Rakul Preet Singh: ರಕುಲ್‌ ಪ್ರೀತ್‌ ಸಿಂಗ್‌-ಜಾಕಿ ಭಗ್ನಾನಿ ವಿವಾಹದ ಸುಂದರ ಕ್ಷಣಗಳಿವು! - Vistara News

ಬಾಲಿವುಡ್

Rakul Preet Singh: ರಕುಲ್‌ ಪ್ರೀತ್‌ ಸಿಂಗ್‌-ಜಾಕಿ ಭಗ್ನಾನಿ ವಿವಾಹದ ಸುಂದರ ಕ್ಷಣಗಳಿವು!

Rakul Preet Singh: ಮೊದಲು ಸಿಖ್‌ ಸಂಪ್ರದಾಯ ಆನಂದ್ ಕರಜ್‌ (Anand Karaj)ನಂತೆ ಇವರ ವಿವಾಹ ನಡೆಯಿತು. ಸಂಜೆ ಸಿಂಧಿ ಸಂಪ್ರದಾಯದಂತೆ ಮದುವೆ ಸಮಾರಂಭ ನಡೆಯಿತು ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Rakul Preet Singh, Jackky Bhagnani share stunning first official wedding
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಾಲಿವುಡ್‌ನ ಮತ್ತೊಂದು ತಾರಾ ಜೋಡಿ ಹಸೆಮಣೆಗೇರಿದೆ. ಕೆಲವು ಸಮಯಗಳಿಂದ ಡೇಟಿಂಗ್‌ ನಡೆಸುತ್ತಿದ್ದ ನಟಿ ರಕುಲ್‌ ಪ್ರೀತ್‌ ಸಿಂಗ್‌ (Rakul Preet Singh) ಮತ್ತು ನಟ, ನಿರ್ಮಾಪಕ ಜಾಕಿ ಭಗ್ನಾನಿ (Jackky Bhagnani) ಬುಧವಾರ (ಫೆಬ್ರವರಿ 21) ಗೋವಾದಲ್ಲಿ ನಡೆದ ಸಮಾರಂಭದಲ್ಲಿ ಸತಿ-ಪತಿಗಳಾದರು.

ಮೊದಲು ಸಿಖ್‌ ಸಂಪ್ರದಾಯ ಆನಂದ್ ಕರಜ್‌(Anand Karaj)ನಂತೆ ಈ ಜೋಡಿಯ ವಿವಾಹ ನಡೆಯಿತು. ಸಂಜೆ ಸಿಂಧಿ ಸಂಪ್ರದಾಯದಂತೆ ಮದುವೆ ಸಮಾರಂಭ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Rakul Preet Singh: ಹಸೆಮಣೆಗೇರಿದ ರಾಕುಲ್‌ ಪ್ರೀತ್‌ ಸಿಂಗ್‌-ಜಾಕಿ ಭಗ್ನಾನಿ

ದಕ್ಷಿಣ ಗೋವಾದ ಐಟಿಸಿ ಗ್ರ್ಯಾಂಡ್‌ ಹೋಟೆಲ್‌ನಲ್ಲಿ ನಡೆದ ಈ ವಿವಾಹ ಸಮಾರಂಭಕ್ಕೆ ಕುಟುಂಬಸ್ಥರು ಮತ್ತು ಆಪ್ತ ಗೆಳೆಯರಿಗಷ್ಟೇ ಆಹ್ವಾನವಿತ್ತು. ಬಾಲಿವುಡ್‌ನ ಶಿಲ್ಪಾ ಶೆಟ್ಟಿ, ಆಯುಷ್ಮಾನ್‌ ಖುರಾನ, ಅರ್ಜುನ್‌ ಕಪೂರ್‌, ಡೇವಿಡ್‌ ಧವನ್‌ ಮತ್ತಿತರರು ಹಾಜರಿದ್ದು ನೂತನ ವಧು-ವರರನ್ನು ಹಾರೈಸಿದರು.

ವಿಶೇಷ ಎಂದರೆ ರಕುಲ್‌ ಪ್ರೀತ್‌ ಸಿಂಗ್‌ ಸ್ಯಾಂಡಲ್‌ವುಡ್‌ ಮೂಲಕ ಬಣ್ಣದ ಲೋಕ ಪ್ರವೇಶಿಸಿದ್ದರು. 2009ರಲ್ಲಿ ತೆರೆಕಂಡ ʼಗಿಲ್ಲಿʼ ಚಿತ್ರದಲ್ಲಿ ಅವರು ಗುರುರಾಜ್‌ ಜಗ್ಗೇಶ್‌ಗೆ ನಾಯಕಿಯಾಗಿದ್ದರು. ತಮಿಳಿನ ʼ7ಜಿ ರೈನ್‌ಬೋ ಕಾಲೊನಿʼ ಚಿತ್ರದ ರಿಮೇಕ್‌ ಆಗಿದ್ದ ʼಗಿಲ್ಲಿʼಯಲ್ಲಿ ಅನಿತಾ ಪಾತ್ರದ ಮೂಲಕ ಮೋಡಿ ಮಾಡಿದ್ದರು. 

ಇತ್ತ ನಿರ್ಮಾಪಕರೂ ಆಗಿರುವ ಜಾಕಿ ಭಗ್ನಾನಿ ತಮ್ಮ ನಿರ್ಮಾಣದ ಮುಂದಿನ ಚಿತ್ರ ʼಬಡೇ ಮಿಯಾನ್‌ ಚೋಟೆ ಮಿಯಾನ್‌ʼನ ನಿರೀಕ್ಷೆಯಲ್ಲಿದ್ದಾರೆ. ಆಲಿ ಅಬ್ಬಾಸ್‌ ಜಾಫರ್‌ ನಿರ್ದೇಶನದ ಈ ಸಿನಿಮಾದಲ್ಲಿ ಅಕ್ಷಯ್‌ ಕುಮಾರ್‌, ಟೈಗರ್‌ ಶ್ರಾಫ್‌, ಸೋನಾಕ್ಷಿ ಸಿನ್ಹಾ, ಪೃಥ್ವಿರಾಜ್‌ ಸುಕುಮಾರನ್‌ ಮತ್ತಿತರರು ಅಭಿನಯಿಸುತ್ತಿದ್ದಾರೆ. 

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Emraan Hashmi: ಖ್ಯಾತ ನಟಿ ಜತೆ ಕೆಟ್ಟ ಚುಂಬನದ ಅನುಭವ ಎಂದಿದ್ದ ನಟ ಮತ್ತೆ ಆಕೆಯ ಜತೆಗೇ ಪೋಸ್‌!

Emraan Hashmi: 20 ವರ್ಷಗಳ ಮುನಿಸಿನ ಬಳಿಕ ʻಮರ್ಡರ್ʼ ಸಿನಿಮಾ ತಾರೆಗಳಾದ ಇಮ್ರಾನ್ ಹಶ್ಮಿ (Emraan Hashmi) ಮತ್ತು ಮಲ್ಲಿಕಾ ಶೆರಾವತ್ (Mallika Sherawat) ಒಟ್ಟಿಗೆ ನಿಂತು ಫೋಟೊಗೆ ಪೋಸ್‌ ಕೊಟ್ಟಿದ್ದಾರೆ. 2014ರಲ್ಲಿ, ಇಮ್ರಾನ್ ಹಶ್ಮಿ ಅವರು ‘ಕಾಫಿ ವಿತ್ ಕರಣ್’ ಚಾಟ್ ಶೋನಲ್ಲಿ ಮಲ್ಲಿಕಾ ವಿರುದ್ಧ ಕೆಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಇಮ್ರಾನ್ ತನ್ನ “ಕೆಟ್ಟ ಆನ್-ಸ್ಕ್ರೀನ್ ಕಿಸ್” ಮರ್ಡರ್ ನಟಿ ಮಲ್ಲಿಕಾ ಅವರೊಂದಿಗೆ ಎಂದು ಹೇಳಿದ್ದರು.

VISTARANEWS.COM


on

Emraan Hashmi
Koo

ಬೆಂಗಳೂರು: ಚಿತ್ರ ನಿರ್ಮಾಪಕ ಆನಂದ್​ ಪಂಡಿತ್​ ಮಗಳು ಐಶ್ವರ್ಯಾ ಮತ್ತು ಅಳಿಯ ಸಾಹೀಲ್​ ಅವರಿಗಾಗಿ ಅದ್ಧೂರಿಯಾಗಿ ಆರತಕ್ಷತೆ ಪಾರ್ಟಿ (Anand Pandit daughter wedding reception ) ಆಯೋಜಿಸಿದ್ದರು. ಈ ವೇಳೆ ಬಿ ಟೌನ್​ ನಟ-ನಟಿಯರು ಕಾರ್ಯಕ್ರಮಕ್ಕೆ ಹಾಜರಾಗಿ, ಜೋಡಿಗಳಿಗೆ ಶುಭಕೋರಿದ್ದಾರೆ. ಸಮಾರಂಭಕ್ಕೆ ಮುನ್ನ ರೆಡ್​ ಕಾರ್ಪೆಟ್​ನಲ್ಲಿ ನಟ ಶಾರುಖ್​​ ಖಾನ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕಂಡು ಬಂದರು. ವಿಶೇಷ ಅಂದರೆ ಈ ವೇಳೆ 20 ವರ್ಷಗಳ ಮುನಿಸಿನ ಬಳಿಕ ʻಮರ್ಡರ್ʼ ಸಿನಿಮಾ ತಾರೆಗಳಾದ ಇಮ್ರಾನ್ ಹಶ್ಮಿ (Emraan Hashmi) ಮತ್ತು ಮಲ್ಲಿಕಾ ಶೆರಾವತ್ (Mallika Sherawat) ಒಟ್ಟಿಗೆ ನಿಂತು ಫೋಟೊಗೆ ಪೋಸ್‌ ಕೊಟ್ಟಿದ್ದಾರೆ.

ರೆಡ್ ಕಾರ್ಪೆಟ್‌ನಲ್ಲಿ “ಐಕಾನಿಕ್ ಆನ್‌ಸ್ಕ್ರೀನ್ ಜೋಡಿ” ಒಟ್ಟಿಗೆ ಕಂಡು ಅಭಿಮಾನಿಗಳು ಥ್ರಿಲ್‌ ಆದರು. ಮಲ್ಲಿಕಾ ಶೆರಾವತ್ ಗುಲಾಬಿ ಬಣ್ಣದ ಗೌನ್‌ನಲ್ಲಿ ಕಂಡರೆ, ಇಮ್ರಾನ್ ಕಪ್ಪು ಸೂಟ್ ಧರಿಸಿದ್ದರು. ಇದೀಗ ಈ ಜೋಡಿ ಕಂಡು ನೆಟ್ಟಿಗರು ʻʻಅತ್ಯುತ್ತಮ ಜೋಡಿʼʼಎಂದು ಕಮೆಂಟ್‌ ಮಾಡಿದ್ದಾರೆ.

ಇಮ್ರಾನ್ ಮತ್ತು ಮಲ್ಲಿಕಾ ಅಭಿನಯದ ‘ಮರ್ಡರ್’ ಸಿನಿಮಾ 20 ವರ್ಷಗಳ ಹಿಂದೆ ಬಿಡುಗಡೆಯಾದಾಗ ಭಾರಿ ಹಿಟ್ ಆಗಿತ್ತು. ಆದರೆ, ಇವರಿಬ್ಬರ ನಡುವೆ ಸೆಟ್‌ನಲ್ಲಿ ಜಗಳ ಮಾಡಿಕೊಂಡಿದ್ದರು. 2021 ರಲ್ಲಿ ಸಂದರ್ಶನವೊಂದರಲ್ಲಿ, ಮಲ್ಲಿಕಾ ಅವರು ‘ಮರ್ಡರ್’ ಸೆಟ್‌ನಲ್ಲಿ ಇಮ್ರಾನ್ ಜತೆಗಿನ ಜಗಳದ ಬಗ್ಗೆ ಹೇಳಿಕೊಂಡಿದ್ದರು. ಅಲ್ಲಿಂದ ಇಬ್ಬರ ಮಧ್ಯೆ ಮನಸ್ತಾಪವಾಗಿ ಪರಸ್ಪರ ಮಾತನಾಡಿಕೊಳ್ಳುತ್ತಿರಲಿಲ್ಲ.

ಇದನ್ನೂ ಓದಿ: Emraan Hashmi: ‘ಗೂಢಚಾರಿ-2’ ಟೀಂ ಸೇರಿದ ಬಾಲಿವುಡ್ ಸ್ಟಾರ್ ಇಮ್ರಾನ್ ಹಶ್ಮಿ!

`ದಿ ಲವ್ ಲಾಫ್ ಲೈವ್’ ಶೋನಲ್ಲಿ ಸಂದರ್ಶನವೊಂದರಲ್ಲಿ, ನಿರೂಪಕಿ ಮಂದಿರಾ ಬೇಡಿ ಅವರು ಈ ಬಗ್ಗೆ ಹಿಂದೆ ಮಲ್ಲಿಕಾ ಅವರ ಬಳಿ ಕೇಳಿದಾಗ, ನಟಿ ಉತ್ತರಿಸಿ ʻʻಮರ್ಡರ್‌ ಸಿನಿಮಾ ಇಮ್ರಾನ್ ಹಶ್ಮಿಯೊಂದಿಗೆ ನಾನು ಮಾತನಾಡುತ್ತ ಇರಲಿಲ್ಲ. ಆ ಬಳಿಕ ಘಟನೆ ನೆನೆಸಿಕೊಂಡು ತುಂಬ ತಮಾಷೆ ಎಂದು ಅನಿಸಿತು. ಚಿತ್ರದ ನಂತರ ನಾನು ಪ್ರಚಾರದ ಸಮಯದಲ್ಲಿ ಅದೇನೋ ತಪ್ಪು ತಿಳಿವಳಿಕೆಯಿಂದಾಗಿ ಮಾತು ಬಿಟ್ಟಿದ್ದೇವುʼʼಎಂದಿದ್ದರು.

2014ರಲ್ಲಿ, ಇಮ್ರಾನ್ ಹಶ್ಮಿ ಅವರು ‘ಕಾಫಿ ವಿತ್ ಕರಣ್’ ಚಾಟ್ ಶೋನಲ್ಲಿ ಮಲ್ಲಿಕಾ ವಿರುದ್ಧ ಕೆಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಕರಣ್ ಜೋಹರ್ ಅವರು ಇಮ್ರಾನ್ ಹಶ್ಮಿ ಅವರಿಗೆ ಆನ್‌ಸ್ಕ್ರೀನ್‌ನಲ್ಲಿ ಅತ್ಯಂತ ಕೆಟ್ಟ ಚುಂಬನ ಅನುಭವ ಯಾರದ್ದಾಗಿತ್ತು? ಎಂದು ಕೇಳಿದ್ದಾಗ, ಇಮ್ರಾನ್ ತನ್ನ “ಕೆಟ್ಟ ಆನ್-ಸ್ಕ್ರೀನ್ ಕಿಸ್” ಮರ್ಡರ್ ನಟಿ ಮಲ್ಲಿಕಾ ಅವರೊಂದಿಗೆ ಎಂದು ಹೇಳಿದ್ದರು. ಹಾಗೇ ‘ಮರ್ಡರ್ 2’ ನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಉತ್ತಮ ಕಿಸ್ಸರ್ ಎಂದು ಹೇಳಿಕೊಂಡಿದ್ದರು.

Continue Reading

ಸ್ಯಾಂಡಲ್ ವುಡ್

Actor Yash: `ರಾಮಾಯಣ’ಕ್ಕೆ ಯಶ್‌ ನಿರ್ಮಾಪಕ: ರಾವಣನ ಪಾತ್ರ ನಿಭಾಯಿಸೋದು ಯಾರು?

Actor Yash: ರಾಮಾಯಣʼ ಸಿನಿಮಾವನ್ನು ಬಹಳ ಅದ್ಧೂರಿಯಾಗಿ ದೃಶ್ಯ ರೂಪಕ್ಕೆ ಇಳಿಸುವುದಕ್ಕೆ ದಂಗಲ್ ನಿರ್ದೇಶಕ ನಿತೀಶ್ ತಿವಾರಿ ಹೊರಟಿದ್ದಾರೆ. ಅದರಂತೆ ಬಹು ಕೋಟಿ ಬಜೆಟ್ ಹಾಕಿ ಈ ಚಿತ್ರ ನಿರ್ಮಾಣ ಮಾಡುವುದಕ್ಕೆ ರಾಕಿಭಾಯ್ ಹಾಗೂ ನಮಿತ್ ಮಲ್ಹೋತ್ರಾ ಒಂದಾಗಿದ್ದಾರೆ. ಆದರೆ ರಾವಣನ ಪಾತ್ರಕ್ಕೆ ಯಶ್‌ ಬಣ್ಣ ಹಚ್ಚಲಿದ್ದಾರಾ? ಇಲ್ಲವಾ? ಎಂಬುದರ ಬಗ್ಗೆ ಅಧಿಕೃತ ಮಾಹಿತಿ ನಟ ಹಂಚಿಕೊಂಡಿಲ್ಲ.

VISTARANEWS.COM


on

Actor Yash
Koo

ಬೆಂಗಳೂರು: ಬಾಲಿವುಡ್ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ʻರಾಮಾಯಣʼ (Actor Yash) ಚಿತ್ರೀಕರಣ ಪ್ರಾರಂಭವಾಗಿದೆ. ಭಾರತೀಯ ಪುರಾಣದ ಕಥೆಯನ್ನು ತೆರೆದಿಡುವ ʻರಾಮಾಯಣʼ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಹಾಗೂ ನಮಿತ್ ಮಲ್ಹೋತ್ರಾ ಕೈ ಜೋಡಿಸಿದ್ದಾರೆ. ಆದರೆ ರಾವಣನ ಪಾತ್ರಕ್ಕೆ ಯಶ್‌ ಬಣ್ಣ ಹಚ್ಚಲಿದ್ದಾರಾ? ಇಲ್ಲವಾ? ಎಂಬುದರ ಬಗ್ಗೆ ಅಧಿಕೃತ ಮಾಹಿತಿ ನಟ ಹಂಚಿಕೊಂಡಿಲ್ಲ.

ರಾಮಾಯಣಕ್ಕೆ ರಾಕಿ ಕೂಡ ನಿರ್ಮಾಪಕ

ʻರಾಮಾಯಣʼ ಸಿನಿಮಾವನ್ನು ಬಹಳ ಅದ್ಧೂರಿಯಾಗಿ ದೃಶ್ಯ ರೂಪಕ್ಕೆ ಇಳಿಸುವುದಕ್ಕೆ ದಂಗಲ್ ನಿರ್ದೇಶಕ ನಿತೀಶ್ ತಿವಾರಿ ಹೊರಟಿದ್ದಾರೆ. ಅದರಂತೆ ಬಹು ಕೋಟಿ ಬಜೆಟ್ ಹಾಕಿ ಈ ಚಿತ್ರ ನಿರ್ಮಾಣ ಮಾಡುವುದಕ್ಕೆ ರಾಕಿಭಾಯ್ ಹಾಗೂ ನಮಿತ್ ಮಲ್ಹೋತ್ರಾ ಒಂದಾಗಿದ್ದಾರೆ. ಯಶ್ ಒಡೆತನದ ʻಮಾನ್ಸ್ಟರ್ ಮೈಂಡ್ ಕ್ರಿಯೇಷನ್ʼ ಹಾಗೂ ನಮಿತ್ ಮಲ್ಹೋತ್ರಾ ಸಾರಥ್ಯದ ʻಪ್ರೈಮ್ ಫೋಕಸ್ ಸ್ಟುಡಿಯೊʼ ರಾಮಾಯಣ ಸಿನಿಮಾವನ್ನು ನಿರ್ಮಿಸುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಮಿತ್ ಮಲ್ಹೋತ್ರಾ, ʻʻರಾಮಾಯಣ ಕಥೆಗೆ ನ್ಯಾಯ ಸಲ್ಲಿಸಲು ನಾನು ಸಿದ್ಧನಾಗಿದ್ದೇನೆ. ನಮ್ಮ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಲು ನಾನು ಉತ್ಸಕನಾಗಿದ್ದೇನೆ. ನಾನು ಯಶ್ ಅವರಲ್ಲಿಯೂ ಇದನ್ನು ಕಂಡುಕೊಂಡಿದ್ದೇನೆ. ಯಶ್‌ ಅವರ ಪಯಣದಿಂದ ನಾನು ಸ್ಪೂರ್ತಿ ಪಡೆದಿದ್ದೇನೆ. ಯಶ್ ಅವರಲ್ಲಿರುವ ಯೋಜನೆಯನ್ನು ಅರಿತುಕೊಂಡಿದ್ದೇನೆ. ರಾಮಾಯಣ ದೃಶ್ಯಕಾವ್ಯವನ್ನು ತೆರೆಗೆ ತರುತ್ತಿದ್ದೇವೆʼʼ ಎಂದರು.

ಇದನ್ನೂ ಓದಿ: Blast in Bengaluru: ಕೊನೆಗೂ ಸಿಕ್ಕಿಬಿದ್ದ ರಾಮೇಶ್ವರಂ ಕೆಫೆ ಬಾಂಬರ್!‌ ಪ್ರಧಾನ ಸೂತ್ರಧಾರಿಯೂ ಎನ್‌ಐಎ ವಶಕ್ಕೆ

ಯಶ್ ಮಾತನಾಡಿ, ʻʻಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಪ್ರರ್ದಶಿಸುವುದು ನನ್ನ ಬಹುದಿನಗಳ ಕನಸು. ಅದರ ಹುಡುಕಾಟದಲ್ಲಿ ನಾನು ಅತ್ಯುತ್ತಮ VFC ಸ್ಟುಡಿಯೋ ಕಂಡುಕೊಂಡಿದ್ದೇನೆ. ಅದರ ಹಿಂದಿನ ಪ್ರೇರಕ ಶಕ್ತಿ ಒಬ್ಬ ಭಾರತೀಯ. ನಾವು ಸಿನಿಮಾ ರಂಗದ ಬೇರೆ ವಿಷಯಗಳ ಬಗ್ಗೆ ಚರ್ಚೆ ನಡೆಸುವಾಗ ರಾಮಾಯಣ ವಿಷಯವು ಬಂದಿತು. ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪ್ರಸ್ತುತಪಡಿಸುವ ಸಿನಿಮಾ ಇದಾಗಿದ್ದು, ಈ ಮಹಾಕಾವ್ಯ ಸಿನಿಮಾ ರೂಪ ತಾಳುತ್ತಿದೆ. ಆ ಅತ್ಯುತ್ತಮ ಅನುಭವನ್ನು ಜಗತ್ತಿಗೆ ನೀಡಲು ನಾವು ಕಾತರರಾಗಿದ್ದೇವೆʼʼ ಎಂದರು.

ನಮಿತ್ ಮಲ್ಹೋತ್ರಾ ಒಡೆತನದ ಪ್ರೈಮ್ ಫೋಕಸ್ ಸ್ಟುಡಿಯೋ ಜಾಗತಿಕ ಮಟ್ಟದ ಕಂಟೆಂಟ್ ಹಾಗೂ ವಿಭಿನ್ನ ಬಗೆಯ ಕ್ರಿಯೇಟ್ ಮಾಡುವ ಸ್ವತಂತ್ರ ನಿರ್ಮಾಣ ಕಂಪನಿಯಾಗಿದೆ. ಈ ಸಂಸ್ಥೆ ಸದ್ಯ ಮೂರು ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಆ ಪೈಕಿ ರಾಮಾಯಣ ಕೂಡ ಒಂದು.

ಯಶ್ ತಮ್ಮದೇ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ ಎಂಬ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಈ ಬ್ಯಾನರ್ ನಡಿ ‘ಟಾಕ್ಸಿಕ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ‘ಮಾನ್ಸ್ಟರ್ ಮೈಂಡ್’ ಕ್ರಿಯೇಷನ್ಸ್ ಕೂಡ ‘ಟಾಕ್ಸಿಕ್’ ಸಿನಿಮಾದ ನಿರ್ಮಾಣದಲ್ಲಿ ಪಾಲುದಾರಿಕೆಯನ್ನು ಹೊಂದಿದೆ. ಇದೇ ಬ್ಯಾನರ್ ನಡಿ ‘ರಾಮಾಯಣ’ ಸಿನಿಮಾಗೂ ಯಶ್ ಬಂಡವಾಳ ಹೂಡುತ್ತಿದ್ದಾರೆ.

Continue Reading

ಬಾಲಿವುಡ್

Ajay Devgan: ಅಜಯ್ ದೇವಗನ್ ಸಿನಿಮಾ ಹಿಂದಿಕ್ಕಿದ ಅಕ್ಷಯ್ ಕುಮಾರ್ ʻಬಡೇ ಮಿಯಾ ಚೋಟೆ ಮಿಯಾʼ!

Ajay Devgan: ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅವರ ಆಕ್ಷನ್‌ ಚಿತ್ರ ʻಬಡೇ ಮಿಯಾ ಚೋಟೆ ಮಿಯಾʼ ಸಿನಿಮಾ ಕೂಡ ಒಳ್ಳೆಯ ಕಲೆಕ್ಷನ್‌ ಮಾಡಿದೆ. ʻಮೈದಾನ್‌ʼ ಸಿನಿಮಾಗೆ ಹೋಲಿಸಿದರೆ, ಮೊದಲ ದಿನದಲ್ಲಿ 15 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ ʻಬಡೇ ಮಿಯಾ ಚೋಟೆ ಮಿಯಾʼ ಸಿನಿಮಾ. ಮೈದಾನ್‌ ಸಿನಿಮಾ ಈದ್ ಸಂದರ್ಭದಲ್ಲಿ ಏಪ್ರಿಲ್ 11 ರಂದು ವಿಶ್ಯಾದ್ಯಂತ ಬಿಡುಗಡೆಯಾಗಿತ್ತು.ಬಡೆ ಮಿಯಾ ಚೋಟೆ ಮಿಯಾ ‘ ಬಾಕ್ಸ್ ಆಫೀಸ್‌ನಲ್ಲಿ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 15.50 ಕೋಟಿ ನಿವ್ವಳ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಇದು ಭಾರತದಲ್ಲಿ ಏಪ್ರಿಲ್ 11ರಂದು ಒಟ್ಟಾರೆ ಶೇಕಡಾ 30.35ರಷ್ಟು ಆಕ್ಯುಪೆನ್ಸಿಯನ್ನು ದಾಖಲಿಸಿದೆ.

VISTARANEWS.COM


on

Ajay Devgan
Koo

ಬೆಂಗಳೂರು: ಅಜಯ್ ದೇವಗನ್ (Ajay Devgan) ಅಭಿನಯದ ಮೈದಾನ್‌‘ ಸಿನಿಮಾ (Maidaan Movie) ಭಾರತದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ಮೊದಲ ದಿನವೇ 7 ಕೋಟಿ ರೂ. ಕಲೆಕ್ಷನ್ ಕಂಡಿದೆ. ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅವರ ಆಕ್ಷನ್‌ ಚಿತ್ರ ʻಬಡೇ ಮಿಯಾ ಚೋಟೆ ಮಿಯಾʼ (bade miyan chote miyan) ಸಿನಿಮಾ ಕೂಡ ಒಳ್ಳೆಯ ಕಲೆಕ್ಷನ್‌ ಮಾಡಿದೆ. ʻಮೈದಾನ್‌ʼ ಸಿನಿಮಾಗೆ ಹೋಲಿಸಿದರೆ, ಮೊದಲ ದಿನದಲ್ಲಿ 15 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ ʻಬಡೇ ಮಿಯಾ ಚೋಟೆ ಮಿಯಾʼ ಸಿನಿಮಾ.

ನಟ ಅಜಯ್ ದೇವಗನ್ (Ajay Devgn) ಅವರು “ಮೈದಾನ್ʼ ಸಿನಿಮಾದಲ್ಲಿ ಫುಟ್ಬಾಲ್ ಕೋಚ್ ಆಗಿ ಬಣ್ಣ ಹಚ್ಚಿದ್ದಾರೆ. ಬೋನಿ ಕಪೂರ್ ಅವರ ‘ಮೈದಾನ್’ ಸಿನಿಮಾವು ಫುಟ್ಬಾಲ್ ಮೂಲಕ ಭಾರತಕ್ಕೆ ಹೆಮ್ಮೆ ತಂದ ಸೈಯದ್ ಅಬ್ದುಲ್ ರಹೀಮ್ ಅವರ ಜೀವನದ ಸುತ್ತ ಸುತ್ತುವ ಕತೆಯಾಗಿದೆ. ಮೈದಾನ್‌ ಸಿನಿಮಾ ಈದ್ ಸಂದರ್ಭದಲ್ಲಿ ಏಪ್ರಿಲ್ 11 ರಂದು ವಿಶ್ಯಾದ್ಯಂತ ಬಿಡುಗಡೆಯಾಗಿತ್ತು.

ಏಪ್ರಿಲ್ 10ರ ಪ್ರೀಮಿಯರ್‌ ದಿನದಂದು ಮೈದಾನ್‌ ಸಿನಿಮಾ ಭಾರತದಲ್ಲಿ ಸುಮಾರು 2.6 ಕೋಟಿ ರೂಪಾಯಿ ಗಳಿಕೆ ಕಂಡಿದೆ ಎಂದು ವರದಿಯಾಗಿದೆ. ಏಪ್ರಿಲ್ 11ರಂದು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 4.50 ಕೋಟಿ ರೂ. ಸಂಗ್ರಹಿಸಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ, ‘ಮೈದಾನ’ ಭಾರತದಲ್ಲಿ 7.10 ಕೋಟಿ ನಿವ್ವಳ ಕಲೆಕ್ಷನ್ ಮಾಡಿದೆ. ಏಪ್ರಿಲ್ 11ರಂದು, ಸಿನಿಮಾ ಒಟ್ಟಾರೆ ಶೇಕಡಾ 14.56ರಷ್ಟು ಆಕ್ಯುಪೆನ್ಸಿಯನ್ನು ದಾಖಲಿಸಿದೆ.

ಅಮಿತ್ ರವೀಂದ್ರನಾಥ್ ಶರ್ಮಾ ನಿರ್ದೇಶಿಸಿದ ‘ಮೈದಾನ್’ ಚಿತ್ರದಲ್ಲಿ ಪ್ರಿಯಾಮಣಿ, ಗಜರಾಜ್ ರಾವ್ ಮತ್ತು ರುದ್ರನೀಲ್ ಘೋಷ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಮಿತ್ ಶರ್ಮಾ ಅವರು ‘ಮೈದಾನ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಜಿಯೋ ಸ್ಟುಡಿಯೋಸ್, ಬೋನಿ ಕಪೂರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Ajay Devgn: ಟಬು ಜತೆಗೆ ಸಿನಿಮಾ ಮಾಡುತ್ತೀರಲ್ಲ ಯಾಕೆ? ಅಜಯ್‌ ದೇವಗನ್‌ ಉತ್ತರವೇನು?

ಬಡೆ ಮಿಯಾ ಚೋಟೆ ಮಿಯಾ

ಇನ್ನು ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅಭಿನಯದ ‘ಬಡೆ ಮಿಯಾ ಚೋಟೆ ಮಿಯಾ ‘ಬಾಲಿವುಡ್‌ನ ಬಹು ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ.

‘ಬಡೆ ಮಿಯಾ ಚೋಟೆ ಮಿಯಾ ‘ ಬಾಕ್ಸ್ ಆಫೀಸ್‌ನಲ್ಲಿ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 15.50 ಕೋಟಿ ನಿವ್ವಳ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಇದು ಭಾರತದಲ್ಲಿ ಏಪ್ರಿಲ್ 11ರಂದು ಒಟ್ಟಾರೆ ಶೇಕಡಾ 30.35ರಷ್ಟು ಆಕ್ಯುಪೆನ್ಸಿಯನ್ನು ದಾಖಲಿಸಿದೆ. ಸಂಜೆ ಮತ್ತು ರಾತ್ರಿ ಪ್ರದರ್ಶನಗಳು ಸುಮಾರು ಶೇಕಡಾ 33 ಪ್ರತಿಶತದಷ್ಟು ಆಕ್ಯುಪೆನ್ಸಿಯನ್ನು ದಾಖಲಿಸಿದರೆ, ಬೆಳಗಿನ ಮತ್ತು ಮಧ್ಯಾಹ್ನದ ಪ್ರದರ್ಶನಗಳು ಶೇಕಡಾ 19 ಮತ್ತು ಶೇಕಡಾ 34 ರಷ್ಟು ಆಕ್ಯುಪೆನ್ಸಿ ಹೊಂದಿದ್ದವು ಎನ್ನಲಾಗಿದೆ.

ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್ ಸ್ಥಳಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಹಾಲಿವುಡ್ ರೇಂಜ್‌ಗೆ ದೊಡ್ಡ ಬಜೆಟ್ ನಲ್ಲಿ’ಬಡೇ ಮಿಯಾನ್ ಚೋಟೆ ಮಿಯಾನ್’ ಚಿತ್ರ ನಿರ್ಮಿಸಲಾಗಿದೆ. ಅಲಿ ಅಬ್ಬಾಸ್ ಝಫರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ವಶು ಭಗ್ನಾನಿ, ದೀಪಿಕ್ಷಾ ದೇಶಮುಖ್, ಜಾಕಿ ಭಗ್ನಾನಿ, ಹಿಮಾಂಶು ಕಿಶನ್ ಮೆಹ್ರಾ, ಅಲಿ ಅಬ್ಬಾಸ್ ಜಾಫರ್ ಚಿತ್ರ ನಿರ್ಮಾಣ ಮಾಡಿದ್ದಾರೆ.

ವಶು ಭಗ್ನಾನಿ ಮತ್ತು ಪೂಜಾ ಎಂಟರ್‌ಟೇನ್‌ಮೆಂಟ್ AAZ ಫಿಲಮ್ಸ್ ಸಹಯೋಗದಡಿ ‘ಬಡೇ ಮಿಯಾನ್ ಚೋಟೆ ಮಿಯಾನ್’ ಚಿತ್ರವನ್ನು ಪ್ರಸ್ತುತಪಡಿಸಿದ್ದಾರೆ.

Continue Reading

ಬಾಲಿವುಡ್

Saif Ali Khan: ಈದ್ ಆಚರಿಸಿದ ಸೈಫ್ ಅಲಿ ಖಾನ್-ಕರೀನಾ: ಕಿರಿಯ ಮಗ ಮಿಸ್ಸಿಂಗ್‌!

Saif Ali Khan: ಸೈಫ್‌ ಹಾಗೂ ಕರೀನಾ ಅವರು ಕುಟುಂಬದ ಜತೆ ಈದ್ ಕೂಟವನ್ನು ಏರ್ಪಡಿಸಿದ್ದರು. ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಕುಟುಂಬದೊಂದಿಗೆ ಈದ್‌ ಆಚರಣೆ (Eid celebration) ಮಾಡಿಕೊಂಡರು. ಸೈಫ್ ಅವರ ಸಹೋದರಿ ಸಬಾ ಪಟೌಡಿ (Saba Pataudi) ತಮ್ಮ ಈದ್ ಹಬ್ಬದ ಫೋಟೋಗಳನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

VISTARANEWS.COM


on

Kareena Kapoor
Koo

ಬೆಂಗಳೂರು: ಬಾಲಿವುಡ್‌ನ ಕ್ಯೂಟ್‌ ಜೋಡಿ ಎಂದೇ ಖ್ಯಾತಿ ಪಡೆದ ಸೈಫ್ ಅಲಿ ಖಾನ್ (Saif Ali Khan) ಮತ್ತು ಕರೀನಾ ಕಪೂರ್ ಖಾನ್ (Kareena Kapoor) ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಕುಟುಂಬದೊಂದಿಗೆ ಈದ್‌ ಆಚರಣೆ (Eid celebration) ಮಾಡಿಕೊಂಡಿದೆ. ಸೈಫ್ ಅವರ ಸಹೋದರಿ ಸಬಾ ಪಟೌಡಿ (Saba Pataudi) ತಮ್ಮ ಈದ್ ಹಬ್ಬದ ಫೋಟೋಗಳನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ತೈಮೂರ್ ಕುಟುಂಬದೊಂದಿಗೆ ಮಾತ್ರ ಪೋಸ್ ನೀಡಿದ್ದಾನೆ. ತಮ್ಮ ಜೆಹ್ ಅಲಿ ಖಾನ್, ಹಾಗೆಯೇ ಸೈಫ್ ಅವರ ಮಕ್ಕಳು – ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್‌ ಗೈರಾಗಿದ್ದರು.

ಸೈಫ್‌ ಹಾಗೂ ಕರೀನಾ ಅವರು ಕುಟುಂಬದ ಜತೆ ಈದ್ ಕೂಟವನ್ನು ಏರ್ಪಡಿಸಿದ್ದರು. ಹಸಿರು ಮತ್ತು ಗುಲಾಬಿ ಬಣ್ಣದ ಕುರ್ತಾ ಪೈಜಾಮಾ ಸೆಟ್‌ನಲ್ಲಿ ಕರೀನಾ ಕಂಡು ಬಂದರೆ, ಸೈಫ್ ಬಿಳಿ ಪೈಜಾಮಾದೊಂದಿಗೆ ನೀಲಿ ಕುರ್ತಾದಲ್ಲಿ ಕಂಡು ಬಂದರು. ತೈಮೂರ್ ತನ್ನ ತಂದೆಯೊಂದಿಗೆ ಹೊಂದಿಕೆಯಾಗುವ ನೀಲಿ ಕುರ್ತಾ ಮತ್ತು ಪೈಜಾಮ ಧರಿಸಿದ್ದರು.

“ಈದ್ ಮುಬಾರಕ್!! ಕುಟುಂಬ ಯಾವಾಗಲೂ ಮುಖ್ಯ! ಸುಂದರ ಕ್ಷಣಗಳು…ಮಿಸ್ಸಿಂಗ್‌ ಜೆಹ್ಜಾನ್ ಇನ್ನಿ ಮತ್ತು ಕುನಾಲ್ . ಕುಟುಂಬದೊಂದಿಗೆ ಈದ್ ವಿಶೇಷವಾಗಿದೆ! ಎಂದು ಸೈಫ್ ಅವರ ಸಹೋದರಿ ಸಬಾ ಪಟೌಡಿ ಫೋಟೊ ಶೇರ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Crew Box Office Day 2: ಕಲೆಕ್ಷನ್‌ನಲ್ಲಿ ಮುನ್ನುಗ್ಗುತ್ತಿದೆ ಕರೀನಾ, ಕೃತಿ, ಟಬು ಅಭಿನಯದ ʻಕ್ರ್ಯೂʼ ಸಿನಿಮಾ!

ಸಿನಿಮಾ ವಿಚಾರಕ್ಕೆ ಬಂದರೆ ಕರೀನಾ ಇತ್ತೀಚಿಗೆ ಬಿಡುಗಡೆಯಾದ ʻಕ್ರ್ಯೂʼ ಸಿನಿಮಾ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಚಿತ್ರ ಟಬು ಮತ್ತು ಕೃತಿ ಸನೂನ್‌ ಸಹ ಮುಖ್ಯ ಪಾತ್ರದಲ್ಲಿ ಇದ್ದಾರೆ. ಬಿಡುಗಡೆಯಾದ 14 ದಿನಗಳಲ್ಲಿ ಚಿತ್ರ 64.67 ಕೋಟಿ ರೂ. ಕಲೆಕ್ಷನ್‌ ಮಾಡಿದೆ.

ಕಪಿಲ್ ಶರ್ಮಾ ಹಾಗೂ ದಿಲ್ಜಿತ್ ದೋಸಾಂಜ್ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಏಕ್ತಾ ಕಪೂರ್, ರಿಯಾ ಕಪೂರ್, ಅನಿಲ್ ಕಪೂರ್ ಮತ್ತು ದಿಗ್ವಿಜಯ್ ಪುರೋಹಿತ್ ಅವರು ಬಾಲಾಜಿ ಮೋಷನ್ ಪಿಕ್ಚರ್ಸ್ ಮತ್ತು ಅನಿಲ್ ಕಪೂರ್ ಫಿಲ್ಮ್ಸ್ ಮತ್ತು ಕಮ್ಯುನಿಕೇಷನ್ ನೆಟ್‌ವರ್ಕ್ ಅಡಿಯಲ್ಲಿ ಜಂಟಿಯಾಗಿ ಕ್ರ್ಯೂ ಚಿತ್ರವನ್ನು ನಿರ್ಮಿಸಲಾಗಿದೆ. ಮೊದಲ ಬಾರಿಗೆ ಕರೀನಾ ಕಪೂರ್ ಖಾನ್, ಟಬು ಮತ್ತು ಕೃತಿ ಸನೂನ್ ಪರದೆಯನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅವರು ಗಗನಸಖಿಯರ ಪಾತ್ರವನ್ನು ನಿರ್ವಹಿಸಿದ್ದಾರೆ.

ಇದನ್ನೂ ಓದಿ: Sachin Tendulkar: ಕೀನ್ಯಾದ ಕಾಡಿನಲ್ಲಿ ಸಚಿನ್​ಗೆ ಬಿಲ್ಲು-ಬಾಣಗಳಿಂದ ಗಾರ್ಡ್​ ಆಫ್​ ಹಾನರ್​

ಕರೀನಾ ಕೈಯಲ್ಲಿದೆ ಸೌತ್‌ ಸಿನಿಮಾ ಬಿಗ್‌ ಪ್ರಾಜೆಕ್ಟ್‌!

ಯಶ್‌ ಸಿನಿಮಾ ʼಟಾಕ್ಸಿಕ್‌ʼನಲ್ಲಿ ಕಥೆಗೆ ಬಹು ಮುಖ್ಯ ತಿರುವು ನೀಡುವ ಪಾತ್ರದಲ್ಲಿ ಕರೀನಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆಯೂ ಯಶ್‌ ಬಾಲಿವುಡ್‌ ಕಲಾವಿದರ ಜತೆ ತೆರೆ ಹಂಚಿಕೊಂಡಿದ್ದಾರೆ. ಪ್ರಶಾಂತ್‌ ನೀಲ್‌ ನಿರ್ದೇಶನದ ʼಕೆಜಿಎಫ್‌ 2ʼ ಚಿತ್ರದಲ್ಲಿ ಬಾಲಿವುಡ್‌ ತಾರೆಯರಾದ ಸಂಜಯ್‌ ದತ್‌ ಮತ್ತು ರವೀನಾ ಟಂಡನ್‌ ಕಾಣಿಸಿಕೊಂಡಿದ್ದರು. ಯಶ್‌ ಜತೆ ಇವರ ಪಾತ್ರಗಳೂ ಮೆಚ್ಚುಗೆ ಪಡೆದಿದ್ದವು. ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ʼಟಾಕ್ಸಿಕ್‌ʼ ಚಿತ್ರವನ್ನು ನಿರ್ಮಿಸಲಿದ್ದಾರೆ.

Continue Reading
Advertisement
Rishabh Pant
ಕ್ರಿಕೆಟ್34 mins ago

Rishabh Pant: ಐಪಿಎಲ್​ನಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ರಿಷಭ್ ಪಂತ್​

IPL 2024
ಪ್ರಮುಖ ಸುದ್ದಿ1 hour ago

IPL 2024 : ಲಕ್ನೊ ಸೂಪರ್​ ಜೈಂಟ್ಸ್ ವಿರುದ್ಧ ಡೆಲ್ಲಿ ತಂಡಕ್ಕೆ 6 ವಿಕೆಟ್​ ವಿಜಯ

NIA Raid
ಕರ್ನಾಟಕ1 hour ago

NIA Raid: ಹುಬ್ಬಳ್ಳಿಯಲ್ಲಿ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದ ಎನ್‌ಐಎ

Khalistan Terrorist
ಪ್ರಮುಖ ಸುದ್ದಿ2 hours ago

Khalistani Terrorist : ದೆಹಲಿ ವಿಮಾನ ನಿಲ್ದಾಣದಲ್ಲಿ ಖಲಿಸ್ತಾನಿ ಉಗ್ರ ಪ್ರಭ್​ಪ್ರೀತ್ ಸಿಂಗ್ ಸೆರೆ

Lok Sabha Election 2024
ಕರ್ನಾಟಕ2 hours ago

Lok Sabha Election 2024: ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಕೆ; ಇವರ ಆಸ್ತಿ ಎಷ್ಟು?

Pakistan
ಪ್ರಮುಖ ಸುದ್ದಿ2 hours ago

United Kingdom: ‘ಪ್ರಯಾಣಕ್ಕೆಅಪಾಯಕಾರಿ’ ದೇಶಗಳ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಿದ ಬ್ರಿಟನ್​!

Chikkaballapur Lok Sabha Constituency BJP Candidate Dr K Sudhakar is campaigning in various places today
ಚಿಕ್ಕಬಳ್ಳಾಪುರ2 hours ago

Lok Sabha Election 2024: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ರಿಂದ ಏ.13ರಂದು ಪ್ರಚಾರ

Union Minister Pralhad Joshi statement
ಹುಬ್ಬಳ್ಳಿ2 hours ago

Lok Sabha Election 2024: ದೇಶದ್ರೋಹಿ ಕೃತ್ಯ ನಿಗ್ರಹಕ್ಕೆ ಮೋದಿ ಸರ್ಕಾರವೇ ಬೇಕು: ಪ್ರಲ್ಹಾದ್‌ ಜೋಶಿ

Union Minister Pralhad Joshi latest statement in hubli
ಕರ್ನಾಟಕ2 hours ago

Lok Sabha Election 2024: ರಾಜ್ಯದಲ್ಲಿ ಕಾಂಗ್ರೆಸ್ 3ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲಲ್ಲ: ಪ್ರಲ್ಹಾದ್‌ ಜೋಶಿ ಸವಾಲು

Rashtrotthana Hospital adopts Dozi technology to provide greater safety to patients
ಕರ್ನಾಟಕ2 hours ago

Rashtrotthana Parishat: ಡೋಝಿ ತಂತ್ರಜ್ಞಾನ ಅಳವಡಿಸಿಕೊಂಡ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rameshwaram Cafe Blast Fake IDs created and captured bombers hiding in Kolkata
ಕ್ರೈಂ12 hours ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ20 hours ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ1 day ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20241 day ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಹೂಡಿಕೆ ವ್ಯವಹಾರದಲ್ಲಿ ಅಧಿಕ ಲಾಭ

Ugadi 2024
ಬಾಗಲಕೋಟೆ3 days ago

Ugadi 2024 : ಬೀಳಗಿಯ ಎಕ್ಕೆ ಎಲೆ ಭವಿಷ್ಯ; ಈಶಾನ್ಯ, ಪಶ್ಚಿಮ ಭಾಗದಲ್ಲಿ ಭಾರಿ ಕಂಟಕ!

ugadi 2024
ಧಾರವಾಡ3 days ago

Ugadi 2024 : ಹನುಮನಕೊಪ್ಪದಲ್ಲಿ ಭವಿಷ್ಯ ನುಡಿದ ಬೊಂಬೆ! ಮುಂದಿನ ಪ್ರಧಾನಿ ಯಾರಾಗ್ತಾರೆ?

Dina Bhavishya
ಭವಿಷ್ಯ4 days ago

Dina Bhavishya : ನೂತನ ಸಂವತ್ಸರದಲ್ಲಿ ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ

Dina Bhavishya
ಭವಿಷ್ಯ5 days ago

Dina Bhavishya : ಅತಿರೇಕದ ಮಾತು ಈ ರಾಶಿಯವರಿಗೆ ಒಳ್ಳೆಯದಲ್ಲ

Rockstar Bull of bull festival king fame passes away
ಹಾವೇರಿ5 days ago

Rockstar Bull: ಹೋರಿ ಹಬ್ಬದ ಕಿಂಗ್ ಖ್ಯಾತಿಯ ರಾಕ್‌ ಸ್ಟಾರ್‌ ಬುಲ್‌ ಇನ್ನಿಲ್ಲ; ಬೊಮ್ಮಾಯಿ ಕಂಬನಿ

ಟ್ರೆಂಡಿಂಗ್‌