Maharaj Movie: ಹಿಂದು ಧರ್ಮ, ಶ್ರೀಕೃಷ್ಣನ ಅವಹೇಳನ; ಆಮೀರ್ ಖಾನ್ ಪುತ್ರನಿಗೆ ಬಜರಂಗದಳ ವಾರ್ನಿಂಗ್! - Vistara News

ಬಾಲಿವುಡ್

Maharaj Movie: ಹಿಂದು ಧರ್ಮ, ಶ್ರೀಕೃಷ್ಣನ ಅವಹೇಳನ; ಆಮೀರ್ ಖಾನ್ ಪುತ್ರನಿಗೆ ಬಜರಂಗದಳ ವಾರ್ನಿಂಗ್!

VISTARANEWS.COM


on

Maharaj Movie Objects by Bajrang Dal Starring Junaid Khan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಆಮೀರ್ ಖಾನ್ ಪುತ್ರ ಜುನೈದ್ ಖಾನ್ ಸಿನಿ ಪಯಣ ಶುರು ಮಾಡಿದ್ದಾರೆ. ಇದೀಗ ಅವರ ಸಿನಿಮಾ ಬಿಡುಗಡೆಯಾಗುವ ಮೊದಲೇ (Maharaj Movie) ವಿವಾದಕ್ಕೆ ಗುರಿಯಾಗಿದೆ. ಜುನೈದ್‌ (Junaid Khan) ನಟಿಸಿರುವ ‘ಮಹಾರಾಜ್’ ಸಿನಿಮಾ ಜೂನ್ 14ರಂದು ನೆಟ್‌ಫ್ಲಿಕ್ಸ್‌ನಲ್ಲಿ (Netflix) ಪ್ರದರ್ಶನಗೊಳ್ಳಲಿದೆ. ಆದರೀಗ ಸಿನಿಮಾ ಬಗ್ಗೆ ಬಜರಂಗದಳದಿಂದ ಆಕ್ಷೇಪ ವ್ಯಕ್ತವಾಗಿದೆ. ಹಿಂದು ಧರ್ಮದ ಬಗ್ಗೆ ಅವಹೇಳನಕಾರಿ ದೃಶ್ಯ ಸಿನಿಮಾದಲ್ಲಿದೆ ಎಂದು ಪತ್ರದ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿದ್ಧಾರ್ಥ್ ಪಿ ಮಲ್ಹೋತ್ರಾ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ಜುನೈದ್ ಜತೆ ಮಹಾರಾಜ್ ಚಿತ್ರದಲ್ಲಿ ಜೈದೀಪ್ ಅಹ್ಲಾವತ್, ಶಾಲಿನಿ ಪಾಂಡೆ ಮತ್ತು ಶಾರ್ವರಿ ವಾಘ್ ಅವರು ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರತಂಡ ಇನ್ನೂ ಟ್ರೈಲರ್‌ ರಿಲೀಸ್‌ ಮಾಡಿಲ್ಲ. ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾದಲ್ಲಿ ಹಿಂದು ಧರ್ಮದ ಬಗ್ಗೆ ಅವಹೇಳನಕಾರಿ ದೃಶ್ಯಗಳು ಇವೆ ಎಂದು ವಿರೋಧಿಸಿ ಬಜರಂಗದಳ ಈ ರೀತಿ ಪತ್ರ ಬರೆದುಕೊಂಡಿದೆ.

ʻʻಈ ಸಿನಿಮಾದಲ್ಲಿ ಹಿಂದು ಧರ್ಮದ ಗುರುವನ್ನು ವಿಲನ್‌ ರೀತಿ ತೋರಿಸಲಾಗಿದೆ. ಭಗವಾನ್‌ ಶ್ರೀಕೃಷ್ಣನನ್ನು ಕೆಲವೊಂದು ದೃಶ್ಯಗಳಲ್ಲಿ ಕೆಟ್ಟದ್ದಾಗಿ ತೋರಿಸಿದ್ದಾರೆ. ಕೃಷ್ಣ ಲೀಲೇಯನ್ನೇ ಪ್ರಮುಖ ಹೈಲೈಟ್‌ ಮಾಡಿದ್ದಾರೆ. 150 ವರ್ಷಗಳ ಹಿಂದಿನ ನ್ಯಾಯಾಲಯದ ತೀರ್ಪನ್ನು ಆಧರಿಸಿದ ಚಲನಚಿತ್ರವು ಒಂದು ಧರ್ಮಕ್ಕೆ ವಿರುದ್ಧವಾಗಿದೆ. ಆ ಸಮಯದಲ್ಲಿ ಬ್ರಿಟಿಷ್ ಸರ್ಕಾರವಿತ್ತು. ಆಗ ಬ್ರಿಟಿಷರು ಹಿಂದುಗಳು ಮತ್ತು ಹಿಂದು ಧರ್ಮದ ವಿರುದ್ಧವಾಗಿದ್ದರು. ಆ ರೀತಿಯ ದೃಶ್ಯ ಸಿನಿಮಾದಲ್ಲಿದೆ. ಮಾತ್ರವಲ್ಲ ಮತಾಂತರಗೊಂಡ ದೃಶ್ಯಗಳು ಇವೆ. ಸಿನಿಮಾ ಬಿಡುಗಡೆಯ ಮೊದಲು ಪ್ರೀಮಿಯರ್ ಆಗಬೇಕು. ನಮಗೆ ಸಿನಿಮಾ ತೋರಿಸಬೇಕು. ಧರ್ಮ ಅಥವಾ ಯಾವುದೇ ಹಿಂದು ಸಮುದಾಯದ ವಿರುದ್ಧ ಯಾವುದೇ ಆಕ್ಷೇಪಣೆ ಇದ್ದರೆ, ಆ ದೃಶಗಳನ್ನು ತೆಗೆಯಬೇಕು. ಒಂದು ವೇಳೆ ಸರಿಯಾಗಿದ್ದರೆ ನಾವು ಆಕ್ಷೇಪಣೆ ಎತ್ತುವುದಿಲ್ಲ. ಹಾಗೂ ಬಿಡುಗಡೆ ಮಾಡಿದರೆ, ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲು ಕೊಡುವುದಿಲ್ಲʼʼಎಂದು ಪತ್ರ ಬರೆದಿದ್ದಾರೆ.

ಇದನ್ನೂ ಓದಿ: Pawan Kalyan: ಮರು ಬಿಡುಗಡೆಯಾಗುತ್ತಿದೆ ಪವನ್ ಕಲ್ಯಾಣ್ ಹಳೆಯ ಸಿನಿಮಾ..!

ಯಶ್ ರಾಜ್ ಫಿಲ್ಮ್ಸ್ ಮತ್ತು ನೆಟ್‌ಫ್ಲಿಕ್ಸ್ ಎರಡನ್ನೂ ಮಾಧ್ಯಮವೊಂದು ಪತ್ರದ ಬಗ್ಗೆ ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಪತ್ರದ ಕುರಿತು ಇದುವೆರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಯಶ್ ರಾಜ್ ಫಿಲ್ಮ್ಸ್ ಹಾಗೂ ನೆಟ್‌ಫ್ಲಿಕ್ಸ್ ನೀಡಿಲ್ಲ ಎಂದು ವರದಿಯಾಗಿದೆ.

1862ರಲ್ಲಿ ಭಾರತದಲ್ಲಿದ್ದ ಮೂರು ವಿಶ್ವವಿದ್ಯಾನಿಲಯಗಳ ಬಗ್ಗೆ “ಮಹಾರಾಜ್” ಸಿನಿಮಾವನ್ನು ಮಾಡಲಾಗಿದೆ. ದೇಶದಲ್ಲಿ ಸ್ಥಿತಿ ಹದಗೆಟ್ಟಿದ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಕಾನೂನು ಹೋರಾಟದಲ್ಲಿ ಧೈರ್ಯಶಾಲಿಯಾಗಿ ನುಗ್ಗಿ ಯಾವ ರೀತಿ ಪರಿಸ್ಥಿತಿ ಎದುರಿಸುತ್ತಾನೆ ಎಂಬಾ ಕಥಾಹಂದರವನ್ನು ಹೊಂದಿರುವ ನೈಜ ಕಥೆ ಆಗಿದೆ.

ಜುನೈದ್ ಖಾನ್ ಈಗ ಈ ಸಿನಿಮಾ ,ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. 2ನೇ ಸಿನಿಮಾದಲ್ಲಿ ನಟಿ ಸಾಯಿ ಪಲ್ಲ ಜತೆ ಜುನೈದ್ ಖಾನ್ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಮೂರನೇ ಸಿನಿಮಾದಲ್ಲಿ ನಟಿ ಶ್ರೀದೇವಿ ಎರಡನೇ ಪುತ್ರಿ ಖುಷಿ ಕಪೂರ್ ಜತೆ ತಮಿಳು ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.


ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Amithab Bacchan :14ನೇ ವರ್ಷಕ್ಕೆ ಕಾಲಿಟ್ಟ ʼರಾವಣ್ʼ ಚಿತ್ರ; ಮಗನನ್ನು ಹೊಗಳಿ ಸೊಸೆಯನ್ನು ನಿರ್ಲಕ್ಷಿಸಿದ ಅಮಿತಾಭ್!

Amithab Bacchan: ನಟ ಅಮಿತಾಬ್ ಬಚ್ಚನ್ ಅವರು ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ತಮ್ಮ ಮಗ ಅಭಿಷೇಕ್ ಬಚ್ಚನ್ ಅಭಿನಯದ ‘ರಾವಣ್’ ಚಿತ್ರ 14ನೇ ವರ್ಷಕ್ಕೆ ಕಾಲಿಟ್ಟ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅಭಿಷೇಕ್ ಅವರ ನಟನೆಯನ್ನು ಹೊಗಳಿದ್ದಾರೆ. ಆದರೆ ಅದರಲ್ಲಿ ನಟಿಸಿದ ತಮ್ಮ ಸೊಸೆ ಐಶ್ವರ್ಯಾ ರೈ ಬಚ್ಚನ್ ಅವರ ಬಗ್ಗೆ ಉಲ್ಲೇಖ ಮಾಡಲಿಲ್ಲ. ಇದರಿಂದ ಅಮಿತಾಬ್ ಬಚ್ಚನ್ ಅವರ ಕುಟುಂಬದಲ್ಲಿ ಸಮಸ್ಯೆ ಇರಬೇಕು. ಹಾಗಾಗಿ ಅವರು ತಮ್ಮ ಸೊಸೆಯ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ ಎಂಬುದಾಗಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

VISTARANEWS.COM


on

Amithab Bacchan
Koo

ಮುಂಬೈ: ಬಾಲಿವುಡ್‌ ಖ್ಯಾತ ನಟ ಅಮಿತಾಭ್‌ ಬಚ್ಚನ್ (Amithab Bacchan) ತಮ್ಮ ನಟನೆಯ ಮೂಲಕ ಎಲ್ಲರ ಮನ ಸೆಳೆದವರು. ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡುವ ಮೂಲಕ ಜನಪ್ರಸಿದ್ಧರಾಗಿದ್ದಾರೆ. ಇನ್ನು ಬಿಗ್‌ ಬಿ ಕುಟುಂಬವು ಕೂಡ ಸಿನಿಮಾ ರಂಗದಲ್ಲಿ ಹೆಸರು ಮಾಡಿದೆ. ಮಗ ಅಭಿಷೇಕ್ ಬಚ್ಚನ್, ಪತ್ನಿ ಜಯಾ ಬಚ್ಚನ್, ಸೊಸೆ ಐಶ್ವರ್ಯಾ ರೈ ಬಚ್ಚನ್ ಅವರು ಕೂಡ ಸಿನಿಮಾ ರಂಗದಲ್ಲಿ ಮಿಂಚಿದವರೇ. ಆದರೆ ಇದೀಗ ನಟ ಅಮಿತಾಭ್ ಬಚ್ಚನ್ ಅವರನ್ನು ಜನರು ಸೋಶಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ.

ಇತ್ತೀಚೆಗೆ ನಟ ಅಮಿತಾಭ್ ಬಚ್ಚನ್ ಅವರು ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ತಮ್ಮ ಮಗ ಅಭಿಷೇಕ್ ಬಚ್ಚನ್ ಅಭಿನಯದ ‘ರಾವಣ್’ ಚಿತ್ರ 14ನೇ ವರ್ಷಕ್ಕೆ ಕಾಲಿಟ್ಟ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅಭಿಷೇಕ್ ಅವರ ನಟನೆಯನ್ನು ಹೊಗಳಿದ್ದಾರೆ. ಆದರೆ ಅದರಲ್ಲಿ ನಟಿಸಿದ ತಮ್ಮ ಸೊಸೆ ಐಶ್ವರ್ಯಾ ರೈ ಬಚ್ಚನ್ ಅವರ ಬಗ್ಗೆ ಎಲ್ಲೂ ಉಲ್ಲೇಖ ಮಾಡಲಿಲ್ಲ.

ತಮ್ಮ ಸೊಸೆ ಐಶ್ವರ್ಯಾ ರೈ ಬಚ್ಚನ್ ಅವರನ್ನು ಉಲ್ಲೇಖಿಸದೆ ನಿರ್ಲಕ್ಷ್ಯ ಮಾಡಿದ್ದಕ್ಕೆ ನೆಟ್ಟಿಗರು ಅಮಿತಾಭ್ ಬಚ್ಚನ್ ಅವರನ್ನು ಟ್ರೋಲ್ ಮಾಡಿದ್ದಾರೆ. ಮಣಿರತ್ನಂ ಅವರ ನಿರ್ದೇಶನದ ‌ʼರಾವಣ್ʼ ಚಿತ್ರ ಬಿಡುಗಡೆಯಾಗಿ ಜೂನ್ 18, 2024ಕ್ಕೆ 14 ವರ್ಷ ಪೂರೈಸಿದೆ. ಅಭಿಷೇಕ್ ಬಚ್ಚನ್ ಅಭಿಮಾನಿ ಸಂಘವೊಂದು ಈ ದಿನವನ್ನು ಆಚರಿಸಲು ಪೋಸ್ಟ್ ಅನ್ನು ಹಂಚಿಕೊಂಡಿದೆ. ಆಗ ಅಮಿತಾಭ್ ಬಚ್ಚನ್ ಅವರು ಚಿತ್ರವನ್ನು ಪೋಸ್ಟ್ ಮಾಡಿ, “ಅಭಿಷೇಕ್ ಅಭಿನಯ ಮರೆಯಲಾಗದಂತಹದು. ನಿಮ್ಮ ಇತರ ಚಿತ್ರಗಳಿಗಿಂತ ಈ ಚಿತ್ರ ತುಂಬಾ ಭಿನ್ನವಾಗಿದೆ. ಮತ್ತು ಇದು ಕಲಾವಿದನಿಗೆ ನಿಜವಾದ ಮೌಲ್ಯವನ್ನು ನೀಡುತ್ತದೆ” ಎಂದು‌ ಶ್ಲಾಘಿಸಿ ಬರೆದಿದ್ದಾರೆ.

ಆದರೆ ಈ ಚಿತ್ರದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಅಭಿಷೇಕ್ ಜೊತೆ ಮುಖ್ಯ ಪಾತ್ರದಲ್ಲಿ ನಟಿಸಿದ್ದರು ಮತ್ತು ಅವರ ಅಭಿನಯವನ್ನು ಅಭಿಮಾನಿಗಳು ಹೊಗಳಿದ್ದರು. ಆದರೆ ಈ ಪೋಸ್ಟ್ ನಲ್ಲಿ ಅಮಿತಾಭ್‌ ಬಚ್ಚನ್ ಅವರು ಎಲ್ಲೂ ತಮ್ಮ ಸೊಸೆ ಐಶ್ವರ್ಯಾ ರೈ ಬಚ್ಚನ್ ಬಗ್ಗೆ ಉಲ್ಲೇಖಿಸಿಲ್ಲ. ಹೀಗಾಗಿ ಈ ಬಗ್ಗೆ ನೆಟ್ಟಿಗರು ಅಮಿತಾಭ್ ಅವರನ್ನು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Working Hours: ಅತಿ ಹೆಚ್ಚು ಕೆಲಸದ ಸಮಯ ಹೊಂದಿರುವ ದೇಶಗಳಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

Amithab Bacchan

ಈ ಹಿಂದೆ ಕೂಡ ಕಜಾ ರಾರೇ ಹಾಡು 19ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ ಅಮಿತಾಭ್ ಅವರು ಅಭಿಷೇಕ್ ಅವರನ್ನು ಹೊಗಳಿ ತಮ್ಮ ಸೊಸೆ ನಟಿ ಐಶ್ವರ್ಯಾ ರೈ ಬಚ್ಚನ್ ಬಗ್ಗೆ ಉಲ್ಲೇಖಿಸಿರಲಿಲ್ಲ. ಕಜಾ ರಾರೇ ಹಾಡಿನಲ್ಲಿ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್ ಹಾಗೂ ನಟಿ ಐಶ್ವರ್ಯಾ ರೈ ಬಚ್ಚನ್ ಕಾಣಿಸಿಕೊಂಡಿದ್ದರು.
ಇದರಿಂದ ಅಮಿತಾಭ್ ಬಚ್ಚನ್ ಅವರ ಕುಟುಂಬದಲ್ಲಿ ಸಮಸ್ಯೆ ಇರಬೇಕು. ಹಾಗಾಗಿ ಅವರು ತಮ್ಮ ಸೊಸೆಯ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ ಎಂಬುದಾಗಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

Continue Reading

ಬಾಲಿವುಡ್

Amitabh Bachchan: ಅಶ್ವಿನಿ ದತ್ ಕಾಲಿಗೆ ನಮಸ್ಕರಿಸಿದ ಅಮಿತಾಭ್‌; ʻಬಿಗ್‌ ಬಿʼ ಕೊಂಡಾಡಿದ ರಾಮ್ ಗೋಪಾಲ್ ವರ್ಮಾ!

Amitabh Bachchan: ಅಮಿತಾಭ್‌ ಅವರು ಅಶ್ವಿನಿ ದತ್ ಅವರ ಕಾಲಿಗೆ ನಮಸ್ಕರಿಸಿದ್ದು. ಅಮಿತಾಭ್‌ (Amitabh Bachchan) ಅವರೇ ಅಶ್ವಿನಿ ದತ್ ಅವರಿಗೆ ಕಾಲಿಗೆ ನಮಸ್ಕರಿಸಿದ್ದು ಹಲವರಿಗೆ ಅಚ್ಚರಿ ತಂದಿದೆ. ಬಿಗ್​ ಬಿ ಕೂಡ ತಮ್ಮ ವೃತ್ತಿಜೀವನದಲ್ಲಿ ಬೇರೆ ನಿರ್ಮಾಪಕರ ಕಾಲಿಗೆ ನಮಸ್ಕರಿಸಿದ್ದನ್ನು ನಾನು ನೋಡಿಲ್ಲ’ ಎಂದು ರಾಮ್​ ಗೋಪಾಲ್​ ವರ್ಮಾ ಟ್ವೀಟ್​ ಮಾಡಿದ್ದಾರೆ.

VISTARANEWS.COM


on

Amitabh Bachchan touched Aswini Dutt feet
Koo

ಬೆಂಗಳೂರು: ನಾಗ್ ಅಶ್ವಿನ್ ಅವರ ಕಲ್ಕಿ 2898 ADಯ (Kalki 2898 AD) ಪ್ರೀ-ರಿಲೀಸ್ ಈವೆಂಟ್ ಮುಂಬೈನಲ್ಲಿ ನಡೆಯಿತು. ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮತ್ತು ರಾಣಾ ದಗ್ಗುಬಾಟಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಒಂದು ಕ್ಷಣ ಎಲ್ಲರ ಗಮನ ಸೆಳೆದಿದ್ದು, ಅಮಿತಾಭ್‌ ಅವರು ಅಶ್ವಿನಿ ದತ್ ಅವರ ಕಾಲಿಗೆ ನಮಸ್ಕರಿಸಿದ್ದು. ಅಮಿತಾಭ್‌ (Amitabh Bachchan) ಅವರೇ ಅಶ್ವಿನಿ ದತ್ ಅವರಿಗೆ ಕಾಲಿಗೆ ನಮಸ್ಕರಿಸಿದ್ದು ಹಲವರಿಗೆ ಅಚ್ಚರಿ ತಂದಿದೆ.

ನಿರ್ಮಾಪಕ ಅಶ್ವಿನ್‌ ವೇದಿಕೆಗೆ ಬಂದಾಗ, ಅಮಿತಾಭ್‌ ಅವರ ಬಗ್ಗೆ ಮಾತನಾಡಿ, “ಅಶ್ವಿನಿ ದತ್ ಹಾಗೂ ಅವರ ಇಬ್ಬರು ಪುತ್ರಿಯರು (ಸ್ವಪ್ನಾ, ಪ್ರಿಯಾಂಕಾ) ವೈಜಯಂತಿ ಫಿಲ್ಮ್ಸ್ ಮಾಲೀಕರಾಗಿದ್ದಾರೆ. ಅಶ್ವಿನಿ ದತ್ ತುಂಬ ಸರಳ, ವಿನಮ್ರ ವ್ಯಕ್ತಿ. ಪ್ರತಿ ಬಾರಿ ಶೂಟಿಂಗ್‌ ಸೆಟ್‌ಗೆ ಅವರು ಮೊದಲು ಬರುತ್ತಾರೆ. ವಿಮಾನ ನಿಲ್ದಾಣಕ್ಕೆ ಬಂದು ನಿಮ್ಮನ್ನು ಸ್ವಾಗತಿಸುತ್ತಾರೆ. ನಿಮ್ಮ ಸುರಕ್ಷತೆಯನ್ನು ನೋಡಿಕೊಳ್ಳುತ್ತಾರೆ. ಯಾರೂ ಕೂಡ ಅವರ ರೀತಿ ಆಲೋಚನೆ ಮಾಡುವುದಿಲ್ಲʼʼ ಎಂದು ಅಶ್ವಿನ್‌ ಅವರ ಪಾದಕ್ಕೆ ನಮಸ್ಕರಿಸಿದರು ಅಮಿತಾಭ್‌.

ರಾಮ್ ಗೋಪಾಲ್ ವರ್ಮಾ ಈ ಬಗ್ಗೆ ಟ್ವೀಟ್‌ ಮಾಡಿ ʻಅಮಿತಾಭ್​ ಬಚ್ಚನ್​ ಅವರಿಂದ ಈ ಗೌರವ ಪಡೆದಿದ್ದು ಅಶ್ವಿನಿ ದತ್​ ಅವರ ಸಾಧನೆ. ಎನ್​ಟಿಆರ್​ ಅವರಿಂದ ಆರಂಭಗೊಂಡು, ಇಂದಿನ ಯುವ ಹೀರೋಗಳ ತನಕ ಯಾರೂ ಕೂಡ ಈ ರೀತಿ ಮಾಡಿಲ್ಲ . ಬಿಗ್​ ಬಿ ಕೂಡ ತಮ್ಮ ವೃತ್ತಿಜೀವನದಲ್ಲಿ ಬೇರೆ ನಿರ್ಮಾಪಕರ ಕಾಲಿಗೆ ನಮಸ್ಕರಿಸಿದ್ದನ್ನು ನಾನು ನೋಡಿಲ್ಲ’ ಎಂದು ರಾಮ್​ ಗೋಪಾಲ್​ ವರ್ಮಾ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: Kalki 2898 AD: ʼಕಲ್ಕಿ 2898 ADʼ ಚಿತ್ರದ ಭೈರವ ಆಂಥಮ್‌ ರಿಲೀಸ್‌!

ಅಶ್ವಿನಿ ದತ್ ಟಾಲಿವುಡ್‌ನ ಅತಿ ದೊಡ್ಡ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಅವರ ವೃತ್ತಿಜೀವನದಲ್ಲಿ, ಎನ್‌ಟಿಆರ್, ಎಎನ್‌ಆರ್, ಕೃಷ್ಣ, ಸೋಭನ್ ಬಾಬು, ಕೃಷ್ಣಂ ರಾಜು, ಚಿರಂಜೀವಿ, ವೆಂಕಟೇಶ್, ಬಾಲಕೃಷ್ಣ, ನಾಗಾರ್ಜುನ, ಮಹೇಶ್ ಬಾಬು, ಅಲ್ಲು ಅರ್ಜುನ್, ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ನಟಿಸಿದ ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ.

ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್‍ ಬಚ್ಚನ್, ಕಮಲ್ ಹಾಸನ್, ಪ್ರಭಾಸ್,‍ ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಹಾಗೂ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಅಶ್ವಿನಿ ದತ್‍ ನಿರ್ಮಿಸಿರುವ ಈ ಚಿತ್ರವನ್ನು ನಾಗ್‍ ಅಶ್ವಿನ್‍ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್‍ 27ರಂದು ಬಿಡುಗಡೆ ಆಗಲಿದೆ.

ಟ್ರೇಲರ್‌ನಲ್ಲಿ ಸಿನಿಮಾದ ಪಂಚ್‌ ಡೈಲಾಗ್‌, ಫೈಟ್ಸ್‌ ನೋಡಿ ಅಭಿಮಾನಿಗಳು ದಶಕದ ಟ್ರೇಲರ್‌ ಎಂದು ಹೇಳುತ್ತಿದ್ದಾರೆ. ಚಿತ್ರದ ಟ್ರೇಲರ್‌ ನೋಡುವವರಿಗೆ ಇದು ಯುಗಗಳ ಕಥೆ ಎಂಬುದು ಸ್ಪಷ್ಟವಾಗುತ್ತದೆ. ರೆಕಾರ್ಡ್‌ನಲ್ಲಿ ಇಲ್ಲಿಯವರೆಗೂ ಒಂದೇ ಒಂದು ಫೈಟ್‌ ಸೋತಿಲ್ಲ ಎಂದು ಟಾಲಿವುಡ್‌ ಯಂಗ್‌ ರೆಬಲ್‌ ಸ್ಟಾರ್‌ ಪ್ರಭಾಸ್‌ ಹೇಳುವ ಡೈಲಾಗ್‌ ಟ್ರೇಲರ್‌ನ ಹೈಲೆಟ್‌ ಆಗಿದೆ.


Continue Reading

ಬಾಲಿವುಡ್

Deepika Padukone: ಬೇಬಿ ಬಂಪ್ ಫೋಟೊ ಹಂಚಿಕೊಂಡ ದೀಪಿಕಾ ಪಡುಕೋಣೆ

Deepika Padukone: 6 ತಿಂಗಳ ಗರ್ಭಿಣಿಯಾಗಿರುವ ದೀಪಿಕಾ ಪಡುಕೋಣೆ ಕಲ್ಕಿ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದಾರೆ. ದೀಪಿಕಾ ಅವರು ಈವೆಂಟ್‌ನಲ್ಲಿ ವೇದಿಕೆ ಮೇಲೆ ಮಾತಾಡಿ ಬರುತ್ತಿದ್ದಂತೆ ನಟ ಪ್ರಭಾಸ್ ಮತ್ತು ಹಿರಿಯ ನಟ ಅಮಿತಾಭ್‌ ಬಚ್ಚನ್ ದೀಪಿಕಾ ಅವರ ಕೈ ಹಿಡಿದು ಕುಳಿತುಕೊಳ್ಳಲು ಸಹಾಯ ಮಾಡಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮೊದಲಿಗೆ ಪ್ರಭಾಸ್‌ ಅವರು ದೀಪಿಕಾ ಕೈ ಹಿಡಿದಾಗ, ಅಮಿತಾಭ್‌ ಅವರು ಪ್ರಭಾಸ್‌ಗೆ ತಮಾಷೆ ಮಾಡಿದ್ದಾರೆ. ಈ ಸಂತಸದ ಕ್ಷಣಗಳನ್ನು ನೋಡಿ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Deepika Padukone Baby Bump Pics Get Big Love
Koo

ಮುಂಬೈನಲ್ಲಿ ನಡೆದ ಕಲ್ಕಿ 2898 AD ಯ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ದೀಪಿಕಾ ಪಡುಕೋಣೆ (Deepika Padukone) ಗ್ರ್ಯಾಂಡ್ ಎಂಟ್ರಿ ಕೊಟ್ಟರು. 6 ತಿಂಗಳ ಗರ್ಭಿಣಿಯಾಗಿರುವ ದೀಪಿಕಾ ಪಡುಕೋಣೆ ಕಲ್ಕಿ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದಾರೆ. 

ಇದೀಗ ನಟಿ ಸಾಮಾಜಿಕ ಮಾಧ್ಯಮದಲ್ಲಿ ಬೇಬಿ ಬಂಪ್‌ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಬಾಡಿಕಾನ್ ಡ್ರೆಸ್‌ನಲ್ಲಿ ಸಖತ್‌ ಮಿಂಚಿದ್ದಾರೆ ದೀಪಿಕಾ.

ಇದನ್ನೂ ಓದಿ: Deepika Padukone: ಗರ್ಭಿಣಿ ದೀಪಿಕಾಗೆ ವೇದಿಕೆಯಿಂದ ಕೆಳಗಿಳಿಯಲು ಸಹಾಯ ಮಾಡಿದ ಪ್ರಭಾಸ್‌; ಅಮಿತಾಭ್‌ ವಿನೋದ !

ದೀಪಿಕಾ ಪಡುಕೋಣೆ ಸಾಮಾಜಿಕ ಮಾಧ್ಯಮದಲ್ಲಿ, ‘ಇನ್ನು ಸಾಕು… ನನಗೆ ಈಗ ಹಸಿವಾಗಿದೆ’ ಎಂದು ಬರೆದಿದ್ದಾರೆ. ಸೋಷಿಯಲ್ ಮೀಡಿಯಾ ಬಳಕೆದಾರರು ಮತ್ತು ಅವರ ಸ್ನೇಹಿತರು ನಟಿಯ ಈ ಫೋಟೋಗಳಿಗೆ ಕಮೆಂಟ್‌ ಮೂಐಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ದೀಪಿಕಾ ಬೇಬಿ ಬಂಪ್‌ ಕಂಡು ಫ್ಯಾನ್ಸ್‌ ಖುಷಿ ವ್ಯಕ್ತಪಡಿಸಿದ್ದಾರೆ. ಕಲ್ಕಿ ಕಾರ್ಯಕ್ರಮದಲ್ಲಿ ಪ್ರಭಾಸ್, ಅಮಿತಾಭ್‌ ಬಚ್ಚನ್, ಕಮಲ್‌ ಹಾಸನ್‌ ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಹಲವರು ಭಾಗಿಯಾಗಿದ್ದರು. ಕಲ್ಕಿ ಪ್ರೀ ರಿಲೀಸ್ ಈವೆಂಟ್‌ಗಾಗಿ 10ಕೋಟಿ ರೂ. ಖರ್ಚಾಗಿದೆ ಎನ್ನಲಾಗಿದೆ. ದೀಪಿಕಾ ಅವರು ವೇದಿಕೆಯಲ್ಲಿ ಸಿನಿಮಾ ಕುರಿತಾಗಿ ಕೂಡ ಮಾತನಾಡಿದ್ದಾರೆ.

Continue Reading

ಬಾಲಿವುಡ್

Deepika Padukone: ಗರ್ಭಿಣಿ ದೀಪಿಕಾಗೆ ವೇದಿಕೆಯಿಂದ ಕೆಳಗಿಳಿಯಲು ಸಹಾಯ ಮಾಡಿದ ಪ್ರಭಾಸ್‌; ಅಮಿತಾಭ್‌ ವಿನೋದ !

Deepika Padukone: ಭಾಷಣದ ನಂತರ, ದೀಪಿಕಾ ವೇದಿಕೆಯಿಂದ ಇಳಿಯಲು ಮುಂದಾದಾಗ, ಪ್ರಭಾಸ್ ಮತ್ತು ಅಮಿತಾಭ್‌ ಇಬ್ಬರೂ ನಟಿಯ ಸಹಾಯಕ್ಕೆ ಧಾವಿಸಿದರು. ಪ್ರಭಾಸ್ ಅವರು ದೀಪಿಕಾ ಅವರ ಕೈ ಹಿಡಿದು ಆರಾಮವಾಗಿ ವೇದಿಕೆಯಿಂದ ಕೆಳಗೆ ಇಳಿಯಲು ಸಹಾಯ ಮಾಡಿದರು. ಬಿಗ್ ಬಿ, ಪ್ರಭಾಸ್ ಅವರ ಹಿಂದೆ ನಿಂತು ತಮಾಷೆ ಕೂಡ ಮಾಡಿದ್ದಾರೆ. ನಟರ ಈ ಖುಷಿಯ ಕ್ಷಣಗಳ ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

Deepika Padukone Prabhas and Amitabh Bachchan race to help pregnant down from stage
Koo

ಮುಂಬೈ: ಮುಂಬೈನಲ್ಲಿ ನಡೆದ ಕಲ್ಕಿ 2898 AD ಯ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ದೀಪಿಕಾ ಪಡುಕೋಣೆ (Deepika Padukone) ಗ್ರ್ಯಾಂಡ್ ಎಂಟ್ರಿ ಕೊಟ್ಟರು. 6 ತಿಂಗಳ ಗರ್ಭಿಣಿಯಾಗಿರುವ ದೀಪಿಕಾ ಪಡುಕೋಣೆ ಕಲ್ಕಿ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದಾರೆ. ದೀಪಿಕಾ ಅವರು ಈವೆಂಟ್‌ನಲ್ಲಿ ವೇದಿಕೆ ಮೇಲೆ ಮಾತಾಡಿ ಬರುತ್ತಿದ್ದಂತೆ ನಟ ಪ್ರಭಾಸ್ ಮತ್ತು ಹಿರಿಯ ನಟ ಅಮಿತಾಭ್‌ ಬಚ್ಚನ್ ದೀಪಿಕಾ ಅವರ ಕೈ ಹಿಡಿದು ಕುಳಿತುಕೊಳ್ಳಲು ಸಹಾಯ ಮಾಡಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮೊದಲಿಗೆ ಪ್ರಭಾಸ್‌ ಅವರು ದೀಪಿಕಾ ಕೈ ಹಿಡಿದಾಗ, ಅಮಿತಾಭ್‌ ಅವರು ಪ್ರಭಾಸ್‌ಗೆ ತಮಾಷೆ ಮಾಡಿದ್ದಾರೆ. ಈ ಸಂತಸದ ಕ್ಷಣಗಳನ್ನು ನೋಡಿ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೀಪಿಕಾ ಬೇಬಿ ಬಂಪ್‌ ಕಂಡು ಫ್ಯಾನ್ಸ್‌ ಖುಷಿ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಭಾಸ್, ಅಮಿತಾಭ್‌ ಬಚ್ಚನ್, ಕಮಲ್‌ ಹಾಸನ್‌ ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಹಲವರು ಭಾಗಿಯಾಗಿದ್ದರು. ಕಲ್ಕಿ ಪ್ರೀ ರಿಲೀಸ್ ಈವೆಂಟ್‌ಗಾಗಿ 10ಕೋಟಿ ರೂ. ಖರ್ಚಾಗಿದೆ ಎನ್ನಲಾಗಿದೆ. ದೀಪಿಕಾ ಅವರು ವೇದಿಕೆಯಲ್ಲಿ ಸಿನಿಮಾ ಕುರಿತಾಗಿ ಕೂಡ ಮಾತನಾಡಿದ್ದಾರೆ.

ಭಾಷಣದ ನಂತರ, ದೀಪಿಕಾ ವೇದಿಕೆಯಿಂದ ಇಳಿಯಲು ಮುಂದಾದಾಗ, ಪ್ರಭಾಸ್ ಮತ್ತು ಅಮಿತಾಭ್‌ ಇಬ್ಬರೂ ನಟಿಯ ಸಹಾಯಕ್ಕೆ ಧಾವಿಸಿದರು. ಪ್ರಭಾಸ್ ಅವರು ದೀಪಿಕಾ ಅವರ ಕೈ ಹಿಡಿದು ಆರಾಮವಾಗಿ ವೇದಿಕೆಯಿಂದ ಕೆಳಗೆ ಇಳಿಯಲು ಸಹಾಯ ಮಾಡಿದರು. ಬಿಗ್ ಬಿ, ಪ್ರಭಾಸ್ ಅವರ ಹಿಂದೆ ನಿಂತು ತಮಾಷೆ ಕೂಡ ಮಾಡಿದ್ದಾರೆ. ನಟರ ಈ ಖುಷಿಯ ಕ್ಷಣಗಳ ವಿಡಿಯೊ ವೈರಲ್‌ ಆಗಿದೆ.

ಇದನ್ನೂ ಓದಿ: Deepika Padukone: ಅಧಿಕ ಸಂಭಾವನೆ ಪಡೆಯುವ ನಾಯಕಿಯರಲ್ಲಿ ಕನ್ನಡತಿ ದೀಪಿಕಾ ನಂ. 1; ಪ್ರತಿ ಚಿತ್ರಕ್ಕೆ ಇವರು ಎಷ್ಟು ಹಣ ಪಡೆಯುತ್ತಾರೆ?

ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್‍ ಬಚ್ಚನ್, ಕಮಲ್ ಹಾಸನ್, ಪ್ರಭಾಸ್,‍ ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಹಾಗೂ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಅಶ್ವಿನಿ ದತ್‍ ನಿರ್ಮಿಸಿರುವ ಈ ಚಿತ್ರವನ್ನು ನಾಗ್‍ ಅಶ್ವಿನ್‍ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್‍ 27ರಂದು ಬಿಡುಗಡೆ ಆಗಲಿದೆ.

ಟ್ರೇಲರ್‌ನಲ್ಲಿ ಸಿನಿಮಾದ ಪಂಚ್‌ ಡೈಲಾಗ್‌, ಫೈಟ್ಸ್‌ ನೋಡಿ ಅಭಿಮಾನಿಗಳು ದಶಕದ ಟ್ರೇಲರ್‌ ಎಂದು ಹೇಳುತ್ತಿದ್ದಾರೆ. ಚಿತ್ರದ ಟ್ರೇಲರ್‌ ನೋಡುವವರಿಗೆ ಇದು ಯುಗಗಳ ಕಥೆ ಎಂಬುದು ಸ್ಪಷ್ಟವಾಗುತ್ತದೆ. ರೆಕಾರ್ಡ್‌ನಲ್ಲಿ ಇಲ್ಲಿಯವರೆಗೂ ಒಂದೇ ಒಂದು ಫೈಟ್‌ ಸೋತಿಲ್ಲ ಎಂದು ಟಾಲಿವುಡ್‌ ಯಂಗ್‌ ರೆಬಲ್‌ ಸ್ಟಾರ್‌ ಪ್ರಭಾಸ್‌ ಹೇಳುವ ಡೈಲಾಗ್‌ ಟ್ರೇಲರ್‌ನ ಹೈಲೆಟ್‌ ಆಗಿದೆ.

ಚಿತ್ರದಲ್ಲಿ ಪ್ರಭಾಸ್‌ ಭೈರವನಾಗಿ, ಅಶ್ವತ್ಥಾಮ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್‌ ಮತ್ತು ಅಮಿತಾಭ್‌ ಬಚ್ಚನ್‌ ಕೂಡ ಅದ್ಭುತವಾದ ಆಕ್ಷನ್‌ ಅನ್ನು ಮಾಡಿರುವುದು ಟ್ರೇಲರ್‌ನಿಂದ ತಿಳಿಯುತ್ತದೆ. ಅತಿಥಿ ಪಾತ್ರ ಮತ್ತು ಖಳನಾಯಕನ ಪಾತ್ರವನ್ನು ನಿರ್ವಹಿಸಿರುವ ಕಮಲ್‌ ಹಾಸನ್‌ ಟ್ರೇಲರ್‌ನ ಕೊನೆಯಲ್ಲಿ ಭಯ ಪಡಬೇಡಿ ಇನ್ನೊಂದು ಲೋಕ ಬರುತ್ತಿದೆ ಎಂಬ ಡೈಲಾಗ್‌ ಹೇಳುವ ಮೂಲಕ ಗುರುತಿಸಲಾಗದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಿಲೀಸ್‌ ಆಗಿರುವ ಟೀಸರ್‌ ಹಾಗೂ ಪೋಸ್ಟರ್‌ಗಳಿಂದಲೇ ಸಿನಿಮಾ ಸಂಚಲನ ಮೂಡಿಸಿದ್ದು, ಟ್ರೇಲರ್‌ ಮತ್ತಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.

Continue Reading
Advertisement
Mecca Heatwave Death
ಪ್ರಮುಖ ಸುದ್ದಿ12 mins ago

Mecca Heatwave Death : ಮೆಕ್ಕಾದಲ್ಲಿ ನಿಧನ ಹೊಂದಿದ ಹಜ್​ ಯಾತ್ರಿಗಳಿಗೆ ಅಲ್ಲೇ ಸಂಸ್ಕಾರ; ಹಜ್​ ಕಮಿಟಿ ಮಾಹಿತಿ

CM Siddaramaiah
ಕರ್ನಾಟಕ33 mins ago

CM Siddaramaiah: ಪೆಟ್ರೋಲ್‌ ಬೆಲೆ ಏರಿಸಿದ್ದು ಗ್ಯಾರಂಟಿಗೋ? ಅಭಿವೃದ್ಧಿಗೋ? ಸಿದ್ದರಾಮಯ್ಯ ಹೀಗಂತಾರೆ!

Virat kohli
ಪ್ರಮುಖ ಸುದ್ದಿ46 mins ago

Virat kohli : ಕೊಹ್ಲಿಯನ್ನು ಮತ್ತೆ ಸ್ವಾರ್ಥಿ ಎಂದು ದೂರಿದ ಪಾಕಿಸ್ತಾನದ ಮೊಹಮ್ಮದ್ ಹಫೀಜ್​

Darshan Arrested
ಕರ್ನಾಟಕ1 hour ago

Darshan Arrested: ದರ್ಶನ್‌ ಸೇರಿ ನಾಲ್ವರನ್ನೇ ಪೊಲೀಸರು ಕಸ್ಟಡಿಗೆ ಪಡೆದಿದ್ದೇಕೆ? ಯಾವೆಲ್ಲ ತನಿಖೆ ಬಾಕಿ ಇದೆ?

Floral Jumpsuit fashion
ಲೈಫ್‌ಸ್ಟೈಲ್1 hour ago

Floral Jumpsuit fashion: ಔಟಿಂಗ್‌ಗೆ ಪರ್ಫೆಕ್ಟ್ ಔಟ್‌ ಫಿಟ್‌ ಈ ಫ್ಲೋರಲ್‌ ಜಂಪ್‌ ಸೂಟ್‌!

Karnataka Weather Forecast
ಮಳೆ2 hours ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Weight Loss tension
ಆರೋಗ್ಯ2 hours ago

International Yoga Day 2024: ದೇಹ ತೂಕ ಇಳಿಕೆಗೆ ಈ 5 ಆಸನಗಳು ಸೂಕ್ತ

NEET UG
ಪ್ರಮುಖ ಸುದ್ದಿ2 hours ago

NEET UG : ಫಿಸಿಕ್ಸ್​ನಲ್ಲಿ 85, ಕೆಮೆಸ್ಟ್ರಿಯಲ್ಲಿ 5! ನೀಟ್ ಆಕಾಂಕ್ಷಿಯ ಸ್ಕೋರ್ ಕಾರ್ಡ್ ಸೋರಿಕೆ, ಆರೋಪಿ ಸೆರೆ

PAN Card Safety
ವಾಣಿಜ್ಯ2 hours ago

PAN Card Safety: ಪಾನ್ ಕಾರ್ಡ್ ದುರ್ಬಳಕೆಯಿಂದ ಪಾರಾಗುವುದು ಹೇಗೆ?

7th Pay Commission
ಕರ್ನಾಟಕ2 hours ago

7th Pay Commission: ಸರ್ಕಾರಿ ನೌಕರರ ಸಂಬಳ 27% ಹೆಚ್ಚಿಸಿದರೆ ಒಟ್ಟು ಏರಿಕೆ ಎಷ್ಟಾಗಲಿದೆ? ಇಲ್ಲಿದೆ ಲೆಕ್ಕಾಚಾರ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ2 hours ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು3 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು3 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ4 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ4 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ4 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ5 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ6 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

ಟ್ರೆಂಡಿಂಗ್‌