Vivek Agnihotri : ʻದಿ ಕಾಶ್ಮೀರ್ ಫೈಲ್ಸ್ʼ ಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಡಾಕ್ಟರೇಟ್ - Vistara News

ಬಾಲಿವುಡ್

Vivek Agnihotri : ʻದಿ ಕಾಶ್ಮೀರ್ ಫೈಲ್ಸ್ʼ ಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಡಾಕ್ಟರೇಟ್

Vivek Agnihotri  ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದ ಖ್ಯಾತಿ ಇವರದ್ದು. ಇದೀಗ ಮಹಾರಾಷ್ಟ್ರದ ಪುಣೆಯಲ್ಲಿರುವ ಅಜಿಂಕ್ಯಾ ಡಿವೈ ಪಾಟಿಲ್ ಯೂನಿವರ್ಸಿಟಿಯವರು ವಿವೇಕ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದಾರೆ.

VISTARANEWS.COM


on

Director Vivek Agnihotri  of The Kashmir Files fame got doctorate
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ʻದಿ ತಾಷ್ಕೆಂಟ್ ಫೈಲ್ಸ್ʼ,ʻ ದಿ ಕಾಶ್ಮೀರ್ ಫೈಲ್ಸ್ʼ ಮತ್ತು ʻದಿ ವ್ಯಾಕ್ಸಿನ್ ವಾರ್ʼ ಸಿನಿಮಾ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ (Vivek Agnihotri ) ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ತನ್ನ ಕಥೆಯಿಂದ ದೇಶವನ್ನು ಗಮನ ಸೆಳೆದ ನಿರ್ದೇಶಕರು ಹೌದು. ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದ ಖ್ಯಾತಿ ಇವರದ್ದು. ಇದೀಗ ಮಹಾರಾಷ್ಟ್ರದ ಪುಣೆಯಲ್ಲಿರುವ ಅಜಿಂಕ್ಯಾ ಡಿವೈ ಪಾಟಿಲ್ ಯೂನಿವರ್ಸಿಟಿಯವರು ವಿವೇಕ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದಾರೆ.

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೇವಲ ಸಿನಿಮಾ ಮಾತ್ರವಲ್ಲ ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಆಧರಿಸಿ ಮಾಡಿದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಸೂಪರ್​ಹಿಟ್ ಆಯಿತು. ಕೊವಿಡ್ ಲಸಿಕೆ ಕಂಡು ಹಿಡಿದ ಘಟನೆ ಆಧರಿಸಿ ಸಿದ್ಧಗೊಂಡ ‘ದಿ ವ್ಯಾಕ್ಸಿನ್ ವಾರ್’ ಚಿತ್ರ ವೀಕ್ಷಕರಿಂದ ಮೆಚ್ಚುಗೆ ಪಡೆಯಿತು. ಇದೀಗ ಗೌರವ ಡಾಕ್ಟರೇಟ್ ಬಗ್ಗೆ ವಿವೇಕ್‌ ಅಗ್ನಿಹೋತ್ರಿ ಮಾತನಾಡಿದ್ದಾರೆ.

“ನಾನು ನಿಮ್ಮೊಂದಿಗೆ ಐದು ಜೀವನ ಕಲಿಕೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ನನ್ನ ಜೀವನದಲ್ಲಿ ನಾನು ಏನು ಅಭ್ಯಾಸ ಮಾಡಿದ್ದೇನೋ ಅದನ್ನೇ ನಾನು ಮಾತನಾಡುತ್ತೇನೆ. ನನ್ನ ಜೀವನದ ತಿಳಿವಳಿಕೆಯನ್ನು ರೂಪಿಸಿದ್ದು ಐದು ಸಂಸ್ಥೆಗಳು.ನಾನು ಕಲಿತ ಶಾಲೆ, ನನ್ನ ಕಾಲೇಜು, ನಾನು ಕಲಿತ ಯೂನಿವರ್ಸಿಟಿಗಳು ನನ್ನ ಮೊದಲ ಗುರು.ನನ್ನ ಎರಡನೇ ಗುರು ನನ್ನ ಸಮಯ, ನನ್ನ ಮೂರನೇ ಗುರು ಸಿನಿಮಾ, ಶಕ್ತಿ ಆಧ್ಯಾತ್ಮಿಕತೆ ನನ್ನ ನಾಲ್ಕನೇ ಶಿಕ್ಷಕ ಮತ್ತು ನನ್ನ ಐದನೇ ಮತ್ತು ಕೊನೆಯ ಕಲಿಕೆಯೆಂದರೆ ಯಾವುದೇ ನಿಯಮಗಳಿಲ್ಲʼʼ ಎಂದು ಮಾತನಾಡಿದರು.

ಇದನ್ನೂ ಓದಿ: Vivek Agnihotri: ಸಿನಿಮಾ ಆಗ್ತಿದೆ ಎಸ್​.ಎಲ್​. ಭೈರಪ್ಪರವರ ‘ಪರ್ವ’; ವಿವೇಕ್​ ಅಗ್ನಿಹೋತ್ರಿ ಆ್ಯಕ್ಷನ್‌ ಕಟ್‌; ಟೈಟಲ್‌ ಲಾಂಚ್‌!

‘ದಿ ವ್ಯಾಕ್ಸಿನ್ ವಾರ್’ ಬಳಿಕ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಇದಕ್ಕೆ ‘ಪರ್ವ’ ಎಂದು ಶೀರ್ಷಿಕೆ ಇಡಲಾಗಿದೆ. ಎಸ್​.ಎಲ್​. ಭೈರಪ್ಪ (SL Bhyrappa) ಅವರ ‘ಪರ್ವ’ ಕಾದಂಬರಿ (Parva) ಸಿನಿಮಾ ರೂಪ‌ ಪಡೆದುಕೊಳ್ಳುತ್ತಿದೆ. ಆಧುನಿಕ ಮಹಾಭಾರತ ಎಂದೇ ಈ ಕಾದಂಬರಿ ಜನಪ್ರಿಯ. ಬಾಲಿವುಡ್​ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri) ಅವರು ಇದನ್ನು ಸಿನಿಮಾ ಮಾಡಲು ನಿರ್ಧರಿಸಿದ್ದರು.

ವಿವೇಕ್ ಅಗ್ನಿಹೋತ್ರಿ ಈ ಹಿಂದೆ ಸಿನಿಮಾ ಬಗ್ಗೆ ಮಾತನಾಡಿ ʻʻಭೈರಪ್ಪನವರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಪರ್ವ ಕಾದಂಬರಿಗೆ ಸಿನಿಮಾ ಟಚ್ ಕೊಡಲು ನಿರ್ಧರಿಸಿದ್ದೇನೆ. ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ಪರ್ವ ಸಿನಿಮಾ ಮೂಡಿಬರಲಿದೆ. ಸಾಧ್ಯವಾದ್ರೆ ಮುಂದಿನ ದಿನಗಳಲ್ಲಿ ಸ್ಪ್ಯಾನಿಷ್ ಹಾಗು ಇಂಗ್ಲಿಷ್ ಭಾಷೆಯಲ್ಲಿ ಪರ್ವ ರಿಲೀಸ್ ಆಗಲಿದೆ. ಈ ಸಿನಿಮಾ ಮಾಡಲು ನನಗೆ ಚಾಲೆಂಜ್ ಎಂದು ಅನ್ನಿಸಿಲ್ಲ. ಈ ಕಾದಂಬರಿಯನ್ನು ಸಿನಿಮಾವಾಗಿ ತೆರೆಗೆ ತರುವುದು ನನ್ನ ಕನಸಾಗಿತ್ತು. ಮಹಾಭಾರತದಲ್ಲಿ ನಾವು ಕೇಳದೆ ಇರುವಂತಹ ವಿಷಯಗಳನ್ನ ಬರೆದಿದ್ದಾರೆʼʼ ಎಂದಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

SS Rajamouli: ರಾಜಮೌಳಿಯನ್ನು ಜ್ಯೂನಿಯರ್‌ ಎನ್‌ಟಿಆರ್‌ ʻಮ್ಯಾಡ್‌ ಮ್ಯಾನ್‌ʼ ಎಂದು ಕರೆದಿದ್ದೇಕೆ? ವಿಡಿಯೊದಲ್ಲಿ ಏನಿದೆ?

SS Rajamouli: ರಾಜಮೌಳಿ ನಿರ್ದೇಶನದ ಚಿತ್ರಗಳ ತೆರೆಮರೆಯ ದೃಶ್ಯಗಳು ಇದರಲ್ಲಿವೆ. ಮಾತ್ರವಲ್ಲ ಜ್ಯೂನಿಯರ್‌ ಎನ್‌ಟಿಆರ್‌, ರಾಮ್‌ಚರಣ್‌, ಜೇಮ್ಸ್ ಕ್ಯಾಮರೂನ್ ಸೇರಿದಂತೆ SS ರಾಜಮೌಳಿ ಅವರ ಕುರಿತು ಮಾತನಾಡಿದ್ದಾರೆ.

VISTARANEWS.COM


on

SS Rajamouli Modern Masters Official Trailer Netflix India
Koo

ಬೆಂಗಳೂರು: ಆರ್‌ಆರ್‌ಆರ್‌, ಬಾಹುಬಲಿ ಮತ್ತು ಮಗಧೀರಗಳಂತಹ ಹಿಟ್‌ ಚಿತ್ರಗಳ ನಿರ್ದೇಶಕ SS ರಾಜಮೌಳಿ ಅವರ ಹೊಸ ಸಾಕ್ಷ್ಯಚಿತ್ರದ ಟ್ರೈಲರ್‌ ನೆಟ್‌ಫ್ಲಿಕ್ಸ್‌ ಬಿಡುಗಡೆಗೊಳಿಸಿದೆ. ʻಮಾಡರ್ನ್ ಮಾಸ್ಟರ್ಸ್ʼ ಎಂಬ ಶೀರ್ಷಿಕೆಯ ಅಡಿ ಟ್ರೈಲರ್ ಅನಾವರಣಗೊಂಡಿದೆ. ರಾಜಮೌಳಿ ನಿರ್ದೇಶನದ ಚಿತ್ರಗಳ ತೆರೆಮರೆಯ ದೃಶ್ಯಗಳು ಇದರಲ್ಲಿವೆ. ಮಾತ್ರವಲ್ಲ ಜ್ಯೂನಿಯರ್‌ ಎನ್‌ಟಿಆರ್‌, ರಾಮ್‌ಚರಣ್‌, ಜೇಮ್ಸ್ ಕ್ಯಾಮರೂನ್ ಸೇರಿದಂತೆ SS ರಾಜಮೌಳಿ ಅವರ ಕುರಿತು ಮಾತನಾಡಿದ್ದಾರೆ.

ಟ್ರೈಲರ್‌ನಲ್ಲಿ ಏನಿದೆ?

ಮೊದಲಿಗೆ ರಾಜಮೌಳಿ ಅಂದರೆ ಹೇಗೆ? ಎಂಬ ಪರಿಚಯ ಹಿನ್ನೆಲೆ ಧ್ವನಿಯಲ್ಲಿ ಮೂಡಿ ಬಂದಿದೆ. ಟ್ರೈಲರ್‌ನಲ್ಲಿ ʻʻನಾನು ನಂಬಲಾಗದ ಕಥೆಯನ್ನು ಹೇಳಲು ಬಯಸುತ್ತೇನೆ. ಜನರು ಸಿನಿಮಾದಲ್ಲಿ ಹೂಡಿಕೆ ಮಾಡಬೇಕೆಂದು ನಾನು ಬಯಸುತ್ತೇನೆ. ನಿರ್ದೇಶಕರ ಮೇಕಿಂಗ್ ಮತ್ತು ಅವರ ಚಲನಚಿತ್ರಗಳು ಪ್ರೇಕ್ಷಕರ ನಾಡಿಮಿಡಿತವನ್ನು ಹೇಗೆ ಮನ ಮುಟ್ಟಿದೆ ಎಂಬುದರ ಕುರಿತು ಒಂದು ನೋಟ ಇದರಲ್ಲಿ ಇದೆ. ಇದು ನಟರು, ತಂತ್ರಜ್ಞರು ಮತ್ತು ಕುಟುಂಬದ ಸದಸ್ಯರನ್ನು ಒಳಗೊಂಡ ಸಾಕ್ಷ್ಯಚಿತ್ರʼʼಎಂದಿದೆ.

ಟ್ರೈಲರ್‌ ಮಧ್ಯೆ ಅನೇಕ ನಟರು, ನಿರ್ದೇಶರು ರಾಜಮೌಳಿ ಅವರನ್ನು ಹೊಗಳಿದ್ದು ಹೀಗೆ. ಜ್ಯೂನಿಯರ್‌ ಎನ್‌ಟಿಆರ್‌ ಕೂಡ ರಾಜಮೌಳಿ ಅವರನ್ನು ಹೊಗಳಿದ್ದಾರೆ. ʻʻರಾಜಮೌಳಿ ಹುಟ್ಟಿದ್ದೆ ಸಿನಿಮಾ ಮಾಡಲು ಹಾಗೂ ಹೇಳದ ಕಥೆಗಳನ್ನು ಹೇಳಲು .ಸಿನಿಮಾದಲ್ಲಿನ ಅವರ ಸಮರ್ಪಣೆಗಾಗಿ ಅವರನ್ನುʻಮ್ಯಾಡ್‌ ಮ್ಯಾನ್‌ʼʼ ಎನ್ನಬಹುದು. ʻʻರಾಜಮೌಳಿ ಜೊತೆ ವಾದ ಮಾಡುವುದರಲ್ಲಿ ಅರ್ಥವಿಲ್ಲ. ಅವರು ಬಯಸಿದ್ದನ್ನು ಮಾತ್ರ ತಲುಪಿಸಿ.” ಎಂದು ಹೇಳಿಕೊಂಡಿದ್ದಾರೆ. ಬಾಹುಬಲಿಯಲ್ಲಿ ನಟಿಸಿರುವ ಪ್ರಭಾಸ್ ಹೀಗೆ ಹೇಳುತ್ತಾರೆ: “ನಾನು ಅಂತಹ ವ್ಯಕ್ತಿಯನ್ನು ಭೇಟಿ ಮಾಡಿಲ್ಲ. ಅವರೊಬ್ಬರು ʻʻಮ್ಯಾಡ್‌ ಪರ್ಸನ್‌ ಅಷ್ಟೇ.”ಎಂದಿದ್ದಾರೆ.

ಇದನ್ನೂ ಓದಿ: Niveditha Shivarajkumar: ʻಫೈರ್ ಫ್ಲೈ’ ಸಿನಿಮಾಗೆ ‘ಹೆಂಗೆ ನಾವು’ ಹುಡುಗಿ ನಾಯಕಿ! ಯಾವಾಗ ತೆರೆಗೆ?

ʻʻರಾಜಮೌಳಿ ಈಗಾಗಲೇ ‘ಲೆಜೆಂಡ್’ ಆಗಿದ್ದಾರೆ ಮತ್ತು ಇನ್ನು ಮುಂದೆ ಅವರ ವೃತ್ತಿಜೀವನದಲ್ಲಿ ಇನ್ನೂ ದೊಡ್ಡ ದಂತಕಥೆಯಾಗುತ್ತಾರೆʼʼ ಎಂದು ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಹೇಳುತ್ತಾರೆ. ಟೈಟಾನಿಕ್ ಮತ್ತು ಅವತಾರ್ ಅನ್ನು ನಿರ್ಮಿಸಿದ ಅಕಾಡೆಮಿ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಜೇಮ್ಸ್ ಕ್ಯಾಮರೂನ್ ಸಹ ರಾಜಮೌಳಿ ಕುರಿತು ಹೇಳಿದ್ದು ಹೀಗೆ “ಯಾವುದೇ ಕೆಲಸವನ್ನು ಮಾಡಲು ಮತ್ತು ಯಾರೊಂದಿಗಾದರೂ ಕೆಲಸ ಮಾಡಲು ಅವರಿಗೆ ಅಷ್ಟೇ ಗೌರವವಿದೆ.”ಎಂದಿದ್ದಾರೆ.

SS ರಾಜಮೌಳಿಯವರ ಕೊನೆಯ ಚಿತ್ರ RRR. ಈ ಸಿನಿಮಾ ಜಾಗತಿಕ ಮನ್ನಣೆಯನ್ನು ಗಳಿಸಿತು ಮತ್ತು ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿತು. ಎಂಎಂ ಕೀರವಾಣಿ ಅವರು ನಾಟು ನಾಟು ಗಾಗಿ ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡರ., ಹಾಗೆಯೇ ಏಷ್ಯನ್ ಚಲನಚಿತ್ರದ ವಿಭಾಗದಲ್ಲಿ ಗೆದ್ದ ಮೊದಲ ಹಾಡು. ರಾಘವ್ ಖನ್ನಾ ನಿರ್ದೇಶಿಸಿದ ಮತ್ತು ಅನುಪಮಾ ಚೋಪ್ರಾ ನಿರ್ಮಿಸಿದ ಸಾಕ್ಷ್ಯಚಿತ್ರದ ʻಮಾಡರ್ನ್ ಮಾಸ್ಟರ್ಸ್ʼ ಆಗಸ್ಟ್ 2 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

Continue Reading

ಬಾಲಿವುಡ್

Priyanka Chopra: ʻದಿ ಬ್ಲಫ್‌ʼ ಸೆಟ್‌ನಿಂದ ಲೀಕ್‌ ಆಯ್ತು ಪ್ರಿಯಾಂಕಾ ಲುಕ್‌; ನಟಿಯ ಹೇರ್ ಸ್ಟೈಲ್ ಸೆಂಟರ್ ಆಫ್ ಅಟ್ರ್ಯಾಕ್ಷನ್!

Priyanka Chopra: ಇದೀಗ ನಟಿಯ ಚಿತ್ರದ ಶೂಟಿಂಗ್‌ ಸೆಟ್‌ನ ಕೆಲವು ದೃಶ್ಯಗಳು ಲೀಕ್‌ ಆಗಿವೆ. ಚಿತ್ರೀಕರಣದಲ್ಲಿರುವ ನಟಿಯ ಲುಕ್‌ನ ಫೋಟೊ ಲೀಕ್‌ ಆಗಿದೆ. ʻದಿ ಬ್ಲಫ್‌ʼಸಿನಿಮಾದಲ್ಲಿ ನಟಿ ಮುಂದೆ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

VISTARANEWS.COM


on

Priyanka Chopra pirate look with mohawk leaked
Koo

ಬೆಂಗಳೂರು: ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ ನಂತರ, ತಮ್ಮ ಮುಂದಿನ ಹಾಲಿವುಡ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯಸಿಯಾಗಿದ್ದಾರೆ. ಆಸ್ಟ್ರೇಲಿಯಾಗೆ ಶೂಟಿಂಗ್‌ ಸಂಬಂಧ ಮರಳಲು ಮದುವೆಯ ಕೆಲವು ಕಾರ್ಯಕ್ರಮಗಳಲ್ಲಿಯೂ ನಟಿ ಭಾಗಿಯಾಗಿರಲಿಲ್ಲ. ಇದೀಗ ನಟಿಯ ಚಿತ್ರದ ಶೂಟಿಂಗ್‌ ಸೆಟ್‌ನ ಕೆಲವು ದೃಶ್ಯಗಳು ಲೀಕ್‌ ಆಗಿವೆ. ಚಿತ್ರೀಕರಣದಲ್ಲಿರುವ ನಟಿಯ ಲುಕ್‌ನ ಫೋಟೊ ಲೀಕ್‌ ಆಗಿದೆ. ʻದಿ ಬ್ಲಫ್‌ʼಸಿನಿಮಾದಲ್ಲಿ ನಟಿ ಮುಂದೆ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ʻದಿ ಬ್ಲಫ್‌ʼನಲ್ಲಿ ಕಡಲುಗಳ್ಳರ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಸೋರಿಕೆಯಾದ ಚಿತ್ರಗಳಲ್ಲಿ ಕಪ್ಪು ಉಡುಪನ್ನು ಧರಿಸಿದ್ದಾರೆ. ಯುದ್ಧದ ಮೋಡ್‌ನಲ್ಲಿದ್ದಾರೆ. ಆದರೆ ನಯ ಫ್ಯಾನ್ಸ್‌ಗೆ ಗಮನ ಸೆಳೆದಿದ್ದು ಮಾತ್ರ ಹೇರ್ ಸ್ಟೈಲ್. ಲೀಕ್‌ ಆದ ಫೋಟೊದಲ್ಲಿ ಪ್ರಿಯಾಂಕ ವಿಭಿನ್ನವಾದ ಕೇಶವಿನ್ಯಾಸವನ್ನು ಹೊಂದಿದ್ದಾರೆ. , ಇದು 19 ನೇ ಶತಮಾನದ ಕೆರಿಬಿಯನ್ ಕಡಲುಗಳ್ಳರ ಲುಕ್‌ ಎನ್ನಲಾಗಿದೆ.

ʻದಿ ಬ್ಲಫ್’ 19 ನೇ ಶತಮಾನದ ಕೆರಿಬಿಯನ್‌ನ ಕಥೆ. ರುಸ್ಸೋ ಬ್ರದರ್ಸ್ ಬ್ಯಾನರ್ AGBO ಸ್ಟುಡಿಯೋಸ್ ಮತ್ತು ಅಮೆಜಾನ್ MGM ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರದಲ್ಲಿ ಕಾರ್ಲ್ ಅರ್ಬನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಒಂದೆರಡು ತಿಂಗಳಿನಿಂದ ಪ್ರಿಯಾಂಕಾ ಆಸ್ಟ್ರೇಲಿಯದಲ್ಲಿ ಚಿತ್ರದ ಶೂಟಿಂಗ್ ನಡೆಸುತ್ತಿದ್ದಾರೆ. ನಿಕ್ ಮತ್ತು ನಟಿಯ ತಾಯಿ ಮಧು ಚೋಪ್ರಾ, ಮಗಳು ಮಾಲತಿ ಕೂಡ ಭೇಟಿ ನೀಡುತ್ತಿರುತ್ತಾರೆ.

ಇದನ್ನೂ ಓದಿ: Priyanka Chopra: ಬೆಳ್ಳುಳ್ಳಿ ಎಸಳು ಪಾದಗಳಿಗೆ ಉಜ್ಜುವುದರಿಂದ ಏನು ಪ್ರಯೋಜನ? ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?

ಆಶ್ಚರ್ಯವೆಂದರೆ, ಪ್ರಿಯಾಂಕಾ ಅವರು ತಮ್ಮ ಜೀವನದಲ್ಲಿ ಎಂದಿಗೂ ನಟಿ ಆಗಬೇಕು, ಚಿತ್ರರಂಗಕ್ಕೆ ಬರಬೇಕು ಅಂತ ಕನಸು ಕಂಡವರಲ್ವಂತೆ. ನಟನೆಗೆ ಎಂಟ್ರಿ ಕೊಡುವ ಮೊದಲು ಜೀವನದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮದೇ ಆದ ವಿಭಿನ್ನ ಯೋಜನೆಗಳನ್ನು ಹೊಂದಿದ್ದರಂತೆ.

ಸ್ಟಾರ್ ವರ್ಲ್ಡ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, ಪ್ರಿಯಾಂಕಾ ಚೋಪ್ರಾ, “ಮಿಸ್ ಇಂಡಿಯಾ ಮತ್ತು ನಂತರ ವಿಶ್ವ ಸುಂದರಿ ಕಿರೀಟವನ್ನು ಪಡೆದ ನಾನು ಇದ್ದಕ್ಕಿದ್ದಂತೆ ಏರೋನಾಟಿಕಲ್ ಎಂಜಿನಿಯರ್ ಆಗಿ, ನಿರಾತಂಕವಾಗಿ ಹದಿಹರೆಯದವಳಾಗಿ ವಿಶ್ವ ವೇದಿಕೆಯಲ್ಲಿ ನಿಂತಿದ್ದೆ, ಅಲ್ಲಿ ವಿಶ್ವದ ಪ್ರಮುಖ ಘಟನೆಗಳ ಬಗ್ಗೆ ನನ್ನದೇ ಆದ ದೃಷ್ಟಿಕೋನವನ್ನು ಹೊಂದಿರಬೇಕಾಗಿತ್ತು” ಅಂತ ಹೇಳಿದ್ದರು.

Continue Reading

ಬಾಲಿವುಡ್

Vicky Kaushal: ಸೀರೆಯುಟ್ಟು ʻತೌಬಾ ತೌಬಾʼ ಸಾಂಗ್‌ಗೆ ಮಹಿಳೆಯ ಸಖತ್‌ ಸ್ಟೆಪ್ಸ್‌; ಹುಬ್ಬೇರಿಸಿದ ವಿಕ್ಕಿ ಕೌಶಲ್!

Vicky Kaushal: ವಿಕ್ಕಿ ಕೌಶಲ್ (Vicky Kaushal) ಮತ್ತು ತೃಪ್ತಿ ಡಿಮ್ರಿ ನಟನೆಯ ‘ಬ್ಯಾಡ್ ನ್ಯೂಸ್​​​ ‘ ಬಾಲಿವುಡ್​ ಚಿತ್ರ ಜುಲೈ 19ಕ್ಕೆ ಬೆಳ್ಳಿ ತೆರೆಗೆ ಅಪ್ಪಳಿಸಿದೆ. ಈ ಎಲ್ಲದಕ್ಕಿಂತ ಮೊದಲೇ ಅದರ ಹಾಡೊಂದು ವೈರಲ್ ಆಗಿದೆ. ‘ತೌಬಾ ತೌಬಾ’ (Tauba Tauba) ಹಾಡಿನ ವಿಡಿಯೊ ಬಿಡುಗಡೆಯಾದ ಕ್ಷಣದಿಂದ ರೀಲ್ಸ್ ಹಾಗೂ ಇನ್ನಿತರ ಕಾರಣಕ್ಕೆ ಜನಪ್ರಿಯವಾಗುತ್ತಿದೆ.

VISTARANEWS.COM


on

Vicky Kaushal Tauba Tauba dance by women Vicky Kaushal goes wow at viral
Koo

ಬೆಂಗಳೂರು: ವಿಕ್ಕಿ ಕೌಶಲ್ ಅವರು ‘ಬ್ಯಾಡ್ ನ್ಯೂಸ್’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಸಿನಿಮಾ ಅಂದುಕೊಂಡ ಮಟ್ಟದ ವಿಮರ್ಶೆ ಪಡೆದಿಲ್ಲ. ಸಿನಿಮಾದ ಒಟ್ಟೂ ಗಳಿಕೆ 29.55 ಕೋಟಿ ರೂಪಾಯಿ ಆಗಿದೆ. ಅಂದರೆ ಸರಿ ಸುಮಾರು 30 ಕೋಟಿ ರೂಪಾಯಿ ಚಿತ್ರ ಗಳಿಕೆ ಮಾಡಿದಂತೆ ಆಗಿದೆ. ಆದರೆ ಸಿನಿಮಾ ಬಿಡುಗಡೆಗೂ ಮುಂಚೆ ಹೆಚ್ಚು ಫೇಮಸ್‌ ಆಗಿದು ʻತೌಬಾ ತೌಬಾʼ ಸಾಂಗ್.‌ ಹಾಡಿನ ವಿಡಿಯೊ ಬಿಡುಗಡೆಯಾದ ಕ್ಷಣದಿಂದ ರೀಲ್ಸ್ ಹಾಗೂ ಇನ್ನಿತರ ಕಾರಣಕ್ಕೆ ಜನಪ್ರಿಯವಾಗುತ್ತಿದೆ. ಪಂಜಾಬಿ ಸ್ಟ್ರೈಲ್​ನಲ್ಲಿರುವ ಇದರ ಡ್ಯಾನ್ಸ್ ಆನ್‍ಲೈನ್‍ನಲ್ಲಿ ಬಿರುಗಾಳಿ ಎಬ್ಬಿಸಿದೆ . ಹಾಗಾಗಿ ರೀಲ್ಸ್‌ ಪ್ರಿಯರು ಈ ಡ್ಯಾನ್ಸ್ ಅನ್ನು ಮರುಸೃಷ್ಟಿಸಲು ಪ್ರಯತ್ನಿಸಿದ್ದಾರೆ.  ಇದೀಗ ಸ್ಲಂನಲ್ಲಿ ವಾಸಿಸುವ ಮಹಿಳೆಯೊಬ್ಬರು ಮಕ್ಕಳೊಂದಿಗೆ ತೌಬಾ ತೌಬಾ ಸ್ಟೆಪ್ಸ್‌ ಹಾಕಿದ್ದಾರೆ. ಇನ್ನು ಈ ವಿಡಿಯೊಗೆ ವಿಕ್ಕಿ ಕೌಶಲ್‌ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ವಿಕ್ಕಿ ಕೌಶಲ್ (Vicky Kaushal) ಮತ್ತು ತೃಪ್ತಿ ಡಿಮ್ರಿ ನಟನೆಯ ‘ಬ್ಯಾಡ್ ನ್ಯೂಸ್​​​ ‘ ಬಾಲಿವುಡ್​ ಚಿತ್ರ ಜುಲೈ 19ಕ್ಕೆ ಬೆಳ್ಳಿ ತೆರೆಗೆ ಅಪ್ಪಳಿಸಿದೆ. ಈ ಎಲ್ಲದಕ್ಕಿಂತ ಮೊದಲೇ ಅದರ ಹಾಡೊಂದು ವೈರಲ್ ಆಗಿದೆ. ‘ತೌಬಾ ತೌಬಾ’ (Tauba Tauba) ಹಾಡಿನ ವಿಡಿಯೊ ಬಿಡುಗಡೆಯಾದ ಕ್ಷಣದಿಂದ ರೀಲ್ಸ್ ಹಾಗೂ ಇನ್ನಿತರ ಕಾರಣಕ್ಕೆ ಜನಪ್ರಿಯವಾಗುತ್ತಿದೆ. ಪಂಜಾಬಿ ಸ್ಟ್ರೈಲ್​ನಲ್ಲಿರುವ ಇದರ ಡ್ಯಾನ್ಸ್ ಆನ್‍ಲೈನ್‍ನಲ್ಲಿ ಬಿರುಗಾಳಿ ಎಬ್ಬಿಸಿದೆ .ಇದೀಗ ರೂಪಾಲಿ ಸಿಂಗ್ ಎಂಬ ಮಹಿಳೆ ತೌಬಾ ತೌಬಾಗೆ ಸಖತ್‌ ಸ್ಟೆಪ್ಸ್‌ ಹಾಕಿದ್ದಾರೆ. ಹಳದಿ ಮುದ್ರಿತ ಸೀರೆಯನ್ನು ಧರಿಸಿ ಮನೆಯ ಮುಂದೆ ಮಕ್ಕಳ ಜತೆ ಡ್ಯಾನ್ಸ್‌ ಮಾಡಿದ್ದಾರೆ. ಮಾತ್ರವಲ್ಲ ಮಹಿಳೆಯ ಸ್ಟೆಪ್ಸ್‌ಗೆ ಸ್ವತಃ ವಿಕ್ಕಿ ಕೌಶಲ್ ಫಿದಾ ಆಗಿ. ʻವಾವ್‌ʼಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Niveditha Shivarajkumar: ʻಫೈರ್ ಫ್ಲೈ’ ಸಿನಿಮಾಗೆ ‘ಹೆಂಗೆ ನಾವು’ ಹುಡುಗಿ ನಾಯಕಿ! ಯಾವಾಗ ತೆರೆಗೆ?

ಈ ಪೋಸ್ಟ್ ಅನ್ನು ಹಂಚಿಕೊಂಡಾಗಿನಿಂದ, ಇದಕ್ಕೆ ಸಾವಿರಾರು ವೀಕ್ಷಣೆಗಳು ಮತ್ತು ಲೈಕ್‍ಗಳು ಬಂದಿದೆ. ಅಲ್ಲದೇ ಇದರ ವೀಕ್ಷಕರ ಸಂಖ್ಯೆಗಳು ಇನ್ನೂ ವೇಗವಾಗಿ ಹೆಚ್ಚುತ್ತಿವೆ. ಈ ವೈರಲ್ ವಿಡಿಯೊಗೆ ಹಲವರು ಕಾಮೆಂಟ್ ಕೂಡ ಮಾಡಿದ್ದಾರೆ. ಪೋಸ್ಟ್‌ನ ಕಾಮೆಂಟ್‍ಗಳ ವಿಭಾಗದಲ್ಲಿ ಅನೇಕ ಬಳಕೆದಾರರು ಹಾರ್ಟ್ ಮತ್ತು ಫಯರ್ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. 

ಪಂಜಾಬಿ ಪಾಪ್ ಗಾಯಕ ಕರಣ್ ಔಝ್ಲಾ ಅವರು ಸಂಯೋಜಿಸಿದ್ದಾರೆ, ಬರೆದಿದ್ದಾರೆ ಮತ್ತು ಹಾಡಿದ್ದಾರೆ. ಇದನ್ನು ಬಾಸ್ಕೋ ಮಾರ್ಟಿಸ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದಲ್ಲಿ ಆಮಿ ವಿರ್ಕ್ ಮತ್ತು ನೇಹಾ ಧೂಪಿಯಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬ್ಯಾಡ್ ನ್ಯೂಸ್’ ಸಿನಿಮಾವನ್ನು ಆನಂದ್ ತಿವಾರಿ ನಿರ್ದೇಶನ ಮಾಡಿದ್ದಾರೆ. ಇದು ರೊಮ್ಯಾಂಟಿಕ್ ಮತ್ತು ಹಾಸ್ಯ ಪ್ರಧಾನ ಚಿತ್ರವಾಗಿದೆ. ಯಶ್ ಜೋಹರ್, ಕರಣ್ ಜೋಹರ್, ಅಪೂರ್ವ ಮೆಹ್ತಾ, ಅಮೃತಪಾಲ್ ಸಿಂಗ್ ಬಿಂದ್ರಾ ಮತ್ತು ಆನಂದ್ ತಿವಾರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.. ಧರ್ಮ ಪ್ರೊಡಕ್ಷನ್ಸ್ ಮತ್ತು ಲಿಯೊ ಮೀಡಿಯಾ ಕಲೆಕ್ಟಿವ್ ಸಹಯೋಗದಲ್ಲಿ ಅಮೆಜಾನ್ ಪ್ರೈಮ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ಆನಂದ್ ತಿವಾರಿ ನಿರ್ದೇಶನದ ಬ್ಯಾಡ್ ನ್ಯೂಜ್ ನಲ್ಲಿ ನೇಹಾ ಧೂಪಿಯಾ ಕೂಡ ಕಾಣಿಸಿಕೊಂಡಿದ್ದಾರೆ.

Continue Reading

ಸಿನಿಮಾ

Jasmin Bhasin: ಲೆನ್ಸ್‌ ಧರಿಸಿ ಎಡವಟ್ಟು; ಕಣ್ಣು ಕಳೆದುಕೊಂಡ್ರಾ ಖ್ಯಾತ ನಟಿ?

Jasmin Bhasin: ಜುಲೈ 17 ರಂದು, ಲೆನ್ಸ್ ಧರಿಸಿದ ನಂತರ ನಟಿಗೆ ಕಣ್ಣುಗಳು ತುಂಬಾ ನೋಯಲಾರಂಭಿಸಿದ್ದವು. ಆದಾಗ್ಯೂ, ಅವರು ಕೆಲಸ ಮಾತ್ರ ಮುಂದುವರಿಸಿದ್ದರು. ತಕ್ಷಣ ವೈದ್ಯರನ್ನು ನೋಡಲು ಸಾಧ್ಯವಾಗಲಿಲ್ಲ. ಇದಲ್ಲದೆ, ದೆಹಲಿಯಲ್ಲಿ ನಡೆದ ಈವೆಂಟ್‌ನಲ್ಲಿ ನಟ ಸನ್‌ಗ್ಲಾಸ್ ಧರಿಸಿದ್ದರು.

VISTARANEWS.COM


on

Jasmine Bhasin says her corneas got damaged
Koo

ಬೆಂಗಳೂರು: ಲೆನ್ಸ್ ಧರಿಸಿದ್ದ ಬಹುಭಾಷಾ ನಟಿ ಜಾಸ್ಮಿನ್ ಭಾಸಿನ್‌ (Jasmin Bhasin) ಕಣ್ಣಿಗೆ ಸಮಸ್ಯೆ ಎದುರಾಗಿದೆ. ದೃಷ್ಟಿ ಕಳೆದುಕೊಳ್ಳುವ ಮಟ್ಟಕ್ಕೆ ಹೋಗಿದೆ. ಈ ಬಗ್ಗೆ ನಟಿ ವಿವರವಾಗಿ ಹಂಚಿಕೊಂಡಿದ್ದಾರೆ. ರಾಜಸ್ಥಾನ್ ಮೂಲದ ನಟಿ ಜಾಸ್ಮಿನ್ ಭಾಸಿನ್‌ಗೆ ಈ ಸಮಸ್ಯೆ ಎದುರಾಗಿದೆ. ಕನ್ನಡ ಚಿತ್ರದಲ್ಲಿ ಕೂಡ ನಟಿ ನಟಿಸಿದ್ದರು. ಇದೀಗ ನಟಿ ಲೆನ್ಸ್ ಧರಿಸಿ ಎದುರಾಗಿರುವ ಸಮಸ್ಯೆ ಬಗ್ಗೆ ವಿವರಿಸಿದ್ದಾರೆ. ಲೆನ್ಸ್ ಸರಿಯಾಗಿ ಧರಿಸದ ಕಾರಣ ಕಣ್ಣು ಕಾಣಿಸುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

ಲೆನ್ಸ್ ಸರಿಯಾಗಿ ಧರಿಸದ ಕಾರಣ ಜಾಸ್ಮಿನ್ ಭಾಸಿನ್ ಕಾರ್ನಿಯಲ್ ಹಾನಿಯಿಂದ ಬಳಲುತ್ತಿದ್ದಾರೆ.
ನಟಿಯ ಕಣ್ಣಿಗೆ ಬ್ಯಾಂಡೇಜ್‌ ಹಾಕಲಾಗಿದೆ. ಜುಲೈ 17 ರಂದು, ಲೆನ್ಸ್ ಧರಿಸಿದ ನಂತರ ನಟಿಗೆ ಕಣ್ಣುಗಳು ತುಂಬಾ ನೋಯಲಾರಂಭಿಸಿದ್ದವು. ಆದಾಗ್ಯೂ, ಅವರು ಕೆಲಸ ಮಾತ್ರ ಮುಂದುವರಿಸಿದ್ದರು. ತಕ್ಷಣ ವೈದ್ಯರನ್ನು ನೋಡಲು ಸಾಧ್ಯವಾಗಲಿಲ್ಲ. ಇದಲ್ಲದೆ, ದೆಹಲಿಯಲ್ಲಿ ನಡೆದ ಈವೆಂಟ್‌ನಲ್ಲಿ ನಟ ಸನ್‌ಗ್ಲಾಸ್ ಧರಿಸಿದ್ದರು. ಬಳಿಕ ನಟಿಗೆ ಕಣ್ಣು ನೋವಾಗಿ. ಕಾಣಿಸದಂತಾಗಿ ವೈದ್ಯರ ಮೊರೆ ಹೋಗಿದ್ದಾರೆ.

ಇದೀಗ ನಟಿಯ ಕಣ್ಣಿನ ಕಾರ್ನಿಯಾಗಳು ಹಾನಿಗೊಳಗಾಗಿವೆ. ಮುಂಬೈಗೆ ಧಾವಿಸಿ ಚಿಕಿತ್ಸೆಯನ್ನು ಮುಂದುವರೆಸಿದ್ದಾರೆ. ʻʻನಾನು ತುಂಬಾ ನೋವು ಅನುಭವಿಸುತ್ತಿದ್ದೇನೆ. ನಾನು ಮುಂದಿನ ನಾಲ್ಕೈದು ದಿನಗಳಲ್ಲಿ ಚೇತರಿಸಿಕೊಳ್ಳಬಹುದುʼʼ ಎಂದು ನಟಿ ಹೇಳಿದ್ದಾರೆ.

ಇದನ್ನೂ ಓದಿ: Niveditha Shivarajkumar: ʻಫೈರ್ ಫ್ಲೈ’ ಸಿನಿಮಾಗೆ ‘ಹೆಂಗೆ ನಾವು’ ಹುಡುಗಿ ನಾಯಕಿ! ಯಾವಾಗ ತೆರೆಗೆ?

ಇದೀಗ ನಟಿಗೆ ಮಲಗಲು ಕೂಡ ಆಗುತ್ತಿಲ್ಲವಂತೆ. ಜಾಸ್ಮಿನ್ ಭಾಸಿನ್ ತಮಿಳಿನ ‘ವಾನಂ’ ಸಿನಿಮಾ ಮೂಲಕ ಜಾಸ್ಮಿನ್ ಬಣ್ಣದಲೋಕ್ಕೆ ಬಂದರು. ಬಳಿಕ ಕನ್ನಡ ‘ಕರೋಡ್‌ಪತಿ’ ಚಿತ್ರದಲ್ಲಿ ಕೋಮಲ್ ಜೋಡಿಯಾಗಿ ನಟಿಸಿದ್ದರು. ‘ ತೆಲುಗು, ತಮಿಳು, ಪಂಜಾಬಿ ಸಿನಿಮಾಗಳಲ್ಲಿ ನಟಿ ನಟಿಸಿದ್ದಾರೆ.

ಕಾಂಟ್ಯಾಕ್ಟ್ ಲೆನ್ಸ್‌ಗಳಿಂದಾಗಿ ಕಣ್ಣಿನ ಸೋಂಕುಗಳಿಗೆ ಹೆಚ್ಚಿನ ಅಪಾಯವಾಗಿದೆ. ಕಣ್ಣಿನ ಸೋಂಕುಗಳಿಂದ ಹಿಡಿದು ಕಣ್ಣಿಗೆ ಹುಣ್ಣುಗಳು ಆಗಬಹುದು. ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ನಿರ್ವಹಿಸುವಾಗ ನೈರ್ಮಲ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು.

Continue Reading
Advertisement
Chaluvadi Narayanaswamy
ಕರ್ನಾಟಕ49 mins ago

Chaluvadi Narayanaswamy : ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್​​ನ ಪ್ರತಿಪಕ್ಷದ ನಾಯಕ

NEET
ಕರ್ನಾಟಕ1 hour ago

NEET: ನೀಟ್‌ ಪರೀಕ್ಷೆಗೆ ವಿರೋಧ, ಬೆಂಗಳೂರು ವಿಭಜನೆಗೆ ಅಸ್ತು; ರಾಜ್ಯ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

DK Shivakumar
ಕರ್ನಾಟಕ1 hour ago

DK Shivakumar: ರೈತನಿಗೆ ಪ್ರವೇಶ ನಿರ್ಬಂಧ ಖಂಡನೀಯ; ಮಾಲ್ ಸೇರಿ ಇತರೆಡೆ ಶೀಘ್ರ ವಸ್ತ್ರ ಸಂಹಿತೆ ಜಾರಿ ಎಂದ ಡಿಕೆಶಿ

Veerabaswanthreddy Mudnal
ಶ್ರದ್ಧಾಂಜಲಿ2 hours ago

Veerabaswanthreddy Mudnal: ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಅನಾರೋಗ್ಯದಿಂದ ನಿಧನ

Rahat Fateh Ali Khan
ವಿದೇಶ2 hours ago

Rahat Fateh Ali Khan: ದುಬೈನಲ್ಲಿ ಪಾಕಿಸ್ತಾನದ ಗಾಯಕನ ಬಂಧನ; ಎಸಗಿದ ಕೃತ್ಯವೇನು?

Valmiki Corporation Scam
ಕರ್ನಾಟಕ2 hours ago

Valmiki Corporation Scam: ಬಿ. ನಾಗೇಂದ್ರ ಹೆಸರೇಳುವಂತೆ ಒತ್ತಡ; ಇಡಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

Tata Curvv
ಆಟೋಮೊಬೈಲ್2 hours ago

Tata Curvv : ಎಸ್​ಯುವಿ ವಿಭಾಗದಲ್ಲಿ ವಿಭಿನ್ನ ವಿನ್ಯಾಸದ ಕಾರನ್ನು ಪರಿಚಯಿಸಿದ ಮಾಡಿದ ಟಾಟಾ

Kempambudi lake encroachment cleared soon says DCM DK Shivakumar
ಕರ್ನಾಟಕ2 hours ago

Assembly Session 2024: ಕೆಂಪಾಂಬುದಿ ಕೆರೆ ಒತ್ತುವರಿ ಶೀಘ್ರ ತೆರವು; ಡಿ.ಕೆ.ಶಿವಕುಮಾರ್

Viral Video
ವೈರಲ್ ನ್ಯೂಸ್2 hours ago

Viral Video: ಸ್ಕೂಟರ್‌ಗೆ ಅಪ್ಪಳಿಸಿದ ಕಾರು; 10 ಅಡಿ ಮೇಲಕ್ಕೆ ಹಾರಿ ಬಿದ್ದ ತಾಯಿ, ಮಗ

TA Sharavana questioned about the continuous variation in the service of 108 Ambulance even after 7 years there is no new tender
ಬೆಂಗಳೂರು2 hours ago

TA Sharavana: 108 ಆಂಬ್ಯುಲೆನ್ಸ್‌ಗೆ 7 ವರ್ಷ ಕಳೆದರೂ ಹೊಸ ಟೆಂಡರ್‌ ಇಲ್ಲ ಯಾಕೆ? ಟಿ. ಎ. ಶರವಣ ಪ್ರಶ್ನೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ2 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ3 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ3 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ4 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ6 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 week ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 week ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌