Site icon Vistara News

777 ಚಾರ್ಲಿ | ಚಾರ್ಲಿ ಸಿನಿಮಾ ನೋಡಲಿದ್ದಾರ ಸಿಎಂ?

777 ಚಾರ್ಲಿ

ಬೆಂಗಳೂರು : ರಕ್ಷಿತ್‌ ಶೆಟ್ಟಿ ಅಭಿನಯದ 777 ಚಾರ್ಲಿ ಅಬ್ಬರ ಮುಂದುವರೆದಿದೆ. ಮೂರನೇ ದಿನವೂ ಬಹಳ ಸದ್ದು ಮಾಡುತ್ತಿದ್ದು, ಜನರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ವೀಕೆಂಡ್‌ನಲ್ಲಿ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದ್ದು, ಟಿಕೇಟ್‌ ಸಿಗದೆ ಹಲವರಿಗೆ ಬೇಸರ ಉಂಟಾಗಿರುವುದು ಇದೆ. ಈ ಸಿನಿಮಾ ಭಾರತದಾದ್ಯಂತ ಒಟ್ಟು 14.5 ಕೋಟಿ ಗಳಿಕೆ ಮಾಡಿದೆ ಎಂಬ ಮಾಹಿತಿ ಇದೆ. ಬಹಳ ಎಮೋಷನ್ ಸಿನಿಮಾ ಇದಾಗಿದ್ದು, ನಾಯಿಯನ್ನು ಇಷ್ಟಪಡದವರೂ ಕೂಡ ಭಾವುಕರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. 

ಇದು ಒಂದೆಡೆ ಆದರೆ, ತಮಿಳುನಾಡಿನಲ್ಲಿ ಥಿಯೇಟರ್​ ಮುಂದೆ ಚಾರ್ಲಿ ನಾಯಿಯ ಕಟೌಟ್​ ಹಾಕಲಾಗಿತ್ತು. ಹೀರೋಗಳ ಕಟೌಟ್​ ಬದಲಿಗೆ ನಾಯಿ ಕಟೌಟ್​ ಹಾಕಿರುವುದು ನಿಜಕ್ಕೂ ಚಿತ್ರದ ಮೇಲಿದ್ದ ನಿರೀಕ್ಷೆಯನ್ನು ತೋರಿಸುತ್ತದೆ.

ಸಿನಿಮಾಗೆ 777 ಚಾರ್ಲಿ ತಂಡ ಸಿಎಂ ಬೊಮ್ಮಾಯಿ ಅವರಿಗೆ ಆಹ್ವಾನ ನೀಡಿದೆ. ಹೌದು ಸೋಮವಾರ (ಜೂನ್‌ 13 ) ಸಂಜೆ ಶೋ ನೋಡಲು ಬರುವಂತೆ ಮನವಿ ಮಾಡಿದ್ದಾರೆ. ಚಿತ್ರತಂಡದ ಮನವಿಗೆ ಸಿಎಂ ಸ್ಪಂದಿಸಿದ್ದು, ಸಾಧ್ಯವಾದರೆ ವೀಕ್ಷಣೆಗೆ ಬರುವುದಾಗಿ ಹೇಳಿದ್ದಾರೆ. ಮೂಲಗಳ ಪ್ರಕಾರ ಚಾರ್ಲಿ ಚಿತ್ರ ನೋಡಲು ಹೋಗುವ ಸಾಧ್ಯತೆ ಇದ್ದು, ಸಂಜೆ ಒರಾಯನ್‌ ಮಾಲ್‌ನಲ್ಲಿ ಸಿನಿಮಾ ನೋಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಚಾರ್ಲಿ ಚಿತ್ರತಂಡ ಮೇಕಿಂಗ್‌ ವಿಡಿಯೋ ಕೂಡ ಶೇರ್‌ ಮಾಡಿಕೊಂಡಿದ್ದು, ಜನರು ಭಾರಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ | 777 ಚಾರ್ಲಿ ಸಿನಿಮಾವನ್ನು ಮೆಚ್ಚಿಕೊಂಡ ಪ್ರೇಕ್ಷಕರು; 3ನೇ ದಿನದ ಕಲೆಕ್ಷನ್‌ ಎಷ್ಟು?

ಇನ್ನೂ ಸಿಎಂ ಬೊಮ್ಮಾಯಿ ಅವರಿಗೆ ಕೂಡ ನಾಯಿ ಎಂದರೆ ಇಷ್ಟ. ಅವರ ಮನೆಯಲ್ಲೂ ಸಹ ನಾಯಿ ಇತ್ತು. ಕಳೆದ ವರ್ಷ ನಾಯಿ ನಿಧನವಾಗಿತ್ತು. ಆ ಸಮಯದಲ್ಲಿ ಭಾವುಕರಾಗಿದ್ದರು.

ಹೆಚ್ಚಾಗುತ್ತಿದೆ ಕಲೆಕ್ಷನ್‌

ದಿನದಿಂದ ದಿನಕ್ಕೆ 777 ಚಾರ್ಲಿ ಕಲೆಕ್ಷನ್‌ ಹೆಚ್ಚಾಗುತ್ತಿದ್ದು, ಹಿಂದಿ ಮಾರ್ಕೆಟ್‌ನಲ್ಲಿ ಕಡಿಮೆ ಇದೆ. ವಿಶೇಷವಾಗಿ ಸಂಜೆ ಮತ್ತು ರಾತ್ರಿ ಪ್ರದರ್ಶನದ ಕಡೆಗೆ ಜನರು ಒಲವು ತೋರುತ್ತಿದ್ದಾರೆ.

ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾ ಮನುಷ್ಯ ಹಾಗೂ ನಾಯಿಯ ನಡುವಿನ ಪ್ರೀತಿಯ ಸಂಬಂಧವನ್ನು ಸಾರಿ ಹೇಳುತ್ತದೆ. 166 ನಿಮಿಷಗಳ ಈ ಸಿನಿಮಾ ಜೀವನದಲ್ಲಿ ನೋವನ್ನು ಅನುಭವಿಸಿ, ಒಬ್ಬಂಟಿಯಾಗಿ ಬದುಕುವ ವ್ಯಕ್ತಿಯ ಕಥೆಯನ್ನು  ಹೇಳುತ್ತದೆ. ಈ ಚಿತ್ರ ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲದೇ ರಕ್ಷಿತ್ ಶೆಟ್ಟಿ ಜೀವನದಲ್ಲಿ ಸಹ ಮೈಲುಗಲ್ಲಾಗಲಿದೆ ಎನ್ನಲಾಗುತ್ತಿದೆ.

ಇದು ಕೂಡ ಪ್ಯಾನ್‌ ಇಂಡಿಯಾ ಸಿನಿಮಾವೇ ಆಗಿದ್ದು ಬಿಡುಗಡೆಯಾದ ಮೊದಲ ದಿನ ದೇಶದಲ್ಲಿ 6 ಕೋಟಿ ರೂಪಾಯಿ ಗಳಿಸಿದೆ ಎಂದು ಹೇಳಲಾಗಿತ್ತು. ಎರಡನೇ ದಿನ ಸುಮಾರು 9 ಕೋಟಿ ರೂ. ಕಲೆಕ್ಷನ್‌ ಆಗಿದೆಯಂತೆ.

ನಿರ್ದೇಶಕ ಕಿರಣ್‌ ರಾಜ್‌ ತಮ್ಮ ಇನ್ಸ್ಟಾ ಮೂಲಕ ಜನರು ತೋರಿದ ಅಭಿಮಾನಕ್ಕೆ ಭಾವುಕವಾಗಿ ಪೋಸ್ಟ್‌ ಹಂಚಿಕೊಳ್ಳುವುದರ ಮೂಲಕ ಧನ್ಯವಾದ ತಿಳಿಸಿದ್ದಾರೆ. ನನ್ನ ಮೇಲೆ ಇಟ್ಟ ನಂಬಿಕೆಗೆ ನಾನು ಚಿರಋಣಿ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | 777 ಚಾರ್ಲಿ | ಮೊದಲ ದಿನದ ಕಲೆಕ್ಷನ್‌ ಎಷ್ಟು? ಜೂನ್‌ 12ರಂದು Dog Adoption ಅಭಿಯಾನ!

Exit mobile version