Site icon Vistara News

BookMyShow : ಅತ್ಯಧಿಕ ಟಿಕೆಟ್‌ ಸೇಲ್‌ ಹೆಗ್ಗಳಿಕೆಗೆ ಪಾತ್ರವಾದ ಕೆಜಿಎಫ್‌-2

BookMyShow

ಬೆಂಗಳೂರು : ಸಿನೆಮಾ ಥಿಯೇಟರ್‌ ಶೋಗಳ ಟಿಕೆಟ್‌ ಮಾರಾಟ ಮಾಡುವ ತಾಣ ʼಬುಕ್‌ ಮೈ ಶೋʼ (BookMyShow ) ಏಪ್ರಿಲ್‌ನಲ್ಲಿ 2.9 ಕೋಟಿ ಟಿಕೇಟ್‌ ಸೇಲ್‌ ಮಾಡಿ ದಾಖಲೆ ಮಾಡಿದೆ.

ಕೋರೊನಾದಿಂದಾಗಿ ಜನರು ಥಿಯೇಟರ್‌ ಕಡೆ ಮುಖ ಮಾಡದೇ ಬಿಕೋ ಅನ್ನುತ್ತಿದ್ದವು. ಸಾಲು ಸಾಲು ಚಿತ್ರಗಳು ಅದಾಗಲೇ ಬಿಡುಗಡೆಗೆ ಸಜ್ಜಾಗುತ್ತಿವೆ. ಇದೀಗ ಸಿನಿಪ್ರಿಯರು ಮತ್ತೆ ಕಮ್‌ ಬ್ಯಾಕ್‌ ಆಗಿದ್ದಾರೆ. ಶುಕ್ರವಾರ ಬುಕ್‌ ಮೈ ಶೋ BookMyShow ವರದಿಯನ್ನು ಬಿಡುಗಡೆ ಮಾಡಿದ್ದು, ಜನವರಿ 2020ಕ್ಕೆ ಹೋಲಿಸಿದರೆ ಬುಕ್‌ ಮೈ ಶೋ 2.2 ಕೋಟಿ ಅಧಿಕ ಟಿಕೆಟ್‌ಗಳನ್ನು ಸೇಲ್‌ ಮಾಡಿ ದಾಖಲೆ ಮಾಡಿದೆ.

ದಕ್ಷಿಣ ಭಾರತ ಸಿನಿಮಾಗಳೇ ಮೇಲುಗೈ

ದಕ್ಷಿಣ ಭಾರತ ಸಿನಿಮಾ ಈಗಾಗಲೇ ವಿಶ್ವದಾದ್ಯಂತ ಹೆಸರನ್ನು ಗಳಿಸಿದೆ.  ಕೆಜಿಎಫ್‌, ಆರ್‌ಆರ್‌ಆರ್‌, ಪುಷ್ಪ ಸಿನಿಮಾಗಳು ಕೋರೊನಾ ನಂತರ ಜನರನ್ನು ಸೆಳೆದು ಯಶಸ್ಸು ಪಡೆದುಕೊಂಡವು. ಕನ್ನಡ ಸಿನಿಮಾ ʼಕೆಜಿಎಫ್‌ -2ʼ ಬುಕ್‌ ಮೈ ಶೋದಲ್ಲಿ ಬರೋಬ್ಬರಿ 1.71 ಕೋಟಿ ಟಿಕೇಟ್‌ ಸೇಲ್‌ ಮಾಡಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.  

ಈ ಹಿಂದೆ 2017ರಲ್ಲಿ ʼಬಾಹುಬಲಿ -2ʼ  1.6 ಕೋಟಿ ಟಿಕೇಟ್‌ ಸೇಲ್‌ ಮಾಡಿತ್ತು. ಹಾಗೂ ರಾಜಮೌಳಿ ಅವರ ʼಆರ್‌ಆರ್‌ಆರ್‌ʼ 1.34 ಕೋಟಿ ಟಿಕೇಟ್‌ ಸೇಲ್‌ ಆಗಿದ್ದರೆ, ಹಾಲಿವುಡ್‌ ಸೂಪರ್‌ ಹೀರೋ ಫ್ಲಿಕ್‌ ʼಡಾಕ್ಟರ್‌ ಸ್ಟ್ರೇಂಜ್‌ ಇನ್‌ ದಿ ಮಲ್ಟಿವರ್ಸ್‌ ಆಫ್‌ ಮ್ಯಾಡ್ನೆಸ್‌ʼ 25 ಲಕ್ಷ ಟಿಕೇಟ್‌ ಮಾರಾಟ ಮಾಡಿದೆ. ಆರಂಭಿಕ ವಾರಾಂತ್ಯದಲ್ಲಿ 66% ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮಾಡಿ ಹೆಸರು ಮಾಡಿದೆ ಎಂದು ಬುಕ್‌ ಮೈ ಶೋ ಹೇಳಿಕೊಂಡಿದೆ.

ಹಿಂದಿ ಡಬ್ಬಿಂಗ್‌ನಲ್ಲಿ ಬಿಡುಗಡೆಯಾಗಿರುವ ದಕ್ಷಿಣದ ಸಿನಿಮಾಗಳ ಸುಮಾರು 40% ಸೇಲ್ಸ್‌ ಆಗಿದ್ದು, ಅದರಲ್ಲಿಯೂ ಕೂಡ ʼಕೆಜಿಎಫ್‌ʼ ಮತ್ತು ʼಆರ್‌ಆರ್‌ಆರ್‌ʼ ಇವುಗಳ ಸಾಕಷ್ಟು ಟಿಕೇಟ್‌ ಸೇಲ್ಸ್‌ ಇದೆ. ತಮಿಳು ಮತ್ತು ತೆಲುಗು ಟಿಕೇಟ್‌ ಮಾರಾಟದಲ್ಲಿ 20% ಕೊಡುಗೆಯನ್ನು ನೀಡುವುದರ ಮೂಲಕ ಎರಡನೇ ಸ್ಥಾನದಲ್ಲಿದೆ.

ಇದನ್ನೂ ಓದಿ | ʼರಾಕಿ ಭಾಯ್‌ʼ ಬೆಸ್ಟ್‌ ಎಂದ ಶಿವಣ್ಣ: KGF-2 ಬಗ್ಗೆ ಶಿವರಾಜಕುಮಾರ್‌ ಮಾತು

ಹೈದರಾಬಾದ್‌, ಬೆಂಗಳೂರು, ಚೆನ್ನೈ, ಮುಂಬೈ ಮತ್ತು ದೆಹಲಿ- ಎನ್‌ಸಿಆರ್‌ನ ವೀಕ್ಷಕರು ಚಿತ್ರಗಳ ಟಿಕೇಟ್‌ನ್ನು ಮುನ್ನಡೆಸಿದರೆ, ಕೊಯಮತ್ತೂರು ಮತ್ತು ಕೊಚ್ಚಿಯಂತಹ ಟೈರ್‌-2 ನಗರಗಳು ಕೋಲ್ಕತ್ತಾದಂತಹ ಮಹಾನಗರಗಳನ್ನು ಮೀರಿಸಿದೆ ಎಂದು ಬುಕ್‌ಮೈ ಶೋ ಹೇಳಿದೆ. ಏಪ್ರಿಲ್‌ನಲ್ಲಿ, ಟಾಪ್ 10 ನಗರಗಳು BookMyShowನಲ್ಲಿ ಒಟ್ಟಾರೆ ಟಿಕೆಟ್ ಮಾರಾಟದಲ್ಲಿ ಅರ್ಧದಷ್ಟು ಕೊಡುಗೆ ನೀಡಿರುವುದು ವಿಶೇಷ.

ʼʼಮನರಂಜನೆಯ ಬಳಕೆ ಎಂದಿಗೂ ಕುಗ್ಗಿಲ್ಲ. ಬುಕ್‌ಮೈಶೋ ಚಿತ್ರಮಂದಿರಗಳ ನೇತೃತ್ವದಲ್ಲಿ ತಿಂಗಳಿಗೆ 2.9 ಕೋಟಿ ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಇದು ಭಾರತ ಚಿತ್ರಕೋದ್ಯಮದ ಮೇಲಿನ ಜನತೆಯ ಪ್ರೀತಿಯನ್ನು ತೋರಿಸುತ್ತದೆʼʼ ಎಂದು ಬುಕ್‌ ಮೈ ಶೋನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶಿಶ್ ಸಕ್ಸೇನಾ ಹೇಳಿದರು.

ಜನಪ್ರಿಯವಾಗುತ್ತಿದೆ BookMyShow

ಕಳೆದ ವರ್ಷ ತನ್ನ ಪೇ-ಪರ್-ವ್ಯೂ ಸ್ಟ್ರೀಮಿಂಗ್ ( Pay-Per -View Streaming) ಸೇವೆಯನ್ನು ಪ್ರಾರಂಭಿಸಿದ BookMyShow, ಸ್ಪ್ಯಾನಿಷ್, ನಾರ್ವೇಜಿಯನ್, ಇಟಾಲಿಯನ್, ಡ್ಯಾನಿಶ್, ಜರ್ಮನ್, ಸಂಸ್ಕೃತ ಮತ್ತು ಸ್ಲೋವಾಕ್‌ನಲ್ಲಿ ಮಾರ್ಕೆಟಿಂಗ್‌ ಆರಂಭಿಸಿದೆ. ಈ ವಿದೇಶಿ ಭಾಷೆಗಳ ಚಲನಚಿತ್ರಗಳ ಖರೀದಿಗಳು ಏಪ್ರಿಲ್‌ನಲ್ಲಿ ಪೇ-ಪರ್-ವ್ಯೂ ವಹಿವಾಟುಗಳಲ್ಲಿ ಅಗ್ರಸ್ಥಾನದಲ್ಲಿವೆ. ಇದರಲ್ಲಿ ಆಕ್ಷನ್, ಥ್ರಿಲ್ಲರ್, ಐತಿಹಾಸಿಕ ಮತ್ತು ಪಿರಿಯಡ್‌ ಡ್ರಾಮಾಗಳು ಅತ್ಯಂತ ಜನಪ್ರಿಯ ಚಲನಚಿತ್ರ ಪ್ರಕಾರಗಳಾಗಿವೆ ಎಂದಿದ್ದಾರೆ.

ಇದನ್ನೂ ಓದಿ | ಧೂಮಪಾನ ವೈಭವೀಕರಣ: ಕೆಜಿಎಫ್‌-2 ಬಿಡುಗಡೆಗೆ ತಡೆ ಕೋರಿದ್ದ ಅರ್ಜಿ ವಜಾ

BookMyShow ನ ಸ್ಟ್ರೀಮಿಂಗ್ ಸೇವೆಯು ಹೈದರಾಬಾದ್, ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ-ಎನ್‌ಸಿಆರ್, ಪುಣೆ, ಕೊಚ್ಚಿ, ಅಹಮದಾಬಾದ್, ಕೋಲ್ಕತ್ತಾ ಮತ್ತು ವಿಜಯವಾಡದಲ್ಲಿ ಅತಿ ಹೆಚ್ಚು ಇದೆ. ಸ್ಟ್ರೀಮಿಂಗ್ ವಹಿವಾಟಗಳು 18 ರಿಂದ 24 ವರ್ಷ ವಯಸ್ಸಿನ Gen Z ವಿಭಾಗದಲ್ಲಿ ಹೆಚ್ಚು ಜನಪ್ರಿಯವಾಗಿದ್ದರೆ, ಮಿಲೇನಿಯಲ್‌ಗಳಲ್ಲಿ 25ರಿಂದ 34 ವರ್ಷ ವಯಸ್ಸಿನವರಿದ್ದಾರೆ.

ಬಾಲಿವುಡ್‌ನಲ್ಲೂ ಮುನ್ನುಗ್ಗುತ್ತಿರೋ ಬುಕ್‌ಮೈಶೋ

ಅಸ್ಯಾಸಿನ್ಸ್, ದಿ ಸ್ಪೇಸ್‌ವಾಕರ್, ರನ್ ಹೈಡ್ ಫೈಟ್ ಮತ್ತು ದಿ ಟನಲ್‌ನಂತಹ ಚಲನಚಿತ್ರಗಳು ಮತ್ತು ಟಿವಿ ಸರಣಿಗಳನ್ನು ಒಳಗೊಂಡಂತೆ ಬುಕ್‌ಮೈಶೋ ಸ್ಟ್ರೀಮ್ ಒರಿಜಿನಲ್‌ಗಳ ಒಟ್ಟು ವಹಿವಾಟಿನ 55%ರಷ್ಟು ಒರಿಜಿನಲ್‌ಗಳು ಪ್ಲಾಟ್‌ಫಾರ್ಮ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.

ಝಾಕ್ ಸ್ನೈಡರ್ ಅವರ ಜಸ್ಟೀಸ್ ಲೀಗ್ 150,000 ಕ್ಕೂ ಹೆಚ್ಚು ಸ್ಟ್ರೀಮ್‌ಗಳೊಂದಿಗೆ ಪ್ಲಾಟ್‌ಫಾರ್ಮ್‌ನಲ್ಲಿ ಅಗ್ರ ಪ್ರದರ್ಶನಕಾರರಾಗಿದ್ದು, ವಾರದ ದಿನ ಹಾಗೂ ಗುರುವಾರ ಹೆಚ್ಚಿನ ವಹಿವಾಟುಗಳನ್ನು ಹೊಂದಿದೆ. ಅನದರ್ ರೌಂಡ್ ಮತ್ತು ದಿ ಗಿಲ್ಟಿಯಂತಹ ವಿದೇಶಿ ಭಾಷೆಯ ಚಲನಚಿತ್ರಗಳು, ಡ್ಯಾನಿಶ್ ಚಲನಚಿತ್ರಗಳು, ದಿ ವಿಲನೆಸ್ ಇನ್ ಕೊರಿಯನ್ ಮತ್ತು ಎಲ್ಲೆ, ಫ್ರೆಂಚ್ ಚಲನಚಿತ್ರವು ಆಸ್ಕರ್ ವಿಜೇತರೊಂದಿಗೆ ವೇದಿಕೆಯಲ್ಲಿ ಗಮನ ಸೆಳೆದಿವೆ. ಸ್ಪೈಡರ್ ಮ್ಯಾನ್: ನೋ ವೇ ಹೋಮ್, ಡ್ಯೂನ್, ಸ್ಪೆನ್ಸರ್ ಮತ್ತು ಮಿಚೆಲ್ಸ್ ವಸ್‌ ದ ಮಷಿನ್‌ ಬರಲಿರುವ ಚಲನಚಿತ್ರಗಳು ಎಂದು ಹೇಳಿದೆ.

ಇದನ್ನೂ ಓದಿ | ʻಆರ್‌ಆರ್‌ಆರ್‌ʼಗೆ ಸಿಕ್ತು ಸೆನ್ಸಾರ್ ಸರ್ಟಿಫಿಕೇಟ್‌.. ʻಬಾಹುಬಲಿ-2ʼ ಚಿತ್ರವನ್ನೇ ಮೀರಿಸುತ್ತೆ ಈ ಸಿನಿಮಾ..!

 
 
Exit mobile version