Salman Khan: ಗುಂಡಿನ ದಾಳಿಗೆ ʻಐ ಡೋಂಟ್‌ ಕೇರ್‌ʼ ಎಂದ ಸಲ್ಮಾನ್‌ ಖಾನ್‌! - Vistara News

ಬಾಲಿವುಡ್

Salman Khan: ಗುಂಡಿನ ದಾಳಿಗೆ ʻಐ ಡೋಂಟ್‌ ಕೇರ್‌ʼ ಎಂದ ಸಲ್ಮಾನ್‌ ಖಾನ್‌!

Salman Khan: ತನಿಖೆ ನಡೆಸಿದ ಪೊಲೀಸರಿಗೆ ಏ.14ರಂದೇ ಮಹತ್ವದ ಮಾಹಿತಿ ಲಭಿಸಿತ್ತು. ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದಲ್ಲಿ ಇಬ್ಬರು ದುಷ್ಕರ್ಮಿಗಳು ಕ್ಯಾಪ್‌ ಧರಿಸಿರುವುದು ಕಂಡು ಬಂದಿತ್ತು. ಆ ಪೈಕಿ ಒಬ್ಬ ಬಿಳಿ ಟೀ ಶರ್ಟ್‌, ಕಪ್ಪು ಜಾಕೆಟ್‌ ಮತ್ತು ಜೀನ್ಸ್‌ ಧರಿಸಿದ್ದರೆ, ಇನ್ನೊಬ್ಬ ಕೆಂಪು ಟೀ ಶರ್ಟ್‌ ಮತ್ತು ಜೀನ್ಸ್‌ ಧರಿಸಿದ್ದ. ಬೈಕ್‌ನಲ್ಲಿ ಬಂದ ಇವರು ಸಲ್ಮಾನ್‌ ಮನೆ ಎದುರು ಶೂಟ್‌ ಮಾಡುತ್ತಿರುವುದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

VISTARANEWS.COM


on

Salman Khan to continue work after firing incident
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ಅವರ ಮುಂಬೈನ ಬಾಂದ್ರಾದಲ್ಲಿರುವ ನಿವಾಸದೆದುರು ಏಪ್ರಿಲ್‌ 14ರಂದು ಗುಂಡಿನ ದಾಳಿ ನಡೆದಿತ್ತು. ಈ ಬಗ್ಗೆ ತನಿಖೆ ಕೂಡ ಆರಂಭ ಆಗಿದೆ. ಈ ಪ್ರಕರಣ ಆದ ಬಳಿಕ ಸಲ್ಲು ಅಭಿಮಾನಿಗಳಿಗೆ ನಟನ ಬಗ್ಗೆ ಆತಂಕ ಶುರುವಾಗಿತ್ತು. ಜತೆಗೆ ಸಲ್ಮಾನ್‌ ಅವರು ಮತ್ತೆ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೋ ಇಲ್ಲವೋ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದರು. ಇದೀಗ ವರದಿಯ ಪ್ರಕಾರ ಸಲ್ಮಾನ್‌ ಖಾನ್‌ ತಮ್ಮ ಮುಂಬರುವ ಸಿನಿಮಾಗಳ ಕೆಲಸವನ್ನು ಮುಂದುವರಿಸಲಿದ್ದಾರೆ ಎಂದು ವರದಿಯಾಗಿದೆ. ಯಾವುದೇ ಯೋಜನೆಗಳನ್ನು ರದ್ದುಗೊಳಿಸದಂತೆ ಅವರು ತಮ್ಮ ತಂಡಕ್ಕೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಸಲ್ಮಾನ್ ಸದ್ಯ ಯಾವುದೇ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿಲ್ಲ. ಆದರೆ ಅವರ ಕೈಯಲ್ಲಿ ಜಾಹೀರಾತುಗಳಿವೆ. ಮಾಧ್ಯಮವೊಂದು ಈ ಬಗ್ಗೆ ವರದಿ ಮಾಡಿದ್ದು ʻʻಸಲ್ಮಾನ್ ಅವರು ಮೊದಲೇ ಯೋಜಿಸಿದಂತೆ ತಮ್ಮ ಕೆಲಸಕ್ಕೆ ಹೆಚ್ಚು ಗಮನ ಹರಿಸಿದ್ದಾರೆ. ಈ ಗುಂಡಿನ ಘಟನೆಯ ಬಗ್ಗೆ, ಅದರ ಹಿಂದೆ ಇರುವ ಆರೋಪಿಗಳಿಗೆ ಅವರು ಹೆಚ್ಚಾಗಿ ಗಮನ ಕೊಡುತ್ತಿಲ್ಲ. ಚಿತ್ರರಂಗದ ಸ್ನೇಹಿತರಿಗೆ ಅಭಿಮಾನಿಗಳಿಗೆ ನಟ ಚಿಂತಿಸಬೇಡಿ ಎಂದು ಕೇಳಿಕೊಂಡಿದ್ದಾರೆ. ಎಲ್ಲರ ಹಿತದೃಷ್ಟಿಯಿಂದ ಮನೆಗೆ ಬರುವವರಿಗೆ ಕೂಡ ಭೇಟಿ ನೀಡದಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಗುಂಡಿನ ದಾಳಿಯ ಬಳಿಕ ಅರ್ಬಾಜ್ ಖಾನ್, ಶುರಾ ಖಾನ್, ಮಾಜಿ ಸಚಿವ ಬಾಬಾ ಸಿದ್ದಿಕ್, ಸಹೋದರಿ ಅರ್ಪಿತಾ ಖಾನ್, ಆಯುಷ್ ಶರ್ಮಾ, ಸೋದರಳಿಯ ಅರ್ಹಾನ್ ಮತ್ತು ಇತರರು ಸಲ್ಮಾನ್‌ ಮನೆಗೆ ಭೇಟಿ ನೀಡಿದ್ದರು.

ಇದನ್ನೂ ಓದಿ: Salman Khan: ಸಲ್ಮಾನ್‌ ಶೂಟೌಟ್‌ ಪ್ರಕರಣ: ಗುಂಡು ಹಾರಿಸಿದ ಇಬ್ಬರು ಯಾರು? ಯಾವ ಗ್ಯಾಂಗ್‌?

ಗುಂಡು ಹಾರಿಸಿದ ಇಬ್ಬರು ಯಾರು? ಯಾವ ಗ್ಯಾಂಗ್‌?

ಗುಂಡು ಹಾರಿಸುತ್ತಿರುವ ಇಬ್ಬರು ವ್ಯಕ್ತಿಗಳು ಹರಿಯಾಣದ ಗುರುಗ್ರಾಮ್‌ನವರು ಮತ್ತು ಸುಲಿಗೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್‌ಗೆ ಸೇರಿದವರು ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಒಬ್ಬ ವಿಶಾಲ್ ಎಂದು ಗುರುತಿಸಲಾಗಿದ್ದು, ಈತ ಕುಖ್ಯಾತ ಬಿಷ್ಣೋಯ್ ಗ್ಯಾಂಗ್ ಸದಸ್ಯ ರೋಹಿತ್ ಗೋದಾರಾ (Rohit Godara) ಜತೆ ಸಂಬಂಧ ಹೊಂದಿದ್ದು ವರದಿಯಾಗಿದೆ. ರೋಹಿತ್ ಗೋದಾರಾ ಹಿಂಸಾತ್ಮಕ ಅಪರಾಧಗಳ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದ.

ಪೊಲೀಸ್ ಮೂಲಗಳ ಪ್ರಕಾರ, ಗುರುಗ್ರಾಮ ಮೂಲದ ಉದ್ಯಮಿ ಸಚಿನ್ ಮುಂಜಾಲ್ ( Sachin Munjal) ಅವರ ಹತ್ಯೆಗೆ ಸಂಬಂಧಿಸಿದಂತೆ ವಿಶಾಲ್ ಬೇಕಾಗಿದ್ದ. ಸದ್ಯ ವಿದೇಶದಲ್ಲಿ ನೆಲೆಸಿರುವ ರೋಹಿತ್ ಗೋದಾರಾ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಮುಂಜಾಲ್ ಹತ್ಯೆಯನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Janhvi Kapoor: ಉರ್ಫಿ ಸ್ಟೈಲ್ ಕಾಪಿ ಮಾಡಿದ್ರಾ ಜಾಹ್ನವಿ ಕಪೂರ್‌? ಟ್ರೋಲ್‌ ಆದ್ರು ನಟಿ!

Janhvi Kapoor: ಮುಂಬೈನಲ್ಲಿ ನಡೆದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕಾಗಿ, ಜಾಹ್ನವಿ ಕಪೂರ್‌ ಬಿಳಿ ಬಾಡಿಕಾನ್ ಗೌನ್ ಧರಿಸಿದ್ದರು ಅದರ ಮೇಲೆ ಕಪ್ಪು ಕಾರ್ಸೆಟ್ ಧರಿಸಿದ್ದರು. ಇದೀಗ ಈ ಸ್ಟೈಲ್‌ ಕಂಡು ಉರ್ಫಿ ಜಾವೇದ್ ಅವರನ್ನು ಕಾಪಿ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್‌ ಮಾಡಲು ಶುರು ಮಾಡಿದ್ದಾರೆ.

VISTARANEWS.COM


on

Janhvi Kapoor Trying To Copy Uorfi Javed TROLLED
Koo

ಬೆಂಗಳೂರು: ಜಾಹ್ನವಿ ಕಪೂರ್‌ (Janhvi Kapoor) ಅವರು ಅಂಬಾನಿ ಮದುವೆಯಲ್ಲಿ ಸಖತ್‌ ಮಿಂಚಿ, ಮತ್ತೆ ಸಿನಿಮಾ ಕೆಲಸಗಳಿಗೆ ವಾಪಸ್‌ ಆಗಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿ ಭಾಗವಹಿಸಿದ್ದ ನಟಿ, ಜುಲೈ 15 ಸೋಮವಾರದಂದು ತಮ್ಮ ಮುಂಬರುವ ಚಿತ್ರ ʻಉಲಾಜ್‌ʼನ ಟ್ರೈಲರ್‌ ಬಿಡುಗಡೆಗೆ ಆಗಮಿಸಿದರು. ಈ ವೇಳೆ ಹೈಲೈಟ್‌ ಆಗಿದ್ದು ನಟಿಯ ಡ್ರೆಸ್‌. ಇದೀಗ ಈ ಡ್ರೆಸ್‌ ಕಂಡು ಉರ್ಫಿ ಜಾವೇದ್‌ ಸ್ಟೈಲ್‌ ಕಾಪಿ ಮಾಡಿದ್ದಾರೆ ಎಂದು ಕಮೆಂಟ್‌ ಮಾಡುತ್ತಿದ್ದಾರೆ ನೆಟ್ಟಿಗರು.

ಮುಂಬೈನಲ್ಲಿ ನಡೆದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕಾಗಿ, ಜಾಹ್ನವಿ ಕಪೂರ್‌ ಬಿಳಿ ಬಾಡಿಕಾನ್ ಗೌನ್ ಧರಿಸಿದ್ದರು ಅದರ ಮೇಲೆ ಕಪ್ಪು ಕಾರ್ಸೆಟ್ ಧರಿಸಿದ್ದರು. ಇದೀಗ ಈ ಸ್ಟೈಲ್‌ ಕಂಡು ಉರ್ಫಿ ಜಾವೇದ್ ಅವರನ್ನು ಕಾಪಿ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್‌ ಮಾಡಲು ಶುರು ಮಾಡಿದ್ದಾರೆ.

ʻʻಉರ್ಫಿಯನ್ನು ಏಕೆ ಪ್ರಚಾರ ಮಾಡುತ್ತಿದ್ದಾರೆʼʼಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಉಲಾಜ್‌ನಲ್ಲಿ ಗುಲ್ಶನ್ ದೇವಯ್ಯ, ರೋಷನ್ ಮ್ಯಾಥ್ಯೂ, ರಾಜೇಶ್ ತೈಲಂಗ್ ಮತ್ತು ಆದಿಲ್ ಹುಸೇನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಆಗಸ್ಟ್ 2 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಉಲಾಜ್ ಜೊತೆಗೆ, ಜಾನ್ವಿ ಅವರ ದೇವರಾ ಸಿನಿಮಾ ಭಾಗವಾಗಿದ್ದಾರೆ. ಉಲಾಜ್ ಚಿತ್ರದಲ್ಲಿ ನಟಿ ಜಾನ್ವಿ ಕಪೂರ್ ಅವರು ರಾಜತಾಂತ್ರಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಟೀಸರ್ ನಲ್ಲಿ ಜಾನ್ವಿ ಕಪೂರ್ ಅವರು ದೇಶಭಕ್ತರ ಕುಟುಂಬದಿಂದ ಬಂದ ಯುವ ರಾಜತಾಂತ್ರಿಕ ಸುಹಾನಾ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Janhvi Kapoor: ಅಂಬಾನಿ ಕುಟುಂಬದಿಂದ ʻಶಿವ ಶಕ್ತಿʼ ಪೂಜೆ; ಕಂಗೊಳಿಸಿದ ಜಾಹ್ನವಿ ಕಪೂರ್!

ʻದೇವರ’ ನಂತರ ಮತ್ತೊಂದು ತೆಲುಗು ಚಿತ್ರದಲ್ಲಿ ನಟಿ ಜಾನ್ವಿ ಕಪೂರ್ ನಟಿಸಲು ಸಿದ್ಧರಾಗಿದ್ದಾರೆ. ಬುಚ್ಚಿ ಬಾಬು ಸನಾ ನಿರ್ದೇಶಿಸುತ್ತಿರುವ 16ನೇ ಚಿತ್ರದಲ್ಲಿ ರಾಮ್ ಚರಣ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. ಜಾನ್ವಿ ಕಪೂರ್ ಕೊನೆಯದಾಗಿ ವರುಣ್ ಧವನ್ ಜತೆ ‘ಬವಾಲ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಆರ್‌ಸಿ 16’ ಮತ್ತು ‘ದೇವರ’ ಜತೆಗೆ , ಸುಧಾಂಶು ಸರಿಯಾ ಅವರ ‘ಉಲಾಜ್’ ಮತ್ತು ವರುಣ್ ಧವನ್ ಎದುರು ‘ಸನ್ನಿ ಸಂಸ್ಕರಿ ಕಿ ತುಳಸಿ ಕುಮಾರಿ’ ಸಿನಿಮಾಗಳನ್ನು ಹೊಂದಿದ್ದಾರೆ.

Continue Reading

ಬಾಲಿವುಡ್

Katrina Kaif: ಕತ್ರಿನಾ ಕೈಫ್ ಪ್ರೆಗ್ನೆನ್ಸಿ ವದಂತಿಗಳ ಬಗ್ಗೆ ಮೌನ ಮುರಿದ ವಿಕ್ಕಿ ಕೌಶಲ್!

Katrina Kaif: ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif) ಲಂಡನ್‌ನಲ್ಲಿ ವಕೇಶನ್‌ ಮೂಡ್‌ನಲ್ಲಿದ್ದರು. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಲಂಡನ್‌ನಲ್ಲಿ ಓಡಾಡುತ್ತಿರುವ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ವಿಶೇಷ ಅಂದರೆ ಕತ್ರಿನಾ ಪ್ರಗ್ನೆಂಟ್‌ ಅಂತೆ ಕಂಡಿದ್ದರು. ಕತ್ರಿನಾ ಕೈಫ್ ಅವರು ಕಪ್ಪು ಬಣ್ಣದ ಬ್ಲೇಜರ್ ಹಾಕಿದ್ದರು. ಅವರ ಹೊಟ್ಟೆ ಉಬ್ಬಿದಂತೆ ಕಾಣಿಸಿತ್ತು. ಅವರ ಅಭಿಮಾನಿಗಳಿಗೆ! ಇದರಿಂದ ಅನೇಕರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು

VISTARANEWS.COM


on

Katrina Pregnancy Rumours Vicky Kaushal Silence
Koo

ಬೆಂಗಳೂರು: ಅಂಬಾನಿ ಮದುವೆಯಲ್ಲಿ ಕತ್ರಿನಾ (Katrina Kaif) ಹಾಗೂ ವಿಕ್ಕಿ ಕೌಶಲ್‌ (Vicky Kaushal) ಭಾಗಿಯಾಗಿದ್ದರು. ರೆಡ್‌ ಸೀರೆಯಲ್ಲಿ ಕತ್ರಿನಾ ಮಿಂಚಿದ್ದರು. ಕತ್ರಿನಾ ಕೈಫ್ ಗರ್ಭಿಣಿ ಎಂಬ ವದಂತಿಗಳು ಹಬ್ಬಿತ್ತು. ಕೊನೆಗೂ ವಿಕ್ಕಿ ಕೌಶಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಟ, ನವದೆಹಲಿಯಲ್ಲಿ ತನ್ನ ಮುಂಬರುವ ಚಲನಚಿತ್ರ ಬ್ಯಾಡ್ ನ್ಯೂಜ್‌ನ ಪ್ರಚಾರ ಕಾರ್ಯಕ್ರಮವೊಂದರಲ್ಲಿ, ಕತ್ರಿನಾ ಗರ್ಭಿಣಿಯಾಗಿಲ್ಲ ಎಂದು ದೃಢಪಡಿಸಿದರು. ಒಂದು ವೇಳೆ ನಟಿ ಪ್ರಗ್ನೆಂಟ್‌ ಆದರೆ ಆ ಒಳ್ಳೆಯ ಸುದ್ದಿಯನ್ನು ಶೇರ್‌ ಮಾಡಿಕೊಳ್ಳುತ್ತೇನೆ ಎಂದರು.

ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif) ಲಂಡನ್‌ನಲ್ಲಿ ವಕೇಶನ್‌ ಮೂಡ್‌ನಲ್ಲಿದ್ದರು. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಲಂಡನ್‌ನಲ್ಲಿ ಓಡಾಡುತ್ತಿರುವ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ವಿಶೇಷ ಅಂದರೆ ಕತ್ರಿನಾ ಪ್ರಗ್ನೆಂಟ್‌ ಅಂತೆ ಕಂಡಿದ್ದರು. ಕತ್ರಿನಾ ಕೈಫ್ ಅವರು ಕಪ್ಪು ಬಣ್ಣದ ಬ್ಲೇಜರ್ ಹಾಕಿದ್ದರು. ಅವರ ಹೊಟ್ಟೆ ಉಬ್ಬಿದಂತೆ ಕಾಣಿಸಿತ್ತು. ಅವರ ಅಭಿಮಾನಿಗಳಿಗೆ! ಇದರಿಂದ ಅನೇಕರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು

ʻಜೀ ಲೆ ಜರಾ’ ಚಿತ್ರದ ಶೂಟಿಂಗ್ ಮುಗಿದ ನಂತರ ನಾನು ಮತ್ತು ವಿಕ್ಕಿ ಮೊದಲ ಮಗುವನ್ನು ಹೊಂದಲಿದ್ದೇವೆʼ ಎಂದು ಕತ್ರಿನಾ ತನ್ನ ಸ್ನೇಹಿತರಿಗೆ ಹೇಳಿರುವುದಾಗಿ ಮಾಧ್ಯಮವೊಂದು ಈ ಹಿಂದೆ ವರದಿ ಮಾಡಿತ್ತು. “ನಾನು ವಿಜಯ್ ಸೇತುಪತಿ ಮತ್ತು ಫರ್ಹಾನ್ ಅಖ್ತರ್ ಅವರೊಂದಿಗೆ ಮಾಡುತ್ತಿರುವ ಚಿತ್ರಗಳ ಶೂಟಿಂಗ್ ಮುಗಿಸಿದ ನಂತರವೇ ಮಗುವನ್ನು ಯೋಜಿಸುತ್ತೇನೆ” ಎಂದು ಕತ್ರಿನಾ ತಮ್ಮ ಸ್ನೇಹಿತರಿಗೆ ಹೇಳಿದ್ದರಂತೆ. 

ಇದನ್ನೂ ಓದಿ: Katrina Kaif: ಕೊರಗಜ್ಜನ ಕ್ಷೇತ್ರದಲ್ಲಿ ಕತ್ರಿನಾ ಕೈಫ್; ದೈವದ ಬಳಿ ನಟಿ ಬೇಡಿಕೊಂಡಿದ್ದೇನು?

ವಿಕ್ಕಿ ಕೌಶಲ್ (Vicky Kaushal) ತಮ್ಮ ಮುಂದಿನ ಚಿತ್ರ `ಛಾವಾ’ದಲ್ಲಿ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ವರದಿಯ ಪ್ರಕಾರ, ಮರಾಠಾ ರಾಜ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗ ಛತ್ರಪತಿ ಸಂಭಾಜಿ ಮಹಾರಾಜನ ಪಾತ್ರವನ್ನು ವಿಕ್ಕಿ ನಿಭಾಯಿಸಲಿದ್ದಾರೆ. “ಚಿತ್ರವು ಪ್ರಾಥಮಿಕವಾಗಿ ಸಂಭಾಜಿ ಮಹಾರಾಜರ ಶೌರ್ಯ ಅವರ ತ್ಯಾಗ ಮತ್ತು ಯುದ್ಧಗಳನ್ನು ಗೆಲ್ಲುವ ತಂತ್ರಗಳ ಬಗ್ಗೆ ಇದ್ದರೂ, ಗಂಡ ಮತ್ತು ಹೆಂಡತಿಯ ನಡುವಿನ ಭಾವನಾತ್ಮಕ ಪ್ರೇಮಕಥೆಯನ್ನು ಸಹ ಒಳಗೊಂಡಿದೆ. ಮರಾಠ ಸಾಮ್ರಾಜ್ಯದಿಂದ ಸಂಭಾಜಿ ದೂರ ಇದ್ದಾಗ ಅವರ ಹೆಂಡತಿ ಎಲ್ಲವನ್ನೂ ನಿರ್ವಹಿಸುತ್ತಿದ್ದರು ಎನ್ನುವುದು ವಿಶೇಷ. ಈ ವಿಚಾರ ಕೂಡ ಸಿನಿಮಾದಲ್ಲಿ ಹೈಲೈಟ್ ಆಗಲಿದೆ.

Continue Reading

ಬಾಲಿವುಡ್

Salman Khan: ಅಂಬಾನಿ ಮದುವೆಯಲ್ಲಿ ಮಾಜಿ ಗೆಳತಿ ಜತೆ ಸಲ್ಮಾನ್‌ ಡ್ಯಾನ್ಸ್‌; ರಿಲೇಶನ್​ಶಿಪ್​ನಲ್ಲಿದ್ದಾರಾ ಹೇಗೆ?

Salman Khan: ಈ ಮದುವೆಗೆ ಐಶ್ವರ್ಯಾ ರೈ ಕೂಡ ಆಗಮಿಸಿದ್ದರು. ಕೆಲವರು ಐಶ್ವರ್ಯಾ ಜತೆ ಸಲ್ಲು ನಿಂತಿರುವ ರೀತಿಯಲ್ಲಿ ಫೋಟೊ ಎಡಿಟ್ ಮಾಡಿದ್ದರು. ಇದನ್ನು ನೋಡಿ ಅನೇಕರು ಸಲ್ಲು ಅವರೇ ಪೋಸ್ ಕೊಟ್ಟಿದ್ದಾರೆ ಎಂದು ಭಾವಿಸಿದ್ದಾರೆ.

VISTARANEWS.COM


on

Salman Khan and Iulia Vantur spotted at Anant-Radhika wedding
Koo

ಬೆಂಗಳೂರು: ಜಿಯೋ ಕನ್ವೆನ್ಷನ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಅವರ ಅದ್ಧೂರಿ ವಿವಾಹದಲ್ಲಿ ಸಲ್ಮಾನ್‌ ಭಾಗಿಯಾಗಿದ್ದರು. ಹಾಗೇ ಶನಿವಾರ ಆಯೋಜಿಸಲಾದ ಸ್ಟಾರ್-ಸ್ಟಡ್ಡ್ ಶುಭ್ ಆಶೀರ್ವಾದ್ ಸಮಾರಂಭದಲ್ಲಿ ಸಲ್ಮಾನ್‌ ಇದ್ದರು. ನಟ ಸಲ್ಮಾನ್ (Salman Khan) ಅವರು ಮ್ಯಾಚಿಂಗ್ ಪ್ಯಾಂಟ್ ಮತ್ತು ಕಪ್ಪು ಶರ್ಟ್‌ನೊಂದಿಗೆ ನೀಲಿ ಸೂಟ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಪೋಸ್‌ ಕೊಟ್ಟರು. ಇದರ ಜತೆಗೆ ಸಲ್ಮಾನ್‌ ತಮ್ಮ ಪ್ರೀತಿ ವಿಚಾರವಾಗಿಯೂ ಸುದ್ದಿಯಾಗಿದ್ದಾರೆ. ಸಲ್ಲು ಜೊತೆ ಮಾಜಿ ಗೆಳತಿ ಯುಲಿಯಾ ವಂಟೂರ್ ( Iulia Vantur) ಅವರು ಈ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ. ಈ ಮೂಲಕ ಇಬ್ಬರೂ ಇನ್ನೂ ರಿಲೇಶನ್​ಶಿಪ್​ನಲ್ಲಿದ್ದಾರಾ ಎನ್ನುವ ಪ್ರಶ್ನೆ ನೆಟ್ಟಿಗರಿಗೆ ಕಾಡಿದೆ.

ಸಲ್ಮಾನ್ ಮಾಜಿ ಗೆಳತಿ ಯುಲಿಯಾ ವಂಟೂರ್ ಗೋಲ್ಡನ್ ಸೀರೆಯಲ್ಲಿ ಅಂಬಾನಿ ಮದುವೆಯಲ್ಲಿ ಮಿಂಚಿದರು. ಸಲ್ಮಾನ್ ಮತ್ತು ಯೂಲಿಯಾ ಇಬ್ಬರೂ ಭಾಗಿಯಾಗಿದ್ದು, ಇನ್ನೂ ರಿಲೇಶನ್​ಶಿಪ್​ನಲ್ಲಿದ್ದಾರಾ ಎನ್ನುವ ಪ್ರಶ್ನೆ ನೆಟ್ಟಿಗರಿಗೆ ಕಾಡಿದೆ. ಇತ್ತೀಚೆಗೆ, ಅನಂತ್ ಮತ್ತು ರಾಧಿಕಾ ಅವರ ಸಂಗೀತ ಕಾರ್ಯಕ್ರಮದಲ್ಲಿ “ಓ ಓ ಜಾನೆ ಜಾನಾ” ಹಾಡಿಗೆ ಒಟ್ಟಿಗೆ ನೃತ್ಯ ಮಾಡಿರುವ ವಿಡಿಯೊ ಕೂಡ ವೈರಲ್‌ ಆಗಿತ್ತು.

ಈ ಮದುವೆಗೆ ಐಶ್ವರ್ಯಾ ರೈ ಕೂಡ ಆಗಮಿಸಿದ್ದರು. ಕೆಲವರು ಐಶ್ವರ್ಯಾ ಜತೆ ಸಲ್ಲು ನಿಂತಿರುವ ರೀತಿಯಲ್ಲಿ ಫೋಟೊ ಎಡಿಟ್ ಮಾಡಿದ್ದರು. ಇದನ್ನು ನೋಡಿ ಅನೇಕರು ಸಲ್ಲು ಅವರೇ ಪೋಸ್ ಕೊಟ್ಟಿದ್ದಾರೆ ಎಂದು ಭಾವಿಸಿದ್ದಾರೆ.

ಐಶ್ವರ್ಯಾ ಅವರನ್ನು ಭೇಟಿಯಾದ ನಂತರ ರೇಖಾ ಸಲ್ಮಾನ್ ಅವರನ್ನು ಸ್ವಾಗತಿಸಿದ ರೀತಿ ಗಮನ ಸೆಳೆದಿತ್ತು. ಕಡು ಕೆಂಪು ಬಣ್ಣದ ಸೀರೆ ಉಟ್ಟಿದ್ದ ರೇಖಾ ಸಮಾರಂಭದಲ್ಲಿ ಸೊಗಸಾಗಿ ಕಾಣುತ್ತಿದ್ದರು. “ಬಚ್ಚನ್ ಕುಟುಂಬದಿಂದ ಇಬ್ಬರ ಹೃದಯ ಬ್ರೋಕ್‌ ಆಗಿದೆʼʼಎನ್ನುವ ಚರ್ಚೆಗಳು ಶುರು ಆಗಿದ್ದವು.

ಇದನ್ನೂ ಓದಿ: Salman Khan: ಸಲ್ಮಾನ್ ಖಾನ್ ಹೊಸ ಲುಕ್‌ ವೈರಲ್‌: ‘ಸಿಕಂದರ್’ಗೆ ಫ್ಯಾನ್ಸ್‌ ಫಿದಾ!

ನವವಿವಾಹಿತರಾದ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಕೂಡ ಶುಭ್ ಆಶೀರ್ವಾದ್ ಸಮಾರಂಭದಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಸಮಯವನ್ನು ಕಳೆದರು. ಜಹೀರ್ ಮತ್ತು ಸೋನಾಕ್ಷಿ ಇಬ್ಬರೂ ಸಲ್ಮಾನ್ ಮತ್ತು ಸಂಜಯ್ ದತ್ ಅವರೊಂದಿಗೆ ತಮ್ಮ ಕ್ಯಾಂಡಿಡ್ ಫೋಟೋವನ್ನು ಹಂಚಿಕೊಂಡಿದ್ದಾರೆ.

ಮುಂಬೈನಲ್ಲಿರುವ ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಶುಕ್ರವಾರ (ಜುಲೈ 12) ರಾತ್ರಿ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರು ಸಾವಿರಾರು ಗಣ್ಯರು (Anant Ambani Wedding), ಸೆಲೆಬ್ರಿಟಿಗಳ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Continue Reading

ಬಾಲಿವುಡ್

Anant Ambani Wedding: ರಾಧಿಕಾ-ಅನಂತ್ ಅಂಬಾನಿ ಆರತಕ್ಷತೆ; ಮನಸೂರೆಗೊಂಡ ಗಾಯಕಿ ಶ್ರೇಯಾ ಘೋಷಾಲ್, ಎಆರ್ ರೆಹಮಾನ್ ಗಾಯನ!

Anant Ambani Wedding: ಗುರುʼ ಚಿತ್ರದಲ್ಲಿ ಐಶ್ವರ್ಯಾ ರೈ ನಟಿಸಿರುವ ʻಬರ್ಸೋ ರೇʼ ಸಾಂಗ್‌ವನ್ನು ಶ್ರೇಯಾ ಹಾಡಿದರು. ಚಿತ್ರದ ಸಂಯೋಜಕ ಎಆರ್ ರೆಹಮಾನ್ ಕೂಡ ವೇದಿಕೆಯಲ್ಲಿ ಅವರೊಂದಿಗೆ ಸೇರಿಕೊಂಡರು. ಸಂಗೀತ ಸಂಯೋಜಕ ಎಆರ್ ರೆಹಮಾನ್ (Anant Ambani Wedding) ಮತ್ತು ಗಾಯಕಿ ಶ್ರೇಯಾ ಘೋಷಾಲ್ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ಆರತಕ್ಷತೆಯಲ್ಲಿ ಪ್ರದರ್ಶನ ನೀಡಿದರು. ಶ್ರೇಯಾ ಘೋಷಾಲ್ ತಮ್ಮ ಅನೇಕ ಹಿಟ್‌ ಹಾಡುಗಳನ್ನು ಹಾಡಿ ರಂಜಿಸಿದರು.

VISTARANEWS.COM


on

Anant Ambani Wedding AR Rahman Shreya Ghoshal sings wedding reception
Koo

ಬೆಂಗಳೂರು: ಆಸ್ಕರ್-ವಿಜೇತ ಸಂಗೀತ ಸಂಯೋಜಕ ಎಆರ್ ರೆಹಮಾನ್ (Anant Ambani Wedding) ಮತ್ತು ಗಾಯಕಿ ಶ್ರೇಯಾ ಘೋಷಾಲ್ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ಆರತಕ್ಷತೆಯಲ್ಲಿ ಪ್ರದರ್ಶನ ನೀಡಿದರು. ಶ್ರೇಯಾ ಘೋಷಾಲ್ ತಮ್ಮ ಅನೇಕ ಹಿಟ್‌ ಹಾಡುಗಳನ್ನು ಹಾಡಿ ರಂಜಿಸಿದರು.

ʻಗುರುʼ ಚಿತ್ರದಲ್ಲಿ ಐಶ್ವರ್ಯಾ ರೈ ನಟಿಸಿರುವ ʻಬರ್ಸೋ ರೇʼ ಸಾಂಗ್‌ವನ್ನು ಶ್ರೇಯಾ ಹಾಡಿದರು. ಚಿತ್ರದ ಸಂಯೋಜಕ ಎಆರ್ ರೆಹಮಾನ್ ಕೂಡ ವೇದಿಕೆಯಲ್ಲಿ ಅವರೊಂದಿಗೆ ಸೇರಿಕೊಂಡರು.

ಶ್ರೇಯಾ ಮೋಹಿತ್ ಚೌಹಾಣ್ ಜತೆಗೆ ಯಶ್ ಚೋಪ್ರಾ ಅವರ 2012 ರ ರೋಮ್ಯಾಂಟಿಕ್ ಡ್ರಾಮಾ ʻಜಬ್ ತಕ್ ಹೈ ಜಾನ್‌ʼನ ರೆಹಮಾನ್ ಸಂಯೋಜನೆಯ ಹಾಡನ್ನು ಹಾಡಿದರು. ಮೂಲ ಹಾಡಿನಲ್ಲಿ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಕಾಣಿಸಿಕೊಂಡಿದ್ದಾರೆ. ಸಾರಾ ಅಲಿ ಖಾನ್‌ ನಟನೆಯ ಆನಂದ್ ಎಲ್ ರೈ ಅವರ 202 ರ ಚಿತ್ರ ʻಅತ್ರಾಂಗಿ ರೇʼ ಯಿಂದ ರೆಹಮಾನ್ ಸಂಯೋಜನೆಯ ʻಚಕಾ ಚಕ್ʼ ಹಾಡನ್ನೂ ಶ್ರೇಯಾ ಹಾಡಿದ್ದಾರೆ. ಶ್ರೇಯಾ ಮತ್ತು ಮೋಹಿತ್ ಅವರು ಮುಕೇಶ್ ಛಾಬ್ರಾ ಅವರ 2020 ರ ಚೊಚ್ಚಲ ನಿರ್ದೇಶನದ ʻದಿಲ್ ಬೇಚಾರʼದಿಂದ ರೆಹಮಾನ್ ಅವರ ಸಂಯೋಜನೆಯ ʻತಾರೆ ಗಿನ್ʼ ಸಾಂಗ್‌ ಕೂಡ ಹಾಡಿದರು. ಮೂಲತಃ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಮತ್ತು ಸಂಜನಾ ಸಂಘಿ ನಟನೆಯ ಸಿನಿಮಾ ಇದು.

ಇದನ್ನೂ ಓದಿ: Anant Ambani Wedding: ಅನಂತ್ ಅಂಬಾನಿ ಆರತಕ್ಷತೆಯಲ್ಲಿ ದುಬಾರಿ ಲೆಹೆಂಗಾ ಧರಿಸಿ ಅಪ್ಸರೆಯಂತೆ ಕಂಡ ತಮನ್ನಾ ಭಾಟಿಯಾ!

ಅನಂತ್ ಮತ್ತು ರಾಧಿಕಾ ಅವರ ಮದುವೆಯ ಆರತಕ್ಷತೆಯಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸೇರಿದ್ದರು. ಗೋವಿಂದ, ಸನ್ನಿ ಡಿಯೋಲ್, ಬಾಬಿ ಡಿಯೋಲ್, ಮಧುರ್ ಭಂಡಾರ್ಕರ್, ಸುಭಾಷ್ ಘಾಯ್, ರಾಜ್‌ಕುಮಾರ್ ರಾವ್-ಪತ್ರಲೇಖಾ, ಬಿಪಾಶಾ ಬಸು-ಕರಣ್ ಸಿಂಗ್ ಗ್ರೋವರ್, ಅರ್ಜುನ್ ಕಪೂರ್, ಡಯಾನಾ ಪೆಂಟಿ, ಅಟ್ಲೀ, ಜಾಕಿ ಭಗ್ನಾನಿ-ರಾಕುಲ್ ಪ್ರೀತ್ ಸಿಂಗ್ ಮತ್ತು ಆಯುಷ್ಮಾನ್ ಖುರಾನಾ ಸೇರಿದಂತೆ ಇತರರು ಭಾಗವಹಿಸಿದ್ದರು.

ಮುಂಬೈನಲ್ಲಿರುವ ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಶುಕ್ರವಾರ (ಜುಲೈ 12) ರಾತ್ರಿ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರು ಸಾವಿರಾರು ಗಣ್ಯರು (Anant Ambani Wedding), ಸೆಲೆಬ್ರಿಟಿಗಳ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Continue Reading
Advertisement
Valmiki Corp scam
ಕರ್ನಾಟಕ5 mins ago

Valmiki Corp scam: ವಾಲ್ಮೀಕಿ ನಿಗಮ ಅಕ್ರಮದಲ್ಲಿ ನನ್ನ ಪಾತ್ರ ಇಲ್ಲ; ಸಿಎಂ ಮುಂದೆ ಶಾಸಕ ದದ್ದಲ್ ಕಣ್ಣೀರು

Snake Found
ದೇಶ9 mins ago

Snake Found: ಪ್ರಧಾನಿ ಮೋದಿ ನಿವಾಸದಲ್ಲಿ ಹಾವು ಪತ್ತೆ; ವನ್ಯಜೀವಿ ತಂಡದಿಂದ ರಕ್ಷಣೆ

Yogi Adityanath
ರಾಜಕೀಯ19 mins ago

Yogi Adityanath: ಅತಿಯಾದ ಆತ್ಮವಿಶ್ವಾಸವೇ ಮುಳುವಾಯ್ತು; ಬಿಜೆಪಿ ಸೋಲಿನ ಆತ್ಮವಲೋಕನ ಮಾಡಿದ ಯೋಗಿ ಆದಿತ್ಯನಾಥ್

karnataka Weather Forecast
ಮಳೆ20 mins ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

Paris Olympics
ಕ್ರೀಡೆ20 mins ago

Paris Olympics: ಅಂದು ಒಲಿಂಪಿಕ್ಸ್​ ಕ್ರೀಡಾಪಟು; ಇಂದು ಖ್ಯಾತ ಸ್ವಾಮೀಜಿ; ಯಾರಿವರು?

BJP
ದೇಶ21 mins ago

BJP: ಲೋಕಸಭೆ ಚುನಾವಣೆ ಹಿನ್ನಡೆ ಬೆನ್ನಲ್ಲೇ ರಾಜ್ಯಸಭೆಯಲ್ಲೂ ಬಿಜೆಪಿ ಬಲ 86ಕ್ಕೆ ಕುಸಿತ

Janhvi Kapoor Trying To Copy Uorfi Javed TROLLED
ಬಾಲಿವುಡ್27 mins ago

Janhvi Kapoor: ಉರ್ಫಿ ಸ್ಟೈಲ್ ಕಾಪಿ ಮಾಡಿದ್ರಾ ಜಾಹ್ನವಿ ಕಪೂರ್‌? ಟ್ರೋಲ್‌ ಆದ್ರು ನಟಿ!

Teachers Recruitment
ಕರ್ನಾಟಕ47 mins ago

Teachers Recruitment: 10 ಸಾವಿರ ಶಿಕ್ಷಕರ ನೇಮಕಕ್ಕೆ ಶೀಘ್ರದಲ್ಲೇ ಅಧಿಸೂಚನೆ: ಸಚಿವ ಮಧು ಬಂಗಾರಪ್ಪ

ಕ್ರಿಕೆಟ್1 hour ago

Rohit Sharma: ಕ್ರಿಕೆಟ್​ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ರೋಹಿತ್​ ಶರ್ಮ

Paris Olympics 2024
ಕ್ರೀಡೆ1 hour ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್ ಯಾವಾಗ ಆರಂಭ? ಬೃಹತ್​ ಕ್ರೀಡಾಕೂಟಕ್ಕೆ ನಡೆಸಿರುವ ಸಿದ್ಧತೆಗಳೇನು?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ20 mins ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ7 hours ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ11 hours ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ1 day ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ1 day ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ1 day ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ2 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ2 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

ಟ್ರೆಂಡಿಂಗ್‌