Site icon Vistara News

Munawar Faruqui: ʻಬಿಗ್ ಬಾಸ್ 17ʼರ ವಿಜೇತ ಮುನಾವರ್ ಫಾರೂಕಿ ಮತ್ತೆ ಅರೆಸ್ಟ್‌!

Munawar Faruqui Detained During Raid At Mumbai Hookah Bar

ಮುಂಬೈ: ಮುಂಬೈ ಬಂದರು ಪ್ರದೇಶದ ಹುಕ್ಕಾ ಬಾರ್‌ನಲ್ಲಿ ಪೊಲೀಸರು ಮಾ.26ರ ಮಂಗಳವಾರ ದಾಳಿ ನಡೆಸಿದ್ದರು. ಬಿಗ್ ಬಾಸ್ 17ರ ವಿಜೇತ ಮುನಾವರ್ ಫಾರೂಕಿ (Munawar Faruqui) ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. ಇದೀಗ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿಯ ಪ್ರಕಾರ , ಮುಂಬೈ ಪೊಲೀಸ್‌ ಸಮಾಜ ಸೇವಾ ಶಾಖೆಯು ( Mumbai Police’s Social Service Branch ) ʻಬೋರಾ ಬಜಾರ್‌ʼನಲ್ಲಿರುವ (Bora Bazaar) ʻಸಬಲನ್ ಹುಕ್ಕಾ ಬಾರ್ʼ ( Sabalan hookah bar) ಮೇಲೆ ದಾಳಿ ನಡೆಸಿತ್ತು. ʻತಂಬಾಕು ಆಧಾರಿತ ಹುಕ್ಕಾ ಬಳಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗಿತ್ತು. ಈ ಮಾಹಿತಿಯ ಮೇರೆಗೆ ನಮ್ಮ ತಂಡವು ದಾಳಿ ಮಾಡಿದೆ. ದಾಳಿ ವೇಳೆ 4,400 ರೂ. ನಗದು ಹಾಗೂ 13,500 ಮೌಲ್ಯದ ಒಂಬತ್ತು ಹುಕ್ಕಾ ಪಾಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆʼʼ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ.

ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಇನ್ನೂ ಸ್ಥಳದಲ್ಲಿ ಶೋಧ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಮಾತ್ರವಲ್ಲ ʻʻದಾಳಿಯ ಸಮಯದಲ್ಲಿ, ಸ್ಟ್ಯಾಂಡ್-ಅಪ್ ಕಮೆಡಿಯನ್ ಮುನಾವರ್ ಮತ್ತು ಇತರರು ಹುಕ್ಕಾಗಳನ್ನು ಸೇದುತ್ತಿದ್ದರು. ಆ ವಿಡಿಯೊ ಕೂಡ ನಮ್ಮಲ್ಲಿ ಇದೆ. ಫಾರೂಕಿ ಮತ್ತು ಇತರರನ್ನು ಮೊದಲು ಬಂಧಿಸಿದ್ದೇವು. ಆ ಬಳಿಕ ಕಾನೂನು ಪ್ರಕಾರ ರಿಲೀಸ್‌ ಮಾಡಲು ಅನುಮತಿಸಲಾಗಿದೆʼʼ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇದನ್ನೂ ಓದಿ: Swatantra Veer Savarkar: ʻವೀರ್ ಸಾವರ್ಕರ್ʼ ಸಿನಿಮಾಗೆ ಸಂಭಾವನೆ ಬೇಡ ಅಂದರಂತೆ ಈ ʻಬಿಗ್‌ ಬಾಸ್‌ʼ ಸ್ಪರ್ಧಿ!

ಇದನ್ನೂ ಓದಿ: Munawar Faruqui: ಮುನಾವರ್ ಫಾರೂಖಿ ಜತೆ ʻಸುಶ್ಮಿತಾ ಸೇನ್ʼ ಪುತ್ರಿಯ ಭರ್ಜರಿ ಪಾರ್ಟಿ!

ಇದು ಮೊದಲೇನಲ್ಲ!

2021ರಲ್ಲಿ ಮಧ್ಯಪ್ರದೇಶದಲ್ಲಿ ನಡೆದ ಶೋ ಒಂದರಲ್ಲಿ ʻಬಿಗ್‌ ಬಾಸ್‌ ಸೀಸನ್‌ 17ʼರ ವಿನ್ನರ್‌ ಮುನಾವರ್‌ ಫಾರೂಕಿ (Munawar Faruqui) ಅವರು ಜೋಕ್‌ ಮಾಡುವ ಭರದಲ್ಲಿ ನೀಡಿದ ಹೇಳಿಕೆಯಿಂದ ವಿವಾದ ಸೃಷ್ಟಿಯಾಗಿತ್ತು. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಇದಕ್ಕಾಗಿ ಅವರು ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು.

ʻಬಿಗ್‌ ಬಾಸ್‌ ವಿನ್ನರ್‌ʼ

ಹಿಂದಿಯ ಬಿಗ್ ಬಾಸ್ 17ನೇ (Bigg Boss 17) ಆವೃತ್ತಿಯ ವಿನ್ನರ್ ಆಗಿ ಸ್ಟ್ಯಾಂಡ್‌ ಅಪ್‌ ಕಮೆಡಿಯನ್ ಮುನಾವರ್ ಫಾರೂಖಿ (Munawar Faruqui) ಅವರು ಹೊರ ಹೊಮ್ಮಿದ್ದರು. ಇನ್ನು ಕೆಲವರು ಮುನಾವರ್‌ ಗೆದ್ದ ಬಳಿಕ ಇದು ಫಿಕ್ಸಿಂಗ್‌ ಎಂದು ಆರೋಪ ಕೂಡ ಮಾಡಿದ್ದರು. ಈ ಬಗ್ಗೆ ಮುನಾವರ್‌ ಕೂಡ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ʻನಾನು ಫಿಕ್ಸಿಂಗ್​ ವಿನ್ನರ್​ ಆಗಿದ್ದಿದ್ದರೆ ಇಷ್ಟೆಲ್ಲ ಕಷ್ಟ ಅನುಭವಿಸಬೇಕಿರಲಿಲ್ಲ. ಎಲ್ಲವೂ ನನಗೆ ಸುಲಭವಾಗಿ ಸಿಗುತ್ತಿತ್ತು. ಇಡೀ ಸೀಸನ್​ನಲ್ಲಿ ನಾನು ಕಷ್ಟಪಟ್ಟಿದ್ದೇನೆ. ನನ್ನನ್ನು ಫಿಕ್ಸ್ಡ್​ ವಿನ್ನರ್​ ಎಂದು ಕರೆಯುವವರು ಕುಳಿತುಕೊಂಡು ಪೂರ್ತಿ ಸೀಸನ್​ನ ಸಂಚಿಕೆಗಳನ್ನು ನೋಡಲಿ. ಫಿಕ್ಸಿಂಗ್​ ಅಲ್ಲ ಎಂಬುದು ಆಗ ಗೊತ್ತಾಗುತ್ತದೆʼʼ ಎಂದಿದ್ದರು.

ಬಿಗ್ ಬಾಸ್ 17 ಗೆದ್ದಿರುವ ಮುನಾವರ್ ಫರೂಖಿ ಅವರಿಗೆ ಟ್ರೋಫಿ ದೊರೆತಿದ್ದು, ಜತೆಗೆ 50 ಲಕ್ಷ ರೂ. ಬಹುಮಾನ ಕೊಡ ನೀಡಲಾಗಿತ್ತು. ಇಷ್ಟೇ ಅಲ್ಲದೇ, ಐಷಾರಾಮಿ ಕಾರ್ ಕೂಡ ಬಹುಮಾನ ರೂಪವಾಗಿ ಬಂದಿತ್ತು.  

Exit mobile version