Site icon Vistara News

69th Filmfare Awards: 69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಸಮಾರಂಭ; `ಸ್ಯಾಮ್ ಬಹದ್ದೂರ್’ ಸಿನಿಮಾಗೆ ಬಂಪರ್‌!

Sam Bahadur Wins Big In Technical Category Filmfare Awards 2024

ನವದೆಹಲಿ: ‘ಗುಜರಾತ್​​ ಪ್ರವಾಸೋದ್ಯಮ ಇಲಾಖೆ’ (Gujarat Tourism) ಸಹಯೋಗದೊಂದಿಗೆ 69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ (69th Filmfare Awards) ಕಾರ್ಯಕ್ರಮ ಗುಜರಾತ್​ನ ಗಾಂಧಿನಗರದ ಮಹಾತ್ಮ ಮಂದಿರ್​ ಕನ್ವೆನ್ಷನ್​ ಮತ್ತು ಎಕ್ಸಿಬ್ಯುಷನ್​ ಸೆಂಟರ್​ನಲ್ಲಿ ಎರಡು ದಿನಗಳ ಕಾಲ ಅದ್ಧೂರಿ ಸಮಾರಂಭ ನಡೆಯುತ್ತಿದೆ. ಜನವರಿ 27ರಂದು ಬಾಲಿವುಡ್​ (Bollywood) ಸಿನಿಮಾಗಳ ಹಲವು ತಾಂತ್ರಿಕ ವಿಭಾಗಗಳಿಗೆ ಪ್ರಶಸ್ತಿ ನೀಡಲಾಗಿದೆ. ವಿಕ್ಕಿ ಕೌಶಲ್‌ ಮುಖ್ಯ ಭೂಮಿಕೆಯ `ಸ್ಯಾಮ್ ಬಹದ್ದೂರ್’ ಸಿನಿಮಾ ʻಅತ್ಯುತ್ತಮ ಸೌಂಡ್‌ ಡಿಸೈನ್‌ʼ, ʻಅತ್ಯುತ್ತಮ ವಸ್ತ್ರ ವಿನ್ಯಾಸʼ ಮತ್ತು ʻಅತ್ಯುತ್ತಮ ನಿರ್ಮಾಣʼ ಸೇರಿದಂತೆ ಮೂರು ತಾಂತ್ರಿಕ ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅಪಾರಶಕ್ತಿ ಖುರಾನ ಮತ್ತು ಕರೀಷ್ಮಾ ತನ್ನಾ ಅವರು ನಿರೂಪಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಛಾಯಾಗ್ರಹಣ, ಚಿತ್ರಕಥೆ, ವಸ್ತ್ರವಿನ್ಯಾಸ ಮತ್ತು ಸಂಕಲನ ಸೇರಿದಂತೆ ತಾಂತ್ರಿಕ ವಿಭಾಗಗಳಿಗೆ ವಿಜೇತರನ್ನು ಘೋಷಿಸಲಾಯಿತು. ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾದ ವಾಟ್ ಜುಮ್ಕಾ? ಹಾಡಿಗೆ ಗಣೇಶ್ ಆಚಾರ್ಯ ಅತ್ಯುತ್ತಮ ನೃತ್ಯ ಸಂಯೋಜಕ ಪ್ರಶಸ್ತಿಯನ್ನು ಪಡೆದರು. ಶಾರುಖ್‌ ಅವರ ಜವಾನ್‌ ಸಿನಿಮಾ ʻʻಬೆಸ್ಟ್‌ ವಿಷ್ಯುವಲ್‌ ಎಫೆಕ್ಟ್‌ʼʼ ಹಾಗೂ ʻಬೆಸ್ಟ್‌ ಆಕ್ಷನ್‌ʼಗಾಗಿ ಪ್ರಶಸ್ತಿ ಪಡೆದುಕೊಂಡಿದೆ.

ರಣಬೀರ್‌ ರಪೂರ್‌ ಅಭಿನಯದ ʻಅನಿಮಲ್‌ʼ ಸಿನಿಮಾ ʻಅತ್ತುತ್ತಮ ಹಿನ್ನೆಲೆ ಸಂಗೀತʼಕ್ಕೆ ಅವಾರ್ಡ್‌ ಪಡೆದುಕೊಂಡರೆ, ʻಅತ್ಯುತ್ತಮ ಸೌಂಡ್‌ ಡಿಸೈನ್‌ʼನಲ್ಲಿ ಪ್ರಶಸ್ತಿಯನ್ನು ʻಸ್ಯಾಮ್‌ ಬಹದ್ದೂರ್‌ʼ ಹಾಗೂ ʻಅನಿಮಲ್‌ʼ ಪಡೆದುಕೊಂಡಿದೆ.

ಇದನ್ನೂ ಓದಿ: Filmfare Awards 2024: ʻಫಿಲ್ಮ್​ಫೇರ್ ಅವಾರ್ಡ್ʼ ನಾಮಿನೇಷನ್ ಪಟ್ಟಿ ಪ್ರಕಟ; 19 ವಿಭಾಗಗಳಲ್ಲಿ ʻಅನಿಮಲ್‌ʼ!

ನ್ನು ಪ್ರಮುಖ ವಿಭಾಗಗಳಲ್ಲಿನ ಪ್ರಶಸ್ತಿಗಳನ್ನು ಜನವರಿ 28 ರಂದು ಪ್ರಕಟಿಸಲಾಗುಗುತ್ತಿದೆ. ಫಿಲ್ಮ್​ಫೇರ್​ ಜೊತೆ ಡಿಸೈನರ್​ ಶಾಂತನು-ನಿಖಿಲ್​ ಮೆಹ್ತಾ ಅವರ ಸಹಯೋಗದೊಂದಿಗೆ ಈ ಫ್ಯಾಷನ್​ ಶೋ ನಡೆದಿದೆ.

Exit mobile version