Site icon Vistara News

Janhvi Kapoor: ಗಾಂಧಿ-ಅಂಬೇಡ್ಕರ್ ʻಜಾತಿವಾದʼದ ಬಗ್ಗೆ ಶ್ರೀದೇವಿ ಮಗಳಿಗೆ ಆಸಕ್ತಿಯಂತೆ!

Janhvi Kapoor views on Gandhi Ambedkar casteism

ಬೆಂಗಳೂರು: ಬಾಲಿವುಡ್‌ ನಟಿ ಜಾನ್ವಿ ಕಪೂರ್ (Janhvi Kapoor) ಅವರು ಸೌತ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜತೆಗೆ ಆಗಾಗ ಇವರು ಸಂದರ್ಶನ ನೀಡುತ್ತಲೇ ಇರುತ್ತಾರೆ. ಇದೀಗ ಸಂದರ್ಶನವೊಂದರಲ್ಲಿ ಜಾನ್ವಿ ಕಪೂರ್ ಅವರ ಮಾತುಗಳು ಕೆಲವರಿಗೆ ಅಚ್ಚರಿ ತಂದಿದೆ. ಗಾಂಧಿ ಹಾಗೂ ಅಂಬೇಡ್ಕರ್ ನಡುವಿನ ಜಾತಿವಾದದ ( Janhvi opened up on casteism) ಕುರಿತ ಚರ್ಚೆಯ ಬಗ್ಗೆ ತಮಗೆ ಆಸಕ್ತಿ ಇರುವುದಾಗಿ ನಟಿ ಹೇಳಿಕೊಂಡಿದ್ದಾರೆ. ನಟಿ ಶ್ರೀದೇವಿ ಮಗಳ ಸಾಮಾಜಿಕ ಆಸಕ್ತಿಯ ಬಗ್ಗೆ ಮತ್ತು ಅವರ ಪ್ರೌಢತೆಯ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಜಾನ್ವಿ ಕಪೂರ್‌ ಅವರು ಸಂದರ್ಶನ ವೇಳೆ ತಮಗೆ ಇತಿಹಾಸದಲ್ಲಿ ತುಂಬ ಆಸಕ್ತಿ ಇದೆ ಎಂದರು. ಜತೆಗೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಭಾರತೀಯ ಸಂವಿಧಾನದ ಶಿಲ್ಪಿ ಬಿಆರ್ ಅಂಬೇಡ್ಕರ್ ಅವರು ಜಾತಿವಾದದ ಬಗ್ಗೆ ವ್ಯಕ್ತಪಡಿಸಿದ್ದ ಅಭಿಪ್ರಾಯಗಳ ಬಗ್ಗೆ ಚರ್ಚೆ ನಡೆಸುವುದನ್ನು ನೋಡಲು ಬಯಸುತ್ತೇನೆ ಎಂದು ಜಾನ್ವಿ ಹೇಳಿದರು.

ನಟಿ ಮಾತನಾಡಿ ʻʻಅಂಬೇಡ್ಕರ್ ಅವರಿಗೆ ತಮ್ಮ ನಿಲುವು ಏನು ಎಂಬುದು ಮೊದಲಿನಿಂದಲೂ ಸ್ಪಷ್ಟವಾಗಿತ್ತು. ಹಾಗೇ ನಿಷ್ಠುರರಾಗಿದ್ದರು. ಆದರೆ ಗಾಂಧಿಯವರ (ಜಾತಿಭೇದ) ದೃಷ್ಟಿಕೋನವು ಹೆಚ್ಚು ಹೆಚ್ಚು ತೆರೆದುಕೊಂಡಂತೆ ವಿಕಸನಗೊಂಡಿತು ಎಂದು ನಾನು ಭಾವಿಸುತ್ತೇನೆ. ನಮ್ಮ ಸಮಾಜದಲ್ಲಿರುವ ಈ ಜಾತಿವಾದದ ಸಮಸ್ಯೆ ಬಗ್ಗೆ ಮಾತನಾಡುವುದಾದರೆ, ಮೂರನೇ ವ್ಯಕ್ತಿಯಿಂದ ಆ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದಕ್ಕೂ, ಅಲ್ಲಿದ್ದು ನಿಜವಾಗಿ ಬದುಕುವುದಕ್ಕೂ ಬಹಳ ವ್ಯತ್ಯಾಸವಿದೆʼʼ ಎಂದು ಅಭಿಪ್ರಾಯಪಟ್ಟರು.

ಇದೀಗ ನಟಿ ಈ ಬಗ್ಗೆ ಮಾತನಾಡಿದ್ದಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಇಂಥ ಸಾಮಾಜಿಕ ಚಿಂತನೆಯ ಮಾತುಗಳು ಪ್ರಮುಖ ನಟಿಯ ಬಾಯಿಯಿಂದ ಕೇಳಿದ್ದು ಆಶ್ಚರ್ಯವಾಯಿತು. ಅಂಬೇಡ್ಕರ್, ಗಾಂಧಿ ಮತ್ತು ಜಾತಿವಾದದ ಕುರಿತು ಜಾನ್ವಿ ಕಪೂರ್‌ ಹೇಳಿದ್ದು ಗಮನ ಸೆಳೆಯಿತು. ನಟಿ ಸ್ವರಾ ಭಾಸ್ಕರ್ ಅವರು ಆಗಾಗ ರಾಜಕೀಯ ವಿಷಯಗಳ ಬಗ್ಗೆ ಮಾತನಾಡುತ್ತಾರೆʼʼ ಎಂದು ಜನ ಕಮೆಂಟ್‌ ಮಾಡಿದ್ದಾರೆ. “ಈ ಮಟ್ಟದ ತಿಳಿವಳಿಕೆ ಮತ್ತು ಅಧ್ಯಯನವನ್ನು ನೋಡುವುದು ಬಹಳ ಅಪರೂಪ ಎಂದು ನಟಿಯನ್ನು ಹೊಗಳಿದ್ದಾರೆ.” ಮತ್ತೊಬ್ಬರು “ನಟಿ ಸ್ವರಾ ಭಾಸ್ಕರ್‌ ಕೂಡ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಇದರಲ್ಲೇನು ವಿಶೇಷತೆ ಇಲ್ಲ” ಎಂದಿದ್ದಾರೆ.

ಇದನ್ನೂ ಓದಿ: Janhvi Kapoor: 12ನೇ ವಯಸ್ಸಿನಲ್ಲಿಯೇ ಅಶ್ಲೀಲ ವೆಬ್‌ಸೈಟ್‌ನಲ್ಲಿ ನನ್ನ ಫೋಟೊ ಅಪ್‌ಲೋಡ್‌ ಆಗಿತ್ತು ಎಂದ ಶ್ರೀದೇವಿ ಮಗಳು!

2018ರಲ್ಲಿ ಜಾನ್ವಿ ಕಪೂರ್ ಬಾಲಿವುಡ್ ಪ್ರವೇಶಿಸಿದರು. ಜಾನ್ವಿ ಕಪೂರ್ (Janhvi Kapoor) ಮತ್ತು ರಾಜ್‌ಕುಮಾರ್ ರಾವ್ ಅವರು ʻಮಿಸ್ಟರ್ ಆ್ಯಂಡ್ ಮಿಸಸ್ ಮಹಿʼ ಚಿತ್ರದಲ್ಲಿ ಎರಡನೇ ಬಾರಿಗೆ ತೆರೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ. ಈಗಾಗಲೇ ನಟ ನಟಿ ಚಿತ್ರದ ಪ್ರಚಾರದಲ್ಲಿ ತೊಡಗಿರುವುದು ಕಂಡುಬಂದಿದೆ. . ʻಮಿಸ್ಟರ್ ಆ್ಯಂಡ್ ಮಿಸಸ್ ಮಹಿʼಯಲ್ಲಿ, ರಾಜ್‌ಕುಮಾರ್ ಅವರು ಮಹೇಂದ್ರ ಸಿಂಗ್ ಧೋನಿ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಜಾನ್ವಿ ಮಹಿಮಾ ಎಂಬ ಪಾತ್ರವನ್ನು ನಿರ್ವಹಿಸಿಲಿದ್ದಾರೆ.

ʼದೇವರ’ ನಂತರ ಮತ್ತೊಂದು ತೆಲುಗು ಚಿತ್ರದಲ್ಲಿ ನಟಿ ಜಾನ್ವಿ ಕಪೂರ್ ನಟಿಸಲು ಸಿದ್ಧರಾಗಿದ್ದಾರೆ. ಬುಚ್ಚಿ ಬಾಬು ಸನಾ ನಿರ್ದೇಶಿಸುತ್ತಿರುವ 16ನೇ ಚಿತ್ರದಲ್ಲಿ ರಾಮ್ ಚರಣ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. ಜಾನ್ವಿ ಕಪೂರ್ ಕೊನೆಯದಾಗಿ ವರುಣ್ ಧವನ್ ಜತೆ ‘ಬವಾಲ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಆರ್‌ಸಿ 16’ ಮತ್ತು ‘ದೇವರ’ ಜತೆಗೆ , ಸುಧಾಂಶು ಸರಿಯಾ ಅವರ ‘ಉಲಾಜ್’ ಮತ್ತು ವರುಣ್ ಧವನ್ ಎದುರು ‘ಸನ್ನಿ ಸಂಸ್ಕರಿ ಕಿ ತುಳಸಿ ಕುಮಾರಿ’ ಸಿನಿಮಾಗಳನ್ನು ಹೊಂದಿದ್ದಾರೆ.

ಸುಧಾಂಶು ಸರಿಯಾ ನಿರ್ದೇಶನದ ಉಲಾಜ್ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಗೊಂಡಿದೆ. ಈ ಚಿತ್ರದಲ್ಲಿ ನಟಿ ಜಾನ್ವಿ ಕಪೂರ್ ಅವರು ರಾಜತಾಂತ್ರಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಟೀಸರ್ ನಲ್ಲಿ ಜಾನ್ವಿ ಕಪೂರ್ ಅವರು ದೇಶಭಕ್ತರ ಕುಟುಂಬದಿಂದ ಬಂದ ಯುವ ರಾಜತಾಂತ್ರಿಕ ಸುಹಾನಾ ಪಾತ್ರದಲ್ಲಿ ನಟಿಸಿದ್ದಾರೆ.

Exit mobile version