರ್ಧರಿಸಿದ್ದರು.

ವಿವೇಕ್ ಅಗ್ನಿಹೋತ್ರಿ ಈ ಹಿಂದೆ ಸಿನಿಮಾ ಬಗ್ಗೆ ಮಾತನಾಡಿ ʻʻಭೈರಪ್ಪನವರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಪರ್ವ ಕಾದಂಬರಿಗೆ ಸಿನಿಮಾ ಟಚ್ ಕೊಡಲು ನಿರ್ಧರಿಸಿದ್ದೇನೆ. ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ಪರ್ವ ಸಿನಿಮಾ ಮೂಡಿಬರಲಿದೆ. ಸಾಧ್ಯವಾದ್ರೆ ಮುಂದಿನ ದಿನಗಳಲ್ಲಿ ಸ್ಪ್ಯಾನಿಷ್ ಹಾಗು ಇಂಗ್ಲಿಷ್ ಭಾಷೆಯಲ್ಲಿ ಪರ್ವ ರಿಲೀಸ್ ಆಗಲಿದೆ. ಈ ಸಿನಿಮಾ ಮಾಡಲು ನನಗೆ ಚಾಲೆಂಜ್ ಎಂದು ಅನ್ನಿಸಿಲ್ಲ. ಈ ಕಾದಂಬರಿಯನ್ನು ಸಿನಿಮಾವಾಗಿ ತೆರೆಗೆ ತರುವುದು ನನ್ನ ಕನಸಾಗಿತ್ತು. ಮಹಾಭಾರತದಲ್ಲಿ ನಾವು ಕೇಳದೆ ಇರುವಂತಹ ವಿಷಯಗಳನ್ನ ಬರೆದಿದ್ದಾರೆʼʼ ಎಂದಿದ್ದರು.

Exit mobile version