Madhuri Dixit: ಮಾಧುರಿ ದೀಕ್ಷಿತ್‌ಗೆ ಇಂದು ಜನುಮದಿನ ಸಂಭ್ರಮ; ಅವರ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ - Vistara News

ಬಾಲಿವುಡ್

Madhuri Dixit: ಮಾಧುರಿ ದೀಕ್ಷಿತ್‌ಗೆ ಇಂದು ಜನುಮದಿನ ಸಂಭ್ರಮ; ಅವರ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ

Madhuri Dixit: ದಿಲ್ ತೋ ಪಾಗಲ್ ಹೈʼ ಮತ್ತು ʻದೇವದಾಸ್‌ʼನಲ್ಲಿನ ಅವರ ಅಭಿನಯಕ್ಕೆ ಮನಸೋತದವರೇ ಇಲ್ಲ. ಮಾಧುರಿ ಭಾರತೀಯ ಚಿತ್ರರಂಗದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಮನರಂಜನಾ ಉದ್ಯಮಕ್ಕೆ ಅವರ ಕೊಡುಗೆಗಳು ಅಪಾರ. ಅವರ ನಟನೆ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದೆ. 

VISTARANEWS.COM


on

Madhuri Dixit birthday extend wishes
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇಂದು ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್ (Madhuri Dixit) ಅವರಿಗೆ 57ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಅವರ ಪತಿ ಡಾ ಶ್ರೀರಾಮ್ ನೆನೆ, ನಟಿ ಕಾಜೋಲ್ ಮತ್ತು ಚಲನಚಿತ್ರ ನಿರ್ಮಾಪಕಿ ಫರಾ ಖಾನ್ ಕುಂದರ್ ಸೇರಿದಂತೆ ಅನೇಕ ಸಿನಿ ಗಣ್ಯರು ಹಾಗೂ ಅಭಿಮಾನಿಗಳು ಸೋಷಿಯಲ್‌ ಮೀಡಿಯಾ ಮೂಲಕ ವಿಶ್‌ ಮಾಡಿದ್ದಾರೆ.

ಡಾ ಶ್ರೀರಾಮ್ ನೆನೆ ಅವರು ಪತ್ನಿ ಮಾಧುರಿ ಜತೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ‘ಹ್ಯಾಪಿ ಬರ್ತ್‌ಡೇ ಲವ್’ ಎಂಬ ಕ್ಯಾಪ್ಷನ್‌ ಕೊಟ್ಟಿದ್ದಾರೆ. ʻʻಪದಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದ ರೀತಿಯಲ್ಲಿ ನೀವು ನಮ್ಮ ಜೀವನವನ್ನು ಬೆಳಗಿಸುತ್ತಿದ್ದೀರಿʼʼಎಂದು ಶ್ರೀರಾಮ್ ನೆನೆ ಪೋಸ್ಟ್‌ ಶೇರ್‌ ಮಾಡಿದ್ದಾರೆ. ಮಾಧುರಿಯೊಂದಿಗೆ ವಿಶೇಷ ಬಾಂಧವ್ಯವನ್ನು ಹಂಚಿಕೊಂಡಿರುವ ಕಾಜೋಲ್, ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ʻʻಡ್ಯಾನ್ಸಿಂಗ್ ಕ್ವೀನ್‌ಗೆ ಜನ್ಮದಿನದ ಶುಭಾಶಯಗಳುʼʼಎಂದು ಕಾಜೋಲ್‌ ಟ್ವೀಟ್‌ ಮಾಡಿದ್ದಾರೆ.

ಫರಾ ಖಾನ್ ಕುಂದರ್ ಮಾಧುರಿ ಮತ್ತು ಅವರ ಪತಿಯೊಂದಿಗೆ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. “ಜನ್ಮದಿನದ ಶುಭಾಶಯಗಳು ಪ್ರಿಯ ಮಾಧುರಿʼʼಎಂದು ಬರೆದುಕೊಂಡಿದ್ದಾರೆ.

ದಿಲ್ ತೋ ಪಾಗಲ್ ಹೈʼ ಮತ್ತು ʻದೇವದಾಸ್‌ʼನಲ್ಲಿನ ಅವರ ಅಭಿನಯಕ್ಕೆ ಮನಸೋತದವರೇ ಇಲ್ಲ. ಮಾಧುರಿ ಭಾರತೀಯ ಚಿತ್ರರಂಗದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಮನರಂಜನಾ ಉದ್ಯಮಕ್ಕೆ ಅವರ ಕೊಡುಗೆಗಳು ಅಪಾರ. ಅವರ ನಟನೆ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದೆ. 

ಇದನ್ನೂ ಓದಿ: Madhuri Dixit: ಲೈಂಗಿಕ ಕಿರುಕುಳ ದೃಶ್ಯದಲ್ಲಿ ನಟಿಸಲಾರೆ ಎಂದು ಗೋಳೋ ಎಂದು ಅತ್ತಿದ್ದ ಮಾಧುರಿ ದೀಕ್ಷಿತ್!

ಮಾಧುರಿ ದೀಕ್ಷಿತ್‌ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ:

  1. – ಮಾಧುರಿ ದೀಕ್ಷಿತ್‌ ಅವರ ಮೂಲ ಹೆಸರು ಮಾಧುರಿ ಶಂಕರ್ ದೀಕ್ಷಿತ್.
  2. – ಮರಾಠ ಕುಟುಂಬದಲ್ಲಿ ಜನಿಸಿದರು.
  3. – ಮಾಧುರಿ ಅವರ ತಂದೆ ಶಂಕರ್ ದೀಕ್ಷಿತ್ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರು.
  4. – ತಾಯಿ ಸ್ನೇಹಲತಾ ದೀಕ್ಷಿತ್ ಗೃಹಿಣಿಯಾಗಿದ್ದರು. ಕೆಲವು ದಿನಗಳ ಹಿಂದಷ್ಟೇ ಇಹಲೋಕ ತ್ಯಜಿಸಿದ್ದಾರೆ.
  5. – ಮಾಧುರಿ ದೀಕ್ಷಿತ್‌ ಅವರಿಗೆ ಇಬ್ಬರು ಅಕ್ಕಂದಿರು. ರೂಪಾ ಮತ್ತು ಭಾರತಿ.. ಒಬ್ಬ ಕಿರಿಯ ಸಹೋದರ ಅಜಿತ್ ಇದ್ದಾರೆ.
  6. – ಅವರು ಮುಂಬೈನ ಡಿವೈನ್ ಚೈಲ್ಡ್ ಹೈಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದರು. ಅವರು ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಮೈಕ್ರೊಬಯಾಲಜಿ ಶಿಕ್ಷಣವನ್ನು ಪಡೆದರು.
  7. – ನಟನೆ ವೃತ್ತಿಗೆ ಹೋಗಲು ನಿರ್ಧರಿಸುವ ಮೊದಲು ಮೈಕ್ರೋಬಯಾಲಜಿಸ್ಟ್ ಆಗಲು ಮಾಧುರಿ ಬಯಸಿದ್ದರು.
  8. – ತಮ್ಮ ಮೂರನೇಯ ವಯಸ್ಸಿನಲ್ಲಿ ಶಾಸ್ತ್ರೀಯ ನೃತ್ಯ ಪ್ರಕಾರವಾದ ಕಥಕ್ ಕಲಿಯಲು ಪ್ರಾರಂಭಿಸಿದರು. ಬಳಿಕ ಕಥಕ್ ನೃತ್ಯಗಾರ ಪಂಡಿತ್ ಬಿರ್ಜು ಮಹಾರಾಜ್ ಅವರ ಬಳಿ ತರಬೇತಿ ಪಡೆದರು.
  9. – 1984ರಲ್ಲಿ ʻಅಬೋಧ್ʼ (Abodh) ಸಿನಿಮಾ ಮೂಲಕ ನಟನೆಯನ್ನು ಪ್ರಾರಂಭಿಸಿದರು.
  10. – 1988ರ ʻತೇಜಾಬ್ʼ (Tezaab) ಚಲನಚಿತ್ರದಲ್ಲಿ ಮಾಧುರಿ ದೀಕ್ಷಿತ್ ಅವರ ಪಾತ್ರ ಕಮರ್ಷಿಯಲ್‌ ಆಗಿ ಮತ್ತು ವಿಮರ್ಶಾತ್ಮಕವಾಗಿ ಭಾರಿ ಯಶಸ್ಸನ್ನು ಕಂಡಿತು.
  11. – 1992ರ ʻಬೇಟಾʼ ಚಲನಚಿತ್ರದ `ಧಕ್ ಧಕ್ ಕರ್ನೆ ಲಗಾ’ (Dhak Dhak Karne Laga) ಹಾಡಿನ ಯಶಸ್ಸಿನ ನಂತರ ‘ಧಕ್ ಧಕ್’ ಹುಡುಗಿ ಎಂದು ಅಭಿಮಾನಿಗಳು ಕರೆಯಲಾರಂಭಿಸಿದರು.
  12. – ಮಾಧುರಿ ದೀಕ್ಷಿತ್ ಅತ್ಯುತ್ತಮ ನಟನೆಗಾಗಿ ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.
  13. – ತಮ್ಮ ನಟನೆ, ನೃತ್ಯ ಮತ್ತು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
  14. – ಮಾಧುರಿ ದೀಕ್ಷಿತ್ ಅವರು ಹಮ್ ಆಪ್ಕೆ ಹೈ ಕೌನ್! (Hum Aapke Hain Koun), ದಿಲ್ ತೋ ಪಾಗಲ್ ಹೈ (Dil To Pagal Hai), ಮತ್ತು ದೇವದಾಸ್ (Devdas)ನಂತಹ ಚಲನಚಿತ್ರಗಳಲ್ಲಿ ತಮ್ಮ ವಿಶೇಷ ಡ್ಯಾನ್ಸ್‌ ಮತ್ತು ಅಭಿನಯದಿಂದಾಗಿ ಹೆಸರುವಾಸಿಯಾಗಿದ್ದಾರೆ.
  15. – ರಿಯಾಲಿಟಿ ಡ್ಯಾನ್ಸ್ ಶೋ ʻಜಲಕ್ ದಿಖ್ಲಾ ಜಾʼ(Jhalak Dikhhla Jaa)ದ ಹಲವಾರು ಸೀಸನ್‌ಗಳಲ್ಲಿ ಅವರು ತೀರ್ಪುಗಾರರಾಗಿದ್ದರು.
  16. – ಮಾಧುರಿ ದೀಕ್ಷಿತ್ ಕ್ಲಾಸಿಕಲ್‌ ಸಿಂಗರ್‌ ಆಗಿದ್ದು, ಅವರ ಹಲವಾರು ಚಲನಚಿತ್ರಗಳಲ್ಲಿ ಹಾಡಿದ್ದಾರೆ.
  17. – ನಟಿ ವರ್ಣಚಿತ್ರಕಾರರಾಗಿದ್ದಾರೆ ಮತ್ತು ಹಲವಾರು ಪ್ರದರ್ಶನಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ.
  18. – ಮಾಧುರಿ ದೀಕ್ಷಿತ್ 1999ರಲ್ಲಿ ಹೃದಯ ರಕ್ತನಾಳದ ಶಸ್ತ್ರಚಿಕಿತ್ಸಕ ಡಾ. ಶ್ರೀರಾಮ್ ನೆನೆ ಅವರನ್ನು ವಿವಾಹವಾದರು.
  19. – ದಂಪತಿಗೆ ಅರಿನ್ ಮತ್ತು ರಿಯಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
  20. – ಮಾಧುರಿ ದೀಕ್ಷಿತ್ ತಮ್ಮ ಮದುವೆಯ ನಂತರ ನಟನೆಯಿಂದ ದೂರ ಉಳಿದು ತಮ್ಮ ಪತಿಯೊಂದಿಗೆ ಅಮೆರಿಕಾಕ್ಕೆ ತೆರಳಿದರು.
  21. – 2011ರಲ್ಲಿ ಭಾರತಕ್ಕೆ ಮರಳಿದರು. ಮತ್ತೆ ನಟನಾ ವೃತ್ತಿಯನ್ನು ಪುನರಾರಂಭಿಸಿದರು.
  22. – ಅವರು ಮಕ್ಕಳ ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಹಲವಾರು ಸಾಮಾಜಿಕ ಕಾರಣಗಳಲ್ಲಿ ತೊಡಗಿಸಿಕೊಂಡಿದ್ದಾರೆ.
  23. – ಮಾಧುರಿ ದೀಕ್ಷಿತ್ ಅವರು ಕೋಕಾ-ಕೋಲಾ, ಮ್ಯಾಗಿ ಮತ್ತು ಓಲೆ ಸೇರಿದಂತೆ ಹಲವಾರು ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿದ್ದಾರೆ.
  24. – ಹಲವಾರು ವಿಡಿಯೊ ಆಲ್ಬಂಗಳಲ್ಲಿ ಕಾಣಿಸಿಕೊಂಡಿದ್ದಾರೆ.
  25. – ಮಾಧುರಿಯವರ ಚಿತ್ರ ʻಕೊಯ್ಲಾʼ ಚಿತ್ರೀಕರಣಗೊಂಡ ಅರುಣಾಚಲ ಪ್ರದೇಶದ ಸಂಗೆಸ್ಟಾರ್ ಸರೋವರವು ಅವರ ಹೆಸರಿನಿಂದ ಜನಪ್ರಿಯವಾಗಿದೆ.
  1. – ಅಂಜಾಂ ಚಿತ್ರದಲ್ಲಿ ಸೇಡು ತೀರಿಸಿಕೊಳ್ಳುವ ವಿಧವೆಯ ಪಾತ್ರ ಸೇರಿದಂತೆ ಅನೇಕ ಚಾಲೆಂಜಿಂಗ್‌ ಪಾತ್ರಗಳನ್ನು ಅವರು ನಿಭಾಯಿಸಿದ್ದಾರೆ.
  2. – ಮಾಧುರಿ ದೀಕ್ಷಿತ್ ಅವರು 2008ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳೊಂದಿಗೆ ಗೌರವಿಸಲ್ಪಟ್ಟಿದ್ದಾರೆ.
  3. – ಟೈಮ್, ನ್ಯೂಸ್‌ವೀಕ್ ಮತ್ತು ಪೀಪಲ್ ಸೇರಿದಂತೆ ಹಲವಾರು ನಿಯತಕಾಲಿಕೆಗಳ ಮುಖಪುಟಗಳಲ್ಲಿ ಕಾಣಿಸಿಕೊಂಡಿದ್ದಾರೆ.
  4. – ಮಾಧುರಿ ದೀಕ್ಷಿತ್ ತಮ್ಮ ಸ್ಟೈಲ್ ಸೆನ್ಸ್‌ಗೆ ಹೆಸರುವಾಸಿಯಾಗಿದ್ದಾರೆ.
  5. – ಈ ನಟಿ ಕೆಲವು ಸಮಯದ ಹಿಂದೆ ʻದಿ ಫಿಲ್ಮ್ ಸ್ಟಾರ್ʼ ಎಂಬ ಶೀರ್ಷಿಕೆಯ ತಮ್ಮ ಚೊಚ್ಚಲ ಸಂಗೀತ ಆಲ್ಬಂ ಘೋಷಿಸಿದ್ದರು.
  6. – ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್, ಮತ್ತು ಸಂಜಯ್ ದತ್ ಸೇರಿದಂತೆ ಬಾಲಿವುಡ್‌ನ ಕೆಲವು ಪ್ರಸಿದ್ಧ ನಟರೊಂದಿಗೆ ಮಾಧುರಿ ತೆರೆ ಹಂಚಿಕೊಂಡಿದ್ದಾರೆ.
  7. – ಯಶ್ ಚೋಪ್ರಾ ಮತ್ತು ಸಂಜಯ್ ಲೀಲಾ ಬನ್ಸಾಲಿ ಸೇರಿದಂತೆ ಬಾಲಿವುಡ್‌ನ ಕೆಲವು ಪ್ರಸಿದ್ಧ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.
  8. – ʻದಿಲ್ ತೋ ಪಾಗಲ್ ಹೈʼ ಮತ್ತು ʻದೇವದಾಸ್ʼ ಚಿತ್ರಗಳಲ್ಲಿನ ಮಾಧುರಿಯ ಅಭಿನಯವನ್ನು ಅವರ ವೃತ್ತಿಜೀವನದಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ.
  9. – 2007ರಲ್ಲಿ, ʻಆಜಾ ನಾಚ್ಲೆʼ ಚಿತ್ರದ ಮೂಲಕ ಬಾಲಿವುಡ್‌ಗೆ ಮರಳಿದರು.
  10. – ಮಾಧುರಿ ದೀಕ್ಷಿತ್ ಅವರು ʻಏಕ್ ದೋ ತೀನ್ʼ, ʻಚೋಲಿ ಕೆ ಪೀಚೆʼ, ʻಧಕ್ ಧಕ್ ಕರ್ನೆ ಲಗಾ;, ಮತ್ತುʻಕೇ ಸೆರಾ ಸೆರಾʼ ಮುಂತಾದ ಹಾಡುಗಳಲ್ಲಿ ತಮ್ಮ ನೃತ್ಯಕ್ಕೆ ಹೆಸರುವಾಸಿಯಾಗಿದ್ದಾರೆ.
  11. – ಮಾಧುರಿ ಒಟ್ಟು 14 ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ನಟಿ 80ಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
  12. – ಜನಪರ ಕಾರ್ಯಗಳು ಸೇರದಂತೆ ಹಲವಾರು ಚಾರಿಟೇಬಲ್‌ ಸಂಸ್ಥೆಗಳೊಂದಿಗೆ ನಂಟು ಹೊಂದಿದ್ದಾರೆ.
  13. – ಅವರು ಭಾರತದಲ್ಲಿ ಹೆಣ್ಣು ಮಕ್ಕಳ ಕಲ್ಯಾಣವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ʻಬೇಟಿ ಬಚಾವೋ ಬೇಟಿ ಪಢಾವೋʼ ಅಭಿಯಾನದ ರಾಯಭಾರಿಯೂ ಹೌದು.
  14. – ʻಡ್ಯಾನ್ಸ್ ವಿತ್ ಮಾಧುರಿʼ ಎಂಬ ತಮ್ಮದೇ ಆದ ನೃತ್ಯ ಸಿರೀಸ್‌ ಹೊಂದಿದ್ದಾರೆ.
  15. – ರಣಬೀರ್ ಕಪೂರ್ ಅವರ ʻಯೇ ಜವಾನಿ ಹೈ ದೀವಾನಿʼಯಲ್ಲಿ ಮಾಧುರಿ ಅತಿಥಿ ಪಾತ್ರವನ್ನು ಹೊಂದಿದ್ದರು.
  16. – ತೇಜಾಬ್, ಬೇಟಾ, ಮತ್ತು ರಾಮ್ ಲಖನ್‌ನಂತಹ ಚಿತ್ರಗಳಲ್ಲಿ ಅನಿಲ್ ಕಪೂರ್ ಜತೆ ತೆರೆ ಹಂಚಿಕೊಂಡಿದ್ದರು. ಈ ಜೋಡಿ 90ರ ದಶಕದಲ್ಲಿ ಅತ್ಯಂತ ಜನಪ್ರಿಯವಾಗಿತ್ತು.
  17. – ದೇವದಾಸ್‌ ಸಿನಿಮಾದಲ್ಲಿ 30 ಕೆಜಿ ತೂಕದ ಡ್ರೆಸ್‌ ಧರಿಸಿದ್ದರು ಮಾಧುರಿ. ಚಿತ್ರೀಕರಣದ ಸಮಯದಲ್ಲಿ ಡಿಸೈನರ್ ನೀತಾ ಲುಲ್ಲಾ ಮಾಧುರಿಗಾಗಿ ಕಾಸ್ಟ್ಯೂಮ್ ಮಾಡಿ ವಿನ್ಯಾಸಗೊಳಿಸಿದರು. ನಟಿ ಈ ಸವಾಲನ್ನು ಸಲೀಸಾಗಿ ನಿಭಾಯಿಸಿದ್ದರು.
  18. – ಮಾಧುರಿ ಅವರು ಮಿಥುನ್ ಚಕ್ರವರ್ತಿ, ಆದಿತ್ಯ ಪಾಂಚೋಲಿ, ಸದಾಶಿವ್ ಅಮ್ರಾಪುರ್ಕರ್, ಶಕ್ತಿ ಕಪೂರ್ ಮತ್ತು ಪರೇಶ್ ರಾವಲ್ ಅವರೊಂದಿಗೆ ಮಹಾ ಪಾಪ (1990) ಎಂಬ ಶೀರ್ಷಿಕೆಯ ಚಲನಚಿತ್ರದಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾ ತೆರೆಗೆ ಬರಲೇ ಇಲ್ಲ.
  19. ​​- ವಿಜಯ್ ಆನಂದ್ ನಿರ್ದೇಶನದ ʻಜನ ನಾ ದಿಲ್ ಸೆ ದೂರ್ʼ ಚಿತ್ರಕ್ಕೆ ಮಾಧುರಿ ಸಹಿ ಹಾಕಿದ್ದರು, ಇದರಲ್ಲಿ ದೇವ್ ಆನಂದ್ ಮತ್ತು ಇಂದರ್ ಕುಮಾರ್ ಸಹ-ನಟರಾಗಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಶೂಟಿಂಗ್ ಪ್ರಾರಂಭವಾಗುವ ಮೊದಲು ಅವರು ಯೋಜನೆಯನ್ನು ತೊರೆಯಲು ನಿರ್ಧರಿಸಿದರು.
  20. – ಮಾಧುರಿ 1984 ಮತ್ತು 1988ರ ನಡುವೆ ಸಿನಿಮಾದಲ್ಲಿ ಸತತ ಒಂಬತ್ತು ಸೋಲುಗಳನ್ನು ಕಂಡರು.
  21. – ಅವರು ತಮ್ಮದೇ ಆದ ಆನ್‌ಲೈನ್ ನೃತ್ಯ ಅಕಾಡೆಮಿಯನ್ನು ಹೊಂದಿದ್ದಾರೆ. ಬಳಕೆದಾರರು ತಮ್ಮ ನೃತ್ಯ ವಿಡಿಯೊಗಳನ್ನು ಅಪ್‌ಲೋಡ್ ಮಾಡಲು, ವಿವಿಧ ನೃತ್ಯ ಶೈಲಿಗಳನ್ನು ಕಲಿಯಲು ಮತ್ತು ಸ್ಪರ್ಧೆಗಳಲ್ಲಿ ತೊಡಗಿಸಿಕೊಳ್ಳಲು ಈ ಅಕಾಡೆಮಿ ಸಹಾಯ ಮಾಡುತ್ತದೆ.
  22. – 2014ರಲ್ಲಿ, ಮಕ್ಕಳ ಮತ್ತು ಸಮಾನ ಮಹಿಳಾ ಹಕ್ಕುಗಳ (Child and Equal Women’s Rights) ರಾಯಭಾರಿಯಾಗಿ ನೇಮಕಗೊಂಡರು.
  23. – 1990ರ ದಶಕದಲ್ಲಿ, ಮಾಧುರಿ ಅವರು ಅತಿ ಹೆಚ್ಚು ಗಳಿಕೆ ಕಂಡ ಮಹಿಳಾ ನಟಿ ಎಂಬ ಹೆಗ್ಗಳಿಕೆಯನ್ನು ಪಡೆದರು. ʻಹಮ್ ಆಪ್ಕೆ ಹೈ ಕೌನ್ʼ ಚಿತ್ರದಲ್ಲಿನ ಅವರ ಪಾತ್ರಕ್ಕಾಗಿ 2.7 ಕೋಟಿ ರೂ. ಗಳಿಸಿದ್ದಾರೆ. ಇದು ಸಹನಟ ಸಲ್ಮಾನ್ ಖಾನ್ ಅವರಿಗಿಂತ ಪಡೆದ ಸಂಭಾವನೆಗಿಂತ ಅಧಿಕವಾಗಿತ್ತು!
  24. – ಮಾಧುರಿಯನ್ನು ಅಪಾರವಾಗಿ ಮೆಚ್ಚಿದ ಜೆಮ್‌ಶೆಡ್‌ಪುರದ ಅಭಿಮಾನಿಯೊಬ್ಬರು, ಅವರ ಜನ್ಮದಿನವನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಲು ಸರ್ಕಾರಕ್ಕೆ ವಿನಂತಿ ಮಾಡಿದ್ದರು.
  25. – ಹೆಸರಾಂತ ಕಲಾವಿದ ದಿವಂಗತ ಎಂಎಫ್ ಹುಸೇನ್ ಮಾಧುರಿ ಅವರ ನಟನೆಗೆ ಮನಸೋತುʻ ಹಮ್ ಆಪ್ಕೆ ಹೈ ಕೌನ್ʼ ಸಿನಿಮಾವನ್ನು 67 ಬಾರಿ ವೀಕ್ಷಿಸಿದ್ದರು. ಅವರಿಗೆ ಈ ನಟಿಯೇ ಸ್ಫೂರ್ತಿಯಾಗಿದ್ದರು. ಈ ಮೂಲಕ ಮಾಧುರಿ ಮತ್ತು ಶಾರುಖ್ ಖಾನ್ ಅವರನ್ನು ಒಳಗೊಂಡ ಗಜ ಗಾಮಿನಿ (2000) ಎಂಬ ಚಲನಚಿತ್ರವನ್ನು ಹುಸೇನ್‌ ನಿರ್ಮಿಸಲು ಕಾರಣವಾಯಿತು.
  26. – ಮಾಧುರಿ ʻದಿ ಫೇಮ್ ಗೇಮ್‌ʼ (The Fame Game)ನೊಂದಿಗೆ OTT ಪದಾರ್ಪಣೆ ಮಾಡಿದರು. ಅವರ ಅಭಿನಯಕ್ಕಾಗಿ ಫಿಲ್ಮ್‌ಫೇರ್ OTT ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡರು.
  27. – ಕಥಕ್ ನರ್ತಕಿಯಾಗಿರುವ ಮಾಧುರಿ, ಕಥಕ್ ಮಾಂತ್ರಿಕ ಪಂಡಿತ್ ಬಿರ್ಜು ಮಹಾರಾಜ್ ಅವರಿಂದ ನೃತ್ಯ ಸಂಯೋಜನೆಯನ್ನು ಪಡೆದ ಏಕೈಕ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
  28. – ಮಾಧುರಿ ಕೊನೆಯದಾಗಿ ಅಮೆಜಾನ್ ಪ್ರೈಮ್ OTT ಸಿರೀಸ್‌ ʻಮಜಾ ಮಾʼ (Maja Maa)ದಲ್ಲಿ ಕಾಣಿಸಿಕೊಂಡರು. ಅಲ್ಲಿ ಅವರು ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Noor Malabika Das: ಕಾಜೋಲ್‌ ಜತೆ ನಟಿಸಿದ್ದ, ದಿ ಟ್ರಯಲ್‌ ಖ್ಯಾತಿಯ ಬಾಲಿವುಡ್‌ ನಟಿ ದಾಸ್‌ ಆತ್ಮಹತ್ಯೆ

Noor Malabika Das: ನೂರ್‌ ಮಾಳವಿಕಾ ದಾಸ್‌ ಅವರು ಹಿಂದಿ ಸಿನಿಮಾಗಳು ಹಾಗೂ ವೆಬ್‌ಸಿರೀಸ್‌ಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು. ಸಿಸ್ಕಿಯಾನ್‌, ವಾಕ್‌ಮನ್‌, ತೀತ್ರಿ ಚಟ್ನಿ, ಜಜ್ಞ ಉಪಾಯ್‌, ಚಾರ್‌ಮಸುಖ್‌, ದೇಖ್‌ ಅನ್‌ದೇಖಿ, ಬ್ಯಾಕ್‌ರೋಡ್‌ ಹಲ್‌ಚಲ್‌ ಸೇರಿ ಹಲವು ಸಿನಿಮಾ, ಸಿರೀಸ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇನ್‌ಸ್ಟಾಗ್ರಾಂನಲ್ಲೂ ಅವರು ಸಕ್ರಿಯರಾಗಿದ್ದರು. ಆದರೆ, ಅವರ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ.

VISTARANEWS.COM


on

Noor Malabika Das
Koo

ಮುಂಬೈ: ಬಾಲಿವುಡ್‌ ನಟಿ ಕಾಜೋಲ್‌ ಅಭಿನಯದ ದಿ ಟ್ರಯಲ್‌ (The Trial) ವೆಬ್‌ ಸಿರೀಸ್‌ ಖ್ಯಾತಿ ನಟಿ ನೂರ್‌ ಮಾಳವಿಕಾ ದಾಸ್‌ (Noor Malabika Das) ಅವರು ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಲೋಖಂಡ್‌ವಾಲಾದಲ್ಲಿರುವ ತಮ್ಮ ಫ್ಲ್ಯಾಟ್‌ನಲ್ಲಿ 32 ವರ್ಷದ ಬಾಲಿವುಡ್‌ ನಟಿಯು ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೂನ್‌ 6ರಂದೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

ಜೂನ್‌ 6ರಂದೇ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದು, ಯಾರಿಗೂ ಗೊತ್ತಾಗಿಲ್ಲ. ಮನೆಯಲ್ಲಿ ಯಾರೂ ಇರಲಿಲ್ಲ ಹಾಗೂ ಅಕ್ಕಪಕ್ಕದ ಮನೆಯವರಿಗೂ ವಿಷಯ ಗೊತ್ತಾಗಿಲ್ಲ. ಕೆಲ ದಿನಗಳ ಬಳಿಕ ಅಪಾರ್ಟ್‌ಮೆಂಟ್‌ನಲ್ಲಿ ದುರ್ವಾಸನೆ ಕಂಡುಬಂದಿದ್ದು, ಕೂಡಲೇ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಫ್ಲ್ಯಾಟ್‌ ಬಾಗಿಲು ತೆಗೆದಾಗ ನಟಿಯ ಶವವು ಕೊಳೆತ ರೀತಿಯಲ್ಲಿ ಪತ್ತೆಯಾಗಿದೆ. ಅಂಧೇರಿಯ ಓಶ್ವಿವಾರ ಪ್ರದೇಶದಲ್ಲಿರುವ ಫ್ಲ್ಯಾಟ್‌ನಲ್ಲಿ ನಟಿಯು ವಾಸವಿದ್ದರು.

ನೂರ್‌ ಮಾಳವಿಕಾ ದಾಸ್‌ ಅವರು ಹಿಂದಿ ಸಿನಿಮಾಗಳು ಹಾಗೂ ವೆಬ್‌ಸಿರೀಸ್‌ಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು. ಸಿಸ್ಕಿಯಾನ್‌, ವಾಕ್‌ಮನ್‌, ತೀತ್ರಿ ಚಟ್ನಿ, ಜಜ್ಞ ಉಪಾಯ್‌, ಚಾರ್‌ಮಸುಖ್‌, ದೇಖ್‌ ಅನ್‌ದೇಖಿ, ಬ್ಯಾಕ್‌ರೋಡ್‌ ಹಲ್‌ಚಲ್‌ ಸೇರಿ ಹಲವು ಸಿನಿಮಾ, ಸಿರೀಸ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಅದರಲ್ಲೂ, ದಿ ಟ್ರಯಲ್‌ ವೆಬ್‌ಸಿರೀಸ್‌ ಅವರಿಗೆ ಹೆಚ್ಚು ಹೆಸರು ತಂದುಕೊಂಡಿತ್ತು. ಕಾಜೋಲ್‌ ಜತೆ ಅವರು ತೆರೆ ಹಂಚಿಕೊಂಡಿದ್ದರು. ಅವರು ನಟಿಸಿದ ಕೆಲ ಸಿನಿಮಾಗಳು ಬಿಡುಗಡೆಗೆ ಬಾಕಿ ಇವೆ ಎಂದು ತಿಳಿದುಬಂದಿದೆ.

ಅಸ್ಸಾಂ ಮೂಲದವರಾದ ನೂರ್‌ ಮಾಳವಿಕಾ ದಾಸ್‌ ಅವರು ನಟನೆಗೆ ಕಾಲಿಡುವ ಮೊದಲು ಕತಾರ್‌ ಏರ್‌ವೇಸ್‌ನಲ್ಲಿ ಗಗನಸಖಿಯಾಗಿದ್ದರು. ಇನ್‌ಸ್ಟಾಗ್ರಾಂನಲ್ಲಿ 1.63 ಲಕ್ಷ ಫಾಲೋವರ್‌ಗಳನ್ನು ಹೊಂದಿರುವ ನಟಿಯು ಆಗಾಗ ಫೋಟೊ ಹಾಗೂ ವಿಡಿಯೊಗಳನ್ನು ಪೋಸ್ಟ್‌ ಮಾಡುತ್ತ ಸಕ್ರಿಯರಾಗಿದ್ದರು. ಕೆಲ ದಿನಗಳ ಹಿಂದಷ್ಟೇ ನಟಿಯು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಕೂಡ ಮಾಡಿದ್ದರು. ಇಷ್ಟೆಲ್ಲ ಸಕ್ರಿಯರಾಗಿದ್ದ ನಟಿಯು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನೆಂದು ತಿಳಿದುಬಂದಿಲ್ಲ.

ಇದನ್ನೂ ಓದಿ: ನಟಿ ಪವಿತ್ರ ಜಯರಾಮ್‌ ಸಾವಿನ ಬೆನ್ನಲ್ಲೇ ಪ್ರಿಯತಮ ಚಂದ್ರಕಾಂತ್ ಆತ್ಮಹತ್ಯೆ; ಖಿನ್ನತೆಗೆ ನಟ ಬಲಿ?

Continue Reading

ಬಾಲಿವುಡ್

Sonakshi Sinha: ಜಹೀರ್ ಇಕ್ಬಾಲ್ ಜತೆ ಜೂನ್ 23ರಂದು ಸೋನಾಕ್ಷಿ ಸಿನ್ಹಾ ಅದ್ಧೂರಿ ಮದುವೆ?

Sonakshi Sinha: ಸೋನಾಕ್ಷಿ 2010ರಲ್ಲಿ ʻದಬಾಂಗ್‌ʼ ಸಿನಿಮಾದಿಂದ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರೆ, ಜಹೀರ್ ಅವರ ಮೊದಲ ಚಿತ್ರ 2019ರಲ್ಲಿ ತೆರೆ ಕಂಡ ʻನೋಟ್‌ಬುಕ್ʼ ಆಗಿತ್ತು. ʻಡಬಲ್ ಎಕ್ಸ್‌ಎಲ್‌ʼ ಸಿನಿಮಾದಲ್ಲಿ ಜಹೀರ್ ಇಕ್ಬಾಲ್ ಹಾಗೂ ಸೋನಾಕ್ಷಿ ಸಿನ್ಹಾ ಒಟ್ಟಿಗೆ ನಟಿಸಿದ್ದರುಈ ಹಿಂದೆ ಸಲ್ಮಾನ್‌ ಖಾನ್‌ ಅವರ ಸಹೋದರಿ ಅರ್ಪಿತಾ ಖಾನ್‌ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸೋನಾಕ್ಷಿಯನ್ನು “ಅತ್ತಿಗೆ” ಎಂದು ಕರೆದಿದ್ದರು. ಕೆಲವೇ ಕ್ಷಣಗಳಲ್ಲಿ ಆ ಸ್ಟೋರಿಯನ್ನು ಡಿಲೀಟ್‌ ಮಾಡಿದ್ದರು ಕೂಡ. ಆಗ ಸೋನಾಕ್ಷಿ ಹಾಗೂ ಜಹೀರ್‌ ನಡುವೆ ಸಂಬಂಧ ಇದೆ ಎಂಬ ಸುದ್ದಿ ವೈರಲ್‌ ಆಗಿತ್ತು. .

VISTARANEWS.COM


on

Sonakshi Sinha to marry boyfriend Zaheer Iqbal on June 23
Koo

ಬೆಂಗಳೂರು: ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರು ತಮ್ಮ ಬಾಯ್‌ಫ್ರೆಂಡ್‌ ನಟ ಜಹೀರ್ ಇಕ್ಬಾಲ್ ಜತೆ ಜೂನ್ 23ರಂದು ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಸೋನಾಕ್ಷಿ ಮತ್ತು ಜಹೀರ್ ದಕ್ಷಿಣ ಮುಂಬೈನಲ್ಲಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಆದರೆ ಜೋಡಿ ಎಲ್ಲಿಯೂ ತಮ್ಮ ಮದುವೆ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಸೋನಾಕ್ಷಿ ಹಾಗೂ ಜಹೀರ್ ಹಲವು ವರ್ಷಗಳಿಂದ ಸುತ್ತಾಟ ನಡೆಸುತ್ತಿದ್ದರೂ ಪ್ರೀತಿ ವಿಚಾರವನ್ನು ಒಪ್ಪಿಕೊಂಡಿಲ್ಲ. ಇತ್ತೀಚೆಗೆ ಇವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಇವರು ಈಗ ವಿವಾಹ ಆಗುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಸೋನಾಕ್ಷಿ 2010ರಲ್ಲಿ ʻದಬಾಂಗ್‌ʼ ಸಿನಿಮಾದಿಂದ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರೆ, ಜಹೀರ್ ಅವರ ಮೊದಲ ಚಿತ್ರ 2019ರಲ್ಲಿ ತೆರೆ ಕಂಡ ʻನೋಟ್‌ಬುಕ್ʼ ಆಗಿತ್ತು. ʻಡಬಲ್ ಎಕ್ಸ್‌ಎಲ್‌ʼ ಸಿನಿಮಾದಲ್ಲಿ ಜಹೀರ್ ಇಕ್ಬಾಲ್ ಹಾಗೂ ಸೋನಾಕ್ಷಿ ಸಿನ್ಹಾ ಒಟ್ಟಿಗೆ ನಟಿಸಿದ್ದರು.

ಮುಂಬೈನ ಬಾಸ್ಟಿಯನ್​ನಲ್ಲಿ ವಿವಾಹ ನಡೆಯಲಿದೆ ಎನ್ನಲಾಗಿದೆ. ಜಹೀರ್ ಅವರನ್ನು ಸೋನಾಕ್ಷಿ ಭೇಟಿ ಮಾಡಿದ್ದು ಸಲ್ಮಾನ್ ಖಾನ್ ಮೂಲಕ. ಸಲ್ಲು ಹಾಗೂ ಜಹೀರ್ ಗೆಳೆಯರು. ಭೇಟಿ ಬಳಿಕ ಸೋನಾಕ್ಷಿ ಹಾಗೂ ಜಹೀರ್ ಮಧ್ಯೆ ಫ್ರೆಂಡ್​ಶಿಪ್ ಬೆಳೆಯಿತು. ಆ ಬಳಿಕ ಅದು ಪ್ರೀತಿಗೆ ತಿರುಗಿತು ಎನ್ನಲಾಗಿದೆ.

ಕಳೆದ ವಾರ ಸೋನಾಕ್ಷಿ ಅವರ ಹುಟ್ಟುಹಬ್ಬದಂದು, ಜಹೀರ್ ಹಲವು ಫೋಟೊಗಳನ್ನು ಹಂಚಿಕೊಂಡಿದ್ದರು. ಮೊದಲ ಚಿತ್ರದಲ್ಲಿ ಸೋನಾಕ್ಷಿ ಅವರನ್ನು ಜಹೀರ್ ಬಿಗಿಯಾಗಿ ಅಪ್ಪಿಕೊಳ್ಳುವುದು ಇದೆ. “ಜನ್ಮದಿನದ ಶುಭಾಶಯಗಳು ಸೋನಾʼʼಎಂದು ಶೀರ್ಷಿಕೆ ನೀಡಿದ್ದರು.

ಈ ಹಿಂದೆ ಸಲ್ಮಾನ್‌ ಖಾನ್‌ ಅವರ ಸಹೋದರಿ ಅರ್ಪಿತಾ ಖಾನ್‌ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸೋನಾಕ್ಷಿಯನ್ನು “ಅತ್ತಿಗೆ” ಎಂದು ಕರೆದಿದ್ದರು. ಕೆಲವೇ ಕ್ಷಣಗಳಲ್ಲಿ ಆ ಸ್ಟೋರಿಯನ್ನು ಡಿಲೀಟ್‌ ಮಾಡಿದ್ದರು ಕೂಡ. ಆಗ ಸೋನಾಕ್ಷಿ ಹಾಗೂ ಜಹೀರ್‌ ನಡುವೆ ಸಂಬಂಧ ಇದೆ ಎಂಬ ಸುದ್ದಿ ವೈರಲ್‌ ಆಗಿತ್ತು.

ಇದನ್ನೂ ಓದಿ: Sonakshi Sinha : ಪ್ರೀತಿಯಲ್ಲಿ ಬಿದ್ದ ಸೋನಾಕ್ಷಿ, ಲವ್‌ ಯು ಎಂದು ಪೋಸ್ಟ್‌ ಹಾಕಿದ ಬಾಯ್‌ಫ್ರೆಂಡ್‌ ಯಾರು ನೋಡಿ!

ಸೋನಾಕ್ಷಿ ಕೊನೆಯದಾಗಿ ಸಂಜಯ್ ಲೀಲಾ ಬನ್ಸಾಲಿಯವರ ಸಿರೀಸ್‌ ಹೀರಾಮಂಡಿ: ದಿ ಡೈಮಂಡ್ ಬಜಾರ್‌ನಲ್ಲಿ ಕಾಣಿಸಿಕೊಂಡಿದ್ದರು. ಹೀರಾಮಂಡಿ: ದಿ ಡೈಮಂಡ್ ಬಜಾರ್‌ ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಹೀರಾಮಂಡಿ: ದಿ ಡೈಮಂಡ್ ಬಜಾರ್‌ನಲ್ಲಿ ಮನಿಶಾ ಕೊಯಿರಾಲಾ, ರಿಚಾ ಚಡ್ಡಾ, ಸಂಜೀದಾ ಶೇಖ್, ಅದಿತಿ ರಾವ್ ಹೈದರಿ, ಶರ್ಮಿನ್ ಸೆಗಲ್ ಮೆಹ್ತಾ, ಫರೀದಾ ಜಲಾಲ್, ಫರ್ದೀನ್ ಖಾನ್ ಮತ್ತು ಅಧ್ಯಯನ್ ಸುಮನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Continue Reading

ಬಾಲಿವುಡ್

Kangana Ranaut: ಪ್ರಮಾಣ ವಚನ ಸಮಾರಂಭದಲ್ಲಿ ಬಿಳಿ ಸೀರೆಯಲ್ಲಿ ಮಿಂಚಿದ ಕಂಗನಾ!

ಕಂಗನಾ ರಣಾವತ್ ಹಿಮಾಚಲ ಪ್ರದೇಶದ ಮಂಡಿಯಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸಿದ್ದರು. ನಟಿಯ ಮುಂದೆ ಕಾಂಗ್ರೆಸ್ ಪಕ್ಷದ ನಾಯಕ ವಿಕ್ರಮಾದಿತ್ಯ ಸಿಂಗ್ ಇದ್ದರು. ಕಂಗನಾ ಅವರನ್ನು 74,755 ಮತಗಳಿಂದ ಸೋಲಿಸಿದರು.ಕಂಗನಾ ರಣಾವತ್ ಜೂನ್ 6 ರಂದು ನವದೆಹಲಿಗೆ ಪ್ರಯಾಣಿಸುತ್ತಿದ್ದಾಗ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಸಿಐಎಸ್ಎಫ್ ಕಾನ್ಸ್‌ಟೇಬಲ್ ಕಪಾಳಮೋಕ್ಷ ಮಾಡಿದ್ದರು.

VISTARANEWS.COM


on

Kangana Ranaut Looks Gorgeous In A White Saree
Koo

ಬೆಂಗಳೂರು: ಕಂಗನಾ ರಣಾವತ್ (Kangana Ranaut) ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಮಂಡಿ ಕ್ಷೇತ್ರದಿಂದ ಗೆದ್ದಿದ್ದಾರೆ. ಪ್ರಮಾಣ ವಚನ ಸಮಾರಂಭದಲ್ಲಿ ಕಂಗನಾ ಭಾಗಿಯಾಗಿದ್ದರು. ಕಂಗನಾ ಪ್ರಮಾಣ ವಚನ ಸಮಾರಂಭದಲ್ಲಿ ಸೀರೆಯಲ್ಲಿ ಮಿಂಚಿದ್ದಾರೆ. ಬಿಳಿ ಸೀರೆಯಲ್ಲಿ ನಟಿ ಕಂಗೊಳಿಸಿದ್ದಾರೆ. ಶಾರುಖ್ ಖಾನ್, ಅಕ್ಷಯ್ ಕುಮಾರ್, ವಿಕ್ರಾಂತ್ ಮಾಸ್ಸೆ, ಮತ್ತು ಅನುಪಮ್ ಖೇರ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಭಾಗಿಯಾಗಿದ್ದರು.

ಸಮಾರಂಭದ ಕೇಂದ್ರ ಬಿಂದುವಿನಂತೆ ಬಿಟೌನ್‌ ಕ್ವೀನ್‌ ಕಂಗೊಳಿಸುತ್ತಿದ್ದರು. ಬಿಳಿ ಬಣ್ಣದ ಸೀರೆಯಲ್ಲಿ, ಮುತ್ತಿನ ನೆಕ್ಲೇಸ್‌ ಧರಿಸಿ ಕಂಗನಾ ಕಾಂತಿಯುತವಾಗಿ ಕಾಣಿಸಿಕೊಂಡಿದ್ದಾರೆ. ನಟಿಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ..ಸ್ವತಃ ವಿಡಿಯೊ ಹಂಚಿಕೊಂಡಿರುವ ಕಂಗನಾ ‘ಪ್ರಮಾಣ ದಿನದಂದು ನನ್ನ ನೋಟ’ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.

ಕಂಗನಾ ರಣಾವತ್ ಹಿಮಾಚಲ ಪ್ರದೇಶದ ಮಂಡಿಯಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸಿದ್ದರು. ನಟಿಯ ಮುಂದೆ ಕಾಂಗ್ರೆಸ್ ಪಕ್ಷದ ನಾಯಕ ವಿಕ್ರಮಾದಿತ್ಯ ಸಿಂಗ್ ಇದ್ದರು. ಕಂಗನಾ ಅವರನ್ನು 74,755 ಮತಗಳಿಂದ ಸೋಲಿಸಿದರು.

ಇದನ್ನೂ ಓದಿ: Sushant Singh: ಕೇದಾರನಾಥಕ್ಕೆ ಭೇಟಿ ಕೊಟ್ಟಾಗ ಸುಶಾಂತ್ ಸಿಂಗ್ ನೆನೆದು ಕಣ್ಣೀರಿಟ್ಟ ಸಹೋದರಿ!

ಕಂಗನಾ ರಣಾವತ್ ಜೂನ್ 6 ರಂದು ನವದೆಹಲಿಗೆ ಪ್ರಯಾಣಿಸುತ್ತಿದ್ದಾಗ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಸಿಐಎಸ್ಎಫ್ ಕಾನ್ಸ್‌ಟೇಬಲ್ ಕಪಾಳಮೋಕ್ಷ ಮಾಡಿದ್ದರು. 2020 ರಲ್ಲಿ, ಕಂಗನಾ ರಣಾವತ್‌ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದ ಪಂಜಾಬ್​ನ ಮಹಿಳೆಯೊಬ್ಬರನ್ನು ತಪ್ಪಾಗಿ ಅಂದಾಜಿಸಿದ್ದರು. ಅದಕ್ಕಿಂತ ಹಿಂದೆ ಶಾಹೀನ್ ಬಾಗ್​ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಿಲ್ಕಿಸ್ ಬಾನೊ ಅವರು ಎಂದುಕೊಂಡಿದ್ದರು. ಪ್ರತಿಭಟನೆಗೆ ಬರುವ ಮಹಿಳೆಯರೆಲ್ಲರೂ 100 ರೂಪಾಯಿಗೆ ಸಿಗುತ್ತಾರೆ ಎಂದು ಹೇಳಿದ್ದರು. ಇದು ದೊಡ್ಡ ವಿವಾದ ಸೃಷ್ಟಿಸಿತ್ತು. ಅಂದ ಹಾಗೆ ಕಂಗನಾಗೆ ಹೊಡೆದ ಕಾನ್​ಸ್ಟೇಬಲ್​ ಕುಲ್ವಿಂದರ್ ಕೌರ್​ ತಾಯಿಯೂ ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಂಗನಾ ಹೇಳಿಕೆಯಿಂದ ಕೋಪಗೊಂಡಿದ್ದ ಅವರು ಪ್ರತಿಕಾರ ತೀರಿಸಲು ಕಾದಿದ್ದರು. ಅಂತೆಯೇ ಚಂಡಿಗಢದಲ್ಲಿ ತಪಾಸಣಾ ಕೇಂದ್ರಕ್ಕೆ ಬರುತ್ತಿದ್ದಂತೆ ಕಪಾಳ ಮೋಕ್ಷ ಮಾಡಿದ್ದಾರೆ.

Continue Reading

ಬಾಲಿವುಡ್

Poonam Pandey: ಪೂನಂ ಪಾಂಡೆಯ ರೆಸಿಪಿಗಿಂತ ಏಪ್ರನ್ ಮೇಲೆ ನೆಟ್ಟಿಗರ ಕಣ್ಣು; ರಸಿಕರ ಕಣ್ಣರಳಿಸಿದ ಹಾಟ್‌ ಬೆಡಗಿ!

ಪೂನಂ ಪಾಂಡೆ (Poonam Pandey) ಅವರು ಗರ್ಭಕಂಠ ಕ್ಯಾನ್ಸರ್‌ನಿಂದ (Cervical Cancer) ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಡಿ, ಮರುದಿನ ‘ಇಲ್ಲ ನಾನು ಸತ್ತಿಲ್ಲ’ ಎಂದು ನಟಿ ನೀಡಿದ ಸ್ಪಷ್ಟನೆ ಕೂಡ ಭಾರಿ ಸುದ್ದಿಯಾಗಿತ್ತು. ಇದೀಗ ಪೂನಂ ಪಾಂಡೆ (Poonam Pandey) ಬಿಳಿ ಬಣ್ಣದ ಏಪ್ರನ್ ಧರಿಸಿ, ತಲೆಗೊಂಡು ಚೆಫ್ ಟೋಪಿ ಹಾಕಿ ಕೇಕ್ ತಯಾರಿಸುವುದು ಹೇಗೆ ಎಂದು ಹೇಳಿದ್ದಾರೆ.

VISTARANEWS.COM


on

Poonam Pandey making cake with ice cream with hot look
Koo

ನಟಿ ಪೂನಂ ಪಾಂಡೆ (Poonam Pandey) ಟಾಪ್‌ಲೆಸ್‌ ಅವತಾರಗಳು ಹೊಸದಲ್ಲ . ಆಗಾಗ ತನ್ನ ಮೈಮಾಟವನ್ನು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಪ್ರದರ್ಶನಕ್ಕೀಡುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ.

ಇದೀಗ ಪೂನಂ ಬಿಳಿ ಬಣ್ಣದ ಏಪ್ರನ್ ಧರಿಸಿ, ತಲೆಗೊಂಡು ಚೆಫ್ ಟೋಪಿ ಹಾಕಿ ಕೇಕ್ ತಯಾರಿಸುವುದು ಹೇಗೆ ಎಂದು ಹೇಳಿದ್ದಾರೆ.

ಈ ಬಾರಿ ಪೂನಂ ಪಾಂಡೆ ಹಾಟ್ ಆಗಿ ಕಾಣಿಸಿಕೊಂಡು ಕೇಕ್ ವಿಥ್ ಐಸ್‌ಕ್ರೀಂ ರೆಸಿಪಿ ಟಿಪ್ಸ್ ನೀಡಿದ್ದಾರೆ. ಆದರೆ ಅಭಿಮಾನಿಗಳ ಕಣ್ಣು ಪೂನಂ ಪಾಂಡೆ ಧರಿಸಿದ ಏಪ್ರನ್ ಮೇಲೆ ಇತ್ತು. ಪೂನಂ ಫ್ಯಾನ್ಸ್‌ ಕಮೆಂಟ್‌ ಮೂಲಕ ಏಪ್ರನ್ ಕುರಿತಾಗಿಯೇ ಮಾತನಾಡಿದ್ದಾರೆ.

ಇದನ್ನೂ ಓದಿ: Radhika Merchant: ಪ್ರಿವೆಡ್ಡಿಂಗ್‌ಗೆ ಅಂಬಾನಿ ಸೊಸೆ ಧರಿಸಿದ್ದು 65 ವರ್ಷ ಹಳೆಯ ಸ್ಕರ್ಟ್‌! ಇದರ ಬೆಲೆ?

ಚಾಕ್ಲೆಟ್ ಕೇಕ್ ತಯಾರಿಸಿದ್ದಾರೆ ಪೂನಂ. ಚಾಕ್ಲೆಟ್ ಕೇಕ್ ಜತೆಗೆ ಐಸ್‌ಕ್ರೀಮ್ ಹಾಕಿ ಸವಿದಿದ್ದಾರೆ. ತಮ್ಮ ಈ ಐಸ್‌ ಕ್ರೀಮ್ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಕೂಡ ಪೂನಂ ಪಾಂಡೆ ಹಂಚಿಕೊಂಡಿದ್ದಾರೆ. ಕೆಲವರು ನಿಮ್ಮ ರೆಸಿಪಿ ಮತ್ತು ನೀವು ಎರಡು ಅದ್ಭುತ ಎನ್ನುತ್ತಿದ್ದಾರೆ. ಪೂನಂ ಪಾಂಡೆಯ ಸೌಂದರ್ಯವನ್ನೂ ಹಾಡಿ ಹೊಗಳುತ್ತಿದ್ದಾರೆ.

Continue Reading
Advertisement
Modi 3.0 Cabinet
ದೇಶ32 mins ago

Modi 3.0 Cabinet: ಅಮಿತ್‌ ಶಾಗೆ ಮತ್ತೆ ಗೃಹ ಖಾತೆ; ಇಲ್ಲಿದೆ ಮೋದಿ ಸಂಪುಟ ಸಚಿವರು ಮತ್ತು ಖಾತೆ ಪಟ್ಟಿ

ಕರ್ನಾಟಕ35 mins ago

Modi 3.0 Cabinet: ಜೋಶಿಗೆ ಆಹಾರ, ಎಚ್‌ಡಿಕೆಗೆ ಬೃಹತ್ ಕೈಗಾರಿಕೆ‌, ನಿರ್ಮಲಾಗೆ ವಿತ್ತ, ಸೋಮಣ್ಣಗೆ ಡಬಲ್‌ ಖುಷಿ, ಶೋಭಾಗೆ MSME

Sowing seed distribution in Shira by MLA TB Jayachandra
ತುಮಕೂರು47 mins ago

Shira News: ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಶಾಸಕ ಟಿ.ಬಿ.ಜಯಚಂದ್ರ

World Environment Day celebration in Banavasi
ಉತ್ತರ ಕನ್ನಡ48 mins ago

Banavasi News: ಬನವಾಸಿಯಲ್ಲಿ ವಿಶ್ವ ಪರಿಸರ ದಿನಾಚರಣೆ

Vinay Kulkarni
ಕರ್ನಾಟಕ2 hours ago

Vinay Kulkarni: ವಿನಯ್ ಕುಲಕರ್ಣಿಗೆ ತೀವ್ರ ಹಿನ್ನಡೆ; ಸಿಬಿಐ ವಿಶೇಷ ಕೋರ್ಟ್‌ನ ತೀರ್ಪು ಎತ್ತಿ ಹಿಡಿದ ಸುಪ್ರೀಂ

Modi 3.0 Cabinet
ಪ್ರಮುಖ ಸುದ್ದಿ2 hours ago

Modi 3.0 Cabinet: ಮೊದಲ ಸಂಪುಟ ಸಭೆಯಲ್ಲೇ ಮೋದಿ ಸಿಕ್ಸರ್;‌ ಬಡವರಿಗೆ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅಸ್ತು

Students Fashion
ಫ್ಯಾಷನ್2 hours ago

Students Fashion: ಕಾಲೇಜು ಹುಡುಗಿಯರ ಫ್ಯಾಷನ್‌ ಲಿಸ್ಟ್‌ಗೆ ಸೇರಿದ ಮಾರ್ಬಲ್‌ ಪ್ರಿಂಟೆಡ್‌ ಕ್ರಾಪ್‌ ಟಾಪ್ಸ್!

Suresh Gopi
ದೇಶ2 hours ago

Suresh Gopi: ಸಚಿವ ಸ್ಥಾನಕ್ಕೆ ಬಿಜೆಪಿಯ ಸುರೇಶ್‌ ಗೋಪಿ ರಾಜೀನಾಮೆ; ಮಹತ್ವದ ಸ್ಪಷ್ಟನೆ ಕೊಟ್ಟ ಸಂಸದ

Medical student commits suicide in Bengaluru
ಬೆಂಗಳೂರು3 hours ago

Medical Student : ಬೆಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿ ನೇಣಿಗೆ ಶರಣು

Shivaraj Kumar
ಕರ್ನಾಟಕ3 hours ago

Shivaraj Kumar: ನನ್ನ ಹೆಂಡತಿ ಗೆಲ್ಲಲಿ ಎಂದು ಆಸೆ ಪಟ್ಟಿದ್ದು ತಪ್ಪಾ?: ನಟ ಶಿವರಾಜ್‌ ಕುಮಾರ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ4 hours ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ7 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 week ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 week ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

ಟ್ರೆಂಡಿಂಗ್‌