ಬೆಂಗಳೂರು: ನಿರ್ದೇಶಕಿ ಪಾಯಲ್ ಕಪಾಡಿಯಾ ಕಾನ್ ಫಿಲ್ಮ್ಸ್ ಫೆಸ್ಟಿವಲ್ 2024ರಲ್ಲಿ (Cannes 2024) ಇತಿಹಾಸವನ್ನೇ ಬರೆದಿದ್ದಾರೆ. ಪಾಯಲ್ ನಿರ್ದೇಶನದ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ (All We Imagine as Light) ಸಿನಿಮಾ ಕಾನ್ನ ಗ್ರ್ಯಾಂಡ್ ಪ್ರಿಕ್ಸ್ ಪ್ರೈಜ್ ( Grand Prix At Cannes) ಪಡೆದ ಮೊದಲ ಭಾರತೀಯ ಸಿನಿಮಾ ಎನಿಸಿಕೊಂಡಿದೆ .77ನೇ ಆವೃತ್ತಿಯ ಕಾನ್ ಫಿಲ್ಮ್ಸ್ ಫೆಸ್ಟಿವಲ್ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗಿದೆ. ಹಾಲಿವುಡ್ ನಟ ವಿಯೋಲಾ ಡೇವಿಸ್ರಿಂದ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಾಯಲ್, ‘ತಮ್ಮ ಸಿನಿಮಾದ ಮೂವರು ಪ್ರಮುಖ ನಟಿಯರಾದ ಕಣಿ ಕಸ್ತೂರಿ, ದಿವ್ಯಾ ಪ್ರಭಾ ಹಾಗೂ ಕಾವ್ಯಾ ಕದಮ್ ಅವರಿಗೆ ಧನ್ಯವಾದ ತಿಳಿಸಿದರು.
ಗುರುವಾರ ರಾತ್ರಿ (ಮೇ.23) ಸಿನಿಮಾ ಪ್ರದರ್ಶನಲಾಗಿತ್ತು. ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಈ ಸಿನಿಮಾ ಕುರಿತು ಉತ್ತಮ ವಿಮರ್ಶೆಗಳು ಪ್ರಕಟಗೊಂಡಿದ್ದವು. 30 ವರ್ಷಗಳಲ್ಲಿ ಯಾವ ಭಾರತೀಯರು ಈ ಸಾಧನೆ ಮಾಡಿರಲಿಲ್ಲ. ಪಾಯಲ್ ನಿರ್ದೇಶನದ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಸಿನಿಮಾ ಕಾನ್ನ ಗ್ರ್ಯಾಂಡ್ನ ಪ್ರಿಕ್ಸ್ ಪ್ರೈಜ್ ಪಡೆದ ಮೊದಲ ಭಾರತೀಯ ಸಿನಿಮಾ ಎನಿಸಿಕೊಂಡಿದೆ . ಸಿನಿಮಾ ಕಾನ್ನಲ್ಲಿ ಪ್ರದರ್ಶನವಾದಾಗ ಬರೋಬ್ಬರಿ ಎಂಟು ನಿಮಿಷಗಳ ಸ್ಟಾಂಡಿಂಗ್ ಓವಿಯೇಷನ್ ಈ ಸಿನಿಮಾಕ್ಕೆ ದೊರೆತಿದೆ. ಈ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿಯೂ ವೈರಲ್ ಆಗಿವೆ.
ಗ್ರ್ಯಾಂಡ್ ಪ್ರಿಕ್ಸ್ ಪ್ರೈಜ್ ಪ್ರಶಸ್ತಿ ಕಾನ್ ಸಿನಿಮೋತ್ಸವದ ಎರಡನೇ ಅತ್ಯುತ್ತಮ ಪ್ರಶಸ್ತಿಯಾಗಿದೆ. ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಫ್‌ಟಿಐಐ) ಹಳೆಯ ವಿದ್ಯಾರ್ಥಿಯಾಗಿರುವ ಕಪಾಡಿಯಾ ಅವರು ತಮ್ಮ ಮೆಚ್ಚುಗೆ ಪಡೆದ ಸಾಕ್ಷ್ಯಚಿತ್ರ “ಎ ನೈಟ್ ಆಫ್ ನೋಯಿಂಗ್ ನಥಿಂಗ್” ಗಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಇದು 2021ರ ಕಾನ್ ಚಲನಚಿತ್ರೋತ್ಸವದ ಡೈರೆಕ್ಟರ್ಸ್ ಫೋರ್ಟ್‌ನೈಟ್ ಸೈಡ್-ಬಾರ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿತ್ತು. ಅಲ್ಲಿ ಅದು ಗೋಲ್ಡನ್ ಐ ಪ್ರಶಸ್ತಿ ಗೆದ್ದಿತ್ತು.
ಈ ಸ್ಪರ್ಧೆಯ ತೀರ್ಪುಗಾರರಾಗಿ ಗ್ರೆಟಾ ಗೆರ್ವಿಗ್ಮ ತ್ತು ಸ್ಪ್ಯಾನಿಷ್ ನಿರ್ದೇಶಕ ಜುವಾನ್ ಆಂಟೋನಿಯೊ ಬಯೋನಾ, ಟರ್ಕಿಶ್ ನಟ-ಚಿತ್ರಕಥೆಗಾರ ಎಬ್ರು ಸೆಲಾನ್, ಇಟಾಲಿಯನ್ ನಟ ಪಿಯರ್‌ಫ್ರಾನ್ಸ್‌ಕೊ ಫೆವಿನೊ, ಅಮೇರಿಕನ್ ನಟ ಲಿಲಿ ಗ್ಲಾಡ್‌ಸ್ಟೋನ್, ಜಪಾನಿನ ನಿರ್ದೇಶಕ ಹಿರೊಕಾಜು ಕೊರೆ-ಎಡಾ, ಲೆಬನಾನಿನ ನಟ-ನಿರ್ದೇಶಕ ನಡಿನ್ ಲಬಾಕಿ ಇದ್ದರು.
`ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಸಿನಿಮಾವು ಮಲಯಾಳಂ-ಹಿಂದಿ ಸಿನಿಮಾ ಆಗಿದೆ. ಆಸ್ಪತ್ರೆಯಲ್ಲಿ ನರ್ಸ್‌ಗಳಾಗಿ ಸೇವೆ ಸಲ್ಲಿಸುವ ಇಬ್ಬರು ರೂಮ್‌ಮೇಟ್‌ಗಳ ಕಥೆ ಇದರಲ್ಲಿದೆ. ಚಿತ್ರವು ಮೂರು ವಿಭಿನ್ನ ಮಹಿಳೆಯರ ನಡುವಿನ ಸ್ನೇಹದ ಕತೆ ಕೂಡ ಇದೆ.