Janhvi Kapoor: ಗಾಂಧಿ-ಅಂಬೇಡ್ಕರ್ ʻಜಾತಿವಾದʼದ ಬಗ್ಗೆ ಶ್ರೀದೇವಿ ಮಗಳಿಗೆ ಆಸಕ್ತಿಯಂತೆ! - Vistara News

ಬಾಲಿವುಡ್

Janhvi Kapoor: ಗಾಂಧಿ-ಅಂಬೇಡ್ಕರ್ ʻಜಾತಿವಾದʼದ ಬಗ್ಗೆ ಶ್ರೀದೇವಿ ಮಗಳಿಗೆ ಆಸಕ್ತಿಯಂತೆ!

Janhvi Kapoor: 2018ರಲ್ಲಿ ಜಾನ್ವಿ ಕಪೂರ್ ಬಾಲಿವುಡ್ ಪ್ರವೇಶಿಸಿದರು. ಜಾನ್ವಿ ಕಪೂರ್ (Janhvi Kapoor) ಮತ್ತು ರಾಜ್‌ಕುಮಾರ್ ರಾವ್ ಅವರು ʻಮಿಸ್ಟರ್ ಆ್ಯಂಡ್ ಮಿಸಸ್ ಮಹಿʼ ಮಹಿಯಲ್ಲಿ ಎರಡನೇ ಬಾರಿಗೆ ತೆರೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ. ಈಗಾಗಲೇ ನಟ ನಟಿ ಚಿತ್ರದ ಪ್ರಚಾರದಲ್ಲಿ ತೊಡಗಿರುವುದು ಕಂಡುಬಂದಿದೆ. . ʻಮಿಸ್ಟರ್ ಆ್ಯಂಡ್ ಮಿಸಸ್ ಮಹಿʼಯಲ್ಲಿ, ರಾಜ್‌ಕುಮಾರ್ ಅವರು ಮಹೇಂದ್ರ ಸಿಂಗ್ ಧೋನಿ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಜಾನ್ವಿ ಮಹಿಮಾ ಎಂಬ ಪಾತ್ರವನ್ನು ನಿರ್ವಹಿಸಿಲಿದ್ದಾರೆ.

VISTARANEWS.COM


on

Janhvi Kapoor views on Gandhi Ambedkar casteism
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಾಲಿವುಡ್‌ ನಟಿ ಜಾನ್ವಿ ಕಪೂರ್ (Janhvi Kapoor) ಅವರು ಸೌತ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜತೆಗೆ ಆಗಾಗ ಇವರು ಸಂದರ್ಶನ ನೀಡುತ್ತಲೇ ಇರುತ್ತಾರೆ. ಇದೀಗ ಸಂದರ್ಶನವೊಂದರಲ್ಲಿ ಜಾನ್ವಿ ಕಪೂರ್ ಅವರ ಮಾತುಗಳು ಕೆಲವರಿಗೆ ಅಚ್ಚರಿ ತಂದಿದೆ. ಗಾಂಧಿ ಹಾಗೂ ಅಂಬೇಡ್ಕರ್ ನಡುವಿನ ಜಾತಿವಾದದ ( Janhvi opened up on casteism) ಕುರಿತ ಚರ್ಚೆಯ ಬಗ್ಗೆ ತಮಗೆ ಆಸಕ್ತಿ ಇರುವುದಾಗಿ ನಟಿ ಹೇಳಿಕೊಂಡಿದ್ದಾರೆ. ನಟಿ ಶ್ರೀದೇವಿ ಮಗಳ ಸಾಮಾಜಿಕ ಆಸಕ್ತಿಯ ಬಗ್ಗೆ ಮತ್ತು ಅವರ ಪ್ರೌಢತೆಯ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಜಾನ್ವಿ ಕಪೂರ್‌ ಅವರು ಸಂದರ್ಶನ ವೇಳೆ ತಮಗೆ ಇತಿಹಾಸದಲ್ಲಿ ತುಂಬ ಆಸಕ್ತಿ ಇದೆ ಎಂದರು. ಜತೆಗೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಭಾರತೀಯ ಸಂವಿಧಾನದ ಶಿಲ್ಪಿ ಬಿಆರ್ ಅಂಬೇಡ್ಕರ್ ಅವರು ಜಾತಿವಾದದ ಬಗ್ಗೆ ವ್ಯಕ್ತಪಡಿಸಿದ್ದ ಅಭಿಪ್ರಾಯಗಳ ಬಗ್ಗೆ ಚರ್ಚೆ ನಡೆಸುವುದನ್ನು ನೋಡಲು ಬಯಸುತ್ತೇನೆ ಎಂದು ಜಾನ್ವಿ ಹೇಳಿದರು.

ನಟಿ ಮಾತನಾಡಿ ʻʻಅಂಬೇಡ್ಕರ್ ಅವರಿಗೆ ತಮ್ಮ ನಿಲುವು ಏನು ಎಂಬುದು ಮೊದಲಿನಿಂದಲೂ ಸ್ಪಷ್ಟವಾಗಿತ್ತು. ಹಾಗೇ ನಿಷ್ಠುರರಾಗಿದ್ದರು. ಆದರೆ ಗಾಂಧಿಯವರ (ಜಾತಿಭೇದ) ದೃಷ್ಟಿಕೋನವು ಹೆಚ್ಚು ಹೆಚ್ಚು ತೆರೆದುಕೊಂಡಂತೆ ವಿಕಸನಗೊಂಡಿತು ಎಂದು ನಾನು ಭಾವಿಸುತ್ತೇನೆ. ನಮ್ಮ ಸಮಾಜದಲ್ಲಿರುವ ಈ ಜಾತಿವಾದದ ಸಮಸ್ಯೆ ಬಗ್ಗೆ ಮಾತನಾಡುವುದಾದರೆ, ಮೂರನೇ ವ್ಯಕ್ತಿಯಿಂದ ಆ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದಕ್ಕೂ, ಅಲ್ಲಿದ್ದು ನಿಜವಾಗಿ ಬದುಕುವುದಕ್ಕೂ ಬಹಳ ವ್ಯತ್ಯಾಸವಿದೆʼʼ ಎಂದು ಅಭಿಪ್ರಾಯಪಟ್ಟರು.

ಇದೀಗ ನಟಿ ಈ ಬಗ್ಗೆ ಮಾತನಾಡಿದ್ದಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಇಂಥ ಸಾಮಾಜಿಕ ಚಿಂತನೆಯ ಮಾತುಗಳು ಪ್ರಮುಖ ನಟಿಯ ಬಾಯಿಯಿಂದ ಕೇಳಿದ್ದು ಆಶ್ಚರ್ಯವಾಯಿತು. ಅಂಬೇಡ್ಕರ್, ಗಾಂಧಿ ಮತ್ತು ಜಾತಿವಾದದ ಕುರಿತು ಜಾನ್ವಿ ಕಪೂರ್‌ ಹೇಳಿದ್ದು ಗಮನ ಸೆಳೆಯಿತು. ನಟಿ ಸ್ವರಾ ಭಾಸ್ಕರ್ ಅವರು ಆಗಾಗ ರಾಜಕೀಯ ವಿಷಯಗಳ ಬಗ್ಗೆ ಮಾತನಾಡುತ್ತಾರೆʼʼ ಎಂದು ಜನ ಕಮೆಂಟ್‌ ಮಾಡಿದ್ದಾರೆ. “ಈ ಮಟ್ಟದ ತಿಳಿವಳಿಕೆ ಮತ್ತು ಅಧ್ಯಯನವನ್ನು ನೋಡುವುದು ಬಹಳ ಅಪರೂಪ ಎಂದು ನಟಿಯನ್ನು ಹೊಗಳಿದ್ದಾರೆ.” ಮತ್ತೊಬ್ಬರು “ನಟಿ ಸ್ವರಾ ಭಾಸ್ಕರ್‌ ಕೂಡ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಇದರಲ್ಲೇನು ವಿಶೇಷತೆ ಇಲ್ಲ” ಎಂದಿದ್ದಾರೆ.

ಇದನ್ನೂ ಓದಿ: Janhvi Kapoor: 12ನೇ ವಯಸ್ಸಿನಲ್ಲಿಯೇ ಅಶ್ಲೀಲ ವೆಬ್‌ಸೈಟ್‌ನಲ್ಲಿ ನನ್ನ ಫೋಟೊ ಅಪ್‌ಲೋಡ್‌ ಆಗಿತ್ತು ಎಂದ ಶ್ರೀದೇವಿ ಮಗಳು!

2018ರಲ್ಲಿ ಜಾನ್ವಿ ಕಪೂರ್ ಬಾಲಿವುಡ್ ಪ್ರವೇಶಿಸಿದರು. ಜಾನ್ವಿ ಕಪೂರ್ (Janhvi Kapoor) ಮತ್ತು ರಾಜ್‌ಕುಮಾರ್ ರಾವ್ ಅವರು ʻಮಿಸ್ಟರ್ ಆ್ಯಂಡ್ ಮಿಸಸ್ ಮಹಿʼ ಚಿತ್ರದಲ್ಲಿ ಎರಡನೇ ಬಾರಿಗೆ ತೆರೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ. ಈಗಾಗಲೇ ನಟ ನಟಿ ಚಿತ್ರದ ಪ್ರಚಾರದಲ್ಲಿ ತೊಡಗಿರುವುದು ಕಂಡುಬಂದಿದೆ. . ʻಮಿಸ್ಟರ್ ಆ್ಯಂಡ್ ಮಿಸಸ್ ಮಹಿʼಯಲ್ಲಿ, ರಾಜ್‌ಕುಮಾರ್ ಅವರು ಮಹೇಂದ್ರ ಸಿಂಗ್ ಧೋನಿ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಜಾನ್ವಿ ಮಹಿಮಾ ಎಂಬ ಪಾತ್ರವನ್ನು ನಿರ್ವಹಿಸಿಲಿದ್ದಾರೆ.

ʼದೇವರ’ ನಂತರ ಮತ್ತೊಂದು ತೆಲುಗು ಚಿತ್ರದಲ್ಲಿ ನಟಿ ಜಾನ್ವಿ ಕಪೂರ್ ನಟಿಸಲು ಸಿದ್ಧರಾಗಿದ್ದಾರೆ. ಬುಚ್ಚಿ ಬಾಬು ಸನಾ ನಿರ್ದೇಶಿಸುತ್ತಿರುವ 16ನೇ ಚಿತ್ರದಲ್ಲಿ ರಾಮ್ ಚರಣ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. ಜಾನ್ವಿ ಕಪೂರ್ ಕೊನೆಯದಾಗಿ ವರುಣ್ ಧವನ್ ಜತೆ ‘ಬವಾಲ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಆರ್‌ಸಿ 16’ ಮತ್ತು ‘ದೇವರ’ ಜತೆಗೆ , ಸುಧಾಂಶು ಸರಿಯಾ ಅವರ ‘ಉಲಾಜ್’ ಮತ್ತು ವರುಣ್ ಧವನ್ ಎದುರು ‘ಸನ್ನಿ ಸಂಸ್ಕರಿ ಕಿ ತುಳಸಿ ಕುಮಾರಿ’ ಸಿನಿಮಾಗಳನ್ನು ಹೊಂದಿದ್ದಾರೆ.

ಸುಧಾಂಶು ಸರಿಯಾ ನಿರ್ದೇಶನದ ಉಲಾಜ್ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಗೊಂಡಿದೆ. ಈ ಚಿತ್ರದಲ್ಲಿ ನಟಿ ಜಾನ್ವಿ ಕಪೂರ್ ಅವರು ರಾಜತಾಂತ್ರಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಟೀಸರ್ ನಲ್ಲಿ ಜಾನ್ವಿ ಕಪೂರ್ ಅವರು ದೇಶಭಕ್ತರ ಕುಟುಂಬದಿಂದ ಬಂದ ಯುವ ರಾಜತಾಂತ್ರಿಕ ಸುಹಾನಾ ಪಾತ್ರದಲ್ಲಿ ನಟಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Urfi Javed: ಮತ್ತೆ ಕುಡಿದು ತೇಲಾಡಿದ ಉರ್ಫಿ ಜಾವೇದ್; ವಿಡಿಯೊ ವೈರಲ್‌!

Urfi Javed: ಫ್ಯಾಷನ್‌ ಐಕಾನ್‌ ಎಂದೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ (Urfi Javed) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದರ ಜತೆಗೆ ಉರ್ಫಿ ಜಾವೇದ್‌ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆಕ್ಸ್ ಔರ್ ಧೋಖಾ 2’ ಸಿನಿಮಾದಲ್ಲಿ ಅವರು ಅಭಿನಯಿಸಿದ್ದರು. ಏಪ್ರಿಲ್ 19ರಂದು ಸಿನಿಮಾ ಬಿಡುಗಡೆಯಾಗಿತ್ತು.

VISTARANEWS.COM


on

Urfi Javed Steps Out Drunk For Third Time In A Month
Koo

ಬೆಂಗಳೂರು: ನಟಿ ಉರ್ಫಿ ಜಾವೇದ್ (Urfi Javed) ಮತ್ತೆ ಕುಡಿದು ತೇಲಾಡಿರುವ ವಿಡಿಯೊ ವೈರಲ್‌ ಆಗಿದೆ. ಮೂರನೇ ಬಾರಿಗೆ ಉರ್ಫಿ ಈ ರೀತಿ ಕಂಡು ಬಂದಿದ್ದಾರೆ. ಕಾರಿನ ಬಳಿ ಹೋಗಲಾರದೇ ಸ್ನೇಹಿತರ ಸಹಾಯದಿಂದ ನಟಿ ಹೋಗುವುದು ಕಂಡು ಬಂತು. ಹಳದಿ ಬಣ್ಣದ ಮಿನಿ ಡ್ರೆಸ್ ಧರಿಸಿದ್ದರು ಉರ್ಫಿ.

ಪಬ್‌ನಿಂದ ಹೊರಬಂದ ತಕ್ಷಣ, ಪಾಪರಾಜಿಗಳು ಮತ್ತು ಸ್ಥಳೀಯರು ಉರ್ಫಿಯನ್ನು ಗುಂಪುಗೂಡಿದರು. ಕಾರಿನವರೆಗೆ ನಡೆಯಲು ಪ್ರಯಾಸಪಡುತ್ತಿದ್ದಾಗ, ಅವರ ಸಹೋದರಿ ಉರ್ಫಿಯನ್ನು ಬಿಗಿಯಾಗಿ ಹಿಡಿದುಕೊಂಡು ಜನರಿಗೆ ದಾರಿ ಮಾಡಿಕೊಡುವಂತೆ ಕೇಳುತ್ತಿದ್ದರು. ʻತುಂಬ ಕುಡಿದ್ದಿದ್ದೇನೆʼʼಎಂದು ಉರ್ಫಿ ಕೂಡ ಹೋಗಲು ದಾರಿ ಮಾಡಿಕೊಂಡಿ ಎಂದು ವಿನಂತಿಸಿದ್ದಾರೆ.

ಫ್ಯಾಷನ್‌ ಐಕಾನ್‌ ಎಂದೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ (Urfi Javed) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದರ ಜತೆಗೆ ಉರ್ಫಿ ಜಾವೇದ್‌ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆಕ್ಸ್ ಔರ್ ಧೋಖಾ 2’ ಸಿನಿಮಾದಲ್ಲಿ ಅವರು ಅಭಿನಯಿಸಿದ್ದರು. ಏಪ್ರಿಲ್ 19ರಂದು ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ದಿವಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದರು. ಈ ಹಿಂದೆ ಇವರು ʻಲವ್ ಸೆಕ್ಸ್ ಔರ್ ಧೋಖಾʼ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದರು. ʼಲವ್ ಸೆಕ್ಸ್ ಔರ್ ಧೋಖಾ 2ʼನಲ್ಲಿ ಆಸಕ್ತಿದಾಯಕ ಕಥೆ ಇರಲಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಇಂಟರ್‌ನೆಟ್‌ ಜಗತ್ತಿನಲ್ಲಿ ನಡೆಯುವ ಪ್ರೀತಿಯ ಕಥೆ ಇರಲಿದೆ ಎನ್ನಲಾಗಿತ್ತು.

Urfi Javed: ಉರ್ಫಿ ಜಾವೇದ್‌ ಫುಲ್‌ ಟೈಟ್‌; ಸ್ನೇಹಿತೆ ಪಟ್ಟ ಹರಸಾಹಸ ಅಷ್ಟಿಷ್ಟಲ್ಲ!ಇದನ್ನೂ ಓದಿ:

ಬಾಲಿವುಡ್‌ ಕಲಾವಿದರಾದ ತುಷಾರ್ ಕಪೂರ್ ಮತ್ತು ಮೌನಿ ರಾಯ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಶೇಷ ಎಂದರೆ ಇದು ಉರ್ಫಿ ಜಾವೇದ್‌ ಅಭಿನಯದ ಮೊದಲ ಬಾಲಿವುಡ್‌ ಚಿತ್ರ. ಬಿಗ್‌ಬಾಸ್‌ ರಿಯಾಲಿಟಿ ಶೋದ ಮೂಲಕ ಗಮನ ಸೆಳೆದಿದ್ದ ಅವರು ಸಿನಿಮಾದಲ್ಲಿ ಯಾವ ರೀತಿ ಕಾಣಿಸಿಕೊಳ್ಳಬಹುದು ಎನ್ನುವ ಕುತೂಹಲ ಮೂಡಿತ್ತು. ಮಾತ್ರವಲ್ಲ ಅವರು ಸ್ಪ್ಲಿಟ್‌ವಿಲ್ಲಾ ಎಕ್ಸ್ 5 (Splitsvilla X5) ಶೋದಲ್ಲಿಯೂ ಕಾಣಿಸಿಕೊಂಡಿದ್ದಾರೆ.

Continue Reading

ಬಾಲಿವುಡ್

Vicky Kaushal: 27 ಸೆಕೆಂಡುಗಳ ಕಾಲ ಚುಂಬಸಿದ ವಿಕ್ಕಿ ಕೌಶಲ್ -ತೃಪ್ತಿ; ಸೆನ್ಸಾರ್‌ ಬೋರ್ಡ್‌ನಿಂದ ಬಿತ್ತು ಕತ್ತರಿ!

Vicky Kaushal: ಬ್ಯಾಡ್ ನ್ಯೂಸ್’ ಸಿನಿಮಾದಲ್ಲಿ ವಿಕ್ಕಿ ಹಾಗೂ ‘ಅನಿಮಲ್’ ಖ್ಯಾತಿಯ ತೃಪ್ತಿ ದಿಮ್ರಿ ನಟಿಸುತ್ತಿದ್ದಾರೆ. ವಿಕ್ಕಿ ಕೌಶಲ್ ಮತ್ತು ತೃಪ್ತಿ ಡಿಮ್ರಿ ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗಿದ್ದಾರೆ. ʻತೌಬಾ ತೌಬಾʼ ಹಾಡು ಹಿಟ್ ಆಗುತ್ತಿದ್ದಂತೆ ಚಿತ್ರತಂಡ ಮತ್ತೊಂದು ಸಾಂಗ್ ರಿಲೀಸ್ ಮಾಡಿತ್ತು. ನೀರಿನಲ್ಲಿ ತೃಪ್ತಿ ಡಿಮ್ರಿ ರೊಮ್ಯಾನ್ಸ್ ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದರು.

VISTARANEWS.COM


on

Vicky Kaushal Kissing Scenes of 27 Seconds deleated From Bad Newz
Koo

ಬೆಂಗಳೂರು: ವಿಕ್ಕಿ ಕೌಶಲ್ (Vicky Kaushal) ಮತ್ತು ತೃಪ್ತಿ ಡಿಮ್ರಿ (Triptii Dimri) ಅಭಿನಯದ ಬ್ಯಾಡ್ ನ್ಯೂಸ್’ (Bad Newz Movie) ಸಿನಿಮಾ ಜುಲೈ 19ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ. ವಿಕ್ಕಿ ಕೌಶಲ್ ಮತ್ತು ತೃಪ್ತಿ ಡಿಮ್ರಿ (Tripti Dim) ಅಭಿನಯದ ಈ ಸಿನಿಮಾ ಹಾಡು ರಿಲೀಸ್​ ಆಗಿದ್ದು, ಸಾಂಗ್‌ನಲ್ಲಿ (Vicky Kaushal-Tripti Dimri) ಇಬ್ಬರ ರೊಮ್ಯಾನ್ಸ್ ನೋಡಿದ ನೆಟ್ಟಿಗರು ಈ ವರ್ಷದ ಹಾಟ್ ಸಾಂಗ್ ಎಂದು ಕಮೆಂಟ್ ಮಾಡಿ ಸುದ್ದಿಯಾಗಿರುವುದು ಗೊತ್ತೇ ಇದೆ. ಇದೀಗ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಲಿಪ್-ಲಾಕ್‌ ದೃಶ್ಯಗಳಿಗೆ ಕತ್ತರಿ ಹಾಕಿದೆ ಎಂದು ವರದಿಯಾಗಿದೆ. ಈ ದೃಶ್ಯಗಳಲ್ಲಿ ಒಂದು 9 ಸೆಕೆಂಡುಗಳ ಕಾಲ ಕಿಸ್ಸಿಂಗ್‌ ಸೀನ್‌ ಇದ್ದರೆ, ಇನ್ನೆರಡು ದೃಶ್ಯಗಳಲ್ಲಿ 10 ಸೆಕೆಂಡುಗಳು ಮತ್ತು 8 ಸೆಕೆಂಡುಗಳು ಕಾಲ ಚುಂಬನದ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ ಎಂದು ವರದಿಯಾಗಿದೆ.

ʻಬ್ಯಾಡ್ ನ್ಯೂಸ್’ ಸಿನಿಮಾದಲ್ಲಿ ವಿಕ್ಕಿ ಹಾಗೂ ‘ಅನಿಮಲ್’ ಖ್ಯಾತಿಯ ತೃಪ್ತಿ ದಿಮ್ರಿ ನಟಿಸುತ್ತಿದ್ದಾರೆ. ವಿಕ್ಕಿ ಕೌಶಲ್ ಮತ್ತು ತೃಪ್ತಿ ಡಿಮ್ರಿ ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗಿದ್ದಾರೆ. ʻತೌಬಾ ತೌಬಾʼ ಹಾಡು ಹಿಟ್ ಆಗುತ್ತಿದ್ದಂತೆ ಚಿತ್ರತಂಡ ಮತ್ತೊಂದು ಸಾಂಗ್ ರಿಲೀಸ್ ಮಾಡಿತ್ತು. ನೀರಿನಲ್ಲಿ ತೃಪ್ತಿ ಡಿಮ್ರಿ ರೊಮ್ಯಾನ್ಸ್ ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದರು.

ಇದನ್ನೂ ಓದಿ: Vicky Kaushal: ಅಂಬಾನಿ ಮದುವೆಯಲ್ಲಿ ಪ್ಲೇ ಆಯ್ತು ವಿಕ್ಕಿ ಕೌಶಲ್‌ ಹಿಟ್‌ ಸಾಂಗ್‌; ʻತೌಬಾ ತೌಬಾʼ ಹುಕ್‌ ಸ್ಟೆಪ್ಸ್‌ಗೆ ಹೆಜ್ಜೆ ಹಾಕಿದ ತಾರೆಯರು!

‘ಬ್ಯಾಡ್ ನ್ಯೂಸ್’ ಸಿನಿಮಾವನ್ನು ಆನಂದ್ ತಿವಾರಿ ನಿರ್ದೇಶನ ಮಾಡಿದ್ದಾರೆ. ಇದು ರೊಮ್ಯಾಂಟಿಕ್ ಮತ್ತು ಹಾಸ್ಯ ಪ್ರಧಾನ ಚಿತ್ರವಾಗಿದೆ. ಯಶ್ ಜೋಹರ್, ಕರಣ್ ಜೋಹರ್, ಅಪೂರ್ವ ಮೆಹ್ತಾ, ಅಮೃತಪಾಲ್ ಸಿಂಗ್ ಬಿಂದ್ರಾ ಮತ್ತು ಆನಂದ್ ತಿವಾರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ವಿಕ್ಕಿ ಕೌಶಲ್,ತೃಪ್ತಿ ಡಿಮ್ರಿ ಮತ್ತು ಆಮಿ ವಿರ್ಕ್ ಮೂವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಮತ್ತು ಲಿಯೊ ಮೀಡಿಯಾ ಕಲೆಕ್ಟಿವ್ ಸಹಯೋಗದಲ್ಲಿ ಅಮೆಜಾನ್ ಪ್ರೈಮ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ಆನಂದ್ ತಿವಾರಿ ನಿರ್ದೇಶನದ ಬ್ಯಾಡ್ ನ್ಯೂಜ್ ನಲ್ಲಿ ನೇಹಾ ಧೂಪಿಯಾ ಕೂಡ ಕಾಣಿಸಿಕೊಂಡಿದ್ದಾರೆ.

Continue Reading

ಸಿನಿಮಾ

Soldier 2: ಮುಂದಿನ ವರ್ಷ ‘ಸೋಲ್ಜರ್ 2’ ಶೂಟಿಂಗ್; ಮತ್ತೆ ಒಂದಾಗಲಿದ್ದಾರೆಯೇ ಬಾಬಿ ಡಿಯೋಲ್-ಪ್ರೀತಿ ಜಿಂಟಾ?

ಆಕ್ಷನ್ -ಥ್ರಿಲ್ಲರ್ ಚಿತ್ರವಾದ ʼಸೋಲ್ಜರ್ʼ ʼಕುಚ್ ಕುಚ್ ಹೋತಾ ಹೈʼ ಅನಂತರ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯಾಗಿ ಚಿತ್ರವಾಗಿ ಹೊರಹೊಮ್ಮಿತ್ತು. ಅತ್ಯದ್ಭುತ ಸಂಗೀತದ ಜೊತೆಗೆ ನಟನಟಿಯ ನಡುವಿನ ಕೆಮೆಸ್ಟ್ರಿಯನ್ನು ಸಾಕಷ್ಟು ಪ್ರೇಕ್ಷಕರ ಮನ ಗೆದ್ದಿತ್ತು. ಚಿತ್ರದ ಜನಪ್ರಿಯತೆಗೆ ಇದು ಪ್ರಮುಖ ಕಾರಣವಾಗಿತ್ತು. ಕೆಲವು ಸಮಯದ ಹಿಂದೆಯಷ್ಟೇ ಬಾಬಿ ಡಿಯೋಲ್ ಅವರು ʼಸೋಲ್ಜರ್‌ʼನ ಮುಂದಿನ ಭಾಗದ (Soldier 2) ಬಗ್ಗೆ ಸುಳಿವು ನೀಡಿದ್ದರು. ನಿರ್ಮಾಪಕ ತೌರಾನಿ ಅವರು ಈಗ ಈ ಬಗ್ಗೆ ವಿವರ ನೀಡಿದ್ದಾರೆ.

VISTARANEWS.COM


on

By

Soldier 2
Koo

ಸೋಲ್ಜರ್ ಸೋಲ್ಜರ್ ಮೀಟಿ ಬಾತೆ ಬೋಲ್ ಕರ್.. 1998ರಲ್ಲಿ ಬಿಡುಗಡೆಯಾದ ರಮೇಶ್ ತೌರಾನಿಯವರ (Ramesh Taurani) ಸೋಲ್ಜರ್ (Soldier) ಚಿತ್ರದ ಈ ಹಾಡು ಆಗ ಬಹುಜನರ ಮನ ಗೆದ್ದಿತ್ತು. ಸೈನಿಕನೊಬ್ಬನ ಜೀವನ ಕಥೆಯನ್ನು ಆಧರಿಸಿ ಬಂದಿರುವ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸನ್ನೂ ಗಳಿಸಿತ್ತು. ಇದೀಗ ಇದರ ಮುಂದುವರಿದ ಭಾಗ ಸೋಲ್ಜರ್ 2ನ (Soldier 2) ಚಿತ್ರೀಕರಣ ಮುಂದಿನ ವರ್ಷ ಆರಂಭಗೊಳ್ಳಲಿದೆ ಎಂಬುದನ್ನು ಚಿತ್ರದ ನಿರ್ದೇಶಕರೇ ಸ್ಪಷ್ಟಪಡಿಸಿದ್ದಾರೆ.

ಅಬ್ಬಾಸ್- ಮಸ್ತಾನ್ (Abbas-Mustan) ಮತ್ತು ಬಾಬಿ ಡಿಯೋಲ್ (Bobby Deol) ನಡುವಿನ ಜಂಟಿ ಸಹಯೋಗದಲ್ಲಿ ನಿರ್ಮಾಣಗೊಂಡ ಮೊದಲ ಚಿತ್ರ ಸೋಲ್ಜರ್. ಬಾಲಿವುಡ್ ನ ಕ್ಯೂಟ್ ನಟಿ ಪ್ರೀತಿ ಜಿಂಟಾ (Preity Zinta) ಈ ಚಿತ್ರದ ಮೂಲಕವೇ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದರು.


ಆಕ್ಷನ್ -ಥ್ರಿಲ್ಲರ್ ಚಿತ್ರವಾದ ಸೋಲ್ಜರ್ ಆ ವರ್ಷದಲ್ಲಿ ಕುಚ್ ಕುಚ್ ಹೋತಾ ಹೈ ಅನಂತರ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯಾಗಿ ಚಿತ್ರವಾಗಿ ಹೊರಹೊಮ್ಮಿತು. ಅತ್ಯದ್ಭುತ ಸಂಗೀತದ ಜೊತೆಗೆ ನಟನಟಿಯ ನಡುವಿನ ಕೆಮೆಸ್ಟ್ರಿಯನ್ನು ಸಾಕಷ್ಟು ಪ್ರೇಕ್ಷಕರ ಮನ ಗೆದ್ದಿತು. ಚಿತ್ರದ ಜನಪ್ರಿಯತೆಗೆ ಇದು ಪ್ರಮುಖ ಕಾರಣವಾಯಿತು.

ಕೆಲವು ಸಮಯದ ಹಿಂದೆಯಷ್ಟೇ ಬಾಬಿ ಡಿಯೋಲ್ ಅವರು ಸೋಲ್ಜರ್‌ನ ಉತ್ತರಭಾಗದ ಬಗ್ಗೆ ಸುಳಿವು ನೀಡಿದ್ದರು. ತೌರಾನಿ ಅವರು ಅದರ ಉತ್ತರಭಾಗವನ್ನು ನಿರ್ಮಿಸಲು ಬಯಸುತ್ತಿದ್ದಾರೆ ಎಂದು ಹೇಳಿದ್ದರು. ಇತ್ತೀಚೆಗೆ ಇಷ್ಕ್ ವಿಷ್ಕ್‌ನ ಉತ್ತರ ಭಾಗವನ್ನು ಇಷ್ಕ್ ವಿಷ್ಕ್ ರೀಬೌಂಡ್ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆ ಮಾಡಿದ ಹಿರಿಯ ನಿರ್ಮಾಪಕರು, ಸೋಲ್ಜರ್ ಫ್ರ್ಯಾಂಚೈಸ್‌ನೊಂದಿಗೆ ಬರುವ ಅವರ ಯೋಜನೆ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದು ಖಚಿತಪಡಿಸಿದ್ದಾರೆ.


ಖಂಡಿತವಾಗಿಯೂ ಸೋಲ್ಜರ್‌ನ ಮುಂದಿನ ಭಾಗವನ್ನು ತಯಾರಿಸುತ್ತಿದ್ದೇವೆ. ಮುಂದಿನ ವರ್ಷ ಚಿತ್ರದ ಚಿತ್ರೀಕರಣ ಆರಂಭಿಸಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶಾಹಿದ್ ಕಪೂರ್, ಅಮೃತಾ ರಾವ್ ಮತ್ತು ಶೆನಾಜ್ ಖಜಾನೆ ಇಶ್ಕ್ ವಿಷ್ಕ್ ರೀಬೌಂಡ್‌ನಲ್ಲಿ ಇಲ್ಲ. ಆದರೆ ಬಾಬಿ ಡಿಯೋಲ್ ಮತ್ತು ಪ್ರೀತಿ ಜಿಂಟಾ ಸೋಲ್ಜರ್ 2 ನಲ್ಲಿ ತಮ್ಮ ಪಾತ್ರಗಳನ್ನು ನಿರ್ವಹಿಸುತ್ತಾರೆಯೇ ಎಂಬುದು ಖಚಿತವಾಗಿಲ್ಲ. ಕಥೆಯು ಹೇಗೆ ರೂಪುಗೊಳ್ಳುತ್ತದೆ ಎಂಬುದರ ಆಧಾರದ ಮೇಲೆ ಬಾಬಿ ಮತ್ತು ಪ್ರೀತಿ ಅದರ ಭಾಗವಾಗುತ್ತಾರೆಯೇ ಇಲ್ಲವೇ ಎಂಬುದನ್ನು ತಿಳಿಯಬಹುದು ಎಂದು ತೌರಾನಿ ತಿಳಿಸಿದ್ದಾರೆ.

ʼಕ್ಯಾ ಕೆಹೆನಾʼ ಚಿತ್ರ ಪ್ರೀತಿ ಜಿಂಟಾ ಅವರ ಮೊದಲ ಚಿತ್ರವಾಗಿದ್ದರೂ ʼಸೋಲ್ಜರ್ʼ ಪ್ರೀತಿ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತು. ತೌರಾನಿ ನಿರ್ಮಿಸಿದ ಚಿತ್ರಗಳಲ್ಲಿ ಮೆರಿ ಕ್ರಿಸ್‌ಮಸ್, ಅಜಬ್ ಪ್ರೇಮ್ ಕಿ ಗಜಬ್ ಕಹಾನಿ ಕೂಡ ಒಂದು, ಮೊದಲು ಪ್ರೀತಿ ಝಿಂಟಾ ಕ್ಯಾ ಕೆಹನಾಗೆ ಸಹಿ ಮಾಡಿದ್ದರು. ಆದರೆ ಚಿತ್ರ ತಡವಾಗಿ ಬಿಡುಗಡೆಯಾಯಿತು. ಕ್ಯಾ ಕೆಹೆನಾ ಮತ್ತು ಸೋಲ್ಜರ್ ನ ಶೂಟಿಂಗ್ ಕಾರ್ಯಗಳು ಏಕಕಾಲಕ್ಕೆ ನಡೆಯುತ್ತಿತ್ತು.


ಕ್ಯಾ ಕೆಹನಾ ಬಿಡುಗಡೆ ವಿಳಂಬಕ್ಕೆ ಕಾರಣ?

ಏಪ್ರಿಲ್ 1998ರ ವೇಳೆಗೆ ʼಸೋಲ್ಜರ್ʼ ಸಿದ್ಧವಾಗಿತ್ತು. ನಾವು ಅದನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲು ಬಯಸಿದ್ದೆವು. ಆದರೆ ಸಾಧ್ಯವಾಗಲಿಲ್ಲ. ಕಾರಣ ವಿಧು ವಿನೋದ್ ಚೋಪ್ರಾ ನಿರ್ಮಿಸಿದ ʼಕರೀಬ್ʼ ಎಂಬ ಬಾಬಿ ಅಭಿನಯದ ಮತ್ತೊಂದು ಚಿತ್ರದ ಸಂಗೀತ ಹಕ್ಕುಗಳನ್ನು ನಾವು ಹೊಂದಿದ್ದೆವು. ಅದರ ಸಂಗೀತವನ್ನು ಜೂನ್‌ನಲ್ಲಿ ಮತ್ತು ಚಿತ್ರವನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲು ನಾವು ಬಯಸಿದ್ದೇವು ಎಂದು ಚೋಪ್ರಾ ಹೇಳಿದರು. ಬಾಬಿಯ ಎರಡು ಚಿತ್ರಗಳು ಒಂದೇ ತಿಂಗಳಲ್ಲಿ ಬಿಡುಗಡೆಯಾಗುವುದು ನಮಗೂ ಇಷ್ಟವಿರಲಿಲ್ಲ ಎಂದು ತೌರಾನಿ ಹೇಳಿದರು.

ಇದನ್ನೂ ಓದಿ:Iti Acharya: ಬಾಲಿವುಡ್‌ಗೆ ಕಾಲಿಟ್ಟ ಮತ್ತೊಬ್ಬ ಕನ್ನಡತಿ; ದಕ್ಷಿಣ ಭಾರತದ ಚಿತ್ರಗಳ ಬಳಿಕ ಹಿಂದಿಯಲ್ಲೂ ಅಭಿನಯ

ಎರಡೂ ಟ್ರೇಲರ್‌ಗಳು ಒಂದೇ ಸಮಯದಲ್ಲಿ ಬಿಡುಗಡೆಯಾದರೆ ಅವು ಹೇಗೆ ಇರುತ್ತವೆ ಎಂದು ನಾವು ಚಿಂತಿಸಿದ್ದೆವು. ಒಂದೇ ನಟ ನಟಿಸಿರುವ ಎರಡು ಚಿತ್ರಗಳಿಗೆ ಪ್ರಚಾರಕ್ಕೂ ತೊಂದರೆಯಾಗುತ್ತಿತ್ತು. ಅದಕ್ಕಾಗಿಯೇ ನಾವು ʼಕರೀಬ್‌ʼ ಮೊದಲೇ ಬಿಡುಗಡೆ ಮಾಡಬೇಕಾಗಿತ್ತು. ಹೀಗಾಗಿ ʼಕ್ಯಾ ಕೆಹನಾʼ ಚಿತ್ರದ ಬಿಡುಗಡೆಗೆ ಕೊಂಚ ವಿಳಂಬವಾಯಿತು ಎಂದು ಹಳೆಯ ಸಂಗತಿಯನ್ನು ವಿವರಿಸಿದರು.

Continue Reading

ಸಿನಿಮಾ

Iti Acharya: ಬಾಲಿವುಡ್‌ಗೆ ಕಾಲಿಟ್ಟ ಮತ್ತೊಬ್ಬ ಕನ್ನಡತಿ; ದಕ್ಷಿಣ ಭಾರತದ ಚಿತ್ರಗಳ ಬಳಿಕ ಹಿಂದಿಯಲ್ಲೂ ಅಭಿನಯ

Iti Acharya: ನಟಿ, ಮಾಡೆಲ್‌ ಇತಿ ಆಚಾರ್ಯ ಇದೀಗ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಿರುವ ಈ ಕನ್ನಡತಿ ಇದೀಗ ʼದಿ ಶೂಸ್ ಐ ವೋರ್ʼ ಎಂಬ ಹೊಸ ಹಿಂದಿ ಚಿತ್ರದಲ್ಲಿ ಇತಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಯುವ ಪ್ರತಿಭೆ ಸಂಜಯ್ ಚರಣ್ ನಿರ್ದೇಶನದ ಈ ಸಿನಿಮಾದಲ್ಲಿ ʼಇನ್ನಮುಲ್ಕ್ʼ ಮತ್ತು ʼಸ್ಕ್ಯಾಮ್ʼ ಖ್ಯಾತಿಯ ಫೈಸಲ್ ರಶೀದ್‌ಗೆ ಜೋಡಿಯಾಗಿ ಅವರು ಅಭಿನಯಿಸಲಿದ್ದಾರೆ. ಇತಿ ಆಚಾರ್ಯ ಕನ್ನಡದ ʼಕವಚʼ, ʼಧ್ವನಿʼ, ʼಡೀಲ್‌ ರಾಜಾʼ, ʼಪಂಗನಾಮʼ ಸಿನಿಮಾಗಳಲ್ಲಿ ನಟಿಸಿದ್ದಾರೆ.

VISTARANEWS.COM


on

Iti Acharya
Koo

ಮುಂಬೈ: ಕಿರಿಕ್‌ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿ ಬಳಿಕ ಟಾಲಿವುಡ್‌ನಲ್ಲಿ ಮಿಂಚಿ ಕಾಲಿವುಡ್‌ನಲ್ಲೂ ಛಾಪು ಮೂಡಿಸಿದ ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವ ಸೂಚನೆ ನೀಡಿದ್ದಾರೆ. ಸ್ಟಾರ್‌ ನಟರ ಬ್ಯಾಕ್‌ ಟು ಬ್ಯಾಕ್‌ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇವರ ಜತೆಗೆ ಇನ್ನೊಬ್ಬ ಸ್ಯಾಂಡಲ್‌ವುಡ್‌ ನಟಿಯೂ ಇದೀಗ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರೇ ನಟಿ, ಮಾಡೆಲ್‌ ಇತಿ ಆಚಾರ್ಯ (Iti Acharya).

ಇತಿ ಆಚಾರ್ಯ ನಟನೆ ಜತೆಗೆ ಮಾಡೆಲಿಂಗ್‌ನಲ್ಲಿಯೂ ಮಿಂಚುತ್ತಿದ್ದಾರೆ. 2016ರ ಮಿಸ್ ಸೌತ್ ಇಂಡಿಯಾ ವಿನ್ನರ್ ಕಿರೀಟ ಮುಡಿಗೇರಿಸಿಕೊಂಡಿರುವ ಈ ಕನ್ನಡತಿ ಆರ್.ವಿ.ಎಸ್.ಪಿ. ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಪಕಿ ಆಗಿಯೂ ಗುರುತಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ಇತಿ ಆಚಾರ್ಯ ಬ್ಯುಸಿಯಾಗಿದ್ದಾರೆ. ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಹೋರ್ಡಿಂಗ್ಸ್‌ನಲ್ಲಿ ಕಾಣಿಸಿಕೊಂಡ ಹಿರಿಮೆ ಅವರದ್ದು. ಅಮೇರಿಕಾದ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಮೆರ್ಲಿನ್ ಬಾಬಾಜಿ ಸಾಂಗ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇತಿ ಆಚಾರ್ಯ ಅವರು ಜನಪ್ರಿಯತೆ ಪಡೆದಿದ್ದಾರೆ.

ಜುಲೈ 15ರಂದು ಹುಟ್ಟುಹಬ್ಬ ಆಚರಿಸಿಕೊಂಡ ಇತಿ ಆಚಾರ್ಯ ಹೊಸ ಸಿನಿಮಾದ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ʼದಿ ಶೂಸ್ ಐ ವೋರ್ʼ ಎಂಬ ಹೊಸ ಹಿಂದಿ ಚಿತ್ರದಲ್ಲಿ ಇತಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಯುವ ಪ್ರತಿಭೆ ಸಂಜಯ್ ಚರಣ್ ನಿರ್ದೇಶನದ ಈ ಸಿನಿಮಾದಲ್ಲಿ ʼಇನ್ನಮುಲ್ಕ್ʼ ಮತ್ತು ʼಸ್ಕ್ಯಾಮ್ʼ ಖ್ಯಾತಿಯ ಫೈಸಲ್ ರಶೀದ್‌ಗೆ ಜೋಡಿಯಾಗಿ ಅವರು ಅಭಿನಯಿಸಲಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಇತಿ ಆಚಾರ್ಯ, ʼʼನಾನು ಈ ಸಿನಿಮಾದ ಭಾಗವಾಗಿರುವುದಕ್ಕೆ ಖುಷಿ ಇದೆ. ತುಂಬಾ ಉತ್ಸುಕಳಾಗಿದ್ದೇನೆ. ಈ ಪಯಣದಲ್ಲಿ ಸಾಕಷ್ಟು ಕಲಿಯುವುದು ಇದೆ. ವಿಭಿನ್ನ ಕಥೆಯಾಗಿದ್ದು, ಇದೊಂದು ಟೆಕ್ನಿಕಲ್ ಸಿನಿಮಾʼʼ ಎಂದಿದ್ದಾರೆ.

ಇದನ್ನೂ ಓದಿ: Rakshit Shetty: ರಕ್ಷಿತ್‌ ಶೆಟ್ಟಿಗೆ ತಪ್ಪದ ಸಂಕಷ್ಟ; ಮತ್ತೊಂದು ದೂರು ದಾಖಲು!

ಇತಿ ಆಚಾರ್ಯ ಕನ್ನಡದ ʼಕವಚʼ, ʼಧ್ವನಿʼ, ʼಡೀಲ್‌ ರಾಜಾʼ, ʼಪಂಗನಾಮʼ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದೇ ರೀತಿ ಮಲಯಾಳಂ, ತೆಲುಗು ಮತ್ತು ತಮಿಳಿನ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ. ಇದೀಗ ಬಾಲಿವುಡ್‌ಗೆ ತೆರಳಿ ಬಹುಭಾಷಾ ನಟಿ ಎನಿಸಿಕೊಂಡಿದ್ದಾರೆ.

Continue Reading
Advertisement
Viral Video
Latest3 mins ago

Viral Video: 600 ಲೋಡರ್‌ ಹುದ್ದೆಗಳಿಗೆ 25,000ಕ್ಕೂ ಹೆಚ್ಚು ಅಭ್ಯರ್ಥಿಗಳು! ಕಾಲ್ತುಳಿತದ ಸನ್ನಿವೇಶ

Ankola landslide Case
ಕರ್ನಾಟಕ16 mins ago

Ankola landslide Case: ಅಂಕೋಲಾ ಗುಡ್ಡ ಕುಸಿತ ಪ್ರಕರಣ; ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

Neenade Naa Serial Dileep R Shetty khushi will be marry in real life
ಕಿರುತೆರೆ21 mins ago

Neenade Naa Serial: ರಿಯಲ್‌ ಲೈಫಲ್ಲೂ ಒಂದಾಗ್ತಿದ್ದಾರಾ ವಿಕ್ರಂ-ವೇದಾ? ಮದುವೆ ಯಾವಾಗ?

cm siddaramaiah
ಪ್ರಮುಖ ಸುದ್ದಿ21 mins ago

CM Siddaramaiah: ಕನ್ನಡಿಗರಿಗೆ ಶೇ.100 ಉದ್ಯೋಗʼ ಟ್ವೀಟ್‌ ಡಿಲೀಟ್‌ ಮಾಡಿದ ಸಿಎಂ ಸಿದ್ದರಾಮಯ್ಯ; ಕಂಪನಿಗಳ ಜೊತೆ ಚರ್ಚೆ ಎಂದ ಎಂಬಿ ಪಾಟೀಲ್;‌ ಏನಿದು ಗೊಂದಲ?

Pooja Khedkar
ದೇಶ34 mins ago

Pooja Khedkar: ಅಂಗವೈಕಲ್ಯ ಪ್ರಮಾಣಪತ್ರಕ್ಕಾಗಿ ನಕಲಿ ವಿಳಾಸ ನೀಡಿದ್ದ ಪೂಜಾ ಖೇಡ್ಕರ್‌; ಮತ್ತೊಂದು ಕಳ್ಳಾಟ ಬಯಲು

Dhammika Niroshana
ಕ್ರೀಡೆ41 mins ago

Dhammika Niroshana: ಶ್ರೀಲಂಕಾದ ಮಾಜಿ ಕ್ರಿಕೆಟಿಗನನ್ನು ಗುಂಡಿಕ್ಕಿ ಕೊಲೆಗೈದ ಅಪರಿಚಿತ ವ್ಯಕ್ತಿ

Urfi Javed Steps Out Drunk For Third Time In A Month
ವೈರಲ್ ನ್ಯೂಸ್1 hour ago

Urfi Javed: ಮತ್ತೆ ಕುಡಿದು ತೇಲಾಡಿದ ಉರ್ಫಿ ಜಾವೇದ್; ವಿಡಿಯೊ ವೈರಲ್‌!

NMMS scholarship
ಕರ್ನಾಟಕ2 hours ago

NMMS Scholarship: ಎನ್‌ಎಂಎಂಎಸ್‌ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ; ಕೊನೆಯ ದಿನಾಂಕ ಯಾವಾಗ, ಅರ್ಜಿ ಸಲ್ಲಿಕೆ ಹೇಗೆ?

The Olympic Games
ಕ್ರೀಡೆ2 hours ago

The Olympic Games: 72ರ ಇಳಿ ವಯಸ್ಸಿನಲ್ಲೂ ಒಲಿಂಪಿಕ್ಸ್​ ಪದಕ ಗೆದ್ದಿದ್ದ ಶೂಟರ್‌; ಯಾರಿವರು?

jobs for kannadigas cm siddaramaiah
ಪ್ರಮುಖ ಸುದ್ದಿ2 hours ago

CM Siddaramaiah: ಖಾಸಗಿ ಕೈಗಾರಿಕೆಗಳ ಶೇ.100 ಉದ್ಯೋಗ ಕನ್ನಡಿಗರಿಗೆ: ಸಿದ್ದರಾಮಯ್ಯ ಕ್ಯಾಬಿನೆಟ್‌ ನಿರ್ಣಯ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ2 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ2 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ2 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ3 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ3 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ3 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ4 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌