ಬೆಂಗಳೂರು: ಶಂಕರ್ ನಿರ್ದೇಶನದ 2001ರಲ್ಲಿ ಬಿಡುಗಡೆಯಾದ ʻನಾಯಕ್ʼ ಸಿನಿಮಾದಲ್ಲಿ (Shah Rukh Khan) ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಈ ಸಿನಿಮಾಗೆ (Shah Rukh Khan) ಮೊದಲು ಸಹಿ ಹಾಕಿದ್ದು ಶಾರುಖ್. ಜತೆಗೆ ಶಾರುಖ್ ಖಾನ್ ಅವರು ʻನಾಯಕ್ʼ ಚಿತ್ರಕ್ಕೆ ಸಹಿ ಹಾಕುವಾಗ ಮುಂಗಡ ಪಡೆದಿದ್ದು ಕೇವಲ ಒಂದು ರೂ. ಅಂತೆ. ಈ ಘಟನೆ ಬಗ್ಗೆ ಸಂದರ್ಶನವೊಂದರಲ್ಲಿ ಶಾರುಖ್ ಹೇಳಿಕೊಂಡಿದ್ದಾರೆ. ಈ ಚಿತ್ರವು ನಿರ್ದೇಶಕ ಶಂಕರ್ ಅವರ 1999ರ ತಮಿಳು ಚಿತ್ರ ʻಮುಧಲ್ವನ್ʼನ (mudhalvan) ರಿಮೇಕ್ ಆಗಿತ್ತು. ಚಿತ್ರದಲ್ಲಿ ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಸಿನಿಮಾ ಅಷ್ಟಾಗಿ ಸಕ್ಸೆಸ್ ಆಗದಿದ್ದರೂ ದೂರದರ್ಶನದಲ್ಲಿ ವ್ಯಾಪಕವಾಗಿ ಜನಪ್ರಿಯತೆ ಗಳಿಸಿತ್ತು.
ಸಂದರ್ಶನದಲ್ಲಿ, ಶಾರುಖ್ ಖಾನ್ ಸಿನಿಮಾ ಬಗ್ಗೆ ಮಾತನಾಡಿ ʻʻಈ ಸಿನಿಮಾಗೆ ನಾನು ಒಪ್ಪಿಗೆ ನೀಡಿ ಸಹಿ ಹಾಕುವಾಗ ಮುಂಗಡ ಸಂಭಾವನೆ ಪಡೆದಿದ್ದು ಕೇವಲ ಒಂದು ರೂ. ಜತೆಗೆ ಡೇಟ್ ನೀಡಲು ಸದಾ ಸಿದ್ದ ಎಂದು ಭರವಸೆ ಕೊಟ್ಟೆ. ಆದರೆ ನನಗೆ ನಾಯಕ್ ಮೂಲ ಆವೃತ್ತಿ ಇಷ್ಟ ಆಗಿತ್ತು. ಹಿಂದಿ ರಿಮೇಕ್ ಮಾಡುವುದು ಸರಿಯೆನಿಸಲಿಲ್ಲʼʼ ಎಂದರು. ಶಾರುಖ್ ಮಾತು ಮುಂದುವರಿಸಿ ʻʻನಾನು ಸಹಿ ಮಾಡಿದ್ದು, ದಿನಾಂಕ ನೀಡಿರುವ ಸಾಕ್ಷಿ ಇನ್ನೂ ನನ್ನ ಬಳಿ ಇದೆ. ಶಂಕರ್ ಜತೆ ಇನ್ನೂ ಕೂಡ ನನಗೆ ಕೆಲಸ ಮಾಡುವ ಬಯಕೆ ಇದೆ. ಅವರು ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ನಂತೆ. ಅವರ ಜತೆ ಸಿನಿಮಾ ಮಾಡುವುದು ಅದೃಷ್ಟʼʼ ಎಂದರು.
ಇದನ್ನೂ ಓದಿ: Shah Rukh Khan: ಖ್ಯಾತ ಹಾಲಿವುಡ್ ನಟನಂತೆ ಕಂಡ ಶಾರುಖ್ ಖಾನ್; ವಿಡಿಯೊ ವೈರಲ್!
ಸಿನಿಮಾ ವಿಚಾರಕ್ಕೆ ಬಂದರೆ ಶಾರುಖ್ ಅವರ ಮಗಳು ಸುಹಾನಾ ಖಾನ್ ಅವರ ಜತೆ ʻದಿ ಕಿಂಗ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಸುಜೋಯ್ ಘೋಷ್ ನಿರ್ದೇಶಿಸಲಿದ್ದಾರೆ. ವರದಿಗಳ ಪ್ರಕಾರ ಚಿತ್ರದ ಬಜೆಟ್ 200 ಕೋಟಿ ರೂ. ಮತ್ತೊಂದೆಡೆ, ಅನಿಲ್ ಕಪೂರ್ ಬಿಗ್ ಬಾಸ್ OTT ಸೀಸನ್ 3 ಅನ್ನು ಹೋಸ್ಟ್ ಮಾಡುತ್ತಿದ್ದಾರೆ.
2023ರಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ ಬಳಿಕ ಶಾರುಖ್ ʻಕಿಂಗ್ʼ ಸಿನಿಮಾ ಮೇಲೆ ಗಮನ ಹರಿಸಿದ್ದಾರೆ.ಈ ಚಿತ್ರವನ್ನು ಶಾರುಖ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಅವರ ಪಠಾಣ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಮಾರ್ಫ್ಲಿಕ್ಸ್ ಪಿಕ್ಚರ್ಸ್ ಸಹ-ನಿರ್ಮಾಣ ಮಾಡಿದ್ದಾರೆ.ಇನ್ನು ಶಾರುಖ್ ಮಗಳು ಕಳೆದ ವರ್ಷ ಬಿಡುಗಡೆಯಾದ ʻದಿ ಆರ್ಚೀಸ್ʼ (The Archies) ಸಿನಿಮಾ ಮೂಲಕ ಬಣ್ಣದ ಲೋಕ ಪ್ರವೇಶಿಸಿದರು. ಜೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ನಿರ್ದೇಶನದ ‘ದಿ ಆರ್ಚೀಸ್’ ಸಿನಿಮಾದಲ್ಲಿ ಸುಹಾನಾ ಜತೆಗೆ ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಕೂಡ ನಟಿಸಿದ್ದರು. ಈ ವೇಳೆ ಅವರಿಬ್ಬರು ಡೇಟಿಂಗ್ ನಡೆಸುತ್ತಿದ್ದರು ಎನ್ನುವ ಗುಸುಗುಸು ಹಬ್ಬಿತ್ತು. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಸುಹಾನಾ ಖಾನ್ ಅಭಿನಯದ ಮೊದಲ ಚಿತ್ರ ‘ದಿ ಆರ್ಚೀಸ್’ ಒಟಿಟಿಯಲ್ಲಿ ತೆರೆಕಂಡು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು.