Site icon Vistara News

Salman Khan: ಗುಂಡಿನ ದಾಳಿಗೆ ʻಐ ಡೋಂಟ್‌ ಕೇರ್‌ʼ ಎಂದ ಸಲ್ಮಾನ್‌ ಖಾನ್‌!

Salman Khan to continue work after firing incident

ಬೆಂಗಳೂರು: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ಅವರ ಮುಂಬೈನ ಬಾಂದ್ರಾದಲ್ಲಿರುವ ನಿವಾಸದೆದುರು ಏಪ್ರಿಲ್‌ 14ರಂದು ಗುಂಡಿನ ದಾಳಿ ನಡೆದಿತ್ತು. ಈ ಬಗ್ಗೆ ತನಿಖೆ ಕೂಡ ಆರಂಭ ಆಗಿದೆ. ಈ ಪ್ರಕರಣ ಆದ ಬಳಿಕ ಸಲ್ಲು ಅಭಿಮಾನಿಗಳಿಗೆ ನಟನ ಬಗ್ಗೆ ಆತಂಕ ಶುರುವಾಗಿತ್ತು. ಜತೆಗೆ ಸಲ್ಮಾನ್‌ ಅವರು ಮತ್ತೆ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೋ ಇಲ್ಲವೋ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದರು. ಇದೀಗ ವರದಿಯ ಪ್ರಕಾರ ಸಲ್ಮಾನ್‌ ಖಾನ್‌ ತಮ್ಮ ಮುಂಬರುವ ಸಿನಿಮಾಗಳ ಕೆಲಸವನ್ನು ಮುಂದುವರಿಸಲಿದ್ದಾರೆ ಎಂದು ವರದಿಯಾಗಿದೆ. ಯಾವುದೇ ಯೋಜನೆಗಳನ್ನು ರದ್ದುಗೊಳಿಸದಂತೆ ಅವರು ತಮ್ಮ ತಂಡಕ್ಕೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಸಲ್ಮಾನ್ ಸದ್ಯ ಯಾವುದೇ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿಲ್ಲ. ಆದರೆ ಅವರ ಕೈಯಲ್ಲಿ ಜಾಹೀರಾತುಗಳಿವೆ. ಮಾಧ್ಯಮವೊಂದು ಈ ಬಗ್ಗೆ ವರದಿ ಮಾಡಿದ್ದು ʻʻಸಲ್ಮಾನ್ ಅವರು ಮೊದಲೇ ಯೋಜಿಸಿದಂತೆ ತಮ್ಮ ಕೆಲಸಕ್ಕೆ ಹೆಚ್ಚು ಗಮನ ಹರಿಸಿದ್ದಾರೆ. ಈ ಗುಂಡಿನ ಘಟನೆಯ ಬಗ್ಗೆ, ಅದರ ಹಿಂದೆ ಇರುವ ಆರೋಪಿಗಳಿಗೆ ಅವರು ಹೆಚ್ಚಾಗಿ ಗಮನ ಕೊಡುತ್ತಿಲ್ಲ. ಚಿತ್ರರಂಗದ ಸ್ನೇಹಿತರಿಗೆ ಅಭಿಮಾನಿಗಳಿಗೆ ನಟ ಚಿಂತಿಸಬೇಡಿ ಎಂದು ಕೇಳಿಕೊಂಡಿದ್ದಾರೆ. ಎಲ್ಲರ ಹಿತದೃಷ್ಟಿಯಿಂದ ಮನೆಗೆ ಬರುವವರಿಗೆ ಕೂಡ ಭೇಟಿ ನೀಡದಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಗುಂಡಿನ ದಾಳಿಯ ಬಳಿಕ ಅರ್ಬಾಜ್ ಖಾನ್, ಶುರಾ ಖಾನ್, ಮಾಜಿ ಸಚಿವ ಬಾಬಾ ಸಿದ್ದಿಕ್, ಸಹೋದರಿ ಅರ್ಪಿತಾ ಖಾನ್, ಆಯುಷ್ ಶರ್ಮಾ, ಸೋದರಳಿಯ ಅರ್ಹಾನ್ ಮತ್ತು ಇತರರು ಸಲ್ಮಾನ್‌ ಮನೆಗೆ ಭೇಟಿ ನೀಡಿದ್ದರು.

ಇದನ್ನೂ ಓದಿ: Salman Khan: ಸಲ್ಮಾನ್‌ ಶೂಟೌಟ್‌ ಪ್ರಕರಣ: ಗುಂಡು ಹಾರಿಸಿದ ಇಬ್ಬರು ಯಾರು? ಯಾವ ಗ್ಯಾಂಗ್‌?

ಗುಂಡು ಹಾರಿಸಿದ ಇಬ್ಬರು ಯಾರು? ಯಾವ ಗ್ಯಾಂಗ್‌?

ಗುಂಡು ಹಾರಿಸುತ್ತಿರುವ ಇಬ್ಬರು ವ್ಯಕ್ತಿಗಳು ಹರಿಯಾಣದ ಗುರುಗ್ರಾಮ್‌ನವರು ಮತ್ತು ಸುಲಿಗೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್‌ಗೆ ಸೇರಿದವರು ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಒಬ್ಬ ವಿಶಾಲ್ ಎಂದು ಗುರುತಿಸಲಾಗಿದ್ದು, ಈತ ಕುಖ್ಯಾತ ಬಿಷ್ಣೋಯ್ ಗ್ಯಾಂಗ್ ಸದಸ್ಯ ರೋಹಿತ್ ಗೋದಾರಾ (Rohit Godara) ಜತೆ ಸಂಬಂಧ ಹೊಂದಿದ್ದು ವರದಿಯಾಗಿದೆ. ರೋಹಿತ್ ಗೋದಾರಾ ಹಿಂಸಾತ್ಮಕ ಅಪರಾಧಗಳ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದ.

ಪೊಲೀಸ್ ಮೂಲಗಳ ಪ್ರಕಾರ, ಗುರುಗ್ರಾಮ ಮೂಲದ ಉದ್ಯಮಿ ಸಚಿನ್ ಮುಂಜಾಲ್ ( Sachin Munjal) ಅವರ ಹತ್ಯೆಗೆ ಸಂಬಂಧಿಸಿದಂತೆ ವಿಶಾಲ್ ಬೇಕಾಗಿದ್ದ. ಸದ್ಯ ವಿದೇಶದಲ್ಲಿ ನೆಲೆಸಿರುವ ರೋಹಿತ್ ಗೋದಾರಾ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಮುಂಜಾಲ್ ಹತ್ಯೆಯನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

Exit mobile version