ಬೆಂಗಳೂರು: ಇಂದು ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ (Madhuri Dixit) ಅವರಿಗೆ 57ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಅವರ ಪತಿ ಡಾ ಶ್ರೀರಾಮ್ ನೆನೆ, ನಟಿ ಕಾಜೋಲ್ ಮತ್ತು ಚಲನಚಿತ್ರ ನಿರ್ಮಾಪಕಿ ಫರಾ ಖಾನ್ ಕುಂದರ್ ಸೇರಿದಂತೆ ಅನೇಕ ಸಿನಿ ಗಣ್ಯರು ಹಾಗೂ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ವಿಶ್ ಮಾಡಿದ್ದಾರೆ.
ಡಾ ಶ್ರೀರಾಮ್ ನೆನೆ ಅವರು ಪತ್ನಿ ಮಾಧುರಿ ಜತೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ‘ಹ್ಯಾಪಿ ಬರ್ತ್‌ಡೇ ಲವ್’ ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ʻʻಪದಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದ ರೀತಿಯಲ್ಲಿ ನೀವು ನಮ್ಮ ಜೀವನವನ್ನು ಬೆಳಗಿಸುತ್ತಿದ್ದೀರಿʼʼಎಂದು ಶ್ರೀರಾಮ್ ನೆನೆ ಪೋಸ್ಟ್ ಶೇರ್ ಮಾಡಿದ್ದಾರೆ. ಮಾಧುರಿಯೊಂದಿಗೆ ವಿಶೇಷ ಬಾಂಧವ್ಯವನ್ನು ಹಂಚಿಕೊಂಡಿರುವ ಕಾಜೋಲ್, ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ʻʻಡ್ಯಾನ್ಸಿಂಗ್ ಕ್ವೀನ್‌ಗೆ ಜನ್ಮದಿನದ ಶುಭಾಶಯಗಳುʼʼಎಂದು ಕಾಜೋಲ್ ಟ್ವೀಟ್ ಮಾಡಿದ್ದಾರೆ.
ಫರಾ ಖಾನ್ ಕುಂದರ್ ಮಾಧುರಿ ಮತ್ತು ಅವರ ಪತಿಯೊಂದಿಗೆ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. “ಜನ್ಮದಿನದ ಶುಭಾಶಯಗಳು ಪ್ರಿಯ ಮಾಧುರಿʼʼಎಂದು ಬರೆದುಕೊಂಡಿದ್ದಾರೆ.
ದಿಲ್ ತೋ ಪಾಗಲ್ ಹೈʼ ಮತ್ತು ʻದೇವದಾಸ್ʼನಲ್ಲಿನ ಅವರ ಅಭಿನಯಕ್ಕೆ ಮನಸೋತದವರೇ ಇಲ್ಲ. ಮಾಧುರಿ ಭಾರತೀಯ ಚಿತ್ರರಂಗದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಮನರಂಜನಾ ಉದ್ಯಮಕ್ಕೆ ಅವರ ಕೊಡುಗೆಗಳು ಅಪಾರ. ಅವರ ನಟನೆ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದೆ.
ಇದನ್ನೂ ಓದಿ: Madhuri Dixit: ಲೈಂಗಿಕ ಕಿರುಕುಳ ದೃಶ್ಯದಲ್ಲಿ ನಟಿಸಲಾರೆ ಎಂದು ಗೋಳೋ ಎಂದು ಅತ್ತಿದ್ದ ಮಾಧುರಿ ದೀಕ್ಷಿತ್!
ಮಾಧುರಿ ದೀಕ್ಷಿತ್ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ:
- – ಮಾಧುರಿ ದೀಕ್ಷಿತ್ ಅವರ ಮೂಲ ಹೆಸರು ಮಾಧುರಿ ಶಂಕರ್ ದೀಕ್ಷಿತ್.
- – ಮರಾಠ ಕುಟುಂಬದಲ್ಲಿ ಜನಿಸಿದರು.
- – ಮಾಧುರಿ ಅವರ ತಂದೆ ಶಂಕರ್ ದೀಕ್ಷಿತ್ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರು.
- – ತಾಯಿ ಸ್ನೇಹಲತಾ ದೀಕ್ಷಿತ್ ಗೃಹಿಣಿಯಾಗಿದ್ದರು. ಕೆಲವು ದಿನಗಳ ಹಿಂದಷ್ಟೇ ಇಹಲೋಕ ತ್ಯಜಿಸಿದ್ದಾರೆ.
- – ಮಾಧುರಿ ದೀಕ್ಷಿತ್ ಅವರಿಗೆ ಇಬ್ಬರು ಅಕ್ಕಂದಿರು. ರೂಪಾ ಮತ್ತು ಭಾರತಿ.. ಒಬ್ಬ ಕಿರಿಯ ಸಹೋದರ ಅಜಿತ್ ಇದ್ದಾರೆ.
- – ಅವರು ಮುಂಬೈನ ಡಿವೈನ್ ಚೈಲ್ಡ್ ಹೈಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದರು. ಅವರು ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಮೈಕ್ರೊಬಯಾಲಜಿ ಶಿಕ್ಷಣವನ್ನು ಪಡೆದರು.
- – ನಟನೆ ವೃತ್ತಿಗೆ ಹೋಗಲು ನಿರ್ಧರಿಸುವ ಮೊದಲು ಮೈಕ್ರೋಬಯಾಲಜಿಸ್ಟ್ ಆಗಲು ಮಾಧುರಿ ಬಯಸಿದ್ದರು.
- – ತಮ್ಮ ಮೂರನೇಯ ವಯಸ್ಸಿನಲ್ಲಿ ಶಾಸ್ತ್ರೀಯ ನೃತ್ಯ ಪ್ರಕಾರವಾದ ಕಥಕ್ ಕಲಿಯಲು ಪ್ರಾರಂಭಿಸಿದರು. ಬಳಿಕ ಕಥಕ್ ನೃತ್ಯಗಾರ ಪಂಡಿತ್ ಬಿರ್ಜು ಮಹಾರಾಜ್ ಅವರ ಬಳಿ ತರಬೇತಿ ಪಡೆದರು.
- – 1984ರಲ್ಲಿ ʻಅಬೋಧ್ʼ (Abodh) ಸಿನಿಮಾ ಮೂಲಕ ನಟನೆಯನ್ನು ಪ್ರಾರಂಭಿಸಿದರು.
- – 1988ರ ʻತೇಜಾಬ್ʼ (Tezaab) ಚಲನಚಿತ್ರದಲ್ಲಿ ಮಾಧುರಿ ದೀಕ್ಷಿತ್ ಅವರ ಪಾತ್ರ ಕಮರ್ಷಿಯಲ್ ಆಗಿ ಮತ್ತು ವಿಮರ್ಶಾತ್ಮಕವಾಗಿ ಭಾರಿ ಯಶಸ್ಸನ್ನು ಕಂಡಿತು.
- – 1992ರ ʻಬೇಟಾʼ ಚಲನಚಿತ್ರದ `ಧಕ್ ಧಕ್ ಕರ್ನೆ ಲಗಾ’ (Dhak Dhak Karne Laga) ಹಾಡಿನ ಯಶಸ್ಸಿನ ನಂತರ ‘ಧಕ್ ಧಕ್’ ಹುಡುಗಿ ಎಂದು ಅಭಿಮಾನಿಗಳು ಕರೆಯಲಾರಂಭಿಸಿದರು.
- – ಮಾಧುರಿ ದೀಕ್ಷಿತ್ ಅತ್ಯುತ್ತಮ ನಟನೆಗಾಗಿ ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.
- – ತಮ್ಮ ನಟನೆ, ನೃತ್ಯ ಮತ್ತು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
- – ಮಾಧುರಿ ದೀಕ್ಷಿತ್ ಅವರು ಹಮ್ ಆಪ್ಕೆ ಹೈ ಕೌನ್! (Hum Aapke Hain Koun), ದಿಲ್ ತೋ ಪಾಗಲ್ ಹೈ (Dil To Pagal Hai), ಮತ್ತು ದೇವದಾಸ್ (Devdas)ನಂತಹ ಚಲನಚಿತ್ರಗಳಲ್ಲಿ ತಮ್ಮ ವಿಶೇಷ ಡ್ಯಾನ್ಸ್ ಮತ್ತು ಅಭಿನಯದಿಂದಾಗಿ ಹೆಸರುವಾಸಿಯಾಗಿದ್ದಾರೆ.
- – ರಿಯಾಲಿಟಿ ಡ್ಯಾನ್ಸ್ ಶೋ ʻಜಲಕ್ ದಿಖ್ಲಾ ಜಾʼ(Jhalak Dikhhla Jaa)ದ ಹಲವಾರು ಸೀಸನ್‌ಗಳಲ್ಲಿ ಅವರು ತೀರ್ಪುಗಾರರಾಗಿದ್ದರು.
- – ಮಾಧುರಿ ದೀಕ್ಷಿತ್ ಕ್ಲಾಸಿಕಲ್ ಸಿಂಗರ್ ಆಗಿದ್ದು, ಅವರ ಹಲವಾರು ಚಲನಚಿತ್ರಗಳಲ್ಲಿ ಹಾಡಿದ್ದಾರೆ.
- – ನಟಿ ವರ್ಣಚಿತ್ರಕಾರರಾಗಿದ್ದಾರೆ ಮತ್ತು ಹಲವಾರು ಪ್ರದರ್ಶನಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ.
- – ಮಾಧುರಿ ದೀಕ್ಷಿತ್ 1999ರಲ್ಲಿ ಹೃದಯ ರಕ್ತನಾಳದ ಶಸ್ತ್ರಚಿಕಿತ್ಸಕ ಡಾ. ಶ್ರೀರಾಮ್ ನೆನೆ ಅವರನ್ನು ವಿವಾಹವಾದರು.
- – ದಂಪತಿಗೆ ಅರಿನ್ ಮತ್ತು ರಿಯಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
- – ಮಾಧುರಿ ದೀಕ್ಷಿತ್ ತಮ್ಮ ಮದುವೆಯ ನಂತರ ನಟನೆಯಿಂದ ದೂರ ಉಳಿದು ತಮ್ಮ ಪತಿಯೊಂದಿಗೆ ಅಮೆರಿಕಾಕ್ಕೆ ತೆರಳಿದರು.
- – 2011ರಲ್ಲಿ ಭಾರತಕ್ಕೆ ಮರಳಿದರು. ಮತ್ತೆ ನಟನಾ ವೃತ್ತಿಯನ್ನು ಪುನರಾರಂಭಿಸಿದರು.
- – ಅವರು ಮಕ್ಕಳ ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಹಲವಾರು ಸಾಮಾಜಿಕ ಕಾರಣಗಳಲ್ಲಿ ತೊಡಗಿಸಿಕೊಂಡಿದ್ದಾರೆ.
- – ಮಾಧುರಿ ದೀಕ್ಷಿತ್ ಅವರು ಕೋಕಾ-ಕೋಲಾ, ಮ್ಯಾಗಿ ಮತ್ತು ಓಲೆ ಸೇರಿದಂತೆ ಹಲವಾರು ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿದ್ದಾರೆ.
- – ಹಲವಾರು ವಿಡಿಯೊ ಆಲ್ಬಂಗಳಲ್ಲಿ ಕಾಣಿಸಿಕೊಂಡಿದ್ದಾರೆ.
- – ಮಾಧುರಿಯವರ ಚಿತ್ರ ʻಕೊಯ್ಲಾʼ ಚಿತ್ರೀಕರಣಗೊಂಡ ಅರುಣಾಚಲ ಪ್ರದೇಶದ ಸಂಗೆಸ್ಟಾರ್ ಸರೋವರವು ಅವರ ಹೆಸರಿನಿಂದ ಜನಪ್ರಿಯವಾಗಿದೆ.
- – ಅಂಜಾಂ ಚಿತ್ರದಲ್ಲಿ ಸೇಡು ತೀರಿಸಿಕೊಳ್ಳುವ ವಿಧವೆಯ ಪಾತ್ರ ಸೇರಿದಂತೆ ಅನೇಕ ಚಾಲೆಂಜಿಂಗ್ ಪಾತ್ರಗಳನ್ನು ಅವರು ನಿಭಾಯಿಸಿದ್ದಾರೆ.
- – ಮಾಧುರಿ ದೀಕ್ಷಿತ್ ಅವರು 2008ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳೊಂದಿಗೆ ಗೌರವಿಸಲ್ಪಟ್ಟಿದ್ದಾರೆ.
- – ಟೈಮ್, ನ್ಯೂಸ್‌ವೀಕ್ ಮತ್ತು ಪೀಪಲ್ ಸೇರಿದಂತೆ ಹಲವಾರು ನಿಯತಕಾಲಿಕೆಗಳ ಮುಖಪುಟಗಳಲ್ಲಿ ಕಾಣಿಸಿಕೊಂಡಿದ್ದಾರೆ.
- – ಮಾಧುರಿ ದೀಕ್ಷಿತ್ ತಮ್ಮ ಸ್ಟೈಲ್ ಸೆನ್ಸ್‌ಗೆ ಹೆಸರುವಾಸಿಯಾಗಿದ್ದಾರೆ.
- – ಈ ನಟಿ ಕೆಲವು ಸಮಯದ ಹಿಂದೆ ʻದಿ ಫಿಲ್ಮ್ ಸ್ಟಾರ್ʼ ಎಂಬ ಶೀರ್ಷಿಕೆಯ ತಮ್ಮ ಚೊಚ್ಚಲ ಸಂಗೀತ ಆಲ್ಬಂ ಘೋಷಿಸಿದ್ದರು.
- – ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್, ಮತ್ತು ಸಂಜಯ್ ದತ್ ಸೇರಿದಂತೆ ಬಾಲಿವುಡ್‌ನ ಕೆಲವು ಪ್ರಸಿದ್ಧ ನಟರೊಂದಿಗೆ ಮಾಧುರಿ ತೆರೆ ಹಂಚಿಕೊಂಡಿದ್ದಾರೆ.
- – ಯಶ್ ಚೋಪ್ರಾ ಮತ್ತು ಸಂಜಯ್ ಲೀಲಾ ಬನ್ಸಾಲಿ ಸೇರಿದಂತೆ ಬಾಲಿವುಡ್‌ನ ಕೆಲವು ಪ್ರಸಿದ್ಧ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.
- – ʻದಿಲ್ ತೋ ಪಾಗಲ್ ಹೈʼ ಮತ್ತು ʻದೇವದಾಸ್ʼ ಚಿತ್ರಗಳಲ್ಲಿನ ಮಾಧುರಿಯ ಅಭಿನಯವನ್ನು ಅವರ ವೃತ್ತಿಜೀವನದಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ.
- – 2007ರಲ್ಲಿ, ʻಆಜಾ ನಾಚ್ಲೆʼ ಚಿತ್ರದ ಮೂಲಕ ಬಾಲಿವುಡ್‌ಗೆ ಮರಳಿದರು.
- – ಮಾಧುರಿ ದೀಕ್ಷಿತ್ ಅವರು ʻಏಕ್ ದೋ ತೀನ್ʼ, ʻಚೋಲಿ ಕೆ ಪೀಚೆʼ, ʻಧಕ್ ಧಕ್ ಕರ್ನೆ ಲಗಾ;, ಮತ್ತುʻಕೇ ಸೆರಾ ಸೆರಾʼ ಮುಂತಾದ ಹಾಡುಗಳಲ್ಲಿ ತಮ್ಮ ನೃತ್ಯಕ್ಕೆ ಹೆಸರುವಾಸಿಯಾಗಿದ್ದಾರೆ.
- – ಮಾಧುರಿ ಒಟ್ಟು 14 ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ನಟಿ 80ಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
- – ಜನಪರ ಕಾರ್ಯಗಳು ಸೇರದಂತೆ ಹಲವಾರು ಚಾರಿಟೇಬಲ್ ಸಂಸ್ಥೆಗಳೊಂದಿಗೆ ನಂಟು ಹೊಂದಿದ್ದಾರೆ.
- – ಅವರು ಭಾರತದಲ್ಲಿ ಹೆಣ್ಣು ಮಕ್ಕಳ ಕಲ್ಯಾಣವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ʻಬೇಟಿ ಬಚಾವೋ ಬೇಟಿ ಪಢಾವೋʼ ಅಭಿಯಾನದ ರಾಯಭಾರಿಯೂ ಹೌದು.
- – ʻಡ್ಯಾನ್ಸ್ ವಿತ್ ಮಾಧುರಿʼ ಎಂಬ ತಮ್ಮದೇ ಆದ ನೃತ್ಯ ಸಿರೀಸ್ ಹೊಂದಿದ್ದಾರೆ.
- – ರಣಬೀರ್ ಕಪೂರ್ ಅವರ ʻಯೇ ಜವಾನಿ ಹೈ ದೀವಾನಿʼಯಲ್ಲಿ ಮಾಧುರಿ ಅತಿಥಿ ಪಾತ್ರವನ್ನು ಹೊಂದಿದ್ದರು.
- – ತೇಜಾಬ್, ಬೇಟಾ, ಮತ್ತು ರಾಮ್ ಲಖನ್‌ನಂತಹ ಚಿತ್ರಗಳಲ್ಲಿ ಅನಿಲ್ ಕಪೂರ್ ಜತೆ ತೆರೆ ಹಂಚಿಕೊಂಡಿದ್ದರು. ಈ ಜೋಡಿ 90ರ ದಶಕದಲ್ಲಿ ಅತ್ಯಂತ ಜನಪ್ರಿಯವಾಗಿತ್ತು.
- – ದೇವದಾಸ್ ಸಿನಿಮಾದಲ್ಲಿ 30 ಕೆಜಿ ತೂಕದ ಡ್ರೆಸ್ ಧರಿಸಿದ್ದರು ಮಾಧುರಿ. ಚಿತ್ರೀಕರಣದ ಸಮಯದಲ್ಲಿ ಡಿಸೈನರ್ ನೀತಾ ಲುಲ್ಲಾ ಮಾಧುರಿಗಾಗಿ ಕಾಸ್ಟ್ಯೂಮ್ ಮಾಡಿ ವಿನ್ಯಾಸಗೊಳಿಸಿದರು. ನಟಿ ಈ ಸವಾಲನ್ನು ಸಲೀಸಾಗಿ ನಿಭಾಯಿಸಿದ್ದರು.
- – ಮಾಧುರಿ ಅವರು ಮಿಥುನ್ ಚಕ್ರವರ್ತಿ, ಆದಿತ್ಯ ಪಾಂಚೋಲಿ, ಸದಾಶಿವ್ ಅಮ್ರಾಪುರ್ಕರ್, ಶಕ್ತಿ ಕಪೂರ್ ಮತ್ತು ಪರೇಶ್ ರಾವಲ್ ಅವರೊಂದಿಗೆ ಮಹಾ ಪಾಪ (1990) ಎಂಬ ಶೀರ್ಷಿಕೆಯ ಚಲನಚಿತ್ರದಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾ ತೆರೆಗೆ ಬರಲೇ ಇಲ್ಲ.
- - ವಿಜಯ್ ಆನಂದ್ ನಿರ್ದೇಶನದ ʻಜನ ನಾ ದಿಲ್ ಸೆ ದೂರ್ʼ ಚಿತ್ರಕ್ಕೆ ಮಾಧುರಿ ಸಹಿ ಹಾಕಿದ್ದರು, ಇದರಲ್ಲಿ ದೇವ್ ಆನಂದ್ ಮತ್ತು ಇಂದರ್ ಕುಮಾರ್ ಸಹ-ನಟರಾಗಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಶೂಟಿಂಗ್ ಪ್ರಾರಂಭವಾಗುವ ಮೊದಲು ಅವರು ಯೋಜನೆಯನ್ನು ತೊರೆಯಲು ನಿರ್ಧರಿಸಿದರು.
- – ಮಾಧುರಿ 1984 ಮತ್ತು 1988ರ ನಡುವೆ ಸಿನಿಮಾದಲ್ಲಿ ಸತತ ಒಂಬತ್ತು ಸೋಲುಗಳನ್ನು ಕಂಡರು.
- – ಅವರು ತಮ್ಮದೇ ಆದ ಆನ್‌ಲೈನ್ ನೃತ್ಯ ಅಕಾಡೆಮಿಯನ್ನು ಹೊಂದಿದ್ದಾರೆ. ಬಳಕೆದಾರರು ತಮ್ಮ ನೃತ್ಯ ವಿಡಿಯೊಗಳನ್ನು ಅಪ್‌ಲೋಡ್ ಮಾಡಲು, ವಿವಿಧ ನೃತ್ಯ ಶೈಲಿಗಳನ್ನು ಕಲಿಯಲು ಮತ್ತು ಸ್ಪರ್ಧೆಗಳಲ್ಲಿ ತೊಡಗಿಸಿಕೊಳ್ಳಲು ಈ ಅಕಾಡೆಮಿ ಸಹಾಯ ಮಾಡುತ್ತದೆ.
- – 2014ರಲ್ಲಿ, ಮಕ್ಕಳ ಮತ್ತು ಸಮಾನ ಮಹಿಳಾ ಹಕ್ಕುಗಳ (Child and Equal Women’s Rights) ರಾಯಭಾರಿಯಾಗಿ ನೇಮಕಗೊಂಡರು.
- – 1990ರ ದಶಕದಲ್ಲಿ, ಮಾಧುರಿ ಅವರು ಅತಿ ಹೆಚ್ಚು ಗಳಿಕೆ ಕಂಡ ಮಹಿಳಾ ನಟಿ ಎಂಬ ಹೆಗ್ಗಳಿಕೆಯನ್ನು ಪಡೆದರು. ʻಹಮ್ ಆಪ್ಕೆ ಹೈ ಕೌನ್ʼ ಚಿತ್ರದಲ್ಲಿನ ಅವರ ಪಾತ್ರಕ್ಕಾಗಿ 2.7 ಕೋಟಿ ರೂ. ಗಳಿಸಿದ್ದಾರೆ. ಇದು ಸಹನಟ ಸಲ್ಮಾನ್ ಖಾನ್ ಅವರಿಗಿಂತ ಪಡೆದ ಸಂಭಾವನೆಗಿಂತ ಅಧಿಕವಾಗಿತ್ತು!
- – ಮಾಧುರಿಯನ್ನು ಅಪಾರವಾಗಿ ಮೆಚ್ಚಿದ ಜೆಮ್‌ಶೆಡ್‌ಪುರದ ಅಭಿಮಾನಿಯೊಬ್ಬರು, ಅವರ ಜನ್ಮದಿನವನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಲು ಸರ್ಕಾರಕ್ಕೆ ವಿನಂತಿ ಮಾಡಿದ್ದರು.
- – ಹೆಸರಾಂತ ಕಲಾವಿದ ದಿವಂಗತ ಎಂಎಫ್ ಹುಸೇನ್ ಮಾಧುರಿ ಅವರ ನಟನೆಗೆ ಮನಸೋತುʻ ಹಮ್ ಆಪ್ಕೆ ಹೈ ಕೌನ್ʼ ಸಿನಿಮಾವನ್ನು 67 ಬಾರಿ ವೀಕ್ಷಿಸಿದ್ದರು. ಅವರಿಗೆ ಈ ನಟಿಯೇ ಸ್ಫೂರ್ತಿಯಾಗಿದ್ದರು. ಈ ಮೂಲಕ ಮಾಧುರಿ ಮತ್ತು ಶಾರುಖ್ ಖಾನ್ ಅವರನ್ನು ಒಳಗೊಂಡ ಗಜ ಗಾಮಿನಿ (2000) ಎಂಬ ಚಲನಚಿತ್ರವನ್ನು ಹುಸೇನ್ ನಿರ್ಮಿಸಲು ಕಾರಣವಾಯಿತು.
- – ಮಾಧುರಿ ʻದಿ ಫೇಮ್ ಗೇಮ್ʼ (The Fame Game)ನೊಂದಿಗೆ OTT ಪದಾರ್ಪಣೆ ಮಾಡಿದರು. ಅವರ ಅಭಿನಯಕ್ಕಾಗಿ ಫಿಲ್ಮ್‌ಫೇರ್ OTT ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡರು.
- – ಕಥಕ್ ನರ್ತಕಿಯಾಗಿರುವ ಮಾಧುರಿ, ಕಥಕ್ ಮಾಂತ್ರಿಕ ಪಂಡಿತ್ ಬಿರ್ಜು ಮಹಾರಾಜ್ ಅವರಿಂದ ನೃತ್ಯ ಸಂಯೋಜನೆಯನ್ನು ಪಡೆದ ಏಕೈಕ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
- – ಮಾಧುರಿ ಕೊನೆಯದಾಗಿ ಅಮೆಜಾನ್ ಪ್ರೈಮ್ OTT ಸಿರೀಸ್ ʻಮಜಾ ಮಾʼ (Maja Maa)ದಲ್ಲಿ ಕಾಣಿಸಿಕೊಂಡರು. ಅಲ್ಲಿ ಅವರು ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ.