Site icon Vistara News

Captain Miller Teaser: ಧನುಷ್‌ ಜನುಮದಿನದಂದೇ ಕ್ಯಾಪ್ಟನ್‌ ಮಿಲ್ಲರ್‌ ಟೀಸರ್‌ ಔಟ್‌; ಶಿವಣ್ಣನ ಮಾಸ್‌ ಎಂಟ್ರಿ!

Dhanush Shivarajkumar

ಬೆಂಗಳೂರು: ಕಾಲಿವುಡ್‌ ನಟ ಧನುಷ್‌ (Captain Miller Teaser) ಅವರಿಗೆ ಜುಲೈ 28 ಜನುಮದಿನದ ಸಂಭ್ರಮ. ನಟ 40ನೇ ವಸಂತಕ್ಕೆ ನಟ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು ಶಿವರಾಜ್‌ಕುಮಾರ್‌- ಧನುಷ್‌ ಕಾಂಬಿನೇಶನ್‌ ಸಿನಿಮಾದ ಕ್ಯಾಪ್ಟನ್‌ ಮಿಲ್ಲರ್‌ ಟೀಸರ್‌ ಅನಾವರಣಗೊಂಡಿದೆ. 61 ನೇ ವಯಸಿನಲ್ಲೂ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಕುದುರೆ ಸವಾರಿ ಮಾಡಿ ಸಿನಿಪ್ರೆಕ್ಷಕರ ಗಮನ ಸೆಳೆದಿದ್ದಾರೆ ಶಿವಣ್ಣ.

ಬ್ರಿಟಿಷರ ವಿರುದ್ಧ ಹೋರಾಡುವ ಕ್ಯಾಪ್ಟನ್ ಆಗಿ ಧನುಷ್ ಮಿಂಚಿದ್ದಾರೆ. ಎಂದೂ ನಟಿಸಿರದ ಪಾತ್ರದಲ್ಲಿ ನಟ ಕಾಣಿಸಿಕೊಂಡಿದ್ದಾರೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಭಾರಿ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. ಕ್ಯಾಪ್ಟನ್ ಮಿಲ್ಲರ್ ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದು, ಜಿವಿ ಪ್ರಕಾಶ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಧನುಷ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅವರು ತಂದೆ ಮತ್ತು ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಇದರಲ್ಲಿ ಶಿವರಾಜ್‌ ಕುಮಾರ್, ಪ್ರಿಯಾಂಕಾ ಮೋಹನ್, ನಿವೇದಿತಾ ಸತೀಶ್, ಜಾನ್ ಕೊಕ್ಕೆನ್ ಮತ್ತು ಮೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Actor Dhanush: ಶಿವಣ್ಣ-ಧನುಷ್‌ ಕಾಂಬಿನೇಶನ್‌ನ ʻಕ್ಯಾಪ್ಟನ್ ಮಿಲ್ಲರ್ʼ ಟೀಸರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್!

ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಧನುಷ್ ಒಟ್ಟು ಮೂರು ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಅರುಣ್ ಬಹಿರಂಗಪಡಿಸಿದ್ದರು. “ಚಿತ್ರದಲ್ಲಿ ಧನುಷ್ ಮೂರು ಗೆಟಪ್‌ಗಳನ್ನು ಹೊಂದಿರುತ್ತಾರೆ. ಮೊದಲ ಪೋಸ್ಟರ್ ಈ ಲುಕ್‌. ಉಳಿದವುಗಳನ್ನು ಮುಂದಿನ ಪ್ರಚಾರದ ಸಮಯದಲ್ಲಿ ಬಿಡುಗಡೆ ಮಾಡಲಾಗುತ್ತದೆ. 85ರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದೆ. ಶಿವ ರಾಜ್‌ಕುಮಾರ್ ಅವರ ಭಾಗಗಳನ್ನು ಸಹ ಶೂಟಿಂಗ್‌ ಮುಗಿಸಿದ್ದೇವೆʼʼ ಎಂದಿದ್ದರು. ಚಿತ್ರದಲ್ಲಿ ನಟ ಧನುಷ್ (Actor Dhanush ) ಜತೆ ಶಿವಣ್ಣ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಧನುಷ್ ಅಣ್ಣನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ.

Exit mobile version