Site icon Vistara News

Janhvi Kapoor: ಪಾಪರಾಜಿಗಳ ಅಸಲಿ ಮುಖ ರಿವೀಲ್‌ ಮಾಡಿದ ಜಾನ್ವಿ ಕಪೂರ್!

Janhvi Kapoor on paparazzi culture

ಬೆಂಗಳೂರು: ಜಾನ್ವಿ ಕಪೂರ್ (Janhvi Kapoor) ಇತ್ತೀಚೆಗೆ ಬಾಲಿವುಡ್‌ನ ಪಾಪರಾಜಿ ಸಂಸ್ಕೃತಿಯ ( paparazzi culture) ಬಗ್ಗೆ ಚರ್ಚಿಸಿದ್ದಾರೆ. ‘ಮಿಸ್ಟರ್ ಆ್ಯಂಡ್ ಮಿಸಸ್ ಮಹಿ’ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಸಂದರ್ಶನ ವೇಳೆ, ಪಾಪರಾಜಿಗಳು ಅವರು ಕ್ಲಿಕ್ ಮಾಡುವ ಫೋಟೊಗಳ ಆಧಾರದ ಮೇಲೆ ಹಣ ಪಡೆಯುತ್ತಾರೆ ಎಂದು ಹೇಳಿದ್ದಾರೆ.

ಪಾಪರಾಜಿಗಳು, ನಟ ನಟಿಯರು ಎಲ್ಲೇ ಹೋದರು ಬೆನ್ನಹತ್ತಿ ಫೋಟೊ ಕ್ಲಿಕ್ಕಿಸುತ್ತಾರೆ. ಅವರು ಎಲ್ಲಿ ಹೋಗುತ್ತಾರೆ ಎಂಬುದು ಇವರಿಗೆ ಹೇಗೆ ತಿಳಿಯುತ್ತೇ? ತಾರೆಗಳ ಫೋಟೊಗಳನ್ನು ತೆಗೆಯುವುದರಿಂದ ಇವರಿಗೇನು ಲಾಭ ಎನ್ನುವುದರ ಬಗ್ಗೆ ನಟಿ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಪಾಪರಾಜಿಗಳ ನಿಜ ಮುಖ ಬಯಲು ಮಾಡಿದ್ದಾರೆ. ಅಸಲಿಗೆ ಪಾಪರಾಜಿಗಳು ಹಣ ಕೊಟ್ಟು ಕರೆಸಲಾಗುತ್ತದೆಯಂತೆ ಎಂದು ಹೇಳಿಕೊಂಡಿದ್ದಾರೆ.

ʻʻಪ್ರತಿಯೊಬ್ಬ ಸೆಲೆಬ್ರಿಟಿಗಲಳ ಫೋಟೊಗಳು ನಿರ್ದಿಷ್ಟ ಮೊತ್ತಕ್ಕೆ ಮಾರಾಟವಾಗುತ್ತದೆ. ತುಂಬ ವ್ಯಾಲ್ಯೂ ಇದ್ದ ತಾರೆಗಳನ್ನು ಹೆಚ್ಚಾಗಿ ಅವರು ಟಾರ್ಗೆಟ್‌ ಮಾಡುತ್ತಾರೆ. ನಿಮ್ಮ ಕಾರುಗಳನ್ನೇ ಫಾಲೋ ಮಾಡುತ್ತಾರೆ. ಒಮ್ಮೊಮ್ಮೆ ಸಿನಿಮಾ ಪ್ರಚಾರ ಇತ್ಯಾದಿಗಳಿದ್ದರೆ ಹಣ ಕೊಟ್ಟು ಅವರನ್ನು ಕರೆಸಬೇಕಾಗುತ್ತದೆʼʼ ಎಂದಿದ್ದಾರೆ.

ʻʻಈಗಾಗಲೇ ನನ್ನ ಚಿತ್ರದ ಪ್ರಚಾರ ನಡೆಯುತ್ತಿದೆ. ನನ್ನ ಫೋಟೊವನ್ನು ಕ್ಲಿಕ್ಕಿಸಲು ವಿಮಾನ ನಿಲ್ದಾಣಕ್ಕೆ ಅವರನ್ನು ಆಹ್ವಾನಿಸಲಾಗುತ್ತೆ. ನಾನು ಸಿನಿಮಾ ಪ್ರಚಾರ ಮಾಡದಿದ್ದಾಗ ಅಥವಾ ಸಾರ್ವಜನಿಕರಿಂದ ದೂರ ಇದ್ದಾಗ, ಪಾಪರಾಜಿಗಳು ಕೆಲವೊಮ್ಮೆ ನನ್ನ ಕಾರನ್ನು ಫಾಲೊ ಮಾಡುತ್ತಾರೆ. ಕಷ್ಟಪಟ್ಟು ನನ್ನ ಚಿತ್ರಗಳನ್ನು ತೆಗೆಯುತ್ತಾರೆ. ಏಕೆಂದರೆ ಪ್ರತಿ ಚಿತ್ರಕ್ಕೆ ಇಷ್ಟೆಂದು ಅವರು ಹಣ ಪಡೆಯುತ್ತಾರೆʼʼಎಂದರು.

ʻʻಬಾಲಿವುಡ್​ನ ಪ್ರತಿಯೊಬ್ಬ ಸೆಲೆಬ್ರಿಟಿಗೂ ಒಂದೊಂದು ರೇಟ್ ಇದೆ. ಸ್ಟಾರ್ ನಟ-ನಟಿ ಆಗಿದ್ದರೆ ಅವರ ಚಿತ್ರಗಳು ದೊಡ್ಡ ಬೆಲೆಗೆ ಮಾರಾಟವಾಗುತ್ತವೆ. ದೊಡ್ಡ ಸ್ಟಾರ್ ಅಲ್ಲದಿದ್ದರೆ ನೀವೇ ಕರೆ ಮಾಡಿ ಅವರನ್ನು ಕರೆಸಿಕೊಳ್ಳಬೇಕಾಗುತ್ತದೆ. ಹಾಗೆ ಮಾಡುವವರ ಸಂಖ್ಯೆಯೂ ಬಾಲಿವುಡ್​ನಲ್ಲಿ ಹೆಚ್ಚೇ ಇದೆ’ ಎಂದಿದ್ದಾರೆ.

ಇದನ್ನೂ ಓದಿ: Janhvi Kapoor: ಗಾಂಧಿ-ಅಂಬೇಡ್ಕರ್ ʻಜಾತಿವಾದʼದ ಬಗ್ಗೆ ಶ್ರೀದೇವಿ ಮಗಳಿಗೆ ಆಸಕ್ತಿಯಂತೆ!

ಜಾನ್ವಿ ಕಪೂರ್ ಮೇ 31 ರಂದು ಬಿಡುಗಡೆಯಾಗಲಿರುವ ‘ಮಿಸ್ಟರ್ ಅಂಡ್ ಮಿಸಸ್ ಮಹಿ’ ಚಿತ್ರದಲ್ಲಿ ರಾಜ್‌ಕುಮಾರ್ ರಾವ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಜಾನ್ವಿ ಕಪೂರ್ (Janhvi Kapoor) ಮತ್ತು ರಾಜ್‌ಕುಮಾರ್ ರಾವ್ ಅವರು ʻಮಿಸ್ಟರ್ ಆ್ಯಂಡ್ ಮಿಸಸ್ ಮಹಿʼ ಮಹಿಯಲ್ಲಿ ಎರಡನೇ ಬಾರಿಗೆ ತೆರೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ. ಈಗಾಗಲೇ ನಟ ನಟಿ ಚಿತ್ರದ ಪ್ರಚಾರದಲ್ಲಿ ತೊಡಗಿರುವುದು ಕಂಡುಬಂದಿದೆ.. ʻಮಿಸ್ಟರ್ ಆ್ಯಂಡ್ ಮಿಸಸ್ ಮಹಿʼಯಲ್ಲಿ, ರಾಜ್‌ಕುಮಾರ್ ಅವರು ಮಹೇಂದ್ರ ಸಿಂಗ್ ಧೋನಿ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಜಾನ್ವಿ ಮಹಿಮಾ ಎಂಬ ಪಾತ್ರವನ್ನು ನಿರ್ವಹಿಸಿಲಿದ್ದಾರೆ.

ದೇವರ’ ನಂತರ ಮತ್ತೊಂದು ತೆಲುಗು ಚಿತ್ರದಲ್ಲಿ ನಟಿ ಜಾನ್ವಿ ಕಪೂರ್ ನಟಿಸಲು ಸಿದ್ಧರಾಗಿದ್ದಾರೆ. ಬುಚ್ಚಿ ಬಾಬು ಸನಾ ನಿರ್ದೇಶಿಸುತ್ತಿರುವ 16ನೇ ಚಿತ್ರದಲ್ಲಿ ರಾಮ್ ಚರಣ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. ಜಾನ್ವಿ ಕಪೂರ್ ಕೊನೆಯದಾಗಿ ವರುಣ್ ಧವನ್ ಜತೆ ‘ಬವಾಲ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಆರ್‌ಸಿ 16’ ಮತ್ತು ‘ದೇವರ’ ಜತೆಗೆ , ಸುಧಾಂಶು ಸರಿಯಾ ಅವರ ‘ಉಲಾಜ್’ ಮತ್ತು ವರುಣ್ ಧವನ್ ಎದುರು ‘ಸನ್ನಿ ಸಂಸ್ಕರಿ ಕಿ ತುಳಸಿ ಕುಮಾರಿ’ ಸಿನಿಮಾಗಳನ್ನು ಹೊಂದಿದ್ದಾರೆ.

ಸುಧಾಂಶು ಸರಿಯಾ ನಿರ್ದೇಶನದ ಉಲಾಜ್ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಗೊಂಡಿದೆ. ಈ ಚಿತ್ರದಲ್ಲಿ ನಟಿ ಜಾನ್ವಿ ಕಪೂರ್ ಅವರು ರಾಜತಾಂತ್ರಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಟೀಸರ್ ನಲ್ಲಿ ಜಾನ್ವಿ ಕಪೂರ್ ಅವರು ದೇಶಭಕ್ತರ ಕುಟುಂಬದಿಂದ ಬಂದ ಯುವ ರಾಜತಾಂತ್ರಿಕ ಸುಹಾನಾ ಪಾತ್ರದಲ್ಲಿ ನಟಿಸಿದ್ದಾರೆ.

Exit mobile version