Cannes 2024: ಕಾನ್‌ ಫಿಲ್ಮ್ಸ್‌ ಫೆಸ್ಟಿವಲ್‌ನಲ್ಲಿ ಕನ್ನಡದ ಕಿರು ಚಿತ್ರ ಪ್ರದರ್ಶನ - Vistara News

ಸಿನಿಮಾ

Cannes 2024: ಕಾನ್‌ ಫಿಲ್ಮ್ಸ್‌ ಫೆಸ್ಟಿವಲ್‌ನಲ್ಲಿ ಕನ್ನಡದ ಕಿರು ಚಿತ್ರ ಪ್ರದರ್ಶನ

Cannes 2024: ಪ್ರತಿದಿನ ಬೆಳಗ್ಗೆ ಸೂರ್ಯೋದಯಕ್ಕೆ ಕಾರಣವೆಂದು ಎಲ್ಲರೂ ನಂಬಿದ್ದ ಹುಂಜದ ಜತೆ ವೃದ್ಧ ಮಹಿಳೆ ಓಡಿಹೋದ ಬಳಿಕ ಹಳ್ಳಿಯೊಂದು ಕತ್ತಲೆಯಲ್ಲಿ ಮುಳುಗಿ ಹೋಗುವ ಜನಪದ ಕಥೆ ಇದಾಗಿದೆ. ಮೈಸೂರು ಮೂಲದ ನಾಯಕ್ ಸದ್ಯ ಕಾನ್‌ ಫಿಲ್ಸ್‌ ಫೆಸ್ಟಿವಲ್‌ನಲ್ಲಿ ಛಾಯಾಗ್ರಾಹಕ ಸೂರಜ್ ಠಾಕೂರ್, ಸೌಂಡ್ ಡಿಸೈನರ್ ಅಭಿಷೇಕ್ ಕದಮ್ ಮತ್ತು ನಿರ್ಮಾಣ ವಿನ್ಯಾಸಕ ಪ್ರಣವ್ ಖೋಟ್ ಜತೆ ಇದ್ದಾರೆ. ಈ ತಂಡ ಸ್ವಂತ ಖರ್ಚಿನಲ್ಲಿ ಕಾನ್‌ ಫಿಲ್ಮ್ಸ್‌ ಫೆಸ್ಟಿವಲ್‌ಗೆ ತೆರಳಿದೆ ಎಂದು ವರದಿಯಾಗಿದೆ.

VISTARANEWS.COM


on

Cannes 2024 Chidananda S Naik bows in Cannes with Kannada folk tale
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ವಿದ್ಯಾರ್ಥಿ ಚಿದಾನಂದ ಎಸ್ ನಾಯಕ್   ನಿರ್ದೇಶನದ ಕಿರು ಚಿತ್ರ “ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು” (Sunflowers Were the First Ones to Know) ಮಂಗಳವಾರ (ಮೇ 21) ಮಧ್ಯಾಹ್ನ 77ನೇ ಕಾನ್‌ ಫಿಲ್ಮ್ಸ್‌ ಫೆಸ್ಟಿವಲ್‌ನಲ್ಲಿ (Cannes 2024) ಪ್ರದರ್ಶನಗೊಂಡಿತು. ಬಂಜಾರ ಸಮುದಾಯದ ಜನಪ್ರಿಯ ಜನಪದ ಕಥೆ ʻಅಜ್ಜಿ ಹುಂಜ ಕದ್ದ ಕಥೆʼಯನ್ನು ಆಧರಿಸಿ ಈ ಶಾರ್ಟ್‌ ಮೂವಿ ತಯಾರಿಸಲಾಗಿದೆ.

ಪ್ರತಿದಿನ ಬೆಳಗ್ಗೆ ಸೂರ್ಯೋದಯಕ್ಕೆ ಕಾರಣವೆಂದು ಎಲ್ಲರೂ ನಂಬಿದ್ದ, ಹುಂಜದ ಜತೆ ವೃದ್ಧ ಮಹಿಳೆ ಓಡಿಹೋದ ಬಳಿಕ ಹಳ್ಳಿಯೊಂದು ಕತ್ತಲೆಯಲ್ಲಿ ಮುಳುಗಿ ಹೋಗುವ ಜನಪದ ಕಥೆ ಇದಾಗಿದೆ. ಮೈಸೂರು ಮೂಲದ ನಾಯಕ್ ಸದ್ಯ ಕಾನ್‌ ಫಿಲ್ಸ್‌ ಫೆಸ್ಟಿವಲ್‌ನಲ್ಲಿ ಛಾಯಾಗ್ರಾಹಕ ಸೂರಜ್ ಠಾಕೂರ್, ಸೌಂಡ್ ಡಿಸೈನರ್ ಅಭಿಷೇಕ್ ಕದಮ್ ಮತ್ತು ನಿರ್ಮಾಣ ವಿನ್ಯಾಸಕ ಪ್ರಣವ್ ಖೋಟ್ ಜತೆ ಇದ್ದಾರೆ. ಈ ತಂಡ ಸ್ವಂತ ಖರ್ಚಿನಲ್ಲಿ ಕಾನ್‌ ಫಿಲ್ಮ್ಸ್‌ ಫೆಸ್ಟಿವಲ್‌ಗೆ ತೆರಳಿದೆ ಎಂದು ವರದಿಯಾಗಿದೆ.

ಚಿದಾನಂದ ಎಸ್ ನಾಯಕ್ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಸ್ವಲ್ಪ ಕಾಲ ವೈದ್ಯಕೀಯ ಅಭ್ಯಾಸ ಮಾಡಿದ ನಂತರ ಸಿನಿಮಾ ಮೇಕಿಂಗ್‌ನತ್ತ ಆಸಕ್ತಿ ತೋರಿಸಿದರು. ಈ ಬಗ್ಗೆ ಚಿದಾನಂದ್‌ ಮಾತನಾಡಿ ʻʻನಾನು ಸಿನಿಮಾ ಕಡೆ ಆಸಕ್ತಿ ತೋರಿದಾಗ ನನ್ನ ಬಗ್ಗೆ ನನ್ನ ಪೋಷಕರು ತುಂಬಾ ಅಸಮಾಧಾನಗೊಂಡಿದ್ದರು. ಆದರೆ ಈಗ, ಐದು ವರ್ಷಗಳ ನಂತರ, ನಾನು ಅವರ ಬೆಂಬಲದೊಂದಿಗೆ ಇಲ್ಲಿದ್ದೇನೆ ”ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: Actress Murder: ‘ಭಜರಂಗಿ’ ಸಿನಿಮಾ ನಟಿ ಗಂಡನಿಂದಲೇ ಭೀಕರ ಕೊಲೆ!

ಈ ಚಿತ್ರ ಪುಣೆಯಲ್ಲಿ ಚಿತ್ರೀಕರಣಗೊಂಡಿದೆ. ಪ್ರತಿದಿನ ಬೆಳಗ್ಗೆ ಸೂರ್ಯೋದಯಕ್ಕೆ ಕಾರಣವೆಂದು ಎಲ್ಲರೂ ನಂಬಿದ್ದ ಹುಂಜದ ಜತೆ ವೃದ್ಧ ಮಹಿಳೆ ಓಡಿಹೋದ ಬಳಿಕ ಹಳ್ಳಿಯೊಂದು ಕತ್ತಲೆಯಲ್ಲಿ ಮುಳುಗಿ ಹೋಗುವ ಜನಪದ ಕಥೆ ಇದಾಗಿದೆ. “ಚಿತ್ರದಲ್ಲಿ ರಾತ್ರಿ ಒಂದು ಪಾತ್ರ” ಎಂದು ಚಿದಾನಂದ ಹೇಳುತ್ತಾರೆ.

“ನಾನು ಕರ್ನಾಟಕದ ಬಂಜಾರ ಸಮುದಾಯಕ್ಕೆ ಸೇರಿದವನು. ಸಮುದಾಯದಿಂದ ಗಡೀಪಾರು ಮಾಡಲ್ಪಟ್ಟ ವೃದ್ಧ ಮಹಿಳೆಯ ಕಥೆಯನ್ನು ಸಿನಿಮಾ ಮಾಡಿದ್ದೇವೆʼʼಎಂದರು.

ಬಂಜಾರ ಸಾಹಿತ್ಯದ ಕುರಿತಾದ ಅವರ ಸಂಶೋಧನೆಯ ಆಧಾರದ ಮೇಲೆ, ಚಿದಾನಂದ್‌ ಅವರು 12 ನಿಮಿಷಗಳ ಸಾಕ್ಷ್ಯಚಿತ್ರ “ಭೂಲೆ ಚುಕೆ ಟುಲೆಸ್” ಕೂಡ ಮಾಡಿದ್ದರು. ಕಳೆದ ವರ್ಷ ಕೇರಳದ ಅಂತಾರಾಷ್ಟ್ರೀಯ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರೋತ್ಸವದಲ್ಲಿ ಈ ಚಿತ್ರ ಪ್ರಥಮ ಪ್ರದರ್ಶನ ಕಂಡಿತ್ತು.

ಈ ವರ್ಷ ಜಗತ್ತಿನ ವಿವಿಧ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ಗಳು ಸಲ್ಲಿಸಿದ 2,263 ಶಾರ್ಟ್‌ ಮೂವಿಗಳಲ್ಲಿ 18 ಕಿರುಚಿತ್ರಗಳು ಲಾ ಸಿನೆಫ್‌ಗೆ ಆಯ್ಕೆಯಾದವು. ಅವುಗಳಲ್ಲಿ ಸನ್‌ಫ್ಲವರ್‌ ಮೊದಲನೆಯದು. ಈ ಕಿರುಚಿತ್ರದಲ್ಲಿ ಕನ್ನಡದ ಜನಪ್ರಿಯ ನಟ ಎಂ.ಎಸ್.ಜಹಾಂಗೀರ್ ಕೂಡ ನಟಿಸಿದ್ದಾರೆ. ಕಿರುಚಿತ್ರದಲ್ಲಿ ಅಜ್ಜನ ಪಾತ್ರಕ್ಕೆ ಅವರು ಯಾವುದೇ ಶುಲ್ಕ ಪಡೆದಿಲ್ಲ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

ಸಿನಿಮಾ

ಜಗತ್ತೇ ನಿನ್ನ ವಿರುದ್ಧ ನಿಂತರೂ ,ನಾನು ನಿನ್ನ ಜೊತೆ ಇರುವೆ

VISTARANEWS.COM


on

ಸ್ಯಾಂಡಲ್‌ವುಡ್‌ ನಟ ದರ್ಶನ್ ತೂಗುದೀಪ, ವಿಜಯಲಕ್ಷ್ಮಿ ದಂಪತಿಗೆ ಇಂದು 23ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಹೀಗಿರುವಾಗ ಗಂಡನ ನೆನೆದು ಪತ್ನಿ ವಿಜಯಲಕ್ಷ್ಮಿ ಗಂಡನ ಕೈ ಹಿಡಿದಿರುವ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇನ್ನು ಪೋಸ್ಟ್‌ನಲ್ಲಿ ಪ್ರತಿ ಬಿರುಗಾಳಿ ಪ್ರತಿ ಮೌನದಲ್ಲಿಯೂ ನಾನು ನಿನ್ನ ಕೈಹಿಡಿಯುತ್ತೇನೆ. ಸಂದರ್ಭಗಳು ನಮ್ಮನ್ನು ದೂರ ಮಾಡಲು ಎಷ್ಟೇ ಪ್ರಯತ್ನಿಸಿದರೂ ನನ್ನ ಹೃದಯ ಯಾವಾಗಲೂ ನಿನ್ನನ್ನೇ ಆರಿಸುತ್ತದೆ. ನಿನ್ನ ವಿರುದ್ಧ ಜಗತ್ತೇ ನಿಂತರೂ ನಾನು ನಿನ್ನ ಜೊತೆಗೇ ಇರುತ್ತೇನೆ. ಏನೇ ಬರಲಿ ನಿನ್ನ ಕೈಬಿಡಲ್ಲ ಎಂದು ವಿಜಯಲಕ್ಷ್ಮಿ ಭಾವುಕವಾಗಿ ಬರೆದಿರುವುದು ಮನ ಮುಟ್ಟುವಂತಿದೆ.

ಇಂದು ಪತ್ನಿ ವಿಜಯಲಕ್ಷ್ಮಿ, ಮಗ ಸೇರಿ ಐವರಿಗೆ ಮಾತ್ರ ಜೈಲಿನಲ್ಲಿರುವ ದರ್ಶನ್‌ ಅವರನ್ನು ಭೇಟಿ ಮಾಡಲು 30 ನಿಮಿಷಗಳ ಕಾಲ ಅವಕಾಶ ನೀಡಲಾಗಿದೆ. ಜೊತೆಗೆ ಮನೆಯಿಂದ ತರುವ ಹಣ್ಣು, ತಿನಿಸುಗಳಿಗೆ ಅನುಮತಿ ನೀಡಲಾಗಿದೆ.

Continue Reading

Latest

ಪತ್ನಿ, ಮಗನ ಪ್ರತ್ಯೇಕ ಭೇಟಿಗೆ ಅವಕಾಶ ಕೋರಿದ ದರ್ಶನ್‌

VISTARANEWS.COM


on


ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾ ಬೆನ್ನಲ್ಲೇ ದರ್ಶನ್‌ ಕಾರಾಗೃಹ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ತನ್ನ ಪತ್ನಿ ವಿಜಯಲಕ್ಷ್ಮಿ ಮತ್ತು ಮಗನನ್ನು ಜೈಲಿನ ಕೊಠಡಿಯ ಒಳಗೆ ಭೇಟಿ ಮಾಡಲು, ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಲು ಅವಕಾಶ ಕೋರಿ ಕೇಂದ್ರ ಕಾರಾಗೃಹ ಎಸ್‌ಪಿ ಅಂಶುಕುಮಾರ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕೈದಿಗಳನ್ನು ಭೇಟಿ ಮಾಡುವ ಸಂದರ್ಶನ ಕೊಠಡಿ ಬದಲು ಪ್ರತ್ಯೇಕವಾಗಿ ಸೆಲ್‌ ಒಳಗೆ ಭೇಟಿ ಅವಕಾಶ ಬೇಕೆಂದು ಕೋರಿದ್ದಾರೆ.
ಡಿಜಿಪಿ ಅಲೋಕ್‌ ಕುಮಾರ್‌ ಭೇಟಿ ಮಾಡಿದ ವಿಜಯಲಕ್ಷ್ಮಿ
ದರ್ಶನ್‌ ಜೈಲಧಿಕಾರಗಳಿಗೆ ಪತ್ರ ಬರೆದಿದ್ದರೆ. ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ಮೇ.16ರಂದು ಡಿಜಿಪಿ ಅಲೋಕ್‌ ಕುಮಾರ್‌ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ದರ್ಶನ್‌ ಅವರನ್ನು ಜೈಲಿನ ಕೊಠಡಿಯ ಒಳಗೆ ಭೇಟಿ ಮಾಡಲು ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆಂದು ಮಾಹಿತಿ ತಿಳಿದುಬಂದಿದೆ.

ನಾಳೆ ಮೇ 19 ದರ್ಶನ್‌, ವಿಜಯಲಕ್ಷ್ಮಿ ಅವರ 23ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ದರ್ಶನ್‌ ಭೇಟಿಗೆ ಅವರ ಪತ್ನಿ, ಮಗನಿಗೆ ಅವಕಾಶ ಸಿಗಲಿ ಅಂತ ಅಭಿಮಾನಿಗಳು ಬಯಸುತ್ತಿದ್ದಾರೆ.

Continue Reading

Latest

ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಭಾವುಕ ಪೋಸ್ಟ್‌

VISTARANEWS.COM


on

ನಟ ದರ್ಶನ್‌ ಅವರಿಗೆ ಜಾಮೀನು ನಿರಾಕರಣೆಯಾದ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ. ವಿಜಯಲಕ್ಷ್ಮಿ ಅವರು ತಮ್ಮ ಇನ್ಸ್‌ಟಾ ಪೇಜ್‌ನಲ್ಲಿ ಹಾರ್ಟ್‌ ಬ್ರೇಕ್‌ ಇಮೋಜಿ ಮತ್ತು ದರ್ಶನ್‌ ಭಾವಚಿತ್ರ ಹಂಚಿಕೊಂಡಿದ್ದಾರೆ.

ಜೈಲಿನಲ್ಲಿರುವ ದರ್ಶನ್‌ಗೆ ವಿಜಯಲಕ್ಷ್ಮಿ ಅವರು ಆಗಾಗ ಧೈರ್ಯ ತುಂಬುತ್ತಿದ್ದರು. ಕುಟುಂಬದ ಬೆಂಬಲವೇ ಅವರಿಗೆ ದೊಡ್ಡ ಶಕ್ತಿಯಾಗಿತ್ತು ಎನ್ನಲಾಗುತ್ತಿದೆ.

ಆದರೆ ಇತ್ತೀಚಿನ ಬೆಳವಣಿಗೆಗಳ ನಂತರ ದರ್ಶನ್‌ ಮೌನವಾಗಿದ್ದು, ಜೈಲಿನಲ್ಲಿ ಯಾರೊಂದಿಗೂ ಹೆಚ್ಚು ಮಾತನಾಡುತ್ತಿಲ್ಲ ಎಂಬ ಮಾಹಿತಿ ಕೇಳಿಬರುತ್ತಿದೆ. ಇದೇ ವೇಳೆ ವಿಜಯಲಕ್ಷ್ಮಿಯವರು ಸಹ ಮೌನಕ್ಕೆ ಜಾರಿದ್ದು, ಇದೀಗ ಈ ಪೋಸ್ಟ್‌ ಮೂಲಕ ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ.

Continue Reading

Latest

ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಶಾಕ್‌, ಜಾಮೀನು ಅರ್ಜಿ ವಜಾ

VISTARANEWS.COM


on

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌, ಇನ್ನು ಒಂದು ವರ್ಷ ಬಿಡುಗಡೆ ಆಗುವ ಸಾಧ್ಯತೆ ಇಲ್ಲ. ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ನಟ ದರ್ಶನ್‌ಗೆ, ನ್ಯಾಯಪೀಠ ಬಿಗ್ ಶಾಕ್ ಕೊಟ್ಟಿದೆ. ನಟ ದರ್ಶನ್ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇನ್ನು ಒಂದು ವರ್ಷ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ವಿಚಾರಣೆಯಲ್ಲಿ ಒಂದು ವರ್ಷ ಯಾವುದೇ ಪ್ರಗತಿಯಾಗದೇ ಇದ್ದಲ್ಲಿ ಮತ್ತೊಮ್ಮೆ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಮುಂದಿನ ಒಂದು ವರ್ಷದಲ್ಲಿ ಬಾಕಿ ಇರುವ 60 ಪ್ರಮುಖ ಸಾಕ್ಷಿಗಳ ವಿಚಾರಣೆ ನಡೆಸಬೇಕು ಎಂದು ಜಿ. ಬಿ ಪಾರ್ದಿವಾಲಾ ನೇತೃತ್ವದ ನ್ಯಾಯಪೀಠ ಹೇಳಿದೆ.
ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಸುಪ್ರೀಂಕೋರ್ಟ್​​ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಸಾಕ್ಷ್ಯಗಳ ವಿಚಾರಣೆಯಲ್ಲಿ ವಿಳಂಬ, ಜೈಲಿನಲ್ಲಿ ಸೌಲಭ್ಯಗಳ ಕೊರತೆ, ಕುಟುಂಬವನ್ನು ಭೇಟಿ ಮಾಡಲು ಜೈಲಾಧಿಕಾರಿಗಳಿಂದ ಅವಕಾಶ ನಿರಾಕರಣೆ, ಆರೋಗ್ಯ ಸಮಸ್ಯೆ, ಸಹ ಕೈದಿಗಳಿಂದ ಕಿರುಕುಳ, ಬೆದರಿಕೆ, ಇನ್ನೂ ಕ್ವಾರಂಟೈನ್ ಸೆಲ್​​ನಲ್ಲಿ ಇಟ್ಟಿರುವುದು ಹೀಗೆ ಹಲವು ಕಾರಣಗಳನ್ನು ನೀಡಿ ದರ್ಶನ್ ಅವರು ಜಾಮೀನಿಗಾಗಿ ಸುಪ್ರೀಂಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ದರ್ಶನ್ ಪರ ವಕೀಲರು ಹಾಗೂ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಆಲಿಸಿದ ಸುಪ್ರೀಂ ಕೋರ್ಟ್ ದರ್ಶನ್​​ರ ಜಾಮೀನು ಅರ್ಜಿ ವಿಚಾರಣೆ ಮುಗಿಸಲು ಒಂದು ವರ್ಷ ಕಾಲಾವಕಾಶ ಕೊಟ್ಟಿದೆ. ಅಷ್ಟರಲ್ಲಿ ಸಾಕ್ಷ್ಯಗಳ ವಿಚಾರಣೆ ಮುಗಿಯದಿದ್ದಲ್ಲಿ, ಜಾಮೀನು ಅರ್ಜಿಯನ್ನು ಪರಿಗಣಿಸುವುದಾಗಿ ಸರ್ವೋಚ್ಛ ನ್ಯಾಯಾಲಯ ಹೇಳಿದೆ.

Continue Reading
Advertisement
galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ3 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌