ಬೆಂಗಳೂರು: ಕನ್ನಡದ ಕೆಜಿಎಫ್ ಸಿನಿಮಾ ಬಳಿಕ ತಮಿಳಿನ ಖ್ಯಾತ ನಿರ್ದೇಶಕ ಪಾ. ರಂಜಿತ್ ತಮ್ಮ ಹೊಸ ಕೆಜಿಎಫ್ ಚಿತ್ರವನ್ನು ಮಾಡುವುದಾಗಿ ಈ ಹಿಂದೆ ಘೋಷಿಸಿದ್ದರು. ಇದೀಗ ದೀಪಾವಳಿಗೆ ಚಿತ್ರದ ಟೈಟಲ್ ಟೀಸರ್ ರಿಲೀಸ್ ಮಾಡಿದ್ದಾರೆ. ನಟ ಚಿಯಾನ್ ವಿಕ್ರಮ್ (Chiyaan Vikram) ರಗಡ್ ಲುಕ್ನೊಂದಿಗೆ ಕಾಣಿಸಿಕೊಂಡಿದ್ದಾರೆ.
ಕನ್ನಡದ ಕೆಜಿಎಫ್ ಚಿತ್ರದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಕಾಲ್ಪನಿಕ ಕಥೆಯನ್ನು ಕಟ್ಟಿಕೊಟ್ಟರೆ, ಕೆಜಿಎಫ್ನ ನಿಜವಾದ ಕಥೆಯನ್ನು ನಿರ್ದೇಶಕ ಪಾ. ರಂಜಿತ್ ಹೇಳಲು ಹೊರಟ್ಟಿದ್ದಾರೆ ಎಂದು ಈ ಮುಂಚೆ ಸುದ್ದಿಯಾಗಿತ್ತು. ಇದೀಗ ಈ ಚಿತ್ರದ ಟೈಟಲ್ ಫಿಕ್ಸ್ ಆಗಿದ್ದು ʻʻತಂಗಲಾನ್ʼʼ ಎಂಬ ಶಿರ್ಷಿಕೆಯನ್ನು ಇಡಲಾಗಿದೆ. ವರದಿ ಪ್ರಕಾರ ʻʻತಂಗಲಾನ್ʼʼ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭಗೊಂಡಿದ್ದು, ಬ್ರಿಟಿಷರು ಹಾಗೂ ಬುಡಕಟ್ಟು ಸಮಾಜದ ನಡುವೆ ನಡೆಯುವ ಸಂಘರ್ಷವನ್ನು ʻತಂಗಲಾನ್ʼʼ ಹೇಳುತ್ತಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ | KGF | ತಮಿಳಿನಲ್ಲಿ ಬರುತ್ತಿದೆ ರಿಯಲ್ ಕೆಜಿಎಫ್: ಹೀರೋ ಯಶ್ ಅಲ್ಲ!
ʻʻತಂಗಾಲನ್ʼʼ ಚಿತ್ರದ ಟೈಟಲ್ ಟೀಸರ್ ನೋಡುವಾಗ ನಟ ಚಿಯಾನ್ ವಿಕ್ರಮ್ ಬುಡಕಟ್ಟು ಜನರ ನಾಯಕನಂತೆ ಕಾಣುತ್ತಿದ್ದಾರೆ. ನಟ ಪಶುಪತಿ ಖಳನಾಯಕ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ನಟ ಚಿಯಾನ್ ವಿಕ್ರಮ್ ಜತೆ ಪಾರ್ವತಿ ಮೆನನ್, ಮಾಳವಿಕಾ ಮೋಹನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಸ್ಟುಡಿಯೋ ಗ್ರೀನ್ ಮತ್ತು ನೀಲಂ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ‘ತಂಗಲಾನ್’ ಸಿನಿಮಾ ಸಿದ್ಧವಾಗಲಿದೆ.
ʻʻಕೆಜಿಎಫ್ನಲ್ಲಿ ನೈಜವಾಗಿ ಘಟಿಸಿದ ಸಂಘರ್ಷಗಳ ಹೂರಣಗಳನ್ನು ಒಳಗೊಂಡು ಸಿನಿಮಾವನ್ನು ತೆರೆಗೆ ತರಲಿದ್ದೇನೆʼʼ ಎಂದು ನಿರ್ದೇಶಕ ಪಾ. ರಂಜಿತ್ ಈ ಹಿಂದೆ ಹೇಳಿಕೊಂಡಿದ್ದರು. ಚಿಯಾನ್ ವಿಕ್ರಮ್ ಈ ಮುಂಚೆ ʻʻಇದೊಂದು ಒಳ್ಳೆಯ ಸಿನಿಮಾ ಆಗಿದೆ. ಆಸ್ಕರ್ ಪ್ರಶಸ್ತಿ ಸಲ್ಲಬೇಕಾದ ಸಿನಿಮಾ ಎಂದುʼʼ ಹೊಗಳಿದ್ದರು. ಈಗಾಗಲೇ ವಿಕ್ರಮ್ ನಟನೆಯ ಕಾಲಿವುಡ್ ಸಿನಿಮಾ ʻಕೋರ್ಬಾʼ ಹಾಗೂ ʻಪೊನ್ನಿಯಿನ್ ಸೆಲ್ವನ್ʼ ಸಾಕಷ್ಟು ಪ್ರಶಂಸೆಗೆ ವ್ಯಕ್ತವಾಗಿದೆ.
ಇದನ್ನೂ ಓದಿ | ತಮಿಳು ಖ್ಯಾತ ನಟ ಚಿಯಾನ್ ವಿಕ್ರಮ್ಗೆ ಹೃದಯಾಘಾತ; ಚೆನ್ನೈ ಆಸ್ಪತ್ರೆಗೆ ದಾಖಲು