ಬೆಂಗಳೂರು: ನಟಿ ಸಯ್ಯಾಮಿ ಖೇರ್ (Saiyami Kher ) ಸೆಪ್ಟೆಂಬರ್ 15ರಂದು ಜರ್ಮನಿಯಲ್ಲಿ ನಡೆಯಲಿರುವ ಐರನ್‌ಮ್ಯಾನ್ ಟ್ರಯಥ್ಲಾನ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ನಟಿ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. ನಟಿ ಈಜು, ಸೈಕ್ಲಿಂಗ್ ಮತ್ತು ಜಿಮ್‌ನಲ್ಲಿ ತರಬೇತಿ ಪಡೆಯುವ ವಿಡಿಯೊ ಇದರಲ್ಲಿದೆ.
ನಟಿ ಪೋಸ್ಟ್‌ನಲ್ಲಿ ʻʻಕೊರೊನಾ ಆದ ಬಳಿಕ ಸಮಯ ಹೇಗೆ ಸಾಗಿತು ಗೊತ್ತಾಗಿಲ್ಲ. ಶೂಟಿಂಗ್ ಸೆಟ್‌ನಲ್ಲಿ ಪ್ರತಿದಿನ ಆನಂದಿಸುತ್ತಿದ್ದೆ. ಜೀವನ ರೋಲರ್ ಕೋಸ್ಟರ್ ಆಗಿತ್ತು. ಕಳೆದ ವರ್ಷ ಬೈಕ್ ಅಪಘಾತ ಕೂಡ ಆಯ್ತು. ಎಂಟು ತಿಂಗಳ ಕಾಲ ವ್ಯಾಯಾಮ ಏನೂ ಇಲ್ಲದೆ ಹಾಗೇ ಇದ್ದೆ. ಇದಾದ ಬಳಿಕ , ಟ್ರಯಥ್ಲಾನ್ ಈವೆಂಟ್‌ಗೆ ತರಬೇತಿ ಪಡೆಯುವುದು ಅತ್ಯಂತ ಕಠಿಣವಾಗಿತ್ತು. ಟ್ರಯಥ್ಲಾನ್ ಈವೆಂಟ್‌ಗಾಗಿ ಎರಡು ತಿಂಗಳ ತರಬೇತಿಯನ್ನು ಪಡೆದ ನಂತ ಇಂದು ಐರನ್‌ಮ್ಯಾನ್ ಟ್ರಯಥ್ಲಾನ್‌ನಲ್ಲಿ ಭಾಗಿಯಾಗಲು ಸಿದ್ಧನಿದ್ದೇನೆʼʼ ಎಂದು ಬರೆದುಕೊಂಡಿದ್ದಾರೆ.
ಐರನ್‌ಮ್ಯಾನ್ ಟ್ರಯಥ್ಲಾನ್ ಬರ್ಲಿನ್‌ಗೆ ಸಮೀಪವಿರುವ ಪಟ್ಟಣವಾದ ಎರ್ಕ್ನರ್‌ನಲ್ಲಿ ನಡೆಯಲಿದೆ. ಭಾಗವಹಿಸುವವರು ಈಜು, ಸೈಕ್ಲಿಂಗ್ ಮತ್ತು ಓಟ ಸೇರಿದಂತೆ ಈವೆಂಟ್‌ಗಳಲ್ಲಿ ಸ್ಪರ್ಧಿಸುತ್ತಾರೆ. ಸಯ್ಯಾಮಿ ಖೇರ್ ಹೊರತುಪಡಿಸಿ, ಐರನ್‌ಮ್ಯಾನ್ ಟ್ರಯಥ್ಲಾನ್‌ನಲ್ಲಿ ಭಾಗವಹಿಸಿದ ಏಕೈಕ ಬಾಲಿವುಡ್ ಸೆಲೆಬ್ರಿಟಿ ಮಿಲಿಂದ್ ಸೋಮನ್.
ಇದನ್ನೂ ಓದಿ: Raghu Thatha: `ಪುಷ್ಪ 2′ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಸೆಡ್ಡು: ‘ರಘು ತಾತಾ’ ರಿಲೀಸ್ ಡೇಟ್ ಅನೌನ್ಸ್!
ಸಿನಿಮಾ ವಿಚಾರಕ್ಕೆ ಬಂದರೆ, ಸಯ್ಯಾಮಿ ʻಅಗ್ನಿʼ ಚಿತ್ರದಲ್ಲಿ ಪ್ರತೀಕ್ ಗಾಂಧಿ ಮತ್ತು ದಿವ್ಯೆಂದು ಶರ್ಮಾ ಅವರೊಂದಿಗೆ ನಟಿಸಲಿದ್ದಾರೆ. ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರ ಬೆಂಬಲದೊಂದಿಗೆ ರಾಹುಲ್ ಧೋಲಾಕಿಯಾ ನಿರ್ದೇಶನವಿದೆ.
ಮರಾಠಿಯ ಖ್ಯಾತ ನಟಿ ಉಷಾ ಕಿರಣ್ ಅವರ ಮೊಮ್ಮಗಳು ಮತ್ತು ಪ್ರಮುಖ ಬಾಲಿವುಡ್ ನಟಿ ತನ್ವಿ ಅಜ್ಮಿ ಅವರ ಸೊಸೆ. ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶಿಸಿದ ಮತ್ತು 2016 ರಲ್ಲಿ ಬಿಡುಗಡೆಯಾದ “ಮಿರ್ಜ್ಯಾ” ಚಿತ್ರದಲ್ಲಿನ ಅಭಿನಯಕ್ಕಾಗಿ ಸೈಯಾಮಿ ಖೇರ್ ಮನ್ನಣೆ ಗಳಿಸಿದರು.