Site icon Vistara News

Brahmastra Movie : ತೆರೆಯ ಮೇಲೆ ಮೊದಲ ಬಾರಿಗೆ ʼRaliaʼ ಚುಂಬನ : ಫ್ಯಾನ್‌ಗಳು ಫುಲ್‌ ಖುಷ್‌

Brahmastra

ಬೆಂಗಳೂರು : ರಣಬೀರ್‌ ಕಪೂರ್‌ ಹಾಗೂ ಆಲಿಯಾ ಭಟ್‌ ಅಭಿನಯದ ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ Brahmastra Movie ಟ್ರೇಲರ್‌ ಬಿಡುಗಡೆಗೊಂಡಿದೆ. ರಣಬೀರ್ ಕಪೂರ್, ಅಮಿತಾಭ್ ಬಚ್ಚನ್, ಆಲಿಯಾ ಭಟ್, ನಾಗಾರ್ಜುನ ಮತ್ತು ಮೌನಿ ರಾಯ್ ಅಭಿನಯಸಿರುವ ಈ ಚಿತ್ರದ ಟ್ರೈಲರ್‌ ಸ್ಟಾರ್‌ ಸ್ಟುಡಿಯೋದಲ್ಲಿ ಬಿಡುಗಡೆ ಆಗಿದೆ.

ಟ್ರೈಲರ್‌ ವೀಕ್ಷಿಸಿದ ಅಭಿಮಾನಿಗಳು ಸ್ಪೀಚ್‌ಲೆಸ್‌ ಎಂದು ಪಾಸಿಟಿವ್‌ ರೆಸ್ಪಾನ್ಸ್‌ ಮಾಡಿದ್ದಾರೆ. ಟ್ರೈಲರ್‌ ಸೀನ್‌ ಒಂದರಲ್ಲಿ ಆನ್‌ ಸ್ಕ್ರೀನ್‌ ಮೇಲೆ ರಿಯಲ್‌ ಕಪಲ್‌ ಲಿಪ್‌ ಲಾಕಿಂಗ್‌ ಮಾಡಿರುವುದನ್ನು ನೋಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಟ್ವೀಟ್‌ ಶೇರ್‌ ಮಾಡುವುದರ ಮೂಲಕ ಖುಷಿ ಹೊರಹಾಕುತ್ತಿದ್ದಾರೆ.

ಅಭಿಮಾನಿ ಒಬ್ಬರು ʼರಣಬೀರ್‌ ಹಾಗೂ ಆಲಿಯಾ ಕೆಮೆಸ್ಟ್ರಿ ಬೆಸ್ಟ್‌ ʼ ಎಂದು ಬರೆದುಕೊಂಡಿದ್ದರೆ, ಇನ್ನೊಬ್ಬರು ʼಲವ್‌ ಎಂದರೆ ಬೆಳಕು# ಬ್ರಹ್ಮಾಸ್ತ್ರ ಟ್ರೇಲರ್‌ʼ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Brahmastra: ಕನ್ನಡದಲ್ಲೇ ಟ್ವೀಟ್‌ ಮಾಡಿದ ಆಲಿಯಾ : ಶಿವನ ಅವತಾರದಲ್ಲಿ ರಣಬೀರ್‌ ಕಪೂರ್‌

ಅಯನ್‌ ಮುಖರ್ಜಿ ಅವರು ರಣಬೀರ್‌ ಮತ್ತು ಆಲಿಯಾ ಅವರಿಗೆ ಮೊದಲ ಬಾರಿ ನಿರ್ದೇಶನ ಮಾಡುತ್ತಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾ ಭಾರತೀಯ ಚಿತ್ರರಂಗದಲ್ಲಿಯೇ ಹೆಗ್ಗುರುತು ಆಗಲಿದೆ.

ಟ್ರೈಲರನ್ನು ಕರಣ್‌ ಜೋಹರ್‌ ಹಂಚಿಕೊಂಡಿದ್ದಾರೆ. “ಬ್ರಹ್ಮಾಸ್ತ್ರದ ಮ್ಯಾಜಿಕ್‌ ಈಗ ನಿಮ್ಮ ಮುಂದೆ. ಬ್ರಹ್ಮಾಸ್ತ್ರ ಪಾರ್ಟ್‌-1, ಸೆಪ್ಟೆಂಬರ್‌ 9ರಂದು ನಿಮ್ಮ ಮುಂದೆʼʼ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ದೇಶದೆಲ್ಲೆಡೆ ಏಕಕಾಲಕ್ಕೆ ಬಿಡುಗಡೆಯಾಗಲಿರುವ ಈ ಚಿತ್ರ, ಟ್ರೈಲರ್‌ನಲ್ಲಿ ತನ್ನ ಅದ್ದೂರಿತನದಿಂದ ಹಾಗೂ ಬೆರಗುಗೊಳಿಸುವ ಮೇಕಿಂಗ್‌ನಿಂದ ಕುತೂಹಲ ಹುಟ್ಟು ಹಾಕಿದ್ದು, ಈ ಚಿತ್ರದ ಬಗೆಗಿನ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ. ಪ್ಯಾನ್‌ ಇಂಡಿಯಾ ಸಿನಿಮಾಗೆ ಬೇಕಾದಂಥ ಮೇಕಿಂಗ್‌ ತೋರಿಸಿದೆ.

ಇದನ್ನೂ ಓದಿ | Brahmastra trailer ಔಟ್‌, ಕೊನೆಗಾದರೂ ಬಾಲಿವುಡ್‌ನಿಂದ ಒಂದು ಪ್ಯಾನ್‌ ಇಂಡಿಯಾ ಚಿತ್ರ ಬರಲಿದೆಯಾ?

Exit mobile version