Site icon Vistara News

Sonakshi Sinha: ಮುಸ್ಲಿಂ ಯುವಕನ ಜತೆ ಸೋನಾಕ್ಷಿ ಸಿನ್ಹಾ ವಿವಾಹ; ತಾಯಿ, ಸಹೋದರನೂ ಮದುವೆಗೆ ಹೋಗಲ್ಲ?

Sonakshi Sinha

Sonakshi Sinha's Mom Poonam, Brother Luv Do Not Follow Her on Instagram, Spark Concern Ahead of Wedding

ಮುಂಬೈ: ಬಾಲಿವುಡ್ ನಟಿ (Bollywood Actress) ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಮುಸ್ಲಿಂ ಯುವಕ ಜಹೀರ್‌ ಇಕ್ಬಾಲ್‌ (Zaheer Iqbal) ಅವರ ಜತೆ ಮದುವೆಯಾಗುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಆದರೆ, ಮದುವೆ ಬಗ್ಗೆ ಮಾಹಿತಿಯನ್ನೇ ನೀಡದ ಹಿನ್ನೆಲೆಯಲ್ಲಿ ನಟಿಯ ತಂದೆ ಶತ್ರುಘ್ನ ಸಿನ್ಹಾ (Shatrughan Sinha) ಅವರಿಗೆ ಸಿಟ್ಟು ಬಂದಿದೆ. ಅವರು ಮದುವೆಗೆ ಹೋಗುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ನಟಿಯ ತಾಯಿ ಪೂನಂ ಸಿನ್ಹಾ ಹಾಗೂ ಸಹೋದರ ಲವ ಸಿನ್ಹಾ ಕೂಡ ಮದುವೆ ಹೋಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಹೌದು, ಶತ್ರುಘ್ನ ಸಿನ್ಹಾ ಮುನಿಸಿನ ಮಧ್ಯೆಯೇ ಇಂತಹದ್ದೊಂದು ಸುದ್ದಿ ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ಪೂನಂ ಸಿನ್ಹಾ ಹಾಗೂ ಲವ ಸಿನ್ಹಾ ಅವರು ನಟಿಯನ್ನು ಫಾಲೋ ಮಾಡುತ್ತಿಲ್ಲ. ಮನೆಯವರಿಗೆ ಹೇಳದೆ-ಕೇಳದೆ ಮದುವೆ ದಿನಾಂಕವನ್ನು ಫಿಕ್ಸ್‌ ಮಾಡಿ, ಮೂರನೇಯವರಿಂದ ಮಗಳ ಮದುವೆ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಶತ್ರುಘ್ನ ಸಿನ್ಹಾ ಕೋಪ ಮಾಡಿಕೊಂಡಿದ್ದಾರೆ. ಸೋನಾಕ್ಷಿ ಸಿನ್ಹಾ ಅವರ ವರ್ತನೆಯು ಪೂನಂ ಸಿನ್ಹಾ ಹಾಗೂ ಸಹೋದರ ಲವ ಸಿನ್ಹಾ ಅವರಿಗೂ ಹಿಡಿಸಿಲ್ಲ. ಇದರಿಂದಾಗಿ ಇಬ್ಬರೂ ಸೋನಾಕ್ಷಿ ಸಿನ್ಹಾ ಅವರು ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಹಾಗೆಯೇ, ಇವರು ಸೋನಾಕ್ಷಿ ಸಿನ್ಹಾ ಮದುವೆಗೂ ಹೋಗುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಮದುವೆ ಬಗ್ಗೆ ಶತ್ರುಘ್ನ ಸಿನ್ಹಾ ಹೇಳಿದ್ದೇನು?

ಸೋನಾಕ್ಷಿ ವಿವಾಹದ ಕುರಿತು ಮಾತನಾಡಿದ್ದ ಶತ್ರುಘ್ನ ಅವರು, ನನಗೆ ಸೋನಾಕ್ಷಿ ಮದುವೆ ಬಗ್ಗೆ ಯಾಕೆ ತಿಳಿದಿಲ್ಲ ಎಂದು ನನ್ನ ಹತ್ತಿರದ ಜನರು ನನ್ನನ್ನು ಕೇಳುತ್ತಿದ್ದಾರೆ. ನಾನು ಹೇಳುವುದು ಇಷ್ಟೇ, ಅವರು ಇವತ್ತಿನ ಮಕ್ಕಳು ತಂದೆ ತಾಯಿಯ ಅನುಮತಿ ಕೇಳುವುದಿಲ್ಲ. ಕೇವಲ ಮಾಹಿತಿ ನೀಡುತ್ತಾರೆ. ನಾವು ಆ ಮಾಹಿತಿಗಾಗಿ ಕಾಯುತ್ತಿದ್ದೇವೆ ಎಂದಿದ್ದರು. ಅವರ ಈ ಹೇಳಿಕೆ ಬಳಿಕ ಮದುವೆಯ ವದಂತಿಗಳನ್ನು ಅವರು ದೃಢೀಕರಿಸದೇ ಇದ್ದರೂ, ಸೋನಾಕ್ಷಿಗೆ ತಮ್ಮ ಜೀವನದ ಮಹತ್ವದ ದಿನಕ್ಕಾಗಿ ಎಲ್ಲಾ ಆಶೀರ್ವಾದಗಳನ್ನು ನೀಡುತ್ತಿದ್ದೇನೆ ಎಂದು ಹೇಳಿದ್ದರು.

ನನ್ನ ಮಗಳು ಮದುವೆಯಾದರೆ ನಾನು ಅವಳಿಗೆ ನನ್ನ ಆಶೀರ್ವಾದವನ್ನು ನೀಡುತ್ತೇನೆ. ಅವಳ ನಿರ್ಧಾರ ಮತ್ತು ಆಯ್ಕೆಯನ್ನು ಬೆಂಬಲಿಸುತ್ತೇನೆ. ಸೋನಾಕ್ಷಿಗೆ ತನ್ನ ಒಡನಾಡಿಯನ್ನು ಆಯ್ಕೆ ಮಾಡುವ ಹಕ್ಕಿದೆ ಮತ್ತು ಅವಳ ಮದುವೆಯ ದಿನದಂದು ನಾನು ಅತ್ಯಂತ ಸಂತೋಷದ ತಂದೆಯಾಗುತ್ತೇನೆ. ನಾನು ಯಾವಾಗಲೂ ಅವಳಿಗೆ ಶುಭ ಹಾರೈಸುತ್ತೇನೆ ಎಂದು ಶತ್ರುಘ್ನ ಹೇಳಿದರು. ಮುಂಬೈನಲ್ಲಿ ಆತ್ಮೀಯರ ಸಮ್ಮುಖದಲ್ಲಿ ಜೂನ್ 23ರಂದು ಸೋನಾಕ್ಷಿ ಮತ್ತು ಜಹೀರ್ ವಿವಾಹವಾಗಲಿದ್ದಾರೆ.

ಕಳೆದ ವಾರವಷ್ಟೇ ಸೋನಾಕ್ಷಿ ಅವರು ತಮ್ಮ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರನ್ನು ವರಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದು, ಬಳಿಕ ಇದನ್ನು ಮದುವೆಯ ಆಮಂತ್ರಣವು ದೃಢಪಡಿಸಿತು. ಸೋನಾಕ್ಷಿ ಏಳು ವರ್ಷಗಳಿಂದ ಜಹೀರ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ಮದುವೆಯ ವದಂತಿಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ ಶತ್ರುಘ್ನ ಅವರು ಮದುವೆಯ ಬಗ್ಗೆ ತಿಳಿದಿರಲಿಲ್ಲ ಎಂದು ಒಪ್ಪಿಕೊಂಡರು. ಮಾತ್ರವಲ್ಲದೇ ಅವರು ಇದರಿಂದ ಅಸಮಾಧಾನಗೊಂಡಿರುವುದು ಅವರ ಹೇಳಿಕೆಯಿಂದ ತಿಳಿದು ಬಂದಿತ್ತು.

ಇದನ್ನೂ ಓದಿ: Sonakshi Sinha: ಮುಸ್ಲಿಂ ಹುಡುಗನ ಜತೆ ಮಗಳು ಸೋನಾಕ್ಷಿ ಮದುವೆ; ಶತ್ರುಘ್ನ ಸಿನ್ಹಾ ಮುನಿಸು?

Exit mobile version