Katrina Kaif: ಜುಕರ್‌ಬರ್ಗ್, ಮೋದಿಯನ್ನು ಹಿಂದಿಕ್ಕಿದ ಕತ್ರಿನಾ; ವಾಟ್ಸ್ಆ್ಯಪ್ ಚಾನೆಲ್‌ನಲ್ಲಿ ಫಾಲೋವರ್ಸ್ ಎಷ್ಟು? Yashaswi Devadiga 1 ವರ್ಷ ago ಬಾಲಿವುಡ್ ನಟಿ ಕತ್ರಿನಾ ಕೈಫ್ (Katrina Kaif) ಇದೀಗ ವಾಟ್ಸ್ಆ್ಯಪ್ ಚಾನೆಲ್ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ. ವಾಟ್ಸ್ ಆ್ಯಪ್ ಚಾನೆಲ್‌ಗಳಲ್ಲಿ ಅತಿ ಹೆಚ್ಚು ಜನರು ಫಾಲೋ ಮಾಡುತ್ತಿರುವ ಸೆಲೆಬ್ರಿಟಿಯೆಂದು ನಟಿ ಗುರುತಿಸಿಕೊಂಡಿದ್ದಾರೆ. ಇವರ ಅನುಯಾಯಿಗಳ ಸಂಖ್ಯೆ ಪ್ರಧಾನಿ ಮೋದಿ, ಮಾರ್ಕ್ ಜುಕರ್‌ಬರ್ಗ್‌ಗಿಂತಲೂ ( Mark Zuckerberg) ಹೆಚ್ಚಿದೆ. ವಾಟ್ಸ್ ಆ್ಯಪ್ ಚಾನೆಲ್‌ಗಳಲ್ಲಿ ಕೇವಲ ಎರಡು ವಾರಗಳಲ್ಲಿ 1.46 ಕೋಟಿ ಅನುಯಾಯಿಗಳೊಂದಿಗೆ ಕತ್ರಿನಾ ಕೈಫ್ ಟಾಪ್ ಸ್ಥಾನದಲ್ಲಿದ್ದಾರೆ. ವಾಟ್ಸ್ ಆ್ಯಪ್ ಅಪ್ಲಿಕೇಶನ್‌ನಲ್ಲಿ ವಾಟ್ಸ್ ಆ್ಯಪ್ ಫೀಚರ್ ಇತ್ತೀಚೆಗೆ ಆರಂಭಿಸಲಾಗಿದೆ. ಜನಸಾಮಾನ್ಯರು, ಸೆಲೆಬ್ರಿಟಿಗಳು ಮತ್ತು ಸಂಸ್ಥೆಗಳು ವಾಟ್ಸ್ ಆ್ಯಪ್ ಚಾನೆಲ್ ಮೂಲಕ ಫೋಟೊ, ವಿಡಿಯೊ ಇನ್ನಿತರ ಮಾಹಿತಿಯನ್ನು ಕಳುಹಿಸಬಹುದು. ಇದನ್ನೂ ಓದಿ: Katrina Kaif: ಅಮೆರಿಕದಲ್ಲಿ ಜಾಲಿ ಮೂಡ್‌ನಲ್ಲಿ ಕತ್ರಿನಾ ದಂಪತಿ; ವಿಕ್ಕಿ ಈಸ್ ಲಕ್ಕಿ ಎನ್ನುತ್ತಿದ್ದಾರೆ ನೆಟ್ಟಿಗರು ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ 9.6 ಮಿಲಿಯನ್ (96 ಲಕ್ಷ) ಫಾಲೋವರ್ಸ್‌ನೊಂದಿಗೆ ಕತ್ರಿನಾ ನಂತರದ ಸ್ಥಾನದಲ್ಲಿದ್ದರೆ, ಬಾಲಿವುಡ್ ನಟ ಅಕ್ಷಯ್ ಕುಮಾರ್ 8.3 ಮಿಲಿಯನ್‌ನೊಂದಿಗೆ (83 ಲಕ್ಷ) 4 ನೇ ಸ್ಥಾನದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು 7.1 ಮಿಲಿಯನ್ (71 ಲಕ್ಷ) ಫಾಲೋವರ್ಸ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಹೆಚ್ಚಿನ ಸಂಖ್ಯೆಯ ಅನುಯಾಯಿಗಳನ್ನು ಹೊಂದಿರುವ ಇತರ ಸೆಲೆಬ್ರಿಟಿಗಳೆಂದರೆ ಒಲಿವಿಯಾ ರೋಡ್ರಿಗೋ (olivia rodrigo), ದಿಲ್ಜಿತ್ ದೋಸಾಂಜ್ (diljit dosanjh), ಸನ್ನಿ ಲಿಯೋನ್ ಮತ್ತು ಮೋಹನ್ ಲಾಲ್ ಇನ್ನಿತರರು ಇದ್ದಾರೆ.