ಬೆಂಗಳೂರು : ಚಿತ್ರ ನಿರ್ದೇಶಕ ಪಿಎಸ್ ಮಿತ್ರನ್ ಅವರು ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಈ ಸಿನಿಮಾಗೆ ನಾಯಕ ಕಾರ್ತಿ ಎಂಬುದೇ ವಿಶೇಷ. ಚಂಕಿ ಪಾಂಡೇ ಶ್ರೀಮಂತ ಉದ್ಯಮಿಯ ಪಾತ್ರದಲ್ಲಿ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಅಜರ್ಬೈಜಾನ್ ಮತ್ತು ಜಾರ್ಜಿಯಾದಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಈ ಚಿತ್ರದ ಮೂಲಕ ಕಾಲಿವುಡ್‌ಗೆ ಎಂಟ್ರಿ ನೀಡುವುದರ ಕುರಿತು ಚಂಕಿ ಪಾಂಡೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿರುವುದಲ್ಲದೆ, ಶೂಟಿಂಗ್ ಸ್ಥಳಗಳ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ʼಅಜೆರ್ಬೈಜಾನ್ ಮತ್ತು ಬಾಕು ವಾಸ್ತುಶಿಲ್ಪ ನೋಡಿ ಆನಂದವಾಗಿದೆ. ಫಿಲ್ಮ್ ಕ್ರ್ಯೂ ಜತೆ # ಸರ್ದಾರ್, ನನ್ನ ಮೊದಲ ತಮಿಳು ಸಿನಿಮಾʼ ಎಂದು ಬರೆದುಕೊಂಡು ಸಂತಸ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ | ತಮಿಳುನಾಡು ಮುಖ್ಯಮಂತ್ರಿ ಭೇಟಿ: ಮದುವೆ ಯಾವಾಗ Lady Superstar ನಯನತಾರ ?
ಚಿತ್ರದಲ್ಲಿ ಚಂಕಿ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಉದ್ಯಮಿ. ಅದನ್ನು ತೋರಿಸುವಾಗ ಸೆಟ್ ಹಾಕಿದರೆ ಅಷ್ಟಾಗಿ ಜನರಿಗೆ ಕನೆಕ್ಟ್ ಆಗುವುದಿಲ್ಲ. ಆದ್ದರಿಂದ ನಾವು ಇಲ್ಲಿ ಶೂಟ್ ಮಾಡಲು ನಿರ್ಧರಿಸಿದ್ದೇವೆ. ಅಜೆರ್ಬೈಜಾನ್ ಮತ್ತು ಜಾರ್ಕಿಯಾದಲ್ಲಿ ಕಟ್ಟಡಗಳು ಕೂಡ ಕ್ಲಾಸಿಯಾಗಿದ್ದು, ಬೇಕುವಿನಲ್ಲಿ ಪಾರ್ಲಿಮೆಂಟ್ ಬಿಲ್ಡಿಂಗ್ ಜತೆ ಕಾಂಗ್ರೆಸ್ ಕನ್‌ವೆನ್ಷನ್ ಸೆಂಟರ್ ಕೂಡ ಕ್ಯಾಪ್ಚರ್ ಮಾಡಲಾಗಿದೆ.
ಅಜರ್ಬೈಜಾನ್ ಕೂಡ ಶೂಟ್ ಫ್ರೆಂಡ್ಲಿ ಪ್ಲೇಸ್ ಆಗಿದೆ. ಟಿಬಿಲಿಸಿ ಬಳಿಯ ಬೃಹತ್ ಹೈಡ್ರೊ ಅಣೆಕಟ್ಟಿನಲ್ಲೂ ಚಿತ್ರೀಕರಿಸಲಿದ್ದೇವೆ. ಮೇ ತಿಂಗಳಲ್ಲಿ ಸುಮಾರು 10 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಇದೀಗ ಸೊಲೋ ಶೂಟಿಂಗ್ ನಡೆಯುತ್ತಿದೆ. ಕಾರ್ತಿ ಅವರು ಕೂಡ್ ಟ್ರಿಪ್‌ನಲ್ಲಿರುವ ಕಾರಣ ಚಂಕಿ ಅವರೊಂದಿಗೆ ಶೂಟ್ ಮಾಡಲು ನಿರ್ಧರಿಸಿದ್ದೇವೆ. ನಂತರದ ಸ್ಕೆಡ್ಯೂಲ್ ಈಗಾಗಲೇ ರೆಡಿ ಮಾಡಿಕೊಂಡಿದ್ದು, ಹೆಚ್ಚಿನ ಮಾಹಿತಿ ತಿಳಿಸುತ್ತೇವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ | 777 ಚಾರ್ಲಿ | ಚಾರ್ಲಿ ಸಿನಿಮಾ ನೋಡಲಿದ್ದಾರ ಸಿಎಂ?