Site icon Vistara News

Bigg Boss OTT 2: ಕೋಪದಿಂದ ಬಿಗ್​ ಬಾಸ್ ಮನೆಯಿಂದ ಹೊರ ಬಂದ್ರಾ ಸಲ್ಮಾನ್‌ ಖಾನ್‌? ಹೋಸ್ಟ್‌ ಮಾಡೋರು ಯಾರು?​

Salman Khan

ಬೆಂಗಳೂರು: ಸಲ್ಮಾನ್‌ ಖಾನ್‌ ಟಿವಿಯಲ್ಲಿ ಬಿಗ್​ ಬಾಸ್​ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದ ಅವರು ಈ ವರ್ಷದಿಂದ ಬಿಗ್​ ಬಾಸ್​ ಒಟಿಟಿ (Bigg Boss OTT 2) ಆವೃತ್ತಿಗೂ ನಿರೂಪಕನಾಗಿದ್ದಾರೆ. ಆದರೆ ಅವರು ಶೋನಿಂದ ಅರ್ಧಕ್ಕೆ ಹೊರನಡೆದಿದ್ದಾರೆ ಎಂಬ ವದಂತಿ ಹರಡಿತ್ತು. ಅದರಿಂದ ಸಲ್ಲು ಅಭಿಮಾನಿಗಳಲ್ಲಿ ಬೇಸರ ಮೂಡಿತ್ತು. ಇದೀಗ ಸಲ್ಮಾನ್‌ ಖಾನ್‌ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಲ್ಮಾನ್​ ಖಾನ್​ ಅವರು ಮತ್ತೆ ಬಿಗ್​ ಬಾಸ್ (Bigg Boss)​ ಒಟಿಟಿ ಶೋಗೆ ವಾಪಸ್​ ಬಂದಿದ್ದಾರೆ ಎಂಬುದು ಪಕ್ಕಾ ಆಗಿದೆ.

ಈ ವದಂತಿಗಳಿಗೆ ಸಲ್ಮಾನ್‌ ಮಾತನಾಡಿ ʻʻನನ್ನ ಅಭಿಮಾನಿಗಳೇ ನನ್ನ ದೊಡ್ಡ ಸಾಧನೆ ಮತ್ತು ಹೆಮ್ಮೆ! ಅವರಿಂದಲೇ ನಾನು ಇಲ್ಲಿದ್ದೇನೆ. ನಾನು ಶೋನಲ್ಲಿ ನನ್ನ ತಾಳ್ಮೆಯನ್ನು ಕಳೆದುಕೊಂಡು ಕೆಲವೊಮ್ಮೆ ಹೊರಗೆ ಹೋಗಬಹುದು. ಆದರೆ ವೀಕೆಂಡ್​ ಎಪಿಸೋಡ್​ನಲ್ಲಿ ನನ್ನನ್ನು ನೋಡಲು ತಾಳ್ಮೆಯಿಂದ ಕಾಯುವ ಅಭಿಮಾನಿಗಳಿಗಾಗಿ ನಾನು ವಾಪಸ್​ ಬರುತ್ತೇನೆ’ ಎಂದು ಸಲ್ಮಾನ್​ ಖಾನ್​ ಹೇಳಿದ್ದಾರೆ.

ಸಲ್ಮಾನ್ ಖಾನ್ ಶೋದಿಂದ ಹೊರ ಬಂದಿದ್ರಾ?

ಈ ತಿಂಗಳ ಆರಂಭದಲ್ಲಿ ಸಲ್ಮಾನ್ ಖಾನ್‌ ಕೈಯಲ್ಲಿ ಸಿಗರೇಟ್ ಹಿಡಿದು ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಬಿಗ್ ಬಾಸ್ ಮನೆಯಲ್ಲಿ ಅಗೌರವ, ಹಿಂಸಾಚಾರ ಮತ್ತು ನಿಂದನೆಯನ್ನು ಸಹಿಸುವುದಿಲ್ಲ ಎಂದು ಹೇಳಿದ್ದರೂ ಸಹ ಅವರು ರಿಯಾಲಿಟಿ ಶೋ OTT ಆವೃತ್ತಿಯಲ್ಲಿ ಅವರ ಬಾಯಿಯಿಂದ ಕೆಲವು ಆಕ್ಷೇಪಾರ್ಹ ಪದಗಳು ಬಂದಿದ್ದವು. ನಂತರ ಅವರು ನಿರೂಪಣೆಯಿಂದ ಹೊರನಡೆದಿದ್ದಾರೆ ಎಂದು ಸುದ್ದಿ ಹಬ್ಬಿತು. ಸಲ್ಮಾನ್ ಬಿಗ್ ಬಾಸ್ OTT 2 ಹೋಸ್ಟ್ ಮಾಡುತ್ತಿರುವುದು ಇದೇ ಮೊದಲು. ಈ ಹಿಂದೆ ಕರಣ್ ಜೋಹರ್ ಅವರು ಬಿಗ್ ಬಾಸ್ OTT ಆವೃತ್ತಿಯನ್ನು ಹೋಸ್ಟ್ ಮಾಡಿದ್ದರು.

ಇದನ್ನೂ ಓದಿ: Bigg Boss OTT 2: ಬಿಗ್‌ಬಾಸ್‌ ಸ್ಕ್ರಿಪ್ಟೆಡ್‌? ಪೂಜಾ ಭಟ್‌ ಸ್ಕ್ರಿಪ್ಟ್‌ ಓದುತ್ತಿರುವ ದೃಶ್ಯ ವೈರಲ್‌!

ಪೂಜಾ ಭಟ್, ಬೇಬಿಕಾ ಧುರ್ವೆ, ಅಭಿಷೇಕ್ ಮಲ್ಹಾನ್, ಅವಿನಾಶ್ ಸಚ್‌ದೇವ್, ಜಿಯಾ ಶಂಕರ್, ಮನೀಶಾ ರಾಣಿ, ಜಡ್ ಹದಿದ್, ಎಲ್ವಿಶ್ ಯಾದವ್ ಮತ್ತು ಆಶಿಕಾ ಭಾಟಿಯಾ ಕಾರ್ಯಕ್ರಮದ ಸ್ಪರ್ಧಿಗಳಾಗಿದ್ದಾರೆ. ಈ ವಾರ, ಮನಿಶಾ ಮತ್ತು ಆಶಿಕಾ ನಾಮಿನೇಟ್‌ ಆಗಿದ್ದಾರೆ. ಇಬ್ಬರಲ್ಲಿ ಯಾರು ಹೊರ ಹೊಗಲಿದ್ದಾರೆ ಎಂಬುದು ಕಾದು ನೋಡಬೇಕಿದೆ.

Exit mobile version