69th Filmfare Awards: 69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಸಮಾರಂಭ; `ಸ್ಯಾಮ್ ಬಹದ್ದೂರ್' ಸಿನಿಮಾಗೆ ಬಂಪರ್‌! - Vistara News

ಬಾಲಿವುಡ್

69th Filmfare Awards: 69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಸಮಾರಂಭ; `ಸ್ಯಾಮ್ ಬಹದ್ದೂರ್’ ಸಿನಿಮಾಗೆ ಬಂಪರ್‌!

69th Filmfare Awards: ವಿಕ್ಕಿ ಕೌಶಲ್‌ ಮುಖ್ಯ ಭೂಮಿಕೆಯ `ಸ್ಯಾಮ್ ಬಹದ್ದೂರ್’ ಸಿನಿಮಾ ʻಅತ್ಯುತ್ತಮ ಸೌಂಡ್‌ ಡಿಸೈನ್‌ʼ, ʻಅತ್ಯುತ್ತಮ ವಸ್ತ್ರ ವಿನ್ಯಾಸʼ ಮತ್ತು ʻಅತ್ಯುತ್ತಮ ನಿರ್ಮಾಣʼ ಸೇರಿದಂತೆ ಮೂರು ತಾಂತ್ರಿಕ ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

VISTARANEWS.COM


on

Sam Bahadur Wins Big In Technical Category Filmfare Awards 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ‘ಗುಜರಾತ್​​ ಪ್ರವಾಸೋದ್ಯಮ ಇಲಾಖೆ’ (Gujarat Tourism) ಸಹಯೋಗದೊಂದಿಗೆ 69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ (69th Filmfare Awards) ಕಾರ್ಯಕ್ರಮ ಗುಜರಾತ್​ನ ಗಾಂಧಿನಗರದ ಮಹಾತ್ಮ ಮಂದಿರ್​ ಕನ್ವೆನ್ಷನ್​ ಮತ್ತು ಎಕ್ಸಿಬ್ಯುಷನ್​ ಸೆಂಟರ್​ನಲ್ಲಿ ಎರಡು ದಿನಗಳ ಕಾಲ ಅದ್ಧೂರಿ ಸಮಾರಂಭ ನಡೆಯುತ್ತಿದೆ. ಜನವರಿ 27ರಂದು ಬಾಲಿವುಡ್​ (Bollywood) ಸಿನಿಮಾಗಳ ಹಲವು ತಾಂತ್ರಿಕ ವಿಭಾಗಗಳಿಗೆ ಪ್ರಶಸ್ತಿ ನೀಡಲಾಗಿದೆ. ವಿಕ್ಕಿ ಕೌಶಲ್‌ ಮುಖ್ಯ ಭೂಮಿಕೆಯ `ಸ್ಯಾಮ್ ಬಹದ್ದೂರ್’ ಸಿನಿಮಾ ʻಅತ್ಯುತ್ತಮ ಸೌಂಡ್‌ ಡಿಸೈನ್‌ʼ, ʻಅತ್ಯುತ್ತಮ ವಸ್ತ್ರ ವಿನ್ಯಾಸʼ ಮತ್ತು ʻಅತ್ಯುತ್ತಮ ನಿರ್ಮಾಣʼ ಸೇರಿದಂತೆ ಮೂರು ತಾಂತ್ರಿಕ ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅಪಾರಶಕ್ತಿ ಖುರಾನ ಮತ್ತು ಕರೀಷ್ಮಾ ತನ್ನಾ ಅವರು ನಿರೂಪಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಛಾಯಾಗ್ರಹಣ, ಚಿತ್ರಕಥೆ, ವಸ್ತ್ರವಿನ್ಯಾಸ ಮತ್ತು ಸಂಕಲನ ಸೇರಿದಂತೆ ತಾಂತ್ರಿಕ ವಿಭಾಗಗಳಿಗೆ ವಿಜೇತರನ್ನು ಘೋಷಿಸಲಾಯಿತು. ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾದ ವಾಟ್ ಜುಮ್ಕಾ? ಹಾಡಿಗೆ ಗಣೇಶ್ ಆಚಾರ್ಯ ಅತ್ಯುತ್ತಮ ನೃತ್ಯ ಸಂಯೋಜಕ ಪ್ರಶಸ್ತಿಯನ್ನು ಪಡೆದರು. ಶಾರುಖ್‌ ಅವರ ಜವಾನ್‌ ಸಿನಿಮಾ ʻʻಬೆಸ್ಟ್‌ ವಿಷ್ಯುವಲ್‌ ಎಫೆಕ್ಟ್‌ʼʼ ಹಾಗೂ ʻಬೆಸ್ಟ್‌ ಆಕ್ಷನ್‌ʼಗಾಗಿ ಪ್ರಶಸ್ತಿ ಪಡೆದುಕೊಂಡಿದೆ.

ರಣಬೀರ್‌ ರಪೂರ್‌ ಅಭಿನಯದ ʻಅನಿಮಲ್‌ʼ ಸಿನಿಮಾ ʻಅತ್ತುತ್ತಮ ಹಿನ್ನೆಲೆ ಸಂಗೀತʼಕ್ಕೆ ಅವಾರ್ಡ್‌ ಪಡೆದುಕೊಂಡರೆ, ʻಅತ್ಯುತ್ತಮ ಸೌಂಡ್‌ ಡಿಸೈನ್‌ʼನಲ್ಲಿ ಪ್ರಶಸ್ತಿಯನ್ನು ʻಸ್ಯಾಮ್‌ ಬಹದ್ದೂರ್‌ʼ ಹಾಗೂ ʻಅನಿಮಲ್‌ʼ ಪಡೆದುಕೊಂಡಿದೆ.

ಇದನ್ನೂ ಓದಿ: Filmfare Awards 2024: ʻಫಿಲ್ಮ್​ಫೇರ್ ಅವಾರ್ಡ್ʼ ನಾಮಿನೇಷನ್ ಪಟ್ಟಿ ಪ್ರಕಟ; 19 ವಿಭಾಗಗಳಲ್ಲಿ ʻಅನಿಮಲ್‌ʼ!

  • ಅತ್ಯುತ್ತಮ ಧ್ವನಿ ವಿನ್ಯಾಸ – ʻಸ್ಯಾಮ್ ಬಹದ್ದೂರ್‌ʼಗಾಗಿ ಕುನಾಲ್ ಶರ್ಮಾ ಮತ್ತು ʻಅನಿಮಲ್‌ʼಗಾಗಿ ಸಿಂಕ್ ಸಿನಿಮಾ
  • ಅತ್ಯುತ್ತಮ ಹಿನ್ನೆಲೆ ಸಂಗೀತ – ಹರ್ಷವರ್ಧನ್ ರಾಮೇಶ್ವರ್ (ಅನಿಮಲ್‌)
  • ಅತ್ಯುತ್ತಮ ನಿರ್ಮಾಣ ವಿನ್ಯಾಸ – ಸುಬ್ರತಾ ಚಕ್ರವರ್ತಿ ಮತ್ತು ಅಮಿತ್ ರೇ (ಸ್ಯಾಮ್ ಬಹದ್ದೂರ್)
  • ಅತ್ಯುತ್ತಮ VFX- ಜವಾನ್‌ಗಾಗಿ ರೆಡ್ ಚಿಲ್ಲಿಸ್
  • ಅತ್ಯುತ್ತಮ ಸಂಕಲನ – ಜಸ್ಕುನ್ವರ್ ಸಿಂಗ್ ಕೊಹ್ಲಿ ಮತ್ತು ವಿಧು ವಿನೋದ್ ಚೋಪ್ರಾ (12th ಫೇಲ್‌ ಸಿನಿಮಾ)
  • ಅತ್ಯುತ್ತಮ ವಸ್ತ್ರ ವಿನ್ಯಾಸ – ʻಸ್ಯಾಮ್ ಬಹದ್ದೂರ್ʼ ಚಿತ್ರಕ್ಕಾಗಿ ಸಚಿನ್ ಲವ್ಲೇಕರ್, ದಿವ್ವ್ಯಾ ಗಂಭೀರ್ ಮತ್ತು ನಿಧಿ ಗಂಭೀರ್
  • ಅತ್ಯುತ್ತಮ ಛಾಯಾಗ್ರಹಣ – ಅವಿನಾಶ್ ಅರುಣ್ ಧಾವರೆ (ಥ್ರೀ ಆಫ್ ಅಸ್ ಸಿನಿಮಾ)
  • ಅತ್ಯುತ್ತಮ ನೃತ್ಯ ಸಂಯೋಜನೆ – ಗಣೇಶ್ ಆಚಾರ್ಯ (ವಾಟ್ ಜುಮ್ಕಾ? ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
  • ಅತ್ಯುತ್ತಮ ಆಕ್ಷನ್ – ಸ್ಪಿರೋ ರಜಾಟೋಸ್, ಅನ್ಲ್ ಅರಸು, ಕ್ರೇಗ್ ಮ್ಯಾಕ್ರೇ, ಯಾನಿಕ್ ಬೆನ್, ಕೆಚಾ ಖಂಫಕ್ಡೀ ಮತ್ತು ಜವಾನ್‌ಗಾಗಿ ಸುನಿಲ್ ರೋಡ್ರಿಗಸ್.

ನ್ನು ಪ್ರಮುಖ ವಿಭಾಗಗಳಲ್ಲಿನ ಪ್ರಶಸ್ತಿಗಳನ್ನು ಜನವರಿ 28 ರಂದು ಪ್ರಕಟಿಸಲಾಗುಗುತ್ತಿದೆ. ಫಿಲ್ಮ್​ಫೇರ್​ ಜೊತೆ ಡಿಸೈನರ್​ ಶಾಂತನು-ನಿಖಿಲ್​ ಮೆಹ್ತಾ ಅವರ ಸಹಯೋಗದೊಂದಿಗೆ ಈ ಫ್ಯಾಷನ್​ ಶೋ ನಡೆದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Kareena Kapoor: ಸೈಫ್‌ ಅಲಿಖಾನ್ ರನ್ನು ಮದುವೆಯಾಗಬೇಡಿ ಎಂದು ಜನ ಕರೀನಾಗೆ ಹೇಳಿದ್ದು ಯಾಕೆ?

Kareena Kapoor: ಕರೀನಾ ಮತ್ತು ಸೈಫ್ ಒಂದು ವರ್ಷಗಳ ಡೇಟಿಂಗ್ ನಂತರ 2012ರ ಅಕ್ಟೋಬರ್ 16 ರಂದು ಮುಂಬೈನಲ್ಲಿ ವಿವಾಹವಾದರು. ಸೈಫ್ ಮೊದಲು ನಟಿ ಅಮೃತಾ ಸಿಂಗ್ ಅವರನ್ನು ಮದುವೆಯಾಗಿದ್ದರು. ಇಬ್ಬರೂ 2004ರಲ್ಲಿ ಬೇರೆಯಾದರು. ಸೈಫ್ ಮತ್ತು ಅಮೃತಾ ಅವರಿಗೆ ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. 2020 ರಲ್ಲಿ ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ, ಕರೀನಾ ತಮ್ಮ ಮುವೆಯ ಬಗ್ಗೆ ಪ್ರಸ್ತಾವನೆ ಮಾಡಿದ್ದರು. ತನ್ನ ನಿರ್ಧಾರಕ್ಕೆ ಜನರ ಪ್ರತಿಕ್ರಿಯೆ ಏನು ಎಂಬದುನ್ನು ನೆನಪಿಸಿಕೊಂಡಿದ್ದರು.

VISTARANEWS.COM


on

Kareena Kapoor not to marry Saif Ali Khan
Koo

ಬೆಂಗಳೂರು: ಕರೀನಾ ಕಪೂರ್ (Kareena Kapoor) ಮತ್ತು ಸೈಫ್ ಅಲಿ ಖಾನ್ 2012ರಲ್ಲಿ ವಿವಾಹವಾದರು. ಇದಕ್ಕೂ ಮುಂಚೆ ಸೈಫ್ ಅಲಿ ಖಾನ್ ಅವರು ಅಮೃತಾ ಸಿಂಗ್ ಅವರನ್ನು ವಿವಾಹವಾಗಿದ್ದರು. ಬಳಿಕ ಡಿವೋರ್ಸ್‌ ಪಡೆದುಕೊಂಡರು. 2020 ರಲ್ಲಿ ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ, ಕರೀನಾ ತಮ್ಮ ಮುವೆಯ ಬಗ್ಗೆ ಪ್ರಸ್ತಾವನೆ ಮಾಡಿದ್ದರು. ತನ್ನ ನಿರ್ಧಾರಕ್ಕೆ ಜನರ ಪ್ರತಿಕ್ರಿಯೆ ಏನು ಎಂಬದುನ್ನು ನೆನಪಿಸಿಕೊಂಡಿದ್ದರು.

ಕರೀನಾ ಈ ಬಗ್ಗೆ ಮಾತನಾಡಿ ʻʻಮದುವೆಯಾದ ಮೊದಲ ಕೆಲವು ವರ್ಷ ನನಗೆ ಆತಂಕ ಇರಲಿಲ್ಲ. ಆಗ ಅದು ಹೊಸ ಪ್ರಯಾಣ. ನಾನು ಮದುವೆಯಾಗುವ ಮೊದಲು ಸೈಫ್‌ ಜತೆ ಲಿವಿಂಗ್‌ನಲ್ಲಿ ಇದ್ದೆ. ಅವರನ್ನು ಪರೀಕ್ಷಿಸುವುದಕ್ಕಾಗಲಿ ಅಥವಾ ಅವರು ಹೇಗೆ ಎಂದು ಪ್ರಯೋಗ ಮಾಡುವುದಕ್ಕಾಗಲಿ ಅವರ ಜತೆ ಇರಲಿಲ್ಲ. ಶೂಟಿಂಗ್‌ ನಿರಂತರವಾಗಿ ಇದ್ದ ಕಾರಣ ಅವರ ಜತೆ ಸಮಯ ಕಳೆಯಬೇಕಿತ್ತುʼʼ ಎಂದರು.

ಮಾತು ಮುಂದುವರಿಸಿ ʻʻಅವರನ್ನು ಮದುವೆಯಾಗುವ ಸಂದರ್ಭದಲ್ಲಿ ಸೈಫ್ ಅಲಿ ಖಾನ್ ಅವರನ್ನು ಮದುವೆಯಾಗಬೇಡಿ, ನಿಮ್ಮ ವೃತ್ತಿಜೀವನ ಅಂತ್ಯವಾಗುತ್ತದೆ ಎಂದು ಹಲವರು ನನಗೆ ಸಲಹೆ ನೀಡಿದ್ದರು. ಆಗ ನಾನು ಹೇಳುತ್ತಿದ್ದೆ. ನನ್ನ ವೃತ್ತಿ ಜೀವನ ಮಾತ್ರ ಅಂತ್ಯವಾಗಬಹುದು ಆದರೆ ನಾನು ಸಾಯುವುದಿಲ್ಲ ಎಂದು. ಮದುವೆಯಾದ ಮೇಲೆ ನಾನು ಕೆಲವು ಉತ್ತಮ ಚಿತ್ರಗಳನ್ನು ಮಾಡಿದ್ದೇನೆ. ಸೈಫ್‌ ಕೂಡ ನನಗೆ ಸಪೋರ್ಟ್‌ ಮಾಡುತ್ತಿದ್ದರುʼʼ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Kareena Kapoor: ಕರೀನಾ ಕೈಯಲ್ಲಿದೆಯಂತೆ ಸೌತ್‌ ಸಿನಿಮಾ ಬಿಗ್‌ ಪ್ರಾಜೆಕ್ಟ್‌!

ಕರೀನಾ ಮತ್ತು ಸೈಫ್ ಒಂದು ವರ್ಷಗಳ ಡೇಟಿಂಗ್ ನಂತರ 2012ರ ಅಕ್ಟೋಬರ್ 16ರಂದು ಮುಂಬೈನಲ್ಲಿ ವಿವಾಹವಾದರು. ಸೈಫ್ ಮೊದಲು ನಟಿ ಅಮೃತಾ ಸಿಂಗ್ ಅವರನ್ನು ಮದುವೆಯಾಗಿದ್ದರು. ಇಬ್ಬರೂ 2004ರಲ್ಲಿ ಬೇರೆಯಾದರು. ಸೈಫ್ ಮತ್ತು ಅಮೃತಾ ಅವರಿಗೆ ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸೈಫ್ ಮತ್ತು ಕರೀನಾ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇತ್ತೀಚೆಗೆ ಕರೀನಾ ನಟನೆಯ ಕ್ರ್ಯೂ ಸಿನಿಮಾ ಭಾರಿ ಕಲೆಕ್ಷನ್‌ ಮಾಡಿದೆ.

Continue Reading

ಬಾಲಿವುಡ್

Aishwarya Rai:  ಐಶ್ವರ್ಯಾ ರೈ -ಅಭಿಷೇಕ್ ಬಚ್ಚನ್ ದಂಪತಿಯ 17ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು?

Aishwarya Rai: ಫೋಟೊದಲ್ಲಿ ಐಶ್ವರ್ಯಾ ಅವರು ಕ್ಯೂಟ್‌ ಆಗಿ ಕಂಡಿದ್ದಾರೆ. ಅಭಿಷೇಕ್ ಬೀಜ್ ಶರ್ಟ್‌ನಲ್ಲಿ ಸೆಲ್ಫಿಗೆ ನಗುತ್ತ ಪೋಸ್‌ ಕೊಟ್ಟಿದ್ದಾರೆ. ಆರಾಧ್ಯ ಮುದ್ದಾಗಿ ನಗುತ್ತಿದ್ದಾಳೆ. 2007 ಏಪ್ರಿಲ್ 20ರಂದ ಮುಂಬೈನ ಬಚ್ಚನ್ ನಿವಾಸ ಪ್ರತೀಕ್ಷಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು ಜೋಡಿ.

VISTARANEWS.COM


on

Aishwarya Rai Abhishek Bachchan celebrate 17th wedding anniversary
Koo

ಬೆಂಗಳೂರು: ಐಶ್ವರ್ಯಾ ರೈ (Aishwarya Rai) ಮತ್ತು ಅಭಿಷೇಕ್ ಬಚ್ಚನ್ ಏಪ್ರಿಲ್‌ 20ರಂದು ತಮ್ಮ 17ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಐಶ್ವರ್ಯಾ ಅವರು ಮಗಳು ಮತ್ತು ಪತಿ ಅಭಿಷೇಕ್ ಬಚ್ಚನ್ ಜತೆ ಕ್ಯೂಟ್‌ ಆಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ದಂಪತಿಯ ಅಭಿಮಾನಿಗಳು ಹಾಗೂ ಸಿನಿ ತಾರೆಯರಿಂದ ಸಾಕಷ್ಟು ವಿಶಸ್‌ಗಳು ಹರಿದು ಬಂದಿವೆ.

ಫೋಟೊದಲ್ಲಿ ಐಶ್ವರ್ಯಾ ಅವರು ಕ್ಯೂಟ್‌ ಆಗಿ ಕಂಡಿದ್ದಾರೆ. ಅಭಿಷೇಕ್ ಬೀಜ್ ಶರ್ಟ್‌ನಲ್ಲಿ ಸೆಲ್ಫಿಗೆ ನಗುತ್ತ ಪೋಸ್‌ ಕೊಟ್ಟಿದ್ದಾರೆ. ಆರಾಧ್ಯ ಮುದ್ದಾಗಿ ನಗುತ್ತಿದ್ದಾಳೆ. 2007 ಏಪ್ರಿಲ್ 20ರಂದ ಮುಂಬೈನ ಬಚ್ಚನ್ ನಿವಾಸ ಪ್ರತೀಕ್ಷಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು ಜೋಡಿ. ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ಕುಟುಂಬಸ್ಥರು ಹಾಗೂ ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಮಾಜಿ ವಿಶ್ವ ಸುಂದರಿ ಕಂಜೀವರಂ ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದರೆ, ಅಭಿಷೇಕ್ ಬಿಳಿ ಶೆರ್ವಾನಿ ಧರಿಸಿದ್ದರು. ಇಬ್ಬರೂ ಸಾಕಷ್ಟು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. ʻಧೈ ಅಕ್ಷರ್ ಪ್ರೇಮ್ ಕೆʼ (2000), ʻಕುಚ್ ನಾ ಕಹೋʼ (2003), ʻಉಮ್ರಾವ್ ಜಾನ್ʼ ಮತ್ತು ʻಧೂಮ್ 2ʼ (2006), ʻಗುರುʼ (2007), ʻರಾವನ್ ʼ(2010) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಈ ಮದುವೆಗೆ ಸುಮಾರು 6-7 ಕೋಟಿ ಖರ್ಚು ಮಾಡಲಾಗಿದೆ. ಮದುವೆಯ ನಂತರ, ಐಶ್ವರ್ಯಾ ಮತ್ತು ಅಭಿಷೇಕ್ ಅವರಿಗೆ ಆರಾಧ್ಯ ಎಂಬ ಮುದ್ದಾದ ಮಗಳು ಜನಿಸಿದಳು.

ಇದನ್ನೂ ಓದಿ: Aishwarya Rai: ತಂದೆ ನೆನೆದು ಭಾವುಕ ಪೋಸ್ಟ್‌ ಹಂಚಿಕೊಂಡ ಐಶ್ವರ್ಯಾ ರೈ!

ಸಿನಿಮಾ ವಿಚಾರಕ್ಕೆ ಬಂದರೆ ಆರ್ ಬಾಲ್ಕಿಯವರ 2023ರ ಚಲನಚಿತ್ರ ʻಘೂಮರ್‌ʼನಲ್ಲಿ ಅಭಿಷೇಕ್ ಕೊನೆಯದಾಗಿ ಕಾಣಿಸಿಕೊಂಡರು. ಶೀಘ್ರದಲ್ಲೇ ಶೂಜಿತ್ ಸಿರ್ಕಾರ್ ಅವರ ಮುಂದಿನ ಚಿತ್ರದಲ್ಲಿ ಅಭಿಷೇಕ್ ನಟಿಸಲಿದ್ದಾರೆ. ಐಶ್ವರ್ಯಾ ರೈ ಅವರು ಕೊನೆಯದಾಗಿ ಪೊನ್ನಿಯನ್ ಸೆಲ್ವನ್ 2ನಲ್ಲಿ ಕಾಣಿಸಿಕೊಂಡಿದ್ದರು.ಚಿತ್ರದಲ್ಲಿ ನಂದಿನಿ ಪಾತ್ರವನ್ನು ನಿರ್ವಹಿಸಿದ್ದರು. ಇದುವೆರೆಗೆ ಹೊಸ ಸಿನಿಮಾವನ್ನು ನಟಿ ಅನೌನ್ಸ್‌ಮಾಡಿಲ್ಲ.

Continue Reading

ಬಾಲಿವುಡ್

Salman Khan: ರೆಡಿಯಾಗ್ತಿದೆ ‘ಬಜರಂಗಿ ಭಾಯಿಜಾನ್ 2’: ʻರೌಡಿ ರಾಥೋರ್ 2’ ರಿಲೀಸ್‌ ಯಾವಾಗ?

Salman Khan:  ಆಯುಷ್ ಶರ್ಮಾ ಅವರ ಮುಂಬರುವ ಚಿತ್ರ ‘ರುಸ್ಲಾನ್’ ಪ್ರಚಾರಕ್ಕಾಗಿ ಕೆಕೆ ರಾಧಾಮೋಹನ್ ಹೈದರಾಬಾದ್‌ನಲ್ಲಿದ್ದರು. ಅಲ್ಲಿಯೇ ‘ಬಜರಂಗಿ ಭಾಯಿಜಾನ್ 2’ ‘ಸಿನಿಮಾ ಬಗ್ಗೆ ನಿರ್ಮಾಪಕ ಕೆಕೆ ರಾಧಾಮೋಹನ್ ಮಾಹಿತಿ ಹಂಚಿಕೊಂಡರು. ಚಿತ್ರದ ಸೀಕ್ವೆಲ್‌ನಲ್ಲಿ ಅಕ್ಷಯ್ ಕುಮಾರ್ ರೌಡಿ ರಾಥೋಡ್ ಆಗಿ ಮತ್ತೆ ಬಣ್ಣ ಹಚ್ಚಲಿದ್ದಾರಾ ಎಂಬುದು ರಿವೀಲ್‌ ಮಾಡಿಲ್ಲ.

VISTARANEWS.COM


on

Salman Khan Bajrangi Bhaijaan 2 script ready Rowdy Rathore also
Koo

ಬೆಂಗಳೂರು:ಬಜರಂಗಿ ಭಾಯಿಜಾನ್ 2’ (Bajrangi Bhaijaan 2) , ‘ರೌಡಿ ರಾಥೋರ್’ (Rowdy Rathore) ಸೀಕ್ವೆಲ್‌ಗಳ ಸ್ಕ್ರಿಪ್ಟ್ ಈಗ ಸಿದ್ಧವಾಗಿದೆ ಎಂದು ನಿರ್ಮಾಪಕ ಕೆಕೆ ರಾಧಾಮೋಹನ್ ಖಚಿತಪಡಿಸಿದ್ದಾರೆ. ಶೀಘ್ರದಲ್ಲೇ ‘ಬಜರಂಗಿ ಭಾಯಿಜಾನ್ 2’ ನರೇಶನ್‌ವನ್ನು ಸಲ್ಮಾನ್‌ ಖಾನ್‌ ಅವರಿಗೆ ನೀಡಲಾಗುವುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಈ ಎರಡೂ ಚಿತ್ರಗಳ ಸ್ಕ್ರಿಪ್ಟ್‌ಗಳನ್ನು ಎಸ್‌ಎಸ್ ರಾಜಮೌಳಿ ತಂದೆಯೂ ಆಗಿರುವ ವಿಜಯೇಂದ್ರ ಪ್ರಸಾದ್ (Vijayendra Prasad) ಬರೆದಿದ್ದಾರೆ.

ಆಯುಷ್ ಶರ್ಮಾ ಅವರ ಮುಂಬರುವ ಚಿತ್ರ ‘ರುಸ್ಲಾನ್’ ಪ್ರಚಾರಕ್ಕಾಗಿ ಕೆಕೆ ರಾಧಾಮೋಹನ್ ಹೈದರಾಬಾದ್‌ನಲ್ಲಿದ್ದರು. ಅಲ್ಲಿಯೇ ‘ಬಜರಂಗಿ ಭಾಯಿಜಾನ್ 2’ ‘ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು. “ವಿಜಯೇಂದ್ರ ಪ್ರಸಾದ್ ನನಗಾಗಿ ಎರಡು ಕಥೆಗಳನ್ನು ಬರೆದಿದ್ದಾರೆ. ಒಂದು ‘ವಿಕ್ರಮಾರ್ಕುಡು 2’, ಅದು ಹಿಂದಿಯಲ್ಲಿ ‘ರೌಡಿ ರಾಥೋರ್ 2’ ಎಂದು ಆಗುತ್ತಿದೆ. ಸದ್ಯ ಉತ್ತಮ ಪಾತ್ರಕ್ಕಾಗಿ ತಾರೆಯರನ್ನು ಹುಡುಕುತ್ತಿದ್ದೇವೆʼʼ ಎಂದರು.

ಮಾತು ಮುಂದುವರಿಸಿ ʻʻವಿಜಯೇಂದ್ರ ಪ್ರಸಾದ್ ಅವರು ‘ಬಜರಂಗಿ ಭಾಯಿಜಾನ್ 2’ ಸ್ಕ್ರಿಪ್ಟ್ ಸಹ ಸಿದ್ಧಪಡಿಸಿದ್ದಾರೆ. ಶೀಘ್ರದಲ್ಲೇ ‘ಬಜರಂಗಿ ಭಾಯಿಜಾನ್ 2’ ನರೇಶನ್‌ಅನ್ನು ಸಲ್ಮಾನ್‌ ಖಾನ್‌ ಅವರಿಗೆ ನೀಡಲಾಗುವುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರದ ಸೀಕ್ವೆಲ್‌ನಲ್ಲಿ ಅಕ್ಷಯ್ ಕುಮಾರ್ ರೌಡಿ ರಾಥೋಡ್ ಆಗಿ ಮತ್ತೆ ಬಣ್ಣ ಹಚ್ಚಲಿದ್ದಾರಾ ಎಂಬುದು ರಿವೀಲ್‌ ಮಾಡಿಲ್ಲ.

ಈ ಹಿಂದೆ ಸಲ್ಮಾನ್ ಖಾನ್ ಕೂಡ ‘ಬಜರಂಗಿ ಭಾಯಿಜಾನ್ 2’ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು. ಈ ಚಿತ್ರಕ್ಕೆ ‘ಪವನ್ ಪುತ್ರ ಭಾಯಿಜಾನ್’ ಎಂದು ಟೈಟಲ್ ಇಡುವುದಾಗಿಯೂ ಹೇಳಿದ್ದರು.

ಇದನ್ನೂ ಓದಿ: Salman Khan: ನಟ ಸಲ್ಮಾನ್ ಖಾನ್ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ಮನೆ ನೋಡಿ ಅಭಿಮಾನಿಗಳಿಗೆ ಫುಲ್ ಶಾಕ್!

ʻಈದ್‌ʼಗೆ ಗುಡ್‌ ನ್ಯೂಸ್‌ ಕೊಟ್ಟ ಸಲ್ಮಾನ್ ಖಾನ್!

ಸಲ್ಮಾನ್ ಖಾನ್ (Salman Khan) ಈದ್ ದಿನವೇ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದರು. ಎಆರ್ ಮುರುಗದಾಸ್ (AR Murugadoss) ಜತೆ ಸಲ್ಮಾನ್ ಖಾನ್ ಕೈ ಜೋಡಿಸಿದ್ದು, ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದರು. ಸಿನಿಮಾಗೆ ‘ಸಿಕಂದರ್’ (Sikandar) ಎಂದು ಶೀರ್ಷಿಕೆ ನೀಡಲಾಗಿತ್ತು. ಈದ್ 2025ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಪೋಸ್ಟರ್‌ ಜತೆ ಮಾಹಿತಿ ಹಂಚಿಕೊಂಡಿದ್ದರು.

ಸಲ್ಮಾನ್ ಖಾನ್ ಏಪ್ರಿಲ್ 11ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ಶೀರ್ಷಿಕೆಯನ್ನು ಘೋಷಿಸಿದರು. ʻಬಡೆ ಮಿಯಾ ಚೋಟೆ ಮಿಯಾʼ ಮತ್ತು ʻಮೈದಾನ್ʼ ಸಿನಿಮಾಗಳನ್ನು ಈ ಈದ್‌ನಲ್ಲಿ ವೀಕ್ಷಿಸಿ, ಮುಂದಿನ ಈದ್‌ನಲ್ಲಿ, ʻಸಿಕಂದರ್‌ʼ ಸಿನಿಮಾ ನೋಡಿ. ನಿಮ್ಮೆಲ್ಲರಿಗೂ ಈದ್ ಮುಬಾರಕ್ ಶುಭಾಶಯಗಳುʼಎಂದು ಬರೆದುಕೊಂಡಿದ್ದರು.

ಮಾರ್ಚ್ 12ರಂದು, ಸಲ್ಮಾನ್ ಖಾನ್ ತಮ್ಮ ಅಧಿಕೃತ ಎಕ್ಸ್‌ ಹ್ಯಾಂಡಲ್‌ನಲ್ಲಿ ಸಿನಿಮಾ ಬಗ್ಗೆ ಹಂಚಿಕೊಂಡಿದ್ದರು. ಪ್ರತಿಭಾವಂತರಾದ ಎಆರ್ ಮುರುಗದಾಸ್ ನನ್ನ ಸ್ನೇಹಿತ, ಅವರೊಂದಿಗೆ ಸಿನಿಮಾ ಮಾಡುತ್ತಿರುವುದು ಸಂತೋಷವಾಗಿದೆ. ಈ ಸಹಯೋಗ ವಿಶೇಷವಾಗಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲೆ ಇರಲಿʼʼಎಂದು ಬರೆದುಕೊಂಡಿದ್ದರು.

ತಮಿಳು, ತೆಲುಗಿನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಎಆರ್ ಮುರುಗದಾಸ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡುತ್ತಿದ್ದು, ದೊಡ್ಡ ಬಜೆಟ್​ನಲ್ಲಿ ಸಿದ್ಧವಾಗುತ್ತಿದೆ. ಮುರುಗದಾಸ್ ಅವರು ಈ ಮೊದಲು ‘ಗಜಿನಿ’, ‘ಸ್ಟಾಲಿನ್’, ‘ಸೆವೆಂತ್ ಸೆನ್ಸ್’, ‘ತುಪ್ಪಾಕಿ’, ‘ಸ್ಪೈಡರ್’ ಸೇರಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು. ಮುರುಗದಾಸ್ ಅವರು ಆಮಿರ್ ಖಾನ್ ನಟಿಸಿದ್ದ ‘ಗಜಿನಿ’ ಚಿತ್ರವನ್ನು ಅವರೇ ನಿರ್ದೇಶನ ಮಾಡಿದ್ದರು.

Continue Reading

ಪ್ರಮುಖ ಸುದ್ದಿ

Pankaj Tripathi: ಭೀಕರ ಅಪಘಾತ; ನಟ ಪಂಕಜ್‌ ತ್ರಿಪಾಠಿ ಬಾವ ನಿಧನ, ಸಹೋದರಿ ಸ್ಥಿತಿ ಗಂಭೀರ

Pankaj Tripathi: ಬಾಲಿವುಡ್‌ ನಟ ಪಂಕಜ್‌ ತ್ರಿಪಾಠಿ ಅವರ ಸಹೋದರಿ ಸರಿತಾ ತಿವಾರಿ ಹಾಗೂ ಬಾವ ರಾಜೇಶ್‌ ತಿವಾರಿ ಅವರು ಕಾರಿನಲ್ಲಿ ತೆರಳುವಾಗ ಅಪಘಾತ ಸಂಭವಿಸಿದೆ. ದಂಪತಿಯು ಕಾರಿನಲ್ಲಿ ತೆರಳುವಾಗ ನಿಯಂತ್ರಣ ತಪ್ಪಿ ಕಾರು ಡಿವೈಡರ್‌ಗೆ ಡಿಕ್ಕಿಯಾಗಿದೆ. ರಾಜೇಶ್‌ ತಿವಾರಿ ಅವರು ಮೃತಪಟ್ಟಿದ್ದು, ಸರಿತಾ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

VISTARANEWS.COM


on

Pankaj Tripathi
Koo

ರಾಂಚಿ: ಬಾಲಿವುಡ್‌ ನಟ, ಮಿರ್ಜಾಪುರ ವೆಬ್‌ ಸಿರೀಸ್‌ ಖ್ಯಾತಿಯ ಪಂಕಜ್‌ ತ್ರಿಪಾಠಿ (Pankaj Tripathi) ಅವರ ಬಾವ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಜಾರ್ಖಂಡ್‌ನ ನಿರ್ಸಾದಲ್ಲಿರುವ ಜಿಟಿ ರಸ್ತೆಯಲ್ಲಿ ಶನಿವಾರ (ಏಪ್ರಿಲ್‌ 20) ಸಂಜೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪಂಕಜ್‌ ತ್ರಿಪಾಠಿ ಬಾವ ರಾಜೇಶ್‌ ತಿವಾರಿ (Rajesh Tiwari) ಮೃತಪಟ್ಟಿದ್ದಾರೆ. ಇನ್ನು ನಟನ ಸಹೋದರಿ ಸರಿತಾ ತಿವಾರಿ (Sarita Tiwari) ಅವರು ಕೂಟ ಅಪಘಾತಕ್ಕೀಡಾಗಿದ್ದು, ಅವರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ರಾಜೇಶ್‌ ತಿವಾರಿ ಹಾಗೂ ಸರಿತಾ ತಿವಾರಿ ಅವರು ಕಾರಿನಲ್ಲಿ ಪಶ್ಚಿಮ ಬಂಗಾಳದಿಂದ ಬಿಹಾರದ ಗೋಪಾಲ್‌ಗಂಜ್‌ಗೆ ತೆರಳುತ್ತಿದ್ದರು. ಶನಿವಾರ ಸಂಜೆ 4.30ರ ಸುಮಾರಿಗೆ ದೆಹಲಿ-ಕೋಲ್ಕೊತಾ ರಾಷ್ಟ್ರೀಯ ಹೆದ್ದಾರಿ ಬಳಿ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿದೆ. ಕಾರು ವೇಗವಾಗಿ ಚಲಿಸುತ್ತಿದ್ದ ಕಾರಣ ಡಿಕ್ಕಿಯಾಗುತ್ತಲೇ ನಜ್ಜುಗುಜ್ಜಾಗಿದೆ. ಇದರಿಂದಾಗಿ ಇಬ್ಬರೂ ಗಂಭೀರವಾಗಿ ಗಾಯಗೊಂಡರು ಎಂದು ತಿಳಿದುಬಂದಿದೆ.

ಕೂಡಲೇ ಇಬ್ಬರನ್ನೂ ಧನಬಾದ್‌ನಲ್ಲಿರುವ ಆಸ್ಪತ್ರೆಗೆ ಸಾಗಿಸಲಾಯಿತು. ಶಾಹಿದ್‌ ನಿರ್ಮಲ್‌ ಮೆಹ್ತೋ ಮೆಡಿಕಲ್‌ ಕಾಲೇಜ್‌ ಹಾಸ್ಪಿಟಲ್‌ಗೆ ತಲುಪುತ್ತಲೇ ರಾಜೇಶ್‌ ತಿವಾರಿ ಅವರು ಮೃತಪಟ್ಟಿದ್ದಾರೆ ಎಂಬುದಾಗಿ ವೈದ್ಯರು ಘೋಷಿಸಿದರು. ಇದೇ ಆಸ್ಪತ್ರೆಯಲ್ಲಿ ಸರಿತಾ ತಿವಾರಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸರಿತಾ ತಿವಾರಿ ಅವರ ಕಾಲಿಗೆ ಗಂಭೀರವಾಗಿ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ.

ಕೆಲ ದಿನಗಳ ಹಿಂದಷ್ಟೇ ಮಂಗ್ಲಿ ಖ್ಯಾತಿಯ ಸತ್ಯವತಿ ರಾಥೋಡ್‌ ಅವರ ಕಾರು ಅಪಘಾತಕ್ಕೀಡಾಗಿತ್ತು. ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತೊಂಡುಪಲ್ಲಿ ಸೇತುವೆ ಬಳಿ ಸಂಭವಿಸಿದ ಅಪಘಾತದಲ್ಲಿ ಗಾಯಕಿಯು ಗಾಯಗೊಂಡಿದ್ದರು.

ಮಂಗ್ಲಿ ಮತ್ತು ಇತರ ಇಬ್ಬರು ಪ್ರಯಾಣಿಕರಾದ ಮೇಘರಾಜ್ ಮತ್ತು ಮನೋಹರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಅಪಘಾತದ ಸಮಯದಲ್ಲಿ ಸಣ್ಣ ಟ್ರಕ್ ಚಾಲಕ ಮದ್ಯದ ಅಮಲಿನಲ್ಲಿದ್ದ ಎನ್ನಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕಳುಹಿಸಲಾಗಿತ್ತು.

ಇದನ್ನೂ ಓದಿ: Emraan Hashmi: ಖ್ಯಾತ ನಟಿ ಜತೆ ಕೆಟ್ಟ ಚುಂಬನದ ಅನುಭವ ಎಂದಿದ್ದ ನಟ ಮತ್ತೆ ಆಕೆಯ ಜತೆಗೇ ಪೋಸ್‌!

Continue Reading
Advertisement
Pralhad Joshi
ಕರ್ನಾಟಕ2 hours ago

Pralhad Joshi: ಯುಪಿಎ ಕಾಲದಲ್ಲಿ ಸತ್ತ ಉಗ್ರನಿಗಾಗಿ ಸೋನಿಯಾ ಗಾಂಧಿ ಕಣ್ಣೀರಿಟ್ಟಿದ್ದರು: ಪ್ರಲ್ಹಾದ್‌ ಜೋಶಿ

Lok Sabha Election 2024
ಕರ್ನಾಟಕ3 hours ago

Lok Sabha Election: ಮೋದಿಯಿಂದ ಮಧ್ಯಮ ವರ್ಗದ ಬದುಕು ಹೈರಾಣಾಗಿತ್ತು, ನಾವು ಗ್ಯಾರಂಟಿ ಮೂಲಕ ಸ್ಪಂದಿಸಿದ್ದೇವೆ: ಸಿಎಂ

The Great Khal
ಪ್ರಮುಖ ಸುದ್ದಿ3 hours ago

The Great Khali : ರಾಹುಲ್ ಗಾಂಧಿ ಸುಳ್ಳ ಎಂದು ಕರೆದ ಬಿಜೆಪಿ ನಾಯಕ ದಿ ಗ್ರೇಟ್ ಖಲಿ, ಇಲ್ಲಿದೆ ವಿಡಿಯೊ

IPL 2024
ಪ್ರಮುಖ ಸುದ್ದಿ3 hours ago

IPL 2024 : ಗುಜರಾತ್​ ತಂಡಕ್ಕೆ3 ವಿಕೆಟ್​ ವಿಜಯ, ಪಂಜಾಬ್​ಗೆ ಬಿಡದ ಸೋಲಿನ ನಂಟು

belagavi Airport
ಕರ್ನಾಟಕ3 hours ago

Indigo Airlines: ಪ್ರಯಾಣಿಕರ ಲಗೇಜ್‌ ಬೆಂಗಳೂರಲ್ಲೇ ಬಿಟ್ಟು ಬೆಳಗಾವಿಗೆ ಬಂದ ವಿಮಾನ; ಮಾಜಿ ಸಿಎಂ ಬ್ಯಾಗ್‌ ಕೂಡ ಮಿಸ್ಸಿಂಗ್!‌

Viral News
ವೈರಲ್ ನ್ಯೂಸ್3 hours ago

Viral News: ಚಲಿಸುತ್ತಿರುವ ಕಾರಿನ ಬಾಗಿಲಿನಲ್ಲಿ ನೇತಾಡುವ ಯುವಕ; ಶಾಕಿಂಗ್‌ ವಿಡಿಯೊ ನೋಡಿ

Sportsmanship
ಕ್ರೀಡೆ4 hours ago

Sportsmanship : ಭಾರತದವರನ್ನೇ ಸೋಲಿಸಿ ತ್ರಿವರ್ಣ ಧ್ವಜವನ್ನೂ ಎತ್ತಿ ಹಿಡಿದ ಪಾಕ್ ಕರಾಟೆ ಪಟು!

DK Suresh
ಬೆಂಗಳೂರು4 hours ago

DK Suresh: ಬೆಲೆ ಏರಿಕೆ, ಜಿಎಸ್‌ಟಿ ಹೊರೆಯೇ ಮೋದಿ ಗ್ಯಾರಂಟಿ: ಡಿ.ಕೆ. ಸುರೇಶ್

soil
ಕೃಷಿ4 hours ago

ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳ ನಿವಾರಣೆಗೆ ‘ಕೃಷಿ ಸುಣ್ಣ’ ರಾಮಬಾಣ!

Narendra modi
ದೇಶ4 hours ago

Narendra Modi : ಹೆಚ್ಚು ಮಕ್ಕಳಿದ್ದವರಿಗೆ ಕಾಂಗ್ರೆಸ್​ನಿಂದ ಸಂಪತ್ತು ವಿತರಣೆ; ಮೋದಿ ಹೇಳಿಕೆಗೆ ಕೈ ಪಕ್ಷದ ಆಕ್ಷೇಪ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ21 hours ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ1 day ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20241 day ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20242 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ2 days ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ2 days ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ2 days ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ3 days ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ5 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

ಟ್ರೆಂಡಿಂಗ್‌