Site icon Vistara News

Sonakshi Sinha: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸೋನಾಕ್ಷಿ ಸಿನ್ಹಾ-ಜಹೀರ್‌ ಇಕ್ಬಾಲ್;‌ Photos ಇಲ್ಲಿವೆ

Sonakshi Sinha

Sonakshi Sinha Marries Zaheer Iqbal In An Intimate Ceremony, Wedding Photos Are Here

ಮುಂಬೈ: ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರು ತಮ್ಮ ದೀರ್ಘಕಾಲದ ಗೆಳೆಯ ಜಹೀರ್‌ ಇಕ್ಬಾಲ್‌ (Zaheer Iqbal) ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಎರಡೂ ಕುಟುಂಬಗಳ ಆಪ್ತರು, ಗೆಳೆಯರ ಸಮ್ಮುಖದಲ್ಲಿ ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್‌ ಇಕ್ಬಾಲ್‌ ಅವರು ಮದುವೆಯಾಗಿದ್ದು, ಮದುವೆಯ ಫೋಟೊಗಳನ್ನು ಸೋನಾಕ್ಷಿ ಸಿನ್ಹಾ ಅವರೇ ಹಂಚಿಕೊಂಡಿದ್ದಾರೆ. ಸೋನಾಕ್ಷಿ ಸಿನ್ಹಾ ಮದುವೆಯ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.

ಸೋನಾಕ್ಷಿ ಸಿನ್ಹಾ ಅವರು ಫೋಟೊಗಳನ್ನು ಹಂಚಿಕೊಂಡಿರುವ ಜತೆಗೆ ಭಾವನಾತ್ಮಕವಾಗಿ ಪೋಸ್ಟ್‌ ಮಾಡಿದ್ದಾರೆ. “ಏಳು ವರ್ಷದ ಹಿಂದಿನ ಇದೇ ದಿನ ಅಂದರೆ, 2017ರ ಜೂನ್‌ 23ರಂದು ನಮ್ಮಿಬ್ಬರ ಕಣ್ಣುಗಳು ಮೊದಲ ಬಾರಿ ಸಂಧಿಸಿದವು. ಆ ಕಣ್ಣುಗಳ ನೋಟದಲ್ಲಿಯೇ ನಾವು ನಿಜವಾದ ಪ್ರೇಮವನ್ನು ಕಂಡೆವು ಹಾಗೂ ಆ ಪ್ರೀತಿ ತುಂಬಿದ ನೋಟವನ್ನು ಜೀವನಪೂರ್ತಿ ಸವಿಯಲು ನಿರ್ಧರಿಸಿದೆವು. ಸವಾಲುಗಳನ್ನು ಎದುರಿಸಿ, ದೇವರು ಹಾಗೂ ಕುಟುಂಬಸ್ಥರ ಆಶೀರ್ವಾದದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ. ಮುಂದಿನ ದಿನಗಳಲ್ಲೂ ಪ್ರೀತಿಯು ನಮ್ಮ ಜೀವನವನ್ನು ಇನ್ನಷ್ಟು ಸುಂದರಗೊಳಿಸುತ್ತದೆ ಎಂಬ ನಂಬಿಕೆ ಇದೆ” ಎಂಬುದಾಗಿ ಅವರು ಬರೆದುಕೊಂಡಿದ್ದಾರೆ.

ಶುಭ ಕೋರಲು ಆಗದೆ ಅಭಿಮಾನಿಗಳಿಗೆ ನಿರಾಸೆ

ಕ್ರೀಮ್‌ ಬಣ್ಣದ ಸೀರೆಯಲ್ಲಿ ಸೋನಾಕ್ಷಿ ಸಿನ್ಹಾ ಹಾಗೂ ಕುರ್ತಾದಲ್ಲಿ ಜಹೀರ್‌ ಇಕ್ಬಾಲ್‌ ಮಿಂಚಿದ್ದಾರೆ. ಸೋನಾಕ್ಷಿ ಅವರು ಜಹೀರ್‌ ಇಕ್ಬಾಲ್‌ ಅವರನ್ನು ತಬ್ಬಿಕೊಂಡರೆ, ಸೋನಾಕ್ಷಿ ಕೈಗೆ ಜಹೀರ್‌ ಸಿಹಿ ಮುತ್ತು ಕೊಟ್ಟಿದ್ದಾರೆ. ಆದರೆ, ಸೋನಾಕ್ಷಿ ಸಿನ್ಹಾ ಅವರು ಇನ್‌ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಹಂಚಿಕೊಂಡು, ಪೋಸ್ಟ್‌ಗೆ ಕಮೆಂಟ್‌ಗಳನ್ನು ಬ್ಲಾಕ್‌ ಮಾಡಿದ ಕಾರಣ ಅಭಿಮಾನಿಗಳಿಗೆ ಶುಭಾಶಯ ತಿಳಿಸಲು ಆಗಿಲ್ಲ. ಇದರಿಂದಾಗಿ ಅಭಿಮಾನಿಗಳಿಗೆ ತುಸು ನಿರಾಸೆಯಾಗಿದೆ ಎಂದು ತಿಳಿದುಬಂದಿದೆ.

ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್‌ ಇಕ್ಬಾಲ್‌ ಅವರು ಹಿಂದು ಅಥವಾ ಇಸ್ಲಾಂ ಸಂಪ್ರದಾಯದಂತೆ ಮದುವೆಯಾಗದೆ, ಜಹೀರ್‌ ಅವರ ತಂದೆ ಇಕ್ಬಾಲ್‌ ರತಾನ್ಸಿ ಅವರು ಇದಕ್ಕೂ ಮೊದಲು ಹೇಳಿದಂತೆ ‘ನಾಗರಿಕʼ ಸಂಪ್ರದಾಯದಂತೆ ಅಂದರೆ, ಸಾಮಾನ್ಯವಾಗಿ ಮದುವೆಯಾಗಿದ್ದಾರೆ. ಇಬ್ಬರೂ ತಮ್ಮ ವಿವಾಹವನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ. ಇನ್ನು, ಆರಂಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ಸೋನಾಕ್ಷಿ ಸಿನ್ಹಾ ಅವರ ತಂದೆ ಶತ್ರುಘ್ನ ಸಿನ್ಹಾ ಅವರು ಮುನಿಸು ಮರೆತು, ನವದಂಪತಿಗೆ ಆಶೀರ್ವಾದ ಮಾಡಿದ್ದಾರೆ.

ಕಳೆದ ಎರಡು ವಾರದ ಹಿಂದಷ್ಟೇ ಸೋನಾಕ್ಷಿ ಅವರು ತಮ್ಮ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರನ್ನು ವರಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದು, ಬಳಿಕ ಇದನ್ನು ಮದುವೆಯ ಆಮಂತ್ರಣವು ದೃಢಪಡಿಸಿತ್ತು. ಸೋನಾಕ್ಷಿ ಏಳು ವರ್ಷಗಳಿಂದ ಜಹೀರ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆ. ಮದುವೆಯ ವದಂತಿಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ ಶತ್ರುಘ್ನ ಅವರು ಮದುವೆಯ ಬಗ್ಗೆ ತಿಳಿದಿರಲಿಲ್ಲ ಎಂದು ಒಪ್ಪಿಕೊಂಡಿದ್ದರು. ಆದರೆ, ಅವರು ಮುನಿಸು ಮರೆತು ಮದುವೆಗೆ ಹಾಜರಾಗಿ, ಆಶೀರ್ವಾದ ಮಾಡಿದ್ದಾರೆ.

ಇದನ್ನೂ ಓದಿ: Venkatesh Iyer Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ವೆಂಕಟೇಶ್​ ಅಯ್ಯರ್​

Exit mobile version