Site icon Vistara News

Bigg Boss 17: ವಿಕ್ಕಿ ಜೈನ್ ಔಟ್‌; ಫಿನಾಲೆಗೆ ಪತ್ನಿ `ಅಂಕಿತಾ ಲೋಖಂಡೆ’ ಗ್ರ್ಯಾಂಡ್‌ ಎಂಟ್ರಿ!

Vicky Jain gets evicted from Bigg Boss 17

ಬೆಂಗಳೂರು: ʻಬಿಗ್ ಬಾಸ್ʼ ಸೀಸನ್ 17 (Bigg Boss 17) ಫಿನಾಲೆ ಹಂತಕ್ಕೆ ಬಂದಿದೆ. 100 ದಿನಗಳನ್ನು ಪೂರೈಸಿದ ನಂತರ ವಿಕ್ಕಿ ಜೈನ್ ಎಲಿಮಿನೇಟ್ ಆಗಿದ್ದಾರೆ. ವಿಕ್ಕಿ ಎಲಿಮಿನೇಟ್ ಆಗುತ್ತಿದ್ದಂತೆ, ಪತ್ನಿ ಅಂಕಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಂಕಿತಾ ಲೋಖಂಡೆ, ವಿಕ್ಕಿ ಜೈನ್, ಅರುಣ್ ಮಾಶೆಟ್ಟೆ, ಅಭಿಷೇಕ್ ಕುಮಾರ್, ಮುನಾವರ್ ಫಾರುಕಿ ಮತ್ತು ಮನ್ನಾರಾ ಚೋಪ್ರಾ ಫಿನಾಲೆ ಹಂತಕ್ಕೆ ತಲುಪಿದ್ದರು. ಇದರಲ್ಲಿ ಟಾಫ್ ಫೈವ್‌ಗೆ ಬರಲಿದ್ದಾರೆ ಎಂದುಕೊಂಡಿದ್ದ ವಿಕ್ಕಿ ಜೈನ್ ಅವರನ್ನು ಮನೆಯಿಂದ ಹೊರಹಾಕಿದ್ದಾರೆ ಬಿಗ್ ಬಾಸ್.

ಬಿಗ್ ಬಾಸ್ ಮನೆಗೆ ತಮ್ಮ ಪತ್ನಿ, ನಟಿ ಅಂಕಿತಾ ಲೋಖಂಡೆ ಅವರ ಜತೆಗೆ ಕಾಲಿಟ್ಟಿದ್ದ ವಿಕ್ಕಿ ಜೈನ್ 100 ದಿನಗಳನ್ನು ಕಳೆದ ನಂತರ ಮಿಡ್ ವೀಕ್ ಎಲಿಮಿನೇಷನ್‌ಗೆ ಒಳಗಾಗಿದ್ದಾರೆ. ಅಂಕಿತಾ ಲೋಖಂಡೆ, ವಿಕ್ಕಿ ಮತ್ತು ಅರುಣ್ ಮಾಶೆಟ್ಟೆ ಅವರಿಗೆ ಚೀಟಿಗಳನ್ನು ತೆರೆಯಬೇಕಿತ್ತು. ಅವರಲ್ಲಿ ಯಾರು ಫೈನಲ್‌ನಲ್ಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಬಿಗ್ ಬಾಸ್ ಟಾಸ್ಕ್ ನೀಡಿತ್ತು. ಅವರೆಲ್ಲರೂ ತಮ್ಮ ಚೀಟಿ‌ಗಳನ್ನು ತೆರೆಯಲು ಪ್ರಾರಂಭಿಸಿದಾಗ, ವಿಕ್ಕಿ ತನ್ನ ಚೀಟಿಯನ್ನು ಜೋರಾಗಿ ಓದಿದ್ದಾರೆ. ಅದರಲ್ಲಿ ಎಲಿಮಿನೇಷನ್ ಎಂದಿತ್ತು. ಅಂಕಿತಾ ಲೋಖಂಡೆ ಮತ್ತು ಅರುಣ್ ಫೈನಲಿಸ್ಟ್ ಆಗಿದ್ದಾರೆ.

ಇದನ್ನೂ ಓದಿ: Bigg Boss 17: ಬಿಗ್‌ ಬಾಸ್‌ ಮನೆಯಲ್ಲಿ ಹೊಡೆದಾಟ; ನೇರವಾಗಿ ಎಲಿಮಿನೇಟ್‌ ಆದ್ರು ಸ್ಪರ್ಧಿ!

ವಿಕ್ಕಿ ಹೋಗುವ ಮುಂಚೆ ಅಂಕಿತಾಳ ಹಣೆಯ ಮೇಲೆ ಮುತ್ತು ಇಟ್ಟಿದ್ದಾರೆ. ಮನ್ನಾರಾ ಚೋಪ್ರಾ, ಮುನಾವರ್ ಫರುಕಿ ಮತ್ತು ಅಭಿಷೇಕ್ ಅವರನ್ನು ತಬ್ಬಿಕೊಂಡರು. ಈ ವೇಳೆ ವಿಕ್ಕಿ ಜೈನ್ ಆಕೆಯ ಕಾಳಜಿ ವಹಿಸುವಂತೆ ಮನೆಯ ಇತರ ಸದಸ್ಯರಿಗೆ ಹೇಳಿದ್ದಾರೆ. ಜತೆಗೆ ಅಂಕಿತಾ ಅವರ ಹಣೆಗೆ ಮುತ್ತಿಟ್ಟು ಎಲ್ಲರಿಗೂ ʻಬಾಯ್ʼ ಮಾಡಿ ಮನೆಯಿಂದ ಹೊರ ಹೋಗಿದ್ದಾರೆ. ಅಂಕಿತಾ ಕೂಡ ವಿಕ್ಕಿ ಅವರನ್ನು ತಬ್ಬಿಕೊಂಡು ಅತ್ತಿದ್ದಾರೆ. ʻʻನನ್ನ ಪಾಲಿಗೆ ನೀವೆ ವಿನ್ನರ್. ನೀವು ತುಂಬಾ ಚೆನ್ನಾಗಿ ಆಟ ಆಡಿದ್ದಿರಿ. ನಾನು ನಿಮ್ಮ ಹೆಂಡತಿಯಾಗಿರುವುದಕ್ಕೆ ಹೆಮ್ಮೆಪಡುತ್ತೇನೆʼʼ ಎಂದಿದ್ದಾರೆ.

ಗಲಾಟೆ ಜೋಡಿ

ಸುಶಾಂತ್ ಸಿಂಗ್ ರಜಪೂತ್ (Bigg Boss 17) ಮಾಜಿ ಲವರ್, ನಟಿ ಅಂಕಿತಾ ಲೋಖಂಡೆ ಹಾಗೂ ಅವರ ಪತಿ ವಿಕ್ಕಿ ಜೈನ್ ‘ಬಿಗ್ ಬಾಸ್ 17’ ಮೂಲಕ ಒಂದಲ್ಲ ಒಂದು ಸುದ್ದಿಯಲ್ಲಿ ಇರುತ್ತಿದ್ದರು. ಮಾತ್ರವಲ್ಲ ಆಗಾಗ ಈ ಜೋಡಿ ಗಲಾಟೆ ಕೂಡ ಮಾಡಿಕೊಳ್ಳುತ್ತಲೇ ಇರುತ್ತಿತ್ತು. ಈ ಹಿಂದೆ ಅಂಕಿತಾ ಅವರು ಇತರ ಮನೆಯ ಸದಸ್ಯರ ಮುಂದೆ ಪತಿ ವಿಕ್ಕಿ ಮೇಲೆ ಚಪ್ಪಲಿ ಬಿಸಾಡಿದ್ದರು. ಆ ಬಳಿಕ ಜೋಡಿಯ ಮಧ್ಯೆ ಡಿವೋರ್ಸ್‌ ಮಾತುಕತೆಯೂ ಆಗಿತ್ತು. ಇದಾದ ಬಳಿಕ ಅಂಕಿತಾ ಕೆನ್ನೆಗೆ ವಿಕ್ಕಿ ಹೊಡೆಯಲು ಹೋಗಿದ್ದರು.

ಹಿಂದಿ ಕಿರುತೆರೆಯ ಧಾರಾವಾಹಿಗಳ ಮೂಲಕ ಫೇಮಸ್​ ಆದವರು ಅಂಕಿತಾ ಲೋಖಂಡೆ. ‘ಪವಿತ್ರ ರಿಷ್ತಾ’ ಸೀರಿಯಲ್​ನಲ್ಲಿ ನಟಿಸುವಾಗ ಸುಶಾಂತ್​ ಸಿಂಗ್​ ರಜಪೂತ್​ ಜತೆ ಪ್ರೀತಿ ಚಿಗುರಿತ್ತು. ನಂತರ ಅವರಿಬ್ಬರು ಬ್ರೇಕಪ್​ ಮಾಡಿಕೊಂಡರು. ಆ ಬಳಿಕ ಅಂಕಿತಾ ಡಿಸೆಂಬರ್ 2021ರಲ್ಲಿ, ಉದ್ಯಮಿ ವಿಕ್ಕಿ ಜೈನ್ ಅವರೊಂದಿಗೆ ವಿವಾಹವಾದರು.


Exit mobile version