Site icon Vistara News

Maharaj Movie: ಹಿಂದು ಧರ್ಮ, ಶ್ರೀಕೃಷ್ಣನ ಅವಹೇಳನ; ಆಮೀರ್ ಖಾನ್ ಪುತ್ರನಿಗೆ ಬಜರಂಗದಳ ವಾರ್ನಿಂಗ್!

Maharaj Movie Objects by Bajrang Dal Starring Junaid Khan

ಬೆಂಗಳೂರು: ಆಮೀರ್ ಖಾನ್ ಪುತ್ರ ಜುನೈದ್ ಖಾನ್ ಸಿನಿ ಪಯಣ ಶುರು ಮಾಡಿದ್ದಾರೆ. ಇದೀಗ ಅವರ ಸಿನಿಮಾ ಬಿಡುಗಡೆಯಾಗುವ ಮೊದಲೇ (Maharaj Movie) ವಿವಾದಕ್ಕೆ ಗುರಿಯಾಗಿದೆ. ಜುನೈದ್‌ (Junaid Khan) ನಟಿಸಿರುವ ‘ಮಹಾರಾಜ್’ ಸಿನಿಮಾ ಜೂನ್ 14ರಂದು ನೆಟ್‌ಫ್ಲಿಕ್ಸ್‌ನಲ್ಲಿ (Netflix) ಪ್ರದರ್ಶನಗೊಳ್ಳಲಿದೆ. ಆದರೀಗ ಸಿನಿಮಾ ಬಗ್ಗೆ ಬಜರಂಗದಳದಿಂದ ಆಕ್ಷೇಪ ವ್ಯಕ್ತವಾಗಿದೆ. ಹಿಂದು ಧರ್ಮದ ಬಗ್ಗೆ ಅವಹೇಳನಕಾರಿ ದೃಶ್ಯ ಸಿನಿಮಾದಲ್ಲಿದೆ ಎಂದು ಪತ್ರದ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿದ್ಧಾರ್ಥ್ ಪಿ ಮಲ್ಹೋತ್ರಾ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ಜುನೈದ್ ಜತೆ ಮಹಾರಾಜ್ ಚಿತ್ರದಲ್ಲಿ ಜೈದೀಪ್ ಅಹ್ಲಾವತ್, ಶಾಲಿನಿ ಪಾಂಡೆ ಮತ್ತು ಶಾರ್ವರಿ ವಾಘ್ ಅವರು ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರತಂಡ ಇನ್ನೂ ಟ್ರೈಲರ್‌ ರಿಲೀಸ್‌ ಮಾಡಿಲ್ಲ. ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾದಲ್ಲಿ ಹಿಂದು ಧರ್ಮದ ಬಗ್ಗೆ ಅವಹೇಳನಕಾರಿ ದೃಶ್ಯಗಳು ಇವೆ ಎಂದು ವಿರೋಧಿಸಿ ಬಜರಂಗದಳ ಈ ರೀತಿ ಪತ್ರ ಬರೆದುಕೊಂಡಿದೆ.

ʻʻಈ ಸಿನಿಮಾದಲ್ಲಿ ಹಿಂದು ಧರ್ಮದ ಗುರುವನ್ನು ವಿಲನ್‌ ರೀತಿ ತೋರಿಸಲಾಗಿದೆ. ಭಗವಾನ್‌ ಶ್ರೀಕೃಷ್ಣನನ್ನು ಕೆಲವೊಂದು ದೃಶ್ಯಗಳಲ್ಲಿ ಕೆಟ್ಟದ್ದಾಗಿ ತೋರಿಸಿದ್ದಾರೆ. ಕೃಷ್ಣ ಲೀಲೇಯನ್ನೇ ಪ್ರಮುಖ ಹೈಲೈಟ್‌ ಮಾಡಿದ್ದಾರೆ. 150 ವರ್ಷಗಳ ಹಿಂದಿನ ನ್ಯಾಯಾಲಯದ ತೀರ್ಪನ್ನು ಆಧರಿಸಿದ ಚಲನಚಿತ್ರವು ಒಂದು ಧರ್ಮಕ್ಕೆ ವಿರುದ್ಧವಾಗಿದೆ. ಆ ಸಮಯದಲ್ಲಿ ಬ್ರಿಟಿಷ್ ಸರ್ಕಾರವಿತ್ತು. ಆಗ ಬ್ರಿಟಿಷರು ಹಿಂದುಗಳು ಮತ್ತು ಹಿಂದು ಧರ್ಮದ ವಿರುದ್ಧವಾಗಿದ್ದರು. ಆ ರೀತಿಯ ದೃಶ್ಯ ಸಿನಿಮಾದಲ್ಲಿದೆ. ಮಾತ್ರವಲ್ಲ ಮತಾಂತರಗೊಂಡ ದೃಶ್ಯಗಳು ಇವೆ. ಸಿನಿಮಾ ಬಿಡುಗಡೆಯ ಮೊದಲು ಪ್ರೀಮಿಯರ್ ಆಗಬೇಕು. ನಮಗೆ ಸಿನಿಮಾ ತೋರಿಸಬೇಕು. ಧರ್ಮ ಅಥವಾ ಯಾವುದೇ ಹಿಂದು ಸಮುದಾಯದ ವಿರುದ್ಧ ಯಾವುದೇ ಆಕ್ಷೇಪಣೆ ಇದ್ದರೆ, ಆ ದೃಶಗಳನ್ನು ತೆಗೆಯಬೇಕು. ಒಂದು ವೇಳೆ ಸರಿಯಾಗಿದ್ದರೆ ನಾವು ಆಕ್ಷೇಪಣೆ ಎತ್ತುವುದಿಲ್ಲ. ಹಾಗೂ ಬಿಡುಗಡೆ ಮಾಡಿದರೆ, ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲು ಕೊಡುವುದಿಲ್ಲʼʼಎಂದು ಪತ್ರ ಬರೆದಿದ್ದಾರೆ.

ಇದನ್ನೂ ಓದಿ: Pawan Kalyan: ಮರು ಬಿಡುಗಡೆಯಾಗುತ್ತಿದೆ ಪವನ್ ಕಲ್ಯಾಣ್ ಹಳೆಯ ಸಿನಿಮಾ..!

ಯಶ್ ರಾಜ್ ಫಿಲ್ಮ್ಸ್ ಮತ್ತು ನೆಟ್‌ಫ್ಲಿಕ್ಸ್ ಎರಡನ್ನೂ ಮಾಧ್ಯಮವೊಂದು ಪತ್ರದ ಬಗ್ಗೆ ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಪತ್ರದ ಕುರಿತು ಇದುವೆರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಯಶ್ ರಾಜ್ ಫಿಲ್ಮ್ಸ್ ಹಾಗೂ ನೆಟ್‌ಫ್ಲಿಕ್ಸ್ ನೀಡಿಲ್ಲ ಎಂದು ವರದಿಯಾಗಿದೆ.

1862ರಲ್ಲಿ ಭಾರತದಲ್ಲಿದ್ದ ಮೂರು ವಿಶ್ವವಿದ್ಯಾನಿಲಯಗಳ ಬಗ್ಗೆ “ಮಹಾರಾಜ್” ಸಿನಿಮಾವನ್ನು ಮಾಡಲಾಗಿದೆ. ದೇಶದಲ್ಲಿ ಸ್ಥಿತಿ ಹದಗೆಟ್ಟಿದ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಕಾನೂನು ಹೋರಾಟದಲ್ಲಿ ಧೈರ್ಯಶಾಲಿಯಾಗಿ ನುಗ್ಗಿ ಯಾವ ರೀತಿ ಪರಿಸ್ಥಿತಿ ಎದುರಿಸುತ್ತಾನೆ ಎಂಬಾ ಕಥಾಹಂದರವನ್ನು ಹೊಂದಿರುವ ನೈಜ ಕಥೆ ಆಗಿದೆ.

ಜುನೈದ್ ಖಾನ್ ಈಗ ಈ ಸಿನಿಮಾ ,ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. 2ನೇ ಸಿನಿಮಾದಲ್ಲಿ ನಟಿ ಸಾಯಿ ಪಲ್ಲ ಜತೆ ಜುನೈದ್ ಖಾನ್ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಮೂರನೇ ಸಿನಿಮಾದಲ್ಲಿ ನಟಿ ಶ್ರೀದೇವಿ ಎರಡನೇ ಪುತ್ರಿ ಖುಷಿ ಕಪೂರ್ ಜತೆ ತಮಿಳು ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.


Exit mobile version