Site icon Vistara News

Sidhu Moosewala: 58ನೇ ವಯಸ್ಸಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಹತ ಪಂಜಾಬಿ ಗಾಯಕನ ಅಮ್ಮ!

Sidhu Moosewala Parents Welcome Baby Boy

ಬೆಂಗಳೂರು: 2022ರಲ್ಲಿ ಬರ್ಬರವಾಗಿ ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ (Sidhu Moosewala) ಅವರ 58ವರ್ಷದ ತಾಯಿ ಚರಣ್ ಕೌರ್ (Charan Kaur) ಇದೀಗ ಗಂಡು ಮಗುವಿಗೆ ಜನ್ಮ (Punjabi singer Shubhdeep Singh Sidhu) ನೀಡಿದ್ದಾರೆ. ಮೂಸೆವಾಲಾ ಅವರ ತಂದೆ ಬಲ್ಕೌರ್ ಸಿಂಗ್ (Balkaur Singh) ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸಿಧು ಮೂಸೆವಾಲಾನ ಕಿರಿಯ ಸಹೋದರನಿಗೆ ಆಶೀರ್ವಾದ ಇರಲಿ ಎಂದು ಪೋಸ್ಟ್‌ ಮೂಲಕ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.

ಕಾಂಗ್ರೆಸ್‌ನಿಂದ ಚುನಾವಣಾ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಗಾಯಕ ಮೂಸೆವಾಲಾ ಅವರನ್ನು 2022ರ ಮೇ 29ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಗಾಯಕ ಹೆಣವಾಗಿದ್ದರು. ಇದು ಅವರ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನು ನೀಡಿತ್ತು. ಮೂಸೆವಾಲಾ ಅವರ ತಾಯಿಗೆ 58 ವರ್ಷವಾದರೆ, ಬಾಲ್ಕೌರ್ ಸಿಂಗ್ ಅವರಿಗೆ 60 ವರ್ಷ. ಈ ವಯಸ್ಸಿನಲ್ಲಿ ಗಂಡು ಮಗುವಿಗೆ ಪೋಷಕರಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಅವರ ಕುಟುಂಬದ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡಿತ್ತು. ಮೂಸೆವಾಲಾ ಅವರ ಪೋಷಕರು ಹೊಸ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 58 ವರ್ಷದ ತಾಯಿ ಗರ್ಭಿಣಿಯಾಗಿದ್ದಾರೆ ಎನ್ನಲಾಗಿತ್ತು. ಆದರೆ ಇದು ಸುಳ್ಳು ಸುದ್ದಿ ಎಂದು ವರದಿಯಾಗಿತ್ತು.

ಇದನ್ನೂ ಓದಿ: Sidhu MooseWala: ಪಂಜಾಬಿ ಸಿಂಗರ್ ಸಿಧು ಮೂಸೆವಾಲಾ ಗುಂಡಿಗೆ ಬಲಿ

ಪಂಜಾಬ್‌ನ ಮಾನ್ಸಾ ಜಿಲ್ಲೆಯ ಜವಾಹರ್ ಕೆ ಗ್ರಾಮದಲ್ಲಿ ಈ ಭೀಕರ ಹತ್ಯಾಕಾಂಡ ನಡೆದಿತ್ತು. ಸಿಧು ಅವರ ಕಾರಿನ ಮೇಲೆ ಅಪರಿಚಿತ ದುಷ್ಕರ್ಮಿಗಳು 30ಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸಿದ್ದರು ಒಟ್ಟು 8 ಗುಂಡುಗಳು ಇವರ ದೇಹವನ್ನು ಹೊಕ್ಕಿದ್ದವು. ಈ ಘಟನೆಯಲ್ಲಿ ಇತರ ಇಬ್ಬರೂ ಗಾಯಗೊಂಡಿದ್ದರು.

30 ವರ್ಷದ ಸಿಧು ಅವರ ಪೂರ್ಣ ಹೆಸರು ಶುಭದೀಪ್ ಸಿಂಗ್ ಸಿಧು. ಮೂಸೆವಾಲಾ ಅನ್ನೋದು ಅವರ ಗ್ರಾಮದ ಹೆಸರು. ಇವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಮುಗಿಸಿದ ಬಳಿಕ ಕೆಲ ಕಾಲ ಇವರು ಕೆನಡಾದಲ್ಲಿದ್ದರು. ತಮ್ಮ ಕಾಲೇಜು ದಿನಗಳಲ್ಲೇ ಸಂಗೀತ ಸಂಯೋಜನೆ ಮತ್ತು ಹಾಡಿನ ಪಟ್ಟುಗಳನ್ನು ಕಲಿತು ಮಿಂಚಿದ್ದರು.

ಸಿಧು ಮೂಸೆ ವಾಲಾ ಮಾಡಿದ್ದ ಕಿತಾಪತಿಗಳೇನೂ ಕಡಿಮೆ ಇರಲಿಲ್ಲ. ಹಲವಾರು ಆಕ್ಷೇಪಾರ್ಹ ಹಾಡುಗಳಿಂದ ಇವರು ವಿವಾದಕ್ಕೆ ತುತ್ತಾಗಿದ್ದರು. ತಮ್ಮ ಅನೇಕ ಹಾಡುಗಳಲ್ಲಿ ಗನ್ ಸಂಸ್ಕೃತಿಯನ್ನು ಪ್ರತಿಪಾದಿಸಿದ್ದರು.

Exit mobile version