Kangana Ranaut: ಖಾನ್‌ಗಳ ಸಿನಿಮಾ ಆಫರ್‌ ಎಂದಿಗೂ ಒಪ್ಪಲ್ಲ ಎಂದ ಕಂಗನಾ - Vistara News

ಬಾಲಿವುಡ್

Kangana Ranaut: ಖಾನ್‌ಗಳ ಸಿನಿಮಾ ಆಫರ್‌ ಎಂದಿಗೂ ಒಪ್ಪಲ್ಲ ಎಂದ ಕಂಗನಾ

Kangana Ranaut: ಇತ್ತೀಚಿನ ಪಾಡ್‌ಕ್ಯಾಸ್ಟ್‌ನಲ್ಲಿ, ಕಂಗನಾ ಅವರು ಐದು ಎ-ಲಿಸ್ಟರ್‌ ನಟರೊಂದಿಗೆ ಕೆಲಸ ಮಾಡಿಲ್ಲ ಎಂದು ಹೆಮ್ಮೆಯಿಂದ ಬಹಿರಂಗಪಡಿಸಿದ್ದಾರೆ. ಈ ತಾರೆಯರು ನಟಿಸಿದ ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ಟೆಂಪ್ಲೇಟ್ ಅನ್ನು ಒಳಗೊಂಡಿರುತ್ತವೆ. ಅದರಲ್ಲಿ ಮಹಿಳೆಯರನ್ನು ಕೆಲವು ದೃಶ್ಯಗಳು ಮತ್ತು ಒಂದೆರಡು ಹಾಡುಗಳಿಗೆ ಮಾತ್ರ ಸೀಮಿತ ಮಾಡುತ್ತಾರೆ. ಅಂತಹ ಸಿನಿಮಾಗಳನ್ನು ಮಾಡಲು ಬಯಸುವುದಿಲ್ಲ ಎಂದು ಕಂಗನಾ ಹೇಳಿದರು.

VISTARANEWS.COM


on

Kangana Ranaut Says She REJECTED Films with Ranbir Kapoor
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಣಬೀರ್ ಕಪೂರ್ ಮತ್ತು ಅಕ್ಷಯ್ ಕುಮಾರ್ ನಾಯಕರಾಗಿ ನಟಿಸಿರುವ ಚಿತ್ರಗಳ ಆಫರ್‌ಗಳನ್ನು ನಿರಾಕರಿಸಿರುವುದಾಗಿ ಕಂಗನಾ ರಣಾವತ್‌ (Kangana Ranaut) ಬಹಿರಂಗಪಡಿಸಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್, ಅಕ್ಷಯ್ ಕುಮಾರ್ ಮತ್ತು ರಣಬೀರ್ ಕಪೂರ್ ಅವರೊಂದಿಗೆ ಚಲನಚಿತ್ರಗಳನ್ನು ಮಾಡದೆಯೇ ನಟಿಯರು ಬಾಲಿವುಡ್‌ನಲ್ಲಿ ಛಾಪು ಮೂಡಿಸಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದು ನಟಿ ಹೇಳಿದರು.

ಇತ್ತೀಚಿನ ಪಾಡ್‌ಕ್ಯಾಸ್ಟ್‌ನಲ್ಲಿ, ಕಂಗನಾ ಅವರು ಐದು ಎ-ಲಿಸ್ಟರ್‌ ನಟರೊಂದಿಗೆ ಕೆಲಸ ಮಾಡಿಲ್ಲ ಎಂದು ಹೆಮ್ಮೆಯಿಂದ ಬಹಿರಂಗಪಡಿಸಿದ್ದಾರೆ. ಈ ತಾರೆಯರು ನಟಿಸಿದ ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ಟೆಂಪ್ಲೇಟ್ ಅನ್ನು ಒಳಗೊಂಡಿರುತ್ತವೆ. ಅದರಲ್ಲಿ ಮಹಿಳೆಯರನ್ನು ಕೆಲವು ದೃಶ್ಯಗಳು ಮತ್ತು ಒಂದೆರಡು ಹಾಡುಗಳಿಗೆ ಮಾತ್ರ ಸೀಮಿತ ಮಾಡುತ್ತಾರೆ. ಅಂತಹ ಸಿನಿಮಾಗಳನ್ನು ಮಾಡಲು ಬಯಸುವುದಿಲ್ಲ ಎಂದು ಕಂಗನಾ ಹೇಳಿದರು.

ನಟಿ ಮಾತನಾಡಿ ʻʻನಾನು ಖಾನ್ ನಾಯಕತ್ವದ ಚಿತ್ರಗಳನ್ನು ನಿರಾಕರಿಸಿದೆ. ಎಲ್ಲಾ ಖಾನ್‌ಗಳು ತುಂಬಾ ಒಳ್ಳೆಯವರು. ನನ್ನೊಂದಿಗೆ ಎಂದಿಗೂ ಅನುಚಿತವಾಗಿ ವರ್ತಿಸಲಿಲ್ಲ. ಹೌದು, ನನ್ನೊಂದಿಗೆ ಅನುಚಿತವಾಗಿ ವರ್ತಿಸಿದವರೂ ಇದ್ದಾರೆ. ಆದರೆ ನಾನು ಯಾವಾಗಲೂ ಖಾನ್‌ ಚಿತ್ರಗಳನ್ನು ಮಾಡಲು ಇಚ್ಟ ಪಡುವುದಿಲ್ಲ. ಅವರುಗಳ ಸಿನಿಮಾಗಳಲ್ಲಿ ನಾಯಕಿಯರನ್ನು ಕೇವಲ ಎರಡು ದೃಶ್ಯಗಳು ಮತ್ತು ಒಂದು ಹಾಡಿಗೆ ಮಾತ್ರ ಸಿಮೀತ ಮಾಡುತ್ತಾರೆ. ನಾನು ಎ-ಲಿಸ್ಟರ್ ಮಹಿಳೆಯಾಗಿ ಇರಲುಬಯಸುತ್ತೇನೆ, ಖಾನ್‌ಗಳೊಂದಿಗೆ ಕೆಲಸ ಮಾಡದ ಟಾಪ್-ಮೋಸ್ಟ್ ನಟಿ ನಾನು, ”ಎಂದು ಕಂಗನಾ ಹೇಳಿದರು.

ಇದನ್ನೂ ಓದಿ: Kangana Ranaut: ʻಎಮರ್ಜೆನ್ಸಿʼ ಟ್ರೈಲರ್‌ ಔಟ್‌; ಕಂಗನಾ ರಣಾವತ್‌ಗೆ ರಾಷ್ಟ್ರ ಪ್ರಶಸ್ತಿ ಫಿಕ್ಸ್‌ ಅಂದ್ರು ಫ್ಯಾನ್ಸ್‌!

“ನನ್ನ ನಂತರ ಬರಲಿರುವ ಮಹಿಳೆಯರಿಗೆ ನನ್ನ ಕೈಲಾದದ್ದನ್ನು ಸಹಾಯ ಮಾಡಲು ಬಯಸುತ್ತೇನೆ. ಯಾವುದೇ ಖಾನ್‌ಗಳು ನಿಮ್ಮನ್ನು ಯಶಸ್ವಿಯಾಗಿಸಲು ಸಾಧ್ಯವಿಲ್ಲ, ಯಾವುದೇ ಕುಮಾರ್ ನಿಮ್ಮನ್ನು ಯಶಸ್ವಿಯಾಗಿಸಲು ಸಾಧ್ಯವಿಲ್ಲ, ಯಾವುದೇ ಕಪೂರ್ ನಿಮ್ಮನ್ನು ಯಶಸ್ವಿಯಾಗಿಸಲು ಸಾಧ್ಯವಿಲ್ಲ. ನಾನು ರಣಬೀರ್ ಕಪೂರ್ ಅವರ ಚಿತ್ರಗಳಿಗೆ ನೋ ಹೇಳಿದೆ, ಅಕ್ಷಯ್ ಕುಮಾರ್ ಅವರ ಚಿತ್ರಗಳಿಗೆ ನಾನು ನೋ ಹೇಳಿದೆ. ನಾಯಕನೊಬ್ಬನೇ ನಾಯಕಿಯನ್ನು ಯಶಸ್ವಿಗೊಳಿಸಬಲ್ಲ ಎಂಬ ಮೂಲಮಾದರಿಯಾಗಲು ನಾನು ಬಯಸಲಿಲ್ಲʼʼಎಂದರು.

ಕ್ವೀನ್ ಮತ್ತು ತನು ವೆಡ್ಸ್ ಮನು ಚಿತ್ರಗಳ ನಂತರ ಕಂಗನಾ ಮಹಿಳಾ ಪ್ರಧಾನ ಸಿನಿಮಾಗಳನ್ನೇ ಹೆಚ್ಚಾಗಿ ಮಾಡಿದರು. ಫ್ಯಾಷನ್ ಮತ್ತು ತಲೈವಿಯಂತಹ ಸಿನಿಮಾಗಳನ್ನು ಸಹ ಮಾಡಿದ್ದಾರೆ, ಇದು ಎ-ಲಿಸ್ಟ್ ಬಾಲಿವುಡ್ ತಾರೆಯನ್ನು ಒಳಗೊಂಡಿರಲಿಲ್ಲ. ಕಂಗನಾ ಈಗ ಎಮರ್ಜೆನ್ಸಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸೆಪ್ಟೆಂಬರ್​ 6ರಂದು ಈ ಸಿನಿಮಾ ತೆರೆಗೆ ಬರಲಿದೆ. ಅನುಪಮ್​ ಖೇರ್​, ಶ್ರೇಯಸ್​ ತಲ್ಪಡೆ, ಮಿಲಿಂದ್​ ಸೋಮನ್​ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.  ಈ ಹಿಂದೆ ಈ ವರ್ಷ ನವೆಂಬರ್ 24ರಂದು ಎಮರ್ಜೆನ್ಸಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಲಾಗಿತ್ತು. 

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಿಗ್ ಬಾಸ್

Isha Koppikar: ʻಸೂರ್ಯವಂಶʼ ಖ್ಯಾತಿಯ ನಟಿ ಬಿಗ್‌ ಬಾಸ್‌ಗೆ ಹೋಗೋದು ಫಿಕ್ಸ್‌!

Isha Koppikar:ಇಶಾ ಕೊಪ್ಪಿಕರ್ ಹಿಂದಿ ಜತೆ ಕನ್ನಡ, ತಮಿಳು, ತೆಲುಗು ಹಾಗೂ ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಬಾಲಿವುಡ್‌ನ ‘ಕಂಪನಿ’, ‘ಕಾಂಠೆ’, ‘ಡಾನ್’ ಅಂತಹ ಯಶಸ್ವಿ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದರು.

VISTARANEWS.COM


on

Isha Koppikar Bigg Boss 18 Is Isha Koppikar a confirmed contestant
Koo

ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಜತೆ ʻಸೂರ್ಯವಂಶʼ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಮುಂಬೈ ನಟಿ ಇಶಾ ಕೊಪ್ಪಿಕರ್ (Isha Koppikar) ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ಹೆಸರುಗಳಲ್ಲಿ ಒಬ್ಬರು. ನಟಿ ಹಿಂದಿ ಚಿತ್ರರಂಗದಲ್ಲೂ ಹೆಸರು ಗಳಿಸಿದ್ದಾರೆ.  ಹಿಂದಿಯ ಬಿಗ್​ಬಾಸ್​ಗೆ ಮೊದಲ ಎಂಟ್ರಿಯಾಗಿ ಇಶಾ ಕೊಪ್ಪಿಕರ್​ ಹೆಸರು ಕನ್​ಫರ್ಮ್​ ಆಗಿದೆ. ಈ ಕುರಿತು ಖುದ್ದು ನಟಿ ಹೇಳಿದ್ದಾರೆ ಎನ್ನಲಾಗಿದೆ. 

ಇಶಾ ಕೊಪ್ಪಿಕರ್ ಹಿಂದಿ ಜತೆ ಕನ್ನಡ, ತಮಿಳು, ತೆಲುಗು ಹಾಗೂ ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಬಾಲಿವುಡ್‌ನ ‘ಕಂಪನಿ’, ‘ಕಾಂಠೆ’, ‘ಡಾನ್’ ಅಂತಹ ಯಶಸ್ವಿ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದರು. ಕನ್ನಡದಲ್ಲೂ ಐದು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಸೂರ್ಯವಂಶ’,’ಹೂ ಅಂತಿಯಾ ಹೂಂ ಅಂತಿಯಾ’, ‘ಓ ನನ್ನ ನಲ್ಲೆ’, ‘ಲೂಟಿ’ ಹಾಗೂ ನಾಲ್ಕು ವರ್ಷಗಳ ಹಿಂದಷ್ಟೇ ತೆರೆಕಂಡಿರೋ ‘ಕವಚ’ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಅವರು ಹಿಂದಿಯ ಬಿಗ್​ಬಾಸ್​ಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Isha Koppikar: ಖ್ಯಾತ ನಟ ನನಗೆ ಏಕಾಂತದಲ್ಲಿ ಭೇಟಿಯಾಗುವಂತೆ ಹೇಳಿದ್ದ ಎಂದ ʻಸೂರ್ಯವಂಶʼ ನಟಿ!

ಇತ್ತೇಚೆಗೆ ನಟಿ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದರು. ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂದರ್ಶನದಲ್ಲಿ, ಇಶಾ ಮಾತನಾಡಿ ʻʻಆಗೆಲ್ಲ ಮಿ ಟೂ ಭಿಯಾನ ಇರಲಿಲ್ಲ. ನನ್ನ ಕಾಲದಲ್ಲಿ ಅನೇಕ ನಟಿಯರು ಇಂಡಸ್ಟ್ರಿ ತೊರೆದರು. ಕೆಲವೇ ಕೆಲವರು ಇಂಡಸ್ಟ್ರಿಯಲ್ಲಿ ಇದ್ದರು. ಅದರಲ್ಲಿ ನಾನೂ ಒಬ್ಬಳು. ನಾನು 18 ವರ್ಷವನಿದ್ದಾಗ ನಟ ಕಾಸ್ಟಿಂಗ್ ಕೌಚ್‌ಗಾಗಿ ಸಂಪರ್ಕಿಸಿದರು. ಕೆಲಸ ಸಿಗಬೇಕಾದರೆ ನಟರ ಜೊತೆ ‘ಫ್ರೆಂಡ್ಲಿ’ ಆಗಬೇಕು ಅಂತ ಹೇಳಿದ್ರು. ನೀವು ಯಾವ ಅರ್ಥದಲ್ಲಿ ‘ಫ್ರೆಂಡ್ಲಿ’ ಆಗಿರಬೇಕು ಎಂದು ಹೇಳುತ್ತಿದ್ದೀರಿ ಅಂತ ಅವರಿಗೆ ಮರು ಪ್ರಶ್ನೆ ಮಾಡಿದ್ದೆ ಎಂದಿದ್ದಾರೆ. ಇನ್ನೂ.. ಇದೊಂದೇ ಅಲ್ಲ. ಮತ್ತೊಮ್ಮೆ.. ಮತ್ತೊಬ್ಬ ಸ್ಟಾರ್‌ ನನಗೆ ಸಿಂಗಲ್ ಆಗಿ ಏಕಾಂತದಲ್ಲಿ ಭೇಟಿಯಾಗುವಂತೆ ಹೇಳಿದ್ದ ಎಂದಿದ್ದಾರೆ. ಡ್ರೈವರ್ ಅಥವಾ ಬೇರೆ ಯಾರನ್ನೂ ಜತೆಗೆ ಕರೆದುಕೊಂಡು ಬರಬಾರದು ಎಂಬ ಷರತ್ತನ್ನೂ ಹಾಕಿದ್ದ ಎಂದಿರುವ ಇಶಾ ಕೊಪ್ಪಿಕರ್, ಆ ಕಾಲಕ್ಕೆ ಆತ ಹಿಂದಿ ಚಿತ್ರರಂಗದ ‘ಎ’ ದರ್ಜೆಯ ನಾಯಕನಾಗಿದ್ದ ಎಂದು ಕೂಡ ಹೇಳಿದ್ದಾರೆ. ನನ್ನ ಜೊತೆ ಚಿತ್ರರಂಗದ ಬಂದ ಹಲವಾರು ನಾಯಕಿಯರು ಈ ಕಾಸ್ಟಿಂಗ್ ಕೌಚ್ ಕಾರಣಕ್ಕೆ ಚಿತ್ರರಂಗದಿಂದ ದೂರ ಸರೆದರು ಎಂದು ಹೇಳಿಕೊಂಡಿದ್ದರು.

ಬಾಲಿವುಡ್​ ನಟ ಸಲ್ಮಾನ್​ ಖಾನ್​ ನಡೆಸಿಕೊಡುವ ಬಿಗ್​ಬಾಸ್​ ಷೋ 18ನೇ ಸೀಸನ್​ ಬರುವ ಅಕ್ಟೋಬರ್​ 5ರಿಂದ ಶುರುವಾಗಲಿದೆ.

Continue Reading

ಬಾಲಿವುಡ್

Stree 2 Box Office: ಗೆದ್ದು ಬೀಗಿದ ‘ಸ್ತ್ರೀ 2’ ಚಿತ್ರ; ಎರಡೇ ದಿನದಲ್ಲಿ 100 ಕೋಟಿ ರೂ. ಭರ್ಜರಿ ಕಲೆಕ್ಷನ್‌!

Stree 2 Box Office: ಹಾರರ್-ಕಾಮಿಡಿ ಶೈಲಿಯಲ್ಲಿ ‘ಸ್ತ್ರೀ 2′ ಸಿದ್ಧವಾಗಿದೆ. ಈ ಚಿತ್ರ ಆಗಸ್ಟ್ 15ರಂದು ಬಿಡುಗಡೆಯಾಗಿದೆ. ‘ಸ್ತ್ರೀ 2′ ಜೊತೆಗೆ ಅಕ್ಷಯ್ ಕುಮಾರ್ ಅವರ ‘ಖೇಲ್ ಖೇಲ್ ಮೇ’ ಮತ್ತು ಜಾನ್ ಅಬ್ರಹಾಂ, ಶಾರ್ವರಿ ವಾಘ್ ಅವರ ‘ವೇದ್’ ಕೂಡ ಆಗಸ್ಟ್ 15 ರಂದು ಬಿಡುಗಡೆ ಆಗಿದೆ. ಈ ಪೈಕಿ ‘ಸ್ತ್ರೀ 2’ ಗೆದ್ದಿದೆ.

VISTARANEWS.COM


on

Stree 2 Box Office Day 2 Shraddha Kapoor-Rajkummar Rao Film Creates History
Koo

ಬೆಂಗಳೂರು: ಶ್ರದ್ಧಾ ಕಪೂರ್, ರಾಜ್‌ಕುಮಾರ್ ರಾವ್, ಅಪರಶಕ್ತಿ ಖುರಾನಾ, ಅಭಿಷೇಕ್ ಬ್ಯಾನರ್ಜಿ ಮತ್ತು ಪಂಕಜ್ ತ್ರಿಪಾಠಿ ನಟಿಸಿರುವ ಸ್ಟ್ರೀ 2 ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆದಿದೆ. ಈ ಚಿತ್ರವು ತನ್ನ ಮೊದಲ ದಿನದಲ್ಲಿ ಭಾರತದಲ್ಲಿ 60.3 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಒಟ್ಟು ಕಲೆಕ್ಷನ್ (Stree 2 Box Office) ಸುಮಾರು 76.5 ಕೋಟಿ ರೂ. ಅದರ ಎರಡನೇ ದಿನದಲ್ಲಿ, ಚಿತ್ರ 30 ಕೋಟಿ ರೂ. ಗಳಿಕೆ ಕಂಡಿದೆ. ಸ್ಟ್ರೀ 2 ನ ಒಟ್ಟು ಗಳಿಕೆ 100 ಕೋಟಿ ರೂ ಆಗಿದೆ ವರದಿಯಾಗಿದೆ.

ಹಾರರ್-ಕಾಮಿಡಿ ಶೈಲಿಯಲ್ಲಿ ‘ಸ್ತ್ರೀ 2′ ಸಿದ್ಧವಾಗಿದೆ. ಈ ಚಿತ್ರ ಆಗಸ್ಟ್ 15ರಂದು ಬಿಡುಗಡೆಯಾಗಿದೆ. ‘ಸ್ತ್ರೀ 2′ ಜೊತೆಗೆ ಅಕ್ಷಯ್ ಕುಮಾರ್ ಅವರ ‘ಖೇಲ್ ಖೇಲ್ ಮೇ’ ಮತ್ತು ಜಾನ್ ಅಬ್ರಹಾಂ, ಶಾರ್ವರಿ ವಾಘ್ ಅವರ ‘ವೇದ್’ ಕೂಡ ಆಗಸ್ಟ್ 15 ರಂದು ಬಿಡುಗಡೆ ಆಗಿದೆ. ಈ ಪೈಕಿ ‘ಸ್ತ್ರೀ 2’ ಗೆದ್ದಿದೆ.

ಶ್ರದ್ಧಾ ಕಪೂರ್, ರಾಜ್​ಕುಮಾರ್ ರಾವ್, ಅಭಿಷೇಕ್ ಬ್ಯಾನರ್ಜಿ, ಪಂಕಜ್ ತ್ರಿಪಾಠಿ ‘ಸ್ತ್ರೀ 2 ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಪ್ರೀಮಿಯರ್ ಶೋಗಳಿಂದ 8 ಕೋಟಿ ರೂಪಾಯಿ ಹಾಗೂ ಮೊದಲ ದಿನದ ಗಳಿಕೆಯಿಂದ 46 ಕೋಟಿ ರೂಪಾಯಿ ಸಿಕ್ಕಿತ್ತು. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 54.35 ಕೋಟಿ ರೂಪಾಯಿ ಆಗಿತ್ತು. ಈ ಮೂಲಕ ‘ಕಲ್ಕಿ 2898 ಎಡಿ’ ಚಿತ್ರದ ಮೊದಲ ದಿನದ ಕಲೆಕ್ಷನ್​ನ ಈ ಸಿನಿಮಾ ಹಿಂದಿಕ್ಕಿತ್ತು.

ಇದನ್ನೂ ಓದಿ: Shiva Rajkumar: ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಸೆಟ್ಟೇರಿತು ಶಿವರಾಜ್ ಕುಮಾರ್ 131ನೇ ಸಿನಿಮಾ!

. ಸ್ತ್ರೀ 1 ಸಿನಿಮಾ 2018ರಲ್ಲಿ ಬಿಡುಗಡೆಯಾಯಿತು. ಸ್ತ್ರೀ 1ಚಿತ್ರ ಬಿಡುಗಡೆಯಾದ ಹೊಸ್ತಿಲಲ್ಲಿ ವ್ಯಾಪಕವಾಗಿ ಮೆಚ್ಚುಗೆ ಪಡೆದು, ಭಾರಿ ಕಲೆಕ್ಷನ್‌ ಮಾಡಿತ್ತು. 

ಸ್ತ್ರೀ’ ಸಿನಿಮಾದ ಮುಂದುವರಿದ ಭಾಗವಾಗಿ ‘ಸ್ತ್ರೀ 2’ ಸಿನಿಮಾ ಮೂಡಿ ಬಂದಿದೆ. ಈ ಚಿತ್ರದಲ್ಲಿ ಹಲವು ವಿಶೇಷ ಅತಿಥಿ ಪಾತ್ರಗಳು ಇವೆ. ವರುಣ್ ಧವನ್ ಅವರು ಕೂಡ ಈ ಚಿತ್ರದಲ್ಲಿ ಬಂದು ಹೋಗಿದ್ದಾರೆ. ಈ ಚಿತ್ರದಿಂದ ಬಾಲಿವುಡ್​ಗೆ ಮೊದಲ ದೊಡ್ಡ ಗೆಲುವು ಸಿಕ್ಕಂತೆ ಆಗಿದೆ. ಈ ಸಿನಿಮಾಗೆ ಬುಕ್ ಮೈ ಶೋನಲ್ಲಿ ಒಳ್ಳೆಯ ರೇಟಿಂಗ್ ಸಿಕ್ಕಿದೆ.

Continue Reading

ಪ್ರಮುಖ ಸುದ್ದಿ

70th National Film Awards : ಕನ್ನಡಿಗರಿಗೆ ಹೆಮ್ಮೆ ತಂದ ರಿಷಭ್​ ಶೆಟ್ಟಿ, ಕೆಜಿಎಫ್​​; ಮಲಯಾಳಂನ ‘ಆಟಂ’ ಅತ್ಯುತ್ತಮ ಸಿನೆಮಾ; ಸಂಪೂರ್ಣ ಲಿಸ್ಟ್‌ ಇಲ್ಲಿದೆ

70th National Film Award : ‘ತಿರುಚಿತ್ರಾಂಬಲಂ’ ಚಿತ್ರದ ಅಭಿನಯಕ್ಕಾಗಿ ಬಹುಭಾಷಾ ನಟಿ ನಿತ್ಯಾ ಮೆನನ್ ಹಾಗೂ ಕಚ್ ಎಕ್ಸ್ ಪ್ರೆಸ್ ಚಿತ್ರದ ಅಭಿನಯಕ್ಕಾಗಿ ಮಾನಸಿ ಪರೇಖ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಉಂಚೈ’ ಚಿತ್ರದ ನಿರ್ದೇಶನಕ್ಕಾಗಿ ಸೂರಜ್ ಬರ್ಜಾತ್ಯ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪೊನ್ನಿಯಿನ್ ಸೆಲ್ವನ್ 1, ಕೆಜಿಎಫ್ 2, ಬ್ರಹ್ಮಾಸ್ತ್ರ ಮತ್ತು ಅಪರಾಜಿತೋ ಚಿತ್ರಗಳು ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಗೆದ್ದ ಇತರ ಚಿತ್ರಗಳಾಗಿವೆ.

VISTARANEWS.COM


on

70th National Film Award
Koo

ಬೆಂಗಳೂರು: 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2024 ಶುಕ್ರವಾರ ಘೋಷಣೆಯಾಗಿದ್ದು (70th National Film Awards) ಮಲಯಾಳಂ ಚಿತ್ರ ‘ಆಟಂ ಅತ್ಯುತ್ತಮ ಚಲನಚಿತ್ರವಾಗಿ ಹೊರಹೊಮ್ಮಿದೆ. ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಶುಕ್ರವಾರ ಅತ್ಯುತ್ತಮ ಸಿನಿಮಾಗಳು ಹಾಗೂ ನಟ, ನಟಿಯರ ಹೆಸರನ್ನು ಪ್ರಕಟಿಸಲಾಯಿತು. ‘ಕಾಂತಾರಾ’ ಚಿತ್ರದ ಅಭಿನಯಕ್ಕಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿರುವುದು ಕನ್ನಡಿಗರ ಹಾಗೂ ಸ್ಯಾಂಡಲ್​ವುಡ್​ ಪಾಲಿಗೆ ಹೆಮ್ಮೆಯ ವಿಚಾರವಾಗಿದೆ. ಇದೇ ವೇಳೆ ಕೆಜಿಎಫ್​ ಚಾಪ್ಟರ್-2 ಕೂಡ ಅತ್ಯುತ್ತಮ ಆ್ಯಕ್ಷನ್​ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ.

‘ತಿರುಚಿತ್ರಾಂಬಲಂ’ ಚಿತ್ರದ ಅಭಿನಯಕ್ಕಾಗಿ ಬಹುಭಾಷಾ ನಟಿ ನಿತ್ಯಾ ಮೆನನ್ ಹಾಗೂ ಕಚ್ ಎಕ್ಸ್ ಪ್ರೆಸ್ ಚಿತ್ರದ ಅಭಿನಯಕ್ಕಾಗಿ ಮಾನಸಿ ಪರೇಖ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಉಂಚೈ’ ಚಿತ್ರದ ನಿರ್ದೇಶನಕ್ಕಾಗಿ ಸೂರಜ್ ಬರ್ಜಾತ್ಯ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಪೊನ್ನಿಯಿನ್ ಸೆಲ್ವನ್ 1’, ‘ಕೆಜಿಎಫ್ 2’, ‘ಬ್ರಹ್ಮಾಸ್ತ್ರ ‘ಮತ್ತು ‘ಅಪರಾಜಿತೋ’ ಚಿತ್ರಗಳು ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಗೆದ್ದ ಇತರ ಚಿತ್ರಗಳಾಗಿವೆ.

ರಾಹುಲ್ ರಾವೈಲ್, ನೀಲಾ ಮಾಧವ್ ಪಾಂಡಾ ಹಾಗೂ ಗಂಗಾಧರ್ ಮೊದಲಿಯಾರ್​ ಪ್ರಶಸ್ತಿಗಳನ್ನು ಪ್ರಕಟಿಸಿದ್ದಾರೆ.

1954 ರಲ್ಲಿ ಮೊದಲ ಬಾರಿಗೆ ನೀಡಲು ಅರಂಭಿಸಿದ ಈ ಪ್ರಶಸ್ತಿ 70ನೇ ಆವೃತ್ತಿ ಇದಾಗಿದೆ. ಆ ವರ್ಷಗಳಲ್ಲಿ, ವಿವಿಧ ಪ್ರಾದೇಶಿಕ ಭಾಷೆಗಳ ಅತ್ಯುತ್ತಮ ಚಲನಚಿತ್ರಗಳನ್ನು ಮಾತ್ರ ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿತ್ತು. . ಚಲನಚಿತ್ರಗಳಲ್ಲಿ ಕೆಲಸ ಮಾಡುವ ನಟರು ಮತ್ತು ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ಮೊದಲ ಬಾರಿಗೆ 1967 ರಲ್ಲಿ ನೀಡಲಾಯಿತು. ‘ರಾತ್ ಔರ್ ದಿನ್’ ಚಿತ್ರದಲ್ಲಿನ ಅಭಿನಯಕ್ಕಾಗಿ ನರ್ಗಿಸ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಮೊದಲ ನಟಿಯಾಗಿದ್ದಾರೆ. ಅದೇ ವರ್ಷ ‘ಆಂಟನಿ ಫೈರಿಂಗ್’ ಮತ್ತು ‘ಚಿರಿಯಾಖಾನಾ’ ಚಿತ್ರಗಳಿಗಾಗಿ ಉತ್ತಮ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದರು.

ಇದನ್ನೂ ಓದಿ: 70th National Film Awards: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ರಿಷಬ್‌ ಶೆಟ್ಟಿ ಅತ್ಯುತ್ತಮ ನಟ, ಕೆಜಿಎಫ್‌ 2 ಅತ್ಯುತ್ತಮ ಕನ್ನಡ ಚಿತ್ರ

2023 ರಲ್ಲಿ, ಪುಷ್ಪಾ: ದಿ ರೈಸ್ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದರೆ, ‘ಗಂಗೂಬಾಯಿ ಕಾಥಿಯಾವಾಡಿ’ ಮತ್ತು ‘ಮಿಮಿ’ ಚಿತ್ರಕ್ಕಾಗಿ ಆಲಿಯಾ ಭಟ್ ಮತ್ತು ಕೃತಿ ಸನೋನ್ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದರು. ರಾಕೆಟ್ರಿ: ದಿ ನಂಬಿ ಎಫೆಕ್ಟ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

2024 ರ ರಾಷ್ಟ್ರೀಯ ಪ್ರಶಸ್ತಿ ವಿಜೇತರ ಪಟ್ಟಿ ಈ ಕೆಳಗಿನಂತಿದೆ

  • ಅತ್ಯುತ್ತಮ ಚಲನಚಿತ್ರ: ಆಟಂ (ಮಲಯಾಳಂ)
  • ಅತ್ಯುತ್ತಮ ಜನಪ್ರಿಯ ಚಿತ್ರ: ಕಾಂತಾರ (ಕನ್ನಡ)
  • ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರಾ)
  • ಅತ್ಯುತ್ತಮ ನಟಿ – ನಿತ್ಯಾ ಮೆನನ್ ಮತ್ತು ಮಾನಸಿ ಪರೇಖ್
  • ಅತ್ಯುತ್ತಮ ನಿರ್ದೇಶಕ – ಸೂರಜ್ ಬರ್ಜಾತ್ಯ
  • ಅತ್ಯುತ್ತಮ ಪೋಷಕ ನಟಿ – ನೀನಾ ಗುಪ್ತಾ
  • ಅತ್ಯುತ್ತಮ ಪೋಷಕ ನಟ – ಪವನ್ ಮಲ್ಹೋತ್ರಾ
  • ಅತ್ಯುತ್ತಮ ಚೊಚ್ಚಲ ಚಿತ್ರ- ಫೌಜಾ, ಪ್ರಮೋದ್ ಕುಮಾರ್
  • ಅತ್ಯುತ್ತಮ ತೆಲುಗು ಚಿತ್ರ – ಕಾರ್ತಿಕೇಯ 2
  • ಅತ್ಯುತ್ತಮ ತಮಿಳು ಚಿತ್ರ – ಪೊನ್ನಿಯಿನ್ ಸೆಲ್ವನ್ -ಭಾಗ 1
  • ಅತ್ಯುತ್ತಮ ಪಂಜಾಬಿ ಚಿತ್ರ – ಬಾಘಿ ದಿ ಧೀ
  • ಅತ್ಯುತ್ತಮ ಒಡಿಯಾ ಚಿತ್ರ – ದಮನ್
  • ಅತ್ಯುತ್ತಮ ಮಲಯಾಳಂ ಚಿತ್ರ – ಸೌದಿ ವೇಲಕ್ಕ ಸಿಸಿ.225/2009
  • ಅತ್ಯುತ್ತಮ ಮರಾಠಿ ಚಿತ್ರ – ವಾಲ್ವಿ
  • ಅತ್ಯುತ್ತಮ ಕನ್ನಡ ಚಿತ್ರ – ಕೆಜಿಎಫ್: ಚಾಪ್ಟರ್ 2
  • ಅತ್ಯುತ್ತಮ ಹಿಂದಿ ಚಿತ್ರ – ಗುಲ್​ಮೊಹರ್​
  • ವಿಶೇಷ ಪ್ರಶಸ್ತಿ ಗುಲ್ಮೋಹರ್ ನಲ್ಲಿ ಮನೋಜ್ ಬಾಜಪೇಯಿ ಮತ್ತು ಕಾಲಿಖಾನ್​​ನಲ್ಲಿ ಸಂಜೋಯ್ ಸಲಿಲ್ ಚೌಧರಿ
  • ಅತ್ಯುತ್ತಮ ಆಕ್ಷನ್ ನಿರ್ದೇಶನ – ಕೆಜಿಎಫ್: ಚಾಪ್ಟರ್ 2
  • ಅತ್ಯುತ್ತಮ ನೃತ್ಯ ಸಂಯೋಜನೆ – ತಿರುಚಿತ್ರಾಂಬಲಂ
  • ಅತ್ಯುತ್ತಮ ಸಾಹಿತ್ಯ – ಫೌಜಾ
  • ಅತ್ಯುತ್ತಮ ಸಂಗೀತ ನಿರ್ದೇಶಕ – ಪ್ರೀತಮ್ (ಹಾಡುಗಳು), ಎ.ಆರ್.ರೆಹಮಾನ್ (ಹಿನ್ನೆಲೆ ಸಂಗೀತ)
  • ಅತ್ಯುತ್ತಮ ಮೇಕಪ್ – ಅಪರಾಜಿತೋ
  • ಅತ್ಯುತ್ತಮ ಕಾಸ್ಟ್ಯೂಮ್ – ಕಛ್ ಎಕ್ಸ್ ಪ್ರೆಸ್
  • ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ – ಅಪರಾಜಿತೋ
  • ಅತ್ಯುತ್ತಮ ಸಂಕಲನ – ಆಟಂ
  • ಅತ್ಯುತ್ತಮ ಸೌಂಡ್ ಡಿಸೈನ್ – ಪೊನ್ನಿಯಿನ್ ಸೆಲ್ವನ್ -ಪಾರ್ಟ್ 1
  • ಅತ್ಯುತ್ತಮ ಚಿತ್ರಕಥೆ – ಆಟಂ
  • ಅತ್ಯುತ್ತಮ ಸಂಭಾಷಣೆ – ಗುಲ್​ಮೊಹರ್​
  • ಅತ್ಯುತ್ತಮ ಛಾಯಾಗ್ರಹಣ – ಪೊನ್ನಿಯಿನ್ ಸೆಲ್ವನ್ -ಭಾಗ 1
  • ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ – ಸೌದಿ ವೇಲಕ್ಕ ಸಿಸಿ.225/2009
  • ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ – ಬ್ರಹ್ಮಾಸ್ತ್ರ
Continue Reading

Latest

Kolkata Doctor Murder Case: ಕೋಲ್ಕತ್ತಾ ವೈದ್ಯೆಯ ಅತ್ಯಾಚಾರಿಗೆ ಮರಣದಂಡನೆ ವಿಧಿಸುವಂತೆ ಬಾಲಿವುಡ್ ತಾರೆಯರ ಆಗ್ರಹ

Kolkata Doctor Murder Case: ಕೋಲ್ಕತ್ತಾದ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಇಡೀ ದೇಶದ ಜನರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ತಾರೆಯರು ಸೋಶಿಯಲ್ ಮೀಡಿಯಾದ ಮೂಲಕ ತಮ್ಮ ಬೆಂಬಲ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ಹೃತಿಕ್ ರೋಶನ್, ಜೆನಿಲಿಯಾ ದೇಶ್‌ಮುಖ್‌, ಆಯುಷ್ಮಾನ್ ಖುರಾನಾ, ರಿಚಾ ಚಡ್ಡಾ, ನವ್ಯಾ ನವೇಲಿ ನಂದಾ, ಜೋಯಾ ಅಖ್ತರ್ ಮುಂತಾದ ನಟನಟಿಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Kolkata Doctor Murder Case
Koo


ಕೋಲ್ಕತಾ: ಕೋಲ್ಕತಾದ ಆರ್ ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ನೀಡುತ್ತಿದ್ದ ವೈದ್ಯೆಯ (Kolkata Doctor Murder Case) ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ದೇಶದ ಜನರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ತಾರೆಯರು ಸೋಶಿಯಲ್ ಮೀಡಿಯಾದ ಮೂಲಕ ತಮ್ಮ ಬೆಂಬಲ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Kolkata Doctor Murder Case
Kolkata Doctor Murder Case

ಬಾಲಿವುಡ್ ಸೆಲೆಬ್ರಿಟಿಗಳಾದ ಜೆನಿಲಿಯಾ ದೇಶ್‌ಮುಖ್‌, ಆಯುಷ್ಮಾನ್ ಖುರಾನಾ, ರಿಚಾ ಚಡ್ಡಾ, ನವ್ಯಾ ನವೇಲಿ ನಂದಾ, ಜೋಯಾ ಅಖ್ತರ್ ಮತ್ತು ಇತರರು ದೇಶದಲ್ಲಿ ಮಹಿಳೆಯರ ಸುರಕ್ಷತೆಯ ಕೊರತೆಯ ವಿರುದ್ಧ ತಮ್ಮ ಆಕ್ರೋಶವನ್ನು ಕಟುವಾದ ಪದಗಳ ಮೂಲಕ ಹೊರಹಾಕಿದ್ದಾರೆ ಮತ್ತು ಅಪರಾಧಿಗಳಿಗೆ ಮರಣದಂಡನೆ ವಿಧಿಸುವಂತೆ ಒತ್ತಾಯಿಸಿದ್ದಾರೆ.

ಕವಿತೆ ರಚಿಸುವ ಕಲೆ ಹೊಂದಿರುವಂತಹ ನಟ ಆಯುಷ್ಮಾನ್ ಖುರಾನಾ ಅವರು ಕಾಶ್ ಮೈ ಭಿ ಲಡ್ಕಾ ಹೋತಿ (ನಾನು ಹುಡುಗನಾಗಬೇಕೆಂದು ಬಯಸುತ್ತೇನೆ) ಎಂಬ ಭಾವನಾತ್ಮಕ ಕವಿತೆಯನ್ನು ಬರೆದು ಆ ಕವಿತೆಯನ್ನು ಹೇಳುತ್ತಾ ವಿಡಿಯೊ ಮಾಡಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆ ಕವಿತೆಯಲ್ಲಿ ಅವರು ನಾನು ಹುಡುಗನಾಗಬೇಕೆಂದು ಬಯಸುತ್ತೇನೆ. ಯಾಕೆಂದರೆ ನಾನು ಬಾಗಿಲನ್ನು ಲಾಕ್ ಮಾಡದೆ ಮಲಗಬಹುದು. ನಿರಾತಂಕವಾಗಿ ಎಲ್ಲಿ ಬೇಕಾದರೂ ಓಡಾಡಬಹುದು, ಹಾರಾಡಬಹುದು, ರಾತ್ರಿಯಿಡೀ ಸ್ನೇಹಿತರೊಂದಿಗೆ ತಿರುಗಾಡಬಹುದು. ಆದರೆ ಈ ಸ್ವಾತಂತ್ರ್ಯ ಮಹಿಳೆಯರಿಗೆ ಇಲ್ಲವಲ್ಲ ಎಂಬುದನ್ನು ತಮ್ಮ ಕವಿತೆಯ ಮೂಲಕ ಮಾರ್ಮಿಕವಾಗಿ ತಿಳಿಸಿದ್ದಾರೆ.

Kolkata Doctor Murder Case
Kolkata Doctor Murder Case

ಈ ಪ್ರಕರಣದ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟಿ ಕೃತಿ “ನಾವು ನಮ್ಮ 78ನೇ ಸ್ವಾತಂತ್ರ್ಯ ವರ್ಷವನ್ನು ಆಚರಿಸುತ್ತಿರುವಾಗ ಜಾಗತಿಕವಾಗಿ ಒಂದು ದೇಶವಾಗಿ ನಾವು ಎಷ್ಟು ದೂರ ಬಂದಿದ್ದೇವೆ ಎಂಬುದರ ಬಗ್ಗೆ ಹೆಮ್ಮೆಪಡುತ್ತೇವೆ. ಆದರೆ ತಮ್ಮ ದೇಶದಲ್ಲಿ ಮಹಿಳೆಯರು ಇನ್ನೂ ಸುರಕ್ಷಿತವಾಗಿಲ್ಲ ಎಂಬ ಭಯಾನಕ ವಾಸ್ತವವನ್ನು ನೋಡಿದಾಗ ನನಗೆ ಬೇಸರವಾಗುತ್ತದೆ. ಈ ಅಮಾನವೀಯ ಕೃತ್ಯಗಳನ್ನು ಮಾಡುವ ಜನರಿಗೆ ಯಾವುದೇ ಭಯವಿರುವುದಿಲ್ಲ. ಆದರೆ ಇಂದಿಗೂ, ಇದರಲ್ಲಿ ಬಲಿಪಶುವಾಗಿರುವುದಕ್ಕೆ ಮಹಿಳೆಯನ್ನು ದೂಷಿಸಲಾಗುತ್ತಿದೆ ಎಂದು ವಿಷಾದಿಸಿದ್ದಾರೆ.

ಈ ಪ್ರಕರಣದಲ್ಲಿ ಭಾಗಿಯಾದವರಿಗೆ ಮರಣದಂಡನೆ ವಿಧಿಸಬೇಕೆಂದು ನಟಿ ಜೆನಿಲಿಯಾ ದೇಶ್‌ಮುಖ್‌ ಆಗ್ರಹಿಸಿದ್ದಾರೆ. ತಮ್ಮ ಎಕ್ಸ್ (ಹಿಂದೆ ಟ್ವಿಟರ್) ಖಾತೆಯಲ್ಲಿ ಅವರು, “ರಾಕ್ಷಸರನ್ನು ಗಲ್ಲಿಗೇರಿಸಬೇಕಾಗಿದೆ. ಬಲಿಪಶು ಅನುಭವಿಸಿದ್ದನ್ನು ಓದಿದಾಗ ನನ್ನ ರಕ್ತ ಕುದಿಯುತ್ತದೆ. ಸೆಮಿನಾರ್ ಹಾಲ್‍ನಲ್ಲಿ ಕರ್ತವ್ಯದಲ್ಲಿದ್ದ ಒಬ್ಬ ಮಹಿಳೆ, ಇಂತಹ ಘೋರ ಭಯಾನಕತೆಯನ್ನು ಎದುರಿಸಿದಳು. ಅವಳ ಕುಟುಂಬದವರು ಮತ್ತು ಪ್ರೀತಿಪಾತ್ರರು ಈ ದುರಂತವನ್ನು ಹೇಗೆ ಎದುರಿಸುತ್ತಿದ್ದಾರೆಂದು ಊಹಿಸಲು ಸಹ ಸಾಧ್ಯವಿಲ್ಲʼʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಟ ಹೃತಿಕ್ ರೋಷನ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ತೀವ್ರ ಕೋಪ ಮತ್ತು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಎಕ್ಸ್ ಖಾತೆಯಲ್ಲಿ, ನಾವೆಲ್ಲರೂ ಸಮಾನವಾಗಿ ಸುರಕ್ಷಿತರೆಂದು ಭಾವಿಸುವ ಸಮಾಜವನ್ನು ನಿರ್ಮಿಸಬೇಕು. ಆದರೆ ಅದಕ್ಕೆ ಹಲವು ವರ್ಷಗಳು ಬೇಕಾಗುತ್ತದೆ. ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿದರೆ ಮುಂದಿನ ತಲೆಮಾರು ಉತ್ತಮವಾಗಿರುತ್ತದೆ. ಇದೀಗ ಇಂತಹ ದೌರ್ಜನ್ಯಗಳಿಗೆ ಕಠಿಣ ಕ್ರಮ ಕೈಗೊಳ್ಳುವುದು ನ್ಯಾಯವಾಗಿದೆ. ಮತ್ತು ಅದನ್ನು ಮಾಡಲು ಇರುವ ಏಕೈಕ ಮಾರ್ಗವೆಂದರೆ ಅಂತಹ ಅಪರಾಧಿಗಳಿಗೆ ಹಾಡುಹಗಲಿನಲ್ಲೇ ಕಠಿಣ ಶಿಕ್ಷೆ ನೀಡುವುದು ಎಂದು ತಿಳಿಸಿದ್ದಾರೆ ಮತ್ತು ತಾನು ಸಂತ್ರಸ್ತೆಗೆ ನ್ಯಾಯ ದೊರಕಿಸಲು ಆಕೆಯ ಕುಟುಂಬದೊಂದಿಗೆ ನಿಲ್ಲುತ್ತೇನೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಕೋಲ್ಕತ್ತಾದಲ್ಲಿ ತರಬೇತಿ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯನ್ನು ನಟಿ ಕರೀನಾ ಕಪೂರ್ ಖಾನ್ ಕೂಡ ಖಂಡಿಸಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಕರೀನಾ, “12 ವರ್ಷಗಳ ನಂತರ; ಅದೇ ಕಥೆ; ಅದೇ ಪ್ರತಿಭಟನೆ. ಆದರೆ ನಾವು ಇನ್ನೂ ಬದಲಾವಣೆಗಾಗಿ ಕಾಯುತ್ತಿದ್ದೇವೆʼʼ ಎಂದಿದ್ದಾರೆ.

ಆಘಾತಕಾರಿ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ನಟಿ ಪ್ರೀತಿ ಜಿಂಟಾ, ಮಹಿಳೆಯರ ಸುರಕ್ಷತೆಗೆ ಸರ್ಕಾರವು ಆದ್ಯತೆ ನೀಡಬೇಕು ಎಂದು ತಿಳಿಸುವ ಮೂಲಕ ಅವರು ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅಲ್ಲದೇ ಅತ್ಯಾಚಾರ ಮತ್ತು ಹಿಂಸಾತ್ಮಕ ಲೈಂಗಿಕ ಅಪರಾಧದ ಸಂತ್ರಸ್ತರ ಹೆಸರುಗಳು ಮತ್ತು ಮುಖಗಳು ಮಾಧ್ಯಮಗಳಲ್ಲಿ ಸೋರಿಕೆಯಾಗಿರುವಾಗ, ಅತ್ಯಾಚಾರಿಯ ಮುಖವನ್ನು ಮರೆಮಾಚುವುದನ್ನು ನೋಡಿದರೆ ಅಸಹ್ಯವಾಗುತ್ತದೆ. ಇಂತಹ ಘೋರ ಕೃತ್ಯಗಳಿಗೆ ಬೇಗ ನ್ಯಾಯ ಸಿಗುವುದಿಲ್ಲ, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವುದಿಲ್ಲ. ಹಾಗಾಗಿ ಅನ್ಯಾಯಕ್ಕೊಳಗಾದ ಪ್ರತಿಯೊಬ್ಬ ಹೆಣ್ಣುಮಗಳ ಬಗ್ಗೆ ತಾನು ವಿಷಾದ ವ್ಯಕ್ತಪಡಿಸುತ್ತೇನೆ. ಕ್ಷಮಿಸಿ ಎಂದು ಅವರು ಬರೆದಿದ್ದಾರೆ

ಇದನ್ನೂ ಓದಿ:ಲೈಂಗಿಕ ಕಿರುಕುಳ ನೀಡಿದವನನ್ನು ನಡು ರಸ್ತೆಯಲ್ಲಿ ಥಳಿಸಿದ ಅಕ್ಕತಂಗಿ; ವಿಡಿಯೊ ವೈರಲ್

ಆಗಸ್ಟ್ 9ರಂದು ಕೋಲ್ಕತಾದ ಆರ್‌ ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‍ನಲ್ಲಿ ಸ್ನಾತಕೋತ್ತರ ತರಬೇತಿ ವೈದ್ಯೆಯೊಬ್ಬರು ಶವವಾಗಿ ಪತ್ತೆಯಾಗಿದ್ದರು. ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಕುಟುಂಬ ಆರೋಪಿಸಿದೆ. ಸ್ನಾತಕೋತ್ತರ ತರಬೇತಿ (ಪಿಜಿಟಿ) ವೈದ್ಯೆಯ ಕೊಲೆ ಮತ್ತು ಲೈಂಗಿಕ ದೌರ್ಜನ್ಯದ ವಿರುದ್ಧ ದೇಶಾದ್ಯಂತ ವೈದ್ಯರು ಪ್ರತಿಭಟನೆ ಮುಂದುವರಿಸಿದ್ದು, ಸಂತ್ರಸ್ತೆಗೆ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

Continue Reading
Advertisement
Kolkata Doctor Murder Case
ದೇಶ26 mins ago

Kolkata Doctor murder case: ಟ್ರೈನಿ ವೈದ್ಯೆ ಕೊಲೆ ಪ್ರಕರಣ; ಸ್ವಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌

Karnataka weather Forecast
ಮಳೆ41 mins ago

Karnataka Weather : ಭಾರಿ ಮಳೆ ಎಫೆಕ್ಟ್‌; ಹಳ್ಳ ದಾಟಲು ಹೋಗಿ ಕೊಚ್ಚಿ ಹೋದ 20ಕ್ಕೂ ಹೆಚ್ಚು ಕುರಿಗಳು

U19 Women’s T20 World Cup
ಕ್ರೀಡೆ44 mins ago

U-19 Women’s T20 World Cup; ಅಂಡರ್-19 ಮಹಿಳಾ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ವಿಂಡೀಸ್​ ಮೊದಲ ಎದುರಾಳಿ

Prabhas-Hanu Iman Esmail Trending
ಟಾಲಿವುಡ್1 hour ago

Actor Prabhas: ಪ್ರಭಾಸ್ ಜತೆ ರೀಲ್ಸ್ ರಾಣಿ ಇಮಾನ್ ಇಸ್ಮಾಯಿಲ್ ರೊಮ್ಯಾನ್ಸ್‌!

Indian origin family killed
ವಿದೇಶ1 hour ago

Indian origin family killed: ಟೆಕ್ಸಾಸ್‌ನಲ್ಲಿ ಭೀಕರ ಅಪಘಾತ; ಭಾರತೀಯ ಮೂಲದ ದಂಪತಿ, ಮಗಳು ದುರ್ಮರಣ

CM Siddaramaiah
ಕರ್ನಾಟಕ1 hour ago

CM Siddaramaiah: ಪ್ರಾಸಿಕ್ಯೂಷನ್‌ ಸಂಕಷ್ಟ; ಸಿಎಂ ನಾಳಿನ ಬಳ್ಳಾರಿ, ಮಂತ್ರಾಲಯ ಪ್ರವಾಸ ರದ್ದು

Use of ORS be prepared at home for dehydration
ಆರೋಗ್ಯ2 hours ago

Use of ORS: ಡಿಹೈಡ್ರೇಶನ್‌ ಆದಾಗ ಬಳಸುವ ಒಆರ್‌ಎಸ್‌ ಮನೆಯಲ್ಲೇ ಸಿದ್ಧಪಡಿಸಿಕೊಳ್ಳಬಹುದಾ?

Gas Authority of India Limited
ಉದ್ಯೋಗ2 hours ago

Job Alert: ಗ್ಯಾಸ್‌ ಅಥಾರಟಿ ಆಫ್‌ ಇಂಡಿಯಾ ಲಿಮಿಟೆಡ್‌ನಲ್ಲಿದೆ ಉದ್ಯೋಗಾವಕಾಶ; 391 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

Manipur Bomb Blast
ದೇಶ2 hours ago

Manipur Bomb Blast: ಮಾಜಿ ಶಾಸಕನ ಮನೆಯಲ್ಲಿ ಬಾಂಬ್‌ ಬ್ಲಾಸ್ಟ್‌; ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ

Viral Photo
ಕ್ರಿಕೆಟ್2 hours ago

Viral Photo: ಕ್ರಿಕೆಟ್​ ಬಿಟ್ಟು ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಆರಂಭಿಸಿದರೇ ಪೃಥ್ವಿ ಶಾ?

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌