Site icon Vistara News

Cannes 2024: ಕಾನ್‌ ಫಿಲ್ಮ್ಸ್‌ ಫೆಸ್ಟಿವಲ್‌ನಲ್ಲಿ ಕನ್ನಡದ ಕಿರು ಚಿತ್ರ ಪ್ರದರ್ಶನ

Cannes 2024 Chidananda S Naik bows in Cannes with Kannada folk tale

ಬೆಂಗಳೂರು: ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ವಿದ್ಯಾರ್ಥಿ ಚಿದಾನಂದ ಎಸ್ ನಾಯಕ್   ನಿರ್ದೇಶನದ ಕಿರು ಚಿತ್ರ “ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು” (Sunflowers Were the First Ones to Know) ಮಂಗಳವಾರ (ಮೇ 21) ಮಧ್ಯಾಹ್ನ 77ನೇ ಕಾನ್‌ ಫಿಲ್ಮ್ಸ್‌ ಫೆಸ್ಟಿವಲ್‌ನಲ್ಲಿ (Cannes 2024) ಪ್ರದರ್ಶನಗೊಂಡಿತು. ಬಂಜಾರ ಸಮುದಾಯದ ಜನಪ್ರಿಯ ಜನಪದ ಕಥೆ ʻಅಜ್ಜಿ ಹುಂಜ ಕದ್ದ ಕಥೆʼಯನ್ನು ಆಧರಿಸಿ ಈ ಶಾರ್ಟ್‌ ಮೂವಿ ತಯಾರಿಸಲಾಗಿದೆ.

ಪ್ರತಿದಿನ ಬೆಳಗ್ಗೆ ಸೂರ್ಯೋದಯಕ್ಕೆ ಕಾರಣವೆಂದು ಎಲ್ಲರೂ ನಂಬಿದ್ದ, ಹುಂಜದ ಜತೆ ವೃದ್ಧ ಮಹಿಳೆ ಓಡಿಹೋದ ಬಳಿಕ ಹಳ್ಳಿಯೊಂದು ಕತ್ತಲೆಯಲ್ಲಿ ಮುಳುಗಿ ಹೋಗುವ ಜನಪದ ಕಥೆ ಇದಾಗಿದೆ. ಮೈಸೂರು ಮೂಲದ ನಾಯಕ್ ಸದ್ಯ ಕಾನ್‌ ಫಿಲ್ಸ್‌ ಫೆಸ್ಟಿವಲ್‌ನಲ್ಲಿ ಛಾಯಾಗ್ರಾಹಕ ಸೂರಜ್ ಠಾಕೂರ್, ಸೌಂಡ್ ಡಿಸೈನರ್ ಅಭಿಷೇಕ್ ಕದಮ್ ಮತ್ತು ನಿರ್ಮಾಣ ವಿನ್ಯಾಸಕ ಪ್ರಣವ್ ಖೋಟ್ ಜತೆ ಇದ್ದಾರೆ. ಈ ತಂಡ ಸ್ವಂತ ಖರ್ಚಿನಲ್ಲಿ ಕಾನ್‌ ಫಿಲ್ಮ್ಸ್‌ ಫೆಸ್ಟಿವಲ್‌ಗೆ ತೆರಳಿದೆ ಎಂದು ವರದಿಯಾಗಿದೆ.

ಚಿದಾನಂದ ಎಸ್ ನಾಯಕ್ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಸ್ವಲ್ಪ ಕಾಲ ವೈದ್ಯಕೀಯ ಅಭ್ಯಾಸ ಮಾಡಿದ ನಂತರ ಸಿನಿಮಾ ಮೇಕಿಂಗ್‌ನತ್ತ ಆಸಕ್ತಿ ತೋರಿಸಿದರು. ಈ ಬಗ್ಗೆ ಚಿದಾನಂದ್‌ ಮಾತನಾಡಿ ʻʻನಾನು ಸಿನಿಮಾ ಕಡೆ ಆಸಕ್ತಿ ತೋರಿದಾಗ ನನ್ನ ಬಗ್ಗೆ ನನ್ನ ಪೋಷಕರು ತುಂಬಾ ಅಸಮಾಧಾನಗೊಂಡಿದ್ದರು. ಆದರೆ ಈಗ, ಐದು ವರ್ಷಗಳ ನಂತರ, ನಾನು ಅವರ ಬೆಂಬಲದೊಂದಿಗೆ ಇಲ್ಲಿದ್ದೇನೆ ”ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: Actress Murder: ‘ಭಜರಂಗಿ’ ಸಿನಿಮಾ ನಟಿ ಗಂಡನಿಂದಲೇ ಭೀಕರ ಕೊಲೆ!

ಈ ಚಿತ್ರ ಪುಣೆಯಲ್ಲಿ ಚಿತ್ರೀಕರಣಗೊಂಡಿದೆ. ಪ್ರತಿದಿನ ಬೆಳಗ್ಗೆ ಸೂರ್ಯೋದಯಕ್ಕೆ ಕಾರಣವೆಂದು ಎಲ್ಲರೂ ನಂಬಿದ್ದ ಹುಂಜದ ಜತೆ ವೃದ್ಧ ಮಹಿಳೆ ಓಡಿಹೋದ ಬಳಿಕ ಹಳ್ಳಿಯೊಂದು ಕತ್ತಲೆಯಲ್ಲಿ ಮುಳುಗಿ ಹೋಗುವ ಜನಪದ ಕಥೆ ಇದಾಗಿದೆ. “ಚಿತ್ರದಲ್ಲಿ ರಾತ್ರಿ ಒಂದು ಪಾತ್ರ” ಎಂದು ಚಿದಾನಂದ ಹೇಳುತ್ತಾರೆ.

“ನಾನು ಕರ್ನಾಟಕದ ಬಂಜಾರ ಸಮುದಾಯಕ್ಕೆ ಸೇರಿದವನು. ಸಮುದಾಯದಿಂದ ಗಡೀಪಾರು ಮಾಡಲ್ಪಟ್ಟ ವೃದ್ಧ ಮಹಿಳೆಯ ಕಥೆಯನ್ನು ಸಿನಿಮಾ ಮಾಡಿದ್ದೇವೆʼʼಎಂದರು.

ಬಂಜಾರ ಸಾಹಿತ್ಯದ ಕುರಿತಾದ ಅವರ ಸಂಶೋಧನೆಯ ಆಧಾರದ ಮೇಲೆ, ಚಿದಾನಂದ್‌ ಅವರು 12 ನಿಮಿಷಗಳ ಸಾಕ್ಷ್ಯಚಿತ್ರ “ಭೂಲೆ ಚುಕೆ ಟುಲೆಸ್” ಕೂಡ ಮಾಡಿದ್ದರು. ಕಳೆದ ವರ್ಷ ಕೇರಳದ ಅಂತಾರಾಷ್ಟ್ರೀಯ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರೋತ್ಸವದಲ್ಲಿ ಈ ಚಿತ್ರ ಪ್ರಥಮ ಪ್ರದರ್ಶನ ಕಂಡಿತ್ತು.

ಈ ವರ್ಷ ಜಗತ್ತಿನ ವಿವಿಧ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ಗಳು ಸಲ್ಲಿಸಿದ 2,263 ಶಾರ್ಟ್‌ ಮೂವಿಗಳಲ್ಲಿ 18 ಕಿರುಚಿತ್ರಗಳು ಲಾ ಸಿನೆಫ್‌ಗೆ ಆಯ್ಕೆಯಾದವು. ಅವುಗಳಲ್ಲಿ ಸನ್‌ಫ್ಲವರ್‌ ಮೊದಲನೆಯದು. ಈ ಕಿರುಚಿತ್ರದಲ್ಲಿ ಕನ್ನಡದ ಜನಪ್ರಿಯ ನಟ ಎಂ.ಎಸ್.ಜಹಾಂಗೀರ್ ಕೂಡ ನಟಿಸಿದ್ದಾರೆ. ಕಿರುಚಿತ್ರದಲ್ಲಿ ಅಜ್ಜನ ಪಾತ್ರಕ್ಕೆ ಅವರು ಯಾವುದೇ ಶುಲ್ಕ ಪಡೆದಿಲ್ಲ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.

Exit mobile version