Urfi Javed: ಮತ್ತೆ ಕುಡಿದು ತೇಲಾಡಿದ ಉರ್ಫಿ ಜಾವೇದ್; ವಿಡಿಯೊ ವೈರಲ್‌! - Vistara News

ವೈರಲ್ ನ್ಯೂಸ್

Urfi Javed: ಮತ್ತೆ ಕುಡಿದು ತೇಲಾಡಿದ ಉರ್ಫಿ ಜಾವೇದ್; ವಿಡಿಯೊ ವೈರಲ್‌!

Urfi Javed: ಫ್ಯಾಷನ್‌ ಐಕಾನ್‌ ಎಂದೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ (Urfi Javed) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದರ ಜತೆಗೆ ಉರ್ಫಿ ಜಾವೇದ್‌ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆಕ್ಸ್ ಔರ್ ಧೋಖಾ 2’ ಸಿನಿಮಾದಲ್ಲಿ ಅವರು ಅಭಿನಯಿಸಿದ್ದರು. ಏಪ್ರಿಲ್ 19ರಂದು ಸಿನಿಮಾ ಬಿಡುಗಡೆಯಾಗಿತ್ತು.

VISTARANEWS.COM


on

Urfi Javed Steps Out Drunk For Third Time In A Month
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಟಿ ಉರ್ಫಿ ಜಾವೇದ್ (Urfi Javed) ಮತ್ತೆ ಕುಡಿದು ತೇಲಾಡಿರುವ ವಿಡಿಯೊ ವೈರಲ್‌ ಆಗಿದೆ. ಮೂರನೇ ಬಾರಿಗೆ ಉರ್ಫಿ ಈ ರೀತಿ ಕಂಡು ಬಂದಿದ್ದಾರೆ. ಕಾರಿನ ಬಳಿ ಹೋಗಲಾರದೇ ಸ್ನೇಹಿತರ ಸಹಾಯದಿಂದ ನಟಿ ಹೋಗುವುದು ಕಂಡು ಬಂತು. ಹಳದಿ ಬಣ್ಣದ ಮಿನಿ ಡ್ರೆಸ್ ಧರಿಸಿದ್ದರು ಉರ್ಫಿ.

ಪಬ್‌ನಿಂದ ಹೊರಬಂದ ತಕ್ಷಣ, ಪಾಪರಾಜಿಗಳು ಮತ್ತು ಸ್ಥಳೀಯರು ಉರ್ಫಿಯನ್ನು ಗುಂಪುಗೂಡಿದರು. ಕಾರಿನವರೆಗೆ ನಡೆಯಲು ಪ್ರಯಾಸಪಡುತ್ತಿದ್ದಾಗ, ಅವರ ಸಹೋದರಿ ಉರ್ಫಿಯನ್ನು ಬಿಗಿಯಾಗಿ ಹಿಡಿದುಕೊಂಡು ಜನರಿಗೆ ದಾರಿ ಮಾಡಿಕೊಡುವಂತೆ ಕೇಳುತ್ತಿದ್ದರು. ʻತುಂಬ ಕುಡಿದ್ದಿದ್ದೇನೆʼʼಎಂದು ಉರ್ಫಿ ಕೂಡ ಹೋಗಲು ದಾರಿ ಮಾಡಿಕೊಂಡಿ ಎಂದು ವಿನಂತಿಸಿದ್ದಾರೆ.

ಫ್ಯಾಷನ್‌ ಐಕಾನ್‌ ಎಂದೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ (Urfi Javed) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದರ ಜತೆಗೆ ಉರ್ಫಿ ಜಾವೇದ್‌ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆಕ್ಸ್ ಔರ್ ಧೋಖಾ 2’ ಸಿನಿಮಾದಲ್ಲಿ ಅವರು ಅಭಿನಯಿಸಿದ್ದರು. ಏಪ್ರಿಲ್ 19ರಂದು ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ದಿವಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದರು. ಈ ಹಿಂದೆ ಇವರು ʻಲವ್ ಸೆಕ್ಸ್ ಔರ್ ಧೋಖಾʼ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದರು. ʼಲವ್ ಸೆಕ್ಸ್ ಔರ್ ಧೋಖಾ 2ʼನಲ್ಲಿ ಆಸಕ್ತಿದಾಯಕ ಕಥೆ ಇರಲಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಇಂಟರ್‌ನೆಟ್‌ ಜಗತ್ತಿನಲ್ಲಿ ನಡೆಯುವ ಪ್ರೀತಿಯ ಕಥೆ ಇರಲಿದೆ ಎನ್ನಲಾಗಿತ್ತು.

Urfi Javed: ಉರ್ಫಿ ಜಾವೇದ್‌ ಫುಲ್‌ ಟೈಟ್‌; ಸ್ನೇಹಿತೆ ಪಟ್ಟ ಹರಸಾಹಸ ಅಷ್ಟಿಷ್ಟಲ್ಲ!ಇದನ್ನೂ ಓದಿ:

ಬಾಲಿವುಡ್‌ ಕಲಾವಿದರಾದ ತುಷಾರ್ ಕಪೂರ್ ಮತ್ತು ಮೌನಿ ರಾಯ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಶೇಷ ಎಂದರೆ ಇದು ಉರ್ಫಿ ಜಾವೇದ್‌ ಅಭಿನಯದ ಮೊದಲ ಬಾಲಿವುಡ್‌ ಚಿತ್ರ. ಬಿಗ್‌ಬಾಸ್‌ ರಿಯಾಲಿಟಿ ಶೋದ ಮೂಲಕ ಗಮನ ಸೆಳೆದಿದ್ದ ಅವರು ಸಿನಿಮಾದಲ್ಲಿ ಯಾವ ರೀತಿ ಕಾಣಿಸಿಕೊಳ್ಳಬಹುದು ಎನ್ನುವ ಕುತೂಹಲ ಮೂಡಿತ್ತು. ಮಾತ್ರವಲ್ಲ ಅವರು ಸ್ಪ್ಲಿಟ್‌ವಿಲ್ಲಾ ಎಕ್ಸ್ 5 (Splitsvilla X5) ಶೋದಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: 600 ಲೋಡರ್‌ ಹುದ್ದೆಗಳಿಗೆ 25,000ಕ್ಕೂ ಹೆಚ್ಚು ಅಭ್ಯರ್ಥಿಗಳು! ಕಾಲ್ತುಳಿತದ ಸನ್ನಿವೇಶ

Viral Video: ಏರ್ ಇಂಡಿಯಾ ಏರ್‌ಪೋರ್ಟ್‌ ಸರ್ವೀಸಸ್ ಲಿಮಿಟೆಡ್ ಕಂಪನಿಯು 600 ಲೋಡರ್‌ ಹುದ್ದೆಗಳಿಗೆ ಜಾಹೀರಾತು ನೀಡಿತ್ತು. ಆದರೆ 25,000ಕ್ಕೂ ಹೆಚ್ಚು ಅಭ್ಯರ್ಥಿಗಳು ಸಂದರ್ಶನಕ್ಕೆ ಆಗಮಿಸಿದ್ದರು. ನೇಮಕಾತಿ ಕಚೇರಿಯ ಹೊರಗೆ ಅನಿಯಂತ್ರಿತ ಪರಿಸ್ಥಿತಿ ಉಂಟಾಗಿತ್ತು.

VISTARANEWS.COM


on

Viral Video
Koo

ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಎಷ್ಟರಮಟ್ಟಿಗೆ ಇದೆ ಎಂದರೆ ಅದಕ್ಕೆ ನಿದರ್ಶನ ಎಂಬಂತೆ ಮುಂಬಯಿಯಲ್ಲಿ ನಡೆದ ಈ ಘಟನೆಯೇ ಪ್ರಮುಖ ಸಾಕ್ಷಿಯಾಗಿದೆ. ಏರ್ ಇಂಡಿಯಾ ಏರ್‌ಪೋರ್ಟ್‌ ಸರ್ವೀಸಸ್ ಲಿಮಿಟೆಡ್ ಆಯೋಜಿಸಿದ್ದ ವಾಕ್-ಇನ್ ಸಂದರ್ಶನಕ್ಕಾಗಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಮಂಗಳವಾರ ಮುಂಬೈನ ಕಲಿನಾ ಪ್ರದೇಶದಲ್ಲಿ ಜಮಾಯಿಸಿದಾಗ ಗೊಂದಲದ ಪರಿಸ್ಥಿತಿ ಉಂಟಾಗಿತ್ತು. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವಿವಿಧ ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳನ್ನು ಒಳಗೊಂಡ ‘ಹ್ಯಾಂಡಿಮ್ಯಾನ್’ ಉದ್ಯೋಗಕ್ಕಾಗಿ ಏರ್ ಇಂಡಿಯಾ ಏರ್‌ಪೋರ್ಟ್‌ ಸರ್ವೀಸಸ್ ಲಿಮಿಟೆಡ್ ಕಂಪನಿಯು ಲೋಡರ್‌ ಮತ್ತು ರಿಪೇರಿ ಕೆಲಸ ಮಾಡುವ ಹುದ್ದೆಗಳಿಗೆ ಜಾಹೀರಾತು ನೀಡಿತ್ತು. ಅವರು ತಿಳಿಸಿದ ಖಾಲಿ ಹುದ್ದೆಗಳ ಹೊರತಾಗಿಯೂ, ಹೆಚ್ಚಿನ ಸಂಖ್ಯೆಯ ಅರ್ಜಿದಾರರು ಈ ಸಂದರ್ಶನದಲ್ಲಿ ಭಾಗವಹಿಸಿದ್ದರು. ಕೇವಲ 600 ಲೋಡರ್ ಹುದ್ದೆಗಳಿಗೆ ಸ್ಪರ್ಧಿಸಲು 25,000ಕ್ಕೂ ಹೆಚ್ಚು ಅಭ್ಯರ್ಥಿಗಳು ಬಂದಿದ್ದರಿಂದ ನೇಮಕಾತಿ ಕಚೇರಿಯ ಹೊರಗೆ ಅನಿಯಂತ್ರಿತ ಪರಿಸ್ಥಿತಿ ಉಂಟಾಗಿತ್ತು. ಈ ಜನಸಮೂಹವನ್ನು ನಿರ್ವಹಿಸಲು ಸಾಧ್ಯವಾಗದಿದ್ದಾಗ ಸಂಘಟಕರು ಅರ್ಜಿದಾರರಿಗೆ ತಮ್ಮ ಸ್ವವಿವರಗಳನ್ನು ಸಲ್ಲಿಸಿ ಇಲ್ಲಿಂದ ಕೂಡಲೇ ಹೊರಗೆ ಹೋಗುವಂತೆ ವಿನಂತಿಸಿಕೊಳ್ಳಬೇಕಾಯಿತು.

ಈ ಘಟನೆಗೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನು ರಾಷ್ಟ್ರದ ನಿರುದ್ಯೋಗ ಸಮಸ್ಯೆಗಳ ಸ್ಪಷ್ಟ ಚಿತ್ರಣವೆಂದು ಅನೇಕರು ಟೀಕಿಸಿದ್ದಾರೆ. ಕಾಂಗ್ರೆಸ್ ಸೇರಿದಂತೆ ರಾಜಕೀಯ ಪಕ್ಷಗಳು ದೇಶದಲ್ಲಿ ಉದ್ಯೋಗ ಮತ್ತು ಆರ್ಥಿಕ ನೀತಿಗಳನ್ನು ಪ್ರಸ್ತುತ ಆಡಳಿತದಲ್ಲಿರುವ ಸರ್ಕಾರ ಹೇಗೆ ನಿರ್ವಹಿಸುತ್ತಿದೆ ಎಂಬುದನ್ನು ಟೀಕಿಸಲು ಈ ಘಟನೆಯನ್ನು ಬಳಸಿಕೊಂಡಿವೆ ಎನ್ನಲಾಗಿದೆ.

ಏರ್ ಇಂಡಿಯಾದ ಅಧಿಕೃತ ಅಧಿಸೂಚನೆಯಲ್ಲಿ ಜುಲೈ 12ರಿಂದ ಜುಲೈ 16ರವರೆಗೆ ವಿವಿಧ ಹುದ್ದೆಗಳಿಗೆ ವಾಕ್-ಇನ್ ಸಂದರ್ಶನಗಳನ್ನು ಘೋಷಿಸಿತ್ತು. ಹಾಗೇ ಅವರು ಮತ್ತೊಂದು ಅಧಿಸೂಚನೆ ಹೊರಡಿಸಿದ್ದು, ಕೆಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಗಡುವನ್ನು ಜುಲೈ 14ರವರೆಗೆ ವಿಸ್ತರಿಸಿತ್ತು. ನೇಮಕಾತಿಯಲ್ಲಿ ಹಿರಿಯ ಗ್ರಾಹಕ ಸೇವಾ ಕಾರ್ಯನಿರ್ವಾಹಕ ಸ್ಥಾನ ಮತ್ತು ಗ್ರಾಹಕ ಸೇವಾ ಕಾರ್ಯನಿರ್ವಾಹಕ ಸ್ಥಾನಗಳನ್ನು ಒಳಗೊಂಡಿದ್ದು, ಕ್ರಮವಾಗಿ 343 ಮತ್ತು 706 ಹುದ್ದೆಗಳು ಖಾಲಿ ಇವೆ. ಒಬಿಸಿ, ಎಸ್‍ಸಿ ಮತ್ತು ಎಸ್‍ಟಿ ಅಭ್ಯರ್ಥಿಗಳಿಗೆ ನಿರ್ದಿಷ್ಟ ಮೀಸಲಾತಿಗಳೊಂದಿಗೆ ಹಿರಿಯ ಹುದ್ದೆಗಳಿಗೆ ಗರಿಷ್ಠ 33 ಮತ್ತು ಸಾಮಾನ್ಯ ಹುದ್ದೆಗಳಿಗೆ 28 ವರ್ಷ ವಯೋಮಿತಿ ಇರುತ್ತದೆ ಎಂಬುದಾಗಿ ತಿಳಿಸಿತ್ತು.

ಇದನ್ನೂ ಓದಿ: ಚಾಕೋಲೇಟ್ ತಿನ್ನುವ ಆಸೆಯಾಗಿ ಅಂಗಡಿಗೆ ಹೋಗಿದ್ದ ಬಾಲಕ ಶವವಾಗಿ ಮನೆಗೆ ಬಂದ; ಆಗಿದ್ದೇನು? ವಿಡಿಯೊ ನೋಡಿ

ಈ ಘಟನೆಯೊಂದೇ ಅಲ್ಲ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಎಷ್ಟು ಕಾಡುತ್ತಿದೆ ಎಂಬುದಕ್ಕೆ ಇತ್ತೀಚೆಗೆ, ಗುಜರಾತ್‍ನ ಭರೂಚ್‍ನಲ್ಲಿ ನಡೆದ ಘಟನೆಯು ಸಾಕ್ಷಿಯಾಗಿದೆ. ಇಲ್ಲಿ ಕೇವಲ 10 ಹೋಟೆಲ್ ಉದ್ಯೋಗ ಸ್ಥಾನಗಳಿಗೆ 1,800 ಅರ್ಜಿದಾರರು ಆಗಮಿಸುತ್ತಿರುವುದನ್ನು ವೀಡಿಯೊಯೊಂದರಲ್ಲಿ ತೋರಿಸಲಾಗಿದೆ. ಒಟ್ಟಾರೆ ಈ ಘಟನೆಗಳನ್ನು ಕಮಡಾಗ ನಿರುದ್ಯೋಗ ಸಮಸ್ಯೆ ದೇಶದಲ್ಲಿ ಜನರನ್ನು ತುಂಬಾ ಕಾಡುತ್ತಿದೆ ಎನ್ನಬಹುದು.

Continue Reading

Latest

Viral Video: ಚಾಕೋಲೇಟ್ ತಿನ್ನುವ ಆಸೆಯಾಗಿ ಅಂಗಡಿಗೆ ಹೋಗಿದ್ದ ಬಾಲಕ ಶವವಾಗಿ ಮನೆಗೆ ಬಂದ; ಆಗಿದ್ದೇನು? ವಿಡಿಯೊ ನೋಡಿ

Viral Video: 5 ವರ್ಷದ ಬಾಲಕ ತನ್ನ 8 ವರ್ಷದ ಸಹೋದರಿಯ ಜೊತೆಗೆ ಅಂಗಡಿಯಲ್ಲಿ ಚಾಕೋಲೆಟ್ ಖರೀದಿಸುತ್ತಿದ್ದು, ಅಲ್ಲಿ ರಸ್ತೆಯ ದುರಸ್ತಿ ಕೆಲಸ ನಡೆಯುತ್ತಿದ್ದು, ಆ ವೇಳೆ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದ ಜೆಸಿಬಿ ಆ ಬಾಲಕನಿಗೆ ತಗುಲಿ ಆತ ಅಲ್ಲೆ ನೆಲಕ್ಕೆ ಬಿದ್ದಿದ್ದಾನೆ. ನಂತರ ಅಲ್ಲಿದ್ದವರು ಬಾಲಕನನ್ನು ಸುತ್ತುವರಿದಿರುವುದು ಕಂಡುಬರುತ್ತದೆ. ಈ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೃತನನ್ನು ಲಾಹಿಯಾ ಕಾಲೋನಿ ನಿವಾಸಿ ರಾಕೇಶ್ ಕಬ್ರೆ ಅವರ ಪುತ್ರ ಶಿವಾಂಶ್ ಎಂದು ಗುರುತಿಸಲಾಗಿದೆ.

VISTARANEWS.COM


on

Viral Video
Koo

ಇಂದೋರ್ : ಮಳೆಗಾಲದಲ್ಲಿ ರಸ್ತೆಗಳು ಹಾಳಾಗಿರುವ ಕಾರಣ ಅಲ್ಲಲ್ಲಿ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿರುತ್ತದೆ. ಹಾಗಾಗಿ ನಿಮ್ಮ ಚಿಕ್ಕ ಮಕ್ಕಳನ್ನು ಅಂತಹ ರಸ್ತೆಯಲ್ಲಿ ಕಳುಹಿಸುವ ಮುನ್ನ ಪೋಷಕರು ಎಚ್ಚರಿಕೆಯಿಂದಿರಿ. ಇಲ್ಲವಾದರೆ ಅದರಿಂದ ಅವರಿಗೆ ಅಪಾಯವಾಗಬಹುದು. ಅಂತಹದೊಂದು ಘಟನೆ ಇದೀಗ ಇಂದೋರ್ ನಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ. ಚಾಕೋಲೇಟ್ ಖರೀದಿಸಲು ತನ್ನ ಸಹೋದರಿಯ ಜೊತೆಗೆ ಅಂಗಡಿಗೆ ಹೋದ ಬಾಲಕನಿಗೆ ರಸ್ತೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜೆಸಿಬಿ ಹೊಡೆದು ಗಾಯಗೊಂಡು ಸಾವನಪ್ಪಿದ ಘಟನೆ ಇಂದೋರ್‌ನಲ್ಲಿ ನಡೆದಿದ್ದು, ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video )ಆಗಿದೆ.

ವೈರಲ್ ಆದ ವಿಡಿಯೊದಲ್ಲಿ 5 ವರ್ಷದ ಬಾಲಕ ತನ್ನ 8 ವರ್ಷದ ಸಹೋದರಿಯ ಜೊತೆಗೆ ಅಂಗಡಿಯಲ್ಲಿ ಚಾಕೋಲೆಟ್ ಖರೀದಿಸುತ್ತಿದ್ದು, ಅಲ್ಲಿ ರಸ್ತೆಯ ದುರಸ್ತಿ ಕೆಲಸ ನಡೆಯುತ್ತಿದ್ದು, ಆ ವೇಳೆ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದ ಜೆಸಿಬಿ ಆ ಬಾಲಕನಿಗೆ ತಗುಲಿ ಆತ ಅಲ್ಲೆ ನೆಲಕ್ಕೆ ಬಿದ್ದಿದ್ದಾನೆ. ನಂತರ ಅಲ್ಲಿದ್ದವರು ಬಾಲಕನನ್ನು ಸುತ್ತುವರಿದಿರುವುದು ಕಂಡುಬರುತ್ತದೆ. ಈ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೃತನನ್ನು ಲಾಹಿಯಾ ಕಾಲೋನಿ ನಿವಾಸಿ ರಾಕೇಶ್ ಕಬ್ರೆ ಅವರ ಪುತ್ರ ಶಿವಾಂಶ್ ಎಂದು ಗುರುತಿಸಲಾಗಿದೆ.

ಆತನ ಸಹೋದರಿಗೆ ಯಾವುದೇ ಗಾಯಗಳಾಗಿರಲಿಲ್ಲ ಎಂಬುದಾಗಿ ತಿಳಿದುಬಂದಿದೆ. ವರದಿ ಪ್ರಕಾರ, ಜುಲೈ 15ರಂದು ಲಾಹಿಯಾ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ರಸ್ತೆಯಲ್ಲಿ ಕೆಲಸ ಮಾಡುವಾಗ ಜೆಸಿಬಿ ಯಂತ್ರದ ಚಾಲಕ ಅದನ್ನು ಇನ್ನೊಬ್ಬನ ಚಾಲಕನಿಗೆ ಹಸ್ತಾಂತರಿಸಿದ. ಇದರ ಪರಿಣಾಮವಾಗಿ ಕೆಲಸ ಮಾಡುವಾಗ ಜೆಸಿಬಿ ಚಾಲಕನ ನಿಯಂತ್ರಣ ತಪ್ಪಿ ಅಲ್ಲಿ ಅಂಗಡಿಯಲ್ಲಿ ಚಾಕೋಲೇಟ್ ತೆಗೆದುಕೊಂಡು ನಿಂತಿದ್ದ ಬಾಲಕನ ಮುಖಕ್ಕೆ ಹೊಡೆದಿದೆ. ಕೆಲಗೆ ಬಿದ್ದ ಅವನನ್ನು ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅಲ್ಲಿ ಆತ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಪೊಲೀಸರು ಜೆಸಿಬಿಯನ್ನು ವಶಪಡಿಸಿಕೊಂಡು ಗುತ್ತಿಗೆದಾರ ಮತ್ತು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಈ ಹಿನ್ನಲೆಯಲ್ಲಿ ಬ್ರಿಲಿಯಂಟ್ ಕನ್ವೆನ್ಷನ್ ಸೆಂಟರ್ ಬಳಿಯ ಮುಖ್ಯ ರಸ್ತೆಯಲ್ಲಿ ಜಮಾಯಿಸಿದ ಬಾಲಕನ ಕುಟುಂಬ ಮತ್ತು ಇತರ ನಿವಾಸಿಗಳು ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಹಲವಾರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಇದರಿಂದ ಟ್ರಕ್‌ಗಳು ಸೇರಿದಂತೆ ಹಲವಾರು ವಾಹನಗಳು ಸೇರಿ ಅಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಹಿರಾ ನಗರ ಎಸಿಪಿ ಡಿ.ಎಸ್.ಯೆವಾಲೆ ಮತ್ತು ವಿಜಯ್ ನಗರ ಎಸಿಪಿ ಕೃಷ್ಣ ಲಾಲ್ಚಂದಾನಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಪೊಲೀಸ್ ಪಡೆಗಳೊಂದಿಗೆ ಸ್ಥಳಕ್ಕೆ ತಲುಪಿ ಮಾರ್ಗವನ್ನು ತೆರವುಗೊಳಿಸಿದರು.

ಇದನ್ನೂ ಓದಿ: 3 ವರ್ಷದ ಅಂಬಾನಿ ಮೊಮ್ಮಗ ವೇದಿಕೆ ಮೇಲೆ ಜಾರಿ ಬಿದ್ದ, ಆದರೆ ಜನರ ಹೃದಯ ಗೆದ್ದ!

ನಂತರ ಅವರು ಪ್ರತಿಭಟನೆ ನಡೆಸುತ್ತಿದ್ದ ಜನಸಮೂಹವನ್ನು ಸಮಾಧಾನಪಡಿಸಿ ತನಿಖೆಯ ನಂತರ ಜವಾಬ್ದಾರಿಯುತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೇ ಮೇಯರ್ ಪುಷ್ಯಮಿತ್ರ ಭಾರ್ಗವ್ ಅವರು ಮೃತ ಶಿವಾಂಶ್ ಕಾಬ್ರೆ ಅವರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಧನ ನೀಡುವುದಾಗಿ ಘೋಷಿಸಿದ್ದಾರೆ ಎನ್ನಲಾಗಿದೆ.

Continue Reading

ವೈರಲ್ ನ್ಯೂಸ್

Viral Video: ಪಕ್ಷದ ಕಾರ್ಯಕರ್ತನಿಗೆ ರಪ್‌ ಅಂತಾ ಕೆನ್ನೆಗೆ ಬಾರಿಸಿದ ಟಿಎಂಸಿ ನಾಯಕಿ; ವಿಡಿಯೋ ಇದೆ

Viral Video: ಕೋಲ್ಕತ್ತಾ ಮಹಾನಗರ ಪಾಲಿಕೆಯ ವಾರ್ಡ್‌ ನಂ 18ರ ಕೌನ್ಸಿಲರ್‌ ಸುನಂದಾ ಸರ್ಕಾರ್‌, ವಾರ್ಡ್‌ನ ಯುವ ಮೋರ್ಛಾ ಅಧ್ಯಕ್ಷ ಕೇದಾರ್‌ ದಾಸ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಅಲ್ಲದೇ ಆತನನ್ನು ಥಳಿಸಿ ಹಲ್ಲೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸುನಂದಾ ಹಲವಾರು ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕೇದಾರ್‌ ಆರೋಪ ಮಾಡಿದ್ದರು. ಇದೇ ವಿಚಾರಕ್ಕೆ ಇಬ್ಬರ ನಡುವೆ ಭಾರೀ ಗಲಾಟೆ ನಡೆದಿದ್ದು, ಮಾತಿಗೆ ಮಾತು ಬೆಳೆದು ಸುನಂದಾ ಕೇದರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.

VISTARANEWS.COM


on

Viral Video
Koo

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‌ (TMC)ನ ಮಹಾನಗರ ಪಾಲಿಕೆ ಸದಸ್ಯೆಯೊಬ್ಬರು ಪಕ್ಷ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ. ಮಾತಿಗೆ ಮಾತು ಬೆಳೆದು ಪಕ್ಷದ ಯುವ ಮೋರ್ಚಾದ ಅಧ್ಯಕ್ಷನ ಮೇಲೆ ಪಾಲಿಕೆ ಸದಸ್ಯೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗುತ್ತಿದೆ.

ಕೋಲ್ಕತ್ತಾ ಮಹಾನಗರ ಪಾಲಿಕೆಯ ವಾರ್ಡ್‌ ನಂ 18ರ ಕೌನ್ಸಿಲರ್‌ ಸುನಂದಾ ಸರ್ಕಾರ್‌, ವಾರ್ಡ್‌ನ ಯುವ ಮೋರ್ಛಾ ಅಧ್ಯಕ್ಷ ಕೇದಾರ್‌ ದಾಸ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಅಲ್ಲದೇ ಆತನನ್ನು ಥಳಿಸಿ ಹಲ್ಲೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸುನಂದಾ ಹಲವಾರು ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕೇದಾರ್‌ ಆರೋಪ ಮಾಡಿದ್ದರು. ಇದೇ ವಿಚಾರಕ್ಕೆ ಇಬ್ಬರ ನಡುವೆ ಭಾರೀ ಗಲಾಟೆ ನಡೆದಿದ್ದು, ಮಾತಿಗೆ ಮಾತು ಬೆಳೆದು ಸುನಂದಾ ಕೇದರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.

ಟಿಎಂಸಿ ವಕ್ತಾರ ಕುನಾಲ್ ಘೋಷ್ ಘಟನೆಯನ್ನು ದುರದೃಷ್ಟಕರ ಎಂದು ಕರೆದಿದ್ದಾರೆ ಮತ್ತು ಹಿರಿಯ ನಾಯಕರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಹೆಚ್ಚು ಜಾಗರೂಕರಾಗಿರಬೇಕು, ಇದು ಹಾಸ್ಯಾಸ್ಪದವಾಗಿದೆ. ಬಿಜೆಪಿ ಈ ಘಟನೆಯನ್ನು ಖಂಡಿಸಿದ್ದು, ಟಿಎಂಸಿ ಕೆಟ್ಟ ರಾಜಕೀಯ ಸ್ಥಿತಿಗೆ ಇದು ಉದಾಹರಣೆ ಎಂದು ಟೀಕಿಸಿದೆ.

ಕೆಲವು ದಿನಗಳ ಹಿಂದೆ ಬಿಹಾರಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಒಡಿಶಾ ರಾಜ್ಯಪಾಲರ ಪುತ್ರನ ವಿರುದ್ಧ ಗಂಭೀರವಾದ ಆರೋಪವೊಂದು ಕೇಳಿಬಂದಿದ್ದು, ರಾಜಭವನದಲ್ಲೇ ಕರ್ತವ್ಯನಿರತ ಸರ್ಕಾರಿ ನೌಕರನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ರಾಜ್ಯಪಾಲ ರಘುಬರ್‌ ದಾಸ್‌ ಅವರ ಪುತ್ರ ಲಲಿತ್‌ ದಾಸ್‌ ವಿರುದ್ಧ ರಾಜಭವನದಲ್ಲಿ ನಿಯೋಜನೆಗೊಂಡಿರುವ ರಾಜ್ಯ ಸಂಸದೀಯ ವ್ಯವಹಾರಗಳ ಇಲಾಖೆ ಅಧಿಕಾರಿ ಭೈಕುಂಠದಾಸ್‌ ಪ್ರಧಾನ್‌ ಹಲ್ಲೆ ಆರೋಪ ಮಾಡಿದ್ದಾರೆ. ಪುರಿ ಜಗನ್ನಾಥ ದೇಗುಲದಲ್ಲಿ ರಥಯಾತ್ರೆ ಪ್ರಯುಕ್ತ ಜು.7 ಮತ್ತು 8ರಂದು ರಾಷ್ಟ್ರಪತಿ ದ್ರೌಪದಿಮುರ್ಮು ಅವರು ಪುರಿಗೆ ಭೇಟಿ ಕೊಟ್ಟಿದ್ದರು. ಇದೇ ಸಂದರ್ಭದಲ್ಲಿ ಅವರು ರಾಜಭವನಕ್ಕೆ ಭೇಟಿ ನೀಡುವ ಕಾರಣ ಎಲ್ಲಾ ಸಿದ್ದತೆಗಳ ಮೇಲುಸ್ತುವಾರಿಯನ್ನು ಪ್ರಧಾನ್‌ ನೋಡಿಕೊಳ್ಳುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಲಲಿತ್‌ ದಾಸ್‌ ಪ್ರಧಾನ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: One Nation One Rate: ಚಿನ್ನಕ್ಕೆ ದೇಶಾದ್ಯಂತ ಒಂದೇ ದರ! ಹೊಸ ನಿಯಮ ಶೀಘ್ರ! ಬಂಗಾರ ದರ ಇಳಿಕೆ?

Continue Reading

ಪ್ರಮುಖ ಸುದ್ದಿ

Ambani Video: 3 ವರ್ಷದ ಅಂಬಾನಿ ಮೊಮ್ಮಗ ವೇದಿಕೆ ಮೇಲೆ ಜಾರಿ ಬಿದ್ದ, ಆದರೆ ಜನರ ಹೃದಯ ಗೆದ್ದ!

Ambani Video: ಮುಂಬೈನ ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ)ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಇಡೀ ಅಂಬಾನಿ ಕುಟುಂಬ ಹಾಜರಿತ್ತು. ಈ ಸಂದರ್ಭದಲ್ಲಿ ನೀತಾ ಅಂಬಾನಿ ಮೂರು ವರ್ಷದ ಮೊಮ್ಮಗ ಪೃಥ್ವಿಯನ್ನು ವೇದಿಕೆಗೆ ಕರೆಮದರು. ಆಗ ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಓಡುತ್ತಾ ವೇದಿಕೆ ಬಂದ ಪೃಥ್ವಿ ಕಾಲು ಜಾರಿ ಬಿದ್ದ. ಆದರೆ ಸಾವರಿಸಿಕೊಂಡು ಎದ್ದು “ಜೈ ಶ್ರೀ ಕೃಷ್ಣ” ಎನ್ನುತ್ತ ಅತಿಥಿಗಳ ಮನ ಗೆದ್ದಿದ್ದಾನೆ.

VISTARANEWS.COM


on

Ambani Video
Koo


ಮುಂಬೈ: ಮುಖೇಶ್‌ ಅಂಬಾನಿ ಅವರ ಪುತ್ರ (Ambani Video) ಅನಂತ್ ಅಂಬಾನಿ ಹಾಗೂ ರಾಧಿಕಾ ಅವರ ವಿವಾಹ ಸಮಾರಂಭದಾಚರಣೆಗಳು ಬಹಳ ಭರ್ಜರಿಯಿಂದ ನಡೆದಿವೆ. ಇದೀಗ ಮುಖೇಶ್ ಮತ್ತು ನೀತಾ ಅಂಬಾನಿ (Ambani Family )ಸೋಮವಾರ ಸಂಜೆ ಮತ್ತೊಂದು ಸುತ್ತಿನ ಆರತಕ್ಷತೆಯನ್ನು ಆಯೋಜಿಸಿದ್ದರು. ಈ ವೇಳೆ ಅವರ ಹಿರಿಯ ಮೊಮ್ಮಗ ಮೂರು ವರ್ಷದ ಪೃಥ್ವಿ ಅಂಬಾನಿ ತಮ್ಮ ಚಿಕ್ಕಪ್ಪ ಅನಂತ್ ಅಂಬಾನಿ ಅವರ ವಿವಾಹ ಆರತಕ್ಷತೆಯಲ್ಲಿ ತನ್ನ ಮುದ್ದು ಮುದ್ದಾದ ಮಾತಿನಲ್ಲಿ ಭಾಷಣ ಮಾಡಿ ಅತಿಥಿಗಳಿಗೆ ಮನೋರಂಜನೆ ನೀಡಿದೆ! ಅದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ)ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಧು ರಾಧಿಕಾ ಮರ್ಚೆಂಟ್ ಅವರ ಕುಟುಂಬ ಸೇರಿದಂತೆ ಇಡೀ ಅಂಬಾನಿ ಕುಟುಂಬ ಹಾಜರಿತ್ತು. ನೀತಾ ಅಂಬಾನಿ ಮೂರು ವರ್ಷದ ಪೃಥ್ವಿಯನ್ನು ಪರಿಚಯಿಸಿ ವೇದಿಕೆಗೆ ಬರುವಂತೆ ಆಹ್ವಾನಿಸಿದರು. “ನಮ್ಮ ಅತ್ಯಂತ ಪ್ರೀತಿಯ ಪೃಥ್ವಿ ಕೂಡ ಇಲ್ಲಿದ್ದಾನೆ, ಪೃಥ್ವಿ, ಬಾ” ಎಂದರು. ಆಗ ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಓಡುತ್ತಾ ವೇದಿಕೆ ಬಂದ ಪೃಥ್ವಿ ಕಾಲು ಜಾರಿ ಉರುಳಿ ಬಿದ್ದ! ನಂತರ ಎದ್ದು ನೀತಾ ಅಂಬಾನಿಯಿಂದ ಮೈಕ್ರೊಫೋನ್ ತೆಗೆದುಕೊಂಡು, ಪ್ರೇಕ್ಷಕರನ್ನು ಆತ್ಮವಿಶ್ವಾಸದಿಂದ “ಹಲೋ” ಎಂದು ಸ್ವಾಗತಿಸಿದ. ನಂತರ “ಜೈ ಶ್ರೀ ಕೃಷ್ಣ” ಎಂದು ಹೇಳಿದ. ಪ್ರೇಕ್ಷಕರು ಪ್ರತಿಯಾಗಿ “ಜೈ ಶ್ರೀ ಕೃಷ್ಣ” ಎಂದು ಒಕ್ಕೊರಲಿನಿಂದ ಪ್ರತಿಕ್ರಿಯಿಸಿದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಪೃಥ್ವಿ ಅಂಬಾನಿ ಶ್ಲೋಕಾ ಮೆಹ್ತಾ ಮತ್ತು ಆಕಾಶ್ ಅಂಬಾನಿಯವರ ಪುತ್ರ. ಇವನಿಗೆ ವೇದಾ ಎಂಬ ಸಹೋದರಿ ಕೂಡ ಇದ್ದಾಳೆ. ಪೃಥ್ವಿ 2020ರ ಡಿಸೆಂಬರ್‌ನಲ್ಲಿ ಜನಿಸಿದರೆ, ವೇದಾ ಈ ವರ್ಷದ ಮೇ ತಿಂಗಳಲ್ಲಿ ಒಂದು ವರ್ಷ ಪೂರೈಸಿದ್ದಾಳೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಆಚರಣೆಗಳ ನಡುವೆ ಯುರೋಪಿನ ಐಷಾರಾಮಿ ಕ್ರೂಸ್ ಹಡಗಿನಲ್ಲಿ ವೇದಾಳ ಮೊದಲ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು.

ಇದನ್ನೂ ಓದಿ: ಅಂಬಾನಿ ಮದುವೆ ಸಮಾರಂಭದೊಳಗೆ ನುಸುಳಿದ್ದ ಇಬ್ಬರು ʼನಕಲಿ ಅತಿಥಿʼಗಳ ಬಂಧನ!

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಕಳೆದ ಶುಕ್ರವಾರ ಅದ್ಧೂರಿಯಾಗಿ ವಿವಾಹವಾದರು. ವಿವಿಧ ಕ್ಷೇತ್ರಗಳ ಉನ್ನತ ಜಾಗತಿಕ ಮತ್ತು ಭಾರತೀಯ ಪ್ರಸಿದ್ಧ ವ್ಯಕ್ತಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾತ್ರಿ ನಡೆದ “ಶುಭ ಆಶೀರ್ವಾದ್” ಸಮಾರಂಭದಲ್ಲಿ ಭಾಗವಹಿಸಿ ನವವಿವಾಹಿತರನ್ನು ಆಶೀರ್ವದಿಸಿದ್ದರು.

Continue Reading
Advertisement
gt world mall 3
ಪ್ರಮುಖ ಸುದ್ದಿ31 seconds ago

GT World Mall: ರೈತರಿಗೆ ಅವಮಾನ ಮಾಡಿದ ಜಿಟಿ ಮಾಲ್‌ ವಿರುದ್ಧ ಸಚಿವರು ಗರಂ; ʼಪಂಚೆ ಧರಿಸಿಯೇ ಸಿದ್ದರಾಮಯ್ಯ 7 ವರ್ಷ ರಾಜ್ಯ ಆಳ್ಲಿಲ್ವಾ?ʼ

Anant Ambani wedding Shanaya Kapoor trolled for arguing with security
ಬಾಲಿವುಡ್2 mins ago

Anant Ambani: ಅನಂತ್ ಅಂಬಾನಿ ಮದುವೆಯಲ್ಲಿ ಖ್ಯಾತ ಬಾಲಿವುಡ್‌ ನಟನ ಮಗಳ ದರ್ಪ; ಮುನಿಸಿಕೊಂಡಿದ್ದೇಕೆ?

Sexual Harassment Case
Latest2 mins ago

Sexual Harassment Case: ಜನಜಂಗುಳಿಯ ಮಧ್ಯೆ ಮಹಿಳೆಯ ಖಾಸಗಿ ಭಾಗಕ್ಕೆ ಕೈ ಹಾಕಿದ ಬಸ್‍ ಕಂಡಕ್ಟರ್‌!

HD Revanna
ಕರ್ನಾಟಕ2 mins ago

HD Revanna: ದೇವಸ್ಥಾನದಲ್ಲಿ ಕಾಲು ಜಾರಿ ಬಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ; ಪಕ್ಕೆಲುಬಿಗೆ ಪೆಟ್ಟು

Viral Video
Latest15 mins ago

Viral Video: 600 ಲೋಡರ್‌ ಹುದ್ದೆಗಳಿಗೆ 25,000ಕ್ಕೂ ಹೆಚ್ಚು ಅಭ್ಯರ್ಥಿಗಳು! ಕಾಲ್ತುಳಿತದ ಸನ್ನಿವೇಶ

Ankola landslide Case
ಕರ್ನಾಟಕ28 mins ago

Ankola landslide Case: ಅಂಕೋಲಾ ಗುಡ್ಡ ಕುಸಿತ ಪ್ರಕರಣ; ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

Neenade Naa Serial Dileep R Shetty khushi will be marry in real life
ಕಿರುತೆರೆ33 mins ago

Neenade Naa Serial: ರಿಯಲ್‌ ಲೈಫಲ್ಲೂ ಒಂದಾಗ್ತಿದ್ದಾರಾ ವಿಕ್ರಂ-ವೇದಾ? ಮದುವೆ ಯಾವಾಗ?

cm siddaramaiah
ಪ್ರಮುಖ ಸುದ್ದಿ33 mins ago

CM Siddaramaiah: ಕನ್ನಡಿಗರಿಗೆ ಶೇ.100 ಉದ್ಯೋಗʼ ಟ್ವೀಟ್‌ ಡಿಲೀಟ್‌ ಮಾಡಿದ ಸಿಎಂ ಸಿದ್ದರಾಮಯ್ಯ; ಕಂಪನಿಗಳ ಜೊತೆ ಚರ್ಚೆ ಎಂದ ಎಂಬಿ ಪಾಟೀಲ್;‌ ಏನಿದು ಗೊಂದಲ?

Pooja Khedkar
ದೇಶ47 mins ago

Pooja Khedkar: ಅಂಗವೈಕಲ್ಯ ಪ್ರಮಾಣಪತ್ರಕ್ಕಾಗಿ ನಕಲಿ ವಿಳಾಸ ನೀಡಿದ್ದ ಪೂಜಾ ಖೇಡ್ಕರ್‌; ಮತ್ತೊಂದು ಕಳ್ಳಾಟ ಬಯಲು

Dhammika Niroshana
ಕ್ರೀಡೆ53 mins ago

Dhammika Niroshana: ಶ್ರೀಲಂಕಾದ ಮಾಜಿ ಕ್ರಿಕೆಟಿಗನನ್ನು ಗುಂಡಿಕ್ಕಿ ಕೊಲೆಗೈದ ಅಪರಿಚಿತ ವ್ಯಕ್ತಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ2 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ2 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ2 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ3 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ3 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ3 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ4 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌