ಮುಂಬೈ: ಗೌರಿ ಖಾನ್ (Gauri Khan ) ಅವರು ʻಟೋರಿʼ ಎಂಬ ಹೆಸರಿನ ರೆಸ್ಟೋರೆಂಟ್ ಪ್ರಾರಂಭಿಸಿದ್ದು ಗೊತ್ತೇ ಇದೆ. ಮುಂಬೈನಲ್ಲಿರುವ ಟೋರಿ ರೆಸ್ಟೋರೆಂಟ್‌ನಲ್ಲಿ ‘ಶೇಪ್ ಆಫ್ ಯು’ ಹಾಡಿನ ಖ್ಯಾತ ಗಾಯಕ ಎಡ್ ಶೀರಾನ್ ಅವರು ಆತಿಥ್ಯ ವಹಿಸಿದ್ದರು. ಫರಾ ಖಾನ್ ಮತ್ತು ಅನೇಕ ಇತರ ಗಣ್ಯ ವ್ಯಕ್ತಿಗಳು ಈ ವೇಳೆ ಕಾಣಿಸಿಕೊಂಡಿದ್ದರು. ಗಾಯಕ ಎಡ್ ಶೀರಾನ್ ಜತೆ ಗೌರಿ ಖಾನ್ ಪೋಸ್ ಕೊಟ್ಟ ವಿಡಿಯೊ ಇದೀಗ ವೈರಲ್ ಆಗಿದೆ.
ಮುಂಬೈನ ಮಹಾಲಕ್ಷ್ಮಿ ರೇಸ್‌ಕೋರ್ಸ್‌ನಲ್ಲಿ ಮುಂಬರುವ ಸಂಗೀತ ಕಾರ್ಯಕ್ರಮಕ್ಕಾಗಿ ಎಡ್ ಶೀರನ್ ಭಾರತದಲ್ಲಿದ್ದಾರೆ. ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮುಗಿಸಿಕೊಂಡು ಬಂದ ಗೌರಿ ಖಾನ್ ಅವರು ನೀಲಿ ಬಣ್ಣದ ಉಡುಪಿನಲ್ಲಿ ಕಾಣುತ್ತಿದ್ದರು. ವಿಶೆಷವಾಗಿ ಎಡ್ ಶೀರನ್ ಅವರು ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ʻಡಿ’ಯಾವೋಲ್ ಎಕ್ಸ್ ಬ್ರ್ಯಾಂಡ್ ಜಾಕೆಟ್ ಧರಿಸಿದ್ದರು. ಈಗಾಗಲೇ ಎಡ್ ಶೀರಾನ್ ಅವರಿಗೆ ಶಾರುಖ್ ತಮ್ಮ ಸಿಗ್ನೇಚರ್ ಭಂಗಿಯನ್ನು ಕಲಿಸಿಕೊಟ್ಟಿರುವ ವಿಡಿಯೊ ವೈರಲ್ ಆಗಿದೆ.
ಗೌರಿ ಪಾರ್ಟಿಯ ಕೆಲವು ಕ್ಯಾಂಡಿಡ್ ಫೋಟೊಗಳನ್ನು ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. “ಎಡ್ ಶೀರಾನ್ ನಿಮ್ಮ ಹಾಡು ಕೇಳುವುದೇ ನಮಗೆ ಒಂದು ಸೋತೋಷದ ವಿಚಾರ. ನಮ್ಮೊಂದಿಗೆ ಸಮಯ ಕಳೆದಿದ್ದಕ್ಕಾಗಿ ಧನ್ಯವಾದಗಳುʼʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Save Water: ಬನ್ನಿ ಜೀವ ಜಲ ಉಳಿಸೋಣ; ನೀರನ್ನು ಗೌರವಿಸೋಣ! ಇದು ವಿಸ್ತಾರ ನ್ಯೂಸ್ ಕಳಕಳಿ
ಮಾ.12ರಂದು ಹಿನ್ನೆಲೆ ಗಾಯಕ ಅರ್ಮಾನ್ ಮಲಿಕ್ ಅವರನ್ನು ಎಡ್ ಶೀರಾನ್ ಭೇಟಿಯಾಗಿದ್ದರು. 2020ರ ಚಲನಚಿತ್ರ ‘ಅಲಾ ವೈಕುಂಠಪುರಮುಲು’ ಹಿಟ್ ಹಾಡು ‘ಬುಟ್ಟ ಬೊಮ್ಮ’ಗೆ ಈ ಜೋಡಿ ನೃತ್ಯ ಮಾಡಿತ್ತು. ಮಾರ್ಚ್ 16ರಂದು ಮುಂಬೈನಲ್ಲಿ ಪ್ರದರ್ಶನ ನೀಡಲು ʻಎಡ್ ಶೀರಾನ್ʼ ರೆಡಿಯಾಗುತ್ತಿದ್ದಾರೆ. ಗಾಯಕ ಪ್ರತೀಕ್ ಕುಹದ್ ಸಹ ಅವರೊಂದಿಗೆ ಪ್ರದರ್ಶನ ನೀಡಲಿದ್ದಾರೆ.
ಸಂಗೀತ ಕಾರ್ಯಕ್ರಮಕ್ಕಾಗಿ ಭಾರತಕ್ಕೆ ಭೇಟಿ ನೀಡಿದ ಎಡ್ ಅವರನ್ನು ಅನೇಕ ತಾರೆಯರು ಭೇಟಿಯಾಗಿ ಶುಭಾಶಯ ಕೋರಿದರು. ಫರಾ ಖಾನ್ ಕ್ಯಾಶುಯಲ್ ಕೆಂಪು ಟಾಪ್ ಮತ್ತು ನೀಲಿ ಪ್ಯಾಂಟ್ ಧರಿಸಿದ್ದರು. ಉದ್ಯಮಿ ತನಾಜ್ ಭಾಟಿಯಾ ಕೂಡ ಫರಾ ಅವರೊಂದಿಗೆ ಪೋಸ್ ನೀಡಿದರು. ಚಿತ್ರ ನಿರ್ಮಾಪಕ ಕಬೀರ್ ಖಾನ್ ಮತ್ತು ನಟ-ಪತ್ನಿ ಮಿನಿ ಮಾಥೂರ್ ಕೂಡ ರೆಸ್ಟೋರೆಂಟ್‌ಗೆ ಬಂದಿದ್ದರು.