Site icon Vistara News

ದಾದಾಸಾಹೇಬ್‌ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ: ಕಾಶ್ಮೀರ್‌ ಫೈಲ್ಸ್‌ ಅತ್ಯುತ್ತಮ ಚಿತ್ರ, ಆಲಿಯಾ ಭಟ್‌ ಶ್ರೇಷ್ಠ ನಟಿ

alia bhat

ಮುಂಬಯಿ: ದಾದಾಸಾಹೇಬ್‌ ಫಾಲ್ಕೆ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌ ಪ್ರಶಸ್ತಿಗಳು ಘೋಷಣೆಯಾಗಿದ್ದು, ಅತ್ಯಂತ ಭರವಸೆಯ ನಟ ಪ್ರಶಸ್ತಿಯನ್ನು ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ ಗೆದ್ದುಕೊಂಡಿದ್ದಾರೆ. ತಾವು ಪಡೆದುಕೊಂಡ ಈ ಪ್ರಶಸ್ತಿಯನ್ನು ಅವರು ಪುನೀತ್‌ ರಾಜ್‌ಕುಮಾರ್‌ ಹಾಗೂ ಎಸ್‌ ಕೆ ಭಗವಾನ್‌ ಅವರಿಗೆ ಅರ್ಪಿಸಿದ್ದಾರೆ.

ಈ ಪ್ರಶಸ್ತಿ ಪಡೆದುಕೊಂಡ ಇತರ ತಾರೆಯರ ವಿವರ ಹೀಗಿದೆ:

ಅತ್ಯುತ್ತಮ ಚಿತ್ರ- ದಿ ಕಾಶ್ಮೀರ್‌ ಫೈಲ್ಸ್‌
ಅತ್ಯುತ್ತಮ ನಿರ್ದೇಶಕ- ಆರ್.ಬಾಲ್ಕಿ (ಚುಪ್-‌ ರಿವೆಂಜ್‌ ಆಫ್‌ ದಿ ಆರ್ಟಿಸ್ಟ್)‌
ಅತ್ಯುತ್ತಮ ನಟ- ರಣಬೀರ್‌ ಕಪೂರ್ (ಬ್ರಹ್ಮಾಸ್ತ್ರ ಫಿಲಂ)
ಅತ್ಯುತ್ತಮ ನಟಿ- ಅಲಿಯಾ ಭಟ್‌ (ಗಂಗೂಬಾಯಿ ಕಾಠಿಯಾವಾಡಿ ಫಿಲಂ)
ಅತ್ಯುತ್ತಮ ವೆಬ್‌ ಸರಣಿ- ರುದ್ರ- ದಿ ಎಡ್ಜ್‌ ಆಫ್‌ ಡಾರ್ಕ್‌ನೆಸ್‌
ಕ್ರಿಟಿಕ್ಸ್‌ ಬೆಸ್ಟ್‌ ಆಕ್ಟರ್-‌ ವರುಣ್‌ ಧವನ್‌ (ಭೇಡಿಯಾ)
ವರ್ಷದ ಚಿತ್ರ- ಆರ್‌ಆರ್‌ಆರ್‌
ವರ್ಷದ ಟಿವಿ ಇಸೀರೀಸ್-‌ ಅನುಪಮಾ
ವರ್ಷದ ಅತ್ಯಂತ ಪ್ರತಿಭಾನ್ವಿತ ನಟ- ಅನುಪಮ್‌ ಖೇರ್‌ (ಕಾಶ್ಮೀರ್‌ ಫೈಲ್ಸ್‌)

ಈ ಪ್ರಶಸ್ತಿ ಕೇಂದ್ರ ಸರ್ಕಾರ ನೀಡುವ ದಾದಾಸಾಹೇಬ್‌ ಫಾಲ್ಕೆ ಸ್ಮಾರಕ ಪ್ರಶಸ್ತಿಗಿಂತ ಬೇರೆಯಾದುದು.

ಇದನ್ನೂ ಓದಿ: Rishab Shetty: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

Exit mobile version