Site icon Vistara News

Laal Singh Chaddha | ದಯವಿಟ್ಟು ನನ್ನ ಸಿನಿಮಾ ಬಹಿಷ್ಕರಿಸಬೇಡಿ: ಮನವಿ ಮಾಡಿದ ಆಮಿರ್‌ ಖಾನ್‌

aamir

ಬಾಲಿವುಡ್‌ ನಟ ಆಮಿರ್‌ ಖಾನ್‌ ಅವನ ಬಹು ನಿರೀಕ್ಷಿತ ಚಿತ್ರ ʻಲಾಲ್‌ ಸಿಂಗ್‌ ಚಡ್ಡಾʼ ಆಗಸ್ಟ್‌ 11ರಂದು ಬಿಡುಗಡೆಯಾಗುತ್ತಿದೆ. ಆದರೆ ಅದಕ್ಕೂ ಮುನ್ನವೇ ಟ್ವಿಟರ್‌ನಲ್ಲಿ ʼಬಾಯ್ಕಾಟ್‌ ಲಾಲ್‌ ಸಿಂಗ್‌ ಚಡ್ಡಾʼ ಅಭಿಯಾನ ಟ್ರೆಂಡ್‌ ಆಗುತ್ತಿದೆ.

ಈ ಕುರಿತು ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಆಮಿರ್‌, ʼʼದಯವಿಟ್ಟು ನನ್ನ ಸಿನಿಮಾವನ್ನು ಬಹಿಷ್ಕರಿಸಬೇಡಿ, ಲಾಲ್‌ ಸಿಂಗ್‌ ಚಡ್ಡಾವನ್ನು ವೀಕ್ಷಿಸಿʼʼ ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ.

ʼʼಸಿನಿಮಾಗಳನ್ನು ರಿಲೀಸ್‌ ಸಂದರ್ಭದಲ್ಲಿ ಬಹಿಷ್ಕರಿಸುವ ಟ್ರೆಂಡ್‌ʼʼ ಬಗ್ಗೆ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದ್ದು ಈ ರೀತಿ- ʼʼಹೌದು, ನನಗೆ ಬೇಸರವಾಗುತ್ತಿದೆ. ಇದನ್ನು ಹೇಳುತ್ತಿರುವ ಹಲವು ಮಂದಿ, ನಾನು ದೇಶವನ್ನು ಪ್ರೀತಿಸುತ್ತಿಲ್ಲ ಎಂದು ಭಾವಿಸಿದ್ದಾರೆ. ಆದರೆ ಅದು ನಿಜವಲ್ಲ. ಅವರು ಹಾಗೆ ಭಾವಿಸುವುದೇ ದುರದೃಷ್ಟಕರ. ದಯವಿಟ್ಟು ನನ್ನ ಸಿನಿಮಾವನ್ನು ಬಹಿಷ್ಕರಿಸಬೇಡಿ, ಅದನ್ನು ನೋಡಿʼʼ ಎಂದಿದ್ದಾರೆ.

ಲಾಲ್‌ ಸಿಂಗ್‌ ಚಡ್ಡಾ, ಹಾಲಿವುಡ್‌ನ ʼಫಾರೆಸ್ಟ್‌ ಗಂಪ್ʼ ಚಲನಚಿತ್ರದ ಅಧಿಕೃತ ರಿಮೇಕ್‌ ಆಗಿದೆ. ಮೂಲ ಪಾತ್ರವನ್ನು ಟಾಮ್‌ ಹ್ಯಾಂಕ್ಸ್‌ ಮಾಡಿದ್ದರು. ಲಾಲ್‌ ಸಿಂಗ ಚಡ್ಡಾವನ್ನು ಅದ್ವೈತ್‌ ಚಂದನ್‌ ನಿರ್ದೇಶಿಸುತ್ತಿದ್ದಾರೆ. ಕರೀನಾ ಕಪೂರ್‌ ಅವರು ಆಮಿರ್‌ಗೆ ಜತೆಯಾಗಿದ್ದಾರೆ. ದಕ್ಷಿಣ ಭಾರತದ ನಟ ನಾಗಚೈತನ್ಯ ಕೂಡ ಇದರಲ್ಲಿ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ: Laal Singh Chaddha | ನಟ ಚಿರಂಜೀವಿ ಮನೆಯಲ್ಲಿ ಸ್ಪೆಷಲ್‌ ಶೋ: ಕಣ್ಣೀರಿಟ್ಟ ಆಮಿರ್‌ ಖಾನ್

Exit mobile version