ಬೆಂಗಳೂರು: ಬಾಲಿವುಡ್ ನಟಿಯರ ಜತೆ (Orry Reveals Getting Paid) ಓರಿ ಎನ್ನುವ ಯುವಕ ಆಗಾಗ ಕಾಣಿಸಿಕೊಳ್ಳುತ್ತಾರೆ. ಪಾರ್ಟಿಗಳಂತೂ ಓರಿ ಇಲ್ಲದೆ ಅಪೂರ್ಣ ಎಂದೇ ಹೇಳಬೇಕು. ಜಾನ್ವಿ ಕಪೂರ್, ನೀಸಾ ದೇವಗನ್, ಸಾರಾ ಅಲಿ ಖಾನ್ ಮತ್ತು ಅನನ್ಯಾ ಪಾಂಡೆ (bollywood celebrities) ಅವರೊಂದಿಗೆ ಉತ್ತಮ ಸ್ನೇಹಿತರಾಗಿದ್ದಾರೆ ಈ ಓರಿ. ಇತ್ತೀಚೆಗೆ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ (anant ambani pre wedding) ರಿಹಾನ್ನಾ ಅವರೊಂದಿಗೆ ಕಾಣಿಸಿಕೊಂಡು ಓರಿ ಸಖತ್ ಸುದ್ದಿಯಾಗಿದ್ದರು. ಇದೋಗ ಓರಿಯನ್ನು ರಣವೀರ್ ಸಿಂಗ್ ಅನುಕರಣೆ ಮಾಡಿದ್ದಾರೆ.
ಪಾಪರಾಜಿಗಳು ಓರಿಯನ್ನು ಕಂಡಾಗ ಓರಿ ಅವರಿಗೆ ಪೋಸ್ ಕೊಡುವ ರೀತಿಯನ್ನು ನಟ ರಣವೀರ್ ಅನುಕರಣೆ ಮಾಡಿ ತೋರಿಸಿದ್ದಾರೆ. ರಣವೀರ್ ಥೇಟ್ ಓರಿಯಂತೆ ನಡೆದು ತೋರಿಸಿದ್ದಾರೆ. ಇದೀಗ ಈ ವಿಡಿಯೊವನ್ನು ಓರಿ ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜತೆಗೆ “ಹೇಗೆ ಓರಿ, ಹಂತ 1 ” ಎಂದು ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ. ಇದಕ್ಕೂ ಮುಂಚೆ ಅಂಬಾನಿ ಮದುವೆಯಲ್ಲಿ ದೀಪಿಕಾ ಪಡುಕೋಣೆ ಜತೆ ಓರಿ ಪೋಸ್ ಕೊಟ್ಟಿದ್ದರು.
ಓರಿಯನ್ನು ಬಾಲಿವುಡ್ ʻಬೆಸ್ಫ್ರೆಂಡ್ ಫಾರೆವರ್ʼ ಎಂದೇ ಹೇಳುತ್ತಾರೆ. ಓರಿ ತನ್ನ ಫ್ಯಾಷನ್ನಿಂದಾಗಿಯೂ ಸುದ್ದಿಯಾಗುತ್ತಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಚೇರ್ ಪರ್ಸನ್ ಆಫೀಸ್ನಲ್ಲಿ ಸ್ಪೆಷಲ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದಾರೆ.ಹಲವು ಸಮಾರಂಭಗಳಲ್ಲಿ ಹಾಜಾರಾಗಲು 15ರಿಂದ 30 ಲಕ್ಷದವರೆಗೆ ಸಂಭಾವನೆ ಪಡೆಯುತ್ತಾರೆ. ಓರಿ ಶಾರುಖ್ ಖಾನ್ ಮಗಳು ಸುಹಾನಾ ಖಾನ್ಗೂ ಬೆಸ್ಟ್ ಫ್ರೆಂಡ್. ಸುಹಾನಾ ಖಾನ್ ಜತೆ ಓರಿ ಹಲವಾರು ಸಲ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Ranveer Singh: ಒಂದೇ ಸಿನಿಮಾದಲ್ಲಿ ಬಾಲಿವುಡ್‌ನ ಐದು ಸ್ಟಾರ್ಸ್; ರಣವೀರ್ ಸಿಂಗ್ ಹೊಸ ಸಿನಿಮಾ ಅನೌನ್ಸ್!
ಓರಿ ಹೇಳಿಕೊಂಡಿರುವ ಪ್ರಕಾರ, ಶ್ರೀಮಂತ ಜನರೇ ಓರಿಯನ್ನು ಪಾರ್ಟಿ ಕರೆಯುತ್ತಾರೆ ಮತ್ತು ತಮ್ಮ ಹೆಂಡತಿ, ಮಕ್ಕಳೊಂದಿಗೆ ಫೋಟೋಗೆ ಪೋಸು ನೀಡುವಂತೆ ಕೇಳಿಕೊಳ್ಳುತ್ತಾರೆ. ಹೀಗೆ ನಾನು ಫೋಟೋ ತೆಗೆಸಿಕೊಳ್ಳಲು ಮತ್ತು ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಹಣ ಪಡೆದುಕೊಳ್ಳುತ್ತೇನೆ. ಈ ಫೋಟೋಗಳಿಗಾಗಿ ಒಂದು ರಾತ್ರಿಗೆ ಕನಿಷ್ಠ 20ರಿಂದ 30 ಲಕ್ಷ ರೂಪಾಯಿ ಗಳಿಸುತ್ತೇನೆ ಎಂದು ಹೇಳಿಕೊಂಡಿದ್ದರು.