Site icon Vistara News

Vikram Actor: ಚಿಯಾನ್ ವಿಕ್ರಮ್ ನಟನೆಯ `ಧ್ರುವ ನಚ್ಚತಿರಂ’ ಎರಡನೇ ಸಾಂಗ್‌ ಔಟ್‌!

Chiyaan Vikram

ಬೆಂಗಳೂರು: ಚಿಯಾನ್ ವಿಕ್ರಮ್ (Vikram Actor) ನಾಯಕನಾಗಿ ನಟಿಸುತ್ತಿರುವ ʻಧ್ರುವ ನಚ್ಚತಿರಂʼ (Dhruva Natchathiram) ಬೆಳ್ಳಿತೆರೆಗೆ ಬರುತ್ತಿದೆ. ಈ ಚಿತ್ರವನ್ನು ಗೌತಮ್ ವಾಸುದೇವ್ ಮೆನನ್ ನಿರ್ದೇಶಿಸಿದ್ದಾರೆ. ಚಿತ್ರದ ತಂಡ ಜುಲೈ 20ರಂದು ಎರಡನೇ ಹಾಡು ಹಿಸ್‌ ನೇಮ್‌ ಇಸ್‌ ಜಾನ್‌ (Dhruva Natchathiram second single) ಅನಾವರಣಗೊಳಿಸಿದೆ. ಈ ಹಾಡನ್ನು ಹ್ಯಾರಿಸ್ ಜಯರಾಜ್ ಸಂಯೋಜಿಸಿದ್ದಾರೆ ಮತ್ತು ರಾಪರ್ ಪಾಲ್ ಡಬ್ಬಾ ಬರೆದು ಹಾಡಿದ್ದಾರೆ.

ತಮಿಳಿನ ನಿರ್ದೇಶಕ ಲೋಕೇಶ್ ಕನಕರಾಜ್ ಟ್ರ್ಯಾಕ್‌ವನ್ನು ಟ್ವಿಟರ್‌ನಲ್ಲಿ ಅನಾವರಣಗೊಳಿಸಿದ್ದಾರೆ. ಈ ಹಾಡಿನಲ್ಲಿ ಆಧುನಿಕ ಬೀಟ್‌ಗಳೊಂದಿಗೆ ರ‍್ಯಾಂಪ್‌ ಜತೆಗೆ ಮತ್ತು ತಮಿಳು ಜಾನಪದ ಸಂಗೀತದ ಮಿಶ್ರಣವಾಗಿದೆ. ಹಾಡು ತಮಿಳಿನಲ್ಲಿದ್ದರೂ, ರ‍್ಯಾಂಪ್‌ ಇಂಗ್ಲಿಷ್‌ನಲ್ಲಿದೆ. ಈಗಾಗಲೇ 24 ಗಂಟೆಗಳಲ್ಲಿ2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಗೌತಮ್ ಮತ್ತು ಹ್ಯಾರಿಸ್ ಈ ಹಿಂದೆ ವಾರಣಂ ಆಯಿರಂ, ಮತ್ತು ವೆಟ್ಟೈಯಾಡು ವಿಲೈಯಾಡು ಮುಂತಾದ ಅನೇಕ ಹಿಟ್ ಆಲ್ಬಂಗಳನ್ನು ನೀಡಿದ್ದರು.

ಗೌತಮ್ ಮೆನನ್, 2013ರಲ್ಲಿ ಸೂರ್ಯ ನಾಯಕನಾಗಿ ನಟಸಿಲಿದ್ದಾರೆ ಎಂದು ಘೋಷಿಸಿದ್ದರು. ಬಳಿಕ ಸಿನಿಮಾ ಸ್ಥಗಿತಗೊಂಡಿತು. ಮತ್ತೆ 2016ರಲ್ಲಿ ಸೂರ್ಯ ಬದಲಿಗೆ ವಿಕ್ರಮ್ ನಾಯಕನಾಗಿ ಎಂಟ್ರಿ ಕೊಟ್ಟರು. ಚಿತ್ರದ ಟೀಸರ್ ಮತ್ತು ಮೊದಲ ಸಿಂಗಲ್‌ ಹಾಡನ್ನು ಪ್ರೇಕ್ಷಕರು ಮೆಚ್ಚಿದ್ದಾರೆ. ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇನ್ನೂ ಪ್ರಕಟಿಸಿಲ್ಲ.

ಇದನ್ನೂ ಓದಿ: Chiyaan Vikram: ಸಿನಿಮಾ ರಿಹರ್ಸಲ್ ವೇಳೆ ಚಿಯಾನ್‌ ವಿಕ್ರಮ್‌ ಪಕ್ಕೆಲುಬು ಮುರಿತ: ಶೂಟಿಂಗ್‌ ಸ್ಥಗಿತ

ಧ್ರುವ ನಚ್ಚತಿರಂ ಚಿತ್ರದಲ್ಲಿ ರಾಧಿಕಾ ಶರತ್‌ಕುಮಾರ್, ರಿತು ವರ್ಮಾ, ರಾಧಾಕೃಷ್ಣನ್ ಪಾರ್ಥಿಬನ್, ಸತೀಶ್ ಕೃಷ್ಣನ್, ವಿನಾಯಕನ್, ದಿವ್ಯ ದರ್ಶಿನಿ, ಸಿಮ್ರಾನ್, ವಂಶಿ ಕೃಷ್ಣ, ಮುನ್ನಾ ಸೈಮನ್, ಸಲೀಂ ಬೇಗ್ ಮತ್ತು ಮಾಯಾ ಎಸ್ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Exit mobile version