Site icon Vistara News

Urfi Javed: ಸ್ಕರ್ಟ್‌ನೊಳಗೆ ಬ್ರಹ್ಮಾಂಡ ತೋರಿಸಿದ ಉರ್ಫಿ ಜಾವೇದ್!

Urfi Javed Dress With Planets

ಬೆಂಗಳೂರು: ಫ್ಯಾಷನ್‌ ಐಕಾನ್‌ ಎಂದೇ ಖ್ಯಾತಿ ಪಡೆದ ಉರ್ಫಿ ಜಾವೇದ್ (Urfi Javed) ಆಗಾಗ ತಮ್ಮ ಉಡುಪಿನ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಅಷ್ಟೇ ಅಲ್ಲ ಅವರ ಸ್ಟೈಲ್‌ಗೆ ಬಾಲಿವುಡ್‌ ಸೆಲೆಬ್ರಿಟಿಗಳು ಫಿದಾ ಆಗಿದ್ದಾರೆ. ಮಂಗಳವಾರ (ಮಾ.19) ಉರ್ಫಿ ಕಾರ್ಯಕ್ರಮವೊಂದರಲ್ಲಿ ಹೊಸ ಅವತಾರದಲ್ಲಿ (Dress With Planets) ಕಂಡು ಬಂದರು. ಯೂನಿವರ್ಸ್-ಪ್ರೇರಿತ ಉಡುಗೆ ತೊಟ್ಟು ಪೋಸ್‌ ಕೊಟ್ಟಿದ್ದಾರೆ ಉರ್ಫಿ.

ಇದೀಗ ಉಡುಪಿನೊಳಗೇ ಬ್ರಹ್ಮಾಂಡ ತೋರಿಸಿದ್ದಾರೆ ನಟಿ ಉರ್ಫಿ. ಇದೀಗ ಉರ್ಫಿ ಅವರನ್ನು ಆಧುನಿಕ ಶ್ರೀಕೃಷ್ಣ ಎನ್ನುತ್ತಿದ್ದಾರೆ ಫ್ಯಾನ್ಸ್​. ತಮ್ಮ ಸ್ಕರ್ಟ್‌ನಲ್ಲಿ ಬ್ರಹ್ಮಾಂಡ ತಿರುಗುವ ರೀತಿಯಲ್ಲಿ ತೋರಿಸಿದ್ದಾರೆ. ಇಡೀ ಗ್ರಹಗಳನ್ನು ಸ್ಕರ್ಟ್‌ನಲ್ಲಿ ನೋಡಬಹುದಾಗಿದೆ. ʻಕೆಲವರು ಶ್ರೀಕೃಷ್ಣ ಪರಮಾತ್ಮ ಬಾಯಲ್ಲಿ ಬ್ರಹ್ಮಾಂಡ ತೋರಿದರೆ, ನೀವು ಉಡುಪಿನೊಳಗೇ ಬ್ರಹ್ಮಾಂಡ ತೋರಿದ್ದೀರಿ, ಆಧುನಿಕ ಕೃಷ್ಣ ನೀವುʼ ಎನ್ನುತ್ತಿದ್ದಾರೆ.

ಹಲವರು ಈ ಸ್ಕರ್ಟ್‌ ನೋಡಿ ಮೆಚ್ಚಿಕೊಂಡಿದ್ದಾರೆ. ಓರಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತುಂಬ ಕ್ರಿಯೇಟಿವ್‌ ಆಗಿದೆ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Uorfi Javed: ʻಲವ್ ಸೆಕ್ಸ್ ಔರ್ ಧೋಖಾʼಸೀಕ್ವೆಲ್‌ನಲ್ಲಿ ಉರ್ಫಿ ಜಾವೇದ್: ಏಕ್ತಾ ಕಪೂರ್‌ ನಿರ್ಮಾಪಕಿ!

ʻಲವ್ ಸೆಕ್ಸ್ ಔರ್ ಧೋಖಾʼ ಸೀಕ್ವೆಲ್‌ನಲ್ಲಿ ಉರ್ಫಿ ಜಾವೇದ್

2010ರಲ್ಲಿ ಬಿಡುಗಡೆಯಾದ ʻಲವ್ ಸೆಕ್ಸ್ ಔರ್ ಧೋಖಾʼ (Love Sex Aur Dhokha) ಸಿನಿಮಾವನ್ನು ದಿವಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದರು. ರಾಜ್‌ಕುಮಾರ್ ರಾವ್, ನೇಹಾ ಚೌಹಾನ್, ಅಂಶುಮಾನ್ ಝಾ ಮತ್ತು ನುಶ್ರತ್ ಭರುಚ್ಚ ಇತರರು ನಟಿಸಿದ್ದರು. ಈ ಸಿನಿಮಾದ ಸೀಕ್ವೆಲ್‌ಅನ್ನು ಫೆಬ್ರವರಿ 14ರಂದು ಪ್ರೇಮಿಗಳ ದಿನದಂದು ಘೋಷಿಸಲಾಗಿತ್ತು. ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆಕ್ಸ್ ಔರ್ ಧೋಖಾ 2’ (Love Sex Aur Dhokha 2) ಏಪ್ರಿಲ್ 19ರಂದು ಥಿಯೇಟರ್‌ಗಳಲ್ಲಿ ಬರಲಿದೆ. ವಿಶೇಷ ಅಂದರೆ ಈ ಸಿನಿಮಾ ಮೂಲಕ ಫ್ಯಾಷನ್‌ ಐಕಾನ್‌ ಎಂದೇ ಖ್ಯಾತಿ ಪಡೆದ ಉರ್ಫಿ ಜಾವೇದ್ (Uorfi Javed) ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ‘ಲವ್ ಸೆಕ್ಸ್ ಔರ್ ಧೋಖಾ 2’ ಅನ್ನು ದಿವಾಕರ್ ಬ್ಯಾನರ್ಜಿ ಅವರೇ ನಿರ್ದೇಶಿಸಿದ್ದಾರೆ.

ಲವ್ ಸೆಕ್ಸ್ ಔರ್ ಧೋಖಾ 2ನಲ್ಲಿ ಆಸಕ್ತಿದಾಯಕ ಕಥೆ ಇರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇಂಟರ್ನೆಟ್ ಜಗತ್ತಿನಲ್ಲಿ ನಡೆಯುವ ಪ್ರೀತಿಯ ಕಥೆ ಇರಲಿದೆ ಎನ್ನಲಾಗಿದೆ. ತುಷಾರ್ ಕಪೂರ್ ಮತ್ತು ಮೌನಿ ರಾಯ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾ ಸ್ವಾರ್‌ ಉರ್ಫಿ ಜಾವೇದ್, ‘ಲವ್ ಸೆಕ್ಸ್ ಔರ್ ಧೋಖಾ 2’ ಮೂಲಕ ದೊಡ್ಡ ಪರದೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

Exit mobile version