ಮುಂಬೈ: ಯಾರೂ ಊಹಿಸದ ರೀತಿಯ ಚಿತ್ರ ವಿಚಿತ್ರ ಉಡುಗೆ ತೊಡುವ ಮೂಲಕ ಬಾಲಿವುಡ್, ಕಿರುತೆರೆ ನಟಿ ಉರ್ಫಿ ಜಾವೇದ್ (Urfi Javed) ಟ್ರೋಲಿಗರಿಗೆ ಆಹಾರವಾಗುತ್ತಿರುತ್ತಾರೆ. ಕೆಲವು ದಿನಗಳಿಂದ ಸುಮ್ಮನಿದ್ದ ಅವರು ಇದೀಗ ಮತ್ತೆ ಎಂದಿನ ಶೈಲಿಯ ವಿಚಿತ್ರ ಉಡುಗೆ ತೊಟ್ಟು ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ ಅವರು ಬಟ್ಟೆಗೆ ತಲೆದಿಂಬನ್ನು ಜೋಡಿಸಿ ಹೊಲಿದು ತೊಟ್ಟುಕೊಂಡಿದ್ದಾರೆ. ನೀಲಿ ಬಣ್ಣದ ಉಡುಗೆಗೆ ಬಳಿ ಬಣ್ಣದ ದಿಂಬು ಜೋಡಿಸಿದ್ದಾರೆ. ಸದ್ಯ ಅವರ ಈ ʼಅವತಾರʼ ನೋಡಿದವರು ಹೌಹಾರಿದ್ದಾರೆ.
ಇದನ್ನೂ ಓದಿ: Urfi Javed: ಅರೇ.. ಉರ್ಫಿ ಜಾವೇದ್‌ಗೆ ಏನಾಯ್ತ? ಆಸ್ಪತ್ರೆಗೆ ದಾಖಲಾಗಿದ್ದೇಕೆ?