Shah Rukh Khan: ʻನಾಯಕ್‌ʼ ಸಿನಿಮಾಗೆ ಶಾರುಖ್‌ ಹೀರೊ ಆಗಬೇಕಿತ್ತು! 1 ರೂ. ಅಡ್ವಾನ್ಸ್ ಪಡೆದಿದ್ದರು! - Vistara News

ಬಾಲಿವುಡ್

Shah Rukh Khan: ʻನಾಯಕ್‌ʼ ಸಿನಿಮಾಗೆ ಶಾರುಖ್‌ ಹೀರೊ ಆಗಬೇಕಿತ್ತು! 1 ರೂ. ಅಡ್ವಾನ್ಸ್ ಪಡೆದಿದ್ದರು!

Shah Rukh Khan: ಈ ಚಿತ್ರವು ನಿರ್ದೇಶಕ ಶಂಕರ್ ಅವರ 1999ರ ತಮಿಳು ಚಿತ್ರ ʻಮುಧಲ್ವನ್‌ʼನ (mudhalvan) ರಿಮೇಕ್ ಆಗಿತ್ತು. ಚಿತ್ರದಲ್ಲಿ ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಸಿನಿಮಾ ಅಷ್ಟಾಗಿ ಸಕ್ಸೆಸ್‌ ಆಗದಿದ್ದರೂ ದೂರದರ್ಶನದಲ್ಲಿ ವ್ಯಾಪಕವಾಗಿ ಜನಪ್ರಿಯತೆ ಗಳಿಸಿತ್ತು.

VISTARANEWS.COM


on

Shah Rukh Khan Took ₹1 As Signing Amount For 'Nayak'
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಶಂಕರ್ ನಿರ್ದೇಶನದ 2001ರಲ್ಲಿ ಬಿಡುಗಡೆಯಾದ ʻನಾಯಕ್‌ʼ ಸಿನಿಮಾದಲ್ಲಿ (Shah Rukh Khan) ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಈ ಸಿನಿಮಾಗೆ (Shah Rukh Khan) ಮೊದಲು ಸಹಿ ಹಾಕಿದ್ದು ಶಾರುಖ್‌. ಜತೆಗೆ ಶಾರುಖ್ ಖಾನ್ ಅವರು ʻನಾಯಕ್ʼ ಚಿತ್ರಕ್ಕೆ ಸಹಿ ಹಾಕುವಾಗ ಮುಂಗಡ ಪಡೆದಿದ್ದು ಕೇವಲ ಒಂದು ರೂ. ಅಂತೆ. ಈ ಘಟನೆ ಬಗ್ಗೆ ಸಂದರ್ಶನವೊಂದರಲ್ಲಿ ಶಾರುಖ್‌ ಹೇಳಿಕೊಂಡಿದ್ದಾರೆ. ಈ ಚಿತ್ರವು ನಿರ್ದೇಶಕ ಶಂಕರ್ ಅವರ 1999ರ ತಮಿಳು ಚಿತ್ರ ʻಮುಧಲ್ವನ್‌ʼನ (mudhalvan) ರಿಮೇಕ್ ಆಗಿತ್ತು. ಚಿತ್ರದಲ್ಲಿ ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಸಿನಿಮಾ ಅಷ್ಟಾಗಿ ಸಕ್ಸೆಸ್‌ ಆಗದಿದ್ದರೂ ದೂರದರ್ಶನದಲ್ಲಿ ವ್ಯಾಪಕವಾಗಿ ಜನಪ್ರಿಯತೆ ಗಳಿಸಿತ್ತು.

ಸಂದರ್ಶನದಲ್ಲಿ, ಶಾರುಖ್ ಖಾನ್ ಸಿನಿಮಾ ಬಗ್ಗೆ ಮಾತನಾಡಿ ʻʻಈ ಸಿನಿಮಾಗೆ ನಾನು ಒಪ್ಪಿಗೆ ನೀಡಿ ಸಹಿ ಹಾಕುವಾಗ ಮುಂಗಡ ಸಂಭಾವನೆ ಪಡೆದಿದ್ದು ಕೇವಲ ಒಂದು ರೂ. ಜತೆಗೆ ಡೇಟ್‌ ನೀಡಲು ಸದಾ ಸಿದ್ದ ಎಂದು ಭರವಸೆ ಕೊಟ್ಟೆ. ಆದರೆ ನನಗೆ ನಾಯಕ್‌ ಮೂಲ ಆವೃತ್ತಿ ಇಷ್ಟ ಆಗಿತ್ತು. ಹಿಂದಿ ರಿಮೇಕ್‌ ಮಾಡುವುದು ಸರಿಯೆನಿಸಲಿಲ್ಲʼʼ ಎಂದರು. ಶಾರುಖ್‌ ಮಾತು ಮುಂದುವರಿಸಿ ʻʻನಾನು ಸಹಿ ಮಾಡಿದ್ದು, ದಿನಾಂಕ ನೀಡಿರುವ ಸಾಕ್ಷಿ ಇನ್ನೂ ನನ್ನ ಬಳಿ ಇದೆ. ಶಂಕರ್‌ ಜತೆ ಇನ್ನೂ ಕೂಡ ನನಗೆ ಕೆಲಸ ಮಾಡುವ ಬಯಕೆ ಇದೆ. ಅವರು ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ನಂತೆ. ಅವರ ಜತೆ ಸಿನಿಮಾ ಮಾಡುವುದು ಅದೃಷ್ಟʼʼ ಎಂದರು.

ಇದನ್ನೂ ಓದಿ: Shah Rukh Khan: ಖ್ಯಾತ ಹಾಲಿವುಡ್‌ ನಟನಂತೆ ಕಂಡ ಶಾರುಖ್ ಖಾನ್; ವಿಡಿಯೊ ವೈರಲ್‌!

ಸಿನಿಮಾ ವಿಚಾರಕ್ಕೆ ಬಂದರೆ ಶಾರುಖ್ ಅವರ ಮಗಳು ಸುಹಾನಾ ಖಾನ್ ಅವರ ಜತೆ ʻದಿ ಕಿಂಗ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಸುಜೋಯ್ ಘೋಷ್ ನಿರ್ದೇಶಿಸಲಿದ್ದಾರೆ. ವರದಿಗಳ ಪ್ರಕಾರ ಚಿತ್ರದ ಬಜೆಟ್ 200 ಕೋಟಿ ರೂ. ಮತ್ತೊಂದೆಡೆ, ಅನಿಲ್ ಕಪೂರ್ ಬಿಗ್ ಬಾಸ್ OTT ಸೀಸನ್ 3 ಅನ್ನು ಹೋಸ್ಟ್‌ ಮಾಡುತ್ತಿದ್ದಾರೆ.

2023ರಲ್ಲಿ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಸಿನಿಮಾಗಳನ್ನು ನೀಡಿದ ಬಳಿಕ ಶಾರುಖ್‌ ʻಕಿಂಗ್‌ʼ ಸಿನಿಮಾ ಮೇಲೆ ಗಮನ ಹರಿಸಿದ್ದಾರೆ.ಈ ಚಿತ್ರವನ್ನು ಶಾರುಖ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಅವರ ಪಠಾಣ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಮಾರ್ಫ್ಲಿಕ್ಸ್ ಪಿಕ್ಚರ್ಸ್ ಸಹ-ನಿರ್ಮಾಣ ಮಾಡಿದ್ದಾರೆ.ಇನ್ನು ಶಾರುಖ್‌ ಮಗಳು ಕಳೆದ ವರ್ಷ ಬಿಡುಗಡೆಯಾದ ʻದಿ ಆರ್ಚೀಸ್ʼ (The Archies) ಸಿನಿಮಾ ಮೂಲಕ ಬಣ್ಣದ ಲೋಕ ಪ್ರವೇಶಿಸಿದರು. ಜೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ನಿರ್ದೇಶನದ ‘ದಿ ಆರ್ಚೀಸ್’ ಸಿನಿಮಾದಲ್ಲಿ ಸುಹಾನಾ ಜತೆಗೆ ಅಮಿತಾಭ್‌ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಕೂಡ ನಟಿಸಿದ್ದರು. ಈ ವೇಳೆ ಅವರಿಬ್ಬರು ಡೇಟಿಂಗ್ ನಡೆಸುತ್ತಿದ್ದರು ಎನ್ನುವ ಗುಸುಗುಸು ಹಬ್ಬಿತ್ತು. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಸುಹಾನಾ ಖಾನ್‌ ಅಭಿನಯದ ಮೊದಲ ಚಿತ್ರ ‘ದಿ ಆರ್ಚೀಸ್’ ಒಟಿಟಿಯಲ್ಲಿ ತೆರೆಕಂಡು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Janhvi Kapoor: ಪೀರಿಯಡ್ಸ್ ವೇಳೆ ಲವ್ ಬ್ರೇಕ್ ಅಪ್‌ ಆಗ್ತಿತ್ತು ಎಂದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌!

Janhvi Kapoor: ಶಿಖರ್ ಪಹಾರಿಯಾ ಜತೆಗಿನ ಸಂಬಂಧದ ಬಗ್ಗೆ ಜಾಹ್ನವಿ ಕಪೂರ್ ಸಾಕಷ್ಟು ತೆರೆದುಕೊಂಡಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ನಟಿ ಪಿರಿಯಡ್ಸ್‌ನಿಂದ ಲವ್ ಬ್ರೇಕ್ ಆಗಿತ್ತು ಎಂದು ಹೇಳಿದ್ದಾರೆ. ಪ್ರತಿ ತಿಂಗಳ ಪೀರಿಯಡ್ಸ್ ವೇಳೆ ಲವ್ ಬ್ರೇಕ್ ಆಗ್ತಿತ್ತು ಎಂದು ಹೇಳಿಕೆ ನೀಡಿದ್ದಾರೆ.

VISTARANEWS.COM


on

Janhvi Kapoor heartbreak to Shikhar Pahariya when in menstruation
Koo

ಬೆಂಗಳೂರು: ಬಹುಭಾಷಾ ನಟಿ ಶ್ರೀದೇವಿ-ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್‌ ಮಗಳು ಜಾಹ್ನವಿ ಕಪೂರ್‌ (Janhvi Kapoor) ಸದ್ಯ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆ ಊರುತ್ತಿದ್ದಾರೆ. ಒಂದರ ಹಿಂದೆ ಒಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಚಿತ್ರಗಳ ಜತೆಗೆ ವೈಯಕ್ತಿಕ ಕಾರಣಕ್ಕೂ ಅವರು ಸುದ್ದಿಯಾಗುತ್ತಿದ್ದಾರೆ. ಜಾಹ್ನವಿ ಕಪೂರ್‌ ಮತ್ತು ಶಿಖರ್ ಪಹಾರಿಯಾ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಈಗಾಗಲೇ ಗೊತ್ತೇ ಇದೆ. ಶಿಖರ್ ಪಹಾರಿಯಾ ಜತೆಗಿನ ಸಂಬಂಧದ ಬಗ್ಗೆ ಜಾಹ್ನವಿ ಕಪೂರ್ ಸಾಕಷ್ಟು ತೆರೆದುಕೊಂಡಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ನಟಿ ಪಿರಿಯಡ್ಸ್‌ನಿಂದ ಲವ್ ಬ್ರೇಕ್ ಆಗಿತ್ತು ಎಂದು ಹೇಳಿದ್ದಾರೆ. ಪ್ರತಿ ತಿಂಗಳ ಪೀರಿಯಡ್ಸ್ ವೇಳೆ ಲವ್ ಬ್ರೇಕ್ ಆಗ್ತಿತ್ತು ಎಂದು ಹೇಳಿಕೆ ನೀಡಿದ್ದಾರೆ.

ಈ ಹಿಂದೆ ತಾವು ಡೇಟಿಂಗ್ ಮಾಡುವಾಗ ಶಿಖರ್ ಜೊತೆ ಯಾಕೆ ಬ್ರೇಕ್ ಅಪ್ ಆದರು ಎಂದು ಜಾಹ್ನವಿ ಹೇಳಿದ್ದಿ ಹೀಗೆ. ʻʻಒಂದೆರಡು ವರ್ಷಗಳಲ್ಲಿ, ಪ್ರತಿ ತಿಂಗಳು ನಾನು ಶಿಖರ್ ಜೊತೆ ಬ್ರೇಕಪ್‌ ಮಾಡಿಕೊಳ್ಳುತ್ತಿದ್ದೆ. ಮೊದಲ ಎರಡ್ಮೂರು ತಿಂಗಳು ಶಾಕ್ ಆದ್ರೂ ಆಮೇಲೆ ‘ಹೌದು ಓಕೆ’ ಅಂತ ಎರಡು ದಿನಗಳ ನಂತರ ಅಳುತ್ತಾ ಸಾರಿ ಹೇಳಿ ಅವನ ಬಳಿ ಹೋಗುತ್ತಿದ್ದೆ. ನನ್ನ ಮೆದುಳು ಏಕೆ ಈ ರೀತಿ ಕೆಲಸ ಮಾಡುತ್ತಿದೆ ಎಂದು ನನಗೆ ಅರ್ಥವಾಗುತ್ತಿರಲಿಲ್ಲʼʼಎಂದರು.

ಇದಕ್ಕೆಲ್ಲ ಕಾರಣ ಮುಟ್ಟು. ʻʻಮುಟ್ಟಿನ ಆರಂಭದಲ್ಲಿ ನನ್ನ ಮನಸ್ಸಿ ಹಿಡಿತಕ್ಕೆ ಸಿಗುತ್ತಿರಲಿಲ್ಲ. ಪ್ರತಿ ತಿಂಗಳ ಮುಟ್ಟಿನ ವೇಳೆ ಲವ್ ಬ್ರೇಕ್ ಅಪ್ ಆಗುತ್ತಿತ್ತು. ಪ್ರತಿ ತಿಂಗಳು ಈ ರೀತಿ ಯಾಕೆ ಅನ್ನೋದೇ ತಿಳಿಯದಾಗಿತ್ತು. ಈ ಸಂದರ್ಭಗಳು ವಿಪರೀತವಾಗಿತ್ತು ಎಂದು ಜಾಹ್ನವಿ ಹೇಳಿದ್ದಾರೆ. ಮುಟ್ಟಿನ ಸಂದರ್ಭದಲ್ಲಿ ಈ ಪ್ರೀತಿ ಯಾಕೆ ? ಬ್ರೇಕ್ ಅಪ್ ಮಾಡಿಕೊಳ್ಳಬೇಕು ಎನಿಸುತ್ತಿತ್ತು. ಹೀಗಾಗಿ ಆತನೊಂದಿಗೆ ಬ್ರೇಕ್ ಮಾಡಿಕೊಳ್ಳುತ್ತಿದ್ದೆ. ಕನಿಷ್ಠ 2 ರಿಂದ 3 ತಿಂಗಳು ಸಮಸ್ಯೆ ಎದುರಾಗುತ್ತಿತ್ತು. ವಿಪರ್ಯಾಸ ಎಂದರೆ ಪ್ರತಿ ತಿಂಗಳ ಮುಟ್ಟಿನ ವೇಳೆ ಇದೇ ರೀತಿ ಆಗುತ್ತಿತ್ತು. ಬಳಿಕ ಕೊಂಚ ಸುಧಾರಿಸಿಕೊಂಡ ಬಳಿಕ ಮತ್ತೆ ಆತನ ಬಳಿ ಸಾರಿ ಕೇಳುತ್ತಿದ್ದೆ. ಆರಂಭಿಕ ಕೆಲ ವರ್ಷಗಳ ಕಾಲ ಹೀಗೆ ಮಂದುವರಿದಿತ್ತು. ಮುಟ್ಟು ಎಂದರೆ ಮಾನಸಿಕವಾಗಿ ಕುಗ್ಗಿ ಹೋಗಿದ್ದೆʼʼ ಎಂದು ಜಾಹ್ನವಿ ಕಪೂರ್ ಹೇಳಿದ್ದಾರೆ.

ಇದನ್ನೂ ಓದಿ: Janhvi Kapoor: ಅಂಬಾನಿ ಮದುವೆ ಬಳಿಕ ಆಸ್ಪತ್ರೆಗೆ ದಾಖಲಾದ ಜಾಹ್ನವಿ ಕಪೂರ್!

ನಟಿ ಶಿಖರ್ ಅವರೊಂದಿಗೆ ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ನಂತರ ಅವರು ಶಶಾಂಕ್ ಖೈತಾನ್ ಅವರ 2018 ರ ರೊಮ್ಯಾಂಟಿಕ್ ಡ್ರಾಮಾ ಧಡಕ್ ಅನ್ನು ಚಿತ್ರೀಕರಿಸುತ್ತಿರುವಾಗ ಅವರು ತಮ್ಮ ಮೊದಲ ಸಹನಟ ಇಶಾನ್ ಖಟ್ಟರ್ ಅವರೊಂದಿಗೆ ಡೇಟ್ ಮಾಡಿದರು. ಇಶಾನ್ ಜೊತೆಗಿನ ಬ್ರೇಕ್ ಅಪ್ ಆದ ನಂತರ ಶಿಖರ್ ಜತೆ ಮತ್ತೆ ಕಾಣಿಸಿಕೊಂಡರು. ಜಾನ್ವಿ ತಮ್ಮ ಮುಂದಿನ ಚಿತ್ರ ʻಉಲಾಜ್ʼ ಬಿಡುಗಡೆಗೆ ಸಜ್ಜಾಗಿದ್ದಾರೆ.

ಯಾರು ಈ ಶಿಖರ್‌?

ಶಿಖರ್ ಪಹಾರಿಯಾ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ವರದಿಗಳ ಪ್ರಕಾರ ಶಿಖರ್ ಮತ್ತು ಜಾನ್ವಿ ಈ ಹಿಂದೆಯೇ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ವೈಮನಸ್ಸು ಮೂಡಿ ಬೇರ್ಪಟ್ಟಿದ್ದರು. ಕಳೆದ ವರ್ಷ ಮತ್ತೆ ಇಬ್ಬರೂ ಒಂದಾಗಿದ್ದಾರೆ ಎನ್ನಲಾಗಿದೆ. ಶಿಖರ್ ಹಲವು ಬಾರಿ ಬೋನಿ ಕಪೂರ್ ಜತೆಗೆ ನಿಂತು ಪೋಸ್ ಕೊಟ್ಟಿದ್ದಾರೆ.

Continue Reading

ಬಾಲಿವುಡ್

Salman Khan: ಅಂಬಾನಿ ಮದುವೆಯಲ್ಲಿ ಕಿಮ್ ಕರ್ದಾಶಿಯಾನ್ ಮೇಲೆ ಕಣ್ಣು ಹಾಕಿದ್ರಾ ಸಲ್ಮಾನ್ ಖಾನ್? ವಿಡಿಯೊ ವೈರಲ್!

Salman Khan: ಜಿಯೋ ಕನ್ವೆನ್ಷನ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಅವರ ಅದ್ಧೂರಿ ವಿವಾಹದಲ್ಲಿ ಸಲ್ಮಾನ್‌ ಭಾಗಿಯಾಗಿದ್ದರು.ಜತೆಗೆ ಸಲ್ಮಾನ್‌ ತಮ್ಮ ಪ್ರೀತಿ ವಿಚಾರವಾಗಿಯೂ ಸುದ್ದಿಯಾಗಿದ್ದರು. ಸಲ್ಲು ಜೊತೆ ಮಾಜಿ ಗೆಳತಿ ಯುಲಿಯಾ ವಂಟೂರ್ ( Iulia Vantur) ಅವರು ಈ ಕಾರ್ಯಕ್ರಮದಲ್ಲಿ ಮಿಂಚಿದ್ದರು.

VISTARANEWS.COM


on

Salman Khan caught staring at Kim Kardashian in unseen Ambani
Koo

ಬೆಂಗಳೂರು: ಜುಲೈ 12ರಂದು ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ಅದ್ಧೂರಿ ವಿವಾಹದಲ್ಲಿ ʻಕಿಮ್ ಕರ್ದಾಶಿಯಾನ್ʼ (Kim Kardashian) ಮತ್ತು ಸಹೋದರಿ ಖ್ಲೋಯ್ ಕಾರ್ಡಶಿಯಾನ್ ಭಾಗವಹಿಸಿದ್ದರು. ʻಕಿಮ್ ಕರ್ದಾಶಿಯಾನ್ʼಮದುವೆಯಲ್ಲಿ ಗಮನ ಸೆಳೆದರು. ನಟ ಸಲ್ಮಾನ್​ ಖಾನ್ (Salman Khan) ಅವರು ಈ ಮದುವೆಗೆ ಹಾಜರಿ ಹಾಕಿದ್ದರು. ಅವರ ಒಂದು ವಿಡಿಯೊ ಈಗ ವೈರಲ್​ ಆಗಿದೆ. ಇದರಲ್ಲಿ ಅವರು ವಿದೇಶಿ ಬೆಡಗಿ ಕಿಮ್​ ಕರ್ದಾಶಿಯಾನ್​ ಅವರನ್ನು ಕಣ್ಣರಳಿಸಿ ನೋಡುತ್ತಿರುವ ದೃಶ್ಯ ಸೆರೆಯಾಗಿದೆ. ಅದನ್ನು ನೋಡಿ ನೆಟ್ಟಿಗರು ಹಲವು ಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಬೋಲ್ಡ್ ಆದ ಡ್ರೆಸ್‌ನಲ್ಲಿ ಮಿಂಚ್ತಿದ್ದ ಕಿಮ್ ಕಿಮ್ ಕರ್ದಾಶಿಯಾನ್, ಓಡಾಡುತ್ತಿದ್ದರು. ಹೀಗೆ ಕಿಮ್ ಕರ್ದಾಶಿಯಾನ್ ಓಡಾಡುವಾಗ ಅವರ ಸಮೀಪದಲ್ಲಿಯೇ ಸಲ್ಮಾನ್ ಖಾನ್ ಬಂದಿದ್ದಾರೆ. ಈ ಸಮಯದಲ್ಲಿ ಸಲ್ಮಾನ್​ಖಾನ್​ ಅಚ್ಚರಿ ತುಂಬಿದ ಕಂಗಳಿಂದ ಕಿಮ್ ಕರ್ದಾಶಿಯಾನ್ಅ ವರನ್ನು ಕಣ್ತುಂಬಿಕೊಂಡಿದ್ದಾರೆ. “ಸಲ್ಮಾನ್ ಭಾಯ್ (ಸಹೋದರ) 4kನಲ್ಲಿ ಸಿಕ್ಕಿಬಿದ್ದರು.” ಎಂದು ನೆಟ್ಟಿಗರು ಇದೀಗ ವಿಡಿಯೊ ವೈರಲ್‌ ಮಾಡುತ್ತಿದ್ದಾರೆ. ಒಂದು ಸೆಕೆಂಡ್​ನ ವಿಡಿಯೋವನ್ನು ಈ ರೀತಿ ಸ್ಲೋ ಮೋಷನ್​ನಲ್ಲಿ ತೋರಿಸಿದರೆ ಖಂಡಿತವಾಗಿ ಅಪಾರ್ಥ ಆಗುತ್ತದೆ ಎಂದು ಸಲ್ಮಾನ್​ ಖಾನ್​ ಪರವಾಗಿ ಅಭಿಮಾನಿಗಳು ಬ್ಯಾಟ್ ಬೀಸಿದ್ದಾರೆ. 

ಜುಲೈ 11 ರಂದು, ಕಿಮ್ ಮತ್ತು ಸಹೋದರಿ ಖ್ಲೋಯ್ ಅನಂತ್ ಮತ್ತು ರಾಧಿಕಾ ಅವರ ಬಹು-ದಿನಗಳ ವಿವಾಹ ಮಹೋತ್ಸವಕ್ಕಾಗಿ ಮುಂಬೈಗೆ ಆಗಮಿಸಿದರು. ಅವರನ್ನು ಸಾಂಪ್ರದಾಯಿಕವಾಗಿ ಆರತಿ ಮೂಲಕ ಕಾರ್ಯಕ್ರಮದೊಂದಿಗೆ ಸ್ವಾಗತಿಸಲಾಯಿತು.

ಇದನ್ನೂ ಓದಿ: Actor Yash: ಯಶ್‌ ಹೊಸ ಹೇರ್‌ ಸ್ಟೈಲ್‌ ಯಾವ ಸಿನಿಮಾಗಾಗಿ? ಕೇಶ ವಿನ್ಯಾಸಕ ಕೊಟ್ಟೇ ಬಿಟ್ರು ಬಿಗ್‌ ಅಪ್‌ಡೇಟ್‌!

Salman Bhai caught in 4k .
byu/DressWonderful5396 inBollyBlindsNGossip

ಜಿಯೋ ಕನ್ವೆನ್ಷನ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಅವರ ಅದ್ಧೂರಿ ವಿವಾಹದಲ್ಲಿ ಸಲ್ಮಾನ್‌ ಭಾಗಿಯಾಗಿದ್ದರು.ಜತೆಗೆ ಸಲ್ಮಾನ್‌ ತಮ್ಮ ಪ್ರೀತಿ ವಿಚಾರವಾಗಿಯೂ ಸುದ್ದಿಯಾಗಿದ್ದರು. ಸಲ್ಲು ಜೊತೆ ಮಾಜಿ ಗೆಳತಿ ಯುಲಿಯಾ ವಂಟೂರ್ ( Iulia Vantur) ಅವರು ಈ ಕಾರ್ಯಕ್ರಮದಲ್ಲಿ ಮಿಂಚಿದ್ದರು.

ಸಲ್ಮಾನ್ ಮಾಜಿ ಗೆಳತಿ ಯುಲಿಯಾ ವಂಟೂರ್ ಗೋಲ್ಡನ್ ಸೀರೆಯಲ್ಲಿ ಅಂಬಾನಿ ಮದುವೆಯಲ್ಲಿ ಮಿಂಚಿದ್ದರು. ಸಲ್ಮಾನ್ ಮತ್ತು ಯೂಲಿಯಾ ಇಬ್ಬರೂ ಭಾಗಿಯಾಗಿದ್ದು, ಇನ್ನೂ ರಿಲೇಶನ್​ಶಿಪ್​ನಲ್ಲಿದ್ದಾರಾ ಎನ್ನುವ ಪ್ರಶ್ನೆ ನೆಟ್ಟಿಗರಿಗೆ ಕಾಡಿತ್ತು. ಇತ್ತೀಚೆಗೆ, ಅನಂತ್ ಮತ್ತು ರಾಧಿಕಾ ಅವರ ಸಂಗೀತ ಕಾರ್ಯಕ್ರಮದಲ್ಲಿ “ಓ ಓ ಜಾನೆ ಜಾನಾ” ಹಾಡಿಗೆ ಒಟ್ಟಿಗೆ ನೃತ್ಯ ಮಾಡಿರುವ ವಿಡಿಯೊ ಕೂಡ ವೈರಲ್‌ ಆಗಿತ್ತು.

Continue Reading

ಬಾಲಿವುಡ್

SS Rajamouli: ರಾಜಮೌಳಿಯನ್ನು ಜ್ಯೂನಿಯರ್‌ ಎನ್‌ಟಿಆರ್‌ ʻಮ್ಯಾಡ್‌ ಮ್ಯಾನ್‌ʼ ಎಂದು ಕರೆದಿದ್ದೇಕೆ? ವಿಡಿಯೊದಲ್ಲಿ ಏನಿದೆ?

SS Rajamouli: ರಾಜಮೌಳಿ ನಿರ್ದೇಶನದ ಚಿತ್ರಗಳ ತೆರೆಮರೆಯ ದೃಶ್ಯಗಳು ಇದರಲ್ಲಿವೆ. ಮಾತ್ರವಲ್ಲ ಜ್ಯೂನಿಯರ್‌ ಎನ್‌ಟಿಆರ್‌, ರಾಮ್‌ಚರಣ್‌, ಜೇಮ್ಸ್ ಕ್ಯಾಮರೂನ್ ಸೇರಿದಂತೆ SS ರಾಜಮೌಳಿ ಅವರ ಕುರಿತು ಮಾತನಾಡಿದ್ದಾರೆ.

VISTARANEWS.COM


on

SS Rajamouli Modern Masters Official Trailer Netflix India
Koo

ಬೆಂಗಳೂರು: ಆರ್‌ಆರ್‌ಆರ್‌, ಬಾಹುಬಲಿ ಮತ್ತು ಮಗಧೀರಗಳಂತಹ ಹಿಟ್‌ ಚಿತ್ರಗಳ ನಿರ್ದೇಶಕ SS ರಾಜಮೌಳಿ ಅವರ ಹೊಸ ಸಾಕ್ಷ್ಯಚಿತ್ರದ ಟ್ರೈಲರ್‌ ನೆಟ್‌ಫ್ಲಿಕ್ಸ್‌ ಬಿಡುಗಡೆಗೊಳಿಸಿದೆ. ʻಮಾಡರ್ನ್ ಮಾಸ್ಟರ್ಸ್ʼ ಎಂಬ ಶೀರ್ಷಿಕೆಯ ಅಡಿ ಟ್ರೈಲರ್ ಅನಾವರಣಗೊಂಡಿದೆ. ರಾಜಮೌಳಿ ನಿರ್ದೇಶನದ ಚಿತ್ರಗಳ ತೆರೆಮರೆಯ ದೃಶ್ಯಗಳು ಇದರಲ್ಲಿವೆ. ಮಾತ್ರವಲ್ಲ ಜ್ಯೂನಿಯರ್‌ ಎನ್‌ಟಿಆರ್‌, ರಾಮ್‌ಚರಣ್‌, ಜೇಮ್ಸ್ ಕ್ಯಾಮರೂನ್ ಸೇರಿದಂತೆ SS ರಾಜಮೌಳಿ ಅವರ ಕುರಿತು ಮಾತನಾಡಿದ್ದಾರೆ.

ಟ್ರೈಲರ್‌ನಲ್ಲಿ ಏನಿದೆ?

ಮೊದಲಿಗೆ ರಾಜಮೌಳಿ ಅಂದರೆ ಹೇಗೆ? ಎಂಬ ಪರಿಚಯ ಹಿನ್ನೆಲೆ ಧ್ವನಿಯಲ್ಲಿ ಮೂಡಿ ಬಂದಿದೆ. ಟ್ರೈಲರ್‌ನಲ್ಲಿ ʻʻನಾನು ನಂಬಲಾಗದ ಕಥೆಯನ್ನು ಹೇಳಲು ಬಯಸುತ್ತೇನೆ. ಜನರು ಸಿನಿಮಾದಲ್ಲಿ ಹೂಡಿಕೆ ಮಾಡಬೇಕೆಂದು ನಾನು ಬಯಸುತ್ತೇನೆ. ನಿರ್ದೇಶಕರ ಮೇಕಿಂಗ್ ಮತ್ತು ಅವರ ಚಲನಚಿತ್ರಗಳು ಪ್ರೇಕ್ಷಕರ ನಾಡಿಮಿಡಿತವನ್ನು ಹೇಗೆ ಮನ ಮುಟ್ಟಿದೆ ಎಂಬುದರ ಕುರಿತು ಒಂದು ನೋಟ ಇದರಲ್ಲಿ ಇದೆ. ಇದು ನಟರು, ತಂತ್ರಜ್ಞರು ಮತ್ತು ಕುಟುಂಬದ ಸದಸ್ಯರನ್ನು ಒಳಗೊಂಡ ಸಾಕ್ಷ್ಯಚಿತ್ರʼʼಎಂದಿದೆ.

ಟ್ರೈಲರ್‌ ಮಧ್ಯೆ ಅನೇಕ ನಟರು, ನಿರ್ದೇಶರು ರಾಜಮೌಳಿ ಅವರನ್ನು ಹೊಗಳಿದ್ದು ಹೀಗೆ. ಜ್ಯೂನಿಯರ್‌ ಎನ್‌ಟಿಆರ್‌ ಕೂಡ ರಾಜಮೌಳಿ ಅವರನ್ನು ಹೊಗಳಿದ್ದಾರೆ. ʻʻರಾಜಮೌಳಿ ಹುಟ್ಟಿದ್ದೆ ಸಿನಿಮಾ ಮಾಡಲು ಹಾಗೂ ಹೇಳದ ಕಥೆಗಳನ್ನು ಹೇಳಲು .ಸಿನಿಮಾದಲ್ಲಿನ ಅವರ ಸಮರ್ಪಣೆಗಾಗಿ ಅವರನ್ನುʻಮ್ಯಾಡ್‌ ಮ್ಯಾನ್‌ʼʼ ಎನ್ನಬಹುದು. ʻʻರಾಜಮೌಳಿ ಜೊತೆ ವಾದ ಮಾಡುವುದರಲ್ಲಿ ಅರ್ಥವಿಲ್ಲ. ಅವರು ಬಯಸಿದ್ದನ್ನು ಮಾತ್ರ ತಲುಪಿಸಿ.” ಎಂದು ಹೇಳಿಕೊಂಡಿದ್ದಾರೆ. ಬಾಹುಬಲಿಯಲ್ಲಿ ನಟಿಸಿರುವ ಪ್ರಭಾಸ್ ಹೀಗೆ ಹೇಳುತ್ತಾರೆ: “ನಾನು ಅಂತಹ ವ್ಯಕ್ತಿಯನ್ನು ಭೇಟಿ ಮಾಡಿಲ್ಲ. ಅವರೊಬ್ಬರು ʻʻಮ್ಯಾಡ್‌ ಪರ್ಸನ್‌ ಅಷ್ಟೇ.”ಎಂದಿದ್ದಾರೆ.

ಇದನ್ನೂ ಓದಿ: Niveditha Shivarajkumar: ʻಫೈರ್ ಫ್ಲೈ’ ಸಿನಿಮಾಗೆ ‘ಹೆಂಗೆ ನಾವು’ ಹುಡುಗಿ ನಾಯಕಿ! ಯಾವಾಗ ತೆರೆಗೆ?

ʻʻರಾಜಮೌಳಿ ಈಗಾಗಲೇ ‘ಲೆಜೆಂಡ್’ ಆಗಿದ್ದಾರೆ ಮತ್ತು ಇನ್ನು ಮುಂದೆ ಅವರ ವೃತ್ತಿಜೀವನದಲ್ಲಿ ಇನ್ನೂ ದೊಡ್ಡ ದಂತಕಥೆಯಾಗುತ್ತಾರೆʼʼ ಎಂದು ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಹೇಳುತ್ತಾರೆ. ಟೈಟಾನಿಕ್ ಮತ್ತು ಅವತಾರ್ ಅನ್ನು ನಿರ್ಮಿಸಿದ ಅಕಾಡೆಮಿ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಜೇಮ್ಸ್ ಕ್ಯಾಮರೂನ್ ಸಹ ರಾಜಮೌಳಿ ಕುರಿತು ಹೇಳಿದ್ದು ಹೀಗೆ “ಯಾವುದೇ ಕೆಲಸವನ್ನು ಮಾಡಲು ಮತ್ತು ಯಾರೊಂದಿಗಾದರೂ ಕೆಲಸ ಮಾಡಲು ಅವರಿಗೆ ಅಷ್ಟೇ ಗೌರವವಿದೆ.”ಎಂದಿದ್ದಾರೆ.

SS ರಾಜಮೌಳಿಯವರ ಕೊನೆಯ ಚಿತ್ರ RRR. ಈ ಸಿನಿಮಾ ಜಾಗತಿಕ ಮನ್ನಣೆಯನ್ನು ಗಳಿಸಿತು ಮತ್ತು ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿತು. ಎಂಎಂ ಕೀರವಾಣಿ ಅವರು ನಾಟು ನಾಟು ಗಾಗಿ ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡರ., ಹಾಗೆಯೇ ಏಷ್ಯನ್ ಚಲನಚಿತ್ರದ ವಿಭಾಗದಲ್ಲಿ ಗೆದ್ದ ಮೊದಲ ಹಾಡು. ರಾಘವ್ ಖನ್ನಾ ನಿರ್ದೇಶಿಸಿದ ಮತ್ತು ಅನುಪಮಾ ಚೋಪ್ರಾ ನಿರ್ಮಿಸಿದ ಸಾಕ್ಷ್ಯಚಿತ್ರದ ʻಮಾಡರ್ನ್ ಮಾಸ್ಟರ್ಸ್ʼ ಆಗಸ್ಟ್ 2 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

Continue Reading

ಬಾಲಿವುಡ್

Priyanka Chopra: ʻದಿ ಬ್ಲಫ್‌ʼ ಸೆಟ್‌ನಿಂದ ಲೀಕ್‌ ಆಯ್ತು ಪ್ರಿಯಾಂಕಾ ಲುಕ್‌; ನಟಿಯ ಹೇರ್ ಸ್ಟೈಲ್ ಸೆಂಟರ್ ಆಫ್ ಅಟ್ರ್ಯಾಕ್ಷನ್!

Priyanka Chopra: ಇದೀಗ ನಟಿಯ ಚಿತ್ರದ ಶೂಟಿಂಗ್‌ ಸೆಟ್‌ನ ಕೆಲವು ದೃಶ್ಯಗಳು ಲೀಕ್‌ ಆಗಿವೆ. ಚಿತ್ರೀಕರಣದಲ್ಲಿರುವ ನಟಿಯ ಲುಕ್‌ನ ಫೋಟೊ ಲೀಕ್‌ ಆಗಿದೆ. ʻದಿ ಬ್ಲಫ್‌ʼಸಿನಿಮಾದಲ್ಲಿ ನಟಿ ಮುಂದೆ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

VISTARANEWS.COM


on

Priyanka Chopra pirate look with mohawk leaked
Koo

ಬೆಂಗಳೂರು: ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ ನಂತರ, ತಮ್ಮ ಮುಂದಿನ ಹಾಲಿವುಡ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯಸಿಯಾಗಿದ್ದಾರೆ. ಆಸ್ಟ್ರೇಲಿಯಾಗೆ ಶೂಟಿಂಗ್‌ ಸಂಬಂಧ ಮರಳಲು ಮದುವೆಯ ಕೆಲವು ಕಾರ್ಯಕ್ರಮಗಳಲ್ಲಿಯೂ ನಟಿ ಭಾಗಿಯಾಗಿರಲಿಲ್ಲ. ಇದೀಗ ನಟಿಯ ಚಿತ್ರದ ಶೂಟಿಂಗ್‌ ಸೆಟ್‌ನ ಕೆಲವು ದೃಶ್ಯಗಳು ಲೀಕ್‌ ಆಗಿವೆ. ಚಿತ್ರೀಕರಣದಲ್ಲಿರುವ ನಟಿಯ ಲುಕ್‌ನ ಫೋಟೊ ಲೀಕ್‌ ಆಗಿದೆ. ʻದಿ ಬ್ಲಫ್‌ʼಸಿನಿಮಾದಲ್ಲಿ ನಟಿ ಮುಂದೆ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ʻದಿ ಬ್ಲಫ್‌ʼನಲ್ಲಿ ಕಡಲುಗಳ್ಳರ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಸೋರಿಕೆಯಾದ ಚಿತ್ರಗಳಲ್ಲಿ ಕಪ್ಪು ಉಡುಪನ್ನು ಧರಿಸಿದ್ದಾರೆ. ಯುದ್ಧದ ಮೋಡ್‌ನಲ್ಲಿದ್ದಾರೆ. ಆದರೆ ನಯ ಫ್ಯಾನ್ಸ್‌ಗೆ ಗಮನ ಸೆಳೆದಿದ್ದು ಮಾತ್ರ ಹೇರ್ ಸ್ಟೈಲ್. ಲೀಕ್‌ ಆದ ಫೋಟೊದಲ್ಲಿ ಪ್ರಿಯಾಂಕ ವಿಭಿನ್ನವಾದ ಕೇಶವಿನ್ಯಾಸವನ್ನು ಹೊಂದಿದ್ದಾರೆ. , ಇದು 19 ನೇ ಶತಮಾನದ ಕೆರಿಬಿಯನ್ ಕಡಲುಗಳ್ಳರ ಲುಕ್‌ ಎನ್ನಲಾಗಿದೆ.

ʻದಿ ಬ್ಲಫ್’ 19 ನೇ ಶತಮಾನದ ಕೆರಿಬಿಯನ್‌ನ ಕಥೆ. ರುಸ್ಸೋ ಬ್ರದರ್ಸ್ ಬ್ಯಾನರ್ AGBO ಸ್ಟುಡಿಯೋಸ್ ಮತ್ತು ಅಮೆಜಾನ್ MGM ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರದಲ್ಲಿ ಕಾರ್ಲ್ ಅರ್ಬನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಒಂದೆರಡು ತಿಂಗಳಿನಿಂದ ಪ್ರಿಯಾಂಕಾ ಆಸ್ಟ್ರೇಲಿಯದಲ್ಲಿ ಚಿತ್ರದ ಶೂಟಿಂಗ್ ನಡೆಸುತ್ತಿದ್ದಾರೆ. ನಿಕ್ ಮತ್ತು ನಟಿಯ ತಾಯಿ ಮಧು ಚೋಪ್ರಾ, ಮಗಳು ಮಾಲತಿ ಕೂಡ ಭೇಟಿ ನೀಡುತ್ತಿರುತ್ತಾರೆ.

ಇದನ್ನೂ ಓದಿ: Priyanka Chopra: ಬೆಳ್ಳುಳ್ಳಿ ಎಸಳು ಪಾದಗಳಿಗೆ ಉಜ್ಜುವುದರಿಂದ ಏನು ಪ್ರಯೋಜನ? ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?

ಆಶ್ಚರ್ಯವೆಂದರೆ, ಪ್ರಿಯಾಂಕಾ ಅವರು ತಮ್ಮ ಜೀವನದಲ್ಲಿ ಎಂದಿಗೂ ನಟಿ ಆಗಬೇಕು, ಚಿತ್ರರಂಗಕ್ಕೆ ಬರಬೇಕು ಅಂತ ಕನಸು ಕಂಡವರಲ್ವಂತೆ. ನಟನೆಗೆ ಎಂಟ್ರಿ ಕೊಡುವ ಮೊದಲು ಜೀವನದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮದೇ ಆದ ವಿಭಿನ್ನ ಯೋಜನೆಗಳನ್ನು ಹೊಂದಿದ್ದರಂತೆ.

ಸ್ಟಾರ್ ವರ್ಲ್ಡ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, ಪ್ರಿಯಾಂಕಾ ಚೋಪ್ರಾ, “ಮಿಸ್ ಇಂಡಿಯಾ ಮತ್ತು ನಂತರ ವಿಶ್ವ ಸುಂದರಿ ಕಿರೀಟವನ್ನು ಪಡೆದ ನಾನು ಇದ್ದಕ್ಕಿದ್ದಂತೆ ಏರೋನಾಟಿಕಲ್ ಎಂಜಿನಿಯರ್ ಆಗಿ, ನಿರಾತಂಕವಾಗಿ ಹದಿಹರೆಯದವಳಾಗಿ ವಿಶ್ವ ವೇದಿಕೆಯಲ್ಲಿ ನಿಂತಿದ್ದೆ, ಅಲ್ಲಿ ವಿಶ್ವದ ಪ್ರಮುಖ ಘಟನೆಗಳ ಬಗ್ಗೆ ನನ್ನದೇ ಆದ ದೃಷ್ಟಿಕೋನವನ್ನು ಹೊಂದಿರಬೇಕಾಗಿತ್ತು” ಅಂತ ಹೇಳಿದ್ದರು.

Continue Reading
Advertisement
Khajjiar Tour
ಪ್ರವಾಸ4 mins ago

Khajjiar Tour: ಖಜ್ಜಿಯಾರ್! ಇದು ಹಿಮಾಲಯದ ತಪ್ಪಲಿನಲ್ಲಿರುವ ಮಿನಿ ಸ್ವಿಟ್ಜರ್ಲೆಂಡ್!

Allergies During Monsoon
ಆರೋಗ್ಯ28 mins ago

Allergies During Monsoon: ಮಳೆಗಾಲದಲ್ಲಿ ಅಲರ್ಜಿ ಸಮಸ್ಯೆಯಿಂದ ಪಾರಾಗುವುದು ಹೇಗೆ?

Dina Bhavishya
ಭವಿಷ್ಯ1 hour ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ಮಧುರ ಪ್ರೀತಿ ಸಿಗಲಿದೆ

INDIA Bloc To Protest
ದೇಶ7 hours ago

INDIA Bloc To Protest: ಬಜೆಟ್‌ ತಾರತಮ್ಯ ಖಂಡಿಸಿ ನಾಳೆ ಸಂಸತ್ತಿನಲ್ಲಿ ‘ಇಂಡಿಯಾ’ ಒಕ್ಕೂಟದಿಂದ ಪ್ರತಿಭಟನೆ

Paris Olympics
ಕ್ರೀಡೆ7 hours ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ಗೂ ವಕ್ಕರಿಸಿದ ಕೊರೊನಾ ಸೋಂಕು; ಮೊದಲ ಪ್ರಕರಣ ಪತ್ತೆ

Union Minister Pralhad Joshi statement about Union Budget
ಕರ್ನಾಟಕ8 hours ago

Pralhad Joshi: ನವಭಾರತ ನಿರ್ಮಾಣಕ್ಕೆ ಅತ್ಯುತ್ತಮ ಬಜೆಟ್: ಸಚಿವ ಪ್ರಲ್ಹಾದ್‌ ಜೋಶಿ ಶ್ಲಾಘನೆ

The Kaftan kannada Album Song Release
ಕರ್ನಾಟಕ8 hours ago

The Kaptan Song: ‘ದ ಕಪ್ತಾನ್’ ಆಲ್ಬಂ ಸಾಂಗ್ ಬಿಡುಗಡೆ

kimberly cheatle
ವಿದೇಶ8 hours ago

Kimberly Cheatle: ಯುಎಸ್ ಸೀಕ್ರೆಟ್ ಸರ್ವೀಸ್ ಡೈರೆಕ್ಟರ್ ಹುದ್ದೆಗೆ ಕಿಂಬರ್ಲಿ ಚೀಟಲ್ ದಿಢೀರ್​ ರಾಜೀನಾಮೆ

Womens Asia Cup
ಕ್ರೀಡೆ8 hours ago

Womens Asia Cup: ಶಫಾಲಿ ಬ್ಯಾಟಿಂಗ್​ ಆರ್ಭಟ; ಭಾರತಕ್ಕೆ ಹ್ಯಾಟ್ರಿಕ್​ ಜಯ

Farmer commits suicide in Kenchanala village
ಕರ್ನಾಟಕ9 hours ago

Farmer Self Harming: ಕೆಂಚನಾಲ ಗ್ರಾಮದಲ್ಲಿ ಸಾಲ ಬಾಧೆಯಿಂದ ರೈತ ಆತ್ಮಹತ್ಯೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ12 hours ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ13 hours ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ17 hours ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ4 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ5 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ5 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ6 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ6 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ1 week ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

ಟ್ರೆಂಡಿಂಗ್‌