ಬೆಂಗಳೂರು: ಕೆಲವು ದಿನಗಳಿಂದ ನಟಿ ಉರ್ಫಿ ಜಾವೇದ್ (Urfi Javed) ಕುಡಿದು ತೇಲಡುತ್ತಿರುವ ವಿಡಿಯೊ ಭಾರಿ ವೈರಲ್ ಆಗಿತ್ತು. ಹೀಗಾಗಿ ಉರ್ಫಿಯ ಫ್ಯಾಷನ್ ಬಗ್ಗೆಯೇ ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಬಸ್, ಮಳಿಗೆಗಳಿಗೆ ಅಳವಡಿಸಿ ಡಿಜಿಟಲ್ ನಾಮಫಲಕವನ್ನು ಎದೆಗೆ ಅಳವಡಿಸಿಕೊಂಡು ಹೋಗಿದ್ದಾರೆ. , ಇನ್ನು ಫ್ಲ್ಯಾಟ್ ಚೆಸ್ಟ್ ಎಂದು ನೀವು ಹೇಳುವುದು ಏಕೆ ಎಂದು ನಟಿಯ ಕಾಲೆಳೆಯುತ್ತಿದ್ದಾರೆ.
ಕೆಲ ದಿನಗಳ ಹಿಂದೆ, ಮೈಮೇಲಿಂದಲೇ ಉದುರುವ ಹೂವು-ಎಲೆ ಹಾರಾಡುವ ಚಿಟ್ಟೆಗಳ ಬಟ್ಟೆ ತೊಟ್ಟು ಅಭಿಮಾನಿಗಳ ಹುಬ್ಬೇರಿಸಿದ್ದರು. ಇದರ ವಿಡಿಯೋ ಸಕತ್ ವೈರಲ್ ಆಗಿದ್ದು, ಇಂಥ ಐಡಿಯಾ ಬೇರೆ ಯಾರಿಗೂ ಹೊಳೆಯಲು ಸಾಧ್ಯವೇ ಇಲ್ಲ ಬಿಡಿ ಎಂದು ಉರ್ಫಿ ಅಭಿಮಾನಿಗಳು ದೊಡ್ಡ ನಮಸ್ಕಾರ ಹಾಕಿದ್ದರು.
ಇದಕ್ಕೂ ಮುಂಚೆ ಯೂನಿವರ್ಸ್-ಪ್ರೇರಿತ ಉಡುಗೆ ತೊಟ್ಟು ಪೋಸ್ ಕೊಟ್ಟಿದ್ದರು. ಉಡುಪಿನೊಳಗೇ ಬ್ರಹ್ಮಾಂಡ ತೋರಿಸಿದ್ದರು ನಟಿ ಉರ್ಫಿ. ಉರ್ಫಿ ಅವರನ್ನು ಆಧುನಿಕ ಶ್ರೀಕೃಷ್ಣ ಎನ್ನುತ್ತಿದ್ದರು ಫ್ಯಾನ್ಸ್. ತಮ್ಮ ಸ್ಕರ್ಟ್‌ನಲ್ಲಿ ಬ್ರಹ್ಮಾಂಡ ತಿರುಗುವ ರೀತಿಯಲ್ಲಿ ತೋರಿಸಿದ್ದರು. ಇಡೀ ಗ್ರಹಗಳನ್ನು ಸ್ಕರ್ಟ್‌ನಲ್ಲಿ ನೋಡಬಹುದಾಗಿತ್ತು. ʻಕೆಲವರು ಶ್ರೀಕೃಷ್ಣ ಪರಮಾತ್ಮ ಬಾಯಲ್ಲಿ ಬ್ರಹ್ಮಾಂಡ ತೋರಿದರೆ, ನೀವು ಉಡುಪಿನೊಳಗೇ ಬ್ರಹ್ಮಾಂಡ ತೋರಿದ್ದೀರಿ, ಆಧುನಿಕ ಕೃಷ್ಣ ನೀವುʼ ಎನ್ನುತ್ತಿದ್ದರು.
ಇದನ್ನೂ ಓದಿ: Urfi Javed: ಚಿಟ್ಟೆ, ಬ್ರಹ್ಮಾಂಡ ಎಲ್ಲಾ ಆಯ್ತು! ಈಗ ಅಕ್ಟೋಪಸ್ನಂತೆ ಬಂದ ಉರ್ಫಿ!
ಫ್ಯಾಷನ್ ಐಕಾನ್ ಎಂದೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ (Urfi Javed) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದರ ಜತೆಗೆ ಉರ್ಫಿ ಜಾವೇದ್ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆಕ್ಸ್ ಔರ್ ಧೋಖಾ 2’ ಸಿನಿಮಾದಲ್ಲಿ ಅವರು ಅಭಿನಯಿಸಿದ್ದರು. ಏಪ್ರಿಲ್ 19ರಂದು ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ದಿವಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದರು. ಈ ಹಿಂದೆ ಇವರು ʻಲವ್ ಸೆಕ್ಸ್ ಔರ್ ಧೋಖಾʼ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ʼಲವ್ ಸೆಕ್ಸ್ ಔರ್ ಧೋಖಾ 2ʼನಲ್ಲಿ ಆಸಕ್ತಿದಾಯಕ ಕಥೆ ಇರಲಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಇಂಟರ್‌ನೆಟ್ ಜಗತ್ತಿನಲ್ಲಿ ನಡೆಯುವ ಪ್ರೀತಿಯ ಕಥೆ ಇರಲಿದೆ ಎನ್ನಲಾಗಿತ್ತು.