ಬೆಂಗಳೂರು: ರಣಬೀರ್ ಕಪೂರ್ ಮತ್ತು ಅಕ್ಷಯ್ ಕುಮಾರ್ ನಾಯಕರಾಗಿ ನಟಿಸಿರುವ ಚಿತ್ರಗಳ ಆಫರ್‌ಗಳನ್ನು ನಿರಾಕರಿಸಿರುವುದಾಗಿ ಕಂಗನಾ ರಣಾವತ್ (Kangana Ranaut) ಬಹಿರಂಗಪಡಿಸಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್, ಅಕ್ಷಯ್ ಕುಮಾರ್ ಮತ್ತು ರಣಬೀರ್ ಕಪೂರ್ ಅವರೊಂದಿಗೆ ಚಲನಚಿತ್ರಗಳನ್ನು ಮಾಡದೆಯೇ ನಟಿಯರು ಬಾಲಿವುಡ್‌ನಲ್ಲಿ ಛಾಪು ಮೂಡಿಸಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದು ನಟಿ ಹೇಳಿದರು.
ಇತ್ತೀಚಿನ ಪಾಡ್‌ಕ್ಯಾಸ್ಟ್‌ನಲ್ಲಿ, ಕಂಗನಾ ಅವರು ಐದು ಎ-ಲಿಸ್ಟರ್ ನಟರೊಂದಿಗೆ ಕೆಲಸ ಮಾಡಿಲ್ಲ ಎಂದು ಹೆಮ್ಮೆಯಿಂದ ಬಹಿರಂಗಪಡಿಸಿದ್ದಾರೆ. ಈ ತಾರೆಯರು ನಟಿಸಿದ ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ಟೆಂಪ್ಲೇಟ್ ಅನ್ನು ಒಳಗೊಂಡಿರುತ್ತವೆ. ಅದರಲ್ಲಿ ಮಹಿಳೆಯರನ್ನು ಕೆಲವು ದೃಶ್ಯಗಳು ಮತ್ತು ಒಂದೆರಡು ಹಾಡುಗಳಿಗೆ ಮಾತ್ರ ಸೀಮಿತ ಮಾಡುತ್ತಾರೆ. ಅಂತಹ ಸಿನಿಮಾಗಳನ್ನು ಮಾಡಲು ಬಯಸುವುದಿಲ್ಲ ಎಂದು ಕಂಗನಾ ಹೇಳಿದರು.
ನಟಿ ಮಾತನಾಡಿ ʻʻನಾನು ಖಾನ್ ನಾಯಕತ್ವದ ಚಿತ್ರಗಳನ್ನು ನಿರಾಕರಿಸಿದೆ. ಎಲ್ಲಾ ಖಾನ್‌ಗಳು ತುಂಬಾ ಒಳ್ಳೆಯವರು. ನನ್ನೊಂದಿಗೆ ಎಂದಿಗೂ ಅನುಚಿತವಾಗಿ ವರ್ತಿಸಲಿಲ್ಲ. ಹೌದು, ನನ್ನೊಂದಿಗೆ ಅನುಚಿತವಾಗಿ ವರ್ತಿಸಿದವರೂ ಇದ್ದಾರೆ. ಆದರೆ ನಾನು ಯಾವಾಗಲೂ ಖಾನ್ ಚಿತ್ರಗಳನ್ನು ಮಾಡಲು ಇಚ್ಟ ಪಡುವುದಿಲ್ಲ. ಅವರುಗಳ ಸಿನಿಮಾಗಳಲ್ಲಿ ನಾಯಕಿಯರನ್ನು ಕೇವಲ ಎರಡು ದೃಶ್ಯಗಳು ಮತ್ತು ಒಂದು ಹಾಡಿಗೆ ಮಾತ್ರ ಸಿಮೀತ ಮಾಡುತ್ತಾರೆ. ನಾನು ಎ-ಲಿಸ್ಟರ್ ಮಹಿಳೆಯಾಗಿ ಇರಲುಬಯಸುತ್ತೇನೆ, ಖಾನ್‌ಗಳೊಂದಿಗೆ ಕೆಲಸ ಮಾಡದ ಟಾಪ್-ಮೋಸ್ಟ್ ನಟಿ ನಾನು, ”ಎಂದು ಕಂಗನಾ ಹೇಳಿದರು.
ಇದನ್ನೂ ಓದಿ: Kangana Ranaut: ʻಎಮರ್ಜೆನ್ಸಿʼ ಟ್ರೈಲರ್ ಔಟ್; ಕಂಗನಾ ರಣಾವತ್‌ಗೆ ರಾಷ್ಟ್ರ ಪ್ರಶಸ್ತಿ ಫಿಕ್ಸ್ ಅಂದ್ರು ಫ್ಯಾನ್ಸ್!
“ನನ್ನ ನಂತರ ಬರಲಿರುವ ಮಹಿಳೆಯರಿಗೆ ನನ್ನ ಕೈಲಾದದ್ದನ್ನು ಸಹಾಯ ಮಾಡಲು ಬಯಸುತ್ತೇನೆ. ಯಾವುದೇ ಖಾನ್‌ಗಳು ನಿಮ್ಮನ್ನು ಯಶಸ್ವಿಯಾಗಿಸಲು ಸಾಧ್ಯವಿಲ್ಲ, ಯಾವುದೇ ಕುಮಾರ್ ನಿಮ್ಮನ್ನು ಯಶಸ್ವಿಯಾಗಿಸಲು ಸಾಧ್ಯವಿಲ್ಲ, ಯಾವುದೇ ಕಪೂರ್ ನಿಮ್ಮನ್ನು ಯಶಸ್ವಿಯಾಗಿಸಲು ಸಾಧ್ಯವಿಲ್ಲ. ನಾನು ರಣಬೀರ್ ಕಪೂರ್ ಅವರ ಚಿತ್ರಗಳಿಗೆ ನೋ ಹೇಳಿದೆ, ಅಕ್ಷಯ್ ಕುಮಾರ್ ಅವರ ಚಿತ್ರಗಳಿಗೆ ನಾನು ನೋ ಹೇಳಿದೆ. ನಾಯಕನೊಬ್ಬನೇ ನಾಯಕಿಯನ್ನು ಯಶಸ್ವಿಗೊಳಿಸಬಲ್ಲ ಎಂಬ ಮೂಲಮಾದರಿಯಾಗಲು ನಾನು ಬಯಸಲಿಲ್ಲʼʼಎಂದರು.
ಕ್ವೀನ್ ಮತ್ತು ತನು ವೆಡ್ಸ್ ಮನು ಚಿತ್ರಗಳ ನಂತರ ಕಂಗನಾ ಮಹಿಳಾ ಪ್ರಧಾನ ಸಿನಿಮಾಗಳನ್ನೇ ಹೆಚ್ಚಾಗಿ ಮಾಡಿದರು. ಫ್ಯಾಷನ್ ಮತ್ತು ತಲೈವಿಯಂತಹ ಸಿನಿಮಾಗಳನ್ನು ಸಹ ಮಾಡಿದ್ದಾರೆ, ಇದು ಎ-ಲಿಸ್ಟ್ ಬಾಲಿವುಡ್ ತಾರೆಯನ್ನು ಒಳಗೊಂಡಿರಲಿಲ್ಲ. ಕಂಗನಾ ಈಗ ಎಮರ್ಜೆನ್ಸಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸೆಪ್ಟೆಂಬರ್ 6ರಂದು ಈ ಸಿನಿಮಾ ತೆರೆಗೆ ಬರಲಿದೆ. ಅನುಪಮ್ ಖೇರ್, ಶ್ರೇಯಸ್ ತಲ್ಪಡೆ, ಮಿಲಿಂದ್ ಸೋಮನ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಈ ವರ್ಷ ನವೆಂಬರ್ 24ರಂದು ಎಮರ್ಜೆನ್ಸಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಲಾಗಿತ್ತು.