Kantara Movie: ದಾಖಲೆ ಮೊತ್ತಕ್ಕೆ ಕಾಂತಾರ ಸಿನಿಮಾದ ಡಿಜಿಟಲ್‌ ರೈಟ್ಸ್‌ ಮಾರಾಟ; ಅಬ್ಬಾ ಇಷ್ಟು ಕೋಟಿನಾ! - Vistara News

ಸಿನಿಮಾ

Kantara Movie: ದಾಖಲೆ ಮೊತ್ತಕ್ಕೆ ಕಾಂತಾರ ಸಿನಿಮಾದ ಡಿಜಿಟಲ್‌ ರೈಟ್ಸ್‌ ಮಾರಾಟ; ಅಬ್ಬಾ ಇಷ್ಟು ಕೋಟಿನಾ!

Kantara Movie: ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಿದ ಕಾಂತಾರ ಸಿನಿಮಾ ಭಾರತ ಸೇರಿ ಜಗತ್ತಿನಾದ್ಯಂತ ಹೆಸರು ಗಳಿಸಿದೆ. ರಿಷಬ್‌ ಶೆಟ್ಟಿ ಅವರ ಸಿನಿಮಾ ಬದುಕಿಗೆ ಹೊಸ ಸ್ವರೂಪ ನೀಡಿದೆ. ಹಾಗಾಗಿ, ಕಾಂತಾರ ಪ್ರಿಕ್ವೆಲ್‌ಅನ್ನು ಅದ್ಧೂರಿಯಾಗಿ ನಿರ್ಮಿಸುವುದು ರಿಷಬ್‌ ಶೆಟ್ಟಿ ಅವರ ಗುರಿಯಾಗಿದೆ. ಇದರ ಬೆನ್ನಲ್ಲೇ, ಕಾಂತಾರ ಚಾಪ್ಟರ್‌ 1 ಸಿನಿಮಾದ ಡಿಜಿಟಲ್‌ ಹಕ್ಕುಗಳು ದಾಖಲೆಯ ಮೊತ್ತಗೆ ಸೇಲ್‌ ಆಗಿರುವುದು ಮಹತ್ವದ ಸಂಗತಿಯಾಗಿದೆ.

VISTARANEWS.COM


on

Kantara Movie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ ಸಿನಿಮಾ ದೇಶ-ವಿದೇಶದಲ್ಲಿ ಭರ್ಜರಿ ಹೆಸರು ಗಳಿಸಿದ ಬೆನ್ನಲ್ಲೇ ರಿಷಬ್‌ ಶೆಟ್ಟಿ ಅವರು ಕಾಂತಾರ ಚಾಪ್ಟರ್‌ 1‌ (Kantara Movie) (ಪ್ರಿಕ್ವೆಲ್) ಚಿತ್ರೀಕರಣಕ್ಕೆ ಇಳಿದಿದ್ದಾರೆ. ಹಾಗಾಗಿ, ಕಾಂತಾರ ಚಾಪ್ಟರ್‌ 1 ಕುತೂಹಲ ಹೆಚ್ಚಿಸಿದೆ. ಇದರ ಬೆನ್ನಲ್ಲೇ, ಕಾಂತಾರ ಸಿನಿಮಾದ ಡಿಜಿಟಲ್‌ ಹಕ್ಕುಗಳು (Digital Rights) ಅಮೆಜಾನ್‌ ಪ್ರೈಮ್‌ ಪಾಲಾಗಿದ್ದು, ಸುಮಾರು 125 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ, ಸಿನಿಮಾ ಬಿಡುಗಡೆಗೆ ಮೊದಲೇ ಕಾಂತಾರ ಭರ್ಜರಿ ಆದಾಯ ಗಳಿಸಿದಂತಾಗಿದೆ.

ದೈವಾರಾಧನೆಯ ಎಳೆಯನ್ನು ಇಟ್ಟುಕೊಂಡು, ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಿದ ಕಾಂತಾರ ಸಿನಿಮಾ ಭಾರತ ಸೇರಿ ಜಗತ್ತಿನಾದ್ಯಂತ ಹೆಸರು ಗಳಿಸಿದೆ. ರಿಷಬ್‌ ಶೆಟ್ಟಿ ಅವರ ಸಿನಿಮಾ ಬದುಕಿಗೆ ಹೊಸ ಸ್ವರೂಪ ನೀಡಿದೆ. ಹಾಗಾಗಿ, ಕಾಂತಾರ ಪ್ರಿಕ್ವೆಲ್‌ಅನ್ನು ಅದ್ಧೂರಿಯಾಗಿ ನಿರ್ಮಿಸುವುದು ರಿಷಬ್‌ ಶೆಟ್ಟಿ ಅವರ ಗುರಿಯಾಗಿದೆ. ಇದರ ಬೆನ್ನಲ್ಲೇ, ಕಾಂತಾರ ಚಾಪ್ಟರ್‌ 1 ಸಿನಿಮಾದ ಡಿಜಿಟಲ್‌ ಹಕ್ಕುಗಳು ದಾಖಲೆಯ 125 ಕೋಟಿ ರೂ.ಗೆ ಮಾರಾಟವಾಗಿರುವುದು ಮಹತ್ವದ ಸಂಗತಿಯಾಗಿದೆ.

Rishab Shetty

ಚಿತ್ರೀಕರಣ ಆರಂಭ

ಕೆಲ ದಿನಗಳ ಹಿಂದಷ್ಟೇ ರಿಷಬ್‌ ಶೆಟ್ಟಿ ಅವರು ಕಾಂತಾರ 2 ಚಿತ್ರೀಕರಣ ಆರಂಭವಾಗಿದೆ ಎಂದು ಹೇಳಿದ್ದರು. ಕಾಂತಾರ ಚಿತ್ರದ ಕುರಿತು ಅಧಿಕೃತವಾಗಿ ಹೊಂಬಾಳೆ ಸಂಸ್ಥೆ ಎಲ್ಲವನ್ನೂ ಘೋಷಣೆ ಮಾಡುತ್ತದೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, ಬಹಳ ಚೆನ್ನಾಗಿ ಕೆಲಸಕಾರ್ಯಗಳು ನಡೆಯುತ್ತಿವೆ. ಮೊದಲಿಗಿಂತ ದೊಡ್ಡ ಜವಾಬ್ದಾರಿಯೊಂದಿಗೆ ದೊಡ್ಡ ತಂಡ ಕೆಲಸ ಮಾಡುತ್ತಿದೆ” ಎಂದು ಹೇಳಿದ್ದರು.

“ಹೊಂಬಾಳೆ ಪ್ರೊಡಕ್ಷನ್ ಹೌಸ್ ಸಿಕ್ಕಿರುವುದು ಫಿಲಂ ಮೇಕರ್‌ಗಳಿಗೆ ಒಂದು ಪುಣ್ಯ. ಕಾಂತಾರದಲ್ಲಿ ಅದ್ಭುತವಾದ ಟೆಕ್ನಿಷಿಯನ್ಸ್‌ಗಳು ಕೆಲಸ ಮಾಡುತ್ತಿದ್ದಾರೆ. ನಿರಂತರವಾಗಿ ಕೆಲಸಗಳು ನಡೆಯುತ್ತಿದ್ದು ಪಾರ್ಟ್ ಬೈ ಪಾರ್ಟ್ ಚಿತ್ರೀಕರಣ ನಡೆಯುತ್ತದೆ. ಜನ ಕಾಂತಾರವನ್ನು ಗೆಲ್ಲಿಸಿದ್ದಾರೆ, ಹೀಗಾಗಿ ಮಾತಿನಲ್ಲಿ ಏನನ್ನೂ ಹೇಳುವುದಿಲ್ಲ. ಕೆಲಸದ ಮೂಲಕ ಮಾಡಿ ತೋರಿಸಬೇಕು ಎಂದು ಅಂದುಕೊಂಡಿದ್ದೇನೆ” ಎಂದಿದ್ದರು.

ಕಾಂತಾರ ಶೂಟಿಂಗ್‌ಗಾಗಿ ಕುಂದಾಪುರದ ಕರಾವಳಿ ಪ್ರದೇಶದಲ್ಲಿ ಅದ್ಧೂರಿ ಸೆಟ್​ ನಿರ್ಮಿಸಲಾಗಿದೆ. 200×200 ಅಡಿಯ ಬೃಹತ್ ಸೆಟ್ ನಿರ್ಮಿಸಲಾಗಿದೆ. ಚಿತ್ರದ ಹೆಚ್ಚಿನ ಭಾಗವನ್ನು ಕಾಡಿನಲ್ಲಿ ಚಿತ್ರೀಕರಿಸಲಿದ್ದರೆ, ಬೃಹತ್ ಸೆಟ್ ಡಬ್ಬಿಂಗ್ ಸ್ಟುಡಿಯೊ ಮತ್ತು ಎಡಿಟಿಂಗ್ ಸೂಟ್ ಒಳಗೊಂಡಿರುತ್ತದೆ ಎಂದು ವರದಿಯಾಗಿದೆ. ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ನಂತಹ ಸ್ಥಳಗಳಿಂದ ಸೆಟ್ ನಿರ್ಮಾಣಕ್ಕಾಗಿ 600 ನುರಿತ ಬಡಗಿಗಳು ಮತ್ತು ಸ್ಟಂಟ್ ಮಾಸ್ಟರ್‌ಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ರಾಮೋಜಿ ಫಿಲ್ಮ್‌ ಸಿಟಿಯ ನಂತರ ದೇಶದಲ್ಲೇ ಅತಿ ದೊಡ್ಡ ಸೆಟ್‌ ಇದಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Kantara Movie: ರಾಮೋಜಿ ಫಿಲ್ಮ್‌ ಸಿಟಿ ಮೀರಿಸುವಂತಿದೆಯಂತೆ ʻಕಾಂತಾರ ಚಾಪ್ಟರ್​ 1ʼ ಸೆಟ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actor Darshan: ದಚ್ಚು ಪರಿಸ್ಥಿತಿಗೆ ಪವಿತ್ರಾ ಕಾರಣ ಅನ್ನೋಕಾಗಲ್ಲ; ದರ್ಶನ್‌ಗೆ ಕೌನ್ಸೆಲಿಂಗ್‌ ಅಗತ್ಯ ಇಲ್ಲ ಎಂದ ಖ್ಯಾತ ಗಾಯಕಿ!

Actor Darshan: ಹಲವು ನಟ ನಟಿಯರು ದರ್ಶನ್‌ ಪರ ಧ್ವನಿ ಎತ್ತುತ್ತಿದ್ದಾರೆ. ಈ ಸಾಲಿಗೆ ಗಾಯಕಿ ಡಾ.ಶಮಿತಾ ಮಲ್ನಾಡ್ (dr shamitha malnad) ಸೇರ್ಪಡೆಯಾಗಿದ್ದರು. ಇದೀಗ ವಿಸ್ತಾರ ಜತೆ ಶಮಿತಾ ಮಾತನಾಡಿ ʻʻವಿಜಯಲಕ್ಷ್ಮಿ ಹಾಗೂ ದರ್ಶನ್‌ ನಡುವೆ ಬೆಟ್ಟದಷ್ಟು ಪ್ರೀತಿ ಇದೆ. ಪ್ರೀತಿಸಿ ಮದುವೆ ಆದ ನಂತರ ವಿಜಯಲಕ್ಷ್ಮಿ ಅವರು ದರ್ಶನ್‌ಗಾಗಿ ತಮ್ಮ ಕರಿಯರ್‌ನೇ ತ್ಯಾಗ ಮಾಡಿದ್ದಾರೆʼʼಎಂದು ಹೇಳಿದ್ದಾರೆ.

VISTARANEWS.COM


on

Actor Darshan does not need counseling says by shamitha malnad
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ ದರ್ಶನ್‌. ದರ್ಶನ್ ಪರ ಒಲವು ತೋರಿದವರ (Actor Darshan) ಸಂಖ್ಯೆ ತೀರಾ ಕಡಿಮೆ. ಹಲವು ನಟ ನಟಿಯರು ದರ್ಶನ್‌ ಪರ ಧ್ವನಿ ಎತ್ತುತ್ತಿದ್ದಾರೆ. ಈ ಸಾಲಿಗೆ ಗಾಯಕಿ ಡಾ.ಶಮಿತಾ ಮಲ್ನಾಡ್ (dr shamitha malnad) ಸೇರ್ಪಡೆಯಾಗಿದ್ದರು. ಇದೀಗ ವಿಸ್ತಾರ ಜತೆ ಶಮಿತಾ ಮಾತನಾಡಿ ʻʻವಿಜಯಲಕ್ಷ್ಮಿ ಹಾಗೂ ದರ್ಶನ್‌ ನಡುವೆ ಬೆಟ್ಟದಷ್ಟು ಪ್ರೀತಿ ಇದೆ. ಪ್ರೀತಿಸಿ ಮದುವೆ ಆದ ನಂತರ ವಿಜಯಲಕ್ಷ್ಮಿ ಅವರು ದರ್ಶನ್‌ಗಾಗಿ ತಮ್ಮ ಕರಿಯರ್‌ನೇ ತ್ಯಾಗ ಮಾಡಿದ್ದಾರೆʼʼಎಂದು ಹೇಳಿದ್ದಾರೆ.

ಗಾಯಕಿ ಶಮಿತಾ ಮಲ್ನಾಡ್ ಮಾತನಾಡಿ ʻʻದರ್ಶನ್ ಅರೆಸ್ಟ್ ಆದ ನಂತರ ವಿಜಯಲಕ್ಷ್ಮಿ ಅವರನ್ನು ನಾನು ಭೇಟಿ ಮಾಡಿದ್ದೆ. ವಿಜಯಲಕ್ಷ್ಮಿ ಅವರು ಗಟ್ಟಿಗಿತ್ತಿ, ಇಂತ ಸಂದರ್ಭದಲ್ಲೂ ಮೆಂಟಲಿ ತುಂಬಾ ಸ್ಟ್ರಾಂಗ್ ಆಗಿದ್ದಾರೆ. ಪಕ್ಕಾ ಫ್ಯಾಮಿಲಿ ವಿಮೆನ್ ಅವರು. ವಿಜಯಲಕ್ಷ್ಮಿ ಹಾಗೂ ದರ್ಶನ್‌ ನಡುವೆ ಬೆಟ್ಟದಷ್ಟು ಪ್ರೀತಿ ಇದೆ. ಪ್ರೀತಿಸಿ ಮದುವೆ ಆದ ನಂತರ ವಿಜಯಲಕ್ಷ್ಮಿ ಅವರು ದರ್ಶನ್‌ಗಾಗಿ ತಮ್ಮ ಕರಿಯರ್‌ನೇ ತ್ಯಾಗ ಮಾಡಿದ್ದಾರೆ. ವಿಜಯಲಕ್ಷ್ಮಿ ಸಾಮಾನ್ಯ ಹೆಣ್ಣಲ್ಲ, ಆಕೆಯ ಸ್ಟ್ಯಾಂಡರರ್ಡ್‌ಗೆ ಜಾಬ್ ಆಫರ್ ಬಂದಿದ್ದು ರಿಜೆಕ್ಟ್ ಮಾಡಿದ್ಲು. ಗಂಡ, ಮಗ ಇದೇ ಆಕೆಯ ಪ್ರಪಂಚʼʼಎಂದರು.

ದರ್ಶನ್ ಕುರಿತು ಶಮಿತಾ ಮಾತನಾಡಿ ʻʻದರ್ಶನ್ ಅವರನ್ನು ಮೊದಲು ನೋಡಿದ್ದು ಮೆಜೆಸ್ಟಿಕ್ ಸಿನಿಮಾದ ಚಿತ್ರದ ಸೆಟ್‌ನಲ್ಲಿ. ಈ ಹುಡುಗ ಯಾರು, ಇಷ್ಟೊಂದ್ ಹೈಟ್ ಇದಾರೆ ಅನ್ಕೊಂಡಿದೆ. ತುಂಬಾ ಕಷ್ಟ ಪಟ್ಟು ಕಣ್ಣೀರು ಹಾಕಿ ಮೇಲೆ ಬಂದ ವ್ಯಕ್ತಿ. ಸಾರಥಿ ಸಿನಿಮಾದಲ್ಲಿ ನನ್ನ ಕಂಠದ ಎರಡೂ ಟೈಟಲ್ ಟ್ರ್ಯಾಕ್ ಸೆಲೆಕ್ಟ್ ಮಾಡಿದ್ದೆ ದರ್ಶನ್.ಅಂದಿನಿಂದಲೂ ದರ್ಶನ್ ಹಾಗು ನನ್ನ ನಡುವೆ ಅಣ್ಣ ತಂಗಿ ಸಂಬಂಧ ಬೆಳೆದಿದೆ. ವಿಜಯಲಕ್ಷ್ಮಿ ನನ್ನ ಆಪ್ತ ಸ್ನೇಹಿತೆ. ದರ್ಶನ್ ಈ ಪರಿಸ್ಥಿತಿಗೆ ಪವಿತ್ರಾ ಗೌಡ ಕಾರಣ ಅಂತ ದೂಷಿಸೋಕೆ ಆಗಲ್ಲ. ನಾನು ಡಾಕ್ಟರ್ ಆಗಿ ಹೇಳ್ತಿದೀನಿ ದರ್ಶನ್‌ಗೆ ಕೌನ್ಸೆಲಿಂಗ್‌ ಅಗತ್ಯ ಇಲ್ಲ. ಹಾಗೆ ನೋಡುದ್ರೆ ಪ್ರತಿ ವ್ಯಕ್ತಿಗೂ ಕೌನ್ಸೆಲಿಂಗ್‌ ಅಗತ್ಯವಿದೆ. ಕಷ್ಟ ಬಂದಾಗ ರಕ್ತಸಂಬಂಧಿಗಳು ದೂರ ಆಗ್ತಾರೆʼʼಎಂದರು.

ಇದನ್ನೂ ಓದಿ: Actor Darshan: ʻಚಿತ್ರಾಲ್ʼ ಬಿಕಿನಿ ಮಾಡೆಲ್‌, ಕೆಟ್ಟ ಕಮೆಂಟ್‌ ಮಾಡಬೇಡಿ ಎಂದ ವಿನಯ್ ಗೌಡ !

ಇದಕ್ಕೂ ಮುಂಚೆ ಶಮಿತಾ ಅವರು ಪೋಸ್ಟ್‌ನನಲ್ಲಿ ʻʻʻʻಮನಸೇ ಮನಸೇ,,, ಸೋಲೋ ಗೆಲುವೋ, ನೋವೋ ನಲಿವೋ, ಏಳೋ ಬೀಳೋ,,ಕಲ್ಲೋ ಮುಳ್ಳೋ ಜೀವನದ ಹಾದಿ ಸುಲಭವಲ್ಲ.. ಯಶಸ್ಸಿನ ಹಾದಿ ಸುಗಮವಲ್ಲ… ಹಸಿವು, ಅವಮಾನ, ನೋವುಂಡು ಯಶಸ್ಸು ಗಳಿಸಿದ ಹೆಸರು
ದರ್ಶನ್ ತೂಗುದೀಪ.. ಸಹಚರ, ಗೆಳೆಯ, ಸೋದರ, ಎಷ್ಟೋ ಜನರಿಗೆ ಸಹಾಯ ಹಸ್ತ ನೀಡಿ ಜೀವನವಾಗಿದ್ದವರು, ಒಳ್ಳೆ ಕೆಲಸಗಳಿಗೆ ಕೈ ಚಾಚಿದ್ದವರು,, ಜಾರಿ ಬಿದ್ದಾಗ ಆಳಿಗೊಂದು ಕಲ್ಲಾಗೋದು ಬೇಡಾ…. ಅವರ ಅಭಿನಯ, ಭೇದವಿಲ್ಲದ ಪ್ರೀತಿ, ಸರಳತೆ, ಸ್ನೇಹ ಅಭಿಮಾನದ ಸಿಹಿ ಉಂಡವರು ನಾವು, ಅಭಿಮಾನಿಯಾಗಿ ಸಿನಿಮಾ ಅಭಿನಯ ನೋಡಿ ಅತ್ತು, ನಕ್ಕು, ಚಪ್ಪಾಳೆ ಶಿಳ್ಳೆ ಹೊಡೆದು ಸಂಭ್ರಮಿಸಿದವರು ನಾವು,, ಆರಡಿ ದೇಹವ ಮೂರಡಿ ಬಗ್ಗಿಸಿ ತಗ್ಗಿ ನಮ್ಮೊಂದಿಗೆ ವಿನಯದಿ ಮಾತಾಡುವಾಗ ಹೆಮ್ಮೆ ಪಟ್ಟವರು ನಾವು,,, ತಪ್ಪಾಗಿದೆಯೋ ಇಲ್ಲವೋ ಏನಾಗಿದೆ ಎಂದು ಅರಿಯದವರು ನಾವು.. ಹಣಕ್ಕೆ ಬಗ್ಗದೆ ಪ್ರೀತಿಗೆ ಬಗ್ಗಿದವರು ಅವರು,,, ತಪ್ಪಾಗಿದ್ದರೆ ನ್ಯಾಯಾಂಗವಿದೆ, ಕಾನೂನಿದೆ,,,
ಶಿಕ್ಷೆ ಇದೇʼʼಎಂದು ಬರೆದುಕೊಂಡಿದ್ದರು.

ʻʻ ಅಕಾಲ ನಿಧನರಾದ ಶ್ರೀ ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ,,, ಅವರ ಕುಟುಂಬ ಹಾಗೂ ಹಲವು ನೊಂದ ಕುಟುಂಬಗಳಿಗೆ ನಮ್ಮೆಲ್ಲರ ಸಾಂತ್ವನ ,, ನೆರವು, ಆಸರೆ, ನ್ಯಾಯ ಬೇಕಿದೆ,, ಹಾಗೆ ಸೋಶಿಯಲ್ ಮೀಡಿಯಾವನ್ನು ದಯವಿಟ್ಟು ಒಳಿತಿಗೆ ಉಪಯೋಗಿಸಿ,, ಎಲ್ಲರ ಮೇಲೆ ಗೌರವವಿರಲಿ,, ಕಾಮೆಂಟ್ಸ್, ಪೋಸ್ಟ್, ಮೇಲೆ ಹಿಡಿತವಿರಲಿ,,
ದರ್ಶನ್ ಅಣ್ಣಾ,, ಕನ್ನಡದ ಕುಟುಂಬ,, ಚಲನಚಿತ್ರದ ಕುಟುಂಬ ನಮ್ಮ ಕುಟುಂಬ,, ಕಲಾವಿದರ ಕುಟುಂಬ,, ಏನೇ ಆದರೂ ನಮ್ಮ ಮನೆಯವರ ಜೊತೆ ನಾವು ಯಾವಾಗ್ಲೂ ಜೊತೆ ಇರುತ್ತೇವೆ,, ಅಲ್ಲವೇ??? ಹಾಗೆ ಪ್ರೀತಿ ಅಭಿಮಾನ ಬದಲಾಗದು,, ತಪ್ಪು ಯಾರು ಮಾಡಿದ್ದರೂ ಶಿಕ್ಷೆ ಆಗಬೇಕು .. ನ್ಯಾಯ ಎಲ್ಲರಿಗೂ ಒಂದೇ,,, ದರ್ಶನ್ ಅವರನ್ನು ಪ್ರೀತಿಸುವ ಎಲ್ಲರಿಗೂ ನೋವಾಗಿದೆ,,ಸಂಕಟವಾಗಿದೆ,, ಇದು ಸಂಯಮ, ತಾಳ್ಮೆ, ಪ್ರಾರ್ಥನೆಯ ಸಮಯ,,
ಸಿಟ್ಟು, ಕೋಪ, ಅಸಹನೆ, ಹತಾಶೆ ದರ್ಶನ್ ಹಾಗೂ ಅವರ ಕುಟುಂಬಕ್ಕೆ ಇನ್ನಷ್ಟು ತೊಂದರೆ ಒಡ್ಡಬಹುದು,,
ಚಿನ್ನ ಕುದಿವ ಕುಲುಮೆಯಲ್ಲಿದೆ, ಕಲ್ಮಶ ಕಳೆದು ಅಪರಂಜಿ ಆಗಿ ಶುದ್ಧವಾಗಿ ಬರಲು ಸಮಯ ಬೇಕು,,, ಕಾಯೋಣ ,, ಸಮಾಧಾನದಿಂದ..ದರ್ಶನ್ ಅಣ್ಣಾ ಅವರಿಗಾಗಿ ಪ್ರಾರ್ಥಿಸೋಣ, ಹಾರೈಸೋಣ…ʼʼಎಂದು ಬರೆದುಕೊಂಡಿದ್ದರು.

Continue Reading

ಸ್ಯಾಂಡಲ್ ವುಡ್

Manvita Kamath: ಮದುವೆ ಆದ ಒಂದು ತಿಂಗಳ ಬೆನ್ನಲ್ಲೇ ಗುಡ್‌ ನ್ಯೂಸ್‌ ಕೊಟ್ಟ ʻಟಗರು ಪುಟ್ಟಿʼ!

Manvita Kamath: ಶ್ರೇಯಸ್ ಚಿಂಗಾ, ಮಾನ್ವಿತಾ ಕಾಮತ್ ಜೊತೆಗೆ ಸಾಧು ಕೋಕಿಲಾ, ಅನಿನಾಶ್, ಸುಚೇಂದ್ರ ಪ್ರಸಾದ್, ‘ಸ್ಪರ್ಶ’ ರೇಖಾ, ಅನಂತು, ಸುಂದರಶ್ರೀ, ‘ಕಾಮಿಡಿ ಕಿಲಾಡಿ’ ಖ್ಯಾತಿಯ ಹಿತೇಶ್ ಕುಮಾರ್, ಮಹಾಂತೇಶ್ ಹಿರೇಮಠ್, ನಿಕಿತಾ ದೋರ್ತೊಡಿ, ಲಲಿತಾ ನಾಯಕ್, ರೋಹಿತ್ ಅರುಣ್, ಅಮಾನ್, ರಾಖಿ ಭೂತಪ್ಪ ಮುಂತಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

VISTARANEWS.COM


on

Manvita Kamath One and Half cinema song out
Koo

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಕೆಲವು ಪ್ರಯತ್ನಗಳು ಯಶಸ್ವಿಯಾದರೆ, ಕೆಲವು ಬಿಗ್ ಬಜೆಟ್ (Manvita Kamath) ಸಿನಿಮಾಗಳ ನಡುವೆ ಕಳೆದು ಹೋಗುತ್ತವೆ. ಹೊಸತನಕ್ಕೆ ಬೆಂಬಲ ಸಿಗಲಿ, ಸಿಗದೇ ಇರಲಿ ಆದರೆ ಪ್ರಯತ್ನಗಳಂತೂ ನಿಂತಿಲ್ಲ ಎಂಬುದು ಕನ್ನಡ ಸಿನಿಮಾ ಪ್ರೇಮಿಗಳಿಗೆ ಖುಷಿಯ ಸಂಗತಿ. ಸಿನಿಮಾ ಬಗ್ಗೆ ಅತೀವ ಪ್ರೀತಿ ಹೊಂದಿರುವ R. ಚರಣ್ ‘ಒನ್ ಅಂಡ್ ಹಾಫ್‘ ಸಿನಿಮಾ ಮೂಲಕ ನಿರ್ಮಾಪಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಇವರ ಜನ್ಮದಿನದ ಪ್ರಯುಕ್ತ ಹಾಡಿನ ಗ್ಲಿಂಪ್ಸ್ ಬಿಡುಗಡೆ ಮಾಡಲಾಯಿತು. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪ್ರತಿಕಾಗೋಷ್ಠಿ ಇಡೀ ಚಿತ್ರತಂಡ ಭಾಗಿಯಾಗಿ ಮಾಹಿತಿ ಹಂಚಿಕೊಂಡಿದೆ.

ನಟಿ ಮಾನ್ವಿತಾ, ʻʻನನಗೆ ಇದು ಸ್ಪೆಷಲ್ ಸಿನಿಮಾ. ಈ ಸಿನಿಮಾ ಬಂದ ಮೇಲೆ ನನ್ನ ಲೈಫ್ ಗೆ ಹೊಸ ವ್ಯಕ್ತಿ ಬಂದರು. ಸಿನಿಮಾ ತುಂಬಾ ಚೆನ್ನಾಗಿ ಮಾಡಿದ್ದಾರೆ. ಮ್ಯೂಸಿಕ್ ಗೆ ಕುಂತ್ರೆ ಮಣಿ ಅಣ್ಣ ಸೂಪರ್. ಲಿಖಿತಾ ಸಿರಿ ನನ್ನ ಕೋಸ್ಟಾರ್. ನಮ್ಮ 3 ಜನಕ್ಕೂ ಒಳ್ಳೆ ಬಾಂಡಿಂಗ್ ಇತ್ತು. ಶ್ರೇಯಸ್ ಡೈರೆಕ್ಟರ್ ಆಕ್ಟರ್ ಆಗಿ ಒಳ್ಳೆ ಕೆಲಸ ಮಾಡಿದ್ದಾರೆʼʼ ಎಂದರು.

ನಿರ್ದೇಶಕ ಕಂ ನಾಯಕ ಶ್ರೇಯಸ್ ಚಿಂಗಾ ಮಾತನಾಡಿ, ʻʻಇದು ತಂತ್ರಜ್ಞನರ ಸಿನಿಮಾ..ಪ್ರತಿಯೊಬ್ಬ ತಂತ್ರಜ್ಞರು ಕೂಡ ಫ್ಯಾಮಿಲಿ ತರ. ಅವರು ಅವರ ಕರ್ತವ್ಯ ನಿರ್ವಹಿಸಿದ್ದಾರೆ. ನಾನು ಸಿನಿಮಾವನ್ನು ತೆರೆಗೆ ತರಲು ಬೆಂಬಲಿಸಿದ ಇಡೀ ಚಿತ್ರತಂಡಕ್ಕೆ ಧನ್ಯವಾದ. ಈ ಸಮಯದಲ್ಲಿ ಜನ ಥಿಯೇಟರ್ ಗೆ ಬರುತ್ತಿಲ್ಲ. ನಿಮ್ಮ ಬೆಂಬಲ ನಮಗೆ ಇರಬೇಕು. ಇದು ತುಂಬಾ ವಿಭಿನ್ನ ಸಿನಿಮಾ. ಬೇರೆ ಭಾಷೆಯಲ್ಲಿ ಮಾಡುವ ಸಾಧ್ಯತೆ ನೂರಷ್ಟಿದೆʼʼ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: Manvita Kamath: ಅರುಣ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ʼಟಗರು ಪುಟ್ಟಿʼ

ನಿರ್ಮಾಪಕ ಆರ್.ಚರಣ್ ಸುಬ್ಬಯ್ಯ ಮಾತನಾಡಿ, ʻʻನಾನು ಗಾಂಧಿನಗರದ ಹುಡ್ಗ. ಶ್ರೇಯಸ್ ಮಾಡಿದ ಡೆವಿಡ್ ಸಿನಿಮಾ ನೋಡಿ ಇಷ್ಟವಾಯ್ತು. ನನಗೆ ಊಹೆ ಕೂಡ ಮಾಡಲು ಆಗಲಿಲ್ಲ. ಈ ರೀತಿ ಸಿನಿಮಾ ಮಾಡಿದ್ದಾನೆ ಎಂದು. ಯಾವುದಾದರೂ ಕನ್ಸೆಪ್ಟ್ ಇದ್ದರೆ ಹೇಳು ಎಂದು ಹೇಳಿದೆ. ಅವನು ಹೇಳಿದ ಕೇಳಿದ ಕಥೆ ನನಗೆ ಇಷ್ಟವಾಗಿ ಅಡ್ವಾನ್ಸ್ ಕೊಟ್ಟಿದ್ದೆ. ಒಂದೊಳ್ಳೆ ಬ್ಯೂಟಿಫುಲ್ ಸಬ್ಜೆಕ್ಟ್. ಈ ಸಿನಿಮಾವನ್ನು ಥಿಯೇಟರ್ ಗೆ ಬಂದು ನೋಡಬೇಕುʼʼ ಎಂದರು.

ಈ ಹಿಂದೆ ‘ರಂಗ್‌ಬಿರಂಗಿ’, ‘ಡೆವಿಡ್’, ‘ದಿ ವೆಕೆಂಟ್ ಹೌಸ್’ ಸಿನಿಮಾಗಳಲ್ಲಿ ನಟಿಸಿ ಭರವಸೆ ಮೂಡಿಸಿದ್ದ ನಟ ಶ್ರೇಯಸ್ ಚಿಂಗಾ, ಇದೀಗ ‘ಒನ್ ಅಂಡ್ ಹಾಫ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಇದು ಇವರ ಮೊದಲ ಸಿನಿಮಾ. ನಿರ್ದೇಶನದ ಜೊತೆಗೆ ಹೀರೋ ಆಗಿಯೂ ಅವರು ಅಭಿನಯಿಸುತ್ತಿದ್ದಾರೆ. ಶೂಟಿಂಗ್ ಮುಗಿಸಿರುವ ಚಿತ್ರತಂಡವೀಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ‘ಒನ್ ಅಂಡ್ ಹಾಫ್’ ಕಾಮಿಡಿ ಜಾನರ್ ಸಿನಿಮಾವಾಗಿದ್ದು, ಮನರಂಜನೆ ಪಕ್ಕ ಅನ್ನೋದು ಚಿತ್ರತಂಡದ ಭರವಸೆ.ಈ ಚಿತ್ರದ ಮತ್ತೊಂದು ವಿಶೇಷ ಅಂದರೆ ಹೀರೋ ಹೆಸರು ಕನ್ನಡ ಅಂತಾ ಇಡಲಾಗಿದೆ.

ಶ್ರೇಯಸ್ ಚಿಂಗಾ, ಮಾನ್ವಿತಾ ಕಾಮತ್ ಜೊತೆಗೆ ಸಾಧು ಕೋಕಿಲಾ, ಅನಿನಾಶ್, ಸುಚೇಂದ್ರ ಪ್ರಸಾದ್, ‘ಸ್ಪರ್ಶ’ ರೇಖಾ, ಅನಂತು, ಸುಂದರಶ್ರೀ, ‘ಕಾಮಿಡಿ ಕಿಲಾಡಿ’ ಖ್ಯಾತಿಯ ಹಿತೇಶ್ ಕುಮಾರ್, ಮಹಾಂತೇಶ್ ಹಿರೇಮಠ್, ನಿಕಿತಾ ದೋರ್ತೊಡಿ, ಲಲಿತಾ ನಾಯಕ್, ರೋಹಿತ್ ಅರುಣ್, ಅಮಾನ್, ರಾಖಿ ಭೂತಪ್ಪ ಮುಂತಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ‘ಒನ್ ಅಂಡ್ ಹಾಫ್’ ಸಿನಿಮಾಗೆ ದೇವೇಂದ್ರ ಛಾಯಾಗ್ರಹಣ ಮಾಡುತ್ತಿದ್ದು, ಮಣಿಕಾಂತ್ ಕದ್ರಿ ಸಂಗೀತ ನೀಡುತ್ತಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಕಥೆಯುಳ್ಳ ಈ ಸಿನಿಮಾಗೆ ಸುಲಕ್ಷ್ಮೀ ಫಿಲ್ಮ್ಸ್‌ ಬ್ಯಾನರ್‌ನಡಿ ಆರ್.ಚರಣ್ ಹಣ ಹಾಕುತ್ತಿದ್ದಾರೆ. ಇಂಪನಾ ಪ್ರಸಾದ್, ಅರ್ಪಿತ್ ನಾರಾಯಣ್, ಸಂತೋಷ್ ನಾಗೇನಹಳ್ಳಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ.

Continue Reading

ಸ್ಯಾಂಡಲ್ ವುಡ್

Actor Darshan: ʻಚಿತ್ರಾಲ್ʼ ಬಿಕಿನಿ ಮಾಡೆಲ್‌, ಕೆಟ್ಟ ಕಮೆಂಟ್‌ ಮಾಡಬೇಡಿ ಎಂದ ವಿನಯ್ ಗೌಡ !

Actor Darshan: ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ದು ತಪ್ಪು ಎಂಬುದು ಕೆಲವರ ವಾದ. ಬಿಗ್‌ಬಾಸ್ ಖ್ಯಾತಿಯ ಚಿತ್ರಾಲ್ ರಂಗಸ್ವಾಮಿ (Chitral Rangaswamy) ಕೂಡ ತಮಗೂ ಈ ಅಕೌಂಟ್‌ನಿಂದ ಕೆಟ್ಟ ಮೆಸೇಜ್ ಬಂದಿತ್ತು ಎಂದು ಆರೋಪಿಸಿದ್ದರು. ಈ ಬಗ್ಗೆ ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿನಯ್ ವಿಸ್ತಾರ ನ್ಯೂಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

VISTARANEWS.COM


on

Actor Darshan Renuka swamy case chitral support by vinay gowda
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ವಿಚಾರಕ್ಕೆ (Actor Darshan) ಸಂಬಂಧಪಟ್ಟಂತೆ ದರ್ಶನ್‌ 14 ದಿನ ನ್ಯಾಯಾಂಗ ಬಂಧನದಲ್ಲಿದ್ದಾರೆ. ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ದು ತಪ್ಪು ಎಂಬುದು ಕೆಲವರ ವಾದ. ಬಿಗ್‌ಬಾಸ್ ಖ್ಯಾತಿಯ ಚಿತ್ರಾಲ್ ರಂಗಸ್ವಾಮಿ (Chitral Rangaswamy) ಕೂಡ ತಮಗೂ ಈ ಅಕೌಂಟ್‌ನಿಂದ ಕೆಟ್ಟ ಮೆಸೇಜ್ ಬಂದಿತ್ತು ಎಂದು ಆರೋಪಿಸಿದ್ದರು. ಈ ಬಗ್ಗೆ ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ ವಿಸ್ತಾರ ನ್ಯೂಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ʻʻಈಗ ಪ್ರೋಪೈಲ್‌ ಯಾವುದು ಎಂದು ಎಲ್ಲರಿಗೂ ಗೊತ್ತಾಗಿದೆ. ಸಾಕಷ್ಟು ಜನಕ್ಕೆ ಮೆಸೆಜ್‌ ಹೋಗಿರುವುದು ಗೊತ್ತಾಗಿದೆ. ಮೀಡಿಯಾದಿಂದಲೇ ಗೊತ್ತಾಯ್ತು. ಪ್ರತಿ ಒಬ್ಬರು ಚೆಕ್‌ ಮಾಡಿದಾಗ ಗೊತ್ತಾಗಿದೆ. ಈಗ ಎಲ್ಲಾ ಹೊರಗೆ ಬರುತ್ತಿದೆ. ಚಿತ್ರಾಲ್ ಬಹಳ ಸ್ಟ್ರಾಂಗ್ ವುಮೆನ್. ಆಕೆ ಧೈರ್ಯವಾಗಿ ಬಂದು ನನಗೆ ಈ ರೀತಿ ಕೆಟ್ಟ ಕಾಮೆಂಟ್ ಮಾಡಿದ್ದ ಈ ಫೇಕ್ ಅಕೌಂಟ್ ಇಂದ ಎಂದಾಗ ಯಾಕೆ ಅದನ್ನು ಜನ ಒಪ್ಪುತ್ತಿಲ್ಲ. ಅವರೇ ಸರಿ ಇಲ್ಲ ಎಂದು ಅಂತಾರೆ.” ಎಂದು ವಿನಯ್ ಪ್ರಶ್ನಿಸಿದ್ದಾರೆ.

ʻʻʻಅವರು ಬಿಕಿನಿ ಮಾಡೆಲ್‌. ಅವರ ಪ್ರೊಷನಲ್‌ ಅದು. ಆದರೆ ಈ ಬಗ್ಗೆ ಕೆಟ್ಟ ಕಮೆಂಟ್‌ ಮಾಡಿದ್ದಾರೆ. ಆದರೆ ಈ ರೀತಿ ಅವರಿಗೆ ಕಮೆಂಟ್‌ ಮಾಡೋದು ತಪ್ಪು. ಯಾರು ಕಾಮೆಂಟ್ ಮಾಡಿದ್ದಾರೋ ಅವರಿಗೆಲ್ಲಾ ಕೇಳ್ತಿದ್ದೀನಿ ನೀವು ಮಾಡೋದು ಸರೀನಾ? ಅವರ ಮನೆಯಲ್ಲೂ ಹೆಣ್ಣು ಮಕ್ಕಳು ಇರ್ತಾರೆ. ಯಾರಾದರೂ ಫೋಟೊ ಕಳ್ಸಿ ಅಂತಹ ಮಸೇಜ್ ಕಳ್ಸಿದರೆ ನೋವಾಗುತ್ತದೆ ಅಲ್ಲವೇ?ʼʼಎಂದರು.

ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ನನಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂದ ಬಿಗ್‌ಬಾಸ್ ಖ್ಯಾತಿಯ ಚಿತ್ರಾಲ್ ರಂಗಸ್ವಾಮಿ!

ಚಿತ್ರಾಲ್ ರಂಗಸ್ವಾಮಿ ಹೇಳಿದ್ದೇನು?

ʻಎಲ್ಲರಿಗೂ ನಮಸ್ಕಾರ, ಪಸ್ತುತ ಏನು ನಡೆಯುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಈ ಕೊಲೆ ವಿಚಾರವಾಗಿ ಎಲ್ಲರಿಗೂ ಡಿಸ್ಟರ್ಬ್‌ ಕೂಡ ಆಗಿದೆ. ಇಲ್ಲಿ ಯಾರಿಗೂ ನಾನು ಸಪೋರ್ಟ್‌ ಮಾಡಲು ಬಂದಿಲ್ಲ. ದೇವರು ರೇಣುಕಾ ಸ್ವಾಮಿ ಕುಟುಂಬಕ್ಕೆ ಶಕ್ತಿ ಕೊಡಲಿ. ಆದರೆ ರೇಣುಕಾ ಸ್ವಾಮಿ ಅವರು ಈ ತರ ಹಲವರಿಗೆ ಮೆಸೆಜ್ ಕಳುಹಿಸಿದ್ದರು. ಈ ಬಗ್ಗೆ ಮಾರ್ಚ್‌ನಲ್ಲಿ ಪೊಲೀಸ್‌ ಸ್ಟೇಷನ್‌ನಲ್ಲಿ ಕಂಪ್ಲೇಟ್‌ ಕೂಡ ಆಗಿದೆ. ಅವರ ಅಕೌಂಟ್‌ ಈ ರೀತಿ ಗೌತಮ್‌ ಅನ್ನುವ ಹೆಸರಲ್ಲಿ ಇತ್ತು. ಈ ಅಕೌಂಟ್ ಇಂದ ಅದೇ ರೀತಿಯ ಕೆಟ್ಟ ಮೆಸೇಜ್‌ಗಳನ್ನು ಇನ್ನು ಸಾಕಷ್ಟು ಜನರಿಗೆ ಕಳುಹಿಸಿದ್ದರಂತೆ. ನನಗೆ ಅಚ್ಚರಿ ಆಯಿತು. ನಾನು ಅದರ ಸ್ಕ್ರೀನ್‌ ಶಾಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡರೆ ತಪ್ಪಾಗುತ್ತದೆ. ಹಾಗಾಗಿ ಹಾಕಲಿಲ್ಲ. ನನಗೆ ಆ ರೀತಿ ಮರ್ಮಾಂಗದ ಚಿತ್ರ ಆಗಲಿ, ಬೆತ್ತಲೆ ಫೋಟೊ ಆಗಲಿ ಅಥವಾ ಹಸ್ತ ಮೈಥುನ ವೀಡಿಯೋ ಆಗಲಿ ಬಂದರೆ ನಾನು ಕೂಡಲೇ ಆ ಅಕೌಂಟ್ ಬ್ಲಾಕ್ ಮಾಡ್ತೀನಿ. ನನ್ನ ಇನ್‌ಸ್ಟಾಗ್ರಾಮ್ ಬ್ಲಾಕ್ ಲಿಸ್ಟ್ ಅಲ್ಲಿ ನೋಡಿದಾಗ ಈ ಅಕೌಂಟ್ ಇದೆ. ಇಷ್ಟು ದಿನ ನಾನು ಸುಮ್ಮನಿದ್ದೆ. ಆದರೆ ಇದನ್ನು ನೋಡಿದ ಮೇಲೆ ಹೇಳಬೇಕು ಎಂದು ಮುಂದೆ ಬಂದೆ. ಭಯ ಅನ್ನಿಸಿತು. ಬೇಸರ ಆಗುತ್ತದೆ. ಅಂತಹ ಸುಂದರ ಹೆಂಡತಿ ಇರುವಾಗ ಈ ರೀತಿ ಸರೀನಾ? ಛೀ ಎನಿಸುತ್ತದೆ. ನನಗೆ ಪ್ರತಿದಿನ ಇಂತಹ ಸಾಕಷ್ಟು ಕೆಟ್ಟ ಮೆಸೇಜ್, ಟ್ರೋಲ್ ಎದುರಾಗುತ್ತಿರುತ್ತದೆ” ಎಂದು ಚಿತ್ರಾಲ್ ವಿವರಿಸಿದ್ದರು.

ಬಿಗ್‌ಬಾಸ್ ಕನ್ನಡ ಸೀಸನ್ -10 ಮುಗಿದು ಬಹಳ ದಿನಗಳಾಯ್ತು.ವೇದಿಕೆಯಲ್ಲಿ ಲೈವ್ ಲೈವ್ ಆಡಿಯೆನ್ಸ್ ಬೆಂಬಲದ ಎಲ್ಲರನ್ನು ಮನೆಯೊಳಗೆ ಕಳುಹಿಸಲಾಗಿತ್ತು. ಆದರೆ ಈ ಪ್ರಕ್ರಿಯೆಯಲ್ಲಿ ನಟಿ ಹಾಗೂ ಬಾಡಿ ಬಿಲ್ಡರ್ ಚಿತ್ರಾಲ್ ರಂಗಸ್ವಾಮಿ ಸೋತು ಹೊರಬಂದಿದ್ದರು. ಚಿತ್ರಲ್‌ ರಂಗಸ್ವಾಮಿ ಕಿರುತೆರೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾಗಳಲ್ಲೂ ನಟಿಸಿದ್ದಾರೆ. ಜೊತೆಗೆ ಬಾಡಿ ಬಿಲ್ಡರ್‌ ಆಗಿಯೂ ಗುರುತಿಸಿಕೊಂಡಿದ್ದಾರೆ. 2017ರಿಂದ ಬಾಡಿ ಬಿಲ್ಡಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Continue Reading

Latest

OTT Release : ಒಟಿಟಿಯಲ್ಲಿ ಈ ವಾರ ಬಿಡುಗಡೆಯಾಗಲಿರುವ ಹೊಸ ಚಲನಚಿತ್ರಗಳು, ವೆಬ್ ಸರಣಿಗಳ ಪಟ್ಟಿ ಹೀಗಿವೆ

OTT Release ನೀವು ಸಿನಿಮಾ ಪ್ರಿಯರಾಗಿದ್ದರೆ ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾಗಳು ನಿಮಗೆ ಭರಪೂರ ಮನರಂಜನೆಯನ್ನು ನೀಡುವುದಂತೂ ಗ್ಯಾರಂಟಿ. ಎ ಫ್ಯಾಮಿಲಿ ಅಫೇರ್, ಆವೇಶಮ್, ಸಿವಿಲ್ ವಾರ್, ಸಾವೇಜ್ ಬ್ಯೂಟಿ ಸೀಸನ್ 2, ಶರ್ಮಾಜೀ ಕಿ ಬೇಟಿ, ದಿ ವೈರ್ಲ್ವಿಂಡ್ ಮುಂತಾದ ಸಿನಿಮಾಗಳು ನಿಮ್ಮನ್ನು ಹೊಸಲೋಕಕ್ಕೆ ಕರೆದುಕೊಂಡು ಹೋಗಲಿದೆ. ತಪ್ಪದೇ ಒಟಿಟಿಯಲ್ಲಿ ಈ ಸಿನಿಮಾವನ್ನು ನೋಡಿ.

VISTARANEWS.COM


on

OTT Release
Koo

ಬೆಂಗಳೂರು : ಒಟಿಟಿ ಪ್ರತಿವಾರ ತನ್ನ ವೀಕ್ಷಕರಿಗೆ ಹೊಸ ಹೊಸ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ಬಿಡುಗಡೆ ಮಾಡುತ್ತದೆ. ಆ ಮೂಲಕ ಒಟಿಟಿ ತನ್ನ ವೀಕ್ಷಕರನ್ನು ಸೆಳೆಯುವ ಯೋಜನೆ ಮಾಡುತ್ತಿದೆ. ಪ್ರತಿಬಾರಿ ಒಟಿಟಿಯಲ್ಲಿ ಉತ್ತಮವಾದ ಚಿತ್ರಗಳನ್ನು ಬಿಡುಗಡೆ ಮಾಡಿ ವೀಕ್ಷಕರಿಗೆ ಮನೋರಂಜನೆಯನ್ನು ನೀಡುತ್ತಿದೆ. ಹಾಗಾದ್ರೆ ಒಟಿಟಿ(OTT Release )ಯಲ್ಲಿ ಈ ವಾರ ಬಿಡುಗಡೆಯಾಗಲಿರುವ ಹೊಸ ಚಲನಚಿತ್ರಗಳು, ವೆಬ್ ಸರಣಿಗಳ ಬಗ್ಗೆ ತಿಳಿದುಕೊಳ್ಳೋಣ.

OTT Release

ಎ ಫ್ಯಾಮಿಲಿ ಅಫೇರ್(A Family Affair):

ಒಬ್ಬ ಯುವತಿ, ಆಕೆಯ ತಾಯಿ ಮತ್ತು ಆಕೆಯ ನೆಚ್ಚಿನ ಸಿನಿಮಾ ತಾರೆ ಬಾಸ್ ಅವರ ಪ್ರೀತಿ, ಸೆಕ್ಸ್ ಅನ್ನು ನ್ಯಾವಿಗೇಟ್ ಮಾಡುವುದರಿಂದ ಅವರ ಪ್ರಣಯ ಹಾಸ್ಯ ಸನ್ನಿವೇಶಗಳಿಗೆ ಕಾರಣವಾಗುತ್ತದೆ. ಇದರಲ್ಲಿ ನಿಕೋಲ್ ಕಿಡ್ಮನ್, ಜಾಕ್ ಎಫ್ರಾನ್, ಜೋಯಿ ಕಿಂಗ್ ನಟಿಸಿದ್ದಾರೆ. ಇದು ಜೂನ್ 28ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.

OTT Release

ಆವೇಶಮ್ (ಹಿಂದಿ) (Aavesham (Hindi):

ಮೂವರು ಹದಿಹರೆಯದ ಬಾಲಕರು ಎಂಜಿನಿಯರಿಂಗ್ ಅಧ್ಯಯನಕ್ಕಾಗಿ ಬೆಂಗಳೂರಿಗೆ ಬಂದು ಅಲ್ಲಿ ಜಗಳವಾಡುತ್ತಾರೆ. ನಂತರ ಅವರು ಹೊಡೆದಾಡಲು ಸ್ಥಳೀಯ ದರೋಡೆಕೋರನ ಸಹಾಯವನ್ನು ಪಡೆಯುತ್ತಾರೆ. ಇದರಲ್ಲಿ ಫಹಾದ್ ಫಾಸಿಲ್, ಹಿಪ್‌ಸ್ಟರ್‌, ಸಜಿನ್ ಗೋಪು, ಮಿಥುನ್ ಜೈ ಶಂಕರ್ ನಟಿಸಿದ್ದಾರೆ. ಇದು ಹಾಸ್ಯ ಹಾಗೂ ಆ್ಯಕ್ಷನ್ ಚಿತ್ರವಾಗಿದ್ದು, ಜೂನ್ 28ರಂದು ಡಿಸ್ನಿ ಪ್ಲಸ್ ಹಾಟ್ಸ್ಸ್ಟಾರ್ನಲ್ಲಿ ಪ್ರಸಾರವಾಗಿದೆ.

OTT Release

ಸಿವಿಲ್ ವಾರ್ (Civil War):

ಯುಎಸ್ ಅಂತರ್ಯುದ್ಧದ ಸಮಯದಲ್ಲಿ ವಾರ್ ಜರ್ನಲಿಸ್ಟ್ ತಂಡವು ನ್ಯೂಯಾರ್ಕ್ ನಗರದಿಂದ ವಾಷಿಂಗ್ಟನ್ ಡಿಸಿಗೆ ಪ್ರಯಾಣಿಸುತ್ತದೆ. ಬಂಡುಕೋರರು ರಾಜಧಾನಿಯನ್ನು ವಶಪಡಿಸಿಕೊಳ್ಳುವ ಮೊದಲು ಯುಎಸ್ ಅಧ್ಯಕ್ಷರನ್ನು ಸಂದರ್ಶಿಸುವ ಗುರಿಯನ್ನು ಅವರು ಹೊಂದಿರುತ್ತಾರೆ.ಇದರಲ್ಲಿ ಕ್ರಿಸ್ಟನ್ ಡನ್ಸ್ಟ್, ವ್ಯಾಗ್ನರ್ ಮೌರಾ, ಕೈಲೀ ಸ್ಪೇನಿ, ಸ್ಟೀಫನ್ ಮೆಕಿನ್ಲೆ ಹೆಂಡರ್ಸನ್ ನಟಿಸಿದ್ದಾರೆ. ಇದು ಆ್ಯಕ್ಷನ್, ಥ್ರಿಲ್ಲರ್ ಚಿತ್ರವಾಗಿದ್ದು, ಜೂನ್ 28ರಂದು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಪ್ರಸಾರವಾಗಿದೆ.

OTT Release

ರೌತು ಕಾ ರಾಜ್(Rautu Ka Raaz):

ಉತ್ತರಾಖಂಡದ ತೆಹ್ರಿಯ ರೌತು ಕಿ ಬೇಲಿ ಗ್ರಾಮದ ಅಂಧರ ಶಾಲೆಯ ವಾರ್ಡನ್ ತನ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗುತ್ತಾನೆ. ಈ ಪ್ರಕರಣದ ತನಿಖೆ ಮಾಡಲು ಇನ್ಸ್ಪೆಕ್ಟರ್ ದೀಪಕ್ ನೇಗಿ ಅವರನ್ನು ಕರೆಸಲಾಗುತ್ತದೆ. ಇದರಲ್ಲಿ ನವಾಜುದ್ದೀನ್ ಸಿದ್ದಿಕಿ, ರಾಜೇಶ್ ಕುಮಾರ್, ಅತುಲ್ ತಿವಾರಿ, ನಾರಾಯಣಿ ಶಾಸ್ತ್ರಿ ನಟಿಸಿದ್ದಾರೆ. ಇದು ಮಿಸ್ಟರಿ/ಥ್ರಿಲ್ಲರ್ ಚಿತ್ರವಾಗಿದ್ದು, ಜೂನ್ 28ರಂದು ಜೀ5ನಲ್ಲಿ ಬಿಡುಗಡೆಯಾಗಿದೆ.

OTT Release

ಸಾವೇಜ್ ಬ್ಯೂಟಿ ಸೀಸನ್ 2 (Savage Beauty Season 2):

ನಿಗೂಢ ಮಹಿಳೆಯೊಬ್ಬಳು ತನ್ನ ಜೀವನದಲ್ಲಿ ಹಿಂದೆ ನಡೆದ ದುರಂತಕ್ಕೆ ಸೇಡು ತೀರಿಸಿಕೊಳ್ಳಲು ಜಾಗತಿಕ ಸೌಂದರ್ಯ ಸಾಮ್ರಾಜ್ಯ ಮತ್ತು ಕರಾಳ ರಹಸ್ಯಗಳನ್ನೊಳಗೊಂಡ ಪ್ರಬಲ ಕುಟುಂಬಕ್ಕೆ ಬರುತ್ತಾಳೆ. ಈ ಚಿತ್ರದಲ್ಲಿ ನಂಬಿತಾ ಬೆನ್-ಮಜ್ವಿ, ರೋಸ್ಮರಿ ಜಿಮು, ಎನ್ಥಾಟಿ ಮೋಶೆಶ್, ದುಮಿಸಾನಿ ಎಂಬೆಬೆ ನಟಿಸಿದ್ದಾರೆ. ಇದು ಥ್ರಿಲ್ಲರ್/ಡ್ರಾಮಾ ಚಿತ್ರವಾಗಿದ್ದು, ಜೂನ್ 28ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.

OTT Release

ಶರ್ಮಾಜೀ ಕಿ ಬೇಟಿ (Sharmajee Ki Beti):

ಶರ್ಮಾ ಎಂಬ ಉಪನಾಮ ಹೊಂದಿರುವ ಮೂವರು ಮಹಿಳೆಯರನ್ನು ಕಥೆ ಅನುಸರಿಸುತ್ತದೆ. ಅವರ ಜೀವನವು ಸರಿಯಾದ ದಾರಿಯಲ್ಲಿ ಚಲಿಸಿದರೂ ಕೂಡ ಅವರು ಸಂಕ್ಷಿಪ್ತವಾದ ಮಾರ್ಗಗಳನ್ನು ದಾಟುತ್ತಾರೆ, ಇದು ಅವರ ಜೀವನದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತದೆ. ಈ ಚಿತ್ರದಲ್ಲಿ ಸಾಕ್ಷಿ ತನ್ವರ್, ದಿವ್ಯಾ ದತ್ತಾ, ಸಯಾಮಿ ಖೇರ್ ನಟಿಸಿದ್ದಾರೆ. ಇದು ಒಂದು ಡ್ರಾಮಾವಾಗಿದ್ದು, ಜೂನ್ 28ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ.

ಇದನ್ನೂ ಓದಿ:  ನಟ ಶಾರುಖ್ ಖಾನ್ ಬಗ್ಗೆ ಶಾಕಿಂಗ್ ಸುದ್ದಿ ಕೊಟ್ಟ ನಟ ಗೋವಿಂದ್ ನಾಮದೇವ್

ದಿ ವೈರ್ಲ್ವಿಂಡ್(The Whirlwind):

ದಕ್ಷಿಣ ಕೊರಿಯಾದ ಸರ್ಕಾರದಲ್ಲಿ, ಭ್ರಷ್ಟಾಚಾರವನ್ನು ನಿಭಾಯಿಸುವ ಗುರಿಯನ್ನು ಹೊಂದಿರುವ ಪ್ರಧಾನಿ ಪಾರ್ಕ್ ಡಾಂಗ್ ಹೋ, ಎಂಬವವರು ಅಲ್ಲಿನ ಅಧ್ಯಕ್ಷರ ಹತ್ಯೆಯನ್ನು ಧೈರ್ಯದಿಂದ ಆಯೋಜಿಸುತ್ತಾರೆ. ಇದರಲ್ಲಿ ಸೋಲ್ ಕ್ಯೂಂಗ್-ಗು, ಕಿಮ್ ಹೀ-ಎ, ಲೀ ಹೇ ಯಂಗ್ ನಟಿಸಿದ್ದಾರೆ. ಇದು ಒಂದು ಡ್ರಾಮಾವಾಗಿದ್ದು, ಜೂನ್ 28ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.

Continue Reading
Advertisement
Arvind Kejriwal
ಪ್ರಮುಖ ಸುದ್ದಿ3 mins ago

Arvind Kejriwal: ಅರವಿಂದ ಕೇಜ್ರಿವಾಲ್‌ ಬಿಡುಗಡೆ ಕನಸು ಭಗ್ನ; ಮತ್ತೆ 14 ದಿನ ನ್ಯಾಯಾಂಗ ಬಂಧನ

Dengue Fever
ಕರ್ನಾಟಕ13 mins ago

Dengue Fever: ರಾಯಚೂರಲ್ಲಿ 6 ವರ್ಷದ ಮಗುವಿಗೆ ಡೆಂಗ್ಯೂ; ದಾವಣಗೆರೆ ಜಿಲ್ಲೆಯಲ್ಲಿ 142 ಪ್ರಕರಣಗಳು ಪತ್ತೆ!

Arshdeep Singh
ಕ್ರೀಡೆ19 mins ago

Arshdeep Singh : ಫೈನಲ್​ ಪಂದ್ಯದಲ್ಲಿ ಅರ್ಶ್​ದೀಪ್​ ಸಿಂಗ್​ಗೆ ಇದೆ ದಾಖಲೆ ಬರೆಯುವ ಅವಕಾಶ

International Mud Day
ಫ್ಯಾಷನ್30 mins ago

International Mud Day: ಆರೋಗ್ಯ, ಸೌಂದರ್ಯದ ಪಾಲಿಗೆ ಹೊನ್ನು ಈ ಮಣ್ಣು!

Physical relationship
ವಿದೇಶ49 mins ago

Physical relationship: ಕೈದಿ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದ್ದ ಮಹಿಳಾ ಜೈಲಾಧಿಕಾರಿ ಬಗ್ಗೆ ಶಾಕಿಂಗ್‌ ವಿಚಾರ ಬಯಲು

Actor Darshan does not need counseling says by shamitha malnad
ಸ್ಯಾಂಡಲ್ ವುಡ್53 mins ago

Actor Darshan: ದಚ್ಚು ಪರಿಸ್ಥಿತಿಗೆ ಪವಿತ್ರಾ ಕಾರಣ ಅನ್ನೋಕಾಗಲ್ಲ; ದರ್ಶನ್‌ಗೆ ಕೌನ್ಸೆಲಿಂಗ್‌ ಅಗತ್ಯ ಇಲ್ಲ ಎಂದ ಖ್ಯಾತ ಗಾಯಕಿ!

IND vs SA Final
ಕ್ರೀಡೆ1 hour ago

IND vs SA Final: ರಾಮನಾಮ ಸ್ಮರಣೆ ಮಾಡಿ ಭಾರತ ವಿರುದ್ಧ ಫೈನಲ್​ ಆಡಲಿದ್ದಾರೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗ

karnataka weather Forecast
ಮಳೆ1 hour ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

Road Accident
ಕರ್ನಾಟಕ1 hour ago

Road Accident: ಮುಧೋಳ ಬಳಿ ಶಾಲಾ ಬಸ್‌ ಹರಿದು 4 ವರ್ಷದ ಬಾಲಕ ಸಾವು

T20 World Cup Final
ಪ್ರಮುಖ ಸುದ್ದಿ1 hour ago

T20 World Cup Final : ಭಾರತ ತಂಡದ ಗೆಲುವಿಗಾಗಿ ವಿಶ್ವ ಪ್ರಸಿದ್ಧ ಸಿದ್ಧಿವಿನಾಯಕ ದೇಗುದಲ್ಲಿ ವಿಶೇಷ ಪೂಜೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 hour ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ7 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ24 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

ಟ್ರೆಂಡಿಂಗ್‌