Site icon Vistara News

Star Kids with Sanskrit Names: ಮಕ್ಕಳಿಗೆ ಸಂಸ್ಕೃತ ಮೂಲದ ಹೆಸರನ್ನೇ ಇಟ್ಟ ಸ್ಟಾರ್ಸ್‌ಗಳಿವರು!

Star Kids with Sanskrit Names From Yami Gautam to Priyanka Chopra

ಬೆಂಗಳೂರು: ನಟಿ ಯಾಮಿ ಗೌತಮ್‌ (Yami Gautam) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ನಾಮಕರಣ ಮಾಡಿ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ʻವೇದವಿದ್’ ಅಕ್ಷಯ ತೃತೀಯ ದಿನ ಹುಟ್ಟಿದ. ಅವನಿಗೆ ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಬೇಕು ಎಂದು ನಟಿ ಶೇರ್‌ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಮಗುವಿನ ಹೆಸರಿಗೆ ಫಿದಾ (Star Kids with Sanskrit Names) ಆಗಿದ್ದಾರೆ. ʻವೇದವಿದ್ʼ ಹೆಸರು ಎಷ್ಟು ವಿಶಿಷ್ಟ ಮತ್ತು ಅಸಾಮಾನ್ಯ ಎಂದು ಹೇಳುತ್ತಿದ್ದಾರೆ. ಈ ಹೆಸರು ಸಂಸ್ಕೃತದಿಂದ ಬಂದಿದೆ. ಯಾಮಿ ಮಾತ್ರವಲ್ಲ ಈ ನಡುವೆ ಸ್ಟಾರ್ಸ್‌ಗಳು ತಮ್ಮ ಮಕ್ಕಳಿಗೆ ಸಂಸ್ಕೃತ ಮೂಲದ ಹೆಸರುಗಳನ್ನೇ ತಮ್ಮ ಮಕ್ಕಳಿಗೆ ನಾಮಕರಣ ಮಾಡುತ್ತಿದ್ದಾರೆ. ಹಾಗಾದ್ರೆ ಯಾರೆಲ್ಲ ಎಂಬುದು ಮುಂದೆ ಓದಿ!

ವಮಿಕಾ ಕೊಹ್ಲಿ

ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ 2021ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅವಳೇ ಈ ವಮಿಕಾ. ವಮಿಕಾ ಎಂಬುದು ದುರ್ಗಾ ದೇವಿಯ ಹೆಸರು. ದುರ್ಗಾ ದೇವಿಯನ್ನು ವಮಿಕಾ ಎಂದೂ ಕರೆಯುತ್ತಾರೆ. ಇದೇ ಕಾರಣದಿಂದ ಪುತ್ರಿಗೆ ವಮಿಕಾ ಎಂದು ಹೆಸರಿಡಲಾಗಿದೆ. ಅರ್ಧನಾರೀಶ್ವರನ ಒಂದು ಸ್ತ್ರೀ ಭಾಗ ವಮಿಕಾ ಎಂದು ಹಲವರು ತಿಳಿಸಿದ್ದಾರೆ. ಇನ್ನು ವಮಿಕಾ ಹೆಸರಿನಲ್ಲಿ ವಿರಾಟ್​ ಅವರ ಹೆಸರಿನ ʻವʼ ಅಕ್ಷರ ಮತ್ತು ಅನುಷ್ಕಾರ ಹೆಸರಿನ ʻಕಾʼ ಅಕ್ಷರ ಸಹ ಇದೆ. ಅಷ್ಟೇ ಅಲ್ಲದೆ, ವಮಿಕಾ ಅಂದರೆ ಯಶಸ್ಸು, ಶಾಂತಿಯನ್ನು ಸೂಚಿಸುತ್ತದೆ.

ಇದನ್ನೂ ಓದಿ: Kamal Haasan: ಕಮಲ್‌ ಹಾಸನ್‌ ಅಭಿನಯದ ‘ಇಂಡಿಯನ್ 2′  ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌!

ರಾಹಾ ಕಪೂರ್

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮಗಳಿಗೆ ರಾಹಾ ಕಪೂರ್ ಎಂದು ಹೆಸರಿಟ್ಟಿದ್ದಾರೆ. ಬಾಲಿವುಡ್‌ ಸ್ಟಾರ್‌ ದಂಪತಿ ರಣಬೀರ್ ಕಪೂರ್‌- ಅಲಿಯಾ ಭಟ್‌ ದಂಪತಿ ತಮ್ಮ ಪುತ್ರಿಗೆ ರಾಹಾ ಎಂದು ಹೆಸರಿಟ್ಟಿದ್ದಾರೆ. ರಾಹ ಎಂದರೆ ಅದರ ಮೂಲ ಅರ್ಥ ದೈವಿಕ ಮಾರ್ಗ ಎಂದು. ಸ್ವಾಹಿಲಿ ಭಾಷೆಯಲ್ಲಿ ಸಂತೋಷ ಎಂಬ ಅರ್ಥವಿದೆ. ಸಂಸ್ಕೃತದಲ್ಲಿ ಕುಲ ಎಂಬ ಅರ್ಥವಿದೆ. ಬಾಂಗ್ಲಾದಲ್ಲಿ ವಿಶ್ರಾಂತಿ, ಆರಾಮ ಹಾಗೂ ನಿರಾಳ ಎಂಬ ಅರ್ಥವಿದೆ. ಅರೇಬಿಕ್‌ನಲ್ಲಿ ಸಂತೋಷ, ಸ್ವಾತಂತ್ರ್ಯ ಹಾಗೂ ಆನಂದ ಎಂಬ ಅರ್ಥವಿದೆ.

ಅಕಾಯ್ ಕೊಹ್ಲಿ

ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಹಾಗೂ ನಟಿ ಅನುಷ್ಕಾ ಶರ್ಮಾ (Anushka Sharma) ದಂಪತಿಯ ಎರಡನೇ ಮಗುವಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ. ಇದು ‘ಕಾಯಾ’ ಎಂಬ ಹಿಂದಿ ಪದದಿಂದ ಬಂದಿದೆ. ಇದರರ್ಥ ‘ದೇಹ’. ಅಕಾಯ್ ಎಂದರೆ ತನ್ನ ಭೌತಿಕ ದೇಹಕ್ಕಿಂತ ಹೆಚ್ಚಿನದನ್ನು ಹೊಂದಿರುವವನು. ಇನ್ನು ಟರ್ಕಿಶ್ ಭಾಷೆಯಲ್ಲಿ ‘ಅಕಾಯ್’ ಎಂಬ ಪದದ ಅರ್ಥ ‘ಹೊಳೆಯುವ ಚಂದ್ರ’ (Shining moon). ಒಟ್ಟಿನಲ್ಲಿ ದಂಪತಿ ತಮ್ಮ ಮಗನಿಗೆ ವಿಶಿಷ್ಟ ಹೆಸರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Kantara Movie: ದಾಖಲೆ ಮೊತ್ತಕ್ಕೆ ಕಾಂತಾರ ಸಿನಿಮಾದ ಡಿಜಿಟಲ್‌ ರೈಟ್ಸ್‌ ಮಾರಾಟ; ಅಬ್ಬಾ ಇಷ್ಟು ಕೋಟಿನಾ!

ಮಾಲತಿ ಮೇರಿ ಚೋಪ್ರಾ ಜೋನಾಸ್

ಮಾಲತಿ ಸಂಸ್ಕೃತ ಮೂಲದ ಪದವಾಗಿದ್ದು, ಹೂವಿನ ಸುವಾಸನೆ, ಬೆಳದಿಂಗಳು ಎಂಬರ್ಥವಿದೆ. ಮೇರಿ ಎಂದರೆ ಲ್ಯಾಟಿಲ್ ಸ್ಟೆಲಾ ಮೇರಿಸ್ ಎಂದರ್ಥ, ಅಂದರೆ ಸಮುದ್ರದ ತಾರೆ. ಫ್ರೆಂಚ್‌ನಲ್ಲಿ ಜೀಸ್‌ಸ್‌ನ ತಾಯಿ ಎಂಬರ್ಥ ಕೂಡ ಇದೆ.

ವೇದವಿದ್

ನಟಿ ಯಾಮಿ ಗೌತಮ್‌ (Yami Gautam) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ನಾಮಕರಣ ಮಾಡಿ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ವೇದವಿದ್’ ಅಕ್ಷಯ ತೃತೀಯ ದಿನ ಹುಟ್ಟಿದ. ಅವನಿಗೆ ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಬೇಕು ಎಂದು ನಟಿ ಶೇರ್‌ ಮಾಡಿಕೊಂಡಿದ್ದಾರೆ. ಈ ಹೆಸರಿನ ಅರ್ಥ ವೇದಗಳಲ್ಲಿ ಚೆನ್ನಾಗಿ ಪಾರಂಗತನಾದವನು ಎಂದು.

ಕ್ಲೀಂಕಾರ ಕೊನಿಡೆಲಾ

11 ವರ್ಷದ ಬಳಿಕ ರಾಮ್‌ಚರಣ್‌ (Ram Charan) ಹಾಗೂ ಉಪಾಸನಾ ಪೋಷಕರಾಗಿದ್ದರು. ಲಲಿತಾ ಸಹಸ್ರನಾಮ ನಾಮದಿಂದ ಮಗಳಿಗೆ ಹೆಸರನ್ನು ಇಟ್ಟರು. ಮಗುವಿನ ಹೆಸರು ‘ಕ್ಲೀಂಕಾರ ಕೊನಿಡೆಲಾ’ ‘ಕ್ಲೀಂಕಾರ’ ಪ್ರಕೃತಿಯ ಸಾಕಾರವನ್ನು ಪ್ರತಿನಿಧಿಸುತ್ತದೆ. ದೈವಿಕ ತಾಯಿಯಾದ ‘ಶಕ್ತಿ’ಯ ಪರಮೋಚ್ಚ ಶಕ್ತಿ ಎಂದು ಅರ್ಥ.

Exit mobile version