Site icon Vistara News

Salman Khan: ಸಲ್ಮಾನ್‌ ಶೂಟೌಟ್‌ ಪ್ರಕರಣ: ಗುಂಡು ಹಾರಿಸಿದ ಇಬ್ಬರು ಯಾರು? ಯಾವ ಗ್ಯಾಂಗ್‌?

Salman Khan Mumbai Home By Lawrence Bishnoi Gang

ಬೆಂಗಳೂರು: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ಅವರ ಮುಂಬೈನ ಬಾಂದ್ರಾದಲ್ಲಿರುವ ನಿವಾಸದೆದುರು ಏಪ್ರಿಲ್‌ 14ರಂದು ಗುಂಡಿನ ದಾಳಿ ನಡೆದಿತ್ತು. ಬೈಕ್‌ನಲ್ಲಿ ಬಂದು ಗುಂಡು ಹಾರಿಸಿದ ಇಬ್ಬರು ಶೂಟರ್‌ಗಳ ಫೋಟೊವನ್ನು ಪೊಲೀಸರು ಬಿಡುಗಡೆ ಕೂಡ ಮಾಡಿದ್ದರು. ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ (Anmol Bishnoi)​ ದಾಳಿಯ ಹೊಣೆ ಹೊತ್ತುಕೊಂಡಿದ್ದ. ಇದೀಗ ತನಿಖೆ ನಡೆಸಿದ ಪೊಲೀಸರಿಗೆ ಮಹತ್ವದ ಮಾಹಿತಿ ಲಭಿಸಿದೆ. ಗುಂಡು ಹಾರಿಸುತ್ತಿರುವ ಇಬ್ಬರು ವ್ಯಕ್ತಿಗಳು ಹರಿಯಾಣದ ಗುರುಗ್ರಾಮ್‌ನವರು ಮತ್ತು ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್‌ಗೆ ಸೇರಿದವರು ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಒಬ್ಬ ವಿಶಾಲ್ ಎಂದು ಗುರುತಿಸಲಾಗಿದ್ದು, ಕುಖ್ಯಾತ ಬಿಷ್ಣೋಯ್ ಗ್ಯಾಂಗ್ ಸದಸ್ಯ ರೋಹಿತ್ ಗೋದಾರಾ (Rohit Godara) ಅವರೊಂದಿಗೆ ಸಂಬಂಧ ಹೊಂದಿದ್ದ ವರದಿಯಾಗಿದೆ. ರೋಹಿತ್ ಗೋದಾರಾ ಹಿಂಸಾತ್ಮಕ ಅಪರಾಧಗಳ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದ.

ಪೊಲೀಸ್ ಮೂಲಗಳ ಪ್ರಕಾರ, ಗುರುಗ್ರಾಮ್ ಮೂಲದ ಉದ್ಯಮಿ ಸಚಿನ್ ಮುಂಜಾಲ್ ( Sachin Munjal) ಅವರ ಮಾರ್ಚ್ ಹತ್ಯೆಗೆ ಸಂಬಂಧಿಸಿದಂತೆ ವಿಶಾಲ್ ಬೇಕಾಗಿದ್ದ. ಸದ್ಯ ವಿದೇಶದಲ್ಲಿ ನೆಲೆಸಿರುವ ರೋಹಿತ್ ಗೋದಾರಾ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಮುಂಜಾಲ್ ಹತ್ಯೆಯನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Salman Khan: ಸಲ್ಮಾನ್‌ ಖಾನ್‌ ಮನೆ ಹೊರಗೆ ಗುಂಡಿನ ದಾಳಿ; ಶಂಕಿತರ ಫೋಟೊ ಬಿಡುಗಡೆ ಮಾಡಿದ ಪೊಲೀಸರು

ಶಂಕಿತರ ಫೋಟೊ ಬಿಡುಗಡೆ ಮಾಡಿದ್ದ ಪೊಲೀಸರು

ತನಿಖೆ ನಡೆಸಿದ ಪೊಲೀಸರಿಗೆ ಏ.14ರಂದೇ ಮಹತ್ವದ ಮಾಹಿತಿ ಲಭಿಸಿತ್ತು. ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದಲ್ಲಿ ಇಬ್ಬರೂ ಕ್ಯಾಪ್‌ ಧರಿಸಿರುವುದು ಕಂಡು ಬಂದಿತರ್ತು. ಆ ಪೈಕಿ ಓರ್ವ ಬಿಳಿ ಟೀ ಶರ್ಟ್‌, ಕಪ್ಪು ಜಾಕೆಟ್‌ ಮತ್ತು ಜೀನ್ಸ್‌ ಧರಿಸಿದ್ದರೆ, ಇನ್ನೋರ್ವ ಕೆಂಪು ಟೀ ಶರ್ಟ್‌ ಮತ್ತು ಜೀನ್ಸ್‌ ಧರಿಸಿದ್ದ. ಬೈಕ್‌ನಲ್ಲಿ ಬಂದ ಇವರು ಸಲ್ಮಾನ್‌ ಮನೆ ಎದುರು ಶೂಟ್‌ ಮಾಡುತ್ತಿರುವುದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಇದನ್ನೂ ಓದಿ: Salman Khan : ಸಲ್ಮಾನ್ ಮನೆ ಬಳಿಯ ಗುಂಡಿನ ದಾಳಿಯ ಪ್ರಕರಣ ತನಿಖೆ ಎನ್​ಕೌಂಟರ್​ ದಯಾನಾಯಕ್ ಹೆಗಲಿಗೆ?

ನಟನ ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ಈ ದ್ವಿಚಕ್ರ ವಾಹನವನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದರು. ಇವರಿಗಾಗಿ ಶೋಧವನ್ನು ತೀವ್ರಗೊಳಿಸಲಾಗಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 307 (ಕೊಲೆ ಯತ್ನ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಬಾಂದ್ರಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು.

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಲ್ಮಾನ್‌ ಖಾನ್‌ ಅವರೊಂದಿಗೆ ಮಾತನಾಡಿ ರಕ್ಷಣೆಯ ಭರವಸೆ ನೀಡಿದ್ದರು. ಕಾನೂನನ್ನು ಕೈಗೆ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ: Salman Khan: ಸಲ್ಮಾನ್‌ ಖಾನ್‌ ಮನೆ ಹೊರಗೆ ಗುಂಡಿನ ದಾಳಿ; ಶಂಕಿತರ ಫೋಟೊ ಬಿಡುಗಡೆ ಮಾಡಿದ ಪೊಲೀಸರು

ಚಿಂತಿಸುವ ಅಗತ್ಯವಿಲ್ಲ ಅವರಿಗೆ ಪಬ್ಲಿಸಿಟಿ ಬೇಕು ಎಂದ ಸಲ್ಲು ತಂದೆ!

ಸಲ್ಮಾನ್ ಖಾನ್ ಅವರ ತಂದೆ ಈ ಘಟನೆ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ʻಚಿಂತಿಸುವ ಅಗತ್ಯವಿಲ್ಲ, ಹೇಳುವುದಕ್ಕೆ ಏನಿಲ್ಲ. ಅವರಿಗೆ ಪಬ್ಲಿಸಿಟಿ ಬೇಕುʼಎಂದು ಕೂಲ್‌ ಆಗಿಯೇ ಅಭಿಮಾನಿಗಳಿಗೆ ಧೈರ್ಯ ನೀಡಿದ್ದಾರೆ ಎಂದು ವರದಿಯಾಗಿದೆ. ಇದರಿಂದ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. ಆದರೂ ಭಯ ಸಂಪೂರ್ಣವಾಗಿ ಕಡಿಮೆ ಆಗಿಲ್ಲ. ಮುಂದೇನಾಗುತ್ತದೆ ಎನ್ನುವ ಚಿಂತೆ ಅಭಿಮಾನಿಗಳನ್ನು ಬಹುವಾಗಿ ಕಾಡುತ್ತಿದೆ.

Exit mobile version