ಮುಂಬಯಿ: ಕೃಷ್ಣದಾಸಿ ಖ್ಯಾತಿಯ ಛವಿ ಮಿತ್ತಲ್ ರೇಡಿಯೊಥೆರಫಿ ಪಡೆದ ನಂತರದ ಫೋಟೊವನ್ನು ಹಂಚಿಕೊಂಡಿದ್ದಾರೆ. ಬ್ರೆಸ್ಟ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟಿ ರೇಡಿಯೊಥೆರಫಿ ಮಾಡಿಕೊಳ್ಳುವುದಾಗಿ ಮೇ 23ರಂದು ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಹಂಚಿಕೊಂಡಿದ್ದರು.
ʼʼರೆಡಿಯೋ ಥೆರಫಿ ನನಗೆ ಪ್ರಾರಂಭವಾಗುತ್ತದೆ. ನನ್ನ ನಿಜವಾದ ಯುದ್ಧ ಶುರುವಾಗುವುದು ಇಲ್ಲಿಂದ. ಕಿಮೋ ಅಥವಾ ರೇಡಿಯೊಥೆರಫಿ ಕ್ಯಾನ್ಸರ್ ಚಿಕಿತ್ಸೆಯ ಆಯ್ಕೆಯಾಗಿದ್ದು, ರೋಗಿಗಳ ಆರೋಗ್ಯ ಸ್ಥಿತಿಯ ಅನುಸಾರ ವೈದ್ಯರು ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆʼʼ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ | ಶುಕ್ರವಾರವೇ ಸಿನಿಮಾ ರಿಲೀಸ್ ಆಗೋದು ಯಾಕೆ?
“”ನಾನು ಮತ್ತೆ ಮುಂಚಿನಂತೆ ಆಗುತ್ತೇನೆ. ವೈದ್ಯರು ಸಹಾಯಕ್ಕೆ ನಿಂತಿದ್ದಾರೆ. ಪ್ರತೀ ಬಾರಿ ನಾನು ಹೆದರಿದಾಗ ವೈದ್ಯರು ನನಗೆ ಧೈರ್ಯವನ್ನು ನೀಡಿದ್ದಾರೆ. ಅವರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆʼʼ ಎಂದು ನಟಿ ಹೇಳಿಕೊಂಡಿದ್ದಾರೆ.
“”ರೇಡಿಯೊ ಥೆರಫಿ ತುಂಬಾ ಅಡ್ವಾನ್ಸ್ ಆಗಿದ್ದು, ಯಾವುದೇ ಸೈಡ್ ಎಫೆಕ್ಟ್ ಇರುವುದಿಲ್ಲ. ರೇಡಿಯೇಷನ್ ಸೆಷನ್ ಪ್ರತಿನಿತ್ಯವೂ ನಡೆಯುತ್ತದೆʼʼ ಎಂದು ಪೋಸ್ಟ್‌ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಇದೀಗ ನಟಿ ಛವಿ, ರೇಡಿಯೊ ಥೆರಪಿ ಪಡೆದ ಬಳಿಕದ ಪೋಸ್ಟ್ ಹಂಚಿಕೊಳ್ಳುವುದರ ಮೂಲಕ ಗಟ್ಟಿತನವನ್ನು ತೋರಿಸಿದ್ದಾರೆ. .ಮೊದಲನೇ ದಿನದ ಥೆರಪಿ ಪೂರ್ಣಗೊಂಡಿದೆ. ರೂಮ್ ಸಕತ್ ಚಿಲ್ ಆಗಿತ್ತು. ಸ್ವಲ್ಪ ಚಳಿ ಬಿಟ್ಟರೆ ಮತ್ತೇನೂ ಸಮಸ್ಯೆ ಆಗಿಲ್ಲ. ಈ ಮಾರ್ಕ್‌ಗಳನ್ನು ಇನ್ನೂ ಒಂದು ತಿಂಗಳ ಮಟ್ಟಿಗೆ ರೇಡಿಯೊಥೆರಫಿ ಆಗುವವರೆಗೂ ಇಟ್ಟುಕೊಳ್ಳಬೇಕು. ಇಂದು ನಾನು ಜಿಮ್‌ಗೆ ಹೋಗಿದ್ದು, ಶೂಟಿಂಗ್‌ಗೆ ಕೂಡ ಹೋಗುತ್ತೇನೆʼʼ ಎಂದು ಪಾಸಿಟಿವ್ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ | ಪ್ರೀತಿಯ ಶ್ವಾನದ ಜತೆಗೊಂದು ಹ್ಯಾಪಿ ಜರ್ನಿ ..!