Site icon Vistara News

Rakul Preet Singh: ರಕುಲ್‌ ಪ್ರೀತ್‌ ಸಿಂಗ್‌-ಜಾಕಿ ಭಗ್ನಾನಿ ಜೋಡಿಗೆ ಮೋದಿ ಅಭಿನಂದನೆ

ಬೆಂಗಳೂರು: ನಟಿ ರಕುಲ್‌ ಪ್ರೀತ್‌ ಸಿಂಗ್‌ (Rakul Preet Singh) ಮತ್ತು ನಟ, ನಿರ್ಮಾಪಕ ಜಾಕಿ ಭಗ್ನಾನಿ (Jackky Bhagnani) ಬುಧವಾರ (ಫೆಬ್ರವರಿ 21) ಗೋವಾದಲ್ಲಿ ನಡೆದ ಸಮಾರಂಭದಲ್ಲಿ ಸತಿ-ಪತಿಗಳಾದರು.  ಇದೀಗ, ಪ್ರಧಾನಿ ನರೇಂದ್ರ ಮೋದಿ ಅವರು ಪತ್ರದ ಮೂಲಕ ಭಗ್ನಾನಿ ಕುಟುಂಬಕ್ಕೆ ಅಭಿನಂದಿಸಿದ್ದಾರೆ. ಮದುವೆ ಸಮಾರಂಭಕ್ಕೆ ಆಹ್ವಾನಿಸಿದ್ದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿ ಶುಭಾಶಯಗಳನ್ನು ಸಹ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಹೀಗೆ ಬರೆದಿದ್ದಾರೆ, “‘ಜಾಕಿ ಮತ್ತು ರಕುಲ್ ಜೀವಮಾನವಿಡೀ ಇರುವ ವಿಶ್ವಾಸ ಮತ್ತು ಸಹಭಾಳ್ವೆಯ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಮುಂಬರುವ ವರ್ಷ ಸುಖಕರವಾಗಿರಲಿ. ಮದುವೆಯ ಶುಭ ಸಂದರ್ಭದಲ್ಲಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಈ ಜೋಡಿಯ ಮನಸ್ಸು, ಹೃದಯ, ಕೆಲಸ ಒಂದೇ ಆಗಿರಲಿ. ಸದಾಕಾಲ ಒಬ್ಬರಿಗೊಬ್ಬರು ಜತೆಯಾಗಿರಲಿ. ಮದುವೆಗೆ ಕರೆದಿದ್ದಕ್ಕೆ ಧನ್ಯವಾದಗಳು. ಈ ಶುಭ ಸಂದರ್ಭದಲ್ಲಿ ಮತ್ತೊಮ್ಮೆ ನಾನು ಅಭಿನಂದನೆ ಮತ್ತು ಶುಭಾಶಯ ತಿಳಿಸುತ್ತೇನೆ’ಎಂದು ಬರೆದಿದ್ದಾರೆ.

ರಕುಲ್‌ ಪ್ರೀತ್‌ ಸಿಂಗ್‌ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. “ಧನ್ಯವಾದಗಳು ಗೌರವಾನ್ವಿತ ಪ್ರಧಾನಿ ನರೇಂದ್ರಮೋದಿ ಜೀ… ನಿಮ್ಮ ಶುಭಾಶಯಗಳು ನಮಗೆ ಆಶೀರ್ವಾದʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Rakul Preet Singh: ರಕುಲ್‌ ಪ್ರೀತ್‌ ಸಿಂಗ್‌-ಜಾಕಿ ಭಗ್ನಾನಿ ವಿವಾಹದ ಸುಂದರ ಕ್ಷಣಗಳಿವು!

ದಕ್ಷಿಣ ಗೋವಾದ ಐಟಿಸಿ ಗ್ರ್ಯಾಂಡ್‌ ಹೋಟೆಲ್‌ನಲ್ಲಿ ನಡೆದ ಈ ವಿವಾಹ ಸಮಾರಂಭಕ್ಕೆ ಕುಟುಂಬಸ್ಥರು ಮತ್ತು ಆಪ್ತ ಗೆಳೆಯರಿಗಷ್ಟೇ ಆಹ್ವಾನವಿತ್ತು. ಬಾಲಿವುಡ್‌ನ ಶಿಲ್ಪಾ ಶೆಟ್ಟಿ, ಆಯುಷ್ಮಾನ್‌ ಖುರಾನ, ಅರ್ಜುನ್‌ ಕಪೂರ್‌, ಡೇವಿಡ್‌ ಧವನ್‌ ಮತ್ತಿತರರು ಹಾಜರಿದ್ದು ನೂತನ ವಧು-ವರರನ್ನು ಹಾರೈಸಿದರು. 2021ರ ಅಕ್ಟೋಬರ್‌ನಲ್ಲಿ ರಕುಲ್‌ ಪ್ರೀತ್‌ ಸಿಂಗ್‌ ಮತ್ತು ಜಾಕಿ ಭಗ್ನಾನಿ ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿಕೊಂಡಿದ್ದರು. ವಿಶೇಷ ಎಂದರೆ ರಕುಲ್‌ ಪ್ರೀತ್‌ ಸಿಂಗ್‌ ಸ್ಯಾಂಡಲ್‌ವುಡ್‌ ಮೂಲಕ ಬಣ್ಣದ ಲೋಕ ಪ್ರವೇಶಿಸಿದ್ದರು. 2009ರಲ್ಲಿ ತೆರೆಕಂಡ ʼಗಿಲ್ಲಿʼ ಚಿತ್ರದಲ್ಲಿ ಅವರು ಗುರುರಾಜ್‌ ಜಗ್ಗೇಶ್‌ಗೆ ನಾಯಕಿಯಾಗಿದ್ದರು.

ತಮಿಳಿನ ʼ7ಜಿ ರೈನ್‌ಬೋ ಕಾಲನಿʼ ಚಿತ್ರದ ರಿಮೇಕ್‌ ಆಗಿದ್ದ ʼಗಿಲ್ಲಿʼಯಲ್ಲಿ ಅನಿತಾ ಪಾತ್ರದ ಮೂಲಕ ಮೋಡಿ ಮಾಡಿದ್ದರು. ಬಳಿಕ 3 ವರ್ಷ ಬ್ರೇಕ್‌ ಪಡೆದುಕೊಂಡಿದ್ದ ರಕುಲ್‌ ಪ್ರೀತ್‌ ಸಿಂಗ್‌ 2011ರಲ್ಲಿ ʼಕೆರಾಟನ್‌ʼ, ʼಯುವನ್‌ʼ ದ್ವಿಭಾಷಾ ಸಿನಿಮಾ ಮೂಲಕ ತೆಲುಗು ಮತ್ತು ತಮಿಳು ಚಿತ್ರರಂಗ ಪ್ರವೇಶಿಸಿದ್ದರು. ಇನ್ನು 2014ರಲ್ಲಿ ಬಿಡುಗಡೆಯಾದ ʼಯಾರಿಯಾನ್‌ʼ ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದರು.

Exit mobile version